ಬೆಳಗಾವಿ: ಕಾಂಗ್ರೆಸ್ ಪಕ್ಷದ ಬಂಡಾಯ ಶಾಸಕ ರಮೇಶ್ ಜಾರಕಿಹೊಳಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆಗೂ ಮುನ್ನ ಕಾಂಗ್ರೆಸ್‍ಗೆ ಬಿಗ್ ಶಾಕ್ ಮುಂದಾಗಿದ್ದು, ಜಿಲ್ಲೆಯ ಗೋಕಾಕ್‍ನಲ್ಲಿ ಕಾಂಗ್ರೆಸ್ ಪಕ್ಷವನ್ನು ನೆಲಕಚ್ಚಿಸಲು ಮಾಸ್ಟರ್ ಪ್ಲಾನ್ ರೂಪಿಸಿದ್ದಾರೆ ಎನ್ನಲಾಗಿದೆ.
ಹೌದು, ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುವ ಮುನ್ನವೇ ಅಖಾಡಕ್ಕಿಳಿದ ರಮೇಶ್ ಜಾರಕಿಹೊಳಿ ಅವರು, ಸಿಂದಿಕುರಬೇಟ ಗ್ರಾಮಪಂಚಾಯಿತಿ ಅಧ್ಯಕ್ಷ ಮೊಹಮ್ಮದ್ ರಫಿಕ್ ಮಕಾಂದರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಸೂಚಿಸಿದ್ದಾರೆ ಎನ್ನಲಾಗಿದೆ. ರಮೇಶ್ ಅವರ ಸೂಚನೆ ಮೇರೆಗೆ ಗ್ರಾಮ ಪಂಚಾಯತಿ ಅಧ್ಯಕ್ಷ ಮೊಹಮ್ಮದ್ ರಫಿಕ್ ಮಕಾಂದರ ರಾಜೀನಾಮೆಗೆ ಮುಂದಾಗಿದ್ದಾರೆ ಎಂಬ ಮಾಹಿತಿ ಲಭಿಸಿದೆ.
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪರವಾಗಿ ಕೆಲಸ ಮಾಡಿದ್ದಕ್ಕೆ ರಾಜೀನಾಮೆ ಕೊಡಿಸಲು ಮುಂದಾಗಿದ್ದಾರೆ ಎನ್ನಲಾಗಿದ್ದು, ಇನ್ನು ಮೂರು ಜನರಿಗೆ ರಾಜೀನಾಮೆ ನೀಡುವಂತೆ ಸೂಚನೆ ಕೊಟ್ಟಿರುವ ಎನ್ನಲಾಗಿದೆ. ಬೆಂಗಳೂರಿನಲ್ಲೇ ಉಳಿದುಕೊಂಡಿರುವ ರಮೇಶ್ ಜಾರಕಿಹೊಳಿ ಅವರು ಗೋಕಾಕ್ ನ ಎಲ್ಲಾ ಬೆಳಣಿಗೆಗಳನ್ನು ಅಳಿಯ ಅಂಬಿರಾವ್ ಪಾಟೀಲ್ ಅವರಿಂದ ಮಾಹಿತಿ ಪಡೆಯುತ್ತಿದ್ದಾರೆ ಎನ್ನಲಾಗಿದೆ.
ಬೆಳಗಾವಿ: ಗೋಕಾಕ್ ವಿಧಾನಸಭಾ ಕ್ಷೇತ್ರದ ಜನರು ಯಾರಿಗೆ ಬೆಂಬಲ ನೀಡುತ್ತಾರೆ ಅಂತ ನೋಡೋಣ ಎಂದು ಹೇಳುವ ಮೂಲಕ ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ಅವರು, ಸಹೋದರ, ಅತೃಪ್ತ ಕಾಂಗ್ರೆಸ್ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರಿಗೆ ಬಹಿರಂಗವಾಗಿ ಸವಾಲು ಹಾಕಿದ್ದಾರೆ.
ನಗರದಲ್ಲಿ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಸಚಿವರು, ಗೋಕಾಕ್ ರಾಜಕೀಯದಲ್ಲಿ ಇಲ್ಲಿಯವರೆಗೂ ನಾವು ಭಾಗವಹಿಸಿಲ್ಲ. ರಮೇಶ್ ಜಾರಕಿಹೊಳಿ ಅವರೇ ಎಲ್ಲವನ್ನೂ ನೋಡಿ ಹೋಗುತ್ತಿದ್ದರು. ಈಗ ಅವರು ನಮ್ಮ ಜೊತೆಗಿಲ್ಲ. ಹೀಗಾಗಿ ಕ್ಷೇತ್ರವನ್ನು ನಮ್ಮ ಹಿಡಿತದಲ್ಲಿ ತೆಗೆದುಕೊಳ್ಳಲು ಪ್ರತಿ ಹಳ್ಳಿ, ಗ್ರಾಮಕ್ಕೂ ಹೋಗಿ ಪ್ರಚಾರ ಮಾಡುತ್ತಿದ್ದೇವೆ ಎಂದರು.
ಬಿಜೆಪಿಯನ್ನು ಬೆಂಬಲಿಸುವಂತೆ ತಮ್ಮ ಬೆಂಬಲಿಗರಿಗೆ ರಮೇಶ್ ಜಾರಕಿಹೊಳಿ ಅವರು ಹೇಳಿದ್ದು ನಿಜ. ಈ ಕುರಿತು ಕೆಲ ಕಾರ್ಯಕರ್ತರು ನಮ್ಮ ಬಳಿ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಜಿಲ್ಲೆಯ ಬೇರೆ ಬೇರೆ ಗ್ರಾಮಗಳಿಗೆ ಹೋಗಿ ಬಿಜೆಪಿಗೆ ಬೆಂಬಲ ನೀಡುವಂತೆ ಮಾಜಿ ಸಚಿವರು ಸೂಚನೆ ನೀಡಿದ್ದಾರೆ. ಹೀಗೆ ಆಗುತ್ತದೆ ಎಂದು ನಮಗೆ ಮೊದಲೇ ತಿಳಿದಿತ್ತು. ಇದರಿಂದಾಗಿ ಕಾಂಗ್ರೆಸ್ ಮುಖಂಡ ಲಖನ್ ಜಾರಕಿಹೊಳಿ ನೇತೃತ್ವದಲ್ಲಿ ಪ್ರಚಾರ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಪಕ್ಷವು ರಮೇಶ್ ಜಾರಕಿಹೊಳಿ ಅವರ ವಿರುದ್ಧ ಕ್ರಮಕೈಗೊಂಡರೂ ಅಷ್ಟೇ, ಬಿಟ್ಟರು ಅಷ್ಟೇ. ಅವರನ್ನು ಈಗಾಗಲೇ ಪಕ್ಷದಿಂದ ದೂರ ಇಡಲಾಗಿದೆ. ಗೋಕಾಕ್ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಲಖನ್ ಜಾರಕಿಹೊಳಿ ಅವರನ್ನು ಕಣಕ್ಕೆ ಇಳಿಸಲಾಗುತ್ತದೆ. ರಮೇಶ್ ಜಾರಕಿಹೊಳಿ ಅವರನ್ನು ಸೋಲಿಸುವುದೇ ನಮ್ಮ ಮುಂದಿನ ಟಾರ್ಗೆಟ್ ಎಂದರು.
ಪಕ್ಷಕ್ಕೆ ರಮೇಶ್ ಜಾರಕಿಹೊಳಿ ಬರುತ್ತಾರೋ ಇಲ್ಲವೋ ಎಂದು ಬಿಜೆಪಿಯವರು ಗೊಂದಲಕ್ಕೆ ಸಿಲುಕಿದ್ದಾರೆ. ಹೀಗಾಗಿ ಮಾಜಿ ಸಚಿವರು ತಮ್ಮ ನಿರ್ಧಾರವನ್ನು ಬೇಗ ಕೈಗೊಳ್ಳುವುದು ಉತ್ತಮ. ರಮೇಶ್ ಜಾರಕಿಹೊಳಿ ಬಿಜೆಪಿಗೆ ಹೋದರೆ ಕೆಲವು ಬೆಂಬಲಿಗರು ಅವರ ಜೊತೆಗೆ ಹೋಗುತ್ತಾರೆ. ಬಿಜೆಪಿಯ ಕೆಲವರು ರಮೇಶ್ ಜಾರಕಿಹೊಳಿ ಆಗಮನದಿಂದ ಪಕ್ಷ ಬಿಟ್ಟು ಕಾಂಗ್ರೆಸ್ ಸೇರುತ್ತಾರೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಬೆಳಗಾವಿ: ಕಾಂಗ್ರೆಸ್ ಅತೃಪ್ತ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಬಿಜೆಪಿಯನ್ನು ಬೆಂಬಲಿಸುವಂತೆ ಬೆಂಬಲಿಗರಿಗೆ ಸೂಚನೆ ನೀಡುತ್ತಿದ್ದಾರೆ ಎಂದು ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ರಮೇಶ್ ಜಾರಕಿಹೊಳಿ ಅವರು ಗೋಕಾಕ್‍ನ ತಮ್ಮ ಕಚೇರಿಯಲ್ಲಿ ಇಂದು ಬೆಂಬಲಿಗರೊಂದಿಗೆ ಸಭೆ ನಡೆಸಿದ್ದರು. ಸಭೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸಬೇಕು, ಅವರ ಪರ ಪ್ರಚಾರ ಮಾಡಿ, ಮತ ಹಾಕಬೇಕು. ಯಾರು ಏನೇ ಹೇಳಿದರೂ ಬಿಜೆಪಿ ಪರ ಕೆಲಸ ಮಾಡುಬೇಕು ಎಂದು ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಗೋಕಾಕ್‍ನಲ್ಲಿ ನಿನ್ನೆ ಕಾಂಗ್ರೆಸ್ ಸಮಾವೇಶ ನಡೆಸಲಾಗಿತ್ತು. ಆದರೆ ರಮೇಶ್ ಜಾರಕಿಹೊಳಿ ಅವರು ಸಮಾವೇಶಕ್ಕೆ ಗೈರಾಗಿದ್ದರು. ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದ ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಲಖನ್ ಜಾರಕಿಹೊಳಿ, ಮಾಜಿ ಸಚಿವರು ಪ್ರಚಾರ ಮಾಡದಿದ್ದರೂ ಕಾಂಗ್ರೆಸ್‍ಗೆ ಬೆಂಬಲ ನೀಡಬೇಕು ಎಂದು ಪಕ್ಷದ ಕಾರ್ಯಕರ್ತರಿಗೆ ಸೂಚನೆ ನೀಡಿದ್ದೇವೆ ಎಂದು ತಿಳಿಸಿದ್ದರು. ಇದರಿಂದ ಎಚ್ಚೆತ್ತುಕೊಂಡ ರಮೇಶ್ ಜಾರಕಿಹೊಳಿಯವರು ಇಂದು ಬೆಂಬಲಿಗರ ಸಭೆ ಕರೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಮಾವೇಶದ ಬಳಿಕ ಮಾತನಾಡಿದ ಸತೀಶ್ ಜಾರಕಿಹೊಳಿ ಅವರು, ರಮೇಶ್ ಜಾರಕಿಹೊಳಿಯವರ ಅಸಮಾಧಾನದ ಕುರಿತು ಎಲ್ಲರಿಗೂ ಗೊತ್ತಿದೆ. ಚುನಾವಣೆ ಬಳಿಕ ಬಿಜೆಪಿ ಸೇರುವುದಾಗಿ ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ. ಒಂದು ವೇಳೆ ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಿದರೆ, ಉಪ ಚುನಾವಣೆಯಲ್ಲಿ ಕಾಂಗ್ರೆಸ್‍ನಿಂದ ಲಖನ್ ಜಾರಕಿಹೊಳಿ ಕಣಕ್ಕೆ ಇಳಿಯುತ್ತಾರೆ ಎಂದು ತಿಳಿಸಿದ್ದರು.
ಲಖನ್ ಜಾರಕಿಹೊಳಿ ಅವರು ಮಾತನಾಡಿ, ಸಹೋದರ, ಮಾಜಿ ಸಚಿವರ ಮನವೊಲಿಸಲು ಪ್ರಯತ್ನಿಸಿದ್ದೇವೆ. ಆದರೆ ಅವರು ಯಾವುದೇ ಕಾರ್ಯಕ್ರಮಕ್ಕೆ ಬರುತ್ತಿಲ್ಲ. ಹೀಗಾಗಿ ಕಾಂಗ್ರೆಸ್‍ಗೆ ಬೆಂಬಲ ನೀಡಬೇಕು ಎಂದು ಕಾರ್ಯಕರ್ತರಿಗೆ ಸೂಚನೆ ನೀಡಿದ್ದೇವೆ. ಇದಕ್ಕೆ ಅವರು ಕೂಡ ಒಪ್ಪಿಕೊಂಡಿದ್ದಾರೆ ಎಂದು ಹೇಳಿದ್ದರು.
ಗೋಕಾಕ್ ಸಮಾವೇಶದ ಬಳಿಕ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ ಅವರು, ರಮೇಶ್ ಜಾರಕಿಹೊಳಿ ನಮ್ಮ ಪಕ್ಷದಲ್ಲಿಯೇ ಇದ್ದಾರೆ. ಅವರು ಎಲ್ಲಿಯೂ ಹೋಗಿಲ್ಲ. ಪಕ್ಷದ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂದಿದ್ದರು.
ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಪಬ್ಲಿಕ್ ಟಿವಿ ಬೆಳಗಾವಿ ಜಿಲ್ಲಾ ವರದಿಗಾರರ ಜೊತೆ ಕ್ಷಮೆ ಕೇಳಿದ್ದಾರೆ.
ಮುಂಬೈನಿಂದ ಇಂದು ಬೆಂಗಳೂರಿಗೆ ಆಗಮಿಸಿದ ಅವರು ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದರು. ಈ ವೇಳೆ ಗೋಕಾಕ್‍ನಲ್ಲಿ ವರದಿಗಾರರಿಗೆ ಅವಾಚ್ಯ ಪದಗಳಿಂದ ನಿಂದಿಸಿದ್ದಕ್ಕೆ ಕ್ಷಮೆ ಕೇಳುತ್ತೇನೆ. ಪಬ್ಲಿಕ್ ಟಿವಿ ಬೆಳಗಾವಿ ಜಿಲ್ಲಾ ವರದಿಗಾರ ದಿಲೀಪ್ ಕುರಂದವಾಡೆ ಅವರಲ್ಲಿ ಕ್ಷಮೆ ಯಾಚಿಸುತ್ತೇನೆ. ಅವರು ನನ್ನ ಆತ್ಮೀಯರು. ಹೀಗಾಗಿ ಸಲಿಗೆಯಿಂದ ಮಾತನಾಡಿದ್ದೇನೆ. ನನ್ನಿಂದ ತಪ್ಪಾಗಿದೆ ಎಂದು ಸ್ಪಷ್ಟನೆ ನೀಡಿದರು.
ಕ್ಷಮೆ ಕೇಳಿದ ಬಳಿಕ ಮಾತನಾಡಿದ ಮಾಜಿ ಸಚಿವರು, ಪಕ್ಷದ ಮೇಲೆ ನನಗೆ ಅಸಮಾಧಾನ ಇರುವುದು ನಿಜ. ನಾವು ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ. ಅಷ್ಟೇ ಅಲ್ಲದೇ ಹೈಕಮಾಂಡ್‍ಗೂ ಸವಾಲು ಹಾಕಿಲ್ಲ. ಮಗಳ ಮದುವೆ ಫೆಬ್ರವರಿ 24ರಂದು ನಡೆಯಲಿದೆ. ಹೀಗಾಗಿ ಬ್ಯುಸಿ ಆಗಿದ್ದೆ ಎಂದರು.
ನನ್ನ ಸಂಬಂಧಿಕರು ಹೆಚ್ಚಾಗಿರುವುದು ಮುಂಬೈನಲ್ಲಿ. ಮಗಳ ಮದುವೆ ಇರುವುದರಿಂದ ಕಲಾಪ ಮುಗಿಸಿಕೊಂಡು ಇಂದು ಸಂಜೆ ಕೂಡ ಮುಂಬೈಗೆ ವಾಪಸ್ ಹೋಗುತ್ತೇನೆ. ಆದರೆ ನಾನು ಬಿಜೆಪಿ ನಾಯಕರ ಸಂಪರ್ಕದಲ್ಲಿ ಇದ್ದೇನೆ ಎನ್ನುವುದು ಸುಳ್ಳು. ಆದರೆ ನಾನು ಏಕಾಂಗಿಯಾಗಿದ್ದೇನೆ ಎಂದು ಹೇಳಿದರು.
ನಮ್ಮ ಸ್ನೇಹಿತರಿಗೆ ಬೇರೆ ಸಮಸ್ಯೆಗಳಿವೆ. ಹೀಗಾಗಿ ಕಾಂಗ್ರೆಸ್ ಶಾಸಕಾಂಗ ಪಕ್ಷ (ಸಿಎಲ್‍ಪಿ) ಸಭೆಗಳಿಗೆ ಗೈರಾಗಿದ್ದೇವು. ಹೈಕಮಾಂಡ್ ಹಾಗೂ ರಾಜ್ಯ ನಾಯಕರ ಜೊತೆಗೆ ಮಾತನಾಡಿಕೊಂಡು ಸಮಸ್ಯೆಯನ್ನು ಬಗೆಹರಿಸಿಕೊಳ್ಳುತ್ತೇವೆ ಎಂದು ಅಸಮಾಧಾನದ ಬಗ್ಗೆ ಸ್ಪಷ್ಟನೆ ನೀಡಿದರು.
ಬಿಜೆಪಿ ನಾಯಕರ ಜೊತೆಗೆ ನೀವು ಇದ್ದಿದ್ದು ನಿಜವೇ ಎಂದು ಮಾಧ್ಯಮಗಳು ಪ್ರಶ್ನೆ ಕೇಳುತ್ತಿದ್ದಂತೆ, ರೀ ನೀವು ಸಿಟ್ಟಿನಿಂದ ಕೇಳಬೇಡಿ. ನಗುತ್ತ ಮಾತನಾಡಿ, ನೀವು ನ್ಯಾಯಾಧೀಶರಲ್ಲ ಎಂದು ರಮೇಶ್ ಜಾರಕಿಹೊಳಿ ಉತ್ತರಿಸಿದರು.
ಬಿಜೆಪಿಯಲ್ಲಿ ನನಗೆ ಬಹಳ ಜನ ಗೆಳೆಯರಿದ್ದಾರೆ. ಅವರೆಲ್ಲರೂ ನಮಗೆ ಮಿತ್ರರು. ಪಕ್ಷದ ಸಿದ್ಧಾಂತಗಳು ಬಂದಾಗ ಮಾತ್ರ ಗಲಾಟೆ ಮಾಡಿಕೊಳ್ಳುತ್ತೇವೆ. ಅಧಿವೇಶನ ಮುಗಿಸಿಕೊಂಡು ಮುಂಬೈಗೆ ತೆರಳುತ್ತೇನೆ. ಹೀಗೆ ಮಾಡಿದ್ರೆ ಆಪರೇಷನ್ ಕಮಲವೇ? ನೀವೇ ಪ್ರಶ್ನೆ ಕೇಳುತ್ತೀರಿ, ಉತ್ತರ ಕೊಡುತ್ತೀರಿ. ನೀವೇ ನನ್ನ ವಿಲನ್ ಮಾಡುತ್ತೀರಿ, ಹೀರೋ ಮಾಡುತ್ತೀರಿ ಎಂದು ಮಾಧ್ಯಮಗಳ ವಿರುದ್ಧ ಅಸಮಾಧಾನವನ್ನು ಹೊರ ಹಾಕಿದರು.
ನಾನು ಈಗಲೂ ಬಿಜೆಪಿಯ ಶಾಸಕ ಅಶ್ವಥ್ ನಾರಾಯಣ್ ಅವರ ಮನೆಗೆ ಹೋಗುತ್ತೇನೆ. ಇದು ತಪ್ಪೇ ಎಂದ ಅವರು ಕಾಂಗ್ರೆಸ್‍ನಲ್ಲಿ ಇರುವ ಹಾಗೂ ಬಿಡುವ ವಿಚಾರ ಹೈಕಮಾಂಡ್‍ಗೆ ಬಿಟ್ಟಿದ್ದೇನೆ ಎಂದು ನಾಯಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಆಗಿದ್ದೇನು?:
ಡಿಸೆಂಬರ್ ಕೊನೆಯಲ್ಲಿ ಕಾಣೆಯಾಗಿದ್ದ ರಮೇಶ್ ಜಾರಕಿಹೊಳಿ ಅವರು ಜ.3 ರಂದು ಬೆಳಗ್ಗೆ ಗೋಕಾಕ್ ನಲ್ಲಿ ಕಾಣಿಸಿಕೊಂಡಿದ್ದರು. ಬ್ಯಾಡ್ಮಿಂಟನ್ ಆಟವಾಡಿ ನಿವಾಸಕ್ಕೆ ಬಂದಾಗ ಅಲ್ಲೇ ಇದ್ದ ಮಾಧ್ಯಮಗಳು ಪ್ರತಿಕ್ರಿಯೆ ಪಡೆಯಲು ಮುಂದಾಗುತ್ತಿದ್ದಾಗ, ಒದಿಯಬೇಕು ನಿಮ್ಮನ್ನು ಜಾಡಿಸಿ ಒದಿಯಬೇಕು ಅತಿಯಾಯ್ತು ನಿಮ್ಮದು ಹುಚ್ಚರಿದೀರಿ ಎಂದು ರಮೇಶ್ ಅವಾಜ್ ಹಾಕಿದ್ದರು. ರಮೇಶ್ ಜಾರಕಿಹೊಳಿ ಪತ್ರಕರ್ತರಿಗೆ ಅವಾಜ್ ಹಾಕಿದ ವರದಿ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಬೆಳಗ್ಗೆ ಗೋಕಾಕ್‍ನಲ್ಲಿ ಕೇಬಲ್ ಸಂಪರ್ಕವನ್ನು ಕಡಿತಗೊಳಿಸಲಾಗಿತ್ತು.
ಬೆಳಗಾವಿ: ತಮ್ಮ ಶಾಸಕನ ಮೇಲೆ ನಂಬಿಕೆ ಇಟ್ಟು ಕೇಳಿದ್ದಲ್ಲವನ್ನೂ ಕೊಟ್ಟು ಗೋಕಾಕ್ ಜನ ಬೆನ್ನಿಗೆ ನಿಂತರು. ಆದ್ರೆ ನಂಬಿದ ಬೆಂಬಲಿಗರಿಗೆ ಗೋಕಾಕ್ ಶಾಸಕ ಹಾಗೂ ಸುಪುತ್ರ ಮಾಡಿದ ಮಹಾಮೋಸಕ್ಕೆ ಇಂದು ಅವರೆಲ್ಲರೂ ತಮ್ಮ ಊರು ಬಿಟ್ಟು ಅಜ್ಞಾತವಾಗಿದ್ದಾರೆ. ಮೂರು ವರ್ಷದ ಹಿಂದೆ ನಡೆದ ಐಟಿ ದಾಳಿಗೆ ಸಂಬಂಧಿಸಿದಂತೆ ಈಗ ಐಟಿ ಇಲಾಖೆಯಿಂದ ಬಡ ಕುಟುಂಬಗಳಿಗೆ ನೋಟಿಸ್ ಬಂದಿದೆ.
ಹೌದು. ಮಾಜಿ ಮಂತ್ರಿ ದಿ ಗ್ರೇಟ್ ರಮೇಶ್ ಜಾರಕಿಹೊಳಿ ಅವರು ತಮ್ಮ ಮಂತ್ರಿ ಸ್ಥಾನ ಹೋದ ಬಳಿಕ ದೋಸ್ತಿ ಸರ್ಕಾರದ ವಿರುದ್ಧ ಸಿಡಿದೆದ್ದು, ಬಿಜೆಪಿ ಸೇರೋ ಸಲುವಾಗಿ ಮುಂಬೈ ಸೇರಿ ತಿಂಗಳಾಗ್ತಾ ಬಂದಿದೆ. ತಾವು ಪ್ರತಿನಿಧಿಸ್ತಿರೋ ಗೋಕಾಕ್ ಕ್ಷೇತ್ರದ ಮತದಾರರ ಪಾಡು ಏನಾಯ್ತು ಎಂಬ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಮತದಾರರು ಹೋಗ್ಲಿ, ಅವ್ರ ಬೆಂಬಲಿಗರು ಪಾಡನ್ನು ವಿಚಾರಿಸೋರಿಲ್ಲ.
ರಮೇಶ್ ಮೇಲೆ ಐಟಿ ರೇಡ್ ನಡೆದ ಮೂರು ವರ್ಷದ ನಂತರ ಬೇನಾಮಿ ಆಸ್ತಿ ಹಾಗೂ ಹಣ ವರ್ಗಾವಣೆ ಸಂಬಂಧಿಸಿದಂತೆ ಈಗ ಅವರ ಬೆಂಬಲಿಗರಿಗೆ ಐಟಿ ಇಲಾಖೆ ಸಮನ್ಸ್ ನೀಡಿದೆ. ಗೋಕಾಕ್ ತಾಲೂಕಿನ ಅಕ್ಕತಂಗೇರಹಾಳ, ಗುಜನಾಳ, ಅಂಕಲಗಿ, ಮಲ್ಲಾಪುರ ಸೇರಿದಂತೆ 9ಕ್ಕೂ ಅಧಿಕ ಗ್ರಾಮಗಳಲ್ಲಿನ 50ಕ್ಕೂ ಅಧಿಕ ಜನರಿಗೆ ಐಟಿ ನೋಟಿಸ್ ನೀಡಿದೆ. ಈ ನೋಟಿಸ್ ಬೆನ್ನಲ್ಲೇ ಜನ ಊರು ತೊರೆದಿದ್ದಾರೆ.
ನಾಲ್ಕೈದು ವರ್ಷದ ಹಿಂದೆ ರೈತ ಭೀಮಗೌಡನಿಂದ ವೋಟರ್ ಐಡಿ ಹಾಗೂ ಒಂದು ಫೋಟೋ ಪಡೆದಿದ್ದ ರಮೇಶ್ ಜಾರಕಿಹೊಳಿ, ಅವರಿಗೆ ಗೊತ್ತಿಲ್ಲದಂತೆ ಅಕೌಂಟ್ ನಿಂದ ಸುಮಾರು ಮೂವತ್ತು ಲಕ್ಷ ಹಣ ವರ್ಗಾವಣೆ ಮಾಡಿದ್ರಂತೆ. ಇದು ಐಟಿ ದಾಳಿ ವೇಳೆ ಬಯಲಾಗಿದ್ದು, ಇದರ ಆಧಾರದ ಮೇಲೆ ಸದ್ಯ ಐಟಿ ಇಲಾಖೆ ಸಮನ್ಸ್ ನೀಡಿದೆ ಎನ್ನಲಾಗುತ್ತಿದೆ. ತಮ್ಮಿಂದ ಮುಗ್ಧ ರೈತರು ಇಷ್ಟೆಲ್ಲಾ ಕಷ್ಟ ಅನುಭವಿಸ್ತಿದ್ರೂ ಜಾರಕಿಹೊಳಿ ಮಾತ್ರ ಮುಂಬೈ ರೇಸಾರ್ಟ್‍ನಲ್ಲಿ ಮಸ್ತ್ ಮಜಾ ಮಾಡುತ್ತಿರುವುದು ಇದೀಗ ಅವರ ಬೆಂಬಲಿಗರನ್ನೇ ಕೆರಳಿಸಿದೆ.
ಒಟ್ಟಿನಲ್ಲಿ ಗೋಕಾಕ್ ಶಾಸಕರನ್ನು ಬೆಂಬಲಿಸಿದ ಏಕೈಕ ಕಾರಣಕ್ಕೆ ಅವರು ಆದಾಯ ತೆರಿಗೆ ದಾಳಿಯ ಬಿಸಿ ಅನುಭವಿಸಬೇಕಾಗಿ ಬಂದಿದೆ.
ಜಿಲ್ಲೆಯ ಗೋಕಾಕ್ ಪಟ್ಟಣದ ಹೊರವಲಯದಲ್ಲಿರು ಫಾಲ್ಸ್ ನಲ್ಲಿ ಎರಡು ದಿನಗಳ ಹಿಂದೆ ಸ್ನೇಹಿತರೊಂದಿಗೆ ತಮಾಷೆಮಾಡಲು ಹೋಗಿ ಘಟಪ್ರಭಾ ನಿವಾಸಿ ರೆಹೆಮಾನ್ ಉಸ್ಮಾನ್ ಖಾಜಿ (35) ಎಂಬ ಯುವಕ ಜಲಪಾತದಲ್ಲಿ ಜಾರಿ ಬಿದ್ದು ಸಾವನ್ನಪ್ಪಿದ್ದ.
ಯುವಕನ ಶವಕ್ಕಾಗಿ ಕಳೆದ ಎರಡು ದಿನಗಳಿಂದ ಅಗ್ನಿಶಾಮಕ ದಳದ ಸಿಬ್ಬಂದಿ ಹುಡುಕಾಟ ನಡೆಸುತ್ತಿತ್ತು. ಆಳ ಹೆಚ್ಚಾಗಿದ್ದರಿಂದ ಶವ ಪತ್ತೆ ಕಾರ್ಯಕ್ಕೆ ಜಲಪಾತದ ಕೆಳಗೆ ಇಳಿಯಲಾಗದೇ ಸಾಕಷ್ಟು ಅಡಚಣೆಯಾಗಿತ್ತು. ಆದರೆ ಸತತ ಎರಡು ದಿನಗಳ ಕಾರ್ಯಾಚರಣೆ ನಂತರ ಶವವನ್ನು ಹೊರತೆಗೆಯುವಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.