Tag: ಗೇಮ್‌ ಚೇಂಜರ್‌

  • `ಗೇಮ್ ಚೇಂಜರ್’ ಬಳಿಕ ಕನ್ನಡದ ನಿರ್ದೇಶಕರ ಜೊತೆ ಸಿನಿಮಾ ಮಾಡ್ತಾರೆ ರಾಮ್ ಚರಣ್

    `ಗೇಮ್ ಚೇಂಜರ್’ ಬಳಿಕ ಕನ್ನಡದ ನಿರ್ದೇಶಕರ ಜೊತೆ ಸಿನಿಮಾ ಮಾಡ್ತಾರೆ ರಾಮ್ ಚರಣ್

    `ಆರ್‌ಆರ್‌ಆರ್’ ಸೂಪರ್ ಸಕ್ಸಸ್ ಬಳಿಕ ಶಂಕರ್ ನಿರ್ದೇಶನದ `ಗೇಮ್ ಚೇಂಜರ್’ (Game Changer) ಸಿನಿಮಾದಲ್ಲಿ ರಾಮ್ ಚರಣ್ (Ram Charan) ಬ್ಯುಸಿಯಾಗಿದ್ದಾರೆ. `ಗೇಮ್ ಚೇಂಜರ್’ ಸಿನಿಮಾ ಬಳಿಕ ಕನ್ನಡದ ಸ್ಟಾರ್ ನಿರ್ದೇಶಕರ ಜೊತೆ ಸಿನಿಮಾ ರಾಮ್ ಚರಣ್ ಓಕೆ ಎಂದಿದ್ದಾರೆ ಎಂಬ ಲೇಟೆಸ್ಟ್ ಅಪ್‌ಡೇಡ್ ಸಿಕ್ಕಿದೆ.

    RRR ಚಿತ್ರದ ನಾಟು ನಾಟು (Naatu Naatu) ಹಾಡಿಗೆ ಆಸ್ಕರ್ (Oscar) ಸಿಕ್ಕಿದ್ದಕ್ಕೆ ಸಂಭ್ರಮಾಚರಣೆ ಇನ್ನೂ ನಡೆಯುತ್ತಲೇ ಇದೆ. ಸಿನಿಮಾ ಸಕ್ಸಸ್ ನಡುವೆ ಹೊಸ ಸಿನಿಮಾಗಳತ್ತ ರಾಮ್ ಚರಣ್ ಗಮನ ಕೊಡುತ್ತಿದ್ದಾರೆ. ಇದನ್ನೂ ಓದಿ: ಶೋಭಿತಾ ಜೊತೆ ಡೇಟಿಂಗ್‌, ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದ ನಾಗಚೈತನ್ಯ

    ರಾಮ್ ಚರಣ್ ಅವರು ಸಿನಿಮಾ ಆಯ್ಕೆಯಲ್ಲಿ ಅವರು ಹೆಚ್ಚು ಚ್ಯೂಸಿ. ಕುಟುಂಬದ ಕಡೆ ಗಮನ ನೀಡುವ ಕಾರಣಕ್ಕೆ ಪ್ರತಿ ಸಿನಿಮಾ ಕೆಲಸಗಳ ಮಧ್ಯೆ ದೊಡ್ಡ ಬ್ರೇಕ್ ತೆಗೆದುಕೊಳ್ಳುತ್ತಾರೆ. ಸದ್ಯ ಅವರು 15ನೇ ಸಿನಿಮಾ `ಗೇಮ್ ಚೇಂಜರ್’ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಇದರ ಜೊತೆ ಜೊತೆಗೆ ಅವರು ಹೊಸ ಸಿನಿಮಾ ಕೂಡ ಒಪ್ಪಿಕೊಳ್ಳುತ್ತಿದ್ದಾರೆ. ರಾಮ್ ಚರಣ್ ಅವರು ಮುಂದಿನ ದಿನಗಳಲ್ಲಿ ಕೆಜಿಎಫ್ ಡೈರೆಕ್ಟರ್ ಪ್ರಶಾಂತ್ ನೀಲ್ (Prashanth Neel) ಹಾಗೂ ನರ್ತನ್ (Narthan) ಜೊತೆ ಕೆಲಸ ಮಾಡುತ್ತಾರೆ ಎನ್ನಲಾಗಿದೆ.

    ನರ್ತನ್ ಹಾಗೂ ಪ್ರಶಾಂತ್ ನೀಲ್ ಅವರು ರಾಮ್ ಚರಣ್ ಬರ್ತಡೇ ಕಾಣಿಸಿಕೊಂಡಿದ್ದಾರೆ. ರಾಮ್ ಚರಣ್ ಆಯೋಜಿಸಿದ್ದ ಪಾರ್ಟಿಗೆ ಹಾಜರಿ ಹಾಕಿದವರಲ್ಲಿ ಬಹುತೇಕರು ರಾಮ್ ಚರಣ್ ಜೊತೆ ಕೆಲಸ ಮಾಡಿದವರೇ ಆಗಿದ್ದರು. ನರ್ತನ್ ಹಾಗೂ ಪ್ರಶಾಂತ್ ನೀಲ್ ಈವರೆಗೆ ರಾಮ್ ಚರಣ್ ಜೊತೆ ಕೆಲಸ ಮಾಡಿಲ್ಲ. ಆದರೆ ಈ ಪಾರ್ಟಿಗೆ ಅವರಿಗೆ ಆಹ್ವಾನ ಇತ್ತು. ಈ ಕಾರಣಕ್ಕೆ ಇಬ್ಬರೂ ಸಿನಿಮಾ ಮಾಡೋದು ಬಹುತೇಕ ಖಚಿತ ಎನ್ನಲಾಗುತ್ತಿದೆ.

  • ರಾಮ್ ಚರಣ್ ನಟನೆಯ ಹೊಸ ಚಿತ್ರದ ಟೈಟಲ್ ಅನೌನ್ಸ್‌

    ರಾಮ್ ಚರಣ್ ನಟನೆಯ ಹೊಸ ಚಿತ್ರದ ಟೈಟಲ್ ಅನೌನ್ಸ್‌

    `ಆರ್‌ಆರ್‌ಆರ್’ (RRR) ಚಿತ್ರದ ಸೂಪರ್ ಡೂಪರ್ ಸಕ್ಸಸ್ ನಂತರ ರಾಮ್ ಚರಣ್ (Ram Charan) ನಿರ್ದೇಶಕ ಶಂಕರ್ (Shankar) ಜೊತೆ ಕೈಜೋಡಿಸಿದ್ದಾರೆ. ರಾಮ್ ಚರಣ್ ಅವರ ಹುಟ್ಟುಹಬ್ಬದ (ಮಾ.27) ಸಂದರ್ಭದಲ್ಲಿ ತಮ್ಮ ಹೊಸ ಚಿತ್ರದ ಟೈಟಲ್ ಅನೌನ್ಸ್ ಮಾಡಿದ್ದಾರೆ.

    ರಾಮ್ ಚರಣ್ ಕುಟುಂಬದಲ್ಲಿ ಇದೀಗ ಡಬಲ್ ಸಂಭ್ರಮ. ಒಂದ್‌ಕಡೆ `ನಾಟು ನಾಟು’ (Naatu Naatu) ಹಾಡಿಗೆ ಆಸ್ಕರ್ (Oscar)  ಸಿಕ್ಕಿರೋದು. ಮತ್ತೊಂದು ಕಡೆ ತಮ್ಮ ಹುಟ್ಟುಹಬ್ಬದ ದಿನ ಹೊಸ ಚಿತ್ರದ ಟೈಟಲ್ ಘೋಷಣೆ ಮಾಡಿರೋದು. ರಾಮ್ ಚರಣ್-ನಿರ್ದೇಶಕ ಶಂಕರ್ ಕಾಂಬಿನೇಷನ್ ಹೊಸ ಸಿನಿಮಾದ ಟೈಟಲ್ ಯಾವುದು ಎಂಬ ಕುತೂಹಲಕ್ಕೆ ಇದೀಗ ತೆರೆಬಿದ್ದಿದೆ.

     

    View this post on Instagram

     

    A post shared by Ram Charan (@alwaysramcharan)

    `ಗೇಮ್ ಚೇಂಜರ್’ ಎಂಬ ಪವರ್‌ಫುಲ್ ಟೈಟಲ್ ಅನ್ನ ರಾಮ್ ಚರಣ್ ನಟನೆಯ ಚಿತ್ರಕ್ಕೆ ಇಡಲಾಗಿದೆ. ಚರಣ್‌ಗೆ ಜೋಡಿಯಾಗಿ ಕಿಯಾರಾ ಅಡ್ವಾಣಿ ನಟಿಸಿದ್ದಾರೆ. ದಿಲ್ ರಾಜು ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಹೊಸ ಬಗೆಯ ಕಥೆಯಲ್ಲಿ ಚರಣ್ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ:ತೆಲಂಗಾಣಕ್ಕೆ ತೆರಳಿ ಪತ್ನಿಗೆ ವಸಿಷ್ಠ ಸಿಂಹ ಸರ್ಪ್ರೈಸ್

    ಇನ್ನೂ ಸೋಮವಾರ (ಮಾ.27) ರಾಮ್ ಚರಣ್ ಹುಟ್ಟುಹಬ್ಬವಿರುವ ಕಾರಣ ಒಂದು ದಿನ ಮುಂಚಿತವಾಗಿಯೇ `ಗೇಮ್ ಚೇಂಜರ್’ ಸಿನಿಮಾ ತಂಡ ಚರಣ್ ಬರ್ತ್ಡೇ ಮಾಡಿ ಸಂಭ್ರಮಿಸಿದ್ದಾರೆ.