Tag: ಗೇಮ್‌ ಚೇಂಜರ್‌

  • `ರಾಮ್‌ಚರಣ್‌ಗೆ ಚಿತ್ರ ಮಾಡಿ ಕೆಟ್ಟೆ’ ಎಂದ ಪ್ರೊಡ್ಯೂಸರ್

    `ರಾಮ್‌ಚರಣ್‌ಗೆ ಚಿತ್ರ ಮಾಡಿ ಕೆಟ್ಟೆ’ ಎಂದ ಪ್ರೊಡ್ಯೂಸರ್

    ತ್ತೀಚೆಗೆ ಸ್ಟಾರ್ ನಟರ ಮೇಲೆ ನಂಬಿಕೆಯಿಂದ ಕೋಟಿ ಕೋಟಿ ಸುರಿಯಲಾಗುತ್ತೆ. ಪ್ಯಾನ್ ಇಂಡಿಯಾ (Pan India) ಕಾನ್ಸೆಪ್ಟ್ ಹೆಸರಲ್ಲಿ ಕೋಟಿ ರೂಪಾಯಿಗಳು ನೂರು ಕೋಟಿ ಗಡಿಯನ್ನು ಸುಲಭವಾಗಿ ದಾಟಿ ನಿರ್ಮಾಪಕರ ಕೈ ಚೆಲ್ಲಿ ಹೋಗುತ್ತೆ. ಆದರೆ ಅದೆಷ್ಟೋ ಸ್ಟಾರ್ ನಟರ ಚಿತ್ರಗಳು ಬಿಡುಗಡೆಯಾದ ಬಳಿಕ ಲಾಭ ಇರಲಿ ಕನಿಷ್ಟ ಪಕ್ಷ ಹಾಕಿದ ಕಾಸಿಗೂ ಬರಕತ್ತಾಗುವುದಿಲ್ಲ.

    ನಟರು, ನಿರ್ದೇಶಕರು, ತಂತ್ರಜ್ಞರು ಅವರವರ ಕಾಸು ಪಡೆದು ಬೇರೆ ಚಿತ್ರದ ಕಡೆ ಮುಖ ಮಾಡ್ತಾರೆ. ಅವರ ಮೇಲೆ ಆ ಸಿನಿಮಾ ಆರ್ಥಿಕ ನಷ್ಟವನ್ನಂತೂ ಮಾಡೋದಿಲ್ಲ. ಆದರೆ ಬಿಗ್ ಬಜೆಟ್ ಸಿನಿಮಾಕ್ಕಾಗಿ ಕೋಟಿ ಕೋಟಿ ಬಂಡವಾಳ ಹಾಕಿ ಲಾಭದ ಕನಸು ಕಂಡು ಹಣವನ್ನ ನೀರಿನಂತೆ ಖರ್ಚು ಮಾಡುವ ನಿರ್ಮಾಪಕ ಮಾತ್ರ ಅಕ್ಷರಶಃ ಬೀದಿಗೆ ಬರುತ್ತಾನೆ. ಆ ಕ್ಷಣಕ್ಕೆ ಆತ ತನ್ನ ನೋವನ್ನ ಸಾರ್ವಜನಿಕವಾಗಿ ಹಂಚಿಕೊಳ್ಳದಿದ್ದರೂ ಒಂದಲ್ಲ ಒಂದುದಿನ ಹತಾಶೆಯಲ್ಲಿ ನೊಂದು ಬೆಂದ ಆತನ ಸಹನೆಯ ಕಟ್ಟೆ ಒಡೆದುಹೋಗುತ್ತೆ. ಇದೀಗ ಟಾಲಿವುಡ್‌ನ (Tollywood) ಖ್ಯಾತ ನಿರ್ಮಾಪಕ ದಿಲ್‌ರಾಜು (Dil Raju) ಇಂಥದ್ದೇ ಸೋಲಿನ ಕಥೆಯನ್ನ ಹೊರಹಾಕಿದ್ದು ರಾಮ್‌ಚರಣ್ ನಟನೆಯ ಚಿತ್ರದ ಅಸಲಿ ಸತ್ಯ ಕೊನೆಗೂ ಕಕ್ಕಿದ್ದಾರೆ.

    ಅಂದಹಾಗೆ ಈ ದಿಲ್‌ರಾಜು ಟಾಲಿವುಡ್‌ ಖ್ಯಾತ ಹಾಗೂ ಹಿರಿಯ ನಿರ್ಮಾಪಕ. ಅದೆಷ್ಟೋ ಹಿಟ್ ಸಿನಿಮಾಗಳನ್ನ ಕೊಟ್ಟು ಸಿನಿಮಾದಲ್ಲೇ ಬದುಕು ಕಟ್ಟಿಕೊಂಡು ಅಲ್ಲಿಯೇ ಹಣ ಸುರಿಯುತ್ತಿದ್ದಾರೆ. ಇದೀಗ ಭಾರೀ ನಿರೀಕ್ಷೆಯಲ್ಲಿ ಮಾಡಿದ್ದ ಚಿತ್ರ ತಮ್ಮ ಜೀವನಕ್ಕೆ ಅದೆಂಥಾ ಪಾಠ ಕಲಿಸಿದೆ ಅನ್ನೋದನ್ನ ಈ ನಿರ್ಮಾಪಕ ಖಾಸಗಿ ಯೂಬ್ಯೂಬ್ ಚಾನಲ್‌ಗೆ ನೀಡಿರುವ ಸಂದರ್ಶನದಲ್ಲಿ ಬಿಟ್ಟಿದ್ದಾರೆ. ದನ್ನೂ ಓದಿ: ಎಷ್ಟೇ ದುಡ್ಡು ಕೊಟ್ರೂ `ಆ’ ಕೆಲಸ ಮಾಡಲ್ಲವೆಂದ ರಶ್ಮಿಕಾ!

    ಭರ್ತಿ 350-400 ಕೋಟಿ ರೂ.ವರೆಗೆ ಖರ್ಚು ಮಾಡಿ ಬಿಡಿಗಾಸನ್ನೂ ವಾಪಸ್ ಪಡೆಯದ ಚಿತ್ರವೇ ಗೇಮ್ ಚೇಂಜರ್ (Game Changer). ದಕ್ಷಿಣ ಭಾರತದ ಚಿತ್ರರಂಗದ ದ ಗ್ರೇಟ್ ಡೈರೆಕ್ಟರ್ ಶಂಕರ್ ನಿರ್ದೇಶನದಲ್ಲಿ ಆರ್‌ಆರ್‌ಆರ್ (RRR) ಮೂಲಕ ಭಾರೀ ಬ್ರೇಕ್ ಪಡೆದ ಸೂಪರ್ ಸ್ಟಾರ್ ರಾಮ್‌ಚರಣ್ (Ram Charan) ನಟನೆಯ ಚಿತ್ರ ಇದಾಗಿತ್ತು. ಜನವರಿಯಲ್ಲಿ ರಿಲೀಸ್ ಆಗಿದ್ದ ಚಿತ್ರ ಹೀನಾಯ ಸೋತಿತ್ತು. ಈಗ ಸಿನಿಮಾ ಸೋತಿರುವ ವಿಚಾರವನ್ನ ಖುದ್ದು ನಿರ್ಮಾಪಕ ದಿಲ್‌ರಾಜು ಬಾಯ್ಬಿಟ್ಟಿದ್ದಾರೆ. ಕೋಟಿ ಕೋಟಿ ಹಣ ನಷ್ಟ ಮಾಡಿಕೊಂಡ ನಿರ್ಮಾಪಕ ಆ ಸೋಲಿನಿಂದ ಇನ್ನೂ ಹೊರಬಂದಿಲ್ಲ ಅನ್ನೋದನ್ನ ಹೇಳಿಕೊಂಡಿದ್ದಾರೆ.

    ಸಿನಿಮಾಗಳು ಸೋತರೂ ಹೀರೋಗಳ ಮಾರ್ಕೆಟ್‌ ಬಿದ್ದು ಹೋಗದಿರಲು ಗೆದ್ದಿದೆ ಎಂದು ಹೇಳುವ ಒಂದು ವರ್ಗವಿದೆ. ಆದರೆ ಅಸಲಿಯಾಗಿ ಅದರ ಹೊಡೆತ ಅನುಭವಿಸುವುದು ನಿರ್ಮಾಪಕ, ಹೀಗಾಗಿ ದಿಲ್‌ರಾಜು ರಾಮ್‌ಚರಣ್ ನಟನೆಯ ಗೇಮ್ ಚೇಂಜರ್ ಚಿತ್ರ ರಿಲೀಸ್ ಆಗಿ 6 ತಿಂಗಳ ಬಳಿಕ ಸತ್ಯ ಬಾಯ್ಬಿಟ್ಟಿದ್ದು, ಆ ಚಿತ್ರ ನನಗೆ ದೊಡ್ಡ ಪಾಠ ಕಲಿಸಿದೆ ಎಂದಿದ್ದಾರೆ.

    ಸ್ಟಾರ್ ಹೀರೋ ಸ್ಟಾರ್ ನಿರ್ದೇಶಕ ಎಂದ ಮಾತ್ರ ಚಿತ್ರ ಗೆಲ್ಲೋದಿಲ್ಲ. ಚಿತ್ರದಲ್ಲಿ ಸತ್ವ ಇರಬೇಕು ಅನ್ನೋದು ದಿಲ್‌ರಾಜು ಮಾತಿನ ಒಳಾರ್ಥ. ಹೀಗೆ ಸಿನಿಮಾ ಸ್ಟಾರ್ ಸಿನಿಮಾ ಹೆಸರಿನಲ್ಲಿ ಕೈಸುಟ್ಕೊಂಡ ಎಷ್ಟೋ ನಿರ್ಮಾಪಕರಿದ್ದಾರೆ. ದುಡ್ಡು ಮಾಡಿದವರೂ ಇದ್ದಾರೆ. ಆದರೆ ಸತ್ಯ ಹೇಳಲಾರದೇ ಒದ್ದಾಡುವ ಸ್ಥಿತಿ ಅವರಿಗಿದೆ. ಆದರೆ ದಿಲ್‌ರಾಜು ದೊಡ್ಡ ನಿರ್ಮಾಪಕ ಆಗಿರೋದ್ರಿಂದ ಎಲ್ಲವನ್ನೂ ಧಕ್ಕಿಸಿಕೊಳ್ಳುತ್ತಿದ್ದಾರೆ ಅಷ್ಟೇ.

  • ʻಗೇಮ್‌ ಚೇಂಜರ್‌ʼ ಸಿನಿ ನಿರ್ಮಾಪಕ ದಿಲ್‌ ರಾಜುಗೆ ಐಟಿ ಶಾಕ್‌ – 55 ತಂಡ, 8 ಕಡೆ ಏಕಕಾಲಕ್ಕೆ ದಾಳಿ

    ʻಗೇಮ್‌ ಚೇಂಜರ್‌ʼ ಸಿನಿ ನಿರ್ಮಾಪಕ ದಿಲ್‌ ರಾಜುಗೆ ಐಟಿ ಶಾಕ್‌ – 55 ತಂಡ, 8 ಕಡೆ ಏಕಕಾಲಕ್ಕೆ ದಾಳಿ

    ನಟ ರಾಮ್‌ ಚರಣ್‌ ಅಭಿನಯದ ʻಗೇಮ್‌ ಚೇಂಜರ್‌ʼ (Game Changer) ಸೇರಿದಂತೆ ಹಿಟ್‌ ಸಿನಿಮಾಗಳ ನಿರ್ಮಾಪಕ ದಿಲ್‌ ರಾಜು (Dil Raju) ಅವರಿಗೆ ಆದಾಯ ತೆರಿಗೆ ಇಲಾಖೆ (Income Tax officer) ಶಾಕ್‌ ಕೊಟ್ಟಿದೆ.

    ಒಟ್ಟು 55 ತಂಡಗಳು ನಿರ್ಮಾಪಕ ದಿಲ್‌ ರಾಜು ಅವರ ಮನೆ, ಕಚೇರಿ ಸೇರಿದಂತೆ 8 ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿವೆ. ಹೈದರಾಬಾದ್‌ನ ಜೂಬ್ಲಿಹಿಲ್ಸ್, ಬಂಜಾರಹಿಲ್ಸ್‌ನಲ್ಲಿರುವ ನಿವಾಸಗಳ ಮೇಲೆ, ದಿಲ್ ರಾಜು ಸಹೋದರ ಶಿರೀಷ್, ಪುತ್ರಿ ಹನ್ಸಿತ ರೆಡ್ಡಿ ಹಾಗೂ ಸಂಬಂಧಿಕರ ಮನೆಗಳ ಮೇಲೂ ಐಟಿ ದಾಳಿ ನಡೆಸಿದ್ದು, ತೀವ್ರ ಶೋಧ ಕಾರ್ಯಾಚರಣೆ ನಡೆಸುತ್ತಿದೆ. ಇದನ್ನೂ ಓದಿ: ಬೆಂಬಲ ತೊಗರಿ ಖರೀದಿ ಶುರು – ಜಿಲ್ಲೆಯಾದ್ಯಂತ 177 ಖರೀದಿ ಕೇಂದ್ರ ಸ್ಥಾಪನೆ

    ಇತ್ತೀಚೆಗಷ್ಟೇ ದೊಡ್ಡ ಬಜೆಟ್‌ ಸಿನಿಮಾ ʻಗೇಮ್ ಚೇಂಜರ್ʼ ನಿರ್ಮಿಸಿದ್ದರು. ಇದು ಬಾಕ್ಸ್‌ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ಅದೇ ಹೊತ್ತಿಗೆ ಕಡಿಮೆ ಬಜೆಟ್‌ನಲ್ಲಿ ನಿರ್ಮಾಣ ಮಾಡಿದ ʻಸಂಕ್ರಾಂತಿಕಿ ವಸ್ತುನ್ನಾಂʼ ಸಿನಿಮಾ ಕೂಡ ಭರ್ಜರಿ ಕಲೆಕ್ಷನ್‌ ಮಾಡುತ್ತಿದೆ. ಈ ನಡುವೆ ಐಟಿ ಅಧಿಕಾರಿಗಳು ನಿರ್ಮಾಪಕರಿಗೆ ಶಾಕ್‌ ಕೊಟ್ಟಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ICAT ಕೇಂದ್ರ ಸ್ಥಾಪನೆ ಖಚಿತ – ಉನ್ನತ ಅಧಿಕಾರಿಗಳೊಂದಿಗೆ ಹೆಚ್‌ಡಿಕೆ ಚರ್ಚೆ

  • ‘ಪುಷ್ಪ 2’ ಎಫೆಕ್ಟ್: ರಾಮ್ ಚರಣ್ ನಟನೆಯ ‘ಗೇಮ್ ಚೇಂಜರ್’ ಚಿತ್ರಕ್ಕೆ ಶಾಕ್ ಕೊಟ್ಟ ಸರ್ಕಾರ

    ‘ಪುಷ್ಪ 2’ ಎಫೆಕ್ಟ್: ರಾಮ್ ಚರಣ್ ನಟನೆಯ ‘ಗೇಮ್ ಚೇಂಜರ್’ ಚಿತ್ರಕ್ಕೆ ಶಾಕ್ ಕೊಟ್ಟ ಸರ್ಕಾರ

    ರಾಮ್ ಚರಣ್ (Ram Charan) ನಟನೆಯ ‘ಗೇಮ್ ಜೇಂಜರ್’ (Game Changer) ಜ.10ರಂದು ರಿಲೀಸ್ ಆಗುತ್ತಿದೆ. ಈ ಬೆನ್ನಲ್ಲೇ ಚಿತ್ರತಂಡಕ್ಕೆ ಸರ್ಕಾರ ಶಾಕ್‌ ಕೊಟ್ಟಿದೆ. ‘ಗೇಮ್ ಜೇಂಜರ್’ ಚಿತ್ರದ ಮಧ್ಯರಾತ್ರಿ ಶೋಗೆ ಅನುಮತಿ ನೀಡಲು ನಿರಾಕರಿಸಿದೆ. ‘ಪುಷ್ಪ 2’ ಕಾಲ್ತುಳಿತ ಪ್ರಕರಣದ ಬಳಿಕ ತೆಲಂಗಾಣ ಸರ್ಕಾರ ಎಚ್ಚೆತ್ತುಕೊಂಡಿದೆ.

    ನಾಳೆ (ಜ.10) ‘ಗೇಮ್ ಜೇಂಜರ್’ ಸಿನಿಮಾದ ಪ್ರದರ್ಶನವನ್ನು ಮಧ್ಯರಾತ್ರಿ ಆಯೋಜಿಸಲಾಗಿತ್ತು. ‘ಪುಷ್ಪ 2’ ವಿವಾದ ತಣ್ಣಗಾಗದ ಹಿನ್ನೆಲೆ ತೆಲಂಗಾಣ ಸರ್ಕಾರ ಶೋಗೆ ಚಿತ್ರತಂಡಕ್ಕೆ ಅನುಮತಿ ನೀಡಲು ನಿರಾಕರಿಸಿದೆ. ಆದರೆ, ಟಿಕೆಟ್ ದರ ಏರಿಕೆಗೆ ಸರ್ಕಾರ ಒಪ್ಪಿಗೆ ನೀಡಿದೆ.

    ಮಲ್ಟಿಪ್ಲೆಕ್ಸ್‌ನಲ್ಲಿ 150 ರೂಪಾಯಿ ಹಾಗೂ ಥಿಯೇಟರ್‌ಗಳಲ್ಲಿ 100 ರೂಪಾಯಿ ಏರಿಕೆಗೆ ಅವಕಾಶ ನೀಡಿದೆ. ಇದು ಮೊದಲ ದಿನ ಮಾತ್ರ. ಜನವರಿ 11ರಿಂದ ಮಲ್ಟಿಪ್ಲೆಕ್ಸ್‌ನಲ್ಲಿ 100 ರೂಪಾಯಿ ಹಾಗೂ ಥಿಯೇಟರ್‌ಗಳಲ್ಲಿ 50 ರೂಪಾಯಿ ಏರಿಕೆಗೆ ಅವಕಾಶ ನೀಡಲಾಗಿದೆ.

    ಇನ್ನೂ ರಾಮ್ ಚರಣ್ ನಾಯಕಿಯಾಗಿ ಈ ಸಿನಿಮಾದಲ್ಲಿ ಕಿಯಾರಾ ಅಡ್ವಾಣಿ (Kiara Advani) ನಟಿಸಿದ್ದಾರೆ. ಶಂಕರ್ (Shankar) ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ.

  • ರಾಮ್ ಚರಣ್ ನಟನೆಯ ಗೇಮ್ ಚೇಂಜರ್ ಬಿಗ್ ಅಪ್‌ಡೇಟ್

    ರಾಮ್ ಚರಣ್ ನಟನೆಯ ಗೇಮ್ ಚೇಂಜರ್ ಬಿಗ್ ಅಪ್‌ಡೇಟ್

    ಆರ್‌ಆರ್‌ಆರ್ (RRR) ಸಿನಿಮಾ ನಂತರ ಗ್ಲೋಬಲ್‌ಸ್ಟಾರ್ ರಾಮ್‌ಚರಣ್ (Ram Charan )ನಟನೆಯ ಭಾರೀ ನಿರೀಕ್ಷೆ ಹುಟ್ಟಿಸಿರುವ ಸಿನಿಮಾ `ಗೇಮ್ ಚೇಂಜರ್’. ಸದ್ಯ ತಮ್ಮ ಅಭಿಮಾನಿಗಳಿಗೆ ರಾಮ್‌ಚರಣ್ ಗುಡ್‌ನ್ಯೂಸ್ ಕೊಟ್ಟಿದ್ದಾರೆ. ಗ್ಲೋಬಲ್‌ಸ್ಟಾರ್ ಕೊಟ್ಟ ಸಿಹಿ ಸುದ್ದಿಗೆ ಫ್ಯಾನ್ಸ್ ಖುಷಿಯಿಂದ ಕುಣಿದಾಡಿದ್ದಾರೆ. ಹೌದು, ಗೇಮ್ ಚೇಂಜರ್ (Game Changer) ಸಿನಿಮಾದ ಮೊದಲ ಸಾಂಗ್ ರಿಲೀಸ್ ಆಗಿ ಫ್ಯಾನ್ಸ್ ರಣಕೇಕೆ ಹಾಕಿಯಾಗಿದೆ. ಇದೀಗ ಸೆಕೆಂಡ್ ಸಿಂಗಲ್ ಸರದಿ.

    ರಾಮ್ ಚರಣ್ ಹಾಗೂ ಕಿಯಾರ ಅಡ್ವಾನಿ ಜೋಡಿ ಫಸ್ಟ್ ಸಿಂಗಲ್ `ಜರಗಂಡಿ’ ಮೂಲಕ ಗಮನ ಸೆಳೆದಿದೆ. ಇದೀಗ ಈ ಸಿನಿಮಾದ ಸೆಕೆಂಡ್ ಸಿಂಗಲ್‌ಗೆ ಮುಹೂರ್ತ ಫಿಕ್ಸ್ ಆಗಿದೆ. ಇದೇ ಸೆಪ್ಟಂಬರ್ 28ಕ್ಕೆ ಎರಡನೇ ಹಾಡು ರಿಲೀಸ್ ಆಗ್ತಿದೆ. ಈ ಬಗ್ಗೆ ಚಿತ್ರತಂಡ ಖಚಿತಪಡಿಸಿದೆ. ಡೇಟ್ ಅನೌನ್ಸ್ ಮಾಡಿರುವ ಪೋಸ್ಟರ್‌ನಲ್ಲಿ ಸಾಂಗ್ ನೇಮ್ `ರಾ ಮಚ್ಚಾ ಮಚ್ಚಾ’ ಕೂಡಾ ರಿವೀಲ್ ಮಾಡಿದೆ ಚಿತ್ರತಂಡ. ಇದನ್ನೂ ಓದಿ: `ಮನೆ ಒಳಗೆ ಬಿಟ್ಟುಕೊಳ್ತಿಲ್ಲ ಪತ್ನಿ’ – ಪೊಲೀಸರ ಮೊರೆ ಹೋದ ಜಯಂ ರವಿ

    ಶಂಕರ್.ಎಸ್ ನಿರ್ದೇಶನದಲ್ಲಿ ಮೂಡಿ ಬರ್ತಿರುವ ಚಿತ್ರ ಅಂದ್ರೆ ಕೇಳ್ಬೇಕಾ? ಸಹಜವಾಗಿಯೇ `ಗೇಮ್ ಚೇಂಜರ್’ ಮೇಲೆ ಮತ್ತಷ್ಟು ಕ್ಯೂರಿಯಾಸಿಟಿ ಜಾಸ್ತಿಯಾಗಿದೆ. ಹಬ್ಬಕ್ಕೆ ತಮ್ಮ ಭಕ್ತಗಣಕ್ಕೆ ರಾಮ್ ಚರಣ್ ಮಸ್ತ್ ಸ್ಟೆಪ್ ಹಾಕುವ ಹಾಡೊಂದು ಉಡುಗೊರೆಯಾಗಿ ನೀಡ್ತಿದ್ದಾರೆ ಅಂತಾ ಅವ್ರ ಅಭಿಮಾನಿಗಳು ಕುಣಿಯೋಕೆ ಕಾದು ಕುಳಿತಿದ್ದಾರೆ. ಇದನ್ನೂ ಓದಿ: ರಂಗೀಲಾ ಬೆಡಗಿ ಊರ್ಮಿಳಾ ವಿಚ್ಛೇದನ !

    ಸಾಂಗ್ `ರಾ ಮಚ್ಚಾ ಮಚ್ಚಾ’ ಅನ್ನೋ ಸಾಲುಗಳಿಂದ ಸ್ಟಾರ್ಟ್ ಆಗಬಹುದೇನೋ ಆದ್ರೆ, ರಾಮ್‌ಚರಣ್ ಲುಕ್ ಮಾತ್ರ ಡಿಸೆಂಟ್ ಆಗಿ ಆಫೀಸರ್ ಥರ ಕಾಣಿಸಿಕೊಂಡಿದ್ದಾರೆ. `ತ್ರಿಪಲ್ ಆರ್’ ಸಿನಿಮಾದ ನಂತರ ಮತ್ತೊಂದು ವಿಭಿನ್ನ ರೀತಿಯ ಸಿನಿಮಾವನ್ನ ಮಾಡಿದ್ದಾರೆ ರಾಮ್ ಚರಣ್. ಜೊತೆಗೆ ಚಿತ್ರದ ಮೇಲೆ ಬೆಟ್ಟದಷ್ಟು ನಿರೀಕ್ಷೆಯನ್ನಿಟ್ಟುಕೊಂಡು ಕುಳಿತಿದೆ ಟೀಮ್. ನಿರ್ದೇಶಕ ಶಂಕರ್.ಎಸ್ ಹಾಗೂ ರಾಮ್ ಚರಣ್ ಫಸ್ಟ್ ಕಾಂಬೋ ಹೇಗೆ ವರ್ಕೌಟ್ ಆಗುತ್ತೆ ಅನ್ನೋ ಮಹಾ ನಿರೀಕ್ಷೆಗಳು, ಲೆಕ್ಕಾಚಾರಗಳು ಸೌತ್‌ನಲ್ಲಿ ಚರ್ಚೆಯಾಗ್ತಿವೆ.

     

  • ‘ಗೇಮ್ ಚೇಂಜರ್’ ಫೋಟೋ ಲೀಕ್ : ರಾಮ್ ಚರಣ್ ಲುಕ್ ಗೆ ಫ್ಯಾನ್ಸ್ ಜೈ ಹೋ

    ‘ಗೇಮ್ ಚೇಂಜರ್’ ಫೋಟೋ ಲೀಕ್ : ರಾಮ್ ಚರಣ್ ಲುಕ್ ಗೆ ಫ್ಯಾನ್ಸ್ ಜೈ ಹೋ

    ಗೇಮ್ ಚೇಂಜರ್ ಸಿನಿಮಾಗೆ ಒಂದಿಲ್ಲೊಂದು ಕಂಠಕ ಎದುರಾಗುತ್ತಲೇ ಇದೆ. ಇದೀಗ ರಾಮ್ ಚರಣ್ ಶೂಟಿಂಗ್ ಸ್ಪಾಟ್ ನಲ್ಲಿದ್ದ ಫೋಟೋವೊಂದು ಲೀಕ್ ಆಗಿದ್ದು, ಅವರ ಲುಕ್ (Look) ರಿವಿಲ್ ಆಗಿದೆ. ರಾಮ್ ಚರಣ್ ಲುಕ್ ಕಂಡು ಫ್ಯಾನ್ಸ್ ಸಂಭ್ರಮಸಿದ್ದಾರೆ. ಅಭಿಮಾನಿಗಳಿಗೆ ಇಂದು ಸಂಭ್ರಮದ ಸಂಗತಿಯಾದರೆ, ಚಿತ್ರತಂಡಕ್ಕೆ ಶಾಕ್ ನೀಡಿದೆ. ಎಷ್ಟೇ ಗೌಪ್ಯತೆಯನ್ನು ಕಾಪಾಡಿದರೂ, ಲೀಕ್ ಆಗುವುದನ್ನು ತಡೆಯೋಕೆ ಆಗುತ್ತಿಲ್ಲವೆಂದು ಚಿತ್ರತಂಡ ಬೇಸರ ವ್ಯಕ್ತ ಪಡಿಸಿದೆ.

    ಖ್ಯಾತ ನಿರ್ದೇಶಕ ಶಂಕರ್ (Shankar) ಮತ್ತು ರಾಮ್ ಚರಣ್ ಕಾಂಬಿನೇಷನ್ ನ ಗೇಮ್ ಚೇಂಜರ್ ಸಿನಿಮಾದ ಕಥೆ ಲೀಕ್ ಆಗಿದೆ ಎನ್ನುವ ಮಾಹಿತಿಯೂ ಈ ಹಿಂದೆ ಹರಿದಾಡಿತ್ತು. ಪವನ್ ಕಲ್ಯಾಣ್ (Pawan Kalyan) ಬದುಕಿನ ಕುರಿತಾದ ಕಥೆಯು ಸಿನಿಮಾದಲ್ಲಿದ್ದು, ಪವನ್ ಕಲ್ಯಾಣ್ ಪಾತ್ರವನ್ನು ರಾಮ್ ಚರಣ್ (Ram Charan) ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಈ ಕುರಿತಂತೆ ಚಿತ್ರತಂಡ ಯಾವುದೇ ಮಾಹಿತಿ ಸಿಕ್ಕಿಲ್ಲ.

    ಈ ನಡುವೆ ಮತ್ತೊಂದು ಸುದ್ದಿ ಸಖತ್ ಚರ್ಚೆಗೆ ಗ್ರಾಸವಾಗಿದ್ದು, ‘ಗೇಮ್ ಜೇಂಜರ್’ (Game Changer) ಸಿನಿಮಾ ಎರಡು ಭಾಗಗಳಾಗಿ ತೆರೆಯ ಮೇಲೆ ಅಬ್ಬರಿಸಲಿದೆಯಂತೆ. ಸದ್ಯ ಈ ಸುದ್ದಿ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ‘ಆರ್‌ಆರ್‌ಆರ್’ (RRR) ಸಿನಿಮಾದ ಸಕ್ಸಸ್ ನಂತರ ಎಸ್. ಶಂಕರ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘ಗೇಮ್ ಚೇಂಜರ್’ ಸಿನಿಮಾದಲ್ಲಿ ರಾಮ್ ಚರಣ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಶೂಟಿಂಗ್ ಇತ್ತೀಚೆಗೆ ಮೈಸೂರಿನಲ್ಲಿ ನಡೆದಿತ್ತು. ಆದರೆ ಸಿನಿಮಾಗೂ ಮೈಸೂರಿಗೂ ಏನು ಲಿಂಕ್ ಎಂಬುದರ ಬಗ್ಗೆ ಫ್ಯಾನ್ಸ್‌ಗೆ ಕುತೂಹಲವಿದೆ.

    ‘ಬಾಹುಬಲಿ 2’ ರಿಲೀಸ್ ಆದ ಬಳಿಕ ಎರಡು ಭಾಗಗಳಲ್ಲಿ ಕಥೆ ಹೇಳುವ ಟ್ರೆಂಡ್ ಜೋರಾಗಿದೆ. ಇದೀಗ ಬಹುತೇಕ ಸ್ಟಾರ್ ನಟರ ಸಿನಿಮಾಗಳು ಎರಡು ಭಾಗಗಳಾಗಿ ಬರುತ್ತಿವೆ. ಹಾಗಾಗಿ ‘ಗೇಮ್ ಚೇಂಜರ್’ ನಿರ್ಮಾಪಕ ದಿಲ್ ರಾಜು ಎರಡು ಪಾರ್ಟ್‌ಗಳಲ್ಲಿ ಸಿನಿಮಾ ತರೋದಕ್ಕೆ ಪ್ಲ್ಯಾನ್ ಮಾಡಿದ್ದಾರೆ. ನಾಯಕಿಯಾಗಿ ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ನಟಿಸಿದ್ದಾರೆ.

  • ರಾಮ್ ಚರಣ್ ನಟನೆಯ ‘ಗೇಮ್ ಚೇಂಜರ್’ ಕಥೆ ಲೀಕ್?

    ರಾಮ್ ಚರಣ್ ನಟನೆಯ ‘ಗೇಮ್ ಚೇಂಜರ್’ ಕಥೆ ಲೀಕ್?

    ಖ್ಯಾತ ನಿರ್ದೇಶಕ ಶಂಕರ್ (Shankar) ಮತ್ತು ರಾಮ್ ಚರಣ್ ಕಾಂಬಿನೇಷನ್ ನ ಗೇಮ್ ಚೇಂಜರ್ ಕಥೆ ಲೀಕ್ ಆಗಿದೆ ಎನ್ನುವ ಮಾಹಿತಿ ಹರಿದಾಡುತ್ತಿದೆ. ಪವನ್ ಕಲ್ಯಾಣ್ (Pawan Kalyan) ಬದುಕಿನ ಕುರಿತಾದ ಕಥೆಯು ಸಿನಿಮಾದಲ್ಲಿದ್ದು, ಪವನ್ ಕಲ್ಯಾಣ್ ಪಾತ್ರವನ್ನು ರಾಮ್ ಚರಣ್ (Ram Charan) ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಈ ಕುರಿತಂತೆ ಚಿತ್ರತಂಡ ಯಾವುದೇ ಮಾಹಿತಿ ಸಿಕ್ಕಿಲ್ಲ.

    ಈ ನಡುವೆ ಮತ್ತೊಂದು ಸುದ್ದಿ ಸಖತ್ ಚರ್ಚೆಗೆ ಗ್ರಾಸವಾಗಿದ್ದು, ‘ಗೇಮ್ ಜೇಂಜರ್’ (Game Changer) ಸಿನಿಮಾ ಎರಡು ಭಾಗಗಳಾಗಿ ತೆರೆಯ ಮೇಲೆ ಅಬ್ಬರಿಸಲಿದೆಯಂತೆ. ಸದ್ಯ ಈ ಸುದ್ದಿ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.

    ‘ಆರ್‌ಆರ್‌ಆರ್’ (RRR) ಸಿನಿಮಾದ ಸಕ್ಸಸ್ ನಂತರ ಎಸ್. ಶಂಕರ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘ಗೇಮ್ ಚೇಂಜರ್’ ಸಿನಿಮಾದಲ್ಲಿ ರಾಮ್ ಚರಣ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಶೂಟಿಂಗ್ ಇತ್ತೀಚೆಗೆ ಮೈಸೂರಿನಲ್ಲಿ ನಡೆದಿತ್ತು. ಆದರೆ ಸಿನಿಮಾಗೂ ಮೈಸೂರಿಗೂ ಏನು ಲಿಂಕ್ ಎಂಬುದರ ಬಗ್ಗೆ ಫ್ಯಾನ್ಸ್‌ಗೆ ಕುತೂಹಲವಿದೆ.

     

    ‘ಬಾಹುಬಲಿ 2’ ರಿಲೀಸ್ ಆದ ಬಳಿಕ ಎರಡು ಭಾಗಗಳಲ್ಲಿ ಕಥೆ ಹೇಳುವ ಟ್ರೆಂಡ್ ಜೋರಾಗಿದೆ. ಇದೀಗ ಬಹುತೇಕ ಸ್ಟಾರ್ ನಟರ ಸಿನಿಮಾಗಳು ಎರಡು ಭಾಗಗಳಾಗಿ ಬರುತ್ತಿವೆ. ಹಾಗಾಗಿ ‘ಗೇಮ್ ಚೇಂಜರ್’ ನಿರ್ಮಾಪಕ ದಿಲ್ ರಾಜು ಎರಡು ಪಾರ್ಟ್‌ಗಳಲ್ಲಿ ಸಿನಿಮಾ ತರೋದಕ್ಕೆ ಪ್ಲ್ಯಾನ್ ಮಾಡಿದ್ದಾರೆ. ನಾಯಕಿಯಾಗಿ ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ನಟಿಸಿದ್ದಾರೆ.

  • ಶೂಟಿಂಗ್ ದೃಶ್ಯ, ಫೋಟೋ ಸೋರಿಕೆ: ಮೈಸೂರಿನಲ್ಲಿ ಶೂಟಿಂಗ್ ಆರಂಭಿಸಿದ ಶಂಕರ್

    ಶೂಟಿಂಗ್ ದೃಶ್ಯ, ಫೋಟೋ ಸೋರಿಕೆ: ಮೈಸೂರಿನಲ್ಲಿ ಶೂಟಿಂಗ್ ಆರಂಭಿಸಿದ ಶಂಕರ್

    ಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಗೇಮ್ ಚೇಂಜರ್ ಸಿನಿಮಾದ ಶೂಟಿಂಗ್ ಮೈಸೂರಿನಲ್ಲಿ ನಡೆಯುತ್ತಿದೆ. ನಿರ್ದೇಶಕ ಶಂಕರ್ ತಮ್ಮ ಸಿನಿಮಾ ಟೀಮ್ ಅನ್ನು ಮೈಸೂರಿಗೆ ಕರೆದುಕೊಂಡು ಬರಲು ಕಾರಣ, ಚಿತ್ರದ ಶೂಟಿಂಗ್ ದೃಶ್ಯಗಳು ಮತ್ತು ಫೋಟೋಗಳು ಸೋರಿಕೆ ಆಗುತ್ತಿರುವುದು. ಹಾಗಾಗಿ, ಸೇಫ್ ಅನಿಸುವಂತಹ ಜಾಗವನ್ನು ಅವರು ಹುಡುಕಿಕೊಂಡು ಬಂದಿದ್ದಾರೆ ಎಂದು ಹೇಳಲಾಗುತ್ತಿದೆ.

    ನಿನ್ನೆಯಷ್ಟೇ ನಟ  ರಾಮ್ ಚರಣ್ (Ram Charan)  ಮೈಸೂರಿಗೆ ಬಂದಿಳಿದಿದ್ದಾರೆ. ಗೇಮ್ ಚೇಂಜರ್ ಸಿನಿಮಾದ ಶೂಟಿಂಗ್ ಗಾಗಿ ಅವರು ಹೈದರಾಬಾದ್ ನಿಂದ ಮೈಸೂರಿಗೆ ಖಾಸಗಿ ಜೆಟ್ ನಲ್ಲಿ ಆಗಮಿಸಿದ್ದಾರೆ. ಬೆಳಗ್ಗೆ ಮೈಸೂರು (Mysore) ವಿಮಾನ ನಿಲ್ದಾಣದಲ್ಲಿ ಬಂದಿಳಿದ ನಟನಿಗೆ ಸ್ವಾಗತ ಕೋರಲಾಗಿದೆ. ಮೈಸೂರಿನಲ್ಲಿ ಅವರ ನಟನೆಯ ಸಿನಿಮಾ ಶೂಟ್ ಆಗುತ್ತಿದೆ.

    ಒಂದು ಕಡೆ ಸಿನಿಮಾದ ಭರ್ಜರಿ ಚಿತ್ರೀಕರಣ ನಡೆಯುತ್ತಿದ್ದರೆ, ಮತ್ತೊಂದು ಕಡೆ ಸೋರಿಕೆಯ ಸಮಸ್ಯೆಯನ್ನು ಟೀಮ್ ಎದುರಿಸುತ್ತಿದೆ. ಸಿನಿಮಾದ ಯಾವುದೇ ವಿಷಯ ಸೋರಿಕೆ ಆಗದಂತೆ ಎಚ್ಚರಿಕೆ ತೆಗೆದುಕೊಂಡಿದ್ದರೂ, ಮೊನ್ನೆಯಷ್ಟೇ ಹಾಡಿಗೇ ಹಾಡೇ ಸೋರಿಕೆ (Song Leak) ಆಗಿ ಆತಂಕ ಮೂಡಿಸಿತ್ತು. ಈ ಕುರಿತಂತೆ ನಿರ್ಮಾಪಕರು ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಈಗಾಗಲೇ ಒಬ್ಬರನ್ನು ಅರೆಸ್ಟ್ ಕೂಡ ಮಾಡಿದ್ದಾರೆ.

    ಡೈರೆಕ್ಟರ್ ಶಂಕರ್ (Shankar) ನಿರ್ದೇಶನದ ‘ಗೇಮ್ ಚೇಂಜರ್’ನಲ್ಲಿ(Game Changer) ಕಿಯಾರಾ ಅಡ್ವಾಣಿ- ರಾಮ್ ಚರಣ್ ಜೋಡಿಯಾಗಿ ನಟಿಸಿದ್ದಾರೆ. ಈ ಸಿನಿಮಾಗೆ ಸೋರಿಕೆ ಕಾಟ ಶುರುವಾಗಿದೆ. ಸಾಕಷ್ಟು ಎಚ್ಚರಿಕೆ ವಹಿಸಿದ ಹೊರತಾಗಿಯೂ ಸಿನಿಮಾ ಸೆಟ್‌ನ ಫೋಟೋ ಲೀಕ್ ಆಗಿತ್ತು. ಇದರ ಹಿಂದೆ ಯಾರಿದ್ದಾರೆ ಎಂಬುದನ್ನು ಪತ್ತೆ ಹಚ್ಚುವ ಕಾರ್ಯ ನಡೆದಿತ್ತು. ಆದರೆ, ಕಿಡಿಗೇಡಿಗಳು ಪತ್ತೆ ಆಗಿರಲಿಲ್ಲ.

     

    ಸಮುದ್ರ ತೀರದಲ್ಲಿ ರಾಮ್ ಚರಣ್- ಕಿಯಾರಾ(Kiara Advani) ನಟಿಸುತ್ತಿರುವ ದೃಶ್ಯ ಲೀಕ್ ಆಗಿದೆ. ಇಬ್ಬರೂ ಕಪ್ಪು ಬಣ್ಣದ ಉಡುಗೆಯಲ್ಲಿ ಕಾಣಿಸಿಕೊಂಡಿದ್ದರು. ಈ ಹಿಂದೆ ‘ವಿನಯಾ ವಿಧೇಯ ರಾಮ’ ಸಿನಿಮಾದಲ್ಲಿ ಚರಣ್-ಕಿಯಾರಾ ಜೋಡಿಯಾಗಿ ನಟಿಸಿದ್ದರು. ಇದೀಗ ಗೇಮ್ ಚೇಂಜರ್‌ಗಾಗಿ ಮತ್ತೆ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಮುಂದಿನ ವರ್ಷ ಹೊಸತರಲ್ಲಿ ಚಿತ್ರ ತೆರೆಗೆ ಬರಲಿದೆ.

  • ಚಿತ್ರೀಕರಣಕ್ಕಾಗಿ ಮೈಸೂರಿಗೆ ಬಂದಿಳಿದ ರಾಮ್ ಚರಣ್

    ಚಿತ್ರೀಕರಣಕ್ಕಾಗಿ ಮೈಸೂರಿಗೆ ಬಂದಿಳಿದ ರಾಮ್ ಚರಣ್

    ತೆಲುಗಿನ ಹೆಸರಾಂತ ನಟ ರಾಮ್ ಚರಣ್ (Ram Charan)  ಇದೀಗ ಮೈಸೂರಿನಲ್ಲಿದ್ದಾರೆ. ಅವರ ಗೇಮ್ ಚೇಂಜರ್ ಸಿನಿಮಾದ ಶೂಟಿಂಗ್ ಗಾಗಿ ಅವರು ಹೈದರಾಬಾದ್ ನಿಂದ ಮೈಸೂರಿಗೆ ಖಾಸಗಿ ಜೆಟ್ ನಲ್ಲಿ ಆಗಮಿಸಿದ್ದಾರೆ. ಬೆಳಗ್ಗೆ ಮೈಸೂರು (Mysore) ವಿಮಾನ ನಿಲ್ದಾಣದಲ್ಲಿ ಬಂದಿಳಿದ ನಟನಿಗೆ ಸ್ವಾಗತ ಕೋರಲಾಗಿದೆ. ಮೈಸೂರಿನಲ್ಲಿ ಅವರ ನಟನೆಯ ಸಿನಿಮಾ ಶೂಟ್ ಆಗುತ್ತಿದೆ.

    ಒಂದು ಕಡೆ ಸಿನಿಮಾದ ಭರ್ಜರಿ ಚಿತ್ರೀಕರಣ ನಡೆಯುತ್ತಿದ್ದರೆ, ಮತ್ತೊಂದು ಕಡೆ ಸೋರಿಕೆಯ ಸಮಸ್ಯೆಯನ್ನು ಟೀಮ್ ಎದುರಿಸುತ್ತಿದೆ. ಸಿನಿಮಾದ ಯಾವುದೇ ವಿಷಯ ಸೋರಿಕೆ ಆಗದಂತೆ ಎಚ್ಚರಿಕೆ ತೆಗೆದುಕೊಂಡಿದ್ದರೂ, ಮೊನ್ನೆಯಷ್ಟೇ ಹಾಡಿಗೇ ಹಾಡೇ ಸೋರಿಕೆ (Song Leak) ಆಗಿ ಆತಂಕ ಮೂಡಿಸಿತ್ತು. ಈ ಕುರಿತಂತೆ ನಿರ್ಮಾಪಕರು ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಈಗಾಗಲೇ ಒಬ್ಬರನ್ನು ಅರೆಸ್ಟ್ ಕೂಡ ಮಾಡಿದ್ದಾರೆ.

    ಡೈರೆಕ್ಟರ್ ಶಂಕರ್ (Shankar) ನಿರ್ದೇಶನದ ‘ಗೇಮ್ ಚೇಂಜರ್’ನಲ್ಲಿ(Game Changer) ಕಿಯಾರಾ ಅಡ್ವಾಣಿ- ರಾಮ್ ಚರಣ್ ಜೋಡಿಯಾಗಿ ನಟಿಸಿದ್ದಾರೆ. ಈ ಸಿನಿಮಾಗೆ ಸೋರಿಕೆ ಕಾಟ ಶುರುವಾಗಿದೆ. ಸಾಕಷ್ಟು ಎಚ್ಚರಿಕೆ ವಹಿಸಿದ ಹೊರತಾಗಿಯೂ ಸಿನಿಮಾ ಸೆಟ್‌ನ ಫೋಟೋ ಲೀಕ್ ಆಗಿತ್ತು. ಇದರ ಹಿಂದೆ ಯಾರಿದ್ದಾರೆ ಎಂಬುದನ್ನು ಪತ್ತೆ ಹಚ್ಚುವ ಕಾರ್ಯ ನಡೆದಿತ್ತು. ಆದರೆ, ಕಿಡಿಗೇಡಿಗಳು ಪತ್ತೆ ಆಗಿರಲಿಲ್ಲ.

     

    ಸಮುದ್ರ ತೀರದಲ್ಲಿ ರಾಮ್ ಚರಣ್- ಕಿಯಾರಾ(Kiara Advani) ನಟಿಸುತ್ತಿರುವ ದೃಶ್ಯ ಲೀಕ್ ಆಗಿದೆ. ಇಬ್ಬರೂ ಕಪ್ಪು ಬಣ್ಣದ ಉಡುಗೆಯಲ್ಲಿ ಕಾಣಿಸಿಕೊಂಡಿದ್ದರು. ಈ ಹಿಂದೆ ‘ವಿನಯಾ ವಿಧೇಯ ರಾಮ’ ಸಿನಿಮಾದಲ್ಲಿ ಚರಣ್-ಕಿಯಾರಾ ಜೋಡಿಯಾಗಿ ನಟಿಸಿದ್ದರು. ಇದೀಗ ಗೇಮ್ ಚೇಂಜರ್‌ಗಾಗಿ ಮತ್ತೆ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಮುಂದಿನ ವರ್ಷ ಹೊಸತರಲ್ಲಿ ಚಿತ್ರ ತೆರೆಗೆ ಬರಲಿದೆ.

  • ರಾಮ್ ಚರಣ್ ನಟನೆಯ ‘ಗೇಮ್ ಚೇಂಜರ್’ ಸಾಂಗ್ ಲೀಕ್: ಕೇಡಿಗಳ ಅರೆಸ್ಟ್

    ರಾಮ್ ಚರಣ್ ನಟನೆಯ ‘ಗೇಮ್ ಚೇಂಜರ್’ ಸಾಂಗ್ ಲೀಕ್: ಕೇಡಿಗಳ ಅರೆಸ್ಟ್

    ತೆಲುಗಿನ ಖ್ಯಾತ ನಟ ರಾಮ್ ಚರಣ್ (Ram Charan) ನಟನೆಯ ಗೇಮ್ ಚೇಂಜರ್ ಸಿನಿಮಾದ ಹಾಡೊಂದು ಸೋಷಿಯಲ್ ಮೀಡಿಯಾದಲ್ಲಿ ಲೀಕ್ ಆಗಿದೆ. ಯಾವುದೇ ವಿಷಯ ಸೋರಿಕೆ ಆಗದಂತೆ ಎಚ್ಚರಿಕೆ ತೆಗೆದುಕೊಂಡಿದ್ದರೂ, ಹಾಡಿಗೇ ಹಾಡೇ ಸೋರಿಕೆ (Song Leak) ಆಗಿರುವುದು ಚಿತ್ರತಂಡಕ್ಕೆ ತಲೆ ನೋವುದಾಗಿ ಈ ಕಾರಣದಿಂದಾಗಿಯೇ ನಿರ್ಮಾಪಕರು ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಈಗಾಗಲೇ ಒಬ್ಬರನ್ನು ಅರೆಸ್ಟ್ ಕೂಡ ಮಾಡಿದ್ದಾರೆ.

    ಈ ಹಿಂದೆ ಫೋಟೋ ಸೋರಿಕೆ

    ‘ಗೇಮ್ ಚೇಂಜರ್’ (Game Changer) ಸಿನಿಮಾದ ಯಾವ ವಿಷಯಗಳನ್ನೂ ಲೀಕ್ ಆಗಬಾರದು ಎಂದು ಎಷ್ಟೇ ಕಟ್ಟೆಚರಿಕೆ ತೆಗೆದುಕೊಂಡಿದ್ದರೂ, ಚಿತ್ರೀಕರಣ ಯಾವುದೇ ಫೋಟೋ ಲೀಕ್ ಆಗದಂತೆ ನೋಡಿಕೊಂಡಿದ್ರು ಕೂಡ ಎಲ್ಲವೂ ವ್ಯರ್ಥವಾಗಿದೆ. ಈ ಹಿಂದೆ ಚರಣ್- ಕಿಯಾರಾ ಲುಕ್ ರಿವೀಲ್ ಆಗಿತ್ತು.

    ಡೈರೆಕ್ಟರ್ ಶಂಕರ್ (Shankar) ನಿರ್ದೇಶನದ ‘ಗೇಮ್ ಚೇಂಜರ್’ನಲ್ಲಿ(Game Changer) ಕಿಯಾರಾ ಅಡ್ವಾಣಿ- ರಾಮ್ ಚರಣ್ ಜೋಡಿಯಾಗಿ ನಟಿಸಿದ್ದಾರೆ. ಈ ಸಿನಿಮಾಗೆ ಸೋರಿಕೆ ಕಾಟ ಶುರುವಾಗಿದೆ. ಸಾಕಷ್ಟು ಎಚ್ಚರಿಕೆ ವಹಿಸಿದ ಹೊರತಾಗಿಯೂ ಸಿನಿಮಾ ಸೆಟ್‌ನ ಫೋಟೋ ಲೀಕ್ ಆಗಿತ್ತು. ಇದರ ಹಿಂದೆ ಯಾರಿದ್ದಾರೆ ಎಂಬುದನ್ನು ಪತ್ತೆ ಹಚ್ಚುವ ಕಾರ್ಯ ನಡೆದಿತ್ತು. ಆದರೆ, ಕಿಡಿಗೇಡಿಗಳು ಪತ್ತೆ ಆಗಿರಲಿಲ್ಲ.

     

    ಸಮುದ್ರ ತೀರದಲ್ಲಿ ರಾಮ್ ಚರಣ್- ಕಿಯಾರಾ(Kiara Advani) ನಟಿಸುತ್ತಿರುವ ದೃಶ್ಯ ಲೀಕ್ ಆಗಿದೆ. ಇಬ್ಬರೂ ಕಪ್ಪು ಬಣ್ಣದ ಉಡುಗೆಯಲ್ಲಿ ಕಾಣಿಸಿಕೊಂಡಿದ್ದರು. ಈ ಹಿಂದೆ ‘ವಿನಯಾ ವಿಧೇಯ ರಾಮ’ ಸಿನಿಮಾದಲ್ಲಿ ಚರಣ್-ಕಿಯಾರಾ ಜೋಡಿಯಾಗಿ ನಟಿಸಿದ್ದರು. ಇದೀಗ ಗೇಮ್ ಚೇಂಜರ್‌ಗಾಗಿ ಮತ್ತೆ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಮುಂದಿನ ವರ್ಷ ಹೊಸತರಲ್ಲಿ ಚಿತ್ರ ತೆರೆಗೆ ಬರಲಿದೆ.

  • ‘ಗೇಮ್ ಚೇಂಜರ್’ ಚಿತ್ರೀಕರಣದ ರಾಮ್ ಚರಣ್, ಕಿಯಾರಾ ಫೋಟೋ ಲೀಕ್

    ‘ಗೇಮ್ ಚೇಂಜರ್’ ಚಿತ್ರೀಕರಣದ ರಾಮ್ ಚರಣ್, ಕಿಯಾರಾ ಫೋಟೋ ಲೀಕ್

    ‘ಆರ್‌ಆರ್‌ಆರ್’ (RRR) ಸಿನಿಮಾದ ಸಕ್ಸಸ್ ನಂತರ ‘ಗೇಮ್ ಚೇಂಜರ್’ (Game Changer) ಸಿನಿಮಾವನ್ನ ರಾಮ್ ಚರಣ್ ಕೈಗೆತ್ತಿಕೊಂಡಿದ್ದಾರೆ. ಚಿತ್ರೀಕರಣ ಯಾವುದೇ ಫೋಟೋ ಲೀಕ್ ಆಗದಂತೆ ನೋಡಿಕೊಂಡಿದ್ರು ಕೂಡ ಎಲ್ಲವೂ ವ್ಯರ್ಥವಾಗಿದೆ. ಚರಣ್- ಕಿಯಾರಾ ಲುಕ್ ರಿವೀಲ್ ಆಗಿದೆ.

    ಡೈರೆಕ್ಟರ್ ಶಂಕರ್ (Shankar) ನಿರ್ದೇಶನದ ‘ಗೇಮ್ ಚೇಂಜರ್’ನಲ್ಲಿ(Game Changer) ಕಿಯಾರಾ ಅಡ್ವಾಣಿ- ರಾಮ್ ಚರಣ್ ಜೋಡಿಯಾಗಿ ನಟಿಸುತ್ತಿದ್ದಾರೆ. ಈ ಸಿನಿಮಾಗೆ ಸೋರಿಕೆ ಕಾಟ ಶುರುವಾಗಿದೆ. ಸಾಕಷ್ಟು ಎಚ್ಚರಿಕೆ ವಹಿಸಿದ ಹೊರತಾಗಿಯೂ ಸಿನಿಮಾ ಸೆಟ್‌ನ ಫೋಟೋ ಲೀಕ್ ಆಗಿದೆ. ಇದರ ಹಿಂದೆ ಯಾರಿದ್ದಾರೆ ಎಂಬುದನ್ನು ಪತ್ತೆ ಹಚ್ಚುವ ಕಾರ್ಯ ಆಗುತ್ತಿದೆ.

    ಸಮುದ್ರ ತೀರದಲ್ಲಿ ರಾಮ್ ಚರಣ್- ಕಿಯಾರಾ(Kiara Advani) ನಟಿಸುತ್ತಿರುವ ದೃಶ್ಯ ಲೀಕ್ ಆಗಿದೆ. ಇಬ್ಬರೂ ಕಪ್ಪು ಬಣ್ಣದ ಉಡುಗೆಯಲ್ಲಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ:ಡಾಲಿ ಹುಟ್ಟುಹಬ್ಬಕ್ಕೆ ಖಡಕ್ ರೊಟ್ಟಿ, ಪುಂಡೆಪಲ್ಯೆ ಮೆನು

    ಈ ಹಿಂದೆ ‘ವಿನಯಾ ವಿಧೇಯ ರಾಮ’ ಸಿನಿಮಾದಲ್ಲಿ ಚರಣ್-ಕಿಯಾರಾ ಜೋಡಿಯಾಗಿ ನಟಿಸಿದ್ದರು. ಇದೀಗ ಗೇಮ್ ಚೇಂಜರ್‌ಗಾಗಿ ಮತ್ತೆ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಮುಂದಿನ ವರ್ಷ ಹೊಸತರಲ್ಲಿ ಚಿತ್ರ ತೆರೆಗೆ ಬರಲಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]