Tag: ಗೋಕಾಕ್

  • ತಮ್ಮನ ಸಾವಿನ ಸುದ್ದಿ ಕೇಳಿ ಅಣ್ಣನೂ ಹೃದಯಾಘಾತದಿಂದ ಸಾವು

    ತಮ್ಮನ ಸಾವಿನ ಸುದ್ದಿ ಕೇಳಿ ಅಣ್ಣನೂ ಹೃದಯಾಘಾತದಿಂದ ಸಾವು

    ಬೆಳಗಾವಿ: ತಮ್ಮನ ಸಾವಿನ ಸುದ್ದಿ ಕೇಳಿ ಅಣ್ಣ ಹೃದಯಾಘಾತದಿಂದ (Heartattack) ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ಗೋಕಾಕ (Gokaka) ತಾಲೂಕಿನ ಕಪರಟ್ಟಿ ಗ್ರಾಮದಲ್ಲಿ ನಡೆದಿದೆ.

    ತಮ್ಮ ಸತೀಶ್ ಬಾಗನ್ನವರ (16), ಅಣ್ಣ ಬಸವರಾಜ್ ಬಾಗನ್ನವರ (24) ಮೃತ ದುರ್ದೈವಿಗಳು. 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಸತೀಶ್ ಶನಿವಾರ ಮುಂಜಾನೆ ಅನಾರೋಗ್ಯದಿಂದ ಮೃತಪಟ್ಟಿದ್ದ. ತಮ್ಮನ ಸಾವಿನ ಸುದ್ದಿ ಕೇಳಿ ಅಣ್ಣ ಬಸವರಾಜ್ ಅಲ್ಲೇ ಕುಸಿದು ಬಿದ್ದಿದ್ದ. ಆತನನ್ನು ಆಸ್ಪತ್ರೆಗೆ ಕೊಂಡೊಯ್ಯುವ ಹೃದಯಾಘಾತದಿಂದ ಮೃತಪಟ್ಟಿದ್ದಾನೆ. ಇದನ್ನೂ ಓದಿ: ಅಮೆರಿಕದಲ್ಲಿ ಹೈದರಾಬಾದ್ ಮೂಲದ ದಂತ ವೈದ್ಯನ ಗುಂಡಿಕ್ಕಿ ಹತ್ಯೆ

    ತುಂಬು ಗರ್ಭಿಣಿಯಾಗಿದ್ದ ಬಸವರಾಜ್ ಪತ್ನಿ ಪವಿತ್ರಾ, ಪತಿಯ ಸಾವಿನ ಸುದ್ದಿ ತಿಳಿದು ಕುಸಿದ್ದಿದ್ದರು. ತಕ್ಷಣವೇ ಆಕೆಯನ್ನು ಗೋಕಾಕ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗಿತ್ತು. ಅದೃಷ್ಟವಶಾತ್ ಆಕೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಬಸವರಾಜ ಬಾಗನ್ನವರ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದ. ಇದೀಗ ಮನೆಗೆ ಆಧಾರವಾಗಿದ್ದ ಇಬ್ಬರು ಗಂಡು ಮಕ್ಕಳನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.

  • ಗೋಕಾಕ್‌ ಜಿಲ್ಲೆಗೆ ಆಗ್ರಹಿಸಿ ನಿರಂತರ ಹೋರಾಟ : ಶ್ರೀ ಮುರುಘರಾಜೇಂದ್ರ ಸ್ವಾಮೀಜಿ

    ಗೋಕಾಕ್‌ ಜಿಲ್ಲೆಗೆ ಆಗ್ರಹಿಸಿ ನಿರಂತರ ಹೋರಾಟ : ಶ್ರೀ ಮುರುಘರಾಜೇಂದ್ರ ಸ್ವಾಮೀಜಿ

    ಬೆಳಗಾವಿ: ಗೋಕಾಕ್‌ (Gokak) ನೂತನ ಜಿಲ್ಲೆಗೆ ಆಗ್ರಹಿಸಿ ಎಲ್ಲರೊಂದಿಗೆ ಚರ್ಚಿಸಿ ನಿರಂತರ ಹೋರಾಟ ಕೈಗೊಳ್ಳಲಾಗುವುದು ಎಂದು ಗೋಕಾಕ್‌ ಜಿಲ್ಲಾ ರಚನಾ ಹೋರಾಟ ಚಾಲನಾ ಸಮಿತಿಯ ಅಧ್ಯಕ್ಷ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು (Muruga Rajendra Swamiji) ಹೇಳಿದರು.

    ಗೋಕಾಕ್‌ ನಗರದಲ್ಲಿ ಜಿಲ್ಲಾ ರಚನಾ ಹೋರಾಟ ಚಾಲನಾ ಸಮಿತಿ, ವಕೀಲರ ಸಂಘ ಹಾಗೂ ನಗರದ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಪ್ರತಿಭಟನೆ ನಡೆಸಲಾಯಿತು. ಇದನ್ನೂ ಓದಿ: ಅಯ್ಯಪ್ಪಸ್ವಾಮಿ ಮಾಲಾಧಾರಿಗಳಿಗೆ ಗುಡ್‌ನ್ಯೂಸ್ – ಮೊದಲ ಬಾರಿಗೆ KSRTCಯಿಂದ ಶಬರಿಮಲೆಗೆ ವೋಲ್ವೋ ಬಸ್ ಸಂಚಾರ

    ಕಳೆದ 4 ದಶಕಗಳಿಂದ ಗೋಕಾಕ್‌ ಜಿಲ್ಲಾ ಹೋರಾಟ ನಡೆಯುತ್ತಿದೆ. ಜಿಲ್ಲೆ ಮಾಡಲು ನಿರಂತರ ಹೋರಾಟಗಳನ್ನು ಮಾಡಿ ಸರ್ಕಾರಕ್ಕೆ ಮನವಿ ಸಲ್ಲಿಸಿ ಮನವರಿಕೆ ಮಾಡಿದರೂ ಅದು ಈಡೇರಿಲ್ಲ. ಮುಂಬರುವ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್‌ ಜಾರಕಿಹೊಳಿ ಮತ್ತು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಸರ್ಕಾರದ ಮೇಲೆ ಒತ್ತಡ ಹಾಕಿ ಜಿಲ್ಲೆಯ ಎಲ್ಲಾ ಶಾಸಕರನ್ನು ವಿಶ್ವಾಸಕ್ಕೆ ತಗೆದುಕೊಂಡು ಗೋಕಾಕ್‌ ನೂತನ ಜಿಲ್ಲಾ ಕೇಂದ್ರವನ್ನಾಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಆಗ್ರಹಿಸಿದರು.

     

  • ಘಟಪ್ರಭಾ ನದಿಯ ಅಬ್ಬರಕ್ಕೆ ಊರಿಗೆ ಊರೇ ಮುಳುಗಡೆ- ಡ್ರೋಣ್‌ ವಿಡಿಯೋ ನೋಡಿ

    ಘಟಪ್ರಭಾ ನದಿಯ ಅಬ್ಬರಕ್ಕೆ ಊರಿಗೆ ಊರೇ ಮುಳುಗಡೆ- ಡ್ರೋಣ್‌ ವಿಡಿಯೋ ನೋಡಿ

    ಬೆಳಗಾವಿ: ಘಟಪ್ರಭಾ ನದಿಯ (Ghataprabha River) ಅಬ್ಬರಕ್ಕೆ ಗೋಕಾಕ್ (Gokak) ತಾಲೂಕಿನ ಮೆಳವಂಕಿ ಗ್ರಾಮದಲ್ಲಿರುವ 500ಕ್ಕೂ ಹೆಚ್ಚು ಮನೆಗಳು ಜಲಾವೃತವಾಗಿ ಊರಿಗೆ ಊರೇ ಜಲ ಪ್ರಳಯದಲ್ಲಿ (Flood) ಮುಳುಗಿಹೊಗಿದೆ.

    ನೆರೆಯ ಭೀಕರತೆ ಎಷ್ಟಿದೆ ಎಂದರೆ ಪಬ್ಲಿಕ್ ಟಿವಿಯ ಡ್ರೋಣ್‌ ಕ್ಯಾಮೆರಾದ ದೃಶ್ಯ ಗಳನ್ನು ನೋಡಿದರೆ ಮೈ ಜುಂ ಅನಿಸುತ್ತದೆ. ಇದನ್ನೂ ಓದಿ: ವಯನಾಡಿನ ಬೆಟ್ಟದಲ್ಲಿ ಜಲಸ್ಫೋಟ – 19 ಮಂದಿ ಸಾವು, ನೂರಾರು ಮಂದಿ ಸಿಲುಕಿರುವ ಸಾಧ್ಯತೆ

     

    500 ಮನೆಗಳ ಇಡಿ ಗ್ರಾಮವನ್ನು ಸುತ್ತುವರೆದಿರುವ ನದಿ ಹೊಲ ಗದ್ದೆ, ದೇವಸ್ಥಾನ ಮನೆಗಳು ನೀರಿನಲ್ಲಿ ತೇಲಿ ಅವಾಂತರ ಸೃಷ್ಟಿಸಿದೆ. ತುಂಬಿದ ಮನೆಗಳಲ್ಲಿ 80% ನೀರು ತುಂಬಿ ಬದುಕು ದುಸ್ತರವಾಗಿದೆ. ಇದನ್ನೂ ಓದಿ: ಮುಳುಗಿತು ತ್ರಿವೇಣಿ ಸಂಗಮ – ಭಗಂಡೇಶ್ವರನ ಮೆಟ್ಟಿಲುವರೆಗೆ ಆವರಿಸಿದ ನೀರು

    ಮನೆಗಳ ಅರ್ಧದಷ್ಟು ಭಾಗ ನೀರಿನಲ್ಲಿ ಮುಳುಗಿದೆ. ನಡು ರಸ್ತೆಯಲ್ಲಿಯೇ ಸೊಂಟದ ಮಟ್ಟದವರೆಗೆ ನೀರು ನಿಂತಿದೆ. 2019, 2021ರಲ್ಲೂ ಸಹ ಮುಳುಗಿ ಮೆಳವಂಕಿ ಗ್ರಾಮ ನಡು ಗಡ್ಡೆಯಂತಾಗಿತ್ತು. ಈಗ ಮತ್ತೊಮ್ಮೆ ನೀರಿನಲ್ಲಿ ಗ್ರಾಮ ಮುಳುಗಿದೆ.

  • ರಾತ್ರಿ ವೇಳೆ ಭೀಕರ ಸಿಲಿಂಡರ್ ಸ್ಫೋಟ – ಹಸುಗೂಸು ಸೇರಿ ಒಂದೇ ಕುಟುಂಬದ 7 ಮಂದಿಗೆ ಗಂಭೀರ ಗಾಯ

    ರಾತ್ರಿ ವೇಳೆ ಭೀಕರ ಸಿಲಿಂಡರ್ ಸ್ಫೋಟ – ಹಸುಗೂಸು ಸೇರಿ ಒಂದೇ ಕುಟುಂಬದ 7 ಮಂದಿಗೆ ಗಂಭೀರ ಗಾಯ

    ಬೆಳಗಾವಿ: ರಾತ್ರಿ ವೇಳೆ ಭೀಕರ ಸಿಲಿಂಡರ್ ಸ್ಫೋಟ (Cylinder Blast) ಸಂಭವಿಸಿದ ಪರಿಣಾಮ 9 ತಿಂಗಳ ಮಗು ಸೇರಿದಂತೆ ಒಂದೇ ಕುಟುಂಬದ 7 ಜನರಿಗೆ ಗಂಭೀರ ಗಾಯಗಳಾಗಿರುವ ಘಟನೆ ಗೋಕಾಕ್ (Gokak) ತಾಲೂಕಿನ ಅಕ್ಕತಂಗೇರಹಾಳ ಗ್ರಾಮದಲ್ಲಿ ನಡೆದಿದೆ.

    ರಾತ್ರಿ ಮನೆಮಂದಿಯೆಲ್ಲಾ ಮಲಗಿದ್ದ ವೇಳೆ ಮನೆಯಲ್ಲಿದ್ದ ಸಿಲಿಂಡರ್ ಗ್ಯಾಸ್ (Gas) ಸೋರಿಕೆಯಾಗಿತ್ತು. ಈ ವೇಳೆ ಗ್ಯಾಸ್ ವಾಸನೆಗೆ ಮೊಬೈಲ್ ಟಾರ್ಚ್ ಆನ್ ಮಾಡಿ ನೋಡಲು ಹೋದಾಗ ಏಕಾಏಕಿ ಸಿಲಿಂಡರ್ ಸ್ಫೋಟಗೊಂಡಿದೆ. ಸ್ಫೋಟದ ರಭಸಕ್ಕೆ ಮನೆಯ ಹಂಚು ಹಾರಿ ಹೋಗಿದೆ. ಮನೆಯ ವಸ್ತುಗಳೆಲ್ಲಾ ಚೆಲ್ಲಾಪಿಲ್ಲಿಯಾಗಿ ಬಿದ್ದಿದೆ. ಇದನ್ನೂ ಓದಿ: 353ಕ್ಕೂ ಹೆಚ್ಚು ಮಕ್ಕಳು ಶಾಲೆಗೆ ಗುಡ್‌ಬೈ – ಬಡತನ, ಪೋಷಕರ ನಿರಾಸಕ್ತಿಯೇ ಕಾರಣ

    ಘಟನೆಯಲ್ಲಿ ರಾಜಶ್ರೀ ನಿರ್ವಾಣಿ (42), ಅಶೋಕ ನಿರ್ವಾಣಿ (45), ಸೋಮನಗೌಡ (44), ದೀಪಾ (42), ನವೀನ (14), ವಿದ್ಯಾ (13), ಬಸನಗೌಡ ನಿರ್ವಾಣಿ (9 ತಿಂಗಳು) ಗಾಯಗೊಂಡಿದ್ದಾರೆ. ಈ ಪೈಕಿ ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನುಳಿದವರಿಗೆ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ದೇಶದಲ್ಲಿ ಮತ್ತೆ ಕೊರೊನಾ ಆತಂಕ; ಪಕ್ಕದ ಕೇರಳದಲ್ಲಿ ಜೆಎನ್.1 ಸೋಂಕು ಪತ್ತೆ – ಕರ್ನಾಟಕದಲ್ಲೂ ಹೈ ಅಲರ್ಟ್

  • ಗೋಕಾಕ್‍ನಲ್ಲಿ ಯುವಕನ ಬರ್ಬರ ಹತ್ಯೆ

    ಗೋಕಾಕ್‍ನಲ್ಲಿ ಯುವಕನ ಬರ್ಬರ ಹತ್ಯೆ

    ಬೆಳಗಾವಿ: ಹಳೇ ವೈಷಮ್ಯದಿಂದ ಯುವಕನೊಬ್ಬನನ್ನು ಬರ್ಬರವಾಗಿ ಹತ್ಯೆಗೈದ ಘಟನೆ ಗೋಕಾಕ್‍ನಲ್ಲಿ (Gokak) ನಡೆದಿದೆ.

    ಹತ್ಯೆಗೀಡಾದ ಯುವಕನನ್ನು ಶಾನೂರು ಪೂಜಾರಿ (27) ಎಂದು ಗುರುತಿಸಲಾಗಿದೆ. ಹತ್ಯೆಗೀಡಾದ ಯುವಕ ನಗರದ ಪೆಟ್ರೊಲ್ ಬಂಕ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಕೊಲೆ ವಿಚಾರ ತಿಳಿಯುತ್ತಿದ್ದಂತೆ ಮೃತ ಯುವಕನ ಪರವಾಗಿ ಮತ್ತೊಂದು ಗುಂಪು ಆದಿಜಾಂಬವ ನಗರದಲ್ಲಿರುವ ಆರೋಪಿಯ ಮನೆ ಮುಂದೆ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಉದ್ವಿಘ್ನ ಯುವಕರ ಗುಂಪು ಆರೋಪಿಯ ಮನೆ ಮೇಲೆ ಕ್ಲಲು ತೂರಾಟ ನಡೆಸಿದೆ. ಅಲ್ಲದೇ ಯುವಕರು ಬೈಕ್ ಹಾಗೂ ಕಾರುಗಳನ್ನು ಜಖಂಗೊಳಿಸಿದ್ದಾರೆ. ಇದನ್ನೂ ಓದಿ: ಗುಟುಕು ಮದ್ಯ ಕೊಡಲು ನಿರಾಕರಿಸಿದ್ದಕ್ಕೆ ವೈನ್ ಶಾಪ್‌ಗೇ ಬೆಂಕಿ ಇಟ್ಟ ಭೂಪ

    ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಸ್ಥಳದಲ್ಲಿ ಕೆಎಸ್‍ಆರ್‍ಪಿ ತುಕಡಿ ನಿಯೋಜನೆ ಮಾಡಲಾಗಿದೆ. ತಕ್ಷಣವೇ ಆರೋಪಿಗಳನ್ನು ಬಂಧಿಸುವಂತೆ ಯುವಕರು ಆಗ್ರಹಿಸಿದ್ದಾರೆ. ಉದ್ವಿಘ್ನ ಗುಂಪನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟಿದ್ದಾರೆ.

    ಈ ಸಂಬಂಧ ಗೋಕಾಕ್ ಶಹರ ಪೊಲೀಸ್ (Police) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿಗಳನ್ನು ಬಂಧಿಸಲು ಬಲೆ ಬೀಸಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಅಗ್ನಿ ಅವಘಡ – ಐಟಿ ಕಂಪನಿ ಭಾಗಶಃ ಭಸ್ಮ

  • ಹೃದಯಾಘಾತದಿಂದ ಅರಭಾವಿಮಠದ ಸ್ವಾಮೀಜಿ ಲಿಂಗೈಕ್ಯ

    ಹೃದಯಾಘಾತದಿಂದ ಅರಭಾವಿಮಠದ ಸ್ವಾಮೀಜಿ ಲಿಂಗೈಕ್ಯ

    ಬೆಳಗಾವಿ: ಅರಭಾವಿ ಮಠದ (Arabhavi Mutt) ದುರದುಂಡೇಶ್ವರ ಮಠದ ಸಿದ್ದಲಿಂಗ ಸ್ವಾಮೀಜಿ (64) (Siddalinga Swamiji) ಹೃದಯಾಘಾತದಿಂದ (Heart Attack) ಲಿಂಗೈಕ್ಯರಾಗಿದ್ದಾರೆ.

    ಮಠದಲ್ಲಿರುವಾಗಲೇ ಸ್ವಾಮೀಜಿಗೆ ಎದೆನೋವು ಕಾಣಿಸಿಕೊಂಡಿತ್ತು. ಕೂಡಲೇ ಅವರನ್ನು ಗೋಕಾಕ್‍ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಅವರು ನಿಧನರಾಗಿದ್ದಾರೆ. ಇದನ್ನೂ ಓದಿ: ದಸರಾ ವಿಶೇಷ – ವಾಯುವ್ಯ ಸಾರಿಗೆಯಿಂದ 500ಕ್ಕೂ ಹೆಚ್ಚು ಬಸ್ ವ್ಯವಸ್ಥೆ

    ಸ್ವಾಮೀಜಿ ನಿಧನದಿಂದ ಅಪಾರ ಭಕ್ತ ಸಮೂಹ ಶೋಕಸಾಗರಲ್ಲಿ ಮುಳುಗಿದೆ. ಮಠಕ್ಕೆ ಕರ್ನಾಟಕ ಮಾತ್ರವಲ್ಲದೇ ಹೊರ ರಾಜ್ಯಗಳಲ್ಲಿಯೂ ಅಪಾರ ಭಕ್ತರಿದ್ದಾರೆ. ಈ ವಿಚಾರ ತಿಳಿಯುತ್ತಿದ್ದಂತೆ ವಿವಿಧ ಮಠಾಧೀಶರು ಹಾಗೂ ಗಣ್ಯರು ಮಠಕ್ಕೆ ಆಗಮಿಸಿದ್ದಾರೆ.

    ಇಂದು ನಾಡಿನ ಹಲವು ಮಠಾಧೀಶರ ಸಮ್ಮುಖದಲ್ಲಿ ವಿಧಿ ವಿಧಾನಗಳೊಂದಿಗೆ ಅಂತ್ಯಕ್ರಿಯೆಗೆ ಸಿದ್ಧತೆ ನಡೆಸಲಾಗಿದೆ. ಇದನ್ನೂ ಓದಿ: ಪಾಕ್ ಕ್ರಿಕೆಟಿಗರಿಗೆ ಜೈ ಶ್ರೀರಾಮ್‌ ಘೋಷಣೆ: ಉದಯನಿಧಿ ಆಕ್ಷೇಪ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಉದ್ಯಮಿ ಜಯಶೀಲ್ ಶೆಟ್ಟಿ ಸೊಸೆ ನೇಣಿಗೆ ಶರಣು

    ಉದ್ಯಮಿ ಜಯಶೀಲ್ ಶೆಟ್ಟಿ ಸೊಸೆ ನೇಣಿಗೆ ಶರಣು

    ಬೆಳಗಾವಿ: ಉದ್ಯಮಿ ಜಯಶೀಲ್ ಶೆಟ್ಟಿ (Jayasheel Shetty) ಅವರ ಸೊಸೆ ಶೀತಲ್ ಶೆಟ್ಟಿ ಗೋಕಾಕ್‍ನ (Gokak) ಘಟಪ್ರಭಾದಲ್ಲಿರುವ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ.

    ಮನೆಯಲ್ಲಿ ಯಾರೂ ಇಲ್ಲದ ವೇಳೆ ಅವರು ನೇಣಿಗೆ ಶರಣಾಗಿದ್ದಾರೆ. ಕುಟುಂಬಸ್ಥರು ವಿದೇಶ ಪ್ರವಾಸದಲ್ಲಿದ್ದಾರೆ ಎಂದು ತಿಳಿದು ಬಂದಿದೆ. ಜಯಶೀಲ್ ಶೆಟ್ಟಿಯವರ ಪುತ್ರ ಮನಿಶ್ ಅವರನ್ನು ಶೀತಲ್ ಮದುವೆಯಾಗಿದ್ದರು. ಇದನ್ನೂ ಓದಿ: ತಮಿಳುನಾಡಿನಲ್ಲಿ ಕಂದಕಕ್ಕೆ ಉರುಳಿದ ಬಸ್‌ – 8 ಮಂದಿ ದುರ್ಮರಣ

    ಶೀತಲ್ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಮನಿಷ್ ಹಾಗೂ ಶೀಥಲ್ ದಂಪತಿಗೆ ಹೆಣ್ಣು ಮಗುವಿದೆ. ಸ್ಥಳಕ್ಕೆ ಘಟಪ್ರಭಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ನಾಲೆಗೆ ಬಿದ್ದ ಪುತ್ರಿಯನ್ನು ರಕ್ಷಿಸಲು ಹೋಗಿ ಒಂದೇ ಕುಟುಂಬದ ಮೂವರು ನೀರುಪಾಲು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವಾಟ್ಸಪ್ ಗ್ರೂಪ್‍ನಲ್ಲೇ ದರೋಡೆಗೆ ಪ್ಲಾನ್- ಡಿಫರೆಂಟ್ ಗ್ಯಾಂಗ್ ಅರೆಸ್ಟ್

    ವಾಟ್ಸಪ್ ಗ್ರೂಪ್‍ನಲ್ಲೇ ದರೋಡೆಗೆ ಪ್ಲಾನ್- ಡಿಫರೆಂಟ್ ಗ್ಯಾಂಗ್ ಅರೆಸ್ಟ್

    ಬೆಳಗಾವಿ: ವಾಟ್ಸಪ್ ಗ್ರೂಪ್ ಮಾಡಿಕೊಂಡು ಅದರಲ್ಲೇ ಚರ್ಚಿಸಿ ನಂತರ ದರೋಡೆಗೆ ಇಳಿಯುತ್ತಿದ್ದ 9 ಜನರ ಗ್ಯಾಂಗ್ ಒಂದನ್ನು ಗೋಕಾಕ್ (Gokak) ಪೊಲೀಸರು (Police) ಬಂಧಿಸಿದ್ದಾರೆ.

    ಬಂಧಿತ ಆರೊಪಿಗಳನ್ನು ದುರ್ಗಪ್ಪ ವಡ್ಡರ್, ನಾಗಪ್ಪ ಮಾದರ್, ಯಲ್ಲಪ್ಪ ಗೀಸನಿಂಗವ್ವಗೋಳ, ಕೃಷ್ಣಾ ಪೂಜೇರಿ, ರಾಮಸಿದ್ದ ತಸ್ಪಿ, ಬೀರಸಿದ್ದ ಗುಂಡಿ, ಉದ್ದಪ್ಪ ಖಿಲಾರಿ, ಪರಶುರಾಮ್ ಗೊಂದಳಿ, ಆಕಾಶ ತಳವಾರ ಎಂದು ಗುರುತಿಸಲಾಗಿದೆ. ಗೋಕಾಕ್ ಶಹರ, ಗೋಕಾಕ್ ಗ್ರಾಮೀಣ ಹಾಗೂ ಅಂಕಲಗಿ ಪೊಲೀಸ್ ಠಾಣೆಗಳಲ್ಲಿನ ಒಟ್ಟು 9 ವಿವಿಧ ಪ್ರಕರಣದಲ್ಲಿ ಆರೋಪಿಗಳು ಭಾಗಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಕುದಿಯೋ ನೀರಿಗೆ ಖಾರದ ಪುಡಿ ಬೆರೆಸಿ ಪತಿ ಮೇಲೆ ಎರಚಿ ಬೆದರಿಕೆ ಹಾಕಿದ್ಳು!

    ಆರೋಪಿಗಳು ಬೆನಚಿನಮರಡಿ ಗ್ಯಾಂಗ್ ಹಾಗೂ ಎಸ್‍ಪಿ ಗ್ಯಾಂಗ್ ಎಂಬ ಹೆಸರಿನಲ್ಲಿ ವಾಟ್ಸಪ್ ಗ್ರೂಪ್ ಮಾಡಿಕೊಂಡಿದ್ದರು ಎಂದು ತಿಳಿದು ಬಂದಿದೆ. ಬಂಧಿತರಲ್ಲಿ ಬೆನಚಿನಮರಡಿ ಗ್ಯಾಂಗ್‍ನ 7 ಹಾಗೂ ಎಸ್ಪಿ ಗ್ಯಾಂಗ್‍ನ 2 ಜನ ಆರೋಪಿಗಳು ಸೇರಿದ್ದಾರೆ.

    ಬಂಧಿತರಿಂದ ಚಿನ್ನಾಭರಣ, ದ್ವಿಚಕ್ರವಾಹನ ಸೇರಿದಂತೆ 7,89,700 ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಗೋಕಾಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: 3 ಸಾವಿರ ರೂ. ಸಾಲ ಮರುಪಾವತಿಸದ್ದಕ್ಕೆ ವ್ಯಕ್ತಿಯ ಬೆತ್ತಲೆ ಮೆರವಣಿಗೆ!

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬೆಳಗಾವಿಯಲ್ಲಿ ಕಣ್ಮರೆಯಾಗಿದ್ದ ಫೈಟರ್ ರಾಕಿ ಟಗರು‌ ಪತ್ತೆ!

    ಬೆಳಗಾವಿಯಲ್ಲಿ ಕಣ್ಮರೆಯಾಗಿದ್ದ ಫೈಟರ್ ರಾಕಿ ಟಗರು‌ ಪತ್ತೆ!

    ಬೆಳಗಾವಿ: ಟಗರು ಕಾಳಗದಲ್ಲಿ (Ram Fighting) ಮಿಂಚುತ್ತಿದ್ದ ರಾಕಿ ಹೆಸರಿನ ಫೈಟರ್‌ ಟಗರನ್ನು (Rocky Tagaru) ಕಳ್ಳತನ ಮಾಡಿ ಮಟನ್ ಮಾರುಕಟ್ಟೆಯಲ್ಲಿ ಖದೀಮರು ಬಿಟ್ಟು ಹೋದ ಘಟನೆ ತಳಕಟನಾಳ ಗ್ರಾಮದಲ್ಲಿ ನಡೆದಿದೆ.

    ಬೆಳಗಾವಿ (Belagavi) ಜಿಲ್ಲೆಯ ಗೋಕಾಕ್‌ (Gokak) ತಾಲೂಕಿನ ತಳಕಟನಾಳ ಗ್ರಾಮದ ಅಜಯ್ ಕಣಿಲ್ದಾರ್ ಎಂಬುವವರಿಗೆ ಸೇರಿದ ಐದು ವರ್ಷದ ಟಗರು ಶನಿವಾರ ಕಳ್ಳತನವಾಗಿತ್ತು. ಈ ಸಂಬಂಧ ಟಗರು ಮಾಲೀಕರು ಗೋಕಾಕ್‌ ತಾಲೂಕಿನ ಕುಲಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.   ಇದನ್ನೂ ಓದಿ: ಬೆಂಗಳೂರಿನ ಜಯನಗರದ BMTC ಡಿಪೋಗೆ ತಲೈವಾ ಸರ್ಪ್ರೈಸ್ ವಿಸಿಟ್

    ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ಪತ್ತೆಗೆ ಜಾಲ ಬೀಸಿದ್ದರು. ತಡರಾತ್ರಿ ಗೋಕಾಕ್‌ ಮಟನ್ ಮಾರುಕಟ್ಟೆಯಲ್ಲಿ ಟಗರು ಪತ್ತೆಯಾಗಿದೆ. ಗೆಳೆಯರು ನೀಡಿದ ಮಾಹಿತಿಯ ಮೇರೆಗೆ ರಾಕಿಯನ್ನು ಮನೆಗೆ ವಾಪಸ್ ತಂದಿದ್ದು ಟಗರು ಮಾಲೀಕರು ನಿಟ್ಟುಸಿರು ಬಿಟ್ಟಿದ್ದಾರೆ.

    15 ದಿನದ ಹಿಂದೆ ರಾಕಿಗೆ  2.50 ಲಕ್ಷ ರೂ. ನೀಡುತ್ತೇವೆ. ನಮಗೆ ಕೊಡಿ ಎಂದು ಟಗರು ಪ್ರಿಯರು ಬೇಡಿಕೆ ಇಟ್ಟಿದ್ದರು. ಯಾವುದೇ ಸ್ಥಳದಲ್ಲಿ ಟಗರು ಕಾಳಗ ನಡೆದರೂ ಗೆಲ್ಲುತ್ತಿದ್ದ ರಾಕಿಯನ್ನು ಕೊಡಲು ಟಗರು ಮಾಲೀಕರು ಹಿಂದೇಟು ಹಾಕಿದ್ದರು.  ಟಗರು ಗೆಲ್ಲುವುದನ್ನು ನೋಡಿ ಸಹಿಸಲಾಗದ ವಿರೋಧಿಗಳು ಮನೆಯಲ್ಲಿ ಕಟ್ಟಿದ್ದ ವೇಳೆ ರಾಕಿಯನ್ನು ಕಳ್ಳತನ ಮಾಡಿರಬಹುದು ಎಂಬ ಶಂಕೆ ಈಗ ವ್ಯಕ್ತವಾಗಿದೆ.

     

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಉಕ್ಕಿ ಹರಿಯುತ್ತಿರುವ ಸೇತುವೆ ಮೇಲೆ ಬೈಕ್ ಸವಾರನ ಹುಚ್ಚಾಟ

    ಉಕ್ಕಿ ಹರಿಯುತ್ತಿರುವ ಸೇತುವೆ ಮೇಲೆ ಬೈಕ್ ಸವಾರನ ಹುಚ್ಚಾಟ

    ಬೆಳಗಾವಿ: ಜಿಲ್ಲೆಯಲ್ಲಿ ಮಳೆ ಮುಂದುವರಿದಿದ್ದು ಜಲಾವೃತಗೊಂಡಿರುವ ಗೋಕಾಕ್ – ಶಿಂಗಳಾಪೂರ ನಡುವಿನ ಅಪಾಯಕಾರಿ ಸೇತುವೆ ಮೇಲೆ ಬೈಕ್ (Bike) ಸವಾರನೊಬ್ಬ ಹುಚ್ಚಾಟ ಪ್ರದರ್ಶನ ಮಾಡಿದ ಘಟನೆ ಗೋಕಾಕ್‌ನಲ್ಲಿ (Gokak) ನಡೆದಿದೆ.

    ಪಶ್ಚಿಮಘಟ್ಟ ಪ್ರದೇಶ ಹಾಗೂ ಬೆಳಗಾವಿಯ (Belagavi) ಸುತ್ತಮುತ್ತ ಮಳೆ ಚುರುಕುಗೊಂಡಿದೆ. ಇದರಿಂದಾಗಿ ಗೋಕಾಕ್ ತಾಲೂಕಿನ ಘಟಪ್ರಭಾ ನದಿಯಲ್ಲಿ (Ghataprabha River) ನೀರಿನ ಪ್ರಮಾಣ ಹೆಚ್ಚಳವಾಗಿದೆ. ಪರಿಣಾಮ ಸೇತುವೆ ಜಲಾವೃತಗೊಂಡಿದ್ದು, ಅಪಾಯಕಾರಿ ಸೇತುವೆ ಮೇಲೆ ಬೈಕ್ ಸವಾರ ದಸ್ಸಾಹಸ ಪ್ರದರ್ಶನ ಮಾಡಿದ್ದಾನೆ. ಇದನ್ನೂ ಓದಿ: ಮಣಿಪುರದಲ್ಲಿ ಮಹಿಳೆಯರ ಬೆತ್ತಲೆ ಮೆರವಣಿಗೆ ಕೇಸ್‌ – ಪ್ರಮುಖ ಆರೋಪಿ ಮನೆಗೆ ಬೆಂಕಿ ಹಾಕಿ ಆಕ್ರೋಶ

    ಸೇತುವೆ ಮೇಲೆ ತೆರಳದಂತೆ ಕರ್ತವ್ಯ ನಿರತ ಪೊಲೀಸ್ (Police) ಸಿಬ್ಬಂದಿ ಸೂಚಿಸಿದ್ದಾರೆ. ಆದರೂ ಬೈಕ್ ಸವಾರ ಪೊಲೀಸರ ಮಾತು ಕೇಳದೆ ಉಕ್ಕಿ ಹರಿಯುತ್ತಿದ್ದ ಸೇತುವೆ ಮೇಲೆ ಬೈಕ್ ಸವಾರಿ ಮಾಡಿದ್ದಾನೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸ್ವಲ್ಪ ಆಯಾ ತಪ್ಪಿದರೂ ಘಟಪ್ರಭಾ ನದಿ ಪಾಲಾಗುವ ಸಾಧ್ಯತೆ ಇದೆ. ಇದೇ ಕಾರಣಕ್ಕೆ ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇದನ್ನೂ ಓದಿ: ಮಣಿಪುರ ಹಿಂಸಾಚಾರ ಹತೋಟಿಗೆ ತರಲು ಇಬ್ಬರು ಉನ್ನತ ಅಧಿಕಾರಿಗಳ ನಿಯೋಜನೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]