Tag: ಗೆಳೆಯ ಸ್ನೇಹಿತರು

  • ಗೆಳೆಯ, ಆತನ ಸ್ನೇಹಿತರಿಂದಲೇ ಅಪ್ರಾಪ್ತೆಯ ಅತ್ಯಾಚಾರ

    ಗೆಳೆಯ, ಆತನ ಸ್ನೇಹಿತರಿಂದಲೇ ಅಪ್ರಾಪ್ತೆಯ ಅತ್ಯಾಚಾರ

    – ಆನ್‍ಲೈನ್‍ನಲ್ಲಿ ವಿಡಿಯೋ ಅಪ್ಲೋಡ್
    – ವಿಡಿಯೋ ತೋರಿಸಿ ಒಂದು ವರ್ಷದಿಂದ ರೇಪ್

    ಲಕ್ನೋ: ತನ್ನ ಪ್ರಿಯಕರ ಮತ್ತು ಆತನ ನಾಲ್ವರು ಸ್ನೇಹಿತರಿಂದ ಅಪ್ರಾಪ್ತೆ ಅತ್ಯಾಚಾರಕ್ಕೊಳಗಾಗಿರುವ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ. ಆರೋಪಿಗಳು ಆಶ್ಲೀಲ ವಿಡಿಯೋವನ್ನು ಚಿತ್ರೀಕರಿಸಿ ಆನ್‍ಲೈನ್ ನಲ್ಲಿ ಹರಿಬಿಟ್ಟಿದ್ದಾರೆ.

    ಗೆಳೆಯ ನನ್ನನ್ನು ಮದುವೆಯಾಗುವುದಾಗಿ ಮಾತು ನೀಡಿ ಒಂದು ವರ್ಷದಿಂದ ತನ್ನ ಮೇಲೆ ಅತ್ಯಾಚಾರ ನಡೆಸುತ್ತಿದ್ದನು ಎಂದು ಹೇಳಿಕೆ ನೀಡಿದ್ದಾಳೆ. ಈ ಹಿಂದೆ ಆಶ್ಲೀಲ ವಿಡಿಯೋವನ್ನು ಎಲ್ಲರಿಗೂ ಕಳುಹಿಸುವುದಾಗಿ ಆಕೆಗೆ ಬ್ಲಾಕ್ ಮೇಲ್ ಮಾಡುತ್ತಿದ್ದನು. ಅಲ್ಲದೆ ಆತನ ನಾಲ್ವರು ಸ್ನೇಹಿತರು ಕೂಡ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂದು ಸಂತ್ರಸ್ತೆ ಆರೋಪಿಸಿದ್ದಾಳೆ.

    ಜನವರಿ 1 ರಂದು ಆರೋಪಿ ಅಪ್ರಾಪ್ತೆಯ ಆಶ್ಲೀಲ ವಿಡಿಯೋ ಮತ್ತು ಫೋಟೋಗಳನ್ನು ಆನ್‍ಲೈನ್‍ನಲ್ಲಿ ಶೇರ್ ಮಾಡಿಕೊಂಡಿದ್ದಾನೆ. ಆರೋಪಿ ಮಾಡಿದ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದಂತೆಯೇ ವಿಷಯ ತಿಳಿದ ಸಂತ್ರಸ್ತೆ ಕುಟುಂಬಸ್ಥರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಈ ಕುರಿತಂತೆ ಮಾತನಾಡಿದ ಬರೇಲಿಯ ಎಎಸ್‍ಪಿ ಸತ್ಯನಾರಾಯಣ್ ಪ್ರಜಾಪತ್, ಸಂತ್ರಸ್ತೆಯ ಗೆಳೆಯ ಮತ್ತು ಆತನ ನ್ವಾರು ಸ್ನೇಹಿತರ ವಿರುದ್ಧ ಎಫ್‍ಐಆರ್ ದಾಖಲಿಸಕೊಳ್ಳಲಾಗಿದೆ ಮತ್ತು ವಿಡಿಯೋ ಹಂಚಿಕೊಂಡವರನ್ನು ಕೂಡ ಬಂಧಿಸುವ ಎಲ್ಲಾ ಪ್ರಯತ್ನಗಳು ನಡೆಯುತ್ತಿದೆ ಎಂದು ಹೇಳಿದ್ದಾರೆ.