Tag: ಗೆಳತಿ

  • ಎಫ್‍ಬಿ ಗೆಳತಿಗಾಗಿ ಬೆಂಗ್ಳೂರಿನಿಂದ ಉ. ಪ್ರದೇಶಕ್ಕೆ ಹೋಗಿ ಜೈಲುಪಾಲಾದ

    ಎಫ್‍ಬಿ ಗೆಳತಿಗಾಗಿ ಬೆಂಗ್ಳೂರಿನಿಂದ ಉ. ಪ್ರದೇಶಕ್ಕೆ ಹೋಗಿ ಜೈಲುಪಾಲಾದ

    – ಬರ್ತ್ ಡೇ ಶುಭಾಶಯ ತಿಳಿಸಲು ಹೋಗಿದ್ದ ಯುವಕ
    – ಒಂದು ದಿನ ಜೈಲುವಾಸ

    ಬೆಂಗಳೂರು: ಫೇಸ್‍ಬುಕ್ ನಲ್ಲಿ ಪರಿಚಯವಾದ ಅಪ್ರಾಪ್ತ ಗೆಳತಿಯನ್ನ ಭೇಟಿ ಮಾಡಲು ಹೋಗಿದ್ದ ಯುವಕ ಒಂದು ದಿನ ಜೈಲುವಾಸ ಅನುಭವಿಸಿ ಹಿಂದಿರುಗಿದ್ದಾನೆ.

    ಸಲ್ಮಾನ್ ಗೆಳತಿಯ ಭೇಟಿಗಾಗಿ ಉತ್ತರ ಪ್ರದೇಶದ ಲಖಿಂಪುರ ಖೇರಿಗೆ ತೆರಳಿದ್ದನು. ಸಲ್ಮಾನ್ ಮೂಲತಃ ಉತ್ತರ ಪ್ರದೇಶದ ದೇವರಿಯಾ ಜಿಲ್ಲೆಯ ನಿವಾಸಿಯಾಗಿದ್ದು, ಬೆಂಗಳೂರಿನಲ್ಲಿ ಮೆಕಾನಿಕ್ ಆಗಿ ಕೆಲಸ ಮಾಡಿಕೊಂಡಿದ್ದನು. ಫೇಸ್‍ಬುಕ್ ನಲ್ಲಿ ಸಲ್ಮಾನ್ ಗೂ ಮತ್ತು ಲಖಿಂಪುರ ಖೇರಿಯ ಅಪ್ರಾಪ್ತೆ ಪರಿಚಯವಾಗಿತ್ತು. ತನ್ನ ಪ್ರೀತಿಯ ಹುಡುಗಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಲು ಚಾಕ್ಲೆಟ್ ಮತ್ತು ಗಿಫ್ಟ್ ಜೊತೆ ಉತ್ತರ ಪ್ರದೇಶದ ಲಖಿಂಪುರ ಖೇರಿಗೆ ತೆರಳಿದ್ದನು.

    ಆದ್ರೆ ಹುಡುಗಿ ಸಲ್ಮಾನ್ ನನ್ನು ಗುರುತಿಸಿಲ್ಲ. ಕೊನೆಗೆ ಅಪ್ರಾಪ್ತೆ ಕುಟುಂಬಸ್ಥರು ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಎಚ್ಚರಿಕೆ ಕೊಟ್ಟು ಕಳುಹಿಸುವಂತೆ ಮನವಿ ಮಾಡಿಕೊಂಡಿದ್ದರು. ಯುವಕನನ್ನ ವಶಕ್ಕೆ ಪಡೆದ ಪೊಲೀಸರು ಎಚ್ಚರಿಕೆ ನೀಡಿ ವೈಯಕ್ತಿಕ ಬಾಂಡ್ ಮೇಲೆ ಆತನನ್ನ ಕಳುಹಿಸಿದ್ದಾರೆ. ದೂರದ ಗೆಳತಿಯ ಭೇಟಿಗೆ ತೆರಳಿ ಒಂದು ದಿನ ಜೈಲುವಾಸ ಅನುಭವಿಸಿ ಸಲ್ಮಾನ್ ಬೆಂಗಳೂರಿಗೆ ಹಿಂದಿರುಗಿದ್ದಾನೆ.

  • ಮೊಬೈಲ್ ಬೇಕೆಂದ ಪ್ರೇಯಸಿ- ಕೊಲೆಗಡುಕನಾದ ಪ್ರಿಯಕರ

    ಮೊಬೈಲ್ ಬೇಕೆಂದ ಪ್ರೇಯಸಿ- ಕೊಲೆಗಡುಕನಾದ ಪ್ರಿಯಕರ

    – ಸ್ಮಾರ್ಟ್‍ಫೋನ್ ಗಾಗಿ ನಡೆದ ಕೊಲೆ
    – ಪ್ರೇಯಸಿಗಾಗಿ ಗೆಳೆಯನನ್ನೇ ಕೊಂದ

    ಲಕ್ನೋ: ಗೆಳತಿಗೆ ಸ್ಮಾರ್ಟ್‍ಫೋನ್ ನೀಡುವದಕ್ಕಾಗಿ ಗೆಳೆಯನನ್ನೇ ಕೊಲೆ ಮಾಡಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಆಗ್ರಾ ಜಿಲ್ಲೆಯ ಸೈಂಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಜನವರಿ 6ರಂದು ಸೈಂಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪರಿಚಿತ ಶವ ಪತ್ತೆಯಾಗಿತ್ತು. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಮೃತ ದೇಹ ಜೀತೇಂದ್ರ ಕುಮಾರ್ ಎಂಬುವುದ ತಿಳಿದು ಬಂದಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೂರೇ ದಿನಗಳಲ್ಲಿ ಮೃತನ ಗೆಳೆಯ ಮೋನು ಮತ್ತು ಮತ್ತೋರ್ವನನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರು ಸಹ ತಪ್ಪೊಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ.

    ಗೆಳತಿಗಾಗಿ ಗೆಳೆಯನನ್ನ ಕೊಂದ: ಮೋನು ಕೆಲಸವಿಲ್ಲದೇ ಆರ್ಥಿಕ ಸಂಕಷ್ಟದಲ್ಲಿದ್ದನು. ಇಂತಹ ಸಮಯದಲ್ಲಿಯೇ ಮೋನು ಪ್ರೇಯಸಿ ರತ್ನಮಂಜರಿ (ಹೆಸರು ಬದಲಾಯಿಸಲಾಗಿದೆ) ಚೆನ್ನಾಗಿರುವ ಸ್ಮಾರ್ಟ್ ಫೋನ್ ಕೊಡಿಸುವಂತೆ ಹಠ ಹಿಡಿದಿದ್ದಳು. ಜೀತೇಂದ್ರ ಬಳಿಯಲ್ಲಿರುವ ಮೊಬೈಲ್ ಮೇಲೆ ಮೋನು ಕಣ್ಣು ಬಿದ್ದಿತ್ತು.

    ಮೋನು ತನ್ನ ಗೆಳೆಯನ ಜೊತೆ ಸೇರಿ ಜೀತೇಂದ್ರನನ್ನ ನಿರ್ಜನ ಪ್ರದೇಶಕ್ಕೆ ಕರೆಸಿಕೊಂಡಿದ್ದನು. ಈ ವೇಳೆ ಜೀತೇಂದ್ರನ ಶರ್ಟ್ ನಿಂದಲೇ ಆತನ ಕತ್ತು ಹಿಸುಕಿದ್ದಾರೆ. ನಂತರ ಜೀತೇಂದ್ರ ಬಾಯಿ ಮತ್ತು ಕಿವಿಗೆ ಮಣ್ಣು ತುಂಬಿದ್ದಾರೆ. ಜೀತೇಂದ್ರ ಸತ್ತಿರೋದು ಖಚಿತವಾಗ್ತಿದ್ದಂತೆ ಮೊಬೈಲ್ ತೊಗೊಂಡು ಸ್ಥಳದಿಂದ ಇಬ್ಬರು ಎಸ್ಕೇಪ್ ಆಗಿದ್ದರು. ಇದೀಗ ಇಬ್ರು ಜೈಲು ಸೇರಿದ್ದಾರೆ.

  • ಗೆಳತಿ ಮೇಲೆ ಚಾಕುವಿನಿಂದ ಮಾರಣಾಂತಿಕ ಹಲ್ಲೆಗೈದು ಆತ್ಮಹತ್ಯೆಗೆ ಯತ್ನ

    ಗೆಳತಿ ಮೇಲೆ ಚಾಕುವಿನಿಂದ ಮಾರಣಾಂತಿಕ ಹಲ್ಲೆಗೈದು ಆತ್ಮಹತ್ಯೆಗೆ ಯತ್ನ

    – ಜೀವನ್ಮರಣ ಹೋರಾಟದಲ್ಲಿ ಯುವತಿ

    ಹೈದರಾಬಾದ್: ಯುವಕನೋರ್ವ ಗೆಳತಿಯ ಮೇಲೆ ಚಾಕುವಿನಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಆಂಧ್ರ ಪ್ರದೇಶದ ವಿಶಾಖಪಟ್ಟಣದಲ್ಲಿ ಇಂದು ನಡೆದಿದೆ.

    ಶ್ರೀಕಾಂತ್ ಗೆಳತಿ ಪ್ರಿಯಾಂಕ ಮೇಲೆ ಚಾಕುವಿನಿಂದ ದಾಳಿ ನಡೆಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಪ್ರಿಯಾಂಕ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ.

    ನಡುರಸ್ತೆಯಲ್ಲಿ ದಾಳಿ ನಡೆದಿದ್ದು, ಸ್ಥಳೀಯರು ಇಬ್ಬರನ್ನೂ ಕೆಜಿಹೆಚ್ ಆಸ್ಪತ್ರೆಗೆ ದಾಖಲಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಯುವತಿಯ ಕತ್ತಿನ ಭಾಗದಲ್ಲಿ ದೊಡ್ಡ ಪ್ರಮಾಣದ ಗಾಯಗಳಾಗಿದ್ದು, ಗಂಭೀರ ಸ್ಥಿತಿಯಲ್ಲಿದ್ದಾಳೆ ಎಂದು ಕೆಜಿಹೆಚ್ ಆಸ್ಪತ್ರೆಯ ವೈದ್ಯರು ಮಾಹಿತಿ ನೀಡಿದ್ದಾರೆ.

    ಶ್ರೀಕಾಂತ್ ಮತ್ತು ಪ್ರಿಯಾಂಕ ಪರಸ್ಪರ ಪ್ರೀತಿಸುತ್ತಿದ್ದರು ಎಂದು ವರದಿಯಾಗಿದ್ದು, ಶ್ರೀಕಾಂತ್ ನ ಈ ನಿರ್ಧಾರಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಇಬ್ಬರ ಕುಟುಂಬಸ್ಥರಿಗೆ ವಿಷಯ ತಿಳಿಸಿದ್ದು, ತನಿಖೆ ನಡೆಸುತ್ತಿದ್ದಾರೆ.

     

  • ಗೆಳೆಯನೊಂದಿಗೆ ಸುತ್ತಾಟ, ಸೆಕ್ಸ್ – ಮನೆಗೆ ಬಂದು ರೇಪ್ ಆಯ್ತು ಅಂದ್ಳು!

    ಗೆಳೆಯನೊಂದಿಗೆ ಸುತ್ತಾಟ, ಸೆಕ್ಸ್ – ಮನೆಗೆ ಬಂದು ರೇಪ್ ಆಯ್ತು ಅಂದ್ಳು!

    – ತನಿಖೆಯಲ್ಲಿ ಬಯಲಾಯ್ತು ಕಳ್ಳಾಟ
    – ಮನೆಗೆ ಬರೋದು ತಡವಾಗಿದ್ದಕ್ಕೆ ಸುಳ್ಳು ಹೇಳಿದ್ಳು!

    ರಾಯ್ಪುರ: ಮನೆಗೆ ಬರೋದು ತಡವಾಗಿದ್ದರಿಂದ ಅಪ್ರಾಪ್ತೆ ತನ್ನ ಮೇಲೆ ಗ್ಯಾಂಗ್‍ರೇಪ್ ಆಗಿದೆ ಎಂದು ಸುಳ್ಳು ಕಥೆ ಕಟ್ಟಿರುವ ಪ್ರಕರಣ ಛತ್ತೀಸಗಢದ ಕವರ್ಡಾ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

    ನವೆಂಬರ್ 22ರಂದು ಅಪ್ರಾಪ್ತೆ ಸ್ನೇಹಿತೆಯರನ್ನು ಭೇಟಿಯಾಗಿ ಬರೋದಾಗಿ ಹೇಳಿ ಮನೆಯಿಂದ ಹೊರ ಹೋಗಿದ್ದಳು. ರಾತ್ರಿ 11 ಗಂಟೆಯಾದ್ರೂ ಮಗಳು ಮನೆಗೆ ಬರದ ಕಾರಣಕ್ಕೆ ಪೋಷಕರು 11.30ಕ್ಕೆ ದೂರು ಸಲ್ಲಿಸಲು ಪೊಲೀಸ್ ಠಾಣೆಗೆ ತೆರಳಿದ್ದರು. ಅಷ್ಟರಲ್ಲಿ ಬಾಲಕಿ ಮನೆಗೆ ಹಿಂದಿರುಗಿದ್ದಾಳೆ. ಪೋಷಕರು ಬೈಯಬಹುದು ಎಂದು ಹೆದರಿದ ಬಾಲಕಿ ಗೆಳೆಯನ ಜೊತೆಯಲ್ಲಿರುವಾಗ ಬಂದ ನಾಲ್ಕು ಜನ ಅಪರಿಚಿತರ ತನ್ನ ಅತ್ಯಾಚಾರ ಎಸಗಿದ್ದರು ಎಂದು ಸುಳ್ಳು ಕಥೆ ಕಟ್ಟಿ ಹೇಳಿದ್ದಳು.

    ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ ಪೊಲೀಸರು ಏಳು ತಂಡಗಳನ್ನ ರಚಿಸಿ ತನಿಖೆಗೆ ಇಳಿದಿದ್ದರು. ಬಾಲಕಿಯ ಗೆಳೆಯನನ್ನ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಇಬ್ಬರ ಹೇಳಿಕೆಯಲ್ಲಿ ವ್ಯತ್ಯಾಸ ಕಂಡು ಬಂದಿದೆ. ಅನುಮಾನದ ಮೇಲೆ ಪೊಲೀಸರು ಬಾಲಕಿ ಮತ್ತು ಆಕೆಯ ಗೆಳೆಯನ ವಿಚಾರಣೆ ತೀವ್ರಗೊಳಿಸಿದಾಗ ತಪ್ಪೊಪ್ಪಿಕೊಂಡಿದ್ದಾರೆ.

    ಪಿಜಿ ಕಾಲೇಜು ಬಳಿ ಭೇಟಿಯಾದ ಇಬ್ಬರು ಮಾತುಕತೆ ನಡೆಸಿದ್ದಾರೆ. ನಂತರ ಲೈಂಗಿಕ ಸಂಪರ್ಕ ಹೊಂದಿದ್ದಾರೆ. ಮನೆಗೆ ಹೋಗಲು ತಡವಾಗಿದ್ದರಿಂದ ಯುವಕ ಆಕೆಗೆ ಗ್ಯಾಂಗ್‍ರೇಪ್ ಆಗಿದೆ ಎಂದು ಸುಳ್ಳು ಹೇಳುವಂತೆ ಹೇಳಿದ್ದಾನೆ. ಬಾಲಕಿ ಸಹ ಮನೆಗೆ ಬಂದು ತನ್ನ ಮೇಲೆ ಗ್ಯಾಂಗ್‍ರೇಪ್ ಆಗಿದೆ ಎಂದು ಹೇಳಿದ್ದಳು. ಘಟನೆ ಸಂಬಂಧ ಪೋಕ್ಸೋ ಅಡಿ ಪ್ರಕರಣ ದಾಖಲಾಗಿದ್ದು, ಅಪ್ರಾಪ್ತೆ ಜೊತೆ ಲೈಂಗಿಕ ಚಟುವಟಿಕೆಯಲ್ಲಿ ತೊಡಗಿದ್ದರಿಂದ ಯುವಕನನ್ನು ಬಂಧಿಸಲಾಗಿದೆ.

  • ಗಂಟುಮೂಟೆ ಸಮೇತ ಗೆಳತಿ ಜೊತೆ ಯುವತಿ ಪಲಾಯನ

    ಗಂಟುಮೂಟೆ ಸಮೇತ ಗೆಳತಿ ಜೊತೆ ಯುವತಿ ಪಲಾಯನ

    – ಸಿಕ್ಕ ಮೇಲೆ ಬಯಲಾಯ್ತು ಸತ್ಯ

    ಲಕ್ನೋ: ಮನೆಯಿಂದ ಓಡಿ ಹೋಗಿದ್ದ ಯುವತಿಯರಿಬ್ಬರನ್ನ ಪೊಲೀಸರು ವಶಕ್ಕೆ ಪಡೆದುಕೊಂಡಿರುವ ಘಟನೆ ಉತ್ತರ ಪ್ರದೇಶದ ಶಹಜಹಾನ್ಪುರಲ್ಲಿ ನಡೆದಿದೆ. ಪೊಲೀಸರು ಮುಂದೆ ಇಬ್ಬರು ಮನೆಯಿಂದ ಓಡಿ ಹೋದ ಕಾರಣವನ್ನು ರಿವೀಲ್ ಮಾಡಿದ್ದಾರೆ.

    ಗೀತಾ ಮತ್ತು ರಚನಾ (ಇಬ್ಬರ ಹೆಸರು ಬದಲಾಯಿಸಲಾಗಿದೆ) ಮನೆಯಿಂದ ಓಡಿಹೋದ ಯುವತಿಯರು. ಗೀತಾ ಪೋಷಕರು ಯಾವುದೇ ವಿಷಯಕ್ಕೆ ಬೈದು ಥಳಿಸಿದ್ದಾರೆ. ಇದರಿಂದ ಕೋಪಗೊಂಡ ಗೀತಾ ಗೆಳತಿ ರಚನಾಳನ್ನ ಕರೆದುಕೊಂಡು ಗಂಟುಮೂಟೆ ಸಮೇತ ಮನೆಯಿಂದ ಪರಾರಿಯಾಗಿದ್ದಳು. ಇತ್ತ ಗೀತಾ ಕಾಣೆಯಾಗಿರುವ ಬಗ್ಗೆ ಸೋದರ ಶಹಜಹಾನ್ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ. ಇತ್ತ ರಚನಾ ಪೋಷಕರು ಸಹ ದೂರು ದಾಖಲಿಸಿದ್ದರು.

    ಯುವತಿಯರು ಕಾಣೆಯಾಗಿರುವ ಬಗ್ಗೆ ದೂರು ದಾಖಲಾಗುತ್ತಿದ್ದಂತೆ ತಡಮಾಡದ ಪೊಲೀಸರು ಅಖಾಡಕ್ಕೆ ಇಳಿದಿದ್ದರು. ಮೊದಲಿಗೆ ಇಬ್ಬರ ಮೊಬೈಲ್ ಲೋಕೇಶನ್ ಲಕ್ನೋ ನಗರದಲ್ಲಿ ಪತ್ತೆಯಾಗಿದೆ. ಪೊಲೀಸರ ತಂಡ ಲಕ್ನೋ ತಲುಪವಷ್ಟರಲ್ಲಿ ಗೀತಾ ಮತ್ತು ರಚನಾ ತಮ್ಮ ಮೊಬೈಲ್ ಸ್ವಿಚ್ಛ್ ಆಫ್ ಮಾಡಿಕೊಂಡಿದ್ದರು. ಕೊನೆಗೆ ಇಬ್ಬರು ಹತ್ರಾಸ್ ನಲ್ಲಿರುವ ಬಗ್ಗೆ ತಿಳಿಯುತ್ತಿದ್ದಂತೆ ಸ್ಥಳೀಯ ಪೊಲೀಸರ ಸಹಾಯದೊಂದಿಗೆ ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

    ಬಯಲಾಯ್ತು ಸತ್ಯ: ಇಬ್ಬರನ್ನ ವಶಕ್ಕೆ ಪಡೆದ ಪೊಲೀಸರು ಗೀತಾ ಮತ್ತು ರಚನಾಳನ್ನ ಹತ್ರಾಸ್ ನಿಂದ ಶಹಜಹಾನ್ಪುರಕ್ಕೆ ಕರೆ ತಂದಿದ್ದಾರೆ. ಪೊಲೀಸರ ಮುಂದೆ ಮನೆ ಬಿಟ್ಟು ಹೋಗಿದ್ಯಾಕೆ ಎಂಬುದರ ಬಗ್ಗೆ ಹೇಳಿದ್ದಾರೆ. ಮನೆಯಲ್ಲಿ ಥಳಿಸಿದ ಮೇಲೆ ಗೀತಾ ಮನೆಯಿಂದ ಓಡಿ ಹೋಗಲು ಪ್ಲಾನ್ ಮಾಡಿದ್ದಳು. ನಾನು ಆಕೆಯ ಆಪ್ತೆ ಸ್ನೇಹಿತೆಯಾಗಿದ್ದರಿಂದ ಗೆಳೆತನಕ್ಕಾಗಿ ನಾನು ಆಕೆಯ ಜೊತೆಯಲ್ಲಿಯೇ ಹೋದೆ ಎಂದು ರಚನಾ ಹೇಳಿದ್ದಾಳೆ.

    ಇಬ್ಬರ ಹೇಳಿಕೆಯನ್ನ ದಾಖಲಿಸಿಕೊಂಡಿರುವ ಪೊಲೀಸರು ಪೋಷಕರ ವಶಕ್ಕೆ ನೀಡಿದ್ದಾರೆ. ಗೆಳತಿಗಾಗಿ ಮತ್ತೊಬ್ಬ ಸ್ನೇಹಿತೆ ಓಡಿ ಹೋಗಿರುವುದನ್ನ ಕಂಡು ಪೊಲೀಸರು ಕೂಡ ಆಶ್ವರ್ಯ ವ್ಯಕ್ತಪಡಿಸಿದ್ದಾರೆ.

  • ವಯಸ್ಸು 58 ಆದ್ರು ಮೂವರ ಜೊತೆ ಸಂಬಂಧ- 50ಕ್ಕೂ ಅಧಿಕ ಬಾರಿ ಇರಿದು ಕೊಂದ್ಳು

    ವಯಸ್ಸು 58 ಆದ್ರು ಮೂವರ ಜೊತೆ ಸಂಬಂಧ- 50ಕ್ಕೂ ಅಧಿಕ ಬಾರಿ ಇರಿದು ಕೊಂದ್ಳು

    – ಪ್ರಿಯಕರನನ್ನ ಕೊಂದು ಆತ್ಮಹತ್ಯೆಗೆ ಶರಣಾದ್ಳು
    – ಪತ್ನಿಗೆ ಬ್ಯುಸಿನೆಸ್ ಟ್ರಿಪ್ ಅಂತ ಸುಳ್ಳು ಹೇಳ್ತಿದ್ದ

    ಸೌಥ್ ವೇಲ್: ಪ್ರಿಯಕರನಿಗೆ 50ಕ್ಕೂ ಅಧಿಕ ಬಾರಿ ಇರಿದು ಮಹಿಳೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಸೌಥ್ ವೇಲ್ ನಲ್ಲಿ ನಡೆದಿದೆ.

    58 ವರ್ಷದ ಗೈರಿ ವಿಲಿಯಮ್ಸ್ ಕೊಲೆಯಾದ ವ್ಯಕ್ತಿ. 46 ವರ್ಷದ ಶೆರಿಡಿನ್ ಗೆಳೆಯನನ್ನ ಕೊಂದು ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಸೌಥ್ ವೇಲ್ ನಿವಾಸಿಯಾಗಿದ್ದ ವಿಲಿಯಮ್ಸ್ ಗೆ ಮದುವೆಯಾಗಿದ್ದರೂ ಇಬ್ಬರ ಜೊತೆ ಅಕ್ರಮ ಸಂಬಂಧ ಹೊಂದಿದ್ದನು. ಆದ್ರೆ ಮೂವರಿಗೂ ಈ ವಿಷಯ ತಿಳಿಯದಂತೆ ರಹಸ್ಯ ಕಾಪಾಡಿಕೊಂಡಿದ್ದನು. ಇದನ್ನೂ ಓದಿ: ಅತ್ಯಾಚಾರಕ್ಕೆ ವಿರೋಧ- 13 ವರ್ಷದ ಬಾಲಕಿಗೆ ಬೆಂಕಿ ಹಚ್ಚಿದ ಮಾಲೀಕ

    ಅಕ್ರಮ ಸಂಬಂಧದ ವಿಷಯ ಶೆರಿಡಿನ್ ಗೆ ಗೊತ್ತಾಗಿದೆ. ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ಜಗಳ ವಿಕೋಪಕ್ಕೆ ತಿರುಗಿದಾಗ ವಿಲಿಯಮ್ಸ್ ಗೆ ಹರಿತವಾದ ವಸ್ತುವಿನಿಂದ ಇರಿದು ಕೊಂದಿದ್ದಾಳೆ. ಕೊಲೆಯ ಬಳಿಕ ಆತಂಕಗೊಂಡ ಶೆರಿಡಿನ್ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇದನ್ನೂ ಓದಿ: ಮಧ್ಯ ಪ್ರದೇಶದಲ್ಲಿ ಮೃತದೇಹ, ಬೆಂಗಳೂರಿನಲ್ಲಿ ತಲೆ ಪತ್ತೆ

    ಮೃತ ವಿಲಿಯಮ್ಸ್ ಬ್ಯುಸಿನೆಸ್ ಟ್ರಿಪ್ ಅಂತ ಸುಳ್ಳು ಹೇಳಿ ಇನ್ನಿಬ್ಬರು ಗೆಳತಿಯರ ಜೊತೆ ಕಾಲ ಕಳೆಯುತ್ತಿದ್ದನು. ವಿಲಿಯಮ್ಸ್ ಮರಣೋತ್ತರ ಪರೀಕ್ಷೆಯಲ್ಲಿ ಆತನನ್ನು 50ಕ್ಕೂ ಅಧಿಕ ಬಾರಿ ಇರಿದು ಕೊಲ್ಲಲಾಗಿದೆ ಎಂದು ವರದಿಯಾಗಿದೆ. . ಇದನ್ನೂ ಓದಿ: ಮನೆಯ ಬಳಿ ಬಂದು ಕರೆದ್ರು – ಹತ್ತಿರ ಬರ್ತಿದ್ದಂತೆ ಗುಂಡಿಕ್ಕಿ ಬಿಜೆಪಿ ಕೌನ್ಸಿಲರ್ ಹತ್ಯೆ

  • ಮಗುವಿನ ಚಿಕ್ಕಪ್ಪನ ಜೊತೆ ಗೆಳತಿ ಎಸ್ಕೇಪ್ – ಆಕೆಗಾಗಿ ಪ್ರೇಮಿಯಿಂದ ಮಗು ಕಿಡ್ನಾಪ್

    ಮಗುವಿನ ಚಿಕ್ಕಪ್ಪನ ಜೊತೆ ಗೆಳತಿ ಎಸ್ಕೇಪ್ – ಆಕೆಗಾಗಿ ಪ್ರೇಮಿಯಿಂದ ಮಗು ಕಿಡ್ನಾಪ್

    ಲಕ್ನೋ: ಸತತ 42 ಗಂಟೆಗಳ ಕಾಲ ನಡೆದ ರಕ್ಷಣಾ ಕಾರ್ಯಾಚರಣೆಯಲ್ಲಿ ಉತ್ತರಪ್ರದೇಶದ ಪೊಲೀಸ್ ಸಿಬ್ಬಂದಿ ಕಿಡ್ನಾಪ್ ಆಗಿದ್ದ 15 ತಿಂಗಳ ಮಗುವನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಆರೋಪಿಯ ಪ್ರೇಯಸಿ ಒಂದೂವರೆ ವರ್ಷದ ಮಗುವಿನ ಚಿಕ್ಕಪ್ಪನೊಂದಿಗೆ ಓಡಿಹೋಗಿದ್ದಳು. ಆದ್ದರಿಂದ ಮಗುವನ್ನು ಕಿಡ್ನಾಪ್ ಮಾಡಿ ತನ್ನ ಗೆಳತಿಯನ್ನು ವಾಪಸ್ ಕರೆಸುವಂತೆ ತಂದೆಗೆ ಒತ್ತಡ ಹಾಕುವ ಸಲುವಾಗಿ ಮಗುವನ್ನು ಅಪಹರಿಸಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

    ಕರೇಂಡಾ ನಿವಾಸಿ ಮಗುವಿನ ತಂದೆ ಮನ್ಸೂರ್ ಅಲಿ ಈ ಕುರಿತು ದೂರು ದಾಖಲಿಸಿದ್ದಾರೆ. ನಮ್ಮ ದೂರದ ಸಂಬಂಧಿ ನನ್ಹೆ ಎಂಬಾತ ಸಹಚರನ ಸಹಾಯದಿಂದ ನನ್ನ ಮಗನನ್ನು ಅಪಹರಿಸಿದ್ದಾನೆ. ಆತನ ಗೆಳತಿ ಮಗುವಿನ ಚಿಕ್ಕಪ್ಪ ಜೊತೆ ಓಡಿಹೋಗಿದ್ದಾಳೆ. ಹೀಗಾಗಿ ಮಗುವನ್ನು ಬಿಡುಗಡೆ ಮಾಡಬೇಕಾದರೆ ಗೆಳತಿಯನ್ನು ವಾಪಸ್ ಕರೆಸುವಂತೆ ಒತ್ತಡ ಹಾಕುತ್ತಿದ್ದಾನೆ ಎಂದು ಮಗುವಿನ ತಂದೆ ಪೊಲೀಸರಿಗೆ ತಿಳಿಸಿದ್ದಾರೆ.

    ಪೊಲೀಸರು ಕೂಡಲೇ ಪ್ರತಾಪಗಢದ ನನ್ಹೆ ಮತ್ತು ಆತನ ಸಹಚರ ದಿಲ್ದಾರ್ ವಿರುದ್ಧ ಐಪಿಸಿ ಸೆಕ್ಷನ್ ಅಡಿಯಲ್ಲಿ ಅಪಹರಣದ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಮಗುವಿನ ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಿದ್ದರು. ಮಾಹಿತಿದಾರರಿಂದ ಸುಳಿವು ಪಡೆದ ನಂತರ ಅಪಹರಣಕಾರರು ಕರೇಲಿ ಪ್ರದೇಶದಲ್ಲಿರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಬಳಿಕ ಸ್ಥಳಕ್ಕೆ ಹೋಗಿ 42 ಗಂಟೆಗಳ ಒಳಗೆ ಮಗುವನ್ನು ಪೊಲೀಸರು ರಕ್ಷಿಸಿದ್ದಾರೆ ಎಂದು ವರದಿಯಾಗಿದೆ.

    ನನ್ಹೆ ವಿದೇಶದಲ್ಲಿಯೇ ಇರುತ್ತಿದ್ದನು. ಸೋಷಿಯಲ್ ಮೀಡಿಯಾದ ಮೂಲಕ ಪ್ರಯಾಗರಾಜ್ ಮೂಲದ ಯುವತಿಯೊಂದಿಗೆ ಆತ ಸಂಬಂಧ ಬೆಳೆಸಿಕೊಂಡಿದ್ದನು. ಅಲ್ಲದೇ ಭಾರತಕ್ಕೆ ಮರಳಿದ ನಂತರ ಮದುವೆಯಾಗುವುದಾಗಿ ಅವಳಿಗೆ ಭರವಸೆ ನೀಡಿದ್ದನು. ಈ ಮಧ್ಯೆ ಯುವತಿಗೆ ಮಗುವಿನ ಚಿಕ್ಕಪ್ಪ ಸಲ್ಮಾನ್ ಸ್ನೇಹವಾಗಿ ಪರಸ್ಪರ ಪ್ರೀತಿಸುತ್ತಿದ್ದರು. ಈ ಬಗ್ಗೆ ತಿಳಿದ ಆರೋಪಿ ಹೇಗಾದರೂ ಮಾಡಿ ಗೆಳತಿಯನ್ನು ವಾಪಸ್ ಪಡೆಯಲೇಬೇಕೆಂದು ಈ ರೀತಿ ಮಾಡಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

  • ಸ್ಪಾ ಉದ್ಯೋಗಿಯ ಕೊಲೆ ರಹಸ್ಯ ಬೇಧಿಸಿದ ಪೊಲೀಸರು

    ಸ್ಪಾ ಉದ್ಯೋಗಿಯ ಕೊಲೆ ರಹಸ್ಯ ಬೇಧಿಸಿದ ಪೊಲೀಸರು

    -ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿತ್ತು ಶವ
    -ಕೂಲ್ ಡ್ರಿಂಕ್ಸ್ ನಲ್ಲಿ ಮದ್ಯ ಮಿಕ್ಸ್

    ಗಾಂಧಿನಗರ: ಥೈಲ್ಯಾಂಡ್ ಮೂಲದ ಸ್ಪಾ ಉದ್ಯೋಗಿಯ ಕೊಲೆ ರಹಸ್ಯ ಬೇಧಿಸುವಲ್ಲಿ ಗುಜರಾತಿನ ಪೊಲೀಸರು ಯಶಸ್ವಿಯಾಗಿದ್ದಾರೆ. ಸೆಪ್ಟೆಂಬರ್ 6ರಂದು ಯುವತಿ ವನಿಡಾ ಬುಸೊರ್ನ್ ಮೃತದೇಹ ಆಕೆಯ ಮನೆಯಲ್ಲಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ವನಿಡಾ ವಾಸವಾಗಿದ್ದ ಕೋಣೆಯಲ್ಲಿ ಮದ್ಯದ ಪಾರ್ಟಿ ಬಳಿಕ ಕೊಲೆ ನಡೆದಿತ್ತು.

    ಮಗದಲ್ಲಾದಲ್ಲಿ ವಾಸವಾಗಿದ್ದ ವನಿಡಾ ಉರ್ಫ್ ಮಿಮಿ ಮೃತದೇಹ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಮನೆಯಲ್ಲಿ ವನಿಡಾ ಮೊಬೈಲ್, ಹಣ ಮತ್ತು ಆಕೆಯ ಚಿನ್ನಾಭರಣಗಳು ಮಾಯವಾಗಿದ್ದವು. ಈ ಹಿನ್ನೆಲೆ ಪೊಲೀಸರು ಕಳ್ಳತನ ಮತ್ತು ಕೊಲೆ ಎಂದು ತನಿಖೆಯ ಆರಂಭದಲ್ಲಿ ಅನುಮಾನ ವ್ಯಕ್ತಪಡಿಸಿದ್ದರು.

    ಕೋಣೆಯಲ್ಲಿ ಕೇವಲ ಒಂದು ಗಾದಿ ಮಾತ್ರ ಬೆಂಕಿಗಾಹುತಿಯಾಗಿತ್ತು. ಬೆಂಕಿಯಲ್ಲಿ ವನಿಡಾ ಸುಟ್ಟು ಕರಕಲಾಗಿದ್ದರೂ ಯಾವುದೇ ರೀತಿ ಸದ್ದು ನೆರಹೊರೆಯವರಿಗೆ ಕೇಳಿಸಿರಲಿಲ್ಲ. ಘಟನಾ ಸ್ಥಳದಲ್ಲಿ ಸಿಕ್ಕ ಕೂಲ್ ಡ್ರಿಂಕ್ಸ್ ಬಾಟಲ್ ಗಳಲ್ಲಿ ಮದ್ಯದ ವಾಸನೆ ಬರುತ್ತಿತ್ತು. ಈ ಎಲ್ಲ ಅಂಶಗಳು ಇದೊಂದು ಪೂರ್ವಯೋಜಿಯ ಕೊಲೆ ಎಂಬುವುದು ಪೊಲೀಸರಿಗೆ ಬಹುತೇಕ ಖಚಿತವಾಗಿತ್ತು. ಎಫ್‍ಐಆರ್ ದಾಖಲಿಸಿಕೊಂಡ ಪೊಲೀಸರು ವನಿಡಾ ವಾಸವಾಗಿದ್ದ ಕಟ್ಟಡದ ಸಿಸಿಟಿವಿ ದೃಶ್ಯಗಳನ್ನು ವಶಕ್ಕೆ ಪಡೆದಿದ್ರು. ಇದನ್ನೂ ಓದಿ: ನಾನು ಬದುಕುಳಿಯಲು ಕೊಲೆ ಮಾಡಿದೆ – ಮಲಗಿದ್ದ ಪತ್ನಿ, ಅತ್ತೆಯ ಕತ್ತು ಕೊಯ್ದ

    ಸಿಸಿಟಿವಿ ದೃಶ್ಯದ ಆಧಾರದಲ್ಲಿ ವನಿಡಾ ಗೆಳತಿ, ಸ್ಪಾದಲ್ಲಿ ಕೆಲಸ ಮಾಡಿಕೊಂಡಿದ್ದ ಆಯಿದಾ ಮೇಲೆ ಪೊಲೀಸರಿಗೆ ಶಂಕೆ ವ್ಯಕ್ತವಾಗಿತ್ತು. ಕೊಲೆಯಾದ ದಿನ ರಾತ್ರಿ ಸುಮಾರು 3.30ಕ್ಕೆ ವನಿಡಾ ಮನೆಯಿಂದ ಆಯಿದಾ ಕೈಯಲ್ಲಿ ಕಪ್ಪು ಪಾಲಿಥಿನ್ ಬ್ಯಾಗ್ ಹಿಡಿದು ಹೊರ ಬಂದಿದ್ದಳು. ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಕೊಲೆಯಾದ ದಿನ ತಾನು ವನಿಡಾ ಮನೆಯಲ್ಲಿದ್ದೆ ಎಂದು ಆಯಿದಾ ತಪ್ಪೊಪ್ಪಿಕೊಂಡಿದ್ದಾಳೆ.

    ತಡರಾತ್ರಿ ಎಲ್ಲಿಗಾದರೂ ಹೋಗಲು ವನಿಡಾ ಮತ್ತು ಆಯಿದಾ ಮೊದಲೇ ಆಟೋ ಬುಕ್ ಮಾಡಿಕೊಳ್ಳುತ್ತಿದ್ದರು. ಕೊಲೆಯಾದ ದಿನವೂ ಆಯಿದಾ ಇದೇ ಆಟೋ ಬಳಸಿಕೊಂಡಿದ್ದಳು. ಮನೆಯಿಂದ ಹೊರ ತಂದಿದ್ದ ಬ್ಯಾಗ್ ಆಟೋ ಚಾಲಕನಿಗೆ ನೀಡಿ ಎಸೆಯುವಂತೆ ಹೇಳಿದ್ದಳು. ಆದ್ರೆ ಚಾಲಕ ಮರೆತು ಅದನ್ನು ಆಟೋದಲ್ಲಿಯ ಇಟ್ಟುಕೊಂಡಿದ್ದನು. ಪತ್ತೆಯಾದ ಬ್ಯಾಗ್ ನಲ್ಲಿ ಹಾಸಿಗೆ ಮತ್ತು ಒಂದು ಮೊಬೈಲ್ ಸಿಕ್ಕಿದೆ. ಬಂಧಿತ ಆಯಿದಾ ವಿರುದ್ಧ ಮಲೇಶಿಯಾ ಮತ್ತು ಜಪಾನ್ ನಲ್ಲಿ ಕೆಲ ಪ್ರಕರಣಗಳು ದಾಖಲಾಗಿವೆ. ಇದನ್ನೂ ಓದಿ: ಕಾಲ್ ರಿಸೀವ್ ಮಾಡ್ತಿದ್ದಂತೆ ಬೇರೆಯವರ ಪತ್ನಿಗೆ ಖಾಸಗಿ ಅಂಗ ತೋರಿಸಿದ

    ವನಿಡಾ ಮನೆಯಲ್ಲಿ ತಡರಾತ್ರಿವರೆಗೂ ಮದ್ಯದ ಪಾರ್ಟಿ ಮಾಡಲಾಗಿದೆ. ಈ ವೇಳೆ ಆಯಿದಾ ಗಾಂಜಾ ಸಹ ಸೇವನೆ ಮಾಡಿದ್ದಾಳೆ. ಹಣ ಮತ್ತು ಚಿನ್ನದಾಸೆಗಾಗಿ ವನಿಡಾಳನ್ನು ಕೊಲೆ ಮಾಡಿ, ಪೊಲೀಸರು ದಿಕ್ಕಿ ತಪ್ಪಿಸಲಿ ಹಲವು ಪ್ಲಾನ್ ಮಾಡಿಕೊಂಡಿದ್ದಳು. ಪೊಲೀಸ್ ತನಿಖೆ ವೇಳೆ ಆಯಿದಾಳ ಎಲ್ಲ ಕಳ್ಳಾಟಗಳು ಬಯಲಾಗಿದ್ದು, ಆರೋಪಿ ಕಂಬಿ ಎಣಿಸುತ್ತಿದ್ದಾಳೆ. ಇದನ್ನೂ ಓದಿ: ಮದ್ಯ ಸೇವಿಸಿ ಯುವತಿಗೂ ಕುಡಿಸಿದ್ರು – ಅಪ್ರಾಪ್ತ ಸೇರಿ ಮೂವರಿಂದ ಗ್ಯಾಂಗ್‍ರೇಪ್

  • ಫೋನ್ ಕರೆ ಸ್ವೀಕರಿಸಲು ಗೆಳತಿ ನಕಾರ- ಮನನೊಂದು ಯುವಕ ಆತ್ಮಹತ್ಯೆಗೆ ಯತ್ನ

    ಫೋನ್ ಕರೆ ಸ್ವೀಕರಿಸಲು ಗೆಳತಿ ನಕಾರ- ಮನನೊಂದು ಯುವಕ ಆತ್ಮಹತ್ಯೆಗೆ ಯತ್ನ

    ಚೆನ್ನೈ: ಪ್ರಿಯತಮೆ ತನ್ನ ಕಾಲ್ ಸ್ವೀಕರಿಸುತ್ತಿಲ್ಲ ಎಂದು ಮನನೊಂದು 22 ವರ್ಷದ ಆಟೋ ಚಾಲಕನೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಚೆನ್ನೈನಲ್ಲಿ ನಡೆದಿದೆ.

    ಆತ್ಮಹತ್ಮೆಗೆ ಯತ್ನಿಸಿದವನನ್ನು ದುರೈ ಎಂದು ಗುರುತಿಸಲಾಗಿದ್ದು, ಈತ ಉತ್ತರ ಚೆನ್ನೈನ ಕೊರಕ್ಕುಪೇಟೆ ನೆರೆಹೊರೆಯ ಪಟ್ಟಾಭಿಷೇಕ ನಗರ ನಿವಾಸಿ.

    ಕೊರೊನಾ ಲಾಕ್ ಡೌನ್ ಆದ ಬಳಿಕ ದುರೈ ಹಾಗೂ ಆತನ ಪ್ರಿಯತಮೆ ಭೇಟಿಯಾಗಿರಲಿಲ್ಲ. ಆದರೆ ಫೋನ್ ಕಾಲ್ ಹಾಗೂ ಮೆಸೇಜ್ ಮೂಲಕ ಇಬ್ಬರೂ ನಿರಂತರ ಸಂಪರ್ಕದಲ್ಲಿದ್ದರು. ಇತ್ತೀಚೆಗೆ ಗೆಳತಿ ಫೋನ್, ಮೆಸೇಜ್ ಮಾಡದೆ ಈತನನ್ನು ನಿರ್ಲಕ್ಷ್ಯಿಸುತ್ತಿದ್ದಳು. ಇದರಿಂದ ದುರೈ ಮಾನಸಿಕವಾಗಿ ನೊಂದಿದ್ದಾನೆ. ಈ ಹಿನ್ನೆಲೆಯಲ್ಲಿ ಗುರುವಾರ ತಾನು ವಾಸವಿದ್ದ ಕಟ್ಟಡದ ಮೂರನೇ ಮಹಡಿಯಿಂದ ಕೆಳಕ್ಕೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ.

    ಕಟ್ಟಡದಿಂದ ಜಿಗಿದಿದ್ದರಿಂದ ದುರೈ ಕಾಲಿನ ಮೂಳೆಗಳು ಹಾಗೂ ದೇಹದ ಇತರೆ ಭಾಗಗಳಿಗೆ ಗಂಭೀರವಾಗಿ ಗಾಯಗಳಾಗಿವೆ. ನೋವಿನಿಂದ ಚೀರಾಡಿದ್ದನು ಕೇಳಿಸಿಕೊಂಡ ಸ್ಥಳೀಯರು ಕೂಡಲೇ ಆತನ ರಕ್ಷಣೇಗೆ ಧಾವಿಸಿದ್ದಾರೆ. ಬಳಿಕ ಆತನನ್ನು ಜಿಎಸ್‍ಎಂಸಿಎಚ್ ಗೆ ದಾಖಲಿಸಿ ಐಸಿಯುವಿನಲ್ಲಿ ಚಿಕಿತ್ಸೆ ಕೊಡಿಲಾಗುತ್ತಿದೆ. ಸದ್ಯ ಯುವಕ ಪ್ರಜ್ಞಾಹೀನನಾಗಿದ್ದು, ವೈದ್ಯರು ನಿಗಾ ಇಟ್ಟಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

    ಘಟನೆ ಸಂಬಂಧ ಆರ್‍ಕೆ ನಗರ ಪೊಲೀಸರು ತನಿಖೆ ಆರಂಭಿಸಿದ್ದಾರೆ. ದುರೈ ಮೊಬೈಲ್ ಫೋನ್ ವಶಕ್ಕೆ ಪಡೆದುಕೊಂಡಿದ್ದಾರೆ. ಅಲ್ಲದೆ ದುರೈ ಆರೋಗ್ಯ ಸುಧಾರಿಸಿದ ಬಳಿಕ ಆತನ ಬಳಿಯಿಂದ ಹೇಳಿಕೆ ಪಡೆದುಕೊಳ್ಳಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಪೊಲೀಸರ ಪ್ರಕಾರ, ದುರೈ ತನ್ನ ಹೆತ್ತವರೊಂದಿಗೆ ಕೊರಕ್ಕುಪೇಟೆ ವಸತಿ ಸಮುಚ್ಚಯದ ಮೂರನೇ ಮಹಡಿಯಲ್ಲಿರುವ ಅಪಾರ್ಟ್ ಮೆಂಟ್ ನಲ್ಲಿ ವಾಸಿಸುತ್ತಿದ್ದು, ಗೆಳತಿ ಕೂಡ ನೆರೆಹೊರೆಯ ನಿವಾಸಿ ಎಂದು ತಿಳಿದುಬಂದಿದೆ.

  • ಅಲೋಪೆಸಿಯಾದಿಂದ ಬಳಲುತ್ತಿರೋ ಗೆಳತಿಯ ತಲೆ ಬೋಳಿಸಿ ತನ್ನ ಕೂದಲೂ ತೆಗೆದ!

    ಅಲೋಪೆಸಿಯಾದಿಂದ ಬಳಲುತ್ತಿರೋ ಗೆಳತಿಯ ತಲೆ ಬೋಳಿಸಿ ತನ್ನ ಕೂದಲೂ ತೆಗೆದ!

    – ವೈರಲ್ ವಿಡಿಯೋ ನೋಡಿ ಕಣ್ಣೀರು ಹಾಕಿದ ನೆಟ್ಟಿಗರು

    ನವದೆಹಲಿ: ಪ್ರೀತಿ ಕುರುಡು ಅಂತಾರೆ. ನಿಜವಾದ ಪ್ರೀತಿ ಎಲ್ಲ ರೂಪಗಳಲ್ಲಿ ಬರುತ್ತದೆ. ಅಲೋಪೆಸಿಯಾದಿಂದ ಬಳಲುತ್ತಿರುವ ತನ್ನ ಗೆಳತಿಯ ತಲೆ ಬೋಳಿಸಿ ಬಳಿಕ ತನ್ನ ಕೂದಲನ್ನೂ ತೆಗೆದುಕೊಂಡಿರುವುದು ಇದಕ್ಕೆ ಸೂಕ್ತ ನಿದರ್ಶನವಾಗಿದೆ.

    ಇದರ ವಿಡಿಯೋವನ್ನು ಬಾಸ್ಕೆಟ್ ಬಾಲ್ ಮಾಜಿ ಆಟಗಾರ ರೆಕ್ಸ್ ಚಾಂಪ್‍ಮ್ಯಾನ್ ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ ಈತನ ಗೆಳತಿ ಅಲೋಪೆಸಿಯಾ ಎಂಬ ತಲೆಗೂದಲು ಉದುರುವ ಕಾಯಿಲೆಯಿಂದ ಬಳಲುತ್ತಿದ್ದಾಳೆ. ಈ ಮಾನವೀತೆಯ ದೃಶ್ಯ ನೋಡಿದರೆ ನಿಮ್ಮ ಕಣ್ಣಂಚಲ್ಲೂ ನೀರು ಬರುವುದು ಪಕ್ಕಾ ಎಂದು ಬರೆದುಕೊಂಡಿದ್ದಾರೆ.

    https://twitter.com/RexChapman/status/1288606133414965249

    1 ನಿಮಿಷ ಇರುವ ಈ ವಿಡಿಯೋದಲ್ಲಿ, ಮೊದಲು ಗೆಳೆಯ ತನ್ನ ಗೆಳತಿಯ ತಲೆಯನ್ನು ಸಂಪೂರ್ಣವಾಗಿ ಬೋಳಿಸುತ್ತಿರುತ್ತಾನೆ. ಈ ವೇಳೆ ಆಕೆಗೆ ದುಃಖ ಬಂದರೂ ಅದನ್ನು ತೋರ್ಪಡಿಸಿಕೊಳ್ಳಲಾಗದೆ ತಡಪಡಿಸುತ್ತಾಳೆ. ತನ್ನ ಗೆಳೆಯನ ಮುಖವನ್ನು ನೋಡುತ್ತಿದ್ದಂತೆಯೇ ನಗುತ್ತಾ ಅಳುತ್ತಾಳೆ.

    ಗೆಳತಿಯ ತಲೆಯನ್ನು ಸಂಪೂರ್ಣವಾಗಿ ಬೋಳಿಸಿದ ಬಳಿಕ ಕೂಡಲೇ ತನ್ನ ತಲೆಗೂದಲನ್ನೂ ಟ್ರಿಮ್ಮರ್ ಮೂಲಕ ಬೋಳಿಸಿaಕೊಳ್ಳುತ್ತಾನೆ. ಇದನ್ನು ನೋಡಿದ ಗೆಳತಿ ಶಾಕ್ ನಿಂದ ಕಣ್ಣೀರು ಹಾಕುತ್ತಾಳೆ. ಗೆಳೆಯ ತಾನೂ ತಲೆ ಬೋಳಿಸಿಕೊಳ್ಳುವ ಮೂಲಕ ಗೆಳತಿಗೆ ಧೈರ್ಯ ತುಂಬುತ್ತಾನೆ. ಅವಳು ಅಳುತ್ತಿದ್ದಂತೆಯೇ ಅವನು ಆಕೆಯ ಕೆನ್ನೆಗೆ ಕಿಸ್ ಮಾಡುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

    ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ವಿಡಿಯೋ ನೋಡಿ ನೆಟ್ಟಿಗರು ಕಣ್ಣೀರಾಗಿದ್ದಾರೆ. ಅಲ್ಲದೆ ಕೆಲವು ಬಳಕೆದಾರರು ಇದೇ ರೀತಿಯ ಅನುಭವಗಳನ್ನು ಕಮೆಂಟ್ ನಲ್ಲಿ ಹಂಚಿಕೊಂಡಿದ್ದಾರೆ.

    https://twitter.com/Sherlock33M/status/1288659769738309640