Tag: ಗೆಳತಿ

  • ಹೋಟೆಲ್‍ನಲ್ಲಿ ಬೇರೊಬ್ಬಳ ಜೊತೆಗೆ ಚಕ್ಕಂದ – ರೆಡ್‍ಹ್ಯಾಂಡ್ ಆಗಿ ಸಿಕ್ಕ ಪತಿಗೆ ಚಪ್ಪಲಿಯಿಂದ ಗ್ರಹಚಾರ ಬಿಡಿಸಿದ್ಲು

    ಹೋಟೆಲ್‍ನಲ್ಲಿ ಬೇರೊಬ್ಬಳ ಜೊತೆಗೆ ಚಕ್ಕಂದ – ರೆಡ್‍ಹ್ಯಾಂಡ್ ಆಗಿ ಸಿಕ್ಕ ಪತಿಗೆ ಚಪ್ಪಲಿಯಿಂದ ಗ್ರಹಚಾರ ಬಿಡಿಸಿದ್ಲು

    ಲಕ್ನೋ: ಆಗ್ರಾದ(Agra) ಹೋಟೆಲ್ ಒಂದರಲ್ಲಿ ಗೆಳತಿಯ ಜೊತೆಗೆ ಸರಸದಲ್ಲಿ ಮುಳುಗಿದ್ದ ಪತಿರಾಯನಿಗೆ ಚಪ್ಪಲಿಯಲ್ಲಿ (Slipper) ಹೊಡೆಯುವ ಮೂಲಕ ಪತ್ನಿ ಗ್ರಹಚಾರ ಬಿಡಿಸಿದ್ದಾಳೆ. ಇದೀಗ ಈ ಗಲಾಟೆಯ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

    ಠಾಣಾ ಹರಿ ಪರ್ವತ (Thana Hari Parvata) ಪ್ರದೇಶದ ಹೋಟೆಲ್‍ನಲ್ಲಿ ಈ ಘಟನೆ ನಡೆದಿದ್ದು, ವ್ಯಕ್ತಿ ತನ್ನ ಗೆಳತಿಯೊಂದಿಗೆ ಹೋಟೆಲ್‍ಗೆ ತಲುಪಿದ್ದಾನೆ. ಈ ವಿಚಾರ ತಿಳಿದ ಪತ್ನಿ ಮತ್ತು ಆಕೆಯ ಸಹೋದರ ಆತನನ್ನು ಹಿಂಬಾಲಿಸಿಕೊಂಡು ಬಂದಿದ್ದಾರೆ. ನಂತರ ಹೋಟೆಲ್ ಕೊಠಡಿಯಲ್ಲಿ (Hotel Room) ರೆಡ್ ಹ್ಯಾಂಡ್ ಆಗಿ ಗೆಳತಿ ಜೊತೆಗೆ ಸಿಕ್ಕ ಪರಿ ಜೊತೆಗೆ ಗಲಾಟೆ ಶುರು ಮಾಡಿದ್ದಾಳೆ. ಈ ಘಟನೆಯ ಸಂಪೂರ್ಣ ವೀಡಿಯೋವನ್ನು ಮಹಿಳೆಯ ಸಹೋದರ ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದು, ವೀಡಿಯೋದಲ್ಲಿ ಚಪ್ಪಲಿಯಿಂದ ಪತ್ನಿ ತನ್ನ ಪತಿ ಮತ್ತು ಆಕೆಯ ಗೆಳತಿಗೆ ಥಳಿಸಿದ್ದಾಳೆ.

    ವೀಡಿಯೋದಲ್ಲಿ ಮಹಿಳೆ ಇಬ್ಬರಿಗೂ ಕಪಾಳಮೋಕ್ಷ ಮಾಡಿ, ತನ್ನ ಚಪ್ಪಲಿಯಲ್ಲಿ ಒಟ್ಟಿಗೆ ಥಳಿಸಿದ್ದಾಳೆ. ಈ ವೇಳೆ ವ್ಯಕ್ತಿ ಕ್ಷಮಿಸು ಎಂದು ಬೇಡಿಕೊಳ್ಳುತ್ತಿರುತ್ತಾನೆ. ಆದರೆ ರೊಚ್ಚಿಗೆದ್ದ ಮಹಿಳೆ ಆತನನ್ನ ಬಿಡದಂತೆ ಹಿಗ್ಗಾಮುಗ್ಗಾ ಹೊಡೆದು, ಪೊಲೀಸರಿಗೆ ಕರೆ ಮಾಡಿ ಎಂದು ಕೂಗಾಡುತ್ತಿರುವುದನ್ನು ಕಾಣಬಹುದಾಗಿದೆ. ಇದನ್ನೂ ಓದಿ: ಇನ್‍ಸ್ಟಾಗ್ರಾಮ್ ಸರ್ವರ್ ಡೌನ್ – ಫೋಟೋ, ವೀಡಿಯೋ ಅಪ್‍ಲೋಡ್ ಮಾಡಲಾಗದೇ ಜನರ ಪರದಾಟ

    ಮಹಿಳೆಯ ಪತಿ ನರ್ಸಿಂಗ್ ಹೋಂನಲ್ಲಿ (Nursing Home) ಕೆಲಸ ಮಾಡುತ್ತಿದ್ದಾನೆ. ಅತನಿಗೆ 16 ವರ್ಷದ ಮಗಳು ಹಾಗೂ 9 ವರ್ಷದ ಮಗನಿದ್ದಾನೆ. ಗಂಡನ ಈ ಚಾಳಿ ಮಕ್ಕಳಿಬ್ಬರಿಗೂ ತಿಳಿದಿದೆ. ಗಂಡನ ಈ ಕೃತ್ಯಗಳಿಂದ ಬೇಸತ್ತು ಮಹಿಳೆ ತವರು ಮನೆ ಸೇರಿದ್ದಳು. ಆದರೆ ಮುಂದೆ ತನ್ನ ಮಕ್ಕಳಿಗೂ ಇದೇ ಚಾಳಿ ಎಲ್ಲಿ ಬರುತ್ತದೆಯೋ ಎಂದು ರೆಡ್ ಹ್ಯಾಂಡ್ ಆಗಿ ಸಿಕ್ಕ ಪತಿಗೆ ಹಿಗ್ಗಾಮುಗ್ಗ ಬಾರಿಸಿದ್ದಾಳೆ. ಇದನ್ನೂ ಓದಿ: NIA ಮಿಡ್‌ನೈಟ್ ಆಪರೇಷನ್- ಬೆಂಗ್ಳೂರಿನಲ್ಲಿ ಶಂಕಿತ ಉಗ್ರ ಯಾಸಿರ್ ಅರೆಸ್ಟ್

    Live Tv
    [brid partner=56869869 player=32851 video=960834 autoplay=true]

  • ಮಾಜಿ ಗೆಳತಿಯ ಜೊತೆ ಮಸ್ಕ್ ಫೋಟೋ – ಭಾರೀ ಮೊತ್ತಕ್ಕೆ ಸೇಲ್

    ಮಾಜಿ ಗೆಳತಿಯ ಜೊತೆ ಮಸ್ಕ್ ಫೋಟೋ – ಭಾರೀ ಮೊತ್ತಕ್ಕೆ ಸೇಲ್

    ವಾಷಿಂಗ್ಟನ್: ಸಾಮಾಜಿಕ ಜಾಲತಾಣ ಟ್ವಿಟ್ಟರ್ (Twitter) ಖರೀದಿ ವಿಚಾರವಾಗಿ ಸುದ್ದಿಯಲ್ಲಿದ್ದ ಟೆಸ್ಲಾ ಖ್ಯಾತಿಯ ಉದ್ಯಮಿ ಎಲಾನ್ ಮಸ್ಕ್ (Elon Musk) ಈಗ ಮತ್ತೊಂದು ವಿಚಾರವಾಗಿ ಸದ್ದು ಮಾಡುತ್ತಿದ್ದಾರೆ.

    ಹೌದು, ಎಲಾನ್ ಮಸ್ಕ್ ಅವರ ಕಾಲೇಜು ಫೋಟೋಗಳನ್ನು ಇತ್ತೀಚೆಗೆ ಹರಾಜು ಮಾಡಲಾಯಿತು. ಮಸ್ಕ್ (Elon Musk Girl Friend) ತನ್ನ ಮಾಜಿ ಗೆಳತಿ ಜೆನಿಫರ್ ಗ್ವಿನ್ನೆ ಅವರೊಂದಿಗೆ ಇರುವ ಫೋಟೋಗಳು ಬರೋಬ್ಬರಿ 1.3 ಕೋಟಿ (1,65,000 ಯುಎಸ್ ಡಾಲರ್) ಕ್ಕೂ ಹೆಚ್ಚು ಬೆಲೆಗೆ ಮಾರಾಟವಾಗಿವೆ. ಇದನ್ನೂ ಓದಿ: ಪುತ್ರನ ಭೇಟಿಗೆಂದು ಹೋಗಿದ್ದಾಗ ಗ್ಯಾರೇಜ್‌ನಲ್ಲಿ ಮಲಗಿದ್ರಂತೆ ವಿಶ್ವದ ಶ್ರೀಮಂತನ ತಾಯಿ!

    ಆರ್‌.ಆರ್‌ ಹರಾಜು (RR Auction) ಸಂಸ್ಥೆ ಈ ಫೋಟೋಗಳನ್ನು ಹಂಚಿಕೊಂಡಿದೆ. ಮಸ್ಕ್ ಮತ್ತು ಗ್ವಿನ್ನೆ 1994 ಮತ್ತು 1995 ರ ನಡುವೆ ಇಬ್ಬರೂ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದಾಗ ತೆಗೆಸಿರುವ ಘೋಟೋ ಇದು ಎಂದು ನ್ಯೂಯಾರ್ಕ್ ಪೋಸ್ಟ್ ತಿಳಿಸಿದೆ.

    ಒಟ್ಟು 18 ಕ್ಯಾಂಡಿಡ್ ಫೋಟೋಗಳು ಹರಾಜಿನಲ್ಲಿದ್ದವು. ಪ್ರತಿಯೊಂದನ್ನು ಪ್ರತ್ಯೇಕವಾಗಿ ಮಾರಾಟ ಮಾಡಲಾಗಿದೆ. ಇದನ್ನೂ ಓದಿ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹತ್ಯೆಗೆ ಯತ್ನ

    ಇತ್ತೀಚೆಗೆ 44 ಬಿಲಿಯನ್ ಡಾಲರ್ (ಸುಮಾರು 3.36 ಲಕ್ಷ ಕೋಟಿ)ಗೆ ಎಲಾನ್ ಮಸ್ಕ್ ಅವರು ಟ್ವಿಟ್ಟಿರ್ ಕಂಪನಿಯ ಪೂರ್ತಿ ಷೇರು ಖರೀದಿಗೆ ಮುಂದಾಗಿದ್ದರು. ಆದರೆ ಟ್ವಿಟ್ಟರ್‌ನಲ್ಲಿರುವ ನಕಲಿ ಖಾತೆಗಳ ವಿಚಾರಕ್ಕೆ ಸಂಬಂಧಿಸಿದಂತೆ ಖರೀದಿ ಪ್ರಕ್ರಿಯೆ ಸ್ಥಗಿತಗೊಳಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಪಂದ್ಯ ಸೋತ್ರೂ ರೋಮ್ಯಾಂಟಿಕ್ ಮೂಡ್- ಗೆಳತಿಗೆ ಪ್ರಪೋಸ್ ಮಾಡಿದ ಕ್ರಿಕೆಟಿಗ

    ಪಂದ್ಯ ಸೋತ್ರೂ ರೋಮ್ಯಾಂಟಿಕ್ ಮೂಡ್- ಗೆಳತಿಗೆ ಪ್ರಪೋಸ್ ಮಾಡಿದ ಕ್ರಿಕೆಟಿಗ

    ದುಬೈ: ಭಾರತದ ವಿರುದ್ಧ ಹಾಂಗ್ ಕಾಂಗ್ ಸೋಲು ಕಂಡರೂ ರೋಮ್ಯಾಂಟಿಕ್‌ ಮೂಡಿನಲ್ಲಿದ್ದ ಹಾಂಗ್‍ಕಾಂಗ್ ಆಟಗಾರರೊಬ್ಬರು ತನ್ನ ಗೆಳತಿಗೆ ಪ್ರೇಮನಿವೇದನೆ ಮಾಡಿ ಅಚ್ಚರಿ ಮೂಡಿಸಿದ್ದಾರೆ. ಇದರ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

    ಬುಧವಾರ ದುಬೈನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಏಷ್ಯಾಕಪ್ 2022 ಪಂದ್ಯ ನಡೆದಿತ್ತು. ಇದರಲ್ಲಿ ಭಾರತವು ಹಾಂಗ್ ಕಾಂಗ್ ಮುಂದೆ 40ರನ್ ಗಳ ಗೆಲುವು ಕಂಡಿತ್ತು. ಈ ಪಂದ್ಯದ ಬಳಿಕ ಕ್ರೀಡಾಂಗಣ ಒಂದು ಬಾರಿ ರೋಮ್ಯಾಂಟಿಕ್ ಮೂಡ್‍ಗೆ ಜಾರಿತ್ತು.

    ಹಾಂಗ್ ಹಾಂಗ್ ತಂಡದ ಬ್ಯಾಟ್ಸ್ ಮನ್ ಕಿಂಚಿತ್ ಶಾ ತಮ್ಮ ಗೆಳತಿಗೆ ರಿಂಗ್ ತೊಡಿಸುವ ಮೂಲಕ ಪ್ರೇಮನಿವೇದನೆ ಮಾಡಿದ್ದಾರೆ. ಇದರ ವೀಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದ್ದು, ಸಾಕಷ್ಟು ಪರ-ವಿರೋಧ ಕಾಮೆಂಟ್‍ಗಳು ಬರುತ್ತಿವೆ. ಇದನ್ನೂ ಓದಿ: ಕೊಹ್ಲಿ, ಸೂರ್ಯ ಬ್ಯಾಟಿಂಗ್ ಬಿರುಗಾಳಿಗೆ ಕ್ರಿಕೆಟ್ ಶಿಶುಗಳು ಕಂಗಾಲು – ಸೂಪರ್ ಫೋರ್‌ಗೆ ಎಂಟ್ರಿ

    ವೀಡಿಯೋದಲ್ಲೇನಿದೆ..?: ಪಂದ್ಯ ಮುಗಿದ ಬಳಿಕ ಸೋಲುಕಂಡ ಹಾಂಗ್ ಕಾಂಗ್ ಆಟಗಾರ ಕಿಂಚಿತ್ ನೇರವಾಗಿ ಡ್ರೆಸ್ಸಿಂಗ್ ರೂಂಗೆ ತೆರಳುತ್ತಾರೆ.  ಇತ್ತ ಬೇಸರದಿಂದ ನಿಂತಿದ್ದ ಗೆಳತಿಯನ್ನು ಕಿಂಚಿತ್ ಅಪ್ಪಿಕೊಳ್ಳಲು ಮುಂದಾಗುತ್ತಾರೆ. ಅಲ್ಲದೆ ಗೆಳತಿಗೆ ಮಂಡಿಯೂರಿ ಪ್ರಪೋಸ್ ಮಾಡಿದ್ದಾರೆ. ಆಗ ಗೆಳತಿ ಅಚ್ಚರಿಯ ಜೊತೆಗೆ ಖುಷಿಯಾಗುತ್ತಾಳೆ. ಅಲ್ಲದೆ ಈ ಖುಷಿಯಲ್ಲೇ ಆನಂದಭಾಷ್ಪ ಸುರಿಸುತ್ತಾಳೆ. ನಂತರ ಕಿಂಚಿತ್ ತಾನು ತಂದ ಉಂಗುರವನ್ನು ಕೈಯಲ್ಲಿಡಿದುಕೊಂಡು, ನೀನು ನನ್ನ ಮದುವೆಯಾಗುತ್ತಿಯಾ..? ಎಂದು ಕೇಳಿದ್ದಾರೆ.

    ಈ ವೇಳೆ ಆಕೆ ನಾಚಿಕೆಯಿಂದಲೇ ಒಪ್ಪಿಕೊಳ್ಳುತ್ತಾಳೆ. ಕೂಡಲೇ ಸಾವಿರಾರು ಜನರ ನಡುವೆಯೇ ಗೆಳತಿಗೆ ಉಂಗುರ ತೊಡಿಸುವ ಮೂಲಕ ಇಬ್ಬರೂ ನಿಶ್ಚಿತಾರ್ಥ ಮಾಡಿಕೊಳ್ಳುತ್ತಾರೆ. ಅಲ್ಲದೆ ಇಬ್ಬರೂ ಒಬ್ಬರನ್ನೊಬ್ಬರು ತಬ್ಬಿಕೊಂಡು ಮುದ್ದಾಡಿದ್ದಾರೆ. ಇತ್ತ ಇವೆಲ್ಲವನ್ನೂ ನೋಡುತ್ತಿದ್ದ ಜನ ಚಪ್ಪಾಳೆ ತಟ್ಟುವ ಮೂಲಕ ಇಬ್ಬರಿಗೂ ಶುಭಹಾರೈಸಿರುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಇದನ್ನೂ ಓದಿ: ಮಾನ್ಯತೆ ಇಲ್ಲದ ಮದರಸಾಗಳ ಆದಾಯ ಪರಿಶೀಲಿಸಲು ಮುಂದಾದ ಯುಪಿ ಸರ್ಕಾರ

    Live Tv
    [brid partner=56869869 player=32851 video=960834 autoplay=true]

  • ಗರ್ಲ್ ಫ್ರೆಂಡ್ ಭೇಟಿಗಾಗಿ ಬುರ್ಕಾ ಧರಿಸಿದವ ಜೈಲು ಪಾಲು

    ಗರ್ಲ್ ಫ್ರೆಂಡ್ ಭೇಟಿಗಾಗಿ ಬುರ್ಕಾ ಧರಿಸಿದವ ಜೈಲು ಪಾಲು

    ಲಕ್ನೋ: ಗೆಳತಿಯನ್ನು ಭೇಟಿಯಾಗಲು ಬುರ್ಕಾ ಧರಿಸಿ ಹೋಗುತ್ತಿದ್ದ ವ್ಯಕ್ತಿಯೋರ್ವನನ್ನು ಬಂಧಿಸಿದ ಘಟನೆ ಉತ್ತರಪ್ರದೇಶದ ಮೆಹಮದ್‍ಪುರದಲ್ಲಿ ನಡೆದಿದೆ.

    ಸೈಫ್ ಅಲಿ (25) ಬುರ್ಕಾ ಧರಿಸಿ ಪೊಲೀಸರಿಗೆ ಸಿಕ್ಕಿಬಿದ್ದ ವ್ಯಕ್ತಿಯಾಗಿದ್ದಾನೆ. ಈತನಿಗೆ ಬೇರೆ ಸ್ಥಳದಲ್ಲಿ ಕೆಲಸ ಸಿಕ್ಕಿತ್ತು. ಇದರಿಂದಾಗಿ ಊರಿನಿಂದ ಹೋಗುವ ಮೊದಲು ಗೆಳತಿಯನ್ನು ಒಮ್ಮೆ ಭೇಟಿಯಾಗಲು ಬಯಸಿದ್ದ. ಆದರೆ ಮೆಹಮದ್‍ಪುರದಲ್ಲಿ ಹೆಚ್ಚು ಜನರು ಪರಿಚಯಸ್ಥರೇ ಇದ್ದಿದ್ದರಿಂದ ಆತ ಗೆಳತಿಯನ್ನು ಭೇಟಿ ಮಾಡುವಾಗ ಯಾರಾದರೂ ನೋಡಿ ಏನನ್ನಾದರೂ ಹೇಳುತ್ತಾರೆ ಎನ್ನುವ ಭಯದಿಂದ ತನ್ನ ಗುರುತನ್ನು ಮರೆಮಾಚಲು ಬುರ್ಕಾವನ್ನು ಧರಿಸುವ ಯೋಚನೆಯನ್ನು ಮಾಡಿಕೊಂಡ. ಇದನ್ನೂ ಓದಿ: ನಮ್ಗೆ ಮೊಟ್ಟೆ ಎಸೆಯೋಕೆ ಬರಲ್ವಾ, ನಾವು ಶುರು ಮಾಡಿದ್ರೆ ಸಿಎಂ ಎಲ್ಲೂ ಓಡಾಡೋಕೆ ಆಗಲ್ಲ: ಸಿದ್ದರಾಮಯ್ಯ

    jail

    ಸೈಫ್ ಅಲಿ ಮಾರನೇ ದಿನ ತನ್ನ ಯೋಚನೆಯಂತೆ ಗೆಳತಿಯನ್ನು ಭೇಟಿಯಾಗಲು ಬುರ್ಕಾ ಧರಿಸಿ ಹೋಗಿದ್ದ. ಆದರೆ ಅಲ್ಲಿದ್ದ ಸ್ಥಳೀಯರಿಗೆ ಬುರ್ಕಾ ಧರಿಸಿದವನು ಹುಡುಗ ಎಂದು ತಿಳಿದು ಏನೋ ತೊಂದರೆ ಮಾಡಲು ಬಂದಿದ್ದಾರೆ ಎನ್ನುವ ಅನುಮಾನ ಬಂದಿದೆ. ಘಟನೆ ಹಿನ್ನೆಲೆಯಲ್ಲಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಜೊತೆಗೆ ವೀಡಿಯೋವನ್ನು ಮಾಡಿಕೊಂಡಿದ್ದಾರೆ. ಘಟನೆಗೆ ಸಂಬಂಧಿಸಿ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಸ್ವಾತಂತ್ರ ಹೋರಾಟಗಾರರಲ್ಲ, ಸಾವರ್ಕರ್‌ ಒಬ್ಬ ಮೂಲಭೂತವಾದಿ: ಯತೀಂದ್ರ ಸಿದ್ದರಾಮಯ್ಯ

    Live Tv
    [brid partner=56869869 player=32851 video=960834 autoplay=true]

  • ಬಿಜೆಪಿ ಮುಖಂಡ ಆತ್ಮಹತ್ಯೆ ಪ್ರಕರಣ – ಅನಂತರಾಜು ಜೊತೆಗಿನ ಖಾಸಗಿ ವೀಡಿಯೋ ಇದೆ ಎಂಬ ಗೆಳತಿ ಚಾಟಿಂಗ್ ವೈರಲ್

    ಬಿಜೆಪಿ ಮುಖಂಡ ಆತ್ಮಹತ್ಯೆ ಪ್ರಕರಣ – ಅನಂತರಾಜು ಜೊತೆಗಿನ ಖಾಸಗಿ ವೀಡಿಯೋ ಇದೆ ಎಂಬ ಗೆಳತಿ ಚಾಟಿಂಗ್ ವೈರಲ್

    ಬೆಂಗಳೂರು: ಬಿಜೆಪಿ ಮುಖಂಡ ಅನಂತರಾಜು ಆತ್ಮಹತ್ಯೆಯ ಪ್ರಕರಣ ಸಂಬಂಧ ಬಂಧನಕ್ಕೊಳಗಾಗಿದ್ದ ಗೆಳತಿಗೆ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ.

    ಪ್ರಕರಣದ ಮೂವರು ಆರೋಪಿಗಳಿಗೆ ಜಾಮೀನು ದೊರಕ್ಕಿದ್ದು, ಅನಂತರಾಜು ಗೆಳತಿ ಹಾಗೂ ಇನ್ನುಳಿದ ಇಬ್ಬರು ಆರೋಪಿಗಳಾದ ಸ್ಪಂದನಾ ಹಾಗೂ ವಿನೋದ್‍ಗೆ ನಿರೀಕ್ಷಣಾ ಜಾಮೀನು ನೀಡಲಾಗಿದೆ. ಅನಂತರಾಜು ಇದೇ ತಿಂಗಳು 12 ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದನ್ನೂ ಓದಿ: ಇಂದು ರಾಜ್ಯಕ್ಕೆ ಕೇಂದ್ರ ಸಚಿವ ರಾಜನಾಥ್ ಸಿಂಗ್ ಭೇಟಿ

    court order law

    ಇದೀಗ ಅನಂತರಾಜು ಆತ್ಮಹತ್ಯೆ ಪ್ರಕರಣವು ಮತ್ತೊಂದು ತಿರುವು ಪಡೆದುಕೊಂಡಿದೆ. ಅನಂತರಾಜು ಗೆಳತಿ ಅಪರಿಚಿತ ವ್ಯಕ್ತಿಯೊಂದಿಗೆ ಚಾಟಿಂಗ್ ಮಾಡಿರುವುದು ವೈರಲ್ ಆಗಿದೆ. ಇದನ್ನೂ ಓದಿ: ಪಾಟಿದರ್ ಸ್ಫೋಟಕ ಶತಕ, ಡಿ.ಕೆ ಅಬ್ಬರ – ಅಹಮದಾಬಾದ್‌ಗೆ ಹಾರಿದ ಬೆಂಗ್ಳೂರು

    ವೈರಲ್ ಆದ ಚಾಟಿಂಗ್‍ನಲ್ಲೇನಿದೆ?
    ಅನಂತರಾಜು ನನಗೆ ಮೋಸ ಮಾಡಿದ್ದಾನೆ. ನನ್ನ ಮಾನ ಮರ್ಯಾದೆಗೆ ಧಕ್ಕೆ ತಂದಿದ್ದಾನೆ. ನನ್ನ ಮಕ್ಕಳಿಗಾಗಿ ನಾನು ಯಾರ ಮಾರ್ಯಾದೆ ಕಳೆಯೋದಕ್ಕೂ ಸಿದ್ಧ. ಅನಂತರಾಜು ನನ್ನ ಜೊತೆ ಕಳೆದ ಖಾಸಗಿ ವಿಡಿಯೋಗಳು ನನ್ನ ಬಳಿ ಇವೆ. ಅದನ್ನು ಅವನ ಹೆಂಡ್ತಿಗೆ ಕಳುಹಿಸಿದರೆ ಅವಳೇ ಅನಂತರಾಜುನ ಸಾಯಿಸ್ತಾಳೆ. ಅಷ್ಟೊಂದು ಅಶ್ಲೀಲವಾಗಿವೆ ಆ ವೀಡಿಯೋಗಳು. ಆ ರೀತಿ ಆಗಬಾರದು ಅನ್ನೋದಾದರೆ ಅನಂತರಾಜು ಮೇ 15ರ ಒಳಗೆ ನನ್ನ ಭೇಟಿ ಮಾಡಬೇಕು. ಸೆಟಲ್ಮೆಂಟ್ ಮಾಡಿಕೊಂಡು ಅನಂತರಾಜು ನೆಮ್ಮದಿಯಾಗಿರಲಿ ಎಂದು ಅನಂತರಾಜು ಗೆಳತಿ ಚಾಟಿಂಗ್ ಮಾಡಿದ್ದಳು. ಇದರ ಜೊತೆಗೆ ಅನಂತರಾಜು ಗೆಳತಿ ತನ್ನ ಇತರೆ ಗೆಳತಿಯರೊಂದಿಗೆ ಮೋಜು ಮಸ್ತಿಯಲ್ಲಿ ತೊಡಗಿರುವ ವೀಡಿಯೋ ಕೂಡ ವೈರಲ್.

    https://youtu.be/WlJqcDTsNiE

  • ಹೊಸ ಗೆಳತಿಯನ್ನು ಪರಿಚಯಿಸಿದ ಮಸ್ಕ್

    ಹೊಸ ಗೆಳತಿಯನ್ನು ಪರಿಚಯಿಸಿದ ಮಸ್ಕ್

    ವಾಷಿಂಗ್ಟನ್: ವಿಶ್ವದ ಶ್ರೀಮಂತ ಹೊಸದೊಂದು ವಿಷಯಕ್ಕೆ ಇದೀಗ ಬಾರೀ ಸುದ್ದಿಯಾಗುತ್ತಿದ್ದಾರೆ. ಸ್ಪೇಸ್ ಎಕ್ಸ್ ಹಾಗೂ ಟೆಸ್ಲಾ ಕಂಪನಿ ಮುಖ್ಯಸ್ಥ ಎಲೋನ್ ಮಸ್ಕ್ ತಮ್ಮ ಹೊಸ ಗೆಳತಿಯನ್ನು ಪರಿಚಯಿಸಿದ್ದಾರೆ.

    ಆಸ್ಟ್ರೇಲಿಯಾದ ನಟಿ ನತಾಶಾ ಬ್ಯಾಸೆಟ್ ನನ್ನ ಹೊಸ ಗೆಳತಿ ಎಂದು ಮಸ್ಕ್ ಪ್ರಪಂಚಕ್ಕೆ ಪರಿಚಯ ಮಾಡಿಕೊಟ್ಟಿದ್ದಾರೆ.

    ಯಾರಿದು ನತಾಶಾ ಬ್ಯಾಸೆಟ್?
    27 ವರ್ಷದ ನತಾಶಾ ಬ್ಯಾಸೆಟ್ ಆಸ್ಟ್ರೇಲಿಯಾದ ಸಿಡ್ನಿ ಮೂಲದವರು. ಇವರು ನಟನೆಯನ್ನು ಕಲಿಯಲು ನ್ಯೂಯಾರ್ಕ್ ತೆರಳಿದ್ದು, ತಮ್ಮ 14ನೇ ಪ್ರಾಯದಿಂದಲೇ ನಟನೆ ಮಾಡುತ್ತಿದ್ದಾರೆ. ರೋಮಿಯೋ ಜೂಲಿಯೆಟ್, ಬ್ರಿಟ್ನಿ ಸ್ಪಿಯರ್ಸ್ ಜೀವನಚರಿತ್ರೆ ಹಾಗೂ ಹೈಲ್ ಸೀಸರ್‍ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಸ್ತುತ ನತಾಶಾ ಲಾಸ್ ಏಂಜಲಿಸ್‍ನಲ್ಲಿ ನೆಲೆಸಿದ್ದಾರೆ. ಇದನ್ನೂ ಓದಿ: ಕೋವಿಡ್ ಇದ್ದರೂ ಸೆಲ್ಫ್ ಐಸೋಲೇಷನ್ ಅಗತ್ಯವಿಲ್ಲ – ಇಂಗ್ಲೆಂಡ್ ಘೋಷಣೆ

    ಈ ಹಿಂದೆ ಒಳ್ಳೆಯ ಗೆಳೆತನ ಹೊಂದಿದ ಮಸ್ಕ್ ಹಾಗೂ ನತಾಶಾ ಕಳೆದ ಹಲವು ತಿಂಗಳುಗಳಿಂದ ಪ್ರೇಮಮಯ ಸಂಬಂಧ ಹೊಂದಿದ್ದಾರೆ. ಇತ್ತೀಚಿನ ದಿನಗಳಲ್ಲಿ ಇಬ್ಬರೂ ಒಟ್ಟಿಗೆ ಕಾಲ ಕಳೆಯುತ್ತಿದ್ದಾರೆ ಎಂಬುದು ತಿಳಿದುಬಂದಿದೆ. ಇದನ್ನೂ ಓದಿ: ಬ್ರಿಟನ್‌ ರಾಣಿ 2ನೇ ಎಲಿಜಬೆತ್‌ಗೆ ಕೊರೊನಾ ಸೋಂಕು – ಚೇತರಿಕೆಗೆ ಹಾರೈಸಿ ಪ್ರಧಾನಿ ಮೋದಿ ಟ್ವೀಟ್

    ಎಲೋನ್ ಮಸ್ಕ್ ಈ ಹಿಂದೆ ಲೇಖಕಿ ಜಸ್ಟಿನ್ ಮಸ್ಕ್ ಹಾಗೂ ನಟಿ ತಲುಲಾಹ್ ರಿಲೇ ಅವರನ್ನು ವಿವಾಹವಾಗಿದ್ದರು.

  • ಹಣಕ್ಕಾಗಿ ಗೆಳತಿಯನ್ನೇ ಕೊಲೆ ಮಾಡಿದ ಮಹಿಳೆ

    ಹಣಕ್ಕಾಗಿ ಗೆಳತಿಯನ್ನೇ ಕೊಲೆ ಮಾಡಿದ ಮಹಿಳೆ

    ಮುಂಬೈ: ಹಣದ ಆಸೆಗಾಗಿ ಮಹಿಳೆಯೊಬ್ಬರು ಗೆಳತಿಯನ್ನೇ ಕೊಲೆ ಮಾಡಿದ ಘಟನೆ ಮಹಾರಾಷ್ಟ್ರದ ವಿಜಯಾ ತಿಲಕ್ ಚೌಕ್‍ನಲ್ಲಿ ನಡೆದಿದೆ.

    ಸೀಮಾ ಖೋಪಡೆ (58) ಆರೋಪಿ. ಇವರು ಡೊಂಬಿವಿಲಿ (ಪೂರ್ವ) ಕೊಳಗೇರಿಯ ನಿವಾಸಿ. ವಿಜಯಾ ಬಾವಿಸ್ಕರ್ (58) ಮೃತ ಮಹಿಳೆ. ವಿಜಯ ಹಾಗೂ ಸೀಮಾ ಕಳೆದ 18 ವರ್ಷಗಳಿಂದ ಸ್ನೇಹಿತರಾಗಿದ್ದರು. ವಿಜಯಾ ಪತಿಯಿಂದ ವಿಚ್ಛೇದನ ಪಡೆದಿದ್ದರು. ಇದರಿಂದಾಗಿ ವಿಜಯಾ ತಿಲಕ್ ಚೌಕ್‍ನಲ್ಲಿರುವ ಆನಂದ್ ಶೀಲಾ ಕಟ್ಟಡದಲ್ಲಿರುವ ಫ್ಲಾಟ್‍ನಲ್ಲಿ ವಾಸಿಸುತ್ತಿದ್ದರು.

    ವಿಜಯಾ ಅವರ ಕುಟುಂಬಸ್ಥರು ಮನೆಗೆ ಹೋಗಿದ್ದ ಸಂದರ್ಭದಲ್ಲಿ ಅವರೊಬ್ಬರೇ ಇರುವುದನ್ನು ತಿಳಿದು ತಡರಾತ್ರಿ ಸೀಮಾ ಅವರ ಮನೆಗೆ ಹೋಗಿದ್ದಾರೆ. ಅಲ್ಲಿ ಅವರನ್ನು ಕತ್ತು ಹಿಸುಕಿ ಕೊಲೆ ಮಾಡಿ ಅವರ ಮನೆಯಲ್ಲಿದ್ದ ಚಿನ್ನಾಭರಣವನ್ನು ದರೋಡೆ ಮಾಡಿದ್ದಾರೆ. ಇದನ್ನೂ ಓದಿ: ಮಸೀದಿಯನ್ನು ಒಡೆದು ಹಾಕಿ ಎಂದ ಕಾಳಿ ಸ್ವಾಮೀಜಿಗೆ ಷರತ್ತು ಬದ್ಧ ಜಾಮೀನು

    ಪ್ರಕರಣ ಸಂಬಂಧ ಥಾಣೆ ಪೊಲೀಸರು, ಮೃತ ಮಹಿಳೆ ವಿಜಯಾ ಅವರ ಹೆಸರಲ್ಲಿ ಸಾಕಷ್ಟು ಆಸ್ತಿ ಇರುವುದರಿಂದ ಆಸ್ತಿಯ ಆಸೆಗಾಗಿ ಅವರನ್ನು ಕೊಲೆ ಮಾಡಿರಬಹುದು ಎಂಬ ಶಂಕಿಸಿದ್ದರು. ಆದರೆ ವಿಜಯಾ ಅವರ ಕರೆಗಳ ವಿವರ ಹಾಗೂ ಸಿಸಿ ಕ್ಯಾಮರಾ ದೃಶ್ಯಾವಳಿಯನ್ನು ವೀಕ್ಷಿಸಿದ ನಂತರ, ವಿಜಯಾಳನ್ನು ಆರೋಪಿ ಸೀಮಾ ಕೊಲೆ ಮಾಡಿರುವುದಾಗಿ ತಿಳಿದಿದೆ. ಇದನ್ನೂ ಓದಿ: ಶ್ರೀರಂಗಪಟ್ಟಣದ ಜಾಮೀಯಾ ಮಸೀದಿಯನ್ನು ಒಡೆಯಬೇಕು ಎಂದಿದ್ದ ಕಾಳಿಸ್ವಾಮಿ ಅರೆಸ್ಟ್

    ಈ ಸಂಬಂಧ ಪೊಲೀಸ್ ಆರೋಪಿ ಸೀಮಾರನ್ನು ವಶಕ್ಕೆ ಪಡೆದಿದ್ದಾರೆ. ಸುಮಾರು 14 ಲಕ್ಷ ರೂ. ಸಾಲ ಮಾಡಿಕೊಂಡಿದ್ದ ಸೀಮಾ, ಆಸ್ತಿ ಆಸೆಗಾಗಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ವಿಜಯಾ ಬಳಿಯಿದ್ದ ಕಿವಿಯೋಲೆಗಳು, ಚಿನ್ನದ ಸರ, ಉಂಗುರ, ಸುಮಾರು 10 ತೊಲಗಳ ಎರಡು ಬಳೆಗಳು ದರೋಡೆ ಮಾಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಘಟನೆ ಸಂಬಂಧ ಥಾಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • 3 ವರ್ಷದಿಂದ ಗೆಳತಿ ನೋಡಲು ಸಾಧ್ಯವಾಗಿಲ್ಲ ಎಂದು ಪ್ರಾಣ ಬಿಟ್ಟ ಪ್ರಿಯಕರ

    3 ವರ್ಷದಿಂದ ಗೆಳತಿ ನೋಡಲು ಸಾಧ್ಯವಾಗಿಲ್ಲ ಎಂದು ಪ್ರಾಣ ಬಿಟ್ಟ ಪ್ರಿಯಕರ

    ಹೈದರಾಬಾದ್: ಕೊರೊನಾ ಕಾರಣದಿಂದ ಗೆಳತಿಯನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ. ನ್ಯೂ ಇಯರ್‌ಗೆ ಗೆಳತಿ ನೋಡಲು ಹೋಗಲು ಸಾಧ್ಯವಾಗದ ಕಾರಣ ಮನನೊಂದ ಪ್ರಿಯಕರ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೈದರಾಬಾದ್‍ನಲ್ಲಿ ನಡೆದಿದೆ.

    ವಿನೀತ್(22) ಮೃತ ಯುವಕ. ಈತ ಉತ್ತರ ಪ್ರದೇಶ ಮೂಲದವನಾಗಿದ್ದಾನೆ. ಸೋಂಕು ಹೆಚ್ಚಾಗಿರುವ ಕಾರಣ ಪ್ರಿಯತಮೆಯನ್ನು ನೋಡಲು ಸಾಧ್ಯವಾಗುತ್ತಿಲ್ಲ ಎನ್ನುವ ವಿಚಾರವಾಗಿ ಬೇಸರಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಈ ಸಂಬಂಧ ಪಹದಿ ಶರೀಫ್ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಬಸ್ ಅಪಘಾತದಲ್ಲಿ 22 ಮಂದಿ ಸಾವಿಗೆ ಕಾರಣನಾದ ಚಾಲಕನಿಗೆ 190 ವರ್ಷ ಜೈಲು ಶಿಕ್ಷೆ

    ಶ್ರೀನಗರ ಕಾಲೋನಿಯ ಹೋಟೆಲ್‍ವೊಂದರಲ್ಲಿ ಕೆಲಸಕ್ಕೆ ಸೇರಿದ್ದ ವಿನೀತ್ ಅದೇ ಪ್ರದೇಶದಲ್ಲೇ ವಾಸವಾಗಿದ್ದ. ಹುಟ್ಟೂರಾದ ಉತ್ತರ ಪ್ರದೇಶದಲ್ಲಿ ವಿನೀತ್ ಯುವತಿಯನ್ನು ಪ್ರೀತಿಸಿ ಮದುವೆ ಆಗುವುದಾಗಿ ಹೇಳಿದ್ದ. ಒಳ್ಳೆ ಜೀವನ ನಡೆಸಲು ಹೆಚ್ಚಿನ ಹಣ ಸಂಪಾದನೆ ಮಾಡುವ ಉದ್ದೇಶದಿಂದ ಕೆಲಸವನ್ನು ಹುಡುಕಿಕೊಂಡು ಹೈದರಾಬಾದ್‍ಗೆ ಬಂದಿದ್ದ. ಇದನ್ನೂ ಓದಿ: ಪಾಕ್ ಪ್ರಧಾನಿ, ಮಾಜಿ ಪತ್ನಿಯ ಕಾರಿನ ಮೇಲೆ ಗುಂಡಿನ ದಾಳಿ

    ವಿನೀತ್ ನಗರಕ್ಕೆ ಬಂದ ಮೊದಲ ವರ್ಷವೇ ಕೋವಿಡ್ ಲಾಕ್‍ಡೌನ್‍ನಿಂದ ಮತ್ತೆ ಯುಪಿಗೆ ಹೋಗಲು ಸಾಧ್ಯವಾಗಲಿಲ್ಲ. ಕೊರೊನಾ ಸಂಕಷ್ಟದಿಂದ ಸಾಕಷ್ಟು ಹಣದ ಸಮಸ್ಯೆಯನ್ನು ಈತ ಎದುರಿಸಿದ್ದಾನೆ. ಇದರಿಂದಾಗಿ ಊರಿಗೆ ಹೋಗಲು ಆಗಲಿಲ್ಲ. ಪ್ರತಿದಿನ ಕೆಲಸದ ನಂತರ ಗಂಟೆಗಟ್ಟಲೇ ತನ್ನ ಪ್ರೇಯಸಿ ಜೊತೆ ಫೋನಿನಲ್ಲಿ ಮಾತನಾಡುತ್ತಿದ್ದ.

    ಒಂದು ದಿನ ಎಂದಿನಂತೆ ಕೆಲಸ ಮುಗಿಸಿ ಪ್ರೇಯಸಿಗೆ ಫೋನ್ ಮಾಡಿದಾಗ ಆಕೆ ಸಿಟ್ಟಾಗಿದ್ದಾಳೆ. ಮೂರು ವರ್ಷದಿಂದ ಯಾಕೆ ಬಂದಿಲ್ಲ ಎಂದು ಪ್ರಶ್ನಿಸಿದ್ದಾಳೆ. ಅಲ್ಲದೆ ನ್ಯೂ ಇಯರ್‌ಗೆ ಬರುವುದಾಗಿ ಹೇಳಿದ್ದ ವಿನೀತ್ಗೆ ಊರಿಗೆ ಊಗಲು ಸಾಧ್ಯವಾಗಿಲ್ಲ. ಈ ವಿಚಾರವಾಗಿ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

  • ಗೆಳತಿಯ ಬಾಯ್‌ ಫ್ರೆಂಡ್‌ನಿಂದಲೇ ಮಹಿಳೆ ಮೇಲೆ ಅತ್ಯಾಚಾರ

    ಗೆಳತಿಯ ಬಾಯ್‌ ಫ್ರೆಂಡ್‌ನಿಂದಲೇ ಮಹಿಳೆ ಮೇಲೆ ಅತ್ಯಾಚಾರ

    ಗದಗ: ರಾತ್ರಿ ವೇಳೆ ಮನೆಗೆ ನುಗ್ಗಿದ್ದ ಯುವಕ ಒಂಟಿ ಮಹಿಳೆ ಮೇಲೆ ಅತ್ಯಾಚಾರ ನಡೆಸಿರುವ ಘಟನೆ ಗದಗ ಮಹಿಳಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

    ಗೆಳತಿಯ ಬಾಯ್ ಫ್ರೆಂಡ್‍ನಿಂದಲೇ ಅತ್ಯಾಚಾರ ನಡೆದಿದೆ ಅಂತ ಸಂತ್ರಸ್ತೆ ಠಾಣೆಯಲ್ಲಿ ದೂರು ನೀಡಿದ್ದಾಳೆ. ಅತ್ಯಾಚಾರ ವೆಸಗಿದ ಆರೋಪಿ ರಫಿಕ್ ಚಿಂಚಲಿಯನ್ನು ಗದಗ ಮಹಿಳಾ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಇದನ್ನೂ ಓದಿ: ಬಹುಮಹಡಿ ಕಟ್ಟಡದಲ್ಲಿ ಬೆಂಕಿ ಅವಘಡ – 19ನೇ ಮಹಡಿಯಿಂದ ಜಿಗಿದು ವ್ಯಕ್ತಿ ಸಾವು

    Gadaga

    ಸಂತ್ರಸ್ತೆ ಹಾಗೂ ಅವಳ ಸ್ನೇಹಿತೆ ಇಬ್ಬರು ಗದಗ ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಸ್ಟಾಫ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದು, ಇಬ್ಬರು ಒಂದೇ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಸಂತ್ರಸ್ತೆ ಸ್ನೇಹಿತೆಯ ಬಾಯ್ ಫ್ರೆಂಡ್ ರಫಿಕ್ ಆಗಾಗ ಮನೆಗೆ ಬರುತ್ತಿದ್ದ. ಘಟನೆಗೂ ಮುನ್ನ ಸಹ ಆರೋಪಿ ಸ್ನೇಹಿತೆಯನ್ನು ಕೇಳಿಕೊಂಡು ಮನೆಗೆ ಬಂದಿದ್ದಾನೆ. ಆಗ ಮನೆಯಲ್ಲಿ ನಾನು ಒಬ್ಬಳೆ ಇದ್ದೆ. ನಿಮ್ಮ ಗೆಳತಿ ಇನ್ನೂ ಮನೆಗೆ ಬಂದಿಲ್ಲ ಅಂತ ಹೇಳಿದೆ. ಆದರೆ ಏಕಾ ಏಕಿ ಮನೆಯೊಳಗೆ ನುಗ್ಗಿ ಬಾಯಿ ಹಿಡಿದು ಬಟ್ಟೆ ಹರಿದು ಹಾಕಿ ಅತ್ಯಾಚಾರ ಮಾಡಿದ್ದಾನೆಂದು ಸಂತ್ರಸ್ತೆ ಪೊಲೀಸರಿಗೆ ದೂರು ನೀಡಿದ್ದಾರೆ. ಅಲ್ಲದೇ ಅತ್ಯಾಚಾರ ಮಾಡಿರುವ ಬಗ್ಗೆ ಯಾರಿಗಾದರೂ ತಿಳಿಸಿದರೆ ಕೊಲೆ ಮಾಡುವುದಾಗಿಯೂ ಬೆದರಿಕೆ ಸಹ ಹಾಕಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: 100 ಕೋಟಿ ಲಸಿಕೆ ವಿತರಣೆ – ಅನುಮಾನ ವ್ಯಕ್ತಪಡಿಸಿದ ಸಂಜಯ್ ರಾವತ್

    Gadaga

    ಸದ್ಯ ಸಂತ್ರಸ್ತೆ ಗದಗ ಜಿಮ್ಸ್ ನ ಸಖಿ ಒನ್ ಸ್ಟಾಪ್ ಸೆಂಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿ ರಫಿಕ್‍ನನ್ನು ಬಂಧಿಸಿರುವ ಗದಗ ಮಹಿಳಾ ಪೊಲೀಸರು ನ್ಯಾಯಾಲಯಕ್ಕೆ  ಹಾಜರು ಪಡಿಸಿದ್ದು, ಕೋರ್ಟ್‌ ನ್ಯಾಯಾಂಗ ಬಂಧನ ವಿಧಿಸಿದೆ.

  • ಪ್ರೀತಿ ನಿರಾಕರಿಸಿದ್ದಕ್ಕೆ ಮಾಜಿ ಪ್ರಿಯಕರನ ದುಬಾರಿ ಬೈಕ್‍ಗೆ ಬೆಂಕಿ ಇಟ್ಟ ಮಹಿಳೆ

    ಪ್ರೀತಿ ನಿರಾಕರಿಸಿದ್ದಕ್ಕೆ ಮಾಜಿ ಪ್ರಿಯಕರನ ದುಬಾರಿ ಬೈಕ್‍ಗೆ ಬೆಂಕಿ ಇಟ್ಟ ಮಹಿಳೆ

    ಬ್ಯಾಂಕಾಕ್: ಥೈಲ್ಯಾಂಡ್‍ನ 36 ವರ್ಷದ ಮಹಿಳೆಯೊಬ್ಬಳು ತನ್ನ ಜೊತೆಗಿರಲು ನಿರಾಕರಿಸಿದ ಮಾಜಿ ಪ್ರಿಯಕರನ ಬೈಕಿಗೆ ಬೆಂಕಿ ಹಚ್ಚಿ ಆಕ್ರೋಶವನ್ನು ಹೊರ ಹಾಕಿದ್ದಾಳೆ.

    ಮಹಿಳೆ ತನ್ನ ಪ್ರಿಯಕರನಿಗೆ 23 ಲಕ್ಷ ರೂ. ಮೌಲ್ಯದ ಟ್ರಯಂಫ್ ಬೈಕ್ ಅನ್ನು ಉಡುಗೊರೆಯಾಗಿ ನೀಡಿದ್ದಳು. ಆದರೆ ಅವರಿಬ್ಬರ ನಡುವೆ ಬ್ರೇಕ್ ಆಪ್ ಆದ ನಂತರ ತನ್ನ ಮಾಜಿ ಪ್ರಿಯಕರನ ವಿರುದ್ಧ ಸೇಡು ತೀರಿಸಿಕೊಳ್ಳುವ ಸಲುವಾಗಿ ಬೈಕನ್ನೇ ಸುಟ್ಟುಹಾಕಿದ್ದಾಳೆ.

    ಈ ವೀಡಿಯೋ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಕನೋಕ್ ವಾನ್ ಎಂಬ ಮಹಿಳೆ, ಡಬ್ಬವೊಂದರಲ್ಲಿ ತಂದಿದ್ದ ಇಂಧನವನ್ನು ಬೈಕ್ ಮೇಲೆ ಸುರಿದಿದ್ದಾಳೆ. ನಂತರ ಬೈಕ್‍ಗೆ ಬೆಂಕಿ ಹಚ್ಚಿ ಸ್ಥಳದಿಂದ ಪರಾರಿಯಾಗಿದ್ದಾಳೆ. ಇದನ್ನೂ ಓದಿ: ಕೆನಡಾದಲ್ಲಿ ಮಗನ ಮದುವೆ – ಆನ್‍ಲೈನ್‍ನಲ್ಲಿ ಆಶೀರ್ವಾದಿಸಿದ ಪೋಷಕರು

    ಈ ಘಟನೆ ವೇಳೆ ತನ್ನ ಮಾಜಿ ಪ್ರಿಯಕರನ ಬೈಕ್ ಜೊತೆಯಲ್ಲಿಯೇ ನಿಲ್ಲಿಸಿದ್ದ ಇನ್ನೂ ಆರು ಬೈಕ್‍ಗಳಿಗೆ ಬೆಂಕಿ ತಗುಲಿ ಸುಟ್ಟು ಕರಕಲಾಗಿದೆ. ಬಳಿಕ ಸ್ಥಳಕ್ಕೆ ಬಂದ ಅಗ್ನಿ ಶಾಮಕ ದಳ ಬೆಂಕಿ ನಂದಿಸಿದ್ದಾರೆ. ಅದೃಷ್ಟ ಎಂಬಂತೆ ಘಟನೆ ವೇಳೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.