Tag: ಗೋಕಾಕ್‌ ಕರದಂಟು

  • ಗೋಕಾಕ್‌ನ ಫೇಮಸ್ ಕರದಂಟು ಸವಿದಿದ್ದೀರಾ?

    ಗೋಕಾಕ್‌ನ ಫೇಮಸ್ ಕರದಂಟು ಸವಿದಿದ್ದೀರಾ?

    ನಾವು ಯಾವುದೇ ಪ್ರದೇಶಕ್ಕೆ ಹೋದರೂ ಅಲ್ಲೊಂದು ಫೇಮಸ್ ಅಡುಗೆ ಅಥವಾ ತಿಂಡಿ ಎಂಬುದು ಇದ್ದೇ ಇರುತ್ತದೆ. ಭಾರತದ ಸಣ್ಣ ಪುಟ್ಟ ಪ್ರದೇಶಗಳಲ್ಲೂ ಅದೆಷ್ಟೋ ಸಾಂಪ್ರದಾಯಿಕ ಖಾದ್ಯಗಳಿವೆ. ನಾವಿಂದು ಗೋಕಾಕ್‌ನ ಫೇಮಸ್ ಸಿಹಿ ಒಣ ಹಣ್ಣುಗಳಿಂದ ತಯಾರಿಸಲಾಗುವ ಕರದಂಟು (Karadantu) ಮಾಡುವುದು ಹೇಗೆಂದು ಹೇಳಿಕೊಡುತ್ತೇವೆ. ಇದನ್ನು ಒಮ್ಮೆ ನೀವೂ ಮನೆಯಲ್ಲಿ ಖಂಡಿತಾ ಟ್ರೈ ಮಾಡಿ.

    ಬೇಕಾಗುವ ಪದಾರ್ಥಗಳು:
    ತುಪ್ಪ – ಕಾಲು ಕಪ್
    ಗೊಂದ್ – 50 ಗ್ರಾಂ
    ಕತ್ತರಿಸಿದ ಬಾದಾಮಿ – ಕಾಲು ಕಪ್
    ಕತ್ತರಿಸಿದ ಗೋಡಂಬಿ – ಕಾಲು ಕಪ್
    ಕತ್ತರಿಸಿದ ಪಿಸ್ತಾ – 2 ಟೀಸ್ಪೂನ್
    ಕತ್ತರಿಸಿದ ಅಂಜೂರ – ಕಾಲು ಕಪ್
    ಒಣದ್ರಾಕ್ಷಿ – 2 ಟೀಸ್ಪೂನ್
    ಒಣ ಕುಂಬಳಕಾಯಿ ಬೀಜ – 2 ಟೀಸ್ಪೂನ್
    ಒಣ ತೆಂಗಿನ ತುರಿ – 1 ಕಪ್
    ಗಸಗಸೆ – 2 ಟೀಸ್ಪೂನ್
    ತುಪ್ಪ – 2 ಟೀಸ್ಪೂನ್
    ಕತ್ತರಿಸಿದ ಒಣ ಖರ್ಜೂರ – 5 (ಬೀಜ ಬೇರ್ಪಡಿಸಿ)
    ಬೆಲ್ಲ – 1 ಕಪ್
    ನೀರು – ಕಾಲು ಕಪ್
    ಜಾಯಿಕಾಯಿ ಪುಡಿ – ಕಾಲು ಟೀಸ್ಪೂನ್
    ಏಲಕ್ಕಿ ಪುಡಿ – ಅರ್ಧ ಟೀಸ್ಪೂನ್ ಇದನ್ನೂ ಓದಿ: ರುಚಿಕರವಾದ ದಹಿ ವಡಾ ಮಾಡುವುದು ಹೇಗೆ ಗೊತ್ತಾ?

    ಮಾಡುವ ವಿಧಾನ:
    * ಮೊದಲಿಗೆ ಪ್ಯಾನ್‌ನಲ್ಲಿ ಕಾಲು ಕಪ್ ತುಪ್ಪ ಮತ್ತು ಕಾಲು ಕಪ್ ಗೊಂದ್ ತೆಗೆದುಕೊಳ್ಳಿ. ಗೊಂದ್ ಸ್ವಲ್ಪ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಕಡಿಮೆ ಉರಿಯಲ್ಲಿ ಹುರಿಯಿರಿ. ಬಳಿಕ ಅದನ್ನು ಪಕ್ಕಕ್ಕಿಡಿ.
    * ಈಗ ಉಳಿದ ತುಪ್ಪದಲ್ಲಿ ಬಾದಾಮಿ, ಗೋಡಂಬಿ, ಪಿಸ್ತಾ, ಅಂಜೂರ, ಒಣದ್ರಾಕ್ಷಿ ಮತ್ತು ಕುಂಬಳಕಾಯಿ ಬೀಜಗಳನ್ನು ಸೇರಿಸಿ ಗರಿಗರಿಯಾಗುವವರೆಗೆ ಕಡಿಮೆ ಉರಿಯಲ್ಲಿ ಹುರಿಯಿರಿ. ಬಳಿಕ ಅದನ್ನು ಪಕ್ಕಕ್ಕಿರಿಸಿ.
    * ಒಣ ತೆಂಗಿನ ತುರಿಯನ್ನು ಪ್ಯಾನ್‌ಗೆ ಹಾಕಿ, ಪರಿಮಳ ಬರುವವರೆಗೆ ಕಡಿಮೆ ಉರಿಯಲ್ಲಿ ಹುರಿದುಕೊಳ್ಳಿ.
    * ಇದೀಗ ಒಂದು ದೊಡ್ಡ ಬಟ್ಟಲು ತೆಗೆದುಕೊಂಡು, ಹುರಿದ ಎಲ್ಲಾ ಪದಾರ್ಥಗಳನ್ನೂ (ಗೋಂದ್, ಒಣ ಹಣ್ಣುಗಳು, ತೆಂಗಿನ ತುರಿಯನ್ನು) ಅದಕ್ಕೆ ಹಾಕಿ, ಮಿಶ್ರಣ ಮಾಡಿ.
    * ಈಗ ಒಂದು ಕಡಾಯಿಯಲ್ಲಿ 2 ಟೀಸ್ಪೂನ್ ತುಪ್ಪ ಬಿಸಿ ಮಾಡಿ, ಅದಕ್ಕೆ ಒಣ ಖರ್ಜೂರ ಹಾಕಿ ಹುರಿದುಕೊಳ್ಳಿ.

    * ಅದಕ್ಕೆ ಬೆಲ್ಲ ಹಾಗೂ ನೀರು ಸೇರಿಸಿ, ಬೆಲ್ಲವನ್ನು ಚೆನ್ನಾಗಿ ಕರಗಿಸಿಕೊಳ್ಳಿ.
    * ಮಿಶ್ರಣ ನೊರೆನೊನೆರೆಯಾಗುತ್ತಿದ್ದಂತೆ ಅದಕ್ಕೆ ಹುರಿದಿಟ್ಟಿದ್ದ ಪದಾರ್ಥಗಳನ್ನು ಹಾಕಿ, ಜಾಯಿಕಾಯಿ ಪುಡಿ ಹಾಗೂ ಏಲಕ್ಕಿ ಪುಡಿ ಸೇರಿಸಿ, ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ.
    * ಈಗ ಒಂದು ಟ್ರೇ ತೆಗೆದುಕೊಂಡು, ಅದಕ್ಕೆ ಬೇಕಿಂಗ್ ಪೇಪರ್ ಹಾಕಿ, ಅದರ ಮೇಲೆ ಮಿಶ್ರಣವನ್ನು ಸುರಿಯಿರಿ.
    * ಮಿಶ್ರಣ ಸೆಟ್ ಆಗಲು 30 ನಿಮಿಷ ಹಾಗೆಯೇ ಬಿಡಿ.
    * ಬಳಿಕ ಚಾಕು ಸಹಾಯದಿಂದ ನಿಮಗೆ ಬೇಕಾದ ಆಕಾರಕ್ಕೆ ತುಂಡುಗಳಾಗಿ ಕತ್ತರಿಸಿಕೊಳ್ಳಿ.
    * ಇದೀಗ ಕರದಂಟು ತಯಾರಾಗಿದ್ದು, ಸವಿಯಲು ಸಿದ್ಧವಾಗಿದೆ. ಇದನ್ನು ನೀವು ಗಾಳಿಯಾಡದ ಡಬ್ಬಿಯಲ್ಲಿ ಸಂಗ್ರಹಿಸಿಟ್ಟರೆ 1 ತಿಂಗಳ ವರೆಗೆ ಬೇಕೆಂದಾಗ ಸವಿಯಬಹುದು. ಇದನ್ನೂ ಓದಿ: ವಿಶೇಷ ದಿನಗಳಿಗಾಗಿ ಸಿಹಿ ಸಿಹಿ ಮಲಾಯಿ ಲಡ್ಡು ರೆಸಿಪಿ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬೆಳಗಾವಿಯಲ್ಲಿ ಕುಂದಾ, ಗೋಕಾಕ್ ಕರದಂಟು ಖರೀದಿಸಿದ ಬೊಮ್ಮಾಯಿ

    ಬೆಳಗಾವಿಯಲ್ಲಿ ಕುಂದಾ, ಗೋಕಾಕ್ ಕರದಂಟು ಖರೀದಿಸಿದ ಬೊಮ್ಮಾಯಿ

    ಬೆಳಗಾವಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಸಾಮಾನ್ಯ ಜನರಂತೆ ಸ್ವೀಟ್ ಮಾರ್ಟ್ ಅಂಗಡಿಗೆ ಹೋಗಿ ಬೆಳಗಾವಿಯ ಕುಂದಾ (Belagavi Kunda), ಗೋಕಾಕ್ ಕರದಂಟು (Gokak Karadant) ಖರೀದಿಸಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ನಗರದ ಖಾನಾಪುರ ರಸ್ತೆಯ ಸ್ವೀಟ್ ಮಾರ್ಟ್‌ನಲ್ಲಿ ಕಾಮನ್ ಮ್ಯಾನ್ ಸಿಎಂ ಅಂತಲೇ ಗುರುತಿಸಿಕೊಳ್ಳುತ್ತಿರುವ ಸಿಎಂ ಬಸವರಾಜ ಬೊಮ್ಮಾಯಿ ಅವರು ನಿನ್ನೆ ಸಂಜೆ ಕುಂದಾ ಮತ್ತು ಕರದಂಟು ಖರೀದಿಸಿದ್ದರು. ಈ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದೀಗ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲೆಡೆ ವೈರಲ್ ಆಗುತ್ತಿದೆ. ಇದನ್ನೂ ಓದಿ: ಬೊಮ್ಮಾಯಿಗೆ ಅವರ ಭಾಷೆಯಲ್ಲೇ ಉತ್ತರಿಸಿ: NCP ನಾಯಕ

    ಈ ವೇಳೆ ಸಿಎಂ ಬಸವರಾಜ ಬೊಮ್ಮಾಯಿಗೆ ಸಚಿವ ಗೋವಿಂದ ಕಾರಜೋಳ ಸಾಥ್ ನೀಡಿದ್ದಾರೆ. ಇತ್ತ ಸಿಎಂ ಬೊಮ್ಮಾಯಿ ಯಾರಿಗೆ ಸಿಹಿ ಸುದ್ದಿ ನೀಡ್ತಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ತರಹೇವಾರು ಚರ್ಚೆಗಳು ನಡೆಯುತ್ತಿವೆ. ಇದನ್ನೂ ಓದಿ: ಇಟಲಿ ಕಾಂಗ್ರೆಸ್‍ನ ಒಂದು ನಾಯಿಯೂ ಭಾರತದ ಪರವಾಗಿ ಬೊಗಳಿಲ್ಲ: ಸಿ.ಟಿ. ರವಿ

    Live Tv
    [brid partner=56869869 player=32851 video=960834 autoplay=true]