Tag: ಗೆಹನಾ ವಸಿಷ್ಠ

  • ಫೈಜನ್ ಅನ್ಸಾರಿ ಮದುವೆಯಾಗಿ ಮತಾಂತರಗೊಂಡ ನಟಿ ಗೆಹನಾ

    ಫೈಜನ್ ಅನ್ಸಾರಿ ಮದುವೆಯಾಗಿ ಮತಾಂತರಗೊಂಡ ನಟಿ ಗೆಹನಾ

    ಮಾಡೆಲ್ ಹಾಗೂ ಖ್ಯಾತ ನಟಿ ಗೆಹನಾ ವಸಿಷ್ಠ (Gehana Vasistha) ತಮ್ಮ ಬಹುಕಾಲದ ಗೆಳೆಯ ಫೈಜನ್ ಅನ್ಸಾರಿಯನ್ನು ಮದುವೆಯಾಗಿದ್ದಾರೆ (Marriage). ಪ್ರಿಯಕರನ ಮದುವೆಯಾದ ನಂತರ ಅವರು ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಇದೊಂದು ಅಂತರ್ ಧರ್ಮೀಯ ವಿವಾಹವಾಗಿದ್ದು, ಮದುವೆ ಕಾರಣದಿಂದಾಗಿ ಮತಾಂತರವಾಗಿಲ್ಲ (Conversion) ಎಂದು ಹೇಳಲಾಗುತ್ತಿದೆ.

    ಮುಸ್ಲಿಂ (Muslim) ಸಂಪ್ರದಾಯದಲ್ಲೇ ಮದುವೆಯಾಗಿದ್ದು, ಅವರ ನಿಖಾ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಕೂಡ ಆಗಿವೆ. ಫೈಜನ್ ಅನ್ಸಾರಿ (Faizan Ansari) ಮತ್ತು ಗೆಹನಾ ವಸಿಷ್ಠ ಬಹುಕಾಲದಿಂದ ಡೇಟಿಂಗ್ ಮಾಡುತ್ತಿದ್ದರು. ಇದೀಗ ನಿಖಾ ಆಗುವ ಮೂಲಕ ಸತಿಪತಿಯಾಗಿದ್ದಾರೆ. ಹೊಸ ಜೀವನಕ್ಕೆ ಕಾಲಿಟಿದ್ದಾರೆ.

    ಫೈಜನ್ ಮತ್ತು ಗೆಹನಾ ಇಬ್ಬರೂ ರಿಯಾಲಿಟಿ ಶೋಗಳಲ್ಲಿ ಭಾಗಿಯಾಗಿದ್ದರು. ಅಲ್ಲಿಂದಲೇ ಇಬ್ಬರೂ ಪ್ರೀತಿಸೋಕೆ ಶುರು ಮಾಡಿದ್ದರು ಎಂದು ಹೇಳಲಾಗುತ್ತಿದೆ. ಇಬ್ಬರೂ ಸೋಷಿಯಲ್ ಮೀಡಿಯಾದ ಇನ್ ಫ್ಲೂಯನ್ಸ್ ಕೂಡ ಆಗಿದ್ದಾರೆ. ಈ ಕೆಲಸವೇ ಇಬ್ಬರನ್ನೂ ಒಂದಾಗುವಂತೆ ಮಾಡಿದೆ.

    ಸಲ್ಲದ ಕಾರಣಕ್ಕಾಗಿ ಆಗಾಗ್ಗೆ ಗೆಹನಾ ಸುದ್ದಿಯಾಗುತ್ತಲೇ ಇರುತ್ತಾರೆ. ಕೆಲ ವರ್ಷಗಳ ಹಿಂದೆ ಅವರು ವೆಬ್‍ಸೈಟ್ ನಲ್ಲಿ ಸೆಕ್ಸ್ ವಿಡಿಯೋ ಅಪ್ಲೋಡ್ ಮಾಡಿದ ಆರೋಪದಡಿ ಪೊಲೀಸರು ಬಂಧಿಸಿದ್ದರು. ಪೋರ್ನ್ ವೀಡಿಯೋ ಶೂಟಿಂಗ್ ಮತ್ತು ಅಪ್ಲೋಡ್ ಮಾಡಿದ ಆರೋಪದಡಿ ನಟಿಯನ್ನ ಬಂಧಿಸಲಾಗಿತ್ತು. ಇದನ್ನೂ ಓದಿ:ಎಂಗೇಜ್‌ಮೆಂಟ್‌ ಸಂಭ್ರಮದಲ್ಲಿ ‘ಅಣ್ಣ- ತಂಗಿ’ ಸೀರಿಯಲ್‌ ನಟಿ ಅಖಿಲಾ ಪ್ರಕಾಶ್

    ಮಧ್ಯ ಪ್ರದೇಶ ಮೂಲದ ಗೆಹನಾ ಖಾಸಗಿ ವಾಹಿನಿಯ ನಿರೂಪಕಿಯಾಗಿ ತಮ್ಮ ವೃತ್ತಿ ಜೀವನ ಆರಂಭಿಸಿದ್ದರು. ತದನಂತರ ಮಾಡೆಲ್ ಲೋಕದಲ್ಲಿ ಗುರುತಿಸಿಕೊಂಡ ಗೆಹಾನ ಸುಮಾರು 80 ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮಾಡೆಲ್ ಲೋಕಕ್ಕೆ ಬಂದ ಬಳಿಕ ವಂದನಾ ಹೆಸರನ್ನ ಗೆಹನಾ ಆಗಿ ಬದಲಿಸಿಕೊಂಡಿದ್ದರು.

     

    ಹಲವು ಸಿನಿಮಾಗಳಲ್ಲಿ ಗೆಹಾನ ಕಾಣಿಸಿಕೊಂಡಿದ್ದು ತಮ್ಮ ಹಾಟ್ ಮೂವ್ ಗಳಿಂದಲೇ ಹೆಚ್ಚು ಸದ್ದು ಮಾಡಿದ್ದಾರೆ. ಇನ್ನೂ ಸದಾ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುವ ಗೆಹನಾ ಕೆಲ ದಿನಗಳ ಹಿಂದೆ ಬೀಚ್ ಬಳಿ ಬಿಕಿನಿ ತೊಟ್ಟು ಪೋಸ್ ನೀಡಿದ್ದರು.

  • ಸೆಕ್ಸ್ ವೀಡಿಯೋ ಅಪ್ಲೋಡ್- ನಟಿ ಗೆಹನಾ ಅರೆಸ್ಟ್

    ಸೆಕ್ಸ್ ವೀಡಿಯೋ ಅಪ್ಲೋಡ್- ನಟಿ ಗೆಹನಾ ಅರೆಸ್ಟ್

    ಮುಂಬೈ: ವೆಬ್‍ಸೈಟ್ ನಲ್ಲಿ ಸೆಕ್ಸ್ ವಿಡಿಯೋ ಅಪ್ಲೋಡ್ ಮಾಡಿದ ಆರೋಪದಡಿ ನಟಿ ಗೆಹನಾ ವಸಿಷ್ಠರನ್ನ ಪೊಲೀಸರು ಬಂಧಿಸಿದ್ದಾರೆ.

    ಪೋರ್ನ್ ವೀಡಿಯೋ ಶೂಟಿಂಗ್ ಮತ್ತು ಅಪ್ಲೋಡ್ ಮಾಡಿದ ಆರೋಪದಡಿ ನಟಿಯನ್ನ ಬಂಧಿಸಲಾಗಿದೆ. ಇಂದು ನ್ಯಾಯಾಲಯದ ಮುಂದೆ ನಟಿಯನ್ನ ಹಾಜರುಪಡಿಸಲಾಗುವುದು ಎಂದು ಮುಂಬೈ ಪೊಲೀಸರು ಮಾಹಿತಿ ನೀಡಿದ್ದಾರೆ.

    ಮಧ್ಯ ಪ್ರದೇಶ ಮೂಲದ ಗೆಹನಾ ಖಾಸಗಿ ವಾಹಿನಿಯ ನಿರೂಪಕಿಯಾಗಿ ತಮ್ಮ ವೃತ್ತಿ ಜೀವನ ಆರಂಭಿಸಿದ್ದರು. ತದನಂತರ ಮಾಡೆಲ್ ಲೋಕದಲ್ಲಿ ಗುರುತಿಸಿಕೊಂಡ ಗೆಹಾನ ಸುಮಾರು 80 ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮಾಡೆಲ್ ಲೋಕಕ್ಕೆ ಬಂದ ಬಳಿಕ ವಂದನಾ ಹೆಸರನ್ನ ಗೆಹನಾ ಆಗಿ ಬದಲಿಸಿಕೊಂಡಿದ್ದರು. ಹಲವು ಸಿನಿಮಾಗಳಲ್ಲಿ ಗೆಹಾನ ಕಾಣಿಸಿಕೊಂಡಿದ್ದು ತಮ್ಮ ಹಾಟ್ ಮೂವ್ ಗಳಿಂದಲೇ ಹೆಚ್ಚು ಸದ್ದು ಮಾಡಿದ್ದಾರೆ. ಇನ್ನೂ ಸದಾ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುವ ಗೆಹನಾ ಕೆಲ ದಿನಗಳ ಹಿಂದೆ ಬೀಚ್ ಬಳಿ ಬಿಕಿನಿ ತೊಟ್ಟು ಪೋಸ್ ನೀಡಿದ್ದರು.

  • ಶೂಟಿಂಗ್ ವೇಳೆ ನಟಿಗೆ ಹೃದಯಾಘಾತ

    ಶೂಟಿಂಗ್ ವೇಳೆ ನಟಿಗೆ ಹೃದಯಾಘಾತ

    ಮುಂಬೈ: ಕಿರುತೆರೆ ನಟಿ ಮತ್ತು ರೂಪದರ್ಶಿ ಗೆಹನಾ ವಸಿಷ್ಠ ಅವರಿಗೆ ಚಿತ್ರೀಕರಣದ ವೇಳೆ ಹೃದಯಾಘಾತವಾಗಿದ್ದು ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸರಿಯಾದ ಪೌಷ್ಠಿಕಕಾಂಶದ ಆಹಾರ ಮತ್ತು ವಿಶ್ರಾಂತಿ ಇಲ್ಲದೇ ಇದ್ದುದ್ದರಿಂದ ಹೃದಯಾಘಾತ ಸಂಭವಿಸಿದೆ ಎಂದು ವೈದ್ಯರು ತಿಳಿಸಿದ್ದಾರೆ.

    ಗೆಹನಾ ವಸಿಷ್ಠ ವೆಬ್ ಸರಣಿಯೊಂದರಲ್ಲಿ ಬಿಡುವಿಲ್ಲದೆ ನಿರಂತರವಾಗಿ ಶೂಟಿಂಗ್‍ನಲ್ಲಿ ಭಾಗಿಯಾಗಿದ್ದಾರೆ. ಇದರಿಂದ ಎರಡು ದಿನ ಯಾವುದೇ ಪೌಷ್ಠಿಕ ಆಹಾರ ಸೇವಿಸಿರಲಿಲ್ಲ. ಶೂಟಿಂಗ್ ತಂಡದವರು ಕೂಡ ಊಟವನ್ನು ಕೊಡದೆ ಬರೀ ಜ್ಯೂಸ್ ಕೊಟ್ಟಿದ್ದರು ಎಂದು ತಿಳಿದು ಬಂದಿದೆ. ಇದರಿಂದಾಗಿ ಶೂಟಿಂಗ್ ವೇಳೆಯಲ್ಲೇ ಹೃದಯಾಘಾತವಾಗಿ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಮುಂಬೈನ ರಕ್ಷಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯಕ್ಕೆ ಉಸಿರಾಟಕ್ಕಾಗಿ ವೆಂಟಿಲೇಟರ್ ಅಳವಡಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿಯಾಗಿದೆ.

    ಕಳೆದ 48 ಗಂಟೆಗಳಿಂದ ಸೂಕ್ತ ಪೌಷ್ಠಿಕ ಆಹಾರ ಸೇವಿಸಿರಲಿಲ್ಲ. ಜೊತೆಗೆ ಕೆಲವು ಔಷಧಿಗಳು ಹಾಗೂ ಎನರ್ಜಿ ಡ್ರಿಂಕ್ ಒಟ್ಟಿಗೆ ಕುಡಿದ ಕಾರಣ ಹೃದಯಾಘಾತವಾಗಿದೆ. ಸದ್ಯಕ್ಕೆ ಗೆಹನಾ ಅವರಿಗೆ ತುರ್ತು ಚಿಕಿತ್ಸಾ ವಿಭಾಗದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.

    ಗೆಹನಾ ವಸಿಷ್ಠ ಅವರು ಕಿರುತೆರೆಯಲ್ಲಿ ನಿರೂಪಕಿಯಾಗಿ ಕೆಲವು ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ಜೊತೆಗೆ ಸುಮಾರು 70ಕ್ಕೂ ಅಧಿಕ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ.