Tag: ಗೊಂಬೆ

  • `ಗೊಂಬೆ’ಗೆ ಅದ್ದೂರಿ ಬೇಬಿಶಾವರ್

    `ಗೊಂಬೆ’ಗೆ ಅದ್ದೂರಿ ಬೇಬಿಶಾವರ್

    ಕ್ಷ್ಮಿ ಬಾರಮ್ಮ ಧಾರಾವಾಹಿ’ ಗೊಂಬೆ ಈಗ ತುಂಬು ಗರ್ಭಿಣಿ, ಸಪ್ಟೆಂಬರ್ ತಿಂಗಳಲ್ಲಿ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿರುವ ನೇಹಾ ಗೌಡಾ (Neha Gowda) ಅವರ ಸೀಮಂತ ಕಾರ್ಯಕ್ರಮ (, baby shower) ಅದ್ದೂರಿಯಾಗಿ ನಡೆದಿದೆ. ಕಿರುತೆರೆ ಕಲಾವಿದರ ದಂಡೇ ಹರಿದು ಬಂದಿದೆ. ಸೀಮಂತದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿವೆ.

    ಚೈತ್ರಾ ವಾಸುದೇವನ್ ಹಂಚಿಕೊಂಡ ಫೋಟೋದಲ್ಲಿ ಗರ್ಭಿಣಿ ನೇಹಾ ಗೌಡ ಸಹೋದರಿ ಸೋನು ನಿಂತಿದ್ದಾರೆ. ಜೊತೆಗೆ ನೇಹಾ ಪತಿ ಚಂದನ್ ಕೂಡ ನಗುನಗುತ್ತಾ ಪೋಸ್ ಕೊಟ್ಟಿದ್ದಾರೆ. ಇನ್ನು ಕಿರುತೆರೆ ಕಲಾವಿದರ ದಂಡೇ ಹರಿದುಬಂದಿದ್ದು ಗೊಂಬೆಯ ಲಕ್ಷ್ಮಿ ಬಾರಮ್ಮ ಸೀರಿಯಲ್ ತಂಗಿ ಚಿನ್ನು ಅಲಿಯಾಸ್ ಕವಿತಾ ಗೌಡ  ಕೂಡ ಆಗಮಿಸಿದ್ದಾರೆ.

    ಕವಿತಾ ಗೌಡ ಕೂಡ ಚೊಚ್ಚಲ ಮಗು ನಿರೀಕ್ಷೆಯಲ್ಲಿದ್ದಾರೆ. ಇನ್ನು ನೇಹಾ ಆಪ್ತ ಗೆಳತಿಯರಾದ ಅನುಪಮ ಗೌಡ-ಇಶಿತಾ ವರ್ಷ ಕೂಡ ಗೆಳತಿಯ ಸುಂದರ ಕ್ಷಣಗಳಿಗೆ ಜೊತೆಯಾಗಿದ್ರು. ಹಿರಿಯ ನಟಿ ತಾರಾ ಅನೂರಾಧ ಕೂಡ ಧಾರಾವಾಹಿ ಬೆಡಗಿಯರಿಗೆ ಸಾಥ್ ಕೊಟ್ಟಿದ್ದಾರೆ.

     

    ಇತ್ತೀಚೆಗೆ ನಟಿ ಮಿಲನಾ ನಾಗರಾಜ್ ಸೀಮಂತ ನಡೆದಿತ್ತು. ಮಿಲನಾ ಸೀಮಂತಕ್ಕೆ ಸಿಂಗಾರ ಮಾಡಲಾಗಿತ್ತು. ಇದೀಗ ನೇಹಾ ಸೀಮಂತಕ್ಕೂ ಚೈತ್ರಾ ವಾಸುದೇವನ್ ಮೇಲ್ವಿಚಾರಣೆಯಲ್ಲೇ ಡೆಕೋರೇಶನ್ ಮಾಡಲಾಗಿರುವ ಅನುಮಾನವಿದೆ. ಇನ್ನು ನೇಹಾ ಸಾಂಪ್ರದಾಯಿಕ ಹಸಿರು ಬಣ್ಣದ ಕಾಂಜೀವರಂ ಸೀರೆಯಲ್ಲಿ ಮಿಂಚಿದ್ದಾರೆ. ಒಟ್ಟಿನಲ್ಲಿ ಬರುವ ಸಪ್ಟೆಂಬರ್ ತಿಂಗಳು ಸ್ಯಾಂಡಲ್‌ವುಡ್ ಹಲವು ನಟಿಯರು ಚೊಚ್ಚಲ ಮಗುವನ್ನ ಬರಮಾಡಿಕೊಳ್ಳುವ ಸಂತಸದಲ್ಲಿದ್ದಾರೆ.

  • ಬಿಗ್ ಬಾಸ್ ಮನೆಯಲ್ಲಿ ರಾಕೇಶ್ ಅಡಿಗ ಸ್ಮಾರ್ಟ್ ಗೇಮ್ ಆಡ್ತಿದ್ದಾರೆ: ನೇಹಾ ಗೌಡ

    ಬಿಗ್ ಬಾಸ್ ಮನೆಯಲ್ಲಿ ರಾಕೇಶ್ ಅಡಿಗ ಸ್ಮಾರ್ಟ್ ಗೇಮ್ ಆಡ್ತಿದ್ದಾರೆ: ನೇಹಾ ಗೌಡ

    ದೊಡ್ಮನೆಯ ಆಟ ಇದೀಗ ಸಾಕಷ್ಟು ರೋಚಕ ತಿರುವುಗಳನ್ನ ಪಡೆದು ಮುನ್ನುಗ್ಗುತ್ತಿದೆ. ಬಿಗ್ ಬಾಸ್ ಮನೆಯಿಂದ 5ನೇ ಸ್ಪರ್ಧಿಯಾಗಿ ಎಲಿಮಿನೇಟ್ ಆಗಿ ನೇಹಾ ಗೌಡ ಹೊರಬಂದಿದ್ದಾರೆ. ಈ ವೇಳೆ ಪಬ್ಲಿಕ್ ಟಿವಿ ಡಿಜಿಟಲ್ ಜೊತೆ ತಮ್ಮ ದೊಡ್ಮನೆಯ ಜರ್ನಿ ಬಗ್ಗೆ ನೇಹಾ ಫಸ್ಟ್ ರಿಯಾಕ್ಷನ್ ಕೊಟ್ಟಿದ್ದಾರೆ. ಸಹ ಸ್ಪರ್ಧಿ ರಾಕೇಶ್ ಅಡಿಗ ಆಟದ ಬಗ್ಗೆ ನೇಹಾ ಬಾಯ್ಬಿಟ್ಟಿದ್ದಾರೆ.

    ಕಿರುತೆರೆಯ ಗೊಂಬೆಯಾಗಿ ಸಾಕಷ್ಟು ಅಭಿಮಾನಿಗಳ ಗಮನ ಸೆಳೆದ ನಟಿ ನೇಹಾ ಗೌಡ ಬಿಗ್ ಬಾಸ್ ಮನೆಯಲ್ಲೂ ಕಮಾಲ್ ಮಾಡಿದ್ದರು. 35ನೇ ದಿನಕ್ಕೆ ದೊಡ್ಮನೆಯಿಂದ ಔಟ್ ಆಗಿ, ಹೊರಬಂದಿದ್ದಾರೆ. ಬಿಗ್ ಬಾಸ್ ಮನೆಯ ಆಟದ ಬಗ್ಗೆ, ಸ್ಮಾರ್ಟ್ ಗೇಮ್ ಆಡುವವರ ಬಗ್ಗೆ ನೇಹಾ ಮಾತನಾಡಿದ್ದಾರೆ. ಇದನ್ನೂ ಓದಿ:‘ಕರ್ನಾಟಕ ರತ್ನ’ ಪ್ರಶಸ್ತಿ ಕಾರ್ಯಕ್ರಮ ಅವ್ಯವಸ್ಥೆ ಬಗ್ಗೆ ಡಿ.ಕೆ.ಶಿವಕುಮಾರ್ ಆಕ್ರೋಶ

    ರಾಕೇಶ್ ಅಡಿಗ ಬಿಗ್ ಬಾಸ್ ಮನೆಯಲ್ಲಿ ಸ್ಮಾರ್ಟ್ ಗೇಮ್ ಆಡ್ತಿದ್ದಾರೆ. ಯಾರಿಗೂ ಹರ್ಟ್ ಮಾಡದೇ ಮಾತನಾಡೋದು ಒಂದು ಕಲೆ ಅದು ರಾಕೇಶ್‌ಗೆ ಚೆನ್ನಾಗಿ ಗೊತ್ತಿದೆ.

    ಯಾರೇ ಬೇಜಾರಿನಲ್ಲಿದ್ದರು ಅವರನ್ನ ಚಿಯರ್ ಮಾಡೋದು. ನಾನು ನೋಡಿರುವ ವ್ಯಕ್ತಿಗಳಲ್ಲಿ ರಾಕೇಶ್ ತುಂಬಾ ನಿಯತ್ತಾಗಿ ಆಡುತ್ತಿದ್ದಾರೆ. ಬಿಗ್ ಬಾಸ್‌ನ ಅವರ ಆಟಕ್ಕೆ ಒಳ್ಳೆಯದಾಗಲಿ ಎಂದು ನೇಹಾ ವಿಶ್ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಗೊಂಬೆಗಳ ಮಧ್ಯೆ ಪುಟ್ಟ ಗೊಂಬೆಯಂತೆ ಕುಳಿತ ರಾಯನ್

    ಗೊಂಬೆಗಳ ಮಧ್ಯೆ ಪುಟ್ಟ ಗೊಂಬೆಯಂತೆ ಕುಳಿತ ರಾಯನ್

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಮೇಘನಾ ಸರ್ಜಾ ಮನೆಯಲ್ಲಿ ದಸರಾ ಹಬ್ಬದ ಸಂಭ್ರಮ ಮನೆಮಾಡಿದ್ದು, ಗೊಂಬೆಗಳ ಮಧ್ಯೆ ರಾಯನ್ ರಾಜ್ ಸರ್ಜಾ ಫೋಟೋಗೆ ಪೋಸ್ ನೀಡಿದ್ದಾನೆ.

    ನಾಡಿನಾದ್ಯಂತ ದಸರಾ ಹಬ್ಬವನ್ನು ಜನರು ಬಹಳ ಸಂಭ್ರಮದಿಂದ ಆಚರಿಸುತ್ತಾರೆ. ಸಾಮಾನ್ಯವಾಗಿ ದಸರಾ ವೇಳೆ ಮನೆಯಲ್ಲಿ ವಿವಿಧ ಗೊಂಬೆಗಳನ್ನು ಕೂರಿಸುವ ಪದ್ಧತಿ ಇದೆ. ಇದೀಗ ಮೇಘನಾ ಸರ್ಜಾ ಅವರು ದಸರಾ ಹಬ್ಬದ ಹಿನ್ನೆಲೆ ವಿವಿಧ ರೀತಿಯ ಗೊಂಬೆಗಳನ್ನು ಕೂರಿಸಿ ಹಬ್ಬವನ್ನು ಆಚರಿಸುತ್ತಿದ್ದಾರೆ. ವಿಶೇಷವೆಂದರೆ ಈ ಗೊಂಬೆಗಳ ಮಧ್ಯೆ ಪುಟ್ಟಗೊಂಬೆಯಂತೆ ಕುಳಿತುಕೊಂಡು ರಾಯನ್ ರಾಜ್ ಸರ್ಜಾ ಫೋಟೋ ಕ್ಲಿಕ್ಕಿಸಿಕೊಂಡಿದ್ದಾನೆ. ಇದನ್ನೂ ಓದಿ: 16 ಕೆ.ಜಿ ಚಿನ್ನದ ಸೀರೆ ಉಡಿಸಿ ಮಹಾಲಕ್ಷ್ಮಿ ದೇವಿಗೆ ಅಲಂಕಾರ

    meghana raj

    ಸದ್ಯ ಈ ಮುದ್ದಾದ ಫೋಟೋವನ್ನು ಮೇಘನಾ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ಫೋಟೋದಲ್ಲಿ ರಾಯನ್ ನೆತ್ತಿ ಮೇಲೆ ಪುಟ್ಟ ಜುಟ್ಟನ್ನು ಕಟ್ಟಿಕೊಂಡಿದ್ದು ಸಕತ್ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾನೆ. ಫೋಟೋ ಜೊತೆಗೆ ಶೀರ್ಷಿಕೆಯಲ್ಲಿ, ದಸರಾ ಯಾವಾಗಲೂ ನನ್ನ ಕುಟುಂಬಕ್ಕೆ ವಿಶೇಷ ಹಬ್ಬವಾಗಿದೆ ಮತ್ತು ನನ್ನ ಪುಟ್ಟ ಕಂದ ತನ್ನ ಮೊದಲ ವಿಜಯದಶಮಿಯನ್ನು ತನ್ನ ಕೊಲ್ಲು ಪಾಟಿ(ನನ್ನ ತಂದೆಯ ಅಜ್ಜಿ)ಯ ಮನೆಯಲ್ಲಿ ಆಚರಿಸುತ್ತಿದ್ದಾನೆ. ನೀವು ಹಿಂದೆ ನೋಡುತ್ತಿರುವ ಬೊಂಬೆಗಳೆಲ್ಲಾ 45 ವರ್ಷಗಳಿಗಿಂತ ಹಳೆಯದು. ಮುಂದಿನ ವರ್ಷ ಯಾವಾಗಲೂ ಹಬ್ಬವನ್ನು ಸಂತೋಷದಿಂದ ಆಚರಿಸಲು ಪ್ರತಿ ವರ್ಷ ಎಚ್ಚರಿಕೆಯಿಂದ ಇವುಗಳನ್ನು ಸಂಗ್ರಹಿಸಲಾಗಿದೆ. ಕಳೆದ ವರ್ಷ ನವರಾತ್ರಿಯ ಸಮಯದಲ್ಲಿ ರಾಯನ್ ಕೂಡ ಜನಿಸಿದನು. ಹಾಗಾಗಿ ಈ ಹಬ್ಬ ಮತ್ತಷ್ಟು ವಿಶೇಷವಾಗಿದೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: 20 ನಿಮಿಷದಲ್ಲಿ ವಿಶ್ವವಿಖ್ಯಾತ ಮೈಸೂರಿನ ಜಂಬೂಸವಾರಿ ಮುಕ್ತಾಯ

     

    View this post on Instagram

     

    A post shared by Meghana Raj Sarja (@megsraj)

    ಚಿರಂಜೀವಿ ಸರ್ಜಾ, ಮೇಘನಾ ರಾಜ್, ರಾಯನ್ ರಾಜ್ ಸರ್ಜಾ ಕಡೆಯಿಂದ ಎಲ್ಲರಿಗೂ ವಿಜಯದಶಮಿಯ ಶುಭಾಶಯಗಳು ಎಂದು ವಿಶ್ ಮಾಡಿದ್ದಾರೆ.

  • ವಿಶೇಷ ಅತಿಥಿಯನ್ನು ಹಿಡಿದುಕೊಂಡು ಪೃಥ್ವಿ ಶಾ ಪ್ರಯಾಣ

    ವಿಶೇಷ ಅತಿಥಿಯನ್ನು ಹಿಡಿದುಕೊಂಡು ಪೃಥ್ವಿ ಶಾ ಪ್ರಯಾಣ

    ಲಂಡನ್: ಇಂಗ್ಲೆಂಡ್ ಪ್ರವಾಸದಲ್ಲಿರುವ ಭಾರತ ತಂಡದ ಯುವ ಆಟಗಾರ ಪೃಥ್ವಿ ಶಾ ವಿಶೇಷ ಅತಿಥಿಯೊಂದಿಗೆ ಇಂಗ್ಲೆಂಡ್‍ನಲ್ಲಿ ಪ್ರಯಾಣ ಮಾಡುತ್ತಿದ್ದಾರೆ.

    ಹೌದು ಆದರೆ ಪೃಥ್ವಿ ಶಾ ಜೊತೆಗಿರುವುದು ಅವರ ಗರ್ಲ್‍ಫ್ರೆಂಡ್ ಅಲ್ಲ ಬದಲಾಗಿ ಗೊಂಬೆಯಯನ್ನು ಹಿಡಿದುಕೊಂಡು ಪ್ರಯಾಣಿಸುತ್ತಿದ್ದಾರೆ. ಪೃಥ್ವಿ ತನ್ನ ಪ್ರಯಾಣದ ಜೊತೆಗಿರುವ ಗೊಂಬೆಯೊಂದನ್ನು ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಅಂತರಾಷ್ಟ್ರೀಯ ಕ್ರಿಕೆಟ್‍ಗೆ ವಿದಾಯ ಘೋಷಿಸಿದ ಕನ್ನಡಿಗ ಸ್ಟುವರ್ಟ್ ಬಿನ್ನಿ

    ಪೃಥ್ವಿ ಶಾ ಗೊಂಬೆಯೊಂದಿಗಿನ ಫೋಟೋ ನೋಡಿ ವಿವಿಧ ರೀತಿಯ ಕಮೆಂಟ್ ಕೇಳಿ ಬರುತ್ತಿದ್ದು, ಪೃಥ್ವಿ ಜೊತೆ ಗೊಂಬೆಗೂ ಕೂಡ ಬಯೋ ಬಬಲ್ ಶಿಕ್ಷೆ ಎಂಬುದಾಗಿ ಅಭಿಮಾನಿಗಳು ವ್ಯಂಗ್ಯವಾಡಿದ್ದಾರೆ. ಪೃಥ್ವಿ ಶಾ, ಶುಭಮನ್ ಗಿಲ್ ಮತ್ತು ವಾಷಿಂಗ್ಟನ್ ಸುಂದರ್ ಅವರು ಇಂಗ್ಲೆಂಡ್ ಪ್ರವಾಸದಲ್ಲಿ ಗಾಯಗೊಂಡು ಹೊರ ನಡೆದಾಗ ಬದಲಿ ಆಟಗಾರರಾಗಿ ಟೀ ಇಂಡಿಯಾ ಸೇರಿಕೊಂಡ ಆಟಗಾರರಾಗಿದ್ದಾರೆ. ಇದನ್ನೂ ಓದಿ: ರೋಹಿತ್ ಶರ್ಮಾ ಔಟ್ ಆಗ್ತಿದ್ದಂತೆ 4ನೇ ಕ್ರಮಾಂಕದಲ್ಲಿ ಬ್ಯಾಟ್ ಹಿಡಿದು ಮೈದಾನಕ್ಕಿಳಿದ ‘ಜಾರ್ವೋ’!

     

    View this post on Instagram

     

    A post shared by PRITHVI SHAW (@prithvishaw)

    ಇಂಗ್ಲೆಂಡ್ ಟೆಸ್ಟ್ ನಲ್ಲಿ ಈಗಾಗಲೇ ಮೂರು ಪಂದ್ಯಗಳು ಮುಗಿದಿದ್ದು, ಸರಣಿಯಲ್ಲಿ ಭಾರತ ಹಾಗೂ ಇಂಗ್ಲೆಂಡ್ ತಂಡಗಳು 1-1 ಸಮಬಲ ಸಾಧಿಸಿದೆ. ಇನ್ನೆರಡು ಪಂದ್ಯಗಳು ಭಾಕಿ ಉಳಿದಿದ್ದು, ಈ ಪಂದ್ಯಗಳಲ್ಲಿ ಪೃಥ್ವಿ ಶಾ ಅವರಿಗೆ ಆಡುವ ಅವಕಾಶ ಸಿಗುವುದೇ ಎಂಬುದನ್ನು ಕಾದು ನೋಡಬೇಕಾಗಿದೆ.

  • ಸೆಕ್ಸ್ ಡಾಲ್ ಮುರಿದಿದ್ದಕ್ಕೆ ಚಿಕನ್ ಮೊರೆ ಹೋದ ಬಾಡಿ ಬಿಲ್ಡರ್

    ಸೆಕ್ಸ್ ಡಾಲ್ ಮುರಿದಿದ್ದಕ್ಕೆ ಚಿಕನ್ ಮೊರೆ ಹೋದ ಬಾಡಿ ಬಿಲ್ಡರ್

    ನುರ್-ಸುಲ್ತಾನ್: ಖಜಕಸ್ತಾನದ ಬಾಡಿಬಿಲ್ಡರ್ ಯೋರಿ ತುಲೋಚ್ಚೋ ಕಾಮತೃಷೆಗಾಗಿ ಚಿಕನ್ ಬಳಕೆ ಮಾಡುತ್ತಿರುವ ವಿಚಿತ್ರ ವೀಡಿಯೋವನ್ನ ತನ್ನ ಇನ್‍ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾನೆ. ಈತನ ಅಶ್ಲೀಲ ವೀಡಿಯೋಗೆ ನೆಟ್ಟಿಗರು ಆಕ್ರೋಶ ಹೊರ ಹಾಕಿದ್ದಾರೆ.

    ಯೋರಿ ತುಲೋಚ್ಕೋ ನವೆಂಬರ್ ನಲ್ಲಿ ತಾನು ಮೆಚ್ಚಿದ ಡಾಲ್ ಮಾರ್ಗೋ ಜೊತೆ ಅದ್ಧೂರಿಯಾಗಿ ಮದುವೆಯಾಗಿದ್ದನು. ಇದೀಗ ಗೊಂಬೆ ಮುರಿದಿದ್ದು, ಮೊದಲ ಕ್ರಿಸ್‍ಮಸ್ ಹಬ್ಬವನ್ನ ಒಂಟಿಯಾಗಿ ಆಚರಿಸಿದ್ದೇನೆ ಎಂದು ಬರೆದುಕೊಂಡಿದ್ದಾನೆ. ಗೊಂಬೆಯನ್ನ ರಿಪೇರಿಗೆ ಕಳುಹಿಸಿ ಹಲವು ಪೋಸ್ಟ್ ಮಾಡಿಕೊಂಡಿದ್ದ ಯೋರಿ ಭಗ್ನ ಪ್ರೇಮಿಯಂತೆ ಕಣ್ಣೀರು ಹಾಕಿದ್ದಾನೆ. ಆದ್ರೆ ರಿಪೇರಿಗೆ ಹೋದ ಗೊಂಬೆ ಸಿದ್ಧವಾಗುತ್ತಿದ್ದು ಎಂದು ಹೇಳಿಕೊಂಡಿದ್ದಾನೆ.

    ಮೊದಲ ಗೊಂಬೆ ಮುರಿದ ಪರಿಣಾಮ ಹಲವು ಸೆಕ್ಸ್ ಡಾಲ್‍ಗಳನ್ನು ಪಡೆಯಲು ಯೋರಿ ಮುಂದಾಗಿದ್ದಾನೆ. ಗೊಂಬೆ ಮಾರ್ಗೋ ಮತ್ತೆ ಮುರಿದು ಹೋಗುವುದು ನನಗೆ ಇಷ್ಟವಿಲ್ಲ. ಹಾಗಾಗಿ ಹೆಚ್ಚು ಸೆಕ್ಸ್ ಗಾಗಿ ಹಲವು ಡಾಲ್ ಗಳನ್ನು ಖರೀದಿಗೆ ಮುಂದಾಗಿದ್ದೇನೆ. ಕೆಲವೇ ದಿನಗಳಲ್ಲಿ ಮೊದಲಿನಿಂತಾಗಿ ತನ್ನ ಮಾರ್ಗೋ ಹಿಂದಿರುಗಲಿದೆ. ಸದ್ಯ ತಾನು ಕ್ವಾರಂಟೈನ್ ನಲ್ಲಿದ್ದೇನೆ ಎಂದು ಯೋರಿ ಹೇಳಿಕೊಂಡಿದ್ದಾನೆ. ಇದನ್ನೂ ಓದಿ: ಈ ಯುವತಿಯ ಫೋಟೋಗೆ ಹುಡಗರು ಫಿದಾ-ಇಲ್ಲಿದೆ ಫೋಟೋವಿನ ಅಸಲಿ ಸತ್ಯ

    ಕಳೆದ ಒಂದು ವರ್ಷದಿಂದ ಮಾರ್ಗೋ ಜೊತೆ ಯೋರಿ ಡೇಟಿಂಗ್ ನಲ್ಲಿದ್ದನು. ಮಾರ್ಚ್ ನಲ್ಲಿ ನಡೆಯಬೇಕಿದ್ದ ಯೋರಿ ಮತ್ತು ಮಾಗೋ ಮದುವೆ ಕೊರೊನಾದಿಂದ ಮುಂದೂಡಲ್ಪಟ್ಟಿತ್ತು. ಕೊನೆಗೆ ನವೆಂಬರ್ ನಲ್ಲಿ 12 ಜನರ ಸಮ್ಮುಖದಲ್ಲಿ ಗೊಂಬೆ ಬೆರಳಿಗೆ ಉಂಗುರ ತೊಡೆಸಿದ್ದನು. ನಮ್ಮ ಸಂಬಂಧ ಎಲ್ಲರಗಿಂತ ಭಿನ್ನವಾದದ್ದು ಎಂದು ಹೇಳಿ ಮಾರ್ಗೋ ತುಟಿಗೆ ತುಟಿಯನ್ನ ಸೇರಿಸಿದ್ದನು. ಯೋರಿಯ ಮದುವೆ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಇಡೀ ಜಗತ್ತಿನಲ್ಲೆಡೆ ಗುರುತಿಸಿಕೊಂಡಿದ್ದನು. ಇದನ್ನೂ ಓದಿ: ಪ್ರೇಕ್ಷಕರ ಗ್ಯಾಲರಿಯಲ್ಲಿ ಸೆಕ್ಸ್ ಡಾಲ್ಸ್ ಇಟ್ಟ ಫುಟ್ಬಾಲ್ ಟೀಂ

    ಅವಳಿಗೆ ಒಬ್ಬಳಿಗೆ ನಡೆಯಲು ಆಗಲ್ಲ. ಅಡುಗೆ ಮಾಡಲು ಸಹ ಬರಲ್ಲ. ಆದ್ರೆ ಆಕೆಗೆ ಜಾರ್ಜಿಯನ್ ಕಸೀನ್ ಅಂದ್ರೆ ಬಲು ಇಷ್ಟ. ಖಿನ್ಕಲಿ ಅವಳ ಇಷ್ಟವಾದ ಡಿಶ್. ಅವಳು ಕೇವಲ ಗೊಂಬೆಯಲ್ಲ, ಅದರೊಳಗೊಂದು ನಿಷ್ಕಲ್ಮಶವಾದ ಆತ್ಮವಿದೆ ಎಂದು ಯೋರಿ ಮಾರ್ಗೋಳ ಗುಣಗಳನ್ನ ಕೊಂಡಾಡಿದ್ದಾನೆ. ಇದನ್ನೂ ಓದಿ: ಸೆಕ್ಸ್ ಡಾಲ್ ಜೊತೆ ನಿಶ್ಚಿತಾರ್ಥ – ಮಹಿಳೆಯರಿಗಿಂತ ಡಾಲ್ ಉತ್ತಮ ಅಂದ

    ಮೊದಲಿಗೆ ಮಾರ್ಗೋ ಜೊತೆಗಿನ ಫೋಟೋಗಳನ್ನ ಹಂಚಿಕೊಂಡಾಗ ಎಲ್ಲರೂ ಆಕೆಯನ್ನ ನೋಡುತ್ತಾರೆ ಎಂದು ಅಸೂಯೆ ಎನಿಸಿ ಡಿಲೀಟ್ ಮಾಡಿದೆ. ಕೆಲವರು ನನ್ನನ್ನ ಸ್ಯಾಡಿಸ್ಟ್, ಲೈಂಗಿಕ ರೋಗಿ, ಸಲಿಂಗಿ ಹಲವು ಪದಗಳಿಂದ ನನ್ನನ್ನು ಕಟುವಾಗಿ ಟೀಕಿಸಿದರು. ಆದ್ರೆ ನಮ್ಮಿಬ್ಬರ ಬಾಂಧವ್ಯ ಮದುವೆಗಿಂತಲೂ ಅಮೂಲ್ಯವಾದದ್ದು. ಒಂದು ವರ್ಷದ ಹಿಂದೆ ಮಾರ್ಗೊಳ ಸೌಂದರ್ಯಕ್ಕೆ ಮಾರು ಹೋದ ನಾನು ಆಕೆಯನ್ನ ಪ್ರೀತಿಸತೊಡಗಿದೆ. ನಾನು ಲೈಂಗಿಕ ಪ್ರಕ್ರಿಯೆಯನ್ನು ಇಷ್ಟಪಡುತ್ತೇನೆ. ಲಿಂಗ ಮತ್ತು ಲೈಂಗಿಕ ದೃಷ್ಟಿಕೋನ ಇಲ್ಲಿ ಮುಖ್ಯವಲ್ಲ. ಮಾರ್ಗೊ ಜೊತೆಗಿನ ಲೈಂಗಿಕ ಜೀವನವನ್ನು ವಿವರಿಸುವುದು ಕಷ್ಟ ಎಂದು ಯೋರಿ ಹೇಳಿದ್ದಾನೆ.

  • ಕೆಲವೇ ದಿನಗಳಲ್ಲಿ ಮುರಿದು ಹೋಯ್ತು ಮದ್ವೆಯಾದ ಸೆಕ್ಸ್ ಡಾಲ್

    ಕೆಲವೇ ದಿನಗಳಲ್ಲಿ ಮುರಿದು ಹೋಯ್ತು ಮದ್ವೆಯಾದ ಸೆಕ್ಸ್ ಡಾಲ್

    – ಬಾಡಿಬಿಲ್ಡರ್ ವಿಚಿತ್ರ ಪ್ರೇಮ ಕಹಾನಿ
    – ಒಂದು ವರ್ಷದಿಂದ ಬೊಂಬೆ ಜೊತೆ ಡೇಟಿಂಗ್

    ನುರ್-ಸುಲ್ತಾನ್: ಪ್ರೀತಿಸಿ ಮದುವೆಯಾದ ಸೆಕ್ಸ್ ಡಾಲ್ ಮುರಿದಿದ್ದಕ್ಕೆ ಬಾಡಿ ಬಿಲ್ಡರ್ ಓರ್ವ ಕಣ್ಣೀರಿಟ್ಟಿದ್ದಾನೆ. ಖಜಕಸ್ತಾನದ ಯೋರಿ ತುಲೋಚ್ಕೋ ನವೆಂಬರ್ ನಲ್ಲಿ ತಾನು ಮೆಚ್ಚಿದ ಡಾಲ್ ಮಾರ್ಗೋ ಜೊತೆ ಅದ್ಧೂರಿಯಾಗಿ ಮದುವೆಯಾಗಿದ್ದನು. ಇದೀಗ ಗೊಂಬೆ ಮುರಿದಿದ್ದು, ಮೊದಲ ಕ್ರಿಸ್‍ಮಸ್ ಹಬ್ಬವನ್ನ ಒಂಟಿಯಾಗಿ ಆಚರಿಸಿದ್ದೇನೆ ಎಂದು ಬರೆದುಕೊಂಡಿದ್ದಾನೆ.

    ಕಳೆದ ಒಂದು ವರ್ಷದಿಂದ ಮಾರ್ಗೋ ಜೊತೆ ಯೋರಿ ಡೇಟಿಂಗ್ ನಲ್ಲಿದ್ದನು. ಮಾರ್ಚ್ ನಲ್ಲಿ ನಡೆಯಬೇಕಿದ್ದ ಯೋರಿ ಮತ್ತು ಮಾಗೋ ಮದುವೆ ಕೊರೊನಾದಿಂದ ಮುಂದೂಡಲ್ಪಟ್ಟಿತ್ತು. ಕೊನೆಗೆ ನವೆಂಬರ್ ನಲ್ಲಿ 12 ಜನರ ಸಮ್ಮುಖದಲ್ಲಿ ಗೊಂಬೆ ಬೆರಳಿಗೆ ಉಂಗುರ ತೊಡೆಸಿದ್ದನು. ನಮ್ಮ ಸಂಬಂಧ ಎಲ್ಲರಗಿಂತ ಭಿನ್ನವಾದದ್ದು ಎಂದು ಹೇಳಿ ಮಾರ್ಗೋ ತುಟಿಗೆ ತುಟಿಯನ್ನ ಸೇರಿಸಿದ್ದನು. ಯೋರಿಯ ಮದುವೆ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಇಡೀ ಜಗತ್ತಿನಲ್ಲೆಡೆ ಗುರುತಿಸಿಕೊಂಡಿದ್ದನು.

    ಮದುವೆಯಾದ ತಿಂಗಳಳೊಳಗೆ ಯೋರಿಯ ಪ್ರೀತಿ ಗೊಂಬೆ ಪತ್ನಿ ಮುರಿದಿದೆ. ಹಾಗಾಗಿ ಗೊಂಬೆಯನ್ನ ರಿಪೇರಿಗಾಗಿ ಬೇರೊಂದು ನಗರಕ್ಕೆ ಕಳುಹಿಸಿರುವ ಯೋನಿ ಒಂಟಿತನದ ದಿನಗಳನ್ನ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಾನೆ. ಅವಳು ಶೀಘ್ರದಲ್ಲೇ ಮನೆಗೆ ಹಿಂದಿರುಗಲಿದ್ದಾಳೆ ಅಂತ ಯೋರಿ ವಿಶ್ವಾಸ ವ್ಯಕ್ತಪಡಿಸಿದ್ದಾನೆ. ಸದ್ಯ ಗೆಳೆಯರೊಂದಿಗೆ ದಿನಗಳನ್ನ ಕಳೆಯುತ್ತಿರೋದಾಗಿ ಯೋರಿ ಹೇಳಿದ್ದಾನೆ.

    ಅವಳಿಗೆ ಒಬ್ಬಳಿಗೆ ನಡೆಯಲು ಆಗಲ್ಲ. ಅಡುಗೆ ಮಾಡಲು ಸಹ ಬರಲ್ಲ. ಆದ್ರೆ ಆಕೆಗೆ ಜಾರ್ಜಿಯನ್ ಕಸೀನ್ ಅಂದ್ರೆ ಬಲು ಇಷ್ಟ. ಖಿನ್ಕಲಿ ಅವಳ ಇಷ್ಟವಾದ ಡಿಶ್. ಅವಳು ಕೇವಲ ಗೊಂಬೆಯಲ್ಲ, ಅದರೊಳಗೊಂದು ನಿಷ್ಕಲ್ಮಶವಾದ ಆತ್ಮವಿದೆ ಎಂದು ಯೋರಿ ಮಾರ್ಗೋಳ ಗುಣಗಳನ್ನ ಕೊಂಡಾಡಿದ್ದಾನೆ.

    ಮೊದಲಿಗೆ ಮಾರ್ಗೋ ಜೊತೆಗಿನ ಫೋಟೋಗಳನ್ನ ಹಂಚಿಕೊಂಡಾಗ ಎಲ್ಲರೂ ಆಕೆಯನ್ನ ನೋಡುತ್ತಾರೆ ಎಂದು ಅಸೂಯೆ ಎನಿಸಿ ಡಿಲೀಟ್ ಮಾಡಿದೆ. ಕೆಲವರು ನನ್ನನ್ನ ಸ್ಯಾಡಿಸ್ಟ್, ಲೈಂಗಿಕ ರೋಗಿ, ಸಲಿಂಗಿ ಹಲವು ಪದಗಳಿಂದ ನನ್ನನ್ನು ಕಟುವಾಗಿ ಟೀಕಿಸಿದರು. ಆದ್ರೆ ನಮ್ಮಿಬ್ಬರ ಬಾಂಧವ್ಯ ಮದುವೆಗಿಂತಲೂ ಅಮೂಲ್ಯವಾದದ್ದು. ಒಂದು ವರ್ಷದ ಹಿಂದೆ ಮಾರ್ಗೊಳ ಸೌಂದರ್ಯಕ್ಕೆ ಮಾರು ಹೋದ ನಾನು ಆಕೆಯನ್ನ ಪ್ರೀತಿಸತೊಡಗಿದೆ. ನಾನು ಲೈಂಗಿಕ ಪ್ರಕ್ರಿಯೆಯನ್ನು ಇಷ್ಟಪಡುತ್ತೇನೆ. ಲಿಂಗ ಮತ್ತು ಲೈಂಗಿಕ ದೃಷ್ಟಿಕೋನ ಇಲ್ಲಿ ಮುಖ್ಯವಲ್ಲ. ಮಾರ್ಗೊ ಜೊತೆಗಿನ ಲೈಂಗಿಕ ಜೀವನವನ್ನು ವಿವರಿಸುವುದು ಕಷ್ಟ ಎಂದು ಯೋರಿ ಹೇಳಿದ್ದಾನೆ.

    ಸದ್ಯ ಮುರಿತಕ್ಕೊಳ್ಳಗಾಗಿರುವ ಗೊಂಬೆಯನ್ನ ರಿಪೇರಿಗೆ ಬೇರೆ ಕಡೆ ಕಳುಹಿಸಿದ್ದು, ಆಕೆಯ ಆಗಮನಕ್ಕಾಗಿ ಜಾತಕ ಪಕ್ಷಿಯಂತೆ ಯೋರಿ ಕಾಯುತ್ತಿದ್ದಾನೆ.

  • ಕಂದನಿಗಾಗಿ ಕಾಯುತ್ತಿದ್ದ ಚಿರು, ಪತ್ನಿಗೆ ಗೊಂಬೆ ಗಿಫ್ಟ್

    ಕಂದನಿಗಾಗಿ ಕಾಯುತ್ತಿದ್ದ ಚಿರು, ಪತ್ನಿಗೆ ಗೊಂಬೆ ಗಿಫ್ಟ್

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ಚಿರಂಜೀವಿ ಸರ್ಜಾ ಅವರು ಅಪ್ಪನಾಗುತ್ತಿರುವ ಸಂಭ್ರಮದಲ್ಲಿದ್ದರು. ಆದರೆ ಮುದ್ದು ಕಂದ ಬರುವ ಮೊದಲೇ ಚಿರು ಇಹಲೋಕ ತ್ಯಜಿಸಿದ್ದಾರೆ.

    ಚಿರಂಜೀವಿ ಸರ್ಜಾ ತಮ್ಮ ಮುದ್ದು ಕಂದನ ಬರುವಿಕೆಗಾಗಿ ಕಾತುರದಿಂದ ಕಾಯುತ್ತಿದ್ದರು. ಈ ಹಿನ್ನೆಲೆಯಲ್ಲಿ ಮುದ್ದು ಮಡದಿ ಮೇಘನಾಗೆ ಒಂದು ಗೊಂಬೆಯನ್ನು ಕೂಡ ಗಿಫ್ಟಾಗಿ ನೀಡಿದ್ದರು.

    ಈಗ ಮೇಘನಾ ಚಿರು ಇಲ್ಲದ ಹೊತ್ತಲ್ಲಿ ಆ ಮುದ್ದಾದ ಬೊಂಬೆಯನ್ನು ನೋಡುತ್ತಾ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಅಲ್ಲದೇ ಜೋಕಾಲಿ ಕಟ್ಟಿ ಬೊಂಬೆಗೆ ಲಾಲಿ ಹಾಡಿದ್ದಾರೆ. ಮುದ್ದು ಕಂದಮ್ಮನ ಮೇಲೆ ಎಷ್ಟು ಕನಸು, ಆಸೆಗಳನ್ನು ಇಟ್ಟುಕೊಂಡಿದ್ದರೂ ಎಂಬುದಕ್ಕೆ ಈ ಫೋಟೋ ಸಾಕ್ಷಿಯಾಗಿದೆ.

    ಸದ್ಯಕ್ಕೆ ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಬೆಂಗಳೂರಿನ ಬಸವನಗುಡಿಯಿಂದ ಕನಕಪುರ ಬಳಿಯಿರುವ ಧ್ರುವ ಸರ್ಜಾ ಫಾರ್ಮ್ ಹೌಸ್‍ಗೆ ಚಿರಂಜೀವಿ ಸರ್ಜಾ ಪಾರ್ಥಿವ ಶರೀರವನ್ನು ರವಾನಿಸಲಾಗಿದೆ. ಕುಟುಂಬಸ್ಥರು ಕೂಡ ಕಾರಿನಲ್ಲಿ ಫಾರ್ಮ್ ಹೌಸ್‍ಗೆ ಹೋಗಿದ್ದಾರೆ.

    ಚಿರಂಜೀವಿ ಸಾವಿನ ಸುದ್ದಿ ತಿಳಿದ ನಂತರ ನಟಿ ತಾರಾ ಅಳುತ್ತಾ ಆಸ್ಪತ್ರೆಯ ಮುಂದೆ ಮಾಧ್ಯಮಗಳ ಜೊತೆ ಮಾತನಾಡುವಾಗ ಮೇಘನಾ ರಾಜ್ ಗರ್ಭಿಣಿಯಾಗಿರುವ ವಿಚಾರವನ್ನು ನೋವಿನಿಂದ ಹೇಳಿದ್ದರು. ಮೊದಲು ಸುಳ್ಳು ಸುದ್ದಿ ಅಂತಾ ತಿಳಿದೆ. ನಂತರ ಸುಳ್ಳು ಸುದ್ದಿ ಆಗಲಿ ಅಂತಾ ಅಂದುಕೊಂಡು ಆಸ್ಪತ್ರೆಗೆ ಬಂದೆ. ಆದ್ರೆ ಚಿರು ಹೃದಯಾಘಾತದಿಂದ ಸಾವನ್ನಪ್ಪಿರೋದು ಖಚಿತವಾಯ್ತು. ಚಿರು ಕುಟುಂಬಕ್ಕೆ ದೇವರು ದುಃಖ ಬರಿಸೋ ಶಕ್ತಿ ನೀಡಲಿ ಎಂದು ಕಣ್ಣೀರು ಹಾಕಿದ್ದರು.

    ಇದೇ ವೇಳೆ ಮೇಘಾನಾ ರಾಜ್ ತಾಯಿ ಆಗುತ್ತಿದ್ದಾರೆ. ಪುಟ್ಟ ಚಿರಂಜೀವಿ ಬರುತ್ತಿದ್ದಾನೆ ಎಂಬ ವಿಷಯವನ್ನು ತಿಳಿಸಿದ್ದರು. ಹಿರಿಯ ನಟ ಸುಂದರ್ ರಾಜ್ ಮತ್ತು ಪ್ರಮೀಳಾ ಜೋಷಾಯ್ ದಂಪತಿಯ ಪುತ್ರಿಯಾಗಿರೋ ಮೇಘನಾ, ಚಿರಂಜೀವಿಯನ್ನು ಪ್ರೀತಿಸಿ ಕುಟುಂಬದ ಒಪ್ಪಿಗೆ ಪಡೆದು ಮದುವೆ ಆಗಿದ್ದರು.

  • ತೈಮೂರ್ ಬಳಿಕ ಮಾರುಕಟ್ಟೆಯಲ್ಲಿ ದೀಪಿಕಾ ಗೊಂಬೆ

    ತೈಮೂರ್ ಬಳಿಕ ಮಾರುಕಟ್ಟೆಯಲ್ಲಿ ದೀಪಿಕಾ ಗೊಂಬೆ

    ಮುಂಬೈ: ನಟ ಸೈಫ್ ಅಲಿ ಖಾನ್ ಪುತ್ರ ತೈಮೂರ್ ಗೊಂಬೆಗಳು ಮಾರುಕಟ್ಟೆಯಲ್ಲಿ ಮಾರಾಟಕ್ಕಿರಿಸಲಾಗಿತ್ತು. ಇದೀಗ ತೈಮೂರ್ ಬಳಿಕ ಬಾಲಿವುಡ್ ಗುಳಿಕೆನ್ನೆ ಚೆಲುವೆ ದೀಪಿಕಾ ಪಡುಕೋಣೆ ಗೊಂಬೆಗಳ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

    ಸಂಜಯ್ ಲೀಲಾ ಬನ್ಸಾಲಿ ನಿರ್ಮಾಣದ ಪದ್ಮಾವತ್ 2018ರ ಯಶಸ್ವಿ ಸಿನಿಮಾಗಳಲ್ಲಿ ಒಂದಾಗಿದೆ. ಪದ್ಮಾವತಿ ಪಾತ್ರಕ್ಕೆ ನಟಿ ದೀಪಿಕಾ ಜೀವ ತುಂಬಿದ್ದರು. ಸಿನಿಮಾದಲ್ಲಿ ಪ್ರತಿಯೊಂದು ಪಾತ್ರಗಳು, ಕಥೆ, ಕ್ಯಾಮೆರಾ ಕೈ ಚಳಕ, ನೃತ್ಯ, ಸಂಗೀತ ವೀಕ್ಷಕರನ್ನು ಸೆಳೆದಿದ್ದವು. ಇವೆಲ್ಲದರ ಜೊತೆ ದೀಪಿಕಾ ಧರಿಸಿದ್ದ ಒಡವೆಗಳು ಮಹಿಳೆಯರನ್ನು ಆಕರ್ಷಿಸುವಲ್ಲಿ ಮುಂಚೂಣಿಯಲ್ಲಿದ್ದವು.

    ಸಿನಿಮಾ ಬಿಡುಗಡೆ ಸಂದರ್ಭದಲ್ಲಿ ಪದ್ಮಾವತ್ ಜ್ಯೂವೆಲ್ಸ್ ಹೆಸರಿನಲ್ಲಿ ಚಿನ್ನಾಭರಣಗಳನ್ನು ಮಾರಾಟ ಮಾಡಲಾಗಿತ್ತು. ಕೆಲ ಮಹಿಳೆಯರು ಬೆಲೆ ಬಾಳುವ ಪದ್ಮಾವತ್ ಚಿನ್ನಾಭರಣ ಧರಿಸಿ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದರು. ಪದ್ಮಾವತ್ ಪಾತ್ರದಲ್ಲಿ ದೀಪಿಕಾ ಕಾಣಿಸಿಕೊಂಡ ಮಾದರಿಯಲ್ಲಿ ಗೊಂಬೆಗಳ ತಯಾರಿಸಲಾಗಿದೆ. ಇನ್ನು ಗೊಂಬೆಗಳಿಗೆ ಅದೇ ರೀತಿಯಲ್ಲಿ ಅಲಂಕಾರ ಮಾಡಲಾಗಿದೆ.

    ಇತ್ತೀಚೆಗೆ ದೀಪಿಕಾ ಪಡುಕೋಣೆ ನಟನೆಯ ಮಹಿಳಾ ಪ್ರಧಾನ ಚಿತ್ರ ಛಪಾಕ್ ಸದ್ದು ಮಾಡುವಲ್ಲಿ ವಿಫಲವಾಗಿತ್ತು. ಕ್ರಿಕೆಟಿಗ ಕಪಿಲ್ ದೇವ್ ಜೀವನಾಧರಿತ ಸಿನಿಮಾದಲ್ಲಿ ಪತಿ ರಣ್‍ವೀರ್ ಗೆ ಜೊತೆಯಾಗಿ ನಟಿಸುತ್ತಿದ್ದಾರೆ. ರಾಮ್‍ಲೀಲಾ, ಬಾಜೀರಾವ್ ಮಸ್ತಾನಿ ಮತ್ತು ಪದ್ಮಾವತ್ ಬಳಿಕ ನಾಲ್ಕನೇ ಬಾರಿಗೆ ತೆರೆಯ ಮೇಲೆ ದೀಪ್-ವೀರ್ ಜೋಡಿ ಮೋಡಿ ಮಾಡಲು ಸಜ್ಜಾಗಿದೆ.

  • ಬಾಲಕಿ ಮೂಗಿನಲ್ಲಿ ಸಿಕ್ಕಿಹಾಕಿಕೊಂಡಿದ್ದ ಗೊಂಬೆಯ ಶೂ ತೆಗೆಯಲು 2.12 ಲಕ್ಷ ರೂ. ಬಿಲ್

    ಬಾಲಕಿ ಮೂಗಿನಲ್ಲಿ ಸಿಕ್ಕಿಹಾಕಿಕೊಂಡಿದ್ದ ಗೊಂಬೆಯ ಶೂ ತೆಗೆಯಲು 2.12 ಲಕ್ಷ ರೂ. ಬಿಲ್

    ವಾಷಿಂಗ್ಟನ್: ಮಗುವಿನ ಮೂಗಿನಲ್ಲಿ ಸಿಕ್ಕಿಕೊಂಡ ಗೊಂಬೆಯ ಶೂ ತೆಗೆಯಲು ವೈದ್ಯರೊಬ್ಬರು 3,000 ಡಾಲರ್(2.13 ಲಕ್ಷ ರೂ.) ಬಿಲ್ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ.

    ಲಾಸ್ ವೆಗಾಸ್‍ನಲ್ಲಿ ಈ ಘಟನೆ ನಡೆದಿದ್ದು, ಮಗುವಿನ ಮೂಗಿನಲ್ಲಿ ಸಿಕ್ಕಿಹಾಕಿಕೊಂಡ ಶೂ ತೆಗೆಸಲು ಲೂಸಿ ಬ್ರಾನ್ಸನ್‍ಳ ತಾಯಿ ಕ್ಯಾಟಿ ಹೆಂಡರ್ಸನ್‍ನಲ್ಲಿರುವ ಸೇಂಟ್ ರೋಸ್ ಡೊಮಿನಿಕೇನ್ ಸೈನಾ ಕ್ಯಾಂಪಸ್‍ನಲ್ಲಿರುವ ಡಿಗ್ನಿಟಿ ಹೆಲ್ತ್ ಸೆಂಟರ್ ಗೆ ಕರೆದೊಯ್ದಿದ್ದಾರೆ.

    3 ವರ್ಷದ ಮಗು ಲೂಸಿ ಬ್ರಾನ್ಸನ್‍ಳ ಮೂಗಿನ ಎರಡೂ ಹೊಳ್ಳೆಯಲ್ಲಿ ಗೊಂಬೆಯ ಕಾಲಿನ ಶೂಗಳು ಸಿಕ್ಕಿ ಹಾಕಿಕೊಂಡಿತ್ತು. ಒಂದು ಶೂವನ್ನು ತೆಗೆಯಲು ತಾಯಿ ಕ್ಯಾಟಿ ಯಶಸ್ವಿಯಾಗಿದ್ದಾರೆ. ಆದರೆ ಇನ್ನೊಂದು ಶೂವನ್ನು ತೆಗೆಯುವಲ್ಲಿ ವಿಫಲರಾಗಿದ್ದಾರೆ. ನಂತರ ಮಗುವನ್ನು ಡಿಗ್ನಿಟಿ ಹೆಲ್ತ್ ಸೆಂಟರ್‍ಗೆ ಕರೆದೊಯ್ದಿದ್ದಾರೆ. ವೈದ್ಯರು ಶೂ ತೆಗೆದಿದ್ದು ಇಷ್ಟಕ್ಕೇ 2.13 ಲಕ್ಷ ರೂ. ಬಿಲ್ ಮಾಡಿದ್ದಾರೆ. ತನ್ನ ಇಮೇಲ್‍ನಲ್ಲಿ ಇಷ್ಟು ಮೊತ್ತದ ಬಿಲ್ ನೋಡಿದ ಮಗುವಿನ ತಾಯಿ ಕ್ಯಾಟಿ ಶಾಕ್ ಆಗಿದ್ದಾರೆ.

    ಬಿಲ್ ನೋಡಿದ ನಂತರ ನನಗೆ ಇದು ತಪ್ಪು ಎನ್ನುವುದು ತಿಳಿಯಿತು. ಬಹುಶಃ ಇವರು ಇನ್ಶೂರೆನ್ಸ್ ದರವನ್ನು ಸರಿಯಾಗಿ ಪರಿಗಣಿಸಿಲ್ಲದಿರಬಹುದು, ಇಲ್ಲವೇ ತಪ್ಪಾಗಿ ಬಿಲ್ ನೀಡಿರಬಹುದು ಎಂದು ಭಾವಿಸಿದೆ. ನಂತರ ತಪ್ಪಾಗಿ ಬಿಲ್ ನೀಡಲಾಗಿಲ್ಲ ಎನ್ನುವುದು ತಿಳಿಯಿತು ಎಂದು ಸುದ್ದಿ ಸಂಸ್ಥೆಗೆ ಸ್ಪಷ್ಟಪಡಿಸಿದ್ದಾರೆ.

    ನಂತರ ಅವರು ಹೈ ಡಿಟೆಕ್ಟೆಬಲ್ ಮೆಡಿಕಲ್ ಪಾಲಿಸಿ ಪ್ರಕಾರ ಬಿಲ್ ಕಡಿಮೆ ಮಾಡಿಸಿ 1.21 ಲಕ್ಷ ರೂ. ಕಟ್ಟಿ ಬಂದಿದ್ದಾರೆ.

    ಜುಲೈನಲ್ಲಿ ನಟ ರಾಹುಲ್ ಭೋಸ್ ಚಂಢೀಗಡದ ಖಾಸಗಿ ಹೋಟೆಲ್‍ನಲ್ಲಿ ಬಾಳೆಹಣ್ಣು ಖರೀದಿಸಿದಾಗ ಅವರಿಗೆ 442.50 ರೂ. ಬಿಲ್ ನೀಡಲಾಗಿತ್ತು. ಈ ವಿಡಿಯೋವನ್ನು ಭೋಸ್ ಅವರು ಸಾಮಾಜಿಕ ಜಾಲvತಾಣಗಳಲ್ಲಿ ಹಾಕಿದ್ದರು. ಈ ಕುರಿತು ಸಾಕಷ್ಟು ಚರ್ಚೆಯಾಗಿತ್ತು.

  • ತಾಯಿಗಾಗಿ ಬೆಂಗ್ಳೂರಿನಲ್ಲಿ ಮೈಸೂರು ಅರಮನೆ ನಿರ್ಮಿಸಿದ ಮಗ

    ತಾಯಿಗಾಗಿ ಬೆಂಗ್ಳೂರಿನಲ್ಲಿ ಮೈಸೂರು ಅರಮನೆ ನಿರ್ಮಿಸಿದ ಮಗ

    ಬೆಂಗಳೂರು: ದಸರಾ ಬಂದರೆ ಕಣ್ಮುಂದೆ ಬರುವುದೇ ಮೈಸೂರು, ಮೈಸೂರು ಅರಮನೆ, ಅಂಬಾರಿ ಜೊತೆಗೆ ದಸರಾ ಹಬ್ಬದ ವಿಶೇಷ ಬೊಂಬೆಗಳು. ಬೊಂಬೆಗಳ ಹಬ್ಬದಲ್ಲಿ ಇಲ್ಲೊಬ್ಬ ಮಗ ತನ್ನ ತಾಯಿಗಾಗಿ ಬೆಂಗಳೂರಿನಲ್ಲಿ ಮೈಸೂರು ಅರಮನೆ ನಿರ್ಮಿಸಿದ್ದಾನೆ.

    ಅನೇಕ ವರ್ಷಗಳಿಂದ ತಾಯಿ ತ್ರಿಪುರ ಸಂಪತ್‍ಗೆ ಮನೆಯಲ್ಲಿ ನೂರಾರು ಬೊಂಬೆಗಳನ್ನು ಕೂರಿಸಿ ಹಬ್ಬವನ್ನು ಮಾಡಿಕೊಂಡು ಬಂದಿದ್ದಾರೆ. ದಸರಾ ಬೊಂಬೆಗಳ ಜೊತೆ ಅರಮನೆಯ ಮಾದರಿಯನ್ನು ತಂದು ಕೂರಿಸೋಣ ಎಂದು ತಾಯಿ ಆಸೆಪಟ್ಟಿದ್ದಾರೆ. ಮಗ ವಸಂತ ಕುಮಾರ್ ಹೊರಗಿನಿಂದ ಯಾಕೆ ತರುವುದು ನಾನೇ ಅರಮನೆ ಮಾಡಿಕೊಡುತ್ತೇನೆ ಎಂದು ಅರಮನೆಯನ್ನು ಮರದಿಂದ ಮಾಡಿದ್ದಾರೆ.

    ತಾಯಿಯ ಆಸೆಯನ್ನು ಪೂರೈಸಲು ನಮ್ಮ ಯಜಮಾನರು ಎಂಟು ತಿಂಗಳು ಶ್ರಮ ಪಟ್ಟಿದ್ದಾರೆ. ರಾತ್ರಿ ಕೆಲಸದಿಂದ ಬಂದ ಮೇಲೆ ಅರಮನೆ ಮಾಡುವ ಕೆಲಸದಲ್ಲಿ ತೊಡಗುತ್ತಿದ್ದರು. ಮೈಸೂರು ಅರಮನೆ ಹೇಗಿದೇಯೋ ಅದೇ ರೀತಿ ಪೈಟಿಂಗ್ ಮಾಡಿ ಲೈಟ್ಸ್ ಹಾಕಿ ಮಾಡಿದರು ಎಂದು ವಸಂತ ಕುಮಾರ್ ಪತ್ನಿ ನಂದಿನಿ ತಿಳಿಸಿದ್ದಾರೆ.

    ದಸರಾ ಹಬ್ಬಕ್ಕಾಗಿ ತಾಯಿಯ ಆಸೆಯನ್ನು ಪೂರೈಸಲು ಅರಮನೆ ಮಾಡಿರುವ ವಸಂತ ಕುಮಾರ್ ಅವರ ಕಲೆಯನ್ನು ನೋಡಿ ಹಲವರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.