Tag: ಗೆಳತಿಯರು

  • ಆಡುತ್ತಾ ನೀರು ತುಂಬಿದ ಗುಂಡಿಗೆ ಬಿದ್ದ ನಾಲ್ವರು ಗೆಳತಿಯರು

    ಆಡುತ್ತಾ ನೀರು ತುಂಬಿದ ಗುಂಡಿಗೆ ಬಿದ್ದ ನಾಲ್ವರು ಗೆಳತಿಯರು

    -ಇಬ್ಬರ ಸಾವು, ಇನ್ನಿಬ್ಬರ ರಕ್ಷಣೆ
    -ಗ್ರಾಮದಲ್ಲಿ ಸೂತಕದ ಛಾಯೆ

    ಪಾಟ್ನಾ: ಆಡುತ್ತಾ ನೀರು ತುಂಬಿದ ಗುಂಡಿಗೆ ಬಿದ್ದ ಇಬ್ಬರು ಬಾಲಕಿಯರು ಸಾವನ್ನಪ್ಪಿರುವ ಘಟನೆ ಬಿಹಾರದ ಖಗರಿಯಾದ ಗೋಗರಿ ಠಾಣಾ ವ್ಯಾಪ್ತಿಯ ಮುಶ್ಕಿಪುರನಲ್ಲಿ ನಡೆದಿದೆ. ಗುಂಡಿಗೆ ಬಿದ್ದಿದ್ದ ನಾಲ್ವರು ಬಾಲಕಿಯರ ಪೈಕಿ ಇಬ್ಬರು ಬದುಕುಳಿದಿದ್ದಾರೆ.

    13 ವರ್ಷದ ಕಾಶಿಯಾ ಮತ್ತು ನರ್ಗಿಸ್ ಮೃತ ಬಾಲಕಿ ಯರು. ನರ್ಗಿಸ್ ತನ್ನ ಮೂವರು ಗೆಳತಿಯರು ರಸ್ತೆ ಬದಿಯಲ್ಲಿ ನೀರು ನಿಂತಿದ್ದ ಪ್ರದೇಶದಲ್ಲಿ ಆಟ ಆಡುತ್ತಿದ್ದರು. ಈ ವೇಳೆ ನರ್ಗಿಸ್ ಕಾಲು ಜಾರಿ ಗುಂಡಿಗೆ ಬಿದ್ದಿದ್ದಾಳೆ. ನರ್ಗಿಸ್ ರಕ್ಷಣೆಗೆ ಇನ್ನುಳಿದ ಮೂವರು ಗೆಳತಿಯರು ಗುಂಡಿಗೆ ಧುಮುಕಿದ್ದಾರೆ.

    ಬಾಲಕಿಯರು ಧ್ವನಿ ಕೇಳಿದ ಸ್ಥಳೀಯರು ಗುಂಡಿಗೆ ಧಮುಕಿ ಇಬ್ಬರನ್ನ ಹೊರ ತಂದಿದ್ದಾರೆ. ಆದ್ರೆ ಕಾಶಿಯಾ ಮತ್ತು ನರ್ಗಿಸ್ ನೀರಿನಲ್ಲಿ ಮುಳುಗಿದ್ದರು. ಕೊನೆಗೆ ಸ್ಥಳೀಯರು ಮೀನುಗಾರರ ಸಹಾಯದ ಮೂಲಕ ಶೋಧ ಕಾರ್ಯ ನಡೆಸಿ ಬಾಲಕಿಯರ ಮೃತದೇಹಗಳನ್ನು ಗುಂಡಿಯಿಂದ ಹೊರ ತೆಗೆಯಲಾಗಿದೆ.

    ಗ್ರಾಮದಲ್ಲಿ ಸೂತಕ ಛಾಯೆ ಆವರಿಸಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಗೊಗರಿ ಠಾಣೆಯ ಸಿಓ ರವೀಂದ್ರನಾಥ್ ಮೃತ ಬಾಲಕಿಯರ ಕುಟುಂಬಕ್ಕೆ ತಲಾ 4 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ಹೇಳಿದ್ದಾರೆ.

  • ಪ್ರಿಯತಮೆಯರಿಗೆ ದೀಪಾವಳಿ ಗಿಫ್ಟ್ ಕೊಡಿಸಲು ಕಳ್ಳತನ ಮಾಡಿದ ಯುವಕರು

    ಪ್ರಿಯತಮೆಯರಿಗೆ ದೀಪಾವಳಿ ಗಿಫ್ಟ್ ಕೊಡಿಸಲು ಕಳ್ಳತನ ಮಾಡಿದ ಯುವಕರು

    ನವದೆಹಲಿ: ತಮ್ಮ ಗೆಳತಿಯರಿಗೆ ದೀಪಾವಳಿ ಹಬ್ಬದ ಉಡುಗೊರೆ ನೀಡಲು ಯುವಕರಿಬ್ಬರು ಕಳ್ಳತನಕ್ಕೆ ಕೈಹಾಕಿ ಪೊಲೀಸರ ಅತಿಥಿಯಾಗಿರುವ ಘಟನೆ ದೆಹಲಿಯಲ್ಲಿ ನಡೆದಿದೆ.

    ಬಂಧಿತರನ್ನು ಶಾಸ್ತ್ರಿ ನಗರ ದೆಹಲಿ ನಿವಾಸಿ ಶಶಾಂಕ್ ಅಗರ್ವಾಲ್ (32) ಮತ್ತು ಶಕುರ್ಬಸ್ತಿ ನಿವಾಸಿ ಅಮರ್ ಸಿಂಗ್ (29) ಎಂದು ಗುರುತಿಸಲಾಗಿದೆ. ದೀಪಾವಳಿ ಹಬ್ಬಕ್ಕೆ ಗೆಳತಿಯರಿಗೆ ದುಬಾರಿ ಉಡುಗೊರೆ ಕೊಡಿಸಲು ಆನ್‍ಲೈನ್ ಶಾಪಿಂಗ್ ಡೆಲಿವರಿ ಹುಡುಗನ ಬಳಿಯಿಂದ ದರೋಡೆ ಮಾಡಿದ್ದಾರೆ.

    ಈ ಪ್ರಕರಣದ ಬಗ್ಗೆ ಮಾಹಿತಿ ನೀಡಿರುವ ಪೊಲೀಸರು, ಗುರುವಾರ ಡೆಲಿವರಿ ಹುಡುಗನೊಬ್ಬ ಪಂಜಾಬಿ ಬಾಗ್ ಪ್ರದೇಶಕ್ಕೆ ಪಾರ್ಸೆಲ್ ತಲುಪಿಸಲು ಬಂದಿದ್ದಾಗ ಈ ಇಬ್ಬರು ಅವನಿಂದ ಬ್ಯಾಗ್ ಕಸಿದುಕೊಂಡು ಪರಾರಿಯಾಗಿದ್ದಾರೆ. ಪಾರ್ಸೆಲ್ ಬ್ಯಾಗ್‍ನಲ್ಲಿ ದುಬಾರಿ ಮೊಬೈಲ್ ಫೋನ್‍ಗಳು ಸೇರಿದಂತೆ ಹಲವಾರು ಉಡುಗೊರೆ ವಸ್ತುಗಳು ಇದ್ದವು ಎಂದು ಹೇಳಿದ್ದಾರೆ.

    ಸದ್ಯ ಇಬ್ಬರನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಈ ಮೊದಲು ಯುವಕರು ಆನ್‍ಲೈನ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡಿದ್ದು, ಇಬ್ಬರಿಗೂ ದೀಪಾವಳಿ ಸಮಯದಲ್ಲಿ ಜನ ಜಾಸ್ತಿ ಆನ್‍ಲೈನ್ ಅಲ್ಲಿ ಶಾಪಿಂಗ್ ಮಾಡುತ್ತಾರೆ. ಇದರಲ್ಲಿ ಹೆಚ್ಚಿನ ಜನರು ಆಫರ್ ಇರುವ ಕಾರಣ ದುಬಾರಿ ಮೊಬೈಲ್ ಖರೀದಿಸುತ್ತಾರೆ ಎಂದು ತಿಳಿದಿತ್ತು. ಆದ್ದರಿಂದ ಆನ್‍ಲೈನ್ ಶಾಪಿಂಗ್ ಡೆಲಿವರಿ ಹುಡುಗನ ಬ್ಯಾಗ್ ಕಳವು ಮಾಡಿರುವುದಾಗಿ ಪೊಲೀಸರ ಬಳಿ ಹೇಳಿಕೊಂಡಿದ್ದಾರೆ.

    ಈಗ ಕಳವು ಮಾಡಿದ ಬ್ಯಾಗನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಇಬ್ಬರಿಗೂ ಗೆಳತಿಯರಿದ್ದು ಅವರು ದೀಪಾವಳಿ ಹಬ್ಬಕ್ಕೆ ಐಫೋನ್-11 ಗಿಫ್ಟ್ ಕೇಳಿದ್ದಾರೆ. ಅವರಿಗೆ ಉಡುಗೊರೆ ನೀಡಲು ಈ ರೀತಿ ಮಾಡಿದ್ದಾರೆ ಎಂದು ತನಿಖೆ ವೇಳೆ ತಿಳಿದು ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.

  • ಗರ್ಭಿಣಿ ರಾಧಿಕೆಗೆ ಸರ್ಪ್ರೈಸ್ ನೀಡಿದ ಗೆಳತಿಯರು

    ಗರ್ಭಿಣಿ ರಾಧಿಕೆಗೆ ಸರ್ಪ್ರೈಸ್ ನೀಡಿದ ಗೆಳತಿಯರು

    ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಮಡದಿ, ಸ್ಯಾಂಡಲ್‍ವುಡ್ ಸಿಂಡ್ರೆಲಾ ರಾಧಿಕಾ ಪಂಡಿತ್ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ರಾಧಿಕಾ ಅವರಿಗೆ ಗೆಳತಿಯರಾದ ಪ್ರತಿಭಾ ಸುರೇಶ್, ಸಾನಿಯಾ ಸರ್ದರಿಯಾ ಮತ್ತು ವನಿತಾ ಉಮೇಶ್ ಮೂವರು ಸರ್ಪ್ರೈಸ್ ನೀಡಿದ್ದಾರೆ.

    ಗರ್ಭಿಣಿಗೆ ಸಾಮಾನ್ಯವಾಗಿ ಬಗೆ ಬಗೆಯ ತಿನಿಸುಗಳನ್ನು ತಿನ್ನಬೇಕೆಂಬ ಬಯಕೆ ಉಂಟಾಗುತ್ತದೆ. ಗರ್ಭಿಣಿ ರಾಧಿಕೆಯ ಬಯಕೆಯನ್ನ ಅರಿತ ಗೆಳತಿಯರು ವಿವಿಧ ಭಕ್ಷ್ಯ, ಭೋಜನ ಸಿದ್ಧಪಡಿಸಿ ರಾಮಾಚಾರಿ ಮಡದಿಗೆ ನೀಡಿದ್ದಾರೆ. ಗೆಳತಿಯರು ತನಗಾಗಿ ಸಿದ್ಧಪಡಿಸಿ ತಂದ ಆಹಾರ ಪದಾರ್ಥ ನೋಡಿದ ಮೊಗ್ಗಿನ ಚೆಲುವೆ ಫೋಟೋ ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ.

    ಫೋಟೋದಲ್ಲಿ ಮೂವರು ಗೆಳತಿಯರೊಂದಿಗೆ ರಾಧಿಕಾರ ತಾಯಿ ಮತ್ತು ಬಗೆಗೆ ತಿಂಡಿ, ಸಿಹಿ ಪದಾರ್ಥಗಳನ್ನು ಕಾಣಬಹುದಾಗಿದೆ. ನನ್ನ ಆಪ್ತ ಗೆಳತಿಯರು ನನಗಾಗಿ ಪ್ರೀತಿಯಿಂದ ಮಾಡಿಕೊಂಡ ಬಂದ ಅಡುಗೆ ಎಂಬ ಸಾಲುಗಳನ್ನು ಬರೆದು, ಮೂವರಿಗೂ ಟ್ಯಾಗ್ ಮಾಡಿದ್ದಾರೆ.

    ಈ ಹಿಂದೆ ರಾಧಿಕಾ ಖುದ್ದು ತಾವೇ ಆಹಾರ ಸೇವಿಸುತ್ತಿರುವ ಫೋಟೋ ಅಪ್ಲೋಡ್ ಮಾಡಿಕೊಂಡಿದ್ದರು. ನಂತರ ಬೇಬಿ ಮೂನ್ ಫೋಟೋಗಳನ್ನು ಅಪ್ಲೋಡ್ ಮಾಡಿಕೊಳ್ಳುತ್ತಾ ಬಂದಿದ್ದಾರೆ. ತಾವು ಗರ್ಭಿಣಿಯಾಗಿದ್ದರೂ, ‘ಆದಿ ಲಕ್ಷ್ಮಿ ಪುರಾಣ’ ಸಿನಿಮಾಗೆ ಡಬ್ಬಿಂಗ್ ಮಾಡುವ ಮೂಲಕ ಅಭಿಮಾನಿಗಳಿಂದ ಮೆಚ್ಚುಗೆಯನ್ನು ಪಡೆದುಕೊಂಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv