Tag: ಗೈರು

  • ಧ್ವಜಾರೋಹಣ ಬಿಟ್ಟು ಚುನಾವಣೆ ಪ್ರಚಾರ ಮಾಡಲು ಹೊರಟ ಜಮೀರ್ ಅಹ್ಮದ್

    ಧ್ವಜಾರೋಹಣ ಬಿಟ್ಟು ಚುನಾವಣೆ ಪ್ರಚಾರ ಮಾಡಲು ಹೊರಟ ಜಮೀರ್ ಅಹ್ಮದ್

    ಹಾವೇರಿ: ಕನ್ನಡ ರಾಜ್ಯೋತ್ಸವ ಪ್ರಯುಕ್ತ ಧ್ವಜಾರೋಹಣ ಮಾಡೋದನ್ನ ಬಿಟ್ಟು ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಉಪಚುನಾವಣೆಯ ಪ್ರಚಾರ ಮಾಡಿದ್ದಾರೆ.

    63ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಕಾರ್ಯಕ್ರಮವನ್ನ ಆಯೋಜಿಸಲಾಗಿತ್ತು. ಧ್ವಜಾರೋಹಣ ಮಾಡಬೇಕಿದ್ದ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಆಚರಣೆಯಲ್ಲಿ ಭಾಗಿಯಾಗದೇ ಚುನಾವಣೆ ಪ್ರಚಾರದಲ್ಲಿ ನಿರತರಾಗಿದ್ದಾರೆ.

    ಸಚಿವರ ಗೈರಿನಿಂದ ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಮತ್ತು ಇತರ ಅಧಿಕಾರಿಗಳು ಸೇರಿ ಧ್ವಜಾರೋಹಣ ಮಾಡಿದರು. ಈ ಸಂಭ್ರಮದಲ್ಲಿ ಸ್ಥಳಿಯ ಶಾಸಕ ನೆಹೆರು ಓಲೇಕಾರ್ ಕೂಡ ಭಾಗಿಯಾಗಿದ್ದರು. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಮತ್ತು ಪೊಲೀಸರಿಂದ ಆಕರ್ಷಕ ಪಥಸಂಚಲನ ನಡೆಯಿತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕೈಕೊಟ್ಟ ಬಯೋಮೆಟ್ರಿಕ್- ಕಚೇರಿಗೆ ಸಿಬ್ಬಂದಿ ಗೈರು- ಸಾರ್ವಜನಿಕರ ಪರದಾಟ

    ಕೈಕೊಟ್ಟ ಬಯೋಮೆಟ್ರಿಕ್- ಕಚೇರಿಗೆ ಸಿಬ್ಬಂದಿ ಗೈರು- ಸಾರ್ವಜನಿಕರ ಪರದಾಟ

    ವಿಜಯಪುರ: ಬಯೋಮೆಟ್ರಿಕ್ ಕೈಕೊಟ್ಟ ಪರಿಣಾಮ ಇದನ್ನೇ ದುರಪಯೋಗ ಪಡಿಸಿಕೊಂಡ ಸರ್ಕಾರಿ ಸಿಬ್ಬಂದಿ, ಕಚೇರಿಗೆ ಗೈರಾಗಿದ್ದರಿಂದ ಸಾರ್ವಜನಿಕರು ಪರದಾಟ ನಡೆಸುತ್ತಿದ್ದಾರೆ.

    ನಗರ ಜಿಲ್ಲಾ ಪಂಚಾಯತ್ ಬಳಿ ಇರುವ ವಿಜಯಪುರ ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ಬಯೋಮೆಟ್ರಿಕ್ ಕೈಕೊಟ್ಟಿದೆ. ಅಲ್ಲದೇ ದಿನಾಂಕ ಮತ್ತು ಸಮಯವನ್ನು ತಪ್ಪಾಗಿ ತೋರಿಸುತ್ತಿರುವ ಬಯೋಮೆಟ್ರಿಕ್ ನಿಂದಾಗಿ ಸಿಬ್ಬಂದಿ ಸಮಯ 11:30 ಆದರೂ ಕಚೇರಿಗೆ ಆಗಮಿಸುತ್ತಿಲ್ಲ. ಇದರಿಂದಾಗಿ ಕಚೇರಿ ಟೇಬಲ್, ಕುರ್ಚಿಗಳು ಖಾಲಿ ಹೊಡೆಯುತ್ತಿವೆ.

    ಇನ್ನೂ ಕೆಲವು ಸಿಬ್ಬಂದಿ ತಮ್ಮ ಮೊಬೈಲನ್ನು ಸ್ವಿಚ್ ಆಫ್ ಮಾಡಿಕೊಂಡು ವಾರಾನುಗಟ್ಟಲೆ ಕೆಲಸಕ್ಕೆ ಹಾಜರಾಗಿಲ್ಲ. ಸಿಬ್ಬಂದಿಯ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಪರದಾಟ ಅನುಭವಿಸುತ್ತಿದ್ದಾರೆ. ತಮ್ಮ ಕೆಲಸಗಳಿಗಾಗಿ ತಿಂಗಳುಗಟ್ಟಲೇ ಅಲೆದಾಡುತ್ತಿದ್ದು, ಎಸಿ ಕಚೇರಿ ಸಿಬ್ಬಂದಿಗೆ ಹಿಡಿಶಾಪ ಹಾಕುತ್ತಿದ್ದಾರೆ.

  • ಬಜೆಟ್ ಮಂಡನೆ ವೇಳೆ, ಆರಾಧ್ಯ ದೇವರ ಪೂಜೆಯಲ್ಲಿ ಡಿಕೆಶಿ ಹಾಜರ್

    ಬಜೆಟ್ ಮಂಡನೆ ವೇಳೆ, ಆರಾಧ್ಯ ದೇವರ ಪೂಜೆಯಲ್ಲಿ ಡಿಕೆಶಿ ಹಾಜರ್

    ತುಮಕೂರು: ಕುಮಾರಸ್ವಾಮಿಯವರು ಸಮ್ಮಿಶ್ರ ಸರ್ಕಾರದ ಮೊದಲ ಬಜೆಟ್ ಮಂಡಿಸುತ್ತಿದ್ದ ಸಂದರ್ಭದಲ್ಲಿ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ತಿಪಟೂರು ತಾಲೂಕಿನ ನೊಣವಿನಕೆರೆಯಲ್ಲಿ ಆರಾಧ್ಯ ದೇವರ ಪೂಜೆಯಲ್ಲಿ ಹಾಜರಾಗಿದ್ದರು.

    ಕಾಡುಸಿದ್ದೇಶ್ವರ ಮಠದ ಶಿವಯೋಗಿ ಸ್ವಾಮೀಜಿಯವರ ನೂತನ ಶಿಲಾ ಮಠದ ಲೋಕಾರ್ಪಣೆ ಪ್ರಯುಕ್ತ ನಡೆಯುತ್ತಿರುವ ಹೋಮ-ಹವನ ಕಾರ್ಯಕ್ರಮದಲ್ಲಿ ಡಿಕೆಶಿ ಕುಟುಂಬ ಭಾಗಿಯಾಗಿತ್ತು.

    ಬಜೆಟ್ ದಿನದಂದು ಗೈರು ಹಾಜರಿ ಆಗುತ್ತಿರುವ ಬಗ್ಗೆ ಜೂನ್ 27 ರಂದು ಮಾಧ್ಯಮಗಳ ಜೊತೆ ಮಾತನಾಡಿದ್ದ ಶಿವಕುಮಾರ್, ಜುಲೈ 5 ರಂದು ನೊಣವಿನಕೆರೆ ಗುರುಗಳ ಆಶ್ರಮದಲ್ಲಿ ದೊಡ್ಡ ಕಾರ್ಯಕ್ರಮ ಆಯೋಜಿಸಲಾಗಿದೆ. ಚುನಾವಣೆಗೆ ಮುನ್ನವೇ ಕಾರ್ಯಕ್ರಮ ನಿಗದಿಯಾಗಿತ್ತು. ರಾಜ್ಯಪಾಲರು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ಹಾಗಾಗಿ ಅಂದು ಬಜೆಟ್ ಮಂಡನೆ ಇದ್ದರೂ ಒಂದು ದಿನದ ಮಟ್ಟಿಗೆ ಅಧಿವೇಶನಕ್ಕೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ರಾಜ್ಯಪಾಲರ ಜತೆಗೆ ಅಥವಾ ಹೆಲಿಕಾಪ್ಟರ್ ನಲ್ಲಿ ಬಂದು ಹೋಗುವ ಪ್ರಯತ್ನ ಮಾಡುತ್ತೇನೆ. ಇದಕ್ಕೆ ಯಾವುದೇ ಅಪಾರ್ಥ ಕಲ್ಪಿಸುವುದು ಬೇಡ ಎಂದು ಮನವಿ ಮಾಡಿಕೊಂಡಿದ್ದರು.

    ತಿಪಟೂರು ತಾಲೂಕಿನ ನೊಣವಿನಕೆರೆಯ ಕಾಡುಸಿದ್ದೇಶ್ವರ ಸಚಿವ ಡಿಕೆಶಿ ಅವರ ಆರಾಧ್ಯ ದೈವವಾಗಿದೆ. ಯಾವುದೇ ಶುಭ ಕಾರ್ಯವನ್ನು ಕೈಗೊಳ್ಳುವ ಮೊದಲು ಅವರು ಕಾಡುಸಿದ್ದೇಶ್ವರ ಮಠದ ಶಿವಯೋಗಿ ಸ್ವಾಮೀಜಿಯವರ ಆಶೀರ್ವಾದ ಪಡೆಯುತ್ತಾರೆ.

  • ಕಾಂಗ್ರೆಸ್ ಶಾಸಕಾಂಗ ಸಭೆಗೆ 13 ಶಾಸಕರು ಗೈರು

    ಕಾಂಗ್ರೆಸ್ ಶಾಸಕಾಂಗ ಸಭೆಗೆ 13 ಶಾಸಕರು ಗೈರು

    ಬೆಂಗಳೂರು: ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಆರಂಭಗೊಂಡಿದ್ದು, 13 ಮಂದಿ ಶಾಸಕರು ಗೈರು ಹಾಜರಿ ಹಾಕಿದ್ದಾರೆ.

    66 ಜನ ಶಾಸಕರ ಹಾಜರಾತಿಯಲ್ಲಿ ಸಭೆ ಆರಂಭಗೊಂಡಿದೆ. ಶಾಸಕರು ಯಾಕೆ ಆಗಮಿಸಿಲ್ಲ ಎಂದು ಕೇಳಿದ್ದಕ್ಕೆ ದೇಶಪಾಂಡೆ, ನಿನ್ನೆ ಚುನಾವಣೆಯಲ್ಲಿ ಗೆದ್ದ ಹಿನ್ನೆಲೆಯಲ್ಲಿ ಅವರೆಲ್ಲ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ಹೀಗಾಗಿ ತಡವಾಗಿ ಆಗಮಿಸಲಿದ್ದಾರೆ ಎಂದು ತಿಳಿಸಿದರು.

    ಗೈರು ಹಾಜರಿ ಹಾಕಿರುವ ಶಾಸಕರು:
    ಗಣೇಶ್ ಹುಕ್ಕೇರಿ(ಚಿಕ್ಕೋಡಿ ಸದಲಗ), ಆನಂದ ಸಿಂಗ್(ವಿಜಯನಗರ), ನಾಗೇಂದ್ರ(ಕೂಡ್ಲಿಗಿ), ಭೀಮಾನಾಯಕ್(ಹಗರಿ ಬೊಮ್ಮನಹಳ್ಳಿ) ಜಮೀರ್ ಅಹಮ್ಮದ್(ಚಾಮರಾಜಪೇಟೆ), ಅಖಂಡ ಶ್ರೀನಿವಾಸಮೂರ್ತಿ(ಪುಲಿಕೇಶಿ ನಗರ), ತುಕಾರಾಂ(ಸಂಡೂರು), ಮಹಂತೇಶ್ ಕೌಜಲಗಿ (ಬೈಲಹೊಂಗಲ), ಶಿವಾನಂದ ಪಾಟೀಲ್(ಬಸವನಬಾಗೇವಾಡಿ), ಯಶವಂತ ರಾಯಗೌಡ(ಇಂಡಿ), ರಾಜೇಗೌಡ(ಶೃಂಗೇರಿ), ಸತೀಶ್ ಜಾರಕಿಹೊಳಿ(ಯಮಕನಮರಡಿ), ರಮೇಶ್ ಜಾರಕಿಹೊಳಿ(ಗೋಕಾಕ್), ಬಸವನಗೌಡ ದದ್ದಲ(ರಾಯಚೂರು ಗ್ರಾಮಾಂತರ), ದುರ್ಗಪ್ಪ ಹೂಲಗೇರಿ(ಲಿಂಗಸಗೂರು).