Tag: ಗೆಸ್ಟ್ ಹೌಸ್

  • ಅಯೋಧ್ಯೆಯ ಗೆಸ್ಟ್‌ ಹೌಸ್‌ನಲ್ಲಿ ಮಹಿಳೆ ಸ್ನಾನ ಮಾಡುವ ವೀಡಿಯೋ ಸೆರೆ ಹಿಡಿದವ ಅರೆಸ್ಟ್‌

    ಅಯೋಧ್ಯೆಯ ಗೆಸ್ಟ್‌ ಹೌಸ್‌ನಲ್ಲಿ ಮಹಿಳೆ ಸ್ನಾನ ಮಾಡುವ ವೀಡಿಯೋ ಸೆರೆ ಹಿಡಿದವ ಅರೆಸ್ಟ್‌

    – ಫೋನ್ ಪರಿಶೀಲಿಸಿದಾಗ ಮತ್ತಷ್ಟು ವೀಡಿಯೋಗಳು ಪತ್ತೆ

    ಅಯೋಧ್ಯೆ: ಶ್ರೀ ರಾಮಮಂದಿರ (Ram Mandir) ಸ್ಥಾಪಿತವಾಗಿರುವ ಅಯೋಧ್ಯೆಯಲ್ಲಿ ಪಾಪದ ಕೆಲಸ ನಡೆದಿದೆ. ಹೌದು ಶ್ರೀರಾಮಮಂದಿರದ ಬಳಿಯ ಅತಿಥಿ ಗೃಹದಲ್ಲಿ ಮಹಿಳೆಯೊಬ್ಬರು ಸ್ನಾನ ಮಾಡುತ್ತಿದ್ದಾಗ ಮೊಬೈಲ್‌ನಲ್ಲಿ ವಿಡಿಯೋ ಮಾಡುತ್ತಿದ್ದ ಹೋಟೆಲ್‌ ಉದ್ಯೋಗಿಯೊಬ್ಬ (Ayodhya Hotel Staff) ರೆಡ್‌ಹ್ಯಾಂಡಾಗಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

    ರಾಮ ಮಂದಿರದ ಗೇಟ್ ಸಂಖ್ಯೆ 3 ರಿಂದ ಕೇವಲ 50 ಮೀಟರ್ ದೂರದಲ್ಲಿರುವ ರಾಜಾ ಗೆಸ್ಟ್ ಹೌಸ್‌ನಲ್ಲಿ ಶುಕ್ರವಾರ ಬೆಳಗ್ಗೆ 6 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಬಹ್ರೈಚ್‌ ಜಿಲ್ಲೆಯ ನಿವಾಸಿ ಸೌರಭ್‌ ತಿವಾರಿ (25) ಬಂಧಿತ ಆರೋಪಿ. ಆತನ ಮೊಬೈಲ್‌ ಪರಿಶೀಲಿಸಿದಾಗ ಅದೇ ರೀತಿ ಇನ್ನಷ್ಟು ಮಹಿಳೆಯರ ವಿಡಿಯೋಗಳು ಪತ್ತೆಯಾಗಿರುವುದನ್ನು ಕಂಡು ಪೊಲೀಸರೇ ಶಾಕ್‌ ಆಗಿದ್ದಾರೆ. ಇದನ್ನೂ ಓದಿ: ಪ್ರಿಯಕರನೊಂದಿಗೆ ಸೇರಿ ಗಂಡನನ್ನ ಕೊಂದು ಡ್ರಮ್‌ಗೆ ತುಂಬಿದ್ದ ಮುಸ್ಕಾನ್‌ ಈಗ ಗರ್ಭಿಣಿ – ಜೈಲಿನಲ್ಲಿ ವಿಶೇಷ ಸೌಲಭ್ಯ

    ರಾಜಾ ಗೆಸ್ಟ್‌ಹೌಸ್‌ನಲ್ಲಿದ್ದ ಅತಿಥಿಗಳ ಪೈಕಿ ಮಹಿಳೆಯೊಬ್ಬರು ಸ್ನಾನಕ್ಕೆ ತೆರಳಿದ್ದರು, ಈ ವೇಳೆ ವ್ಯಕ್ತಿಯೊಬ್ಬರ ನೆರಳನ್ನು ಗಮನಿಸಿದ್ದಾರೆ, ಬಳಿಕ ಟಿನ್‌ ಶೆಡ್‌ ಛಾವಣಿಯಿಂದ ಯಾರೋ ವಿಡಿಯೋ ಮಾಡುತ್ತಿರುವುದು ಕಂಡುಬಂದಿದೆ. ಬಳಿಕ ಆಕೆ ಸಹಾಯಕ್ಕಾಗಿ ಚೀರಿದ್ದಾಳೆ, ಕೂಡಲೇ ಹೋಟೆಲ್‌ನಲ್ಲಿದ್ದ ಪುರುಷರು ಸ್ಥಳಕ್ಕೆ ಧಾವಿಸಿ, ವಿಡಿಯೋ ಮಾಡುತ್ತಿದ್ದವನನ್ನ ಹಿಡಿದು ರಾಮಜನ್ಮಭೂಮಿ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ.

    ಪೊಲೀಸರು ಆರೋಪಿಯ ಫೋನ್‌ ಪರಿಶೀಲಿಸಿದಾಗ ಇದೇ ರೀತಿ ಹಲವು ಮಹಿಳೆಯರ ವಿಡಿಯೋಗಳು ಪತ್ತೆಯಾಗಿದೆ. ಸದ್ಯ ಆರೋಪಿಯುನ್ನ ಬಂಧಿಸಿರುವ ಪೊಲೀಸರು ಪ್ರಕರಣ ದಾಖಲಿಸಿ, ತನಿಖೆ ಮುಂದುವರಿಸಿದ್ದಾರೆ. ಇದನ್ನೂ ಓದಿ: ರಾಣಾಗೆ 14×14 ಅಡಿಯ ಸೆಲ್ – ದಿನದ 24 ಗಂಟೆಯೂ ನಿಗಾ; ಸೆಲ್‌ನಲ್ಲೇ ಊಟ

    ಗೆಸ್ಟ್‌ ಹೌಸ್‌ಗೆ ಸೀಲ್‌:
    ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರ (ADA) ಅತಿಥಿ ಗೃಹಕ್ಕೆ ಸೀಲ್ ಹಾಕಿದೆ. ಇನ್ನೂ ಈ ಕುರಿತು ಮಾತನಾಡಿರುವ ಎಡಿಎ ಕಾರ್ಯದರ್ಶಿ ಸತ್ಯೇಂದ್ರ ಸಿಂಗ್ ಮಾತನಾಡಿ, ರಾಜಾ ಅತಿಥಿ ಗೃಹವನ್ನು ಪ್ರಾಧಿಕಾರದಿಂದ ಅನುಮೋದನೆ ಪಡೆಯದೇ ನಿರ್ಮಿಸಲಾಗಿದೆ. ಆದ್ದರಿಂದ ಸೀಲ್ ಮಾಡಲಾಗಿದೆ. ಅದೇ ಸಂಸ್ಥೆಯಲ್ಲಿ ಇಂತಹ ಇನ್ನಷ್ಟು ಘಟನೆಗಳು ನಡೆದಿವೆಯೇ ಮತ್ತು ವೀಡಿಯೊಗಳನ್ನು ಹಂಚಿಕೊಳ್ಳಲಾಗಿದೆಯೇ ಎನ್ನುವ ಆಯಾಮದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆಂದು ತಿಳಿಸಿದ್ದಾರೆ. ಇದನ್ನೂ ಓದಿ: ತಹವ್ವೂರ್‌ ರಾಣಾ ಹಸ್ತಾಂತರವು ಮುಂಬೈ ದಾಳಿ ಸಂತ್ರಸ್ತರಿಗೆ ನ್ಯಾಯ ಒದಗಿಸುವಲ್ಲಿ ದೊಡ್ಡ ಹೆಜ್ಜೆ : ಜೈಶಂಕರ್‌

  • ಎಚ್‍ಡಿಕೆ – ಜಮೀರ್ ಬೆಂಬಲಿಗರ ಮಧ್ಯೆ ಗಲಾಟೆ

    ಎಚ್‍ಡಿಕೆ – ಜಮೀರ್ ಬೆಂಬಲಿಗರ ಮಧ್ಯೆ ಗಲಾಟೆ

    ಬೆಂಗಳೂರು: ಸದಾಶಿವನಗರದ ಗೆಸ್ಟ್ ಹೌಸ್ ವಿಚಾರವಾಗಿ ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಖಾನ್ ಬೆಂಬಲಿಗರು ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಬೆಂಬಲಿಗರ ನಡುವೆ ಗಲಾಟೆ ನಡೆದು ತಣ್ಣಗಾಗಿದೆ.

    ಇಂದು ಸಂಜೆ ಗೆಸ್ಟ್ ಹೌಸ್ ಬಳಿ ತೆರಳಿದ ನಿಖಿಲ್ ಕುಮಾರಸ್ವಾಮಿ ಅವರ ಮೂವರು ಬಾಡಿಗಾರ್ಡ್‍ಗಳು ಬೀಗ ಮುರಿದಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಜಮೀರ್ ಕಡೆಯ ಗೆಸ್ಟ್ ಹೌಸ್ ಕೇರ್ ಟೇಕರ್ ಅಡ್ಡ ಬಂದಾಗ ಮಾತಿಗೆ ಮಾತು ಬೆಳೆದು ಗಲಾಟೆಯಾಗಿದೆ. ಈ ವೇಳೆ ಬಾಡಿಗಾರ್ಡ್‍ಗಳು ಬೀಗ ಮುರಿದು ಒಳಗೆ ನುಗ್ಗಿ ಮನೆಯ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಾರೆ ಎಂದು ಕೇರ್ ಟೇಕರ್ ಜಮೀರ್ ಅಹ್ಮದ್‍ಗೆ ವಿಷಯ ಮುಟ್ಟಿಸಿದ್ದಾರೆ. ಇದನ್ನು ಓದಿ:ರಮೇಶ್ ಜಾರಕಿಹೊಳಿ ಪ್ರಕರಣ- ಎಸ್‍ಐಟಿಗೆ ಮುಖ್ಯಸ್ಥರೇ ಇಲ್ಲ..!

    ವಿಷಯ ತಿಳಿದು ಜಮೀರ್ ಅವರು ತನ್ನ ಪಿಎ ಫಾರೂಖ್ ಅವರಿಗೆ ಸದಾಶಿವನಗರದ ಪೊಲೀಸ್ ಠಾಣೆಗೆ ದೂರು ಕೊಡುವಂತೆ ಸೂಚಿಸಿದ್ದಾರೆ. ನಿಖಿಲ್ ಬಾಡಿಗಾರ್ಡ್‍ಗಳು ಎಚ್‍ಡಿಕೆಯ ಕೆಲ ವಸ್ತುಗಳನ್ನು ಕೊಂಡೊಯ್ಯಲು ಬಂದಿದ್ದರು ಎಂದು ಹೇಳಲಾಗುತ್ತಿದ್ದು, 2006ರಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ, ಜಮೀರ್ ಅಹಮದ್ ಖಾನ್‍ಗೆ ಈ ಗೆಸ್ಟ್ ಹೌಸ್ ನೀಡಿದ್ದರು. ನಂತರದ ಬೆಳವಣಿಗೆಯಲ್ಲಿ ಇಬ್ಬರ ನಡುವಿನ ಸ್ನೇಹ ಮುರಿದು ಬಿದ್ದಿತ್ತು.

    ಎಚ್‍ಡಿಕೆ ಪಲ್ಟಿ ಗಿರಾಕಿ ಕಾಸು ಇರುವ ಕಡೆ ತಿರುಗುತ್ತಾರೆ ಅಂತೆಲ್ಲ ಜಮೀರ್ ಟಾಂಗ್ ಕೊಟ್ಟಿದ್ದರು. ಇದರ ನಡುವೆ ಗೆಸ್ಟ್ ಹೌಸ್ ಗಲಾಟೆ ಮೇಲಕ್ಕೆ ಎದ್ದಿತ್ತು. ಹೀಗಾಗಿ ಎಂಎಲ್‍ಸಿ ಬೋಜೇಗೌಡ ಮಧ್ಯಪ್ರವೇಶ ಮಾಡಿ ಜಮೀರ್ ಜೊತೆ ಸಂಧಾನ ನಡೆಸಿ, ದೂರು ಹಿಂಪಡೆಯುವಂತೆ ಮನವೊಲಿಸಿದ್ದಾರೆ. ಸ್ಟೇಷನ್ ಮೆಟ್ಟಿಲು ಹತ್ತಿದ್ದ ಗೆಸ್ಟ್ ಹೌಸ್ ಗಲಾಟೆ ಸದ್ಯ ತಣ್ಣಗಾಗಿದೆ. ಇದನ್ನು ಓದಿ: ಗೂಡ್ಸ್ ವಾಹನ ಚಾಲಕರಿಗೆ ಸರ್ಕಾರ ಸಹಾಯ ಮಾಡದಿದ್ದರೆ ಪ್ರತಿಭಟನೆಯ ಎಚ್ಚರಿಕೆ

  • ಮುಂಬೈ ವಲಸಿಗರಿಗೆ ಸ್ವಂತ ಗೆಸ್ಟ್‌ಹೌಸ್‌ನಲ್ಲಿ ಆಶ್ರಯ ಕಲ್ಪಿಸಿದ ಸತೀಶ್ ಜಾರಕಿಹೊಳಿ

    ಮುಂಬೈ ವಲಸಿಗರಿಗೆ ಸ್ವಂತ ಗೆಸ್ಟ್‌ಹೌಸ್‌ನಲ್ಲಿ ಆಶ್ರಯ ಕಲ್ಪಿಸಿದ ಸತೀಶ್ ಜಾರಕಿಹೊಳಿ

    ಬೆಳಗಾವಿ/ಚಿಕ್ಕೋಡಿ: ಮುಂಬೈನಿಂದ ಬಂದ 200ಕ್ಕೂ ಹೆಚ್ಚು ವಲಸೆ ಕಾರ್ಮಿಕರಿಗೆ ಯಮಕನಮರಡಿ ಶಾಸಕ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ತಮ್ಮ ಗೆಸ್ಟ್ ಹೌಸ್‍ನಲ್ಲೇ ಆಶ್ರಯ ಕಲ್ಪಿಸಿ ಮಾನವೀಯತೆ ಮೆರೆದಿದ್ದಾರೆ.

    ಮಹಾಮಾರಿ ಕೊರೊನಾದಿಂದ ವಲಸೆ ಕಾರ್ಮಿಕರ ಬದುಕು ಬೀದಿಗೆ ಬಂದಂತಾಗಿದೆ. ಕೊರೊನಾ ಭೀತಿಯಿಂದ ದುಡಿಮೆ ಇಲ್ಲದೇ ತಮ್ಮ ಗ್ರಾಮಗಳಿಗೆ ವಾಪಸ್ ಆಗುತ್ತಿರುವ ಕಾರ್ಮಿಕರ ಸ್ಥಿತಿ ಚಿಂತಾಜನಕವಾಗಿದೆ. ತಮ್ಮ ಗ್ರಾಮಗಳಿಗೆ ಬರುವ ಕಾರ್ಮಿಕರನ್ನು ಯಾವುದೋ ಸರ್ಕಾರಿ ಕಟ್ಟಡದಲ್ಲಿ ಇಟ್ಟು ಕ್ವಾರಂಟೈನ್ ಮಾಡುವ ಬದಲು ಸತೀಶ್ ಜಾರಕಿಹೊಳಿ ಅವರು ವಲಸೆ ಕಾರ್ಮಿಕರನ್ನು ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಅಲದಾಳ ಗ್ರಾಮದಲ್ಲಿರುವ ತಮ್ಮ ಗೆಸ್ಟ್ ಹೌಸ್‍ನಲ್ಲಿ ಕ್ವಾರಂಟೈನ್ ಮಾಡಿಸಿ ಮಾದರಿಯಾಗಿದ್ದಾರೆ.

    ಗೆಸ್ಟ್ ಹೌಸ್‍ನಲ್ಲಿ ಇರುವ ಎಲ್ಲ ಕಾರ್ಮಿಕರು ಮುಂಬೈನಿಂದ ಬಂದವರಾಗಿದ್ದಾರೆ. ದಿನನಿತ್ಯ ಎಲ್ಲ ಕಾರ್ಮಿಕರಿಗೂ ತಮ್ಮ ಸ್ವಂತ ಹಣದಿಂದ 2 ಬಾರಿ ಊಟ, 2 ಬಾರಿ ಉಪಹಾರ ಸೇರಿದಂತೆ ಹಣ್ಣು ಹಂಪಲ ನೀಡುತ್ತಿದ್ದಾರೆ. ಇಷ್ಟೇ ಅಲ್ಲದೇ ತಮ್ಮ ಕ್ಷೇತ್ರದಲ್ಲಿ ವಿವಿಧ ಕಡೆ ಕ್ವಾರಂಟೈನ್ ಇರುವ 1 ಸಾವಿರಕ್ಕೂ ಹೆಚ್ಚು ವಲಸೆ ಕಾರ್ಮಿಕರಿಗೆ ಊಟ ಉಪಹಾರ ತಲುಪಿಸುತ್ತಿದ್ದಾರೆ. ಅಲ್ಲದೇ ಎಲ್ಲ ಕಾರ್ಮಿಕರಿಗೆ ಕಾಲ ಕಳೆಯಲು ಆಟಿಕೆ ಸಾಮಾನುಗಳನ್ನು ವಿತರಿಸಿದ್ದಾರೆ.

    ದೇಶದಲ್ಲಿ ಕೊರೊನಾ ಕೇಂದ್ರವೆಂದೇ ಬಿಂಬಿತವಾಗಿರುವ ಮುಂಬೈನಿಂದ ತಮ್ಮ ಊರುಗಳಿಗೆ ಆಗಮಿಸಿದ ಯಮಕನಮರಡಿ ಕ್ಷೇತ್ರದ ವಲಸೆ ಕಾರ್ಮಿಕರನ್ನು ಕೊರೊನಾ ಭಯದಿಂದ ಗ್ರಾಮಸ್ಥರು ಊರಿನೊಳಗೆ ಸೇರಿಸಿಕೊಳ್ಳಲಿಲ್ಲ. ಕ್ವಾರಂಟೈನ್‍ನಲ್ಲಿ ವ್ಯವಸ್ಥೆಯೂ ಆಗಿರಲಿಲ್ಲ. ಇಂಥ ಸಂದರ್ಭದಲ್ಲಿ ವಲಸೆ ಕಾರ್ಮಿಕರು ತನ್ನ ಕ್ಷೇತ್ರದವರು ಎಂದು ಅರಿತ ಸತೀಶ್ ಜಾರಕಿಹೊಳಿ ಹೆಚ್ಚು ಯೋಚನೆ ಮಾಡದೆ, ಸುಮಾರು 200ಕ್ಕೂ ಹೆಚ್ಚು ವಲಸೆ ಕಾರ್ಮಿಕರಿಗೆ ಉಳಿದುಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದಾರೆ. ತಮ್ಮ ಸಹಾಯಕ್ಕೆ ನಿಂತಿರುವ ಸತೀಶ್ ಜಾರಕಿಹೊಳಿ ಸೇವೆಗೆ ಕಾರ್ಮಿಕರು ಸಂತಸ ವ್ಯಕ್ತಪಡಿಸಿದ್ದಾರೆ.

    ಈ ಹಿಂದೆಯೂ ಸತೀಶ್ ಜಾರಕಿಹೊಳಿ ಕೊರೊನಾ ದಾಳಿಗೆ ಸಿಲುಕಿದ ರೈತರ, ಬಡವರ ಸಂಕಷ್ಟಕ್ಕೆ ಸಹಾಯ ಹಸ್ತ ಚಾಚಿದ್ದರು. ರೈತರು ಬೆಳೆದ ತರಕಾರಿ ಮಾರಾಟಕ್ಕೆ ಸಾಧ್ಯವಾಗದೆ ಹೊಲದಲ್ಲಿಯೇ ಕೊಳೆತು ಹೋಗುವ ಸಂದರ್ಭದಲ್ಲಿ ತಮ್ಮ ಕಾರ್ಯಕರ್ತರೊಂದಿಗೆ ಸ್ವತಃ ಹೊಲಗದ್ದೆಗಳಿಗೆ ಇಳಿದು, ರೈತರ ತರಕಾರಿಗಳನ್ನು ಖರೀದಿಸಿ, ಬಡವರಿಗೆ, ಅಸಹಾಯಕರಿಗೆ ಉಚಿತವಾಗಿ ಹಂಚುವುದರ ಮೂಲಕ ಸಹಾಯ ಮಾಡಿದ್ದರು. ಈಗ ಮತ್ತೆ ವಲಸೆ ಕಾರ್ಮಿಕರ ನೆರವಿಗೆ ನಿಂತಿದ್ದಾರೆ.

  • ಚಳಿಗಾಲದ ಅಧಿವೇಶನದಲ್ಲೂ ಸಿಎಂ ಹೆಚ್‍ಡಿಕೆಗೆ ವಾಸ್ತು ದೋಷ

    ಚಳಿಗಾಲದ ಅಧಿವೇಶನದಲ್ಲೂ ಸಿಎಂ ಹೆಚ್‍ಡಿಕೆಗೆ ವಾಸ್ತು ದೋಷ

    ಬೆಳಗಾವಿ: ಜಿಲ್ಲೆಯಲ್ಲಿ ನಾಳೆಯಿಂದ ಚಳಿಗಾಲದ ಅಧಿವೇಶನ ಆರಂಭವಾಗಲಿದ್ದು, ಈ ಹಿನ್ನೆಲೆಯಲ್ಲಿ 10 ದಿನ ಬೆಳಗಾವಿಯಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವಾಸ್ತವ್ಯ ಹೂಡಲಿದ್ದಾರೆ. ಆದರೆ ಇಲ್ಲೂ ಸಿಎಂ ಕುಮಾರಸ್ವಾಮಿ ಅವರ ವಾಸ್ತವ್ಯಕ್ಕೆ ವಾಸ್ತು ದೋಷ ಅಡ್ಡಿ ಉಂಟಾಗಿದೆ.

    ಸಿಎಂ ಕುಮಾರಸ್ವಾಮಿ ಅವರು ನಗರದ ನ್ಯೂ ಸರ್ಕ್ಯೂಟ್ ಹೌಸ್ ಬದಲು ವಿಟಿಯು ಗೆಸ್ಟ್ ಹೌಸ್‍ಗೆ ವಾಸ್ತವ್ಯ ಹೂಡಲು ಶಿಫ್ಟ್ ಆಗಲಿದ್ದಾರೆ. ನ್ಯೂ ಸರ್ಕ್ಯೂಟ್ ಹೌಸ್ ವಾಸ್ತು ಸರಿ ಇಲ್ಲ ಎಂದು ಸಿಎಂ ವಾಸ್ತವ್ಯಕ್ಕೆ ಹಿಂದೇಟು ಹಾಕಿದ್ದಾರಾ ಎಂಬ ಮಾತು ಕೇಳಿಬರುತ್ತಿದೆ. ಸಚಿವ ಎಚ್.ಡಿ.ರೇವಣ್ಣ ಅವರ ಸೂಚನೆ ಹಿನ್ನೆಲೆಯಲ್ಲಿ ಸಿಎಂ ಕುಮಾರಸ್ವಾಮಿ ಅವರು ವಿಟಿಯುಗೆ ಶಿಫ್ಟ್ ಆಗಿಲಿದ್ದಾರೆ.

    ವಿಟಿಯು ಗೆಸ್ಟ್ ಹೌಸನ್ನು ಅಧಿಕಾರಿಗಳಾದ ಬೆಳಗಾವಿ ಪ್ರಾದೇಶಿಕ ಆಯುಕ್ತ ಮೇಘಣ್ಣವರ್, ಡಿಸಿ ಎಸ್.ಬಿ ಬೊಮ್ಮನಹಳ್ಳಿ ಪರಿಶೀಲನೆ ನಡೆಸಿದ್ದಾರೆ. ಸದ್ಯಕ್ಕೆ ಸರ್ಕ್ಯೂಟ್ ಹೌಸ್ ಸಿಎಂ ಕುಮಾರಸ್ವಾಮಿ ಅವರಿಗೆ ಕಾಯ್ದಿರಿಸಲು ಅಧಿಕಾರಿಗಳು ನಿರ್ಧಾರ ಮಾಡಿದ್ದಾರೆ. ಈ ಹಿಂದೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಐದು ವರ್ಷಗಳ ಕಾಲ ಸರ್ಕ್ಯೂಟ್ ಹೌಸ್ ನಲ್ಲಿ ವಾಸ್ತವ್ಯ ಮಾಡಿದ್ದರು. ಸರ್ಕ್ಯೂಟ್ ಹೌಸ್ ವಾಸ್ತವ್ಯದಿಂದ ಸಾರ್ವಜನಿಕರಿಗೂ ಅನುಕೂಲವಾಗುತ್ತದೆ.

    ವಿಟಿಯು ಅತಿಥಿ ಗೃಹ ಬೆಳಗಾವಿಯಿಂದ 18 ಕಿ.ಮೀ ದೂರವಿದೆ. ಇದರಿಂದ ಸಿಎಂ ಭೇಟಿಗೆ ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಲಿದೆ. ಅಷ್ಟೇ ಅಲ್ಲದೇ ಸುವರ್ಣ ಸೌಧದಿಂದ ವಿಟಿಯು ಅತಿಥಿ ಗೃಹಕ್ಕೆ ಸಿಎಂ ನಿತ್ಯ ಓಡಾಟ ಮಾಡಬೇಕಾಗುತ್ತದೆ. ಬೆಳಗಾವಿಯ ಪ್ರಮುಖ ರಸ್ತೆಯಲ್ಲಿ ಸಿಎಂ ಓಟಾಡದಿಂದ ಸಂಚಾರ ಅಸ್ತವ್ಯಸ್ತವಾಗುವ ಸಾಧ್ಯತೆ ಕೂಡ ಇದೆ. ಇತ್ತ ಸಿಎಂ ಕುಮಾರಸ್ವಾಮಿ ಅವರು ಸಾರ್ವಜನಿಕರಿಂದ ದೂರು ಉಳಿಯಲು ವಿಟಿಯು ಆಯ್ಕೆ ಮಾಡಿಕೊಂಡ್ರಾ ಎಂಬ ಅನುಮಾನ ಮೂಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv