Tag: ಗೊಲ್ಲರಹಟ್ಟಿ

  • Bengaluru | ಅನಾರೋಗ್ಯಕ್ಕೆ ಬೇಸತ್ತು ವ್ಯಕ್ತಿ ಆತ್ಮಹತ್ಯೆ

    Bengaluru | ಅನಾರೋಗ್ಯಕ್ಕೆ ಬೇಸತ್ತು ವ್ಯಕ್ತಿ ಆತ್ಮಹತ್ಯೆ

    ಬೆಂಗಳೂರು: ಅನಾರೋಗ್ಯಕ್ಕೆ (Illness) ಬೇಸತ್ತು ವ್ಯಕ್ತಿಯೋರ್ವ ಆತ್ಮಹತ್ಯೆಗೆ ಶರಾಣಾಗಿರುವ ಘಟನೆ ಬೆಂಗಳೂರಿನ (Bengaluru) ಗೊಲ್ಲರಹಟ್ಟಿಯಲ್ಲಿ ನಡೆದಿದೆ.

    ಪುರುಷೋತ್ತಮ್ (27) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಮೂಲತಃ ಮಾಗಡಿ (Magadi) ತಾಲೂಕು ರಾಮನಗರ (Ramanagara) ಜಿಲ್ಲೆ ಬಾಳೆನಹಳ್ಳಿಯ ಪುರುಷೋತ್ತಮ್ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಪುರುಷೋತ್ತಮ್ ಕಳೆದ 5 ವರ್ಷದಿಂದ ಹೆಂಡತಿ ಹಾಗೂ ಮಗುವಿನೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಅನಾರೋಗ್ಯದಿಂದ ಬೆಸತ್ತು ಗೊಲ್ಲರಹಟ್ಟಿಯಲ್ಲಿ ರೂಂ ಡೋರ್ ಲಾಕ್ ಮಾಡಿಕೊಂಡು ನೇಣಿಗೆ ಶರಣಾಗಿದ್ದಾರೆ. ಇದನ್ನೂ ಓದಿ: ಮಂಡ್ಯದಲ್ಲಿ ದಳಪತಿಗಳಿಗೆ ಮುಖಭಂಗ – ಮತ್ತೆ ‘ಕೈ’ ವಶವಾಯ್ತು ಮನ್ಮುಲ್‌ ಗದ್ದುಗೆ

    ಸ್ಥಳಕ್ಕೆ ಬ್ಯಾಡರಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಮಂಗಳೂರು ಡಿಸಿಸಿ ಬ್ಯಾಂಕ್‌ಗೆ ಆರ್‌ಬಿಐ ಶಾಕ್‌ – 5 ಲಕ್ಷ ರೂ. ದಂಡ, ಕಾನೂನು ಕ್ರಮದ ಎಚ್ಚರಿಕೆ

  • Nelamangala| ಚಿರತೆ ದಾಳಿ- ಮಹಿಳೆ ಬಲಿ

    Nelamangala| ಚಿರತೆ ದಾಳಿ- ಮಹಿಳೆ ಬಲಿ

    ಬೆಂಗಳೂರು: ಚಿರತೆ ದಾಳಿಗೆ ಮಹಿಳೆ ಬಲಿಯಾಗಿರುವ ಘಟನೆ ನೆಲಮಂಗಲ (Nelamangala) ತಾಲೂಕಿನ ಗೊಲ್ಲರಹಟ್ಟಿ ಗ್ರಾಮದಲ್ಲಿ ನಡೆದಿದೆ.

    ಕರಿಯಮ್ಮ (55) ಮೃತ ಮಹಿಳೆ. ರಾತ್ರಿ ಜನಾನುವಾರುಗಳಿಗೆ ಮೇವು ತರಲು ಜಮೀನಿಗೆ ತೆರಳಿದ್ದ ವೇಳೆ ಚಿರತೆ ಮಹಿಳೆಯ ಮೇಲೆ ದಾಳಿ ಮಾಡಿದೆ. ಈ ಘಟನೆಯು ಶಿವಗಂಗೆ ಬೆಟ್ಟದ ತಪ್ಪಲಿನಲ್ಲಿರುವ ಗೊಲ್ಲರಹಟ್ಟಿ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಇದನ್ನೂ ಓದಿ: Chitraduraga| 240 ನರ್ಸಿಂಗ್‌ ವಿದ್ಯಾರ್ಥಿಗಳಿಗೆ ಒಂದೇ ಕೊಠಡಿಯಲ್ಲಿ ಪಾಠ!

    ಗ್ರಾಮದಲ್ಲಿ ಚಿರತೆಯು ಆಗಾಗ ಕಾಣಿಸಿಕೊಂಡಿದ್ದು, ಎಚ್ಚೆತ್ತುಕೊಳ್ಳದ ಅರಣ್ಯ ಅಧಿಕಾರಿಗಳ ವಿರುದ್ಧ ಜನ ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಒಂದೇ ದಿನ ಮೂವರು ಗರ್ಭಿಣಿಯರು ಸಾವು – ಇನ್ನೂ ಬಳ್ಳಾರಿಗೆ ಮುಖ ಮಾಡದ ಜಮೀರ್‌

  • ಮೈಲಿಗೆ ಮೌಢ್ಯಕ್ಕೆ ಮಗು ಸಾವು ಪ್ರಕರಣ – ಘಟನಾ ಸ್ಥಳಕ್ಕೆ ಜಡ್ಜ್ ಭೇಟಿ

    ಮೈಲಿಗೆ ಮೌಢ್ಯಕ್ಕೆ ಮಗು ಸಾವು ಪ್ರಕರಣ – ಘಟನಾ ಸ್ಥಳಕ್ಕೆ ಜಡ್ಜ್ ಭೇಟಿ

    ತುಮಕೂರು: ಹೆರಿಗೆ ನಂತರ ಬಾಣಂತಿ ಹಾಗೂ ಮಗುವನ್ನು ಊರ ಹೊರಗಿನ ಗುಡಿಸಲಿನಲ್ಲಿ ಇರಿಸಿ ಮಗು ಮೃತಪಟ್ಟ ಗೊಲ್ಲರಹಟ್ಟಿ (Gollara Hatti) ಗ್ರಾಮಕ್ಕೆ ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶರು (Judge) ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ನ್ಯಾ.ನೂರುನ್ನೀಸ ಇಂದು ದಿಢೀರ್ ಭೇಟಿ ನೀಡಿದ್ದಾರೆ. ಪರಿಶೀಲನೆ ನಡೆಸಿ ಬಳಿಕ ಗ್ರಾಮಸ್ಥರು ಹಾಗೂ ಸ್ಥಳೀಯ ಸರ್ಕಾರಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

    ಮೃತ ಮಗುವಿನ ಪೋಷಕರ ಆಹವಾಲು ಸ್ವೀಕರಿಸಿದ ನ್ಯಾಯಾಧೀಶರು, ಸಾರ್ವಜನಿಕರಿಂದ ಮಾಹಿತಿ ಕಲೆ ಹಾಕಿದರು. ಮಗು ಮೃತಪಟ್ಟ ನಂತರವೂ ಮೂರು ದಿನಗಳಿಂದ ಸುರಿಯುತ್ತಿರುವ ಜಡಿ ಮಳೆಯನ್ನು ಲೆಕ್ಕಿಸದೇ ತಾಯಿಯನ್ನು ಪುಟ್ಟ ಗುಡಿಸಿಲಿನಲ್ಲಿ ಇರಿಸಲಾಗಿದೆ. ಗ್ರಾಮಸ್ಥರಿಗೆ ಕಾನೂನುಗಳ ತಿಳುವಳಿಕೆ ನೀಡಿ, ಗುಡಿಸಲನ್ನು ಕೆಡವಿಸಿ, ಬಾಣಂತಿಯನ್ನು ಮನೆಗೆ ಕಳುಹಿಸಿದರು. ಸ್ಥಳೀಯ ವೈದ್ಯರಿಂದ ಮಹಿಳೆಯ ಆರೋಗ್ಯ ಪರಿಶೀಲನೆ ನಡೆಸಿ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ಕಳುಹಿಸಿದ್ದಾರೆ. ಈ ಹಿಂದೆ ಸ್ಥಳೀಯ ಸರ್ಕಾರಿ ಅಧಿಕಾರಿಗಳು ಗುಡಿಸಲಿಗೆ ತೆರಳಿ ಬಾಣಂತಿ ಹಾಗೂ ಮಗುವನ್ನು ಮನೆಗೆ ಸೇರಿಸುವ ಪ್ರಯತ್ನ ನಡೆಸಿದರೂ ಪ್ರಯೋಜನವಾಗಿರಲಿಲ್ಲ. ಇದನ್ನೂ ಓದಿ: ವಿದ್ಯಾರ್ಥಿನಿಯರ ವೀಡಿಯೋ ಚಿತ್ರೀಕರಣ ವಿವಾದ – ಕ್ರಮಕ್ಕೆ ಆಗ್ರಹಿಸಿ ಎಬಿವಿಪಿ ಪ್ರತಿಭಟನೆ

    ಬಳಿಕ ನ್ಯಾಯಮೂರ್ತಿಗಳು ಸುದ್ದಿಗಾರರೊಂದಿಗೆ ಮಾತನಾಡಿ, ಆರೋಗ್ಯದ ಹೆಚ್ಚಿನ ನಿಗಾ ಅವಶ್ಯಕತೆ ಇರುವ ಬಾಣಂತಿ ಮತ್ತು ಮಗುವನ್ನು ಊರಾಚೆಯ ಗುಡಿಸಲಿನಲ್ಲಿಯೇ ಇರಿಸಿದ ವಿಚಾರ ಇಡೀ ನಾಗರಿಕ ಸಮಾಜ ತಲೆತಗ್ಗಿಸುವ ಪ್ರಕರಣವಾಗಿದೆ. ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಮುಂದುವರೆದಿದೆ. ಆಚಾರಗಳಿಗಿಂತ ಪ್ರಾಣ ಮುಖ್ಯ ಎನ್ನುವುದನ್ನು ಯಾರೂ ಮರೆಯಬಾರದು. ಈ ಪ್ರಕರಣವನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ. ನಾಗರಿಕ ಹಕ್ಕುಗಳ ರಕ್ಷಣಾ ಕಾಯಿದೆ 1955ರ ಅಡಿ ತಪ್ಪಿಸ್ಥತರ ವಿರುದ್ಧ ಕಠಿಣ ಶಿಕ್ಷೆಗೆ ಗುರಿಪಡಿಸಲಾಗುವುದು. ಈ ಬಗ್ಗೆ ಸಮಗ್ರ ವರದಿಯನ್ನು ಮಹಿಳೆ ಮತ್ತು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ಸಲ್ಲಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

    ಬೆಳ್ಳಾವಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ವಾರ್ಡ್‍ಗಳು, ಔಷಧಿ ಉಗ್ರಾಣ ಕೊಠಡಿ, ಶೌಚಾಲಯಕ್ಕೆ ಭೇಟಿ ನೀಡಿದ ಅವರು, ಆಸ್ಪತ್ರೆಯಲ್ಲಿ ನೈರ್ಮಲ್ಯ ಕಾಪಾಡಬೇಕು ಎಂದು ತಾಕೀತು ಮಾಡಿದರು.

    ಈ ಸಂಧರ್ಭದಲ್ಲಿ ತಹಶೀಲ್ದಾರ್ ಸಿದ್ದೇಶ್, ಮಾನವ ಹಕ್ಕುಗಳ ಸೇವಾ ಕೇಂದ್ರದ ಅಧ್ಯಕ್ಷ ಸಿದ್ದಲಿಂಗೇಗೌಡ, ವಿವಿಧ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಸಿಬ್ಬಂದಿ, ಪೊಲೀಸ್ ಇಲಾಖೆಯ ಅಧಿಕಾರಿಗಳು, ಉಪಸ್ಥಿತರಿದ್ದರು. ಇದನ್ನೂ ಓದಿ: ಮಣಿಪುರ ಸಂಘರ್ಷ ಎಫೆಕ್ಟ್‌ – ಮೈತೇಯ್‌ ಸಮುದಾಯದ ಪತಿಯಿಂದ ಬೇರೆಯಾದ ಕುಕಿ ಮಹಿಳೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಗೊಲ್ಲರಹಟ್ಟಿಗಳಲ್ಲಿ ಶಾಸಕಿ ಜಾಗೃತಿ – ಅನಿಷ್ಟ ಪದ್ಧತಿಯ ವಿರುದ್ಧ ಹೋರಾಟಕ್ಕೆ ಕರೆ

    ಗೊಲ್ಲರಹಟ್ಟಿಗಳಲ್ಲಿ ಶಾಸಕಿ ಜಾಗೃತಿ – ಅನಿಷ್ಟ ಪದ್ಧತಿಯ ವಿರುದ್ಧ ಹೋರಾಟಕ್ಕೆ ಕರೆ

    ದಾವಣಗೆರೆ: ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ಗೊಲ್ಲರಹಟ್ಟಿಯಲ್ಲಿನ ಕಂದಾಚಾರ ನಿರ್ಮೂಲನೆಗೆ ಶಾಸಕಿ ಪೂರ್ಣಿಮ ಅವರು ಜಾಗೃತಿ ಮೂಡಿಸಿ, ಈ ಅನಿಷ್ಟ ಪದ್ಧತಿಯ ವಿರುದ್ಧ ನಾವೆಲ್ಲರೂ ಹೋರಾಡೋಣ ಎಂದು ಕರೆ ಕೊಟ್ಟಿದ್ದಾರೆ.

    ಜಿಲ್ಲೆಯ ಚನ್ನಗಿರಿ ತಾಲೂಕಿನ ಚಿಕ್ಕಗಂಗೂರು ಗ್ರಾಮದ ಗೊಲ್ಲರಹಟ್ಟಿಗೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಕ್ಷೇತ್ರದ ಬಿಜೆಪಿ ಶಾಸಕ ಪೂರ್ಣಿಮಾ ಅವರು ಭೇಟಿ ಕೊಟ್ಟಿದ್ದರು. ಚಿಕ್ಕಗಂಗೂರು ಗ್ರಾಮದ ಗೊಲ್ಲರಹಟ್ಟಿಗಳಲ್ಲಿ ಅದರಲ್ಲೂ ಜುಂಜಪ್ಪನ ಪೂಜೆ ಮಾಡುವ ಗೊಲ್ಲರಹಟ್ಟಿಯಲ್ಲಿ ಮುಟ್ಟಾದ ಹಾಗೂ ಹೆರಿಗೆಯಾದ ಮಹಿಳೆಯರನ್ನು ಮನೆಯಿಂದ ಹೊರಗಿಡುವುದು ವಾಡಿಕೆಯಿದೆ. ಹೀಗಾಗಿ ಇಂತಹ ಅನಿಷ್ಟ ಪದ್ಧತಿಯಿಂದ ಹೊರ ಬರಬೇಕು. ಇದರ ವಿರುದ್ಧ ಹೋರಾಟ ನಡೆಸಿ ಅನಿಷ್ಟ ಪದ್ಧತಿಯನ್ನು ತೊಲಗಿಸಬೇಕು ಎಂದು ಮಹಿಳೆಯರಲ್ಲಿ ಶಾಸಕಿ ಜಾಗೃತಿ ಮೂಡಿಸಿದರು.

    ಅಲ್ಲದೇ ಪ್ರಕೃತಿದತ್ತವಾಗಿ ಮಹಿಳೆಯರು ಋತುಮತಿಯಾಗುತ್ತಾರೆ. ಇದನ್ನೇ ಇಂದು ಅನಿಷ್ಟ ಎನ್ನುವಂತೆ ಗೊಲ್ಲರಹಟ್ಟಿಗಳಲ್ಲಿ ಮಹಿಳೆಯರನ್ನು ಹೊರಗಿಟ್ಟು ಚಿತ್ರಹಿಂಸೆ ಪಡುವಂತೆ ಮಾಡಲಾಗುತ್ತಿದೆ. ಸಂಪ್ರದಾಯದ ಹೆಸರಿನಲ್ಲಿ ಮಹಿಳೆಯರ ಶೋಷಣೆ ಮಾಡದಂತೆ ಗೊಲ್ಲರಹಟ್ಟಿಯ ನಿವಾಸಿಗಳಿಗೆ ತಾಕೀತು ಮಾಡಿದರು. ಇನ್ನು ಮುಂದೆ ನಿಮ್ಮ ಮನೆಯಲ್ಲಿ ಹಿರಿಯರಿಗೆ ಇದರ ಬಗ್ಗೆ ಜಾಗೃತಿವಹಿಸಿ, ಮತ್ತೊಮ್ಮೆ ಇಂತಹ ಅನಿಷ್ಟ ಪದ್ಧತಿಯನ್ನು ಆಚರಣೆ ಮಾಡದಂತೆ ಗ್ರಾಮದ ಮಹಿಳೆಯರಿಗೆ ಶಾಸಕಿ ಪೂರ್ಣಿಮಾ ತಿಳಿ ಹೇಳಿದರು.

  • ಅದ್ಧೂರಿ ಸ್ವಾಗತದೊಂದಿಗೆ ಗೊಲ್ಲರಹಟ್ಟಿ ಪ್ರವೇಶಿಸಿದ ಸಂಸದ ನಾರಾಯಣಸ್ವಾಮಿ

    ಅದ್ಧೂರಿ ಸ್ವಾಗತದೊಂದಿಗೆ ಗೊಲ್ಲರಹಟ್ಟಿ ಪ್ರವೇಶಿಸಿದ ಸಂಸದ ನಾರಾಯಣಸ್ವಾಮಿ

    ತುಮಕೂರು: ದಲಿತರಿಗೆ ಪ್ರವೇಶ ನಿರಾಕರಿಸಿ ದೇಶದೆಲ್ಲೆಡೆ ಚರ್ಚೆಗೆ ಗ್ರಾಸವಾಗಿದ್ದ ಗ್ರಾಮಕ್ಕೆ ಇಂದು ಚಿತ್ರದುರ್ಗ ಸಂಸದ ನಾರಾಯಣಸ್ವಾಮಿ ಅದ್ಧೂರಿ ಸ್ವಾಗತದೊಂದಿಗೆ ಪ್ರವೇಶಿಸಿದ್ದಾರೆ.

    ಪಾವಗಡ ತಾಲೂಕಿನ ಪೆಮ್ಮನಹಳ್ಳಿ ಗೊಲ್ಲರಹಟ್ಟಿಗೆ ಈ ಹಿಂದೆ ಸಂಸದರು ದಲಿತ ಸಮುದಾಯಕ್ಕೆ ಸೇರಿದವರೆಂದು ಗ್ರಾಮದ ಒಳಗೆ ಪ್ರವೇಶಿಸಲು ಗ್ರಾಮಸ್ಥರು ನಿರಾಕರಿಸಿದ್ದರು. ಇದಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ಹಲವು ಸ್ವಾಮೀಜಿಗಳು ಸಹ ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದರು. ಹೀಗಾಗಿ ಇಂದು ಗೊಲ್ಲರಹಟ್ಟಿಗೆ ಸಂಸದ ನಾರಾಯಣಸ್ವಾಮಿಯವರನ್ನು ಆಹ್ವಾನಿಸಿ, ಅದ್ಧೂರಿ ಸ್ವಾಗತ ಕಾರ್ಯಕ್ರಮ ನಡೆಸಲಾಯಿತು.

    ಸ್ವಾಗತ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಸಂಸದ ನಾರಾಯಣಸ್ವಾಮಿ, ಗೊಲ್ಲರಹಟ್ಟಿಯಲ್ಲಿ ನಡೆದ ಘಟನೆ ಉದ್ದೇಶ ಪೂರ್ವಕವಾಗಿ ನಡೆದಿಲ್ಲ. ಕೆಲವರು ಈ ಘಟನೆಯಿಂದ ನಮ್ಮ ನಡುವೆ ಕಂದಕ ನಿರ್ಮಾಣ ಮಾಡಿ ರಾಜಕೀಯ ಲಾಭ ಪಡೆಯಲು ಹೊರಟಿದ್ದಾರೆ. ಅಭಿವೃದ್ಧಿ ವಂಚಿತ ಗೊಲ್ಲರಹಟ್ಟಿ ಗ್ರಾಮಗಳ ಸಮೀಕ್ಷೆ ಮಾಡಲು ಬಂದಿದ್ದೆ. ಹಸಿವಿಗೆ ಜಾತಿ ಇಲ್ಲ. ಶಿಕ್ಷಣದ ಹಸಿವು ಇರಬಹುದು. ಆದರೆ ಹಸಿವಿಗೆ ಮಾನವೀಯತೆಯ ಸ್ಪರ್ಶ ಕೊಡಬೇಕು. ನಾನು ಆಗಮಿಸಿದ ಸಂದರ್ಭದಲ್ಲಿ ಇಲ್ಲಿಯ ಜನರು ಹಠ, ದಬ್ಬಾಳಿಕೆಯಿಂದ ಮಾತನಾಡಲಿಲ್ಲ. ಇದಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತೇನೆ ಎಂದು ಸಂಸದ ನಾರಾಯಣಸ್ವಾಮಿ ಸಂತಸ ವ್ಯಕ್ತಪಡಿಸಿದರು.

    ಇಂತಹ ಕೆಲಸ ಸ್ವಾಮೀಜಿಗಳಿಂದ ಹಿಡಿದು ಎಲ್ಲ ವರ್ಗದ ಜನರಿಂದ ನಡೆಯಬೇಕು. ನಾವುಗಳು ಸಮಾಜದಲ್ಲಿ ಜಾಗೃತಿ ಮೂಡಿಸಬೇಕು. ಮುಖ್ಯವಾಹಿನಿಯಿಂದ ಹಿಂದೆ ಇದ್ದರೆ ಅಂಥ ಸಮಾಜವನ್ನು ಮುಖ್ಯವಾಹಿನಿಗೆ ತರಬೇಕು. ನಾನು ಪ್ರಗತಿಪರ ಚಿಂತಕ, ಸಮಾಜ ಸುಧಾರಣೆ ಮಾಡುವುದು ನನ್ನ ಗುರಿ. ಯಾರಿಗೆ ಯಾವ ಯೋಜನೆ ಸಿಗಬೇಕೋ ಅಂತಹವರಿಗೆ ಅದು ತಲುಪಲೇಬೇಕೆಂಬುದು ನನ್ನ ಆದ್ಯತೆ. ಹೀಗಾಗಿ ಗ್ರಾಮಕ್ಕೆ ಆಗಮಿಸಿದ್ದೆ. ಆದರೆ ಅನೇಕ ಕಡೆ ಈ ಘಟನೆ ದುರುಪಯೋಗವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

    ದ್ವೇಷ ಹುಟ್ಟಿಸುವ ಕೆಲಸ ಆಗುತ್ತಿದೆ. ಈ ಬೆಳವಣಿಗೆ ದೇಶಕ್ಕೆ ಕಂಟಕ. ಹೀಗಾಗಿ ಸ್ವಾಮೀಜಿಗಳ ಬಳಿ ಮಾತನಾಡಿದ್ದೆ. ಸಮಾಜದ ನಡುವೆ ಇಂತಹ ಕಂದಕ ನೋಡಿಕೊಂಡು ಇರುವವರು ನಿಜವಾದ ಅಪರಾಧಿ. ಅಂಥ ಸಮಾಜವನ್ನು ಎಚ್ಚರಿಸುವವನೇ ನಿಜವಾದ ದಾರ್ಶನಿಕ, ನಿಜವಾದ ಸ್ವಾಮೀಜಿ. ಈ ಘಟನೆಯಿಂದ ಗೊಲ್ಲ ಸಮುದಾಯಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ. ಈ ಗ್ರಾಮದ ಹಿರಿಯರಿಗೆ ವಂದಿಸುತ್ತೇನೆ. ದೇಶ ಕಟ್ಟಲು ಎಲ್ಲರ ಸಹಕಾರ ಬೇಕು. ಮೋದಿ ಅಥವಾ ಅಮಿತ್ ಶಾ ಮಾತ್ರ ದೇಶ ಕಟ್ಟಿಲ್ಲ ಅಥವಾ ಇಂದಿರಾ ಗಾಂಧಿ ಮಾತ್ರ ದೇಶ ಕಟ್ಟಿಲ್ಲ. ದೇಶದ 120 ಕೋಟಿ ಜನರು ದೇಶ ಕಟ್ಟಲು ಪಾಲುದಾರರು ಎಂದು ತಿಳಿಸಿದರು.

    ಈ ಹಿಂದೆ ಪೆಮ್ಮನಹಳ್ಳಿ ಗೊಲ್ಲರಹಟ್ಟಿಗೆ ಸಂಸದ ಎ.ನಾರಾಯಣಸ್ವಾಮಿ ಅವರು ಪ್ರವೇಶಿಸದಂತೆ ಅಡ್ಡಿಪಡಿಸಲಾಗಿತ್ತು. ಇಂದು ಗೊಲ್ಲರಹಟ್ಟಿಯಲ್ಲಿ ಗ್ರಾಮಸ್ಥರು ಅದ್ಧೂರಿ ಸ್ವಾಗತ ಕೋರಿದ್ದಾರೆ. ತಳಿರು ತೋರಣ ಕಟ್ಟಿ ಹಬ್ಬದ ವಾತಾವರಣ ನಿರ್ಮಿಸಿ ಸಂಸದರನ್ನು ಬರಮಾಡಿಕೊಂಡಿದ್ದಾರೆ. ಕಾರ್ಯಕ್ರಮದಲ್ಲಿ ಸಂಸದರ ಜೊತೆಗೆ ಶ್ರೀ ಈಶ್ವರನಂದಪುರಿ ಸ್ವಾಮಿಜಿ, ಶ್ರೀ ಕೃಷ್ಣ ಯಾದವನಾಂದ ಸ್ವಾಮಿಜಿ, ಡಾ. ಶ್ರೀ ಶಾಂತವೀರ ಸ್ವಾಮೀಜಿ, ಬಸವಮೂರ್ತಿ ಮಾದರ ಚನ್ನಯ್ಯ ಸ್ವಾಮಿಜಿ, ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್, ಜಿಲ್ಲಾಧಿಕಾರಿ ರಾಕೇಶ್ ಕುಮಾರ್, ಎಸ್‍ಪಿ ಕೆ.ವಂಶಿಕೃಷ್ಣ, ಜಿಲ್ಲಾ ಮಟ್ಟದ ಸಮಾಜ ಕಲ್ಯಾಣ ಅಧಿಕಾರಿಗಳು ಹಾಗೂ ಇತರ ಗಣ್ಯರು ಭಾಗವಹಿಸಿದ್ದರು.

    ಏನಿದು ಘಟನೆ?
    ಗುಡಿಸಲು ಮುಕ್ತ ಯೋಜನೆ ರೂಪಿಸಲು ಗ್ರಾಮಕ್ಕೆ ಆಗಮಿಸಿದ್ದ ಚಿತ್ರದುರ್ಗ ಬಿಜೆಪಿ ಸಂಸದ ನಾರಾಯಣಸ್ವಾಮಿಗೆ ಪಾವಗಡ ತಾಲೂಕಿನ ಪೆಮ್ಮನಹಳ್ಳಿ ಗೊಲ್ಲರಹಟ್ಟಿಯ ಒಳಗಡೆ ಬಿಡದೇ ಗ್ರಾಮಸ್ಥರು ತಡೆ ಹಾಕಿದ್ದರು.

    ಖಾಸಗಿ ಕಂಪನಿಗಳ ತಂಡದೊಂದಿಗೆ ಊರಿಗೆ ಬಂದಿದ್ದ ಸಂಸದ ನಾರಾಯಣಸ್ವಾಮಿ ಪೆಮ್ಮನಹಳ್ಳಿ ಗೊಲ್ಲರಹಟ್ಟಿಗೂ ಭೇಟಿ ಕೊಟ್ಟಿದ್ದರು. ಈ ವೇಳೆ ಎದುರಾದ ಗೊಲ್ಲರಟ್ಟಿ ನಿವಾಸಿಗಳು ಹಟ್ಟಿಯ ಪ್ರವೇಶ ದ್ವಾರದಲ್ಲೇ ತಡೆದು ನಿಲ್ಲಿಸಿ, ಅಲ್ಲಿಯೇ ಕುರ್ಚಿ ಹಾಕಿ ಕೂರಲು ಮನವಿ ಮಾಡಿಕೊಂಡಿದ್ದರು. ಯಾವುದೇ ಕಾರಣಕ್ಕೂ ನಿಮ್ಮ ಜನಾಂಗದವರು ಹಟ್ಟಿಯೊಳಗಡೆ ಹೋಗಬಾರದು ಎಂದು ಪಟ್ಟು ಹಿಡಿದಿದ್ದರು. ಸಂಸದ ನಾರಾಯಣಸ್ವಾಮಿ ಎಷ್ಟೇ ಮನವೊಲಿಸಿದರೂ ಗೊಲ್ಲರಹಟ್ಟಿ ನಿವಾಸಿಗಳು ಒಳಗೆ ಬಿಟ್ಟುಕೊಂಡಿರಲಿಲ್ಲ. ನೀವು ಗೊಲ್ಲರಹಟ್ಟಿ ಪ್ರವೇಶ ಮಾಡಿದರೆ ಕೇವಲ ನಮಗೆ ಮಾತ್ರ ಅಲ್ಲ, ನಿಮಗೂ ಕೆಟ್ಟದಾಗುತ್ತದೆ. ಬಲವಂತಾಗಿ ನುಗ್ಗಿದವರಿಗೆ, ಸುಳ್ಳು ಹೇಳಿ ಒಳಗೆ ಬಂದಿದ್ದ ಹಲವರಿಗೆ ಅನಾಹುತ ಉಂಟಾಗಿದೆ. ಆ ಅನಾಹುತ ನಿಮಗೆ ಆಗುವುದು ಬೇಡ ಎಂದು ನಾರಾಯಣಸ್ವಾಮಿಯವರಿಗೆ ಸಮಾಧಾನಪಡಿಸಿದ್ದರು.

    ನೂರಾರು ವರ್ಷದ ಹಿಂದೆ ಗೊಲ್ಲರ ಚಿತ್ರಲಿಂಗೇಶ್ವರ ದೇವರು-ಹರಿಜನರ ದೇವರ ನಡುವೆ ಕೆಟ್ಟ ಘಟನೆ ನಡೆದಿತ್ತು. ಅಲ್ಲಿಂದ ಇಲ್ಲಿಯವರೆಗೂ ಯಾವ ಹರಿಜನರನ್ನೂ ಬಿಟ್ಟುಕೊಳ್ಳುತ್ತಿಲ್ಲ ಎಂದು ಗ್ರಾಮಸ್ಥರು ಕಥೆ ಕಟ್ಟಿದ್ದರು. ಇಷ್ಟೆಲ್ಲ ಅವಮಾನ ಸಹಿಸಿಕೊಂಡು ಸಂಸದ ನಾರಾಯಣಸ್ವಾಮಿ ಸೌಜನ್ಯದಿಂಲೇ ಅರ್ಧ ಗಂಟೆ ಕಾರಿನಲ್ಲೇ ಕುಳಿತುಕೊಂಡಿದ್ದರು.

    ನಾನು ಅತಿಹೆಚ್ಚು ಗೊಲ್ಲರ ಮತದಿಂದ ಗೆದ್ದು ಬಂದಿದ್ದೆನೆ. ಅವರ ಸಮುದಾಯಕ್ಕೆ ಏನಾದರೊಂದು ಒಳ್ಳೆಯದು ಮಾಡಬೇಕು ಎಂದು ಬಂದಿದ್ದೇನೆ. ಈ ಒಂದು ಕಾರಣಕ್ಕೆ ನೀವು ಅವಮಾನ ಮಾಡಿದರೂ ಸುಮ್ಮನಿದ್ದೇನೆ ಎಂದು ಸೌಜನ್ಯದಿಂದ ವರ್ತಿಸಿದ್ದರು. ಗೊಲ್ಲರಹಟ್ಟಿ ಒಳಗೆ ಹೋದ ತಂಡದ ಸದಸ್ಯರು ಹೊರಗೆ ಬರುವವರೆಗೂ ಸುಮಾರು ಅರ್ಧ ಗಂಟೆಗಳ ಕಾಲ ಸಂಸದರು ಕಾರಿನಲ್ಲಿ ಕುಳಿತು, ಬಳಿಕ ತಂಡದ ಜತೆ ವಾಪಾಸ್ ಹೋಗಿದ್ದರು.

  • ದಲಿತ ಸಂಸದರಿಗೆ ಗ್ರಾಮಕ್ಕೆ ಬರದಂತೆ ತಡೆದ ಗ್ರಾಮಸ್ಥರು

    ದಲಿತ ಸಂಸದರಿಗೆ ಗ್ರಾಮಕ್ಕೆ ಬರದಂತೆ ತಡೆದ ಗ್ರಾಮಸ್ಥರು

    ತುಮಕೂರು: ಗುಡಿಸಲು ಮುಕ್ತ ಯೋಜನೆ ರೂಪಿಸಲು ಊರಿಗೆ ಬಂದ ದಲಿತ ಸಂಸದರನ್ನು ಗ್ರಾಮದೊಳಗೆ ಬಿಡದೇ ಗ್ರಾಮಸ್ಥರು ತಡೆ ಹಾಕಿದ ವಿಚಿತ್ರ ಘಟನೆ ತುಮಕೂರಲ್ಲಿ ನಡೆದಿದೆ. ಚಿತ್ರದುರ್ಗ ಬಿಜೆಪಿ ಸಂಸದ ನಾರಾಯಣಸ್ವಾಮಿಗೆ ಪಾವಗಡ ತಾಲೂಕಿನ ಪೆಮ್ಮನಹಳ್ಳಿ ಗೊಲ್ಲರಹಟ್ಟಿಯಲ್ಲಿ ನಿರ್ಬಂಧ ಹಾಕಲಾಗಿತ್ತು.

    ಖಾಸಗಿ ಕಂಪನಿಗಳ ತಂಡದೊಂದಿಗೆ ಊರಿಗೆ ಬಂದಿದ್ದ ಸಂಸದ ನಾರಾಯಣಸ್ವಾಮಿ ಪೆಮ್ಮನಹಳ್ಳಿ ಗೊಲ್ಲರಹಟ್ಟಿಗೂ ಭೇಟಿ ಕೊಟ್ಟಿದ್ದರು. ಈ ವೇಳೆ ಎದುರಾದ ಗೊಲ್ಲರಟ್ಟಿ ನಿವಾಸಿಗಳು ಹಟ್ಟಿಯ ಪ್ರವೇಶ ದ್ವಾರದಲ್ಲೇ ತಡೆದು ನಿಲ್ಲಿಸಿ, ಅಲ್ಲಿಯೇ ಕುರ್ಚಿ ಹಾಕಿ ಕೂರಲು ಮನವಿ ಮಾಡಿಕೊಂಡಿದ್ದಾರೆ. ಯಾವುದೇ ಕಾರಣಕ್ಕೂ ನಿಮ್ಮ ಜನಾಂಗದವರು ಹಟ್ಟಿ ಒಳಗಡೆ ಹೋಗಬಾರದು ಎಂದು ಪಟ್ಟು ಹಿಡಿದಿದ್ದಾರೆ. ಆದರೆ ತಂಡದಲ್ಲಿದ್ದ ಇನ್ನಿತರರನ್ನು ಹಟ್ಟಿ ಒಳಕ್ಕೆ ಬಿಟ್ಟುಕೊಂಡಿದ್ದಾರೆ.

    ಸಂಸದ ನಾರಾಯಣಸ್ವಾಮಿ ಎಷ್ಟೇ ಮನವೊಲಿಸಿದರೂ ಗೊಲ್ಲರಹಟ್ಟಿ ನಿವಾಸಿಗಳು ಒಳಕ್ಕೆ ಬಿಟ್ಟುಕೊಳ್ಳಲೇ ಇಲ್ಲ. ನೀವು ಗೊಲ್ಲರಹಟ್ಟಿ ಪ್ರವೇಶ ಮಾಡಿದರೆ ಕೇವಲ ನಮಗೆ ಮಾತ್ರ ಅಲ್ಲ, ನಿಮಗೂ ಕೆಟ್ಟದಾಗುತ್ತದೆ. ಬಲವಂತಾಗಿ ನುಗ್ಗಿದ, ಸುಳ್ಳು ಹೇಳಿ ಒಳಗೆ ಬಂದಿದ್ದ ಹಲವರಿಗೆ ಅನಾಹುತ ಉಂಟಾಗಿದೆ. ಆ ಅನಾಹುತ ನಿಮಗೆ ಆಗೋದು ಬೇಡ ಎಂದು ನಾರಾಯಣಸ್ವಾಮಿಗೆ ಸಮಾಧಾನಪಡಿಸಿದ್ದಾರೆ.

    ನೂರಾರು ವರ್ಷದ ಹಿಂದೆ ಗೊಲ್ಲರ ಚಿತ್ರಲಿಂಗೇಶ್ವರ ದೇವರು-ಹರಿಜನರ ದೇವರ ನಡುವೆ ಕೆಟ್ಟ ಘಟನೆ ನಡೆದಿತಂತೆ. ಅಲ್ಲಿಂದ ಇಲ್ಲಿವರೆಗೂ ಯಾವ ಹರಿಜನರನ್ನೂ ಬಿಟ್ಟುಕೊಳ್ಳುತ್ತಿಲ್ಲ ಎಂದು ಕಥೆ ಹೇಳಿದ್ದಾರೆ. ಇಷ್ಟೆಲ್ಲಾ ಅವಮಾನಗಳನ್ನ ಸಹಿಸಿಕೊಂಡು ಸಂಸದ ನಾರಾಯಣಸ್ವಾಮಿ ಸೌಜನ್ಯದಿಂಲೇ ಕಾರಿನಲ್ಲೇ ಕುಳಿತುಕೊಂಡರು.

    ನಾನು ಅತಿಹೆಚ್ಚು ಗೊಲ್ಲರ ಮತದಿಂದ ಗೆದ್ದು ಬಂದಿದ್ದೆನೆ. ಅವರ ಸಮುದಾಯಕ್ಕೆ ಏನಾದರೊಂದು ಒಳ್ಳೆದು ಮಾಡಬೇಕು ಎಂದು ಬಂದಿದ್ದೇನೆ. ಈ ಒಂದು ಕಾರಣಕ್ಕೆ ನೀವು ಅವಮಾನ ಮಾಡಿದರೂ ಸುಮ್ಮನಿದ್ದೇನೆ ಎಂದು ಸೌಜನ್ಯದಿಂದ ವರ್ತಿಸಿದರು. ಗೊಲ್ಲರಹಟ್ಟಿ ಒಳಗೆ ಹೋದ ತಂಡದ ಸದಸ್ಯರು ಹೊರಗೆ ಬರುವವರೆಗೂ ಸುಮಾರು ಅರ್ಧ ಗಂಟೆಗಳ ಕಾಲ ಸಂಸದರು ಕಾರಿನಲ್ಲಿ ಕುಳಿತು, ಬಳಿಕ ತಂಡದ ಜತೆ ಮರಳಿದ್ದಾರೆ.