Tag: ಗೆಳತಿ

  • ಬೆಂಗಳೂರಿನಲ್ಲಿ ಸ್ನೇಹಿತನಿಂದಲೇ ಗೆಳತಿ ಮೇಲೆ ಅತ್ಯಾಚಾರ

    ಬೆಂಗಳೂರಿನಲ್ಲಿ ಸ್ನೇಹಿತನಿಂದಲೇ ಗೆಳತಿ ಮೇಲೆ ಅತ್ಯಾಚಾರ

    ಬೆಂಗಳೂರು: ಸ್ನೇಹಿತನಿಂದಲೇ ಗೆಳತಿಯ ಮೇಲೆ ಅತ್ಯಾಚಾರ (Rape) ಆರೋಪ ಕೇಳಿ ಬಂದಿದೆ.

    ಬೆಂಗಳೂರಿನ ಮೈಕೋ ಲೇಔಟ್ ಠಾಣಾ (Mico Layout Police Station) ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪ್ರತಿಷ್ಠಿತ ಖಾಸಗಿ ಕಾಲೇಜು ವಿದ್ಯಾರ್ಥಿನಿ ಅತ್ಯಾಚಾರ ಆರೋಪದ ಅಡಿ ದೂರು ನೀಡಿದ್ದಾಳೆ.

    ಈಗಾಗಲೇ ಆರೋಪಿಯನ್ನ ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

  • ಏರ್‌ಪೋರ್ಟ್‌ನಲ್ಲಿ ಪ್ರಿಯತಮೆಗೆ ಬಾಯ್ ಹೇಳಲು ಹೋಗಿ ಲವರ್ ಲಾಕ್!

    ಏರ್‌ಪೋರ್ಟ್‌ನಲ್ಲಿ ಪ್ರಿಯತಮೆಗೆ ಬಾಯ್ ಹೇಳಲು ಹೋಗಿ ಲವರ್ ಲಾಕ್!

    ಬೆಂಗಳೂರು: ರಾಷ್ಟ್ರ ರಾಜಧಾನಿ ದೆಹಲಿಗೆ ಹೋಗುತ್ತಿದ್ದ ಗರ್ಲ್ ಫ್ರೆಂಡ್‍ಗೆ ಬಾಯ್ ಹೇಳಲು ಹೋಗಿ ಖಾಸಗಿ ಕಂಪನಿಯ ಉದ್ಯೋಗಿಯೊಬ್ಬ ಏರ್‌ಪೋರ್ಟ್‌ ಪೊಲೀಸರ ಅತಿಥಿಯಾಗಿದ್ದಾನೆ. ಆಕಾಶ್ ಏರ್ಲೈನ್‍ಗೆ (Akasa Airline) ಹೋಗುತ್ತಿದ್ದ ಗೆಳತಿಗೆ ಬಾಯ್ ಹೇಳಿ ಬರಲು ಟರ್ಮಿನಲ್ ಒಳಗಡೆ ಎಂಟ್ರಿಯಾಗಿ ಬಾಯ್ ಹೇಳಿ ಹೊರ ಬರುವಾಗ ಭದ್ರತಾ ಸಿಬ್ಬಂದಿ ಕೈಗೆ ಪ್ರಿಯತಮ ಸಿಕ್ಕಿಬಿದ್ದಿದ್ದಾನೆ.

    ಪ್ರಿಯತಮ ಪ್ರಕಾರ್ ಶ್ರೀವತ್ಸವ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಗೆಳತಿಗೆ ಡ್ರಾಪ್ ಮಾಡಲು ಹೋಗಿದ್ದಾನೆ. ಟರ್ಮಿನಲ್ ಒಳಗೆ ಹೋಗಿ ಬಾಯ್ ಮಾಡಿ ಬರುವುದಕ್ಕೆ ಪ್ಲಾನ್ ಮಾಡಿ ಗೆಳತಿ ಮಾಡಿಸಿದ್ದ ಟಿಕೆಟ್ ತನ್ನ ಮೊಬೈಲ್‍ನಲ್ಲಿ ಎಡಿಟ್ ಮಾಡಿದ್ದ. ಭದ್ರತಾ ಸಿಬ್ಬಂದಿ ಕಣ್ಣಿಗೆ ಮಣ್ಣೆರಚಿ ಒಳಗಡೆ ಹೋಗಿ ಬಾಯ್ ಮಾಡಿ ಮರಳಿ ಹೊರಗಡೆ ಬರುವಾಗ ಟಿಕೆಟ್ ಪರಿಶೀಲನೆ ವೇಳೆ ಶ್ರೀವತ್ಸವ್ ಬಳಿ ಇದ್ದ ಟಿಕೆಟ್ ನಕಲಿ ಅನ್ನೋದು ಗೊತ್ತಾಗಿದೆ. ಇದನ್ನೂ ಓದಿ: 5,8 ಮತ್ತು 9ನೇ ತರಗತಿಯ ಬೋರ್ಡ್ ಪರೀಕ್ಷೆಗೆ ಸುಪ್ರೀಂ ತಡೆ – ಎಕ್ಸಾಂ ಮುಂದೂಡಿದ ಶಿಕ್ಷಣ ಇಲಾಖೆ

    ಕೂಡಲೇ ಪ್ರಕಾರ್ ಶ್ರೀವತ್ಸವ್‍ನನ್ನ ವಶಕ್ಕೆ ಪಡೆದು ವಿಮಾನ ನಿಲ್ದಾಣದಲ್ಲಿದ್ದ ಸಿಐಎಸ್‍ಎಫ್ ಸಿಬ್ಬಂದಿ ಡ್ರಿಲ್ ಮಾಡಿದ್ರು. ಈ ವೇಳೆ ತನ್ನ ಸ್ನೇಹಿತೆಯನ್ನ ಏರ್‍ಪೋರ್ಟ್ ಒಳಗಡೆ ಬಿಟ್ಟು ಬರುವ ಸಲುವಾಗಿ ಟರ್ಮಿನಲ್ ಒಳಗಡೆ ಹೋಗಲು ತಾನೇ ಈ ಟಿಕೆಟ್ ಎಡಿಟ್ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಕೂಡಲೇ ಏರ್‌ಪೋರ್ಟ್‌ ಪೊಲೀಸ್ ಠಾಣೆಯಲ್ಲಿ ಯುವಕನ ವಿರುದ್ಧ ದೂರು ದಾಖಲಾಗಿದ್ದು, ಪ್ರಕರಣ ದಾಖಲಿಸಿಕೊಂಡ ಏರ್‌ಪೋರ್ಟ್‌ (Bengaluru International Airport) ಪೊಲೀಸರು ಯುವಕನನ್ನ ಬಂಧಿಸಿ ಜೈಲಿಗೆ ಕಳಿಸಿದ್ದಾರೆ.

  • ಗೆಳತಿ ಕಾಲಿನ ಮೇಲೆ ಕಾರು ಹರಿಸಿದ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ!

    ಗೆಳತಿ ಕಾಲಿನ ಮೇಲೆ ಕಾರು ಹರಿಸಿದ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ!

    ಮುಂಬೈ: ಗೆಳತಿಯ ಕಾಲಿನ ಮೇಲೆ ಕಾರು ಹರಿಸಿದ ಪ್ರಕರಣಕ್ಕೆ ಸಂಬಂಧ ಥಾಣೆ (Thane) ವಿಭಾಗದ ಭಾರತೀಯ ಜನತಾ ಪಕ್ಷದ ಯುವ ಮೋರ್ಚಾ ಅಧ್ಯಕ್ಷ (BJYM) ಅಶ್ವಜಿತ್ ಗಾಯಕ್ವಾಡ್ ವಿರುದ್ಧ ಕೇಸ್ ದಾಖಲಾಗಿದೆ.

    ಗಾಯಾಳು ಗೆಳತಿಯನ್ನು ಪ್ರಿಯಾ ಎಂದು ಗುರುತಿಸಲಾಗಿದೆ. ಸದ್ಯ ಪ್ರಿಯಾ ಆರೋಪಗಳನ್ನೆಲ್ಲಾ ಅಶ್ವಜಿತ್ ತಿರಸ್ಕರಿಸಿದ್ದು, ಹಣಕ್ಕಾಗಿ ಈ ರೀತಿ ಮಾಡುತ್ತಿದ್ದಾಳೆ. ಅಲ್ಲದೇ ಅವಳು ಬಿಂಬಿಸಿದ್ದೆಲ್ಲ ಸುಳ್ಳಾಗಿದೆ. ಪ್ರಿಯಾ ನನಗೆ ಜಸ್ಟ್ ಫ್ರೆಂಡ್ ಅಷ್ಟೇ ಎಂದು ಪೊಲೀಸರ ಮುಂದೆ ಅಶ್ವಜಿತ್ ಹೇಳಿದ್ದಾನೆ.

    ನಾನು ಕುಟುಂಬದ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಹೋಟೆಲ್‍ಗೆ ಕುಡಿದ ಅಮಲಿನಲ್ಲಿ ಬಂದಿದ್ದ ಪ್ರಿಯಾ, ತನ್ನೊಂದಿಗೆ ಮಾತನಾಡುವಂತೆ ಒತ್ತಾಯಿಸಿದಳು. ಈ ವೇಳೆ ನಾನು ನಿರಾಕರಿಸಿದಾಗ ಆಕೆ ನನ್ನ ಮೇಲೆ ದೌರ್ಜನ್ಯ ಎಸಗಿದಳು. ಅಲ್ಲದೆ ನನ್ನ ಸ್ನೇಹಿತರು ಈ ವಿಚಾರದಲ್ಲಿ ಮಧ್ಯಪ್ರವೇಶಿಸಲು ಮುಂದಾದಾಗ ಅವರ ಮೇಲೂ ಹಲ್ಲೆ ನಡೆಸಿದ್ದಾಳೆ. ನನ್ನ ಡ್ರೈವರ್ ಶೆಲ್ಕೆ, ಅವಳು ಪಕ್ಕಕ್ಕೆ ಹೋಗುವಂತೆ ನನ್ನ ಕಾರನ್ನು ಸ್ಟಾರ್ಟ್ ಮಾಡಿದರು. ಆದರೆ ಕಾರು ಸ್ವಲ್ಪ ತಾಗಿ ಕೆಳಗೆ ಬಿದ್ದಳು. ಈ ಅಪಘಾತ ಉದ್ದೇಶಪೂರ್ವಕವಲ್ಲ ಎಂದು ವಿವರಿಸಿದ್ದಾನೆ.

    ಇದು ಏನೂ ಅಲ್ಲ, ಆದರೆ ಇದು ನನ್ನಿಂದ ಸುಲಿಗೆ ಮಾಡುವ ಮಾರ್ಗವಾಗಿದೆ. ನಾನು ಈ ಹಿಂದೆಯೂ ಅವಳಿಗೆ ಹಣವನ್ನು ನೀಡಿದ್ದೇನೆ ಮತ್ತು ಅದಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳು ನನ್ನ ಬಳಿ ಇವೆ ಎಂದು ಹೇಳಿದನು. ಇದನ್ನೂ ಓದಿ; ಚಲಿಸುತ್ತಿದ್ದ ಬಸ್ಸಿನಲ್ಲೇ ದಲಿತ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ

    ಡಿಸೆಂಬರ್ 11 ರಂದು ಥಾಣೆಯ ಹೋಟೆಲ್ ಬಳಿ ಅಶ್ವಜಿತ್ ಕಾರು ಮೂವ್ ಮಾಡಿದ ಸಂದರ್ಭದಲ್ಲಿ ಪ್ರಿಯಾ ಕಾಲಿನ ಮೇಲೆ ಹರಿದು ಗಂಭೀರ ಗಾಯಗಳಾಗಿವೆ. ಕೂಡಲೇ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು. ಘಟನೆಯ ನಂತರ ಅಶ್ವಜಿತ್ ಮತ್ತು ಇತರ ಇಬ್ಬರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 323 (ಸ್ವಯಂಪ್ರೇರಿತವಾಗಿ ನೋವುಂಟುಮಾಡುವುದು), 279 (ಅತುರದಿಂದ ಚಾಲನೆ), 504 (ಶಾಂತಿ ಭಂಗವನ್ನು ಪ್ರಚೋದಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ) ಮತ್ತು ಇತರರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

  • ನಿಧನಕ್ಕೂ ಮುನ್ನ 33 ವರ್ಷದ ಗೆಳತಿಯ ಹೆಸರಲ್ಲಿ 900 ಕೋಟಿ ಆಸ್ತಿ ಬರೆದಿಟ್ಟ ಇಟಲಿ ಮಾಜಿ ಪ್ರಧಾನಿ

    ನಿಧನಕ್ಕೂ ಮುನ್ನ 33 ವರ್ಷದ ಗೆಳತಿಯ ಹೆಸರಲ್ಲಿ 900 ಕೋಟಿ ಆಸ್ತಿ ಬರೆದಿಟ್ಟ ಇಟಲಿ ಮಾಜಿ ಪ್ರಧಾನಿ

    ರೋಮ್: ಇಟಲಿಯ ಮಾಜಿ ಪ್ರಧಾನಿ (Former Italian Prime Minister) ಸಿಲ್ವಿಯೊ ಬೆರ್ಲುಸ್ಕೋನಿ (Silvio Berlusconi) ಅವರು ಕಳೆದ ತಿಂಗಳು ನಿಧನರಾಗಿದ್ದಾರೆ. ಅವರು ಸಾವನ್ನಪ್ಪುವುದಕ್ಕೂ ಮುನ್ನ ತನ್ನ 33 ವರ್ಷದ ಗೆಳತಿಯ (Girlfriend) ಹೆಸರಿನಲ್ಲಿ ಬರೋಬ್ಬರಿ 900 ಕೋಟಿ ರೂ. ಮೌಲ್ಯದ ಆಸ್ತಿ ಬರೆದಿರುವುದಾಗಿ ವರದಿಯಾಗಿದೆ.

    86 ವರ್ಷದ ಬೆರ್ಲುಸ್ಕೋನಿ ಅವರು 33 ವರ್ಷದ ಮಾರ್ಟಾ ಫಾಸಿನಾ ಅವರನ್ನು ಪ್ರೀತಿಸುತ್ತಿದ್ದರು. ಆದರೆ ಮದುವೆಯಾಗಿರಲಿಲ್ಲ. ದೀರ್ಘಕಾಲದ ಅನಾರೋಗ್ಯದ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದ ಮಾಜಿ ಪ್ರಧಾನಿ ಜೂನ್ 12 ರಂದು ನಿಧನರಾಗಿದ್ದಾರೆ. ಅವರ ಕೊನೆ ದಿನಗಳಲ್ಲಿ ತಮ್ಮ ಗೆಳತಿಯನ್ನು ಪತ್ನಿ ಎಂದು ಉಲ್ಲೇಖಿಸಿ ತಮ್ಮ ಸುಮಾರು 905 ಕೋಟಿ ರೂ. ಮೌಲ್ಯದ ಆಸ್ತಿಯನ್ನು (100 ದಶಲಕ್ಷ ಯುರೋ) ಬರೆದಿದ್ದಾರೆ.

    ಸಿಲ್ವಿಯೊ ಬರ್ಲುಸ್ಕೋನಿ ಹಾಗೂ ಮಾರ್ಟಾ ಫಾಸಿನಾ ನಡುವೆ 2020ರಲ್ಲಿ ಪ್ರೇಮಾಂಕುರವಾಗಿತ್ತು. ಈ ಹಿಂದೆ ಇಬ್ಬರನ್ನು ಮದುವೆಯಾಗಿದ್ದ ಇಟಲಿಯ ಮಾಜಿ ಪ್ರಧಾನಿ ಇಬ್ಬರಿಗೂ ವಿಚ್ಛೇದನ ನೀಡಿ ಬಳಿಕ ಮಾರ್ಟಾ ಫಾಸಿನಾ ಜೊತೆ ಸಂಬಂಧ ಬೆಳೆಸಿದ್ದರು. ಇದನ್ನೂ ಓದಿ: ಅನಾರೋಗ್ಯ ಪೀಡಿತ ತಂದೆ ನೋಡಲು ಹೋಗಿ ಅನಾರೋಗ್ಯಕ್ಕೀಡಾದ ಮದನಿ

    ವರದಿಗಳ ಪ್ರಕಾರ ಬರ್ಲುಸ್ಕೋನಿ ಅವರ ಸಂಪತ್ತನ್ನು 5 ಶತಕೋಟಿ ಯೂರೋಗಳೆಂದು ಅಂದಾಜಿಸಲಾಗಿದೆ. ಅವರು ದೊಡ್ಡ ಉದ್ಯಮಿಯೂ ಆಗಿದ್ದರಿಂದ ತಮ್ಮ ಗೆಳತಿಯ ಹೆಸರಿನಲ್ಲಿ ದೊಡ್ಡ ಮೊತ್ತದ ಆಸ್ತಿಯನ್ನು ಬರೆದಿದ್ದಾರೆ ಎನ್ನಲಾಗಿದೆ. ಮಾತ್ರವಲ್ಲದೇ ಬರ್ಲುಸ್ಕೋನಿ ಅವರು ತಮ್ಮ ಕುಟುಂಬಸ್ಥರ ಹೆಸರಿನಲ್ಲೂ ಆಸ್ತಿಯನ್ನು ಬರೆದಿದ್ದಾರೆ. ತಮ್ಮ ಸಹೋದರ ಪಾವೋಲೊ ಅವರಿಗೆ 100 ದಶಲಕ್ಷ ಯೂರೋ, ಇಬ್ಬರು ಮಕ್ಕಳಿಗೆ ಕಂಪನಿಯಲ್ಲಿ 53% ರಷ್ಟು ಶೇರುಗಳನ್ನು ನೀಡಿದ್ದಾರೆ. ಇದನ್ನೂ ಓದಿ: ಬಿಗ್ ಬಾಸ್ ಶೋನಲ್ಲೇ ‘ಧಮ್’ ಹೊಡೆದ ಸಲ್ಮಾನ್ ಖಾನ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಿತ್ರನ ತಲೆಯನ್ನೇ ಕಡಿದು, ಹೃದಯ ಕಿತ್ತು ಕೊನೆಗೆ ಪೊಲೀಸರಿಗೆ ಶರಣಾದ

    ಮಿತ್ರನ ತಲೆಯನ್ನೇ ಕಡಿದು, ಹೃದಯ ಕಿತ್ತು ಕೊನೆಗೆ ಪೊಲೀಸರಿಗೆ ಶರಣಾದ

    ಹೈದರಾಬಾದ್: ತನ್ನ ಗೆಳತಿಗೆ (Girlfriend) ಸಂದೇಶ ಕಳುಹಿಸಿದ್ದಕ್ಕಾಗಿ ಯುವಕನೊಬ್ಬ ತನ್ನ ಸ್ನೇಹಿತನನ್ನೇ (Friend) ಭೀಕರವಾಗಿ ಕೊಲೆಗೈದು (Murder), ಶಿರಚ್ಛೇದ ಮಾಡಿ (Beheading), ದೇಹದ ಆಂತರಿಕ ಭಾಗಗಳನ್ನು ಕಿತ್ತು ಹಾಕಿ, ಕೊನೆಗೆ ಪೊಲೀಸರಿಗೆ ಶರಣಾಗಿರುವ ಘಟನೆ ತೆಲಂಗಾಣದಲ್ಲಿ (Telangana) ನಡೆದಿದೆ.

    ವರದಿಗಳ ಪ್ರಕಾರ ಆರೋಪಿಯ ಗೆಳತಿ ಈ ಹಿಂದೆ ಆತನ ಸ್ನೇಹಿತನೊಂದಿಗೆ ಸಂಬಂಧ ಹೊಂದಿದ್ದಳು. ಆಕೆಗೆ ಸಂತ್ರಸ್ತ ಯುವಕ ಸಂದೇಶ ಕಳುಹಿಸುತ್ತಿದ್ದ. ಇದರಿಂದ ಕೋಪಗೊಂಡಿದ್ದ ಆರೋಪಿ, ಸ್ನೇಹಿತನ ಶಿರಚ್ಛೇದ ಮಾಡಿದ್ದಾನೆ. ಬಳಿಕ ಆತನ ಹೃದಯ, ಖಾಸಗಿ ಭಾಗಗಳನ್ನು ಕಿತ್ತಿದ್ದು, ಬೆರಳುಗಳನ್ನೂ ಕತ್ತರಿಸಿದ್ದಾನೆ ಎನ್ನಲಾಗಿದೆ.

    ಘಟನೆಯೇನು?
    ಆರೋಪಿ ಹರಿಹರ ಕೃಷ್ಣ ಹಾಗೂ ಕೊಲೆಯಾದ ಯುವಕ ನವೀನ್ ಗೆಳೆಯರಾಗಿದ್ದು, ಈ ಹಿಂದೆ ದಿಲ್‌ಸುಖ್‌ನಗರದ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಇಬ್ಬರೂ ಅದೇ ಕಾಲೇಜಿನಲ್ಲಿ ಓದುತ್ತಿದ್ದ ಯುವತಿಯನ್ನು ಪ್ರೀತಿಸುತ್ತಿದ್ದರು. ಆದರೆ ನವೀನ್ ಮೊದಲು ತನ್ನ ಪ್ರೇಮವನ್ನು ಯುವತಿಗೆ ತಿಳಿಸಿದ್ದ. ಈ ಪ್ರಸ್ತಾಪವನ್ನು ಆಕೆ ಒಪ್ಪಿಕೊಂಡಿದ್ದು, 1-2 ವರ್ಷದ ಬಳಿ ಅವರಿಬ್ಬರೂ ಬೇರೆಯಾಗಿದ್ದರು. ಬಳಿಕ ಯುವತಿ ಹರಿಹರ ಕೃಷ್ಣನೊಂದಿಗೆ ಸಂಬಂಧ ಬೆಳೆಸಿದ್ದಳು. ಇದನ್ನೂ ಓದಿ: ಆಸ್ತಿ ಮುಟ್ಟುಗೋಲು ಹಾಕಲು ಬಂದಿದ್ದಕ್ಕೆ ಬೆಂಕಿ ಹಚ್ಚಿಕೊಂಡು ವ್ಯಕ್ತಿ ಆತ್ಮಹತ್ಯೆ

    ಆದರೆ ಯುವತಿ ನವೀನ್ ನೊಂದಿಗೆ ನಿರಂತರ ಸಂಪರ್ಕದಲ್ಲಿದ್ದಳು. ಆಕೆಗೆ ನವೀನ್ ಯಾವಾಗಲೂ ಸಂದೇಶ ಹಾಗೂ ಕರೆ ಮಾಡುತ್ತಿದ್ದ. ಆದರೆ ಇದರಿಂದ ಕೃಷ್ಣ ತೀವ್ರ ಅಸಮಾಧಾನಗೊಂಡಿದ್ದ. ಈ ಹಿನ್ನೆಲೆ ಕೃಷ್ಣ ನವೀನ್ ಹತ್ಯೆ ನಡೆಸಲು ಸುಮಾರು 3 ತಿಂಗಳು ಕಾದು ಕುಳಿತಿದ್ದ.

    ಫೆಬ್ರವರಿ 17ರಂದು ಇಬ್ಬರೂ ಗೆಳೆಯರು ಮದ್ಯಪಾನ ಮಾಡಿ ಜಗಳವಾಡಿಕೊಂಡಿದ್ದರು. ಈ ವೇಳೆ ಕೃಷ್ಣ ನವೀನ್ ಕೊಲೆ ಮಾಡಿ, ಆತನ ತಲೆಯನ್ನು ದೇಹದಿಂದ ಬೇರ್ಪಡಿಸಿದ್ದ. ಆಂತರಿಕ ಅಂಗಾಂಗಗಳನ್ನೂ ಕಿತ್ತಿದ್ದ. ಬಳಿಕ ಆತನ ಮೃತದೇಹದ ಫೋಟೋ ಕ್ಲಿಕ್ಕಿಸಿ, ತನ್ನ ಗೆಳತಿಗೆ ವಾಟ್ಸಪ್‌ನಲ್ಲಿ ಕಳುಹಿಸಿದ್ದ.

    ಹರಿಹರ ಕೃಷ್ಣ ಕೃತ್ಯ ನಡೆಸಿದ ಬಳಿಕ ಪೊಲೀಸರಿಗೆ ಶರಣಾಗಿದ್ದಾನೆ. ಆತನ ಹೇಳಿಕೆಯನ್ನು ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ನಡೆಸಿದ್ದಾರೆ. ಮೃತ ಯುವಕನ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಇದನ್ನೂ ಓದಿ: ಸಿಲಿಂಡರ್ ಬ್ಲಾಸ್ಟ್- ಗುಡಿಸಲು ಬೆಂಕಿಗಾಹುತಿ, ಮಗಳ ಚಿಕಿತ್ಸೆಗೆ ತೆಗೆದಿಟ್ಟ ಹಣವೂ ಭಸ್ಮ

  • ಗರ್ಲ್‌ಫ್ರೆಂಡ್‌ ಬೇರೊಬ್ಬನನ್ನು ಮದುವೆಯಾಗಿದ್ದಕ್ಕೆ ಗುಂಡು ಹಾರಿಸಿಕೊಂಡು ಬಾಲಕ ಆತ್ಮಹತ್ಯೆ

    ಗರ್ಲ್‌ಫ್ರೆಂಡ್‌ ಬೇರೊಬ್ಬನನ್ನು ಮದುವೆಯಾಗಿದ್ದಕ್ಕೆ ಗುಂಡು ಹಾರಿಸಿಕೊಂಡು ಬಾಲಕ ಆತ್ಮಹತ್ಯೆ

    ಜೈಪುರ: ಬೇರೊಬ್ಬ ವ್ಯಕ್ತಿಯೊಂದಿಗೆ ಗರ್ಲ್‌ಫ್ರೆಂಡ್‌ (Girlfriend) ಮದುವೆಯಾಗಿದ್ದಕ್ಕೆ (Marriage) ಬಾಲಕನೊಬ್ಬ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಜಸ್ಥಾನದ (Rajastan) ಭಿಲ್ವಾರಾ ಜಿಲ್ಲೆಯಲ್ಲಿ ನಡೆದಿದೆ.

    ಯಶ್ ವ್ಯಾಸ್ (17) ಆತ್ಮಹತ್ಯೆಗೆ ಶರಣಾದ ಬಾಲಕ. ಯಶ್ ವ್ಯಾಸ್ ಹಾಗೂ ಆತನ ಗೆಳತಿ ಒಂದೇ ಕಾಲೇಜಿನಲ್ಲಿ ಓದುತ್ತಿದ್ದರು. ಇಬ್ಬರು ಪ್ರೀತಿಸುತ್ತಿದ್ದರು. ಆದರೆ ಹುಡುಗಿಯು ಬೇರೆ ವ್ಯಕ್ತಿಯನ್ನು ಮದುವೆ ಆಗಿದ್ದಾಳೆ. ಇದರಿಂದ ಮನನೊಂದ ಯಶ್ ವ್ಯಾಸ್ ತನ್ನ ಸಾಮಾಜಿಕ ಜಾಲತಾಣದಲ್ಲೂ ಹಂಚಿಕೊಂಡಿದ್ದ.

    ಅದಾದ ಬಳಿಕ ಮಹಾತ್ಮಗಾಂಧಿ ಆಸ್ಪತ್ರೆಯ (Hospital) ಆವರಣದಲ್ಲಿ ಯಶ್ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದನ್ನು ನೋಡಿದ ಜನರು ಆತನನ್ನು ಕೂಡಲೇ ಆಸ್ಪತ್ರೆಯೊಳಗೆ ಕರೆದೊಯ್ದರು. ಗಂಭೀರವಾಗಿ ಗಾಯಗೊಂಡಿದ್ದ ಆತನನ್ನು ಉದಯಪುರಕ್ಕೆ ಚಿಕಿತ್ಸೆಗಾಗಿ ಕಳುಹಿಸಲಾಗಿತ್ತು. ಇದನ್ನೂ ಓದಿ: ಕೆಪಿಸಿಸಿ ಕಾರ್ಯಾಧ್ಯಕ್ಷರ ಎದುರೇ ಕಾರ್ಯಕರ್ತರ ಕಿತ್ತಾಟ

    crime

    ಆದರೆ ಚಿಕಿತ್ಸೆ ಫಲಕಾರಿಯಾಗದೇ ಯಶ್ ಸಾವನ್ನಪ್ಪಿದ್ದಾನೆ. ಘಟನೆಯ ವೀಡಿಯೋ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು. ಇದನ್ನೂ ಓದಿ: ಟ್ಟಿಟ್ಟರ್‌ನಿಂದ 150 ಕೋಟಿ ಅಕೌಂಟ್‌ಗಳು ಡಿಲೀಟ್‌ – ಎಲೋನ್‌ ಮಸ್ಕ್‌

    Live Tv
    [brid partner=56869869 player=32851 video=960834 autoplay=true]

  • ಮದುವೆಗೆ ನಿರಾಕರಣೆ- ಗೆಳತಿಯನ್ನೇ ಕೊಲೆ ಮಾಡಿದ ಟೆಕ್ಕಿ

    ಮದುವೆಗೆ ನಿರಾಕರಣೆ- ಗೆಳತಿಯನ್ನೇ ಕೊಲೆ ಮಾಡಿದ ಟೆಕ್ಕಿ

    ಅಮರಾವತಿ: ಗೆಳತಿ (Friend)) ಮದುವೆಗೆ (Wedding) ನಿರಾಕರಿಸಿದ್ದಕ್ಕೆ ಪಾಗಲ್ ಪ್ರೇಮಿಯೊಬ್ಬ ಆಕೆಯನ್ನು ಕೊಲೆ ಮಾಡಿ ಆತ್ಮಹತ್ಯೆಗೆ ಉಯತ್ನಿಸಿದ ಘಟನೆ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಪೆದಕಕಣಿ ಮಂಡಲದ ತಕ್ಕೆಲ್ಲಪಾಡು ಗ್ರಾಮದಲ್ಲಿ ನಡೆದಿದೆ.

    ಕೃಷ್ಣಾ ಜಿಲ್ಲೆಯ ವುಯ್ಯೂರು ಮಂಡಲದ ಕೃಷ್ಣಾಪುರಂ ಗ್ರಾಮದ ತಪಸ್ವಿ (20) ಮೃತ ಯುವತಿ (Girl). 2 ವರ್ಷಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ತಪಸ್ವಿಗೆ ವಿಜಯವಾಡ ಮೂಲದ ಸಾಫ್ಟ್‌ವೇರ್ ಇಂಜಿನಿಯರ್ ಜ್ಞಾನೇಶ್ವರ್ ಪರಿಚಯವಾಗಿದ್ದ. ಇತ್ತೀಚೆಗೆ ತಪಸ್ವಿಯನ್ನು ಜ್ಞಾನೇಶ್ವರ್ ಮದುವೆಯಾಗುವಂತೆ ಒತ್ತಾಯಿಸುತ್ತಿದ್ದ. ಆದರೆ ತಪಸ್ವಿ ನಿರಾಕರಿಸಿದ್ದಳು.

    ತಪಸ್ವಿ ಮದುವೆಗೆ ನಿರಾಕರಿಸಿದ್ದಕ್ಕೆ ಕೋಪಗೊಂಡ ಜ್ಞಾನೇಶ್ವರ್ ಆಕೆಯನ್ನು ಕೊಲ್ಲುವ ಉದ್ದೇಶದಿಂದ ಆಕೆಯ ಕೋಣೆಗೆ ತೆರಳಿ ತನ್ನನ್ನು ಮದುವೆಯಾಗುವಂತೆ ಮನವೊಲಿಸಲು ಯತ್ನಿಸಿದ್ದ. ಆ ವೇಳೆ ಅವರಿಬ್ಬರ ಮಧ್ಯೆ ಮಾತಿನ ಚಕಮಕಿ ನಡೆದಿದ್ದು, ಈ ವೇಳೆ ಜ್ಞಾನೇಶ್ವರ್ ಚಾಕುವಿನಿಂದ ಆಕೆಯ ಕತ್ತು ಸೀಳಿದ್ದಾನೆ. ಇದನ್ನು ನೋಡಿದ ತಪಸ್ವಿಯ ರೂಮ್‍ಮೇಟ್ ಸಹಾಯ ಪಡೆಯಲು ಹೊರಗೆ ಧಾವಿಸಿದ್ದಾಳೆ. ತಪಸ್ವಿಯು ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾಳೆ.

    ಆದರೆ ಇದೇ ವೇಳೆ ಜ್ಞಾನೇಂದ್ರ ತೀವ್ರಗೊಂಡು ಗಾಯಗೊಂಡಿದ್ದ ತಪಸ್ವಿಯನ್ನು ಕೊಣೆಗೆ ಎಳೆದೊಯ್ದು ಬೀಗ ಹಾಕಿದ್ದಾನೆ. ಅದಾದ ಬಳಿಕ ತಾನು ಚಾಕುವಿನಲ್ಲಿ ಕೈ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ.

    ಗಲಾಟೆ ಕೇಳಿದ ಸ್ಥಳೀಯರು ಮನೆಗೆ ಧಾವಿಸಿ ತಪಸ್ವಿಯನ್ನು ಗುಂಟೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಿದರು. ಆರೋಪಿ ಜ್ಞಾನೇಶ್ವರನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರು ಆತನಿಗೆ ಪ್ರಥಮ ಚಿಕಿತ್ಸೆ ನೀಡಿಸಿದ್ದಾರೆ. ಇದನ್ನೂ ಓದಿ: ಪ್ರಿಯಕರನ ಪತ್ನಿ, ಮಗುವಿಗೆ ಆ್ಯಸಿಡ್ ಎರೆಚಿದ ಮಹಿಳೆ

    ಈ ಮಧ್ಯೆ ತಪಸ್ವಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಮೃತಪಟ್ಟಿದ್ದಾಳೆ. ಘಟನೆಗೆ ಸಂಬಂಧಿಸಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಜ್ಞಾನೇಶ್ವರನನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಕರ್ನಾಟಕ ಚುನಾವಣೆಗೆ ಹಿಂದುತ್ವ, ದೇಶಾಭಿಮಾನವೇ ಬಿಜೆಪಿ ತಂತ್ರ- ಸಚಿವರಿಗೆ ಹೈಕಮಾಂಡ್ ಟಾಸ್ಕ್ ಡೆಡ್ ಲೈನ್

    Live Tv
    [brid partner=56869869 player=32851 video=960834 autoplay=true]

  • ಗೆಳತಿಗೆ ಹತ್ತಿರವಾಗಿದ್ದ ಹುಡುಗನ ವಿರುದ್ಧ ಸೇಡು – ಮೋದಿಗೆ ಬೆದರಿಕೆ ಹಾಕಿದ್ದ ಟೆಕ್ಕಿ ಅರೆಸ್ಟ್

    ಗೆಳತಿಗೆ ಹತ್ತಿರವಾಗಿದ್ದ ಹುಡುಗನ ವಿರುದ್ಧ ಸೇಡು – ಮೋದಿಗೆ ಬೆದರಿಕೆ ಹಾಕಿದ್ದ ಟೆಕ್ಕಿ ಅರೆಸ್ಟ್

    ಗಾಂಧೀನಗರ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬೆದರಿಕೆ ಇಮೇಲ್ ಕಳುಹಿಸಿದ್ದ ಆರೋಪದ ಮೇರೆಗೆ ಉತ್ತರ ಪ್ರದೇಶದ ಬದೌನ್‍ನ ಯುವಕನನ್ನು ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಬಂಧಿಸಿದೆ.

    ಬದೌನ್‍ನ ಆದರ್ಶನಗರದ ನಿವಾಸಿ ಅಮನ್ ಸಕ್ಸೇನಾ (25) ಬಂಧಿತ ಆರೋಪಿ. ಈತ ಸೋಮವಾರ ಜಾಮ್‍ನಗರದಲ್ಲಿ ನಡೆದ ರ್ಯಾಲಿಯಲ್ಲಿ ಮೋದಿ ಅವರಿಗೆ ಜೀವ ಬೆದರಿಕೆಯ ಇಮೇಲ್ ಕಳುಹಿಸಿದ್ದ. ಸಕ್ಸೇನಾ ಮುಂಬೈನ ಐಐಟಿಯಲ್ಲಿ ಬಿಟೆಕ್ ಪದವಿ ಪಡೆದಿದ್ದು, ಪ್ರೀತಿಸಿದ್ದ ಹುಡುಗಿಗೆ (Girl Friend) ಹತ್ತಿರವಾಗಿದ್ದ ವ್ಯಕ್ತಿಯಿಂದ ಸೇಡು ತೀರಿಸಿಕೊಳ್ಳಲು ಆ ಇಮೇಲ್ (E Mail) ಕಳುಹಿಸಿದ್ದನು.

    ಘಟನೆಯೇನು?: ಪ್ರಧಾನಿ ನರೇಂದ್ರ ಮೋದಿ ಅವರ ಇಮೇಲ್‍ಗೆ ಬಂದಿದ್ದ ಜೀವ ಬೆದರಿಕೆ ಮೇಲ್ ಬಂದಿದ್ದನ್ನು ನೋಡಿದ್ದ ಪಿಎಂಒ (ಪ್ರಧಾನಿ ಕಚೇರಿ) ಘಟನೆಗೆ ಸಂಬಂಧಿಸಿ ತನಿಖೆ ನಡೆಸಲು ಗುಜರಾತ್ ಎಟಿಎಸ್‍ಗೆ ವಹಿಸಿತ್ತು. ಈ ಹಿನ್ನೆಲೆಯಲ್ಲಿ ಎಟಿಎಸ್ ವಿಚಾರಣೆಯನ್ನು ಪ್ರಾರಂಭಿಸಿತ್ತು. ಈ ವೇಳೆ ಬದೌನ್‍ನ ಆದರ್ಶನಗರದ ನಿವಾಸಿಯಿಂದ ಈ ಮೇಲ್ ಬಂದಿದೆ ಎಂದು ಪತ್ತೆ ಹಚ್ಚಿದ್ದಾರೆ. ಅದಾದ ಬಳಿಕ ತನಿಖೆಯನ್ನು ಮುಂದುವರಿಸಿದ ಎಟಿಎಸ್ ತಂಡ ಅಮನ್ ಸಕ್ಸೇನಾನನ್ನು ವಶಕ್ಕೆ ಪಡೆದಿದ್ದಾರೆ. ಲಕ್ಷ್ಮೀ ಹೆಬ್ಬಾಳ್ಕರ್ ಕ್ಷೇತ್ರದಲ್ಲಿ ರಮೇಶ್ ಜಾರಕಿಹೊಳಿ ಫುಲ್ ಆಕ್ಟೀವ್

    ಈ ವೇಳೆ ಎಟಿಎಸ್ ಅಮನ್ ಸಕ್ಸೇನಾನನ್ನು ತೀವ್ರವಾಗಿ ವಿಚಾರಣೆ ನಡೆಸಿದೆ. ಈ ವೇಳೆ ಅಮನ್ ಸಕ್ಸೇನಾ ಮಾತನಾಡಿ, ತಾನು ಪ್ರೀತಿಸಿದ್ದ ಹುಡುಗಿಗೆ ಮತ್ತೊಬ್ಬ ಹುಡುಗ ಹತ್ತಿರವಾಗಿದ್ದ. ಇದರಿಂದಾಗಿ ಅವನ ವಿರುದ್ಧ ಸೇಡು ತೀರಿಸಿಕೊಳ್ಳಲು ಆತನ ಹೆಸರಲ್ಲಿ ಪ್ರಧಾನಿ ಮೋದಿ ಅವರಿಗೆ ಜೀವ ಬೆದರಿಕೆಯ ಮೇಲ್ ಅನ್ನು ಕಳುಹಿಸಿರುವುದಾಗಿ ಬಹಿರಂಗ ಪಡಿಸಿದ್ದಾನೆ. ಈ ಮೂಲಕ ಹುಡುಗಿಗೆ ಹತ್ತಿರವಾಗಿದ್ದ ವ್ಯಕ್ತಿಯನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಲು ಪ್ರಯತ್ನಿಸಿದ್ದ ಎಂಬುದು ಬೆಳಕಿಗೆ ಬಂದಿದೆ. ಕರ್ನಾಟಕದ ಒಂದಿಂಚೂ ಜಾಗ ಮಹಾರಾಷ್ಟ್ರಕ್ಕೆ ಹೋಗೋದಿಲ್ಲ: ಜೋಶಿ

    Live Tv
    [brid partner=56869869 player=32851 video=960834 autoplay=true]

  • ಗೆಳತಿಯನ್ನು ಮೆಚ್ಚಿಸಲು ಕಾರ್ ಕದ್ದು ಪೊಲೀಸರಿಗೆ ಸಿಕ್ಕಿಬಿದ್ದ

    ಗೆಳತಿಯನ್ನು ಮೆಚ್ಚಿಸಲು ಕಾರ್ ಕದ್ದು ಪೊಲೀಸರಿಗೆ ಸಿಕ್ಕಿಬಿದ್ದ

    ಮುಂಬೈ: ಗೆಳತಿಯನ್ನು (GirlFriend) ಮೆಚ್ಚಿಸಲು ಯುವಕನೊಬ್ಬ ಐಷಾರಾಮಿ ಕಾರನ್ನು (Luxury Car) ಕದ್ದು ಪೊಲೀಸರಿಗೆ (Police) ಸೆರೆ ಸಿಕ್ಕ ಘಟನೆ ಮಹಾರಾಷ್ಟ್ರದ (Maharashtra) ಪುಣೆಯಲ್ಲಿ ನಡೆದಿದೆ.

    ಆರೋಪಿಯನ್ನು ವಿಮಾನನಗರ ನಿವಾಸಿ ಇಶಾಂತ್ ಶರ್ಮಾ (25) ಎಂದು ಗುರುತಿಸಲಾಗಿದೆ. ನದೀಮ್ ಶೇಖ್ ಎಂಬಾತ ಐಷಾರಾಮಿ ಕಾರುಗಳ ಮಾರಾಟ ಮಾಡುತ್ತಿದ್ದ. ಈ ಹಿನ್ನೆಲೆಯಲ್ಲಿ ನದೀಮ್ ಶೇಖ್ ಅತ್ಯಾಧುನಿಕ ಕಾರುಗಳನ್ನು ಮಾರಾಟ ಮಾಡುವ ಜಾಹಿರಾತನ್ನು ಪೋಸ್ಟ್ ಮಾಡಿದ್ದ. ಈ ಜಾಹಿರಾತನ್ನು ನೋಡಿದ್ದ ಇಶಾಂತ್, ನದೀಮ್ ಶೇಖ್‌ನನ್ನು ಸಂಪರ್ಕಿಸಿ ಕಾರನ್ನು ಖರೀದಿಸುವುದಾಗಿ ತಿಳಿಸಿದ್ದಾನೆ.

    ಅಷ್ಟೇ ಅಲ್ಲದೇ ನದೀಮ್ ಶೇಖ್‌ನ ಶೋರೂಮ್‌ಗೆ ಭೇಟಿ ನೀಡಿದ್ದ ಇಶಾಂತ್ 2.80 ಲಕ್ಷ ರೂ.ಗೆ ಕಾರನ್ನು ಖರೀದಿಸುವುದಾಗಿ ಒಪ್ಪಂದ ಮಾಡಿಕೊಂಡಿದ್ದಾನೆ. ಅಷ್ಟೇ ಅಲ್ಲದೇ ತನ್ನ ತಾಯಿಯ ಜನ್ಮದಿನವಿದೆ. ಇದರಿಂದಾಗಿ ಕಾರನ್ನು ಉಡುಗೊರೆಯಾಗಿ ನೀಡುತ್ತೇನೆ ಎಂದು ತಿಳಿಸಿದ್ದಾನೆ.

    ಅದಾದ ಮರುದಿನ ತನ್ನ ತಾಯಿ ಹಾಗೂ ಗೆಳತಿಗೆ ತೋರಿಸಲು ಕಾರನ್ನು ಎರವಲು ಪಡೆದಿದ್ದಾನೆ. ಇಶಾಂತ್ ಶರ್ಮಾ ಜೊತೆ ನದೀಮ್ ಶೇಖ್ ಕೂಡ ಕಾರಿನಲ್ಲಿ ಹೋಗಿದ್ದ. ಆದರೆ ಸಾವಿತ್ರಿಬಾಯಿ ಫುಲೆ ಪುಣೆ ವಿಶ್ವವಿದ್ಯಾನಿಲಯದ ಗೇಟ್‌ನಲ್ಲಿ ನದೀಮ್ ಶೇಖ್‌ನ ಬಳಿ ಇಶಾಂತ್ ಶರ್ಮಾ ಹೊರಗಿನವರನ್ನು ಬಿಡುವುದಿಲ್ಲ ಎಂದು ಹೇಳಿ ಕೆಳಗಿಳಿಸಿದ್ದಾನೆ. ಅದಾದ ಬಳಿಕ ಇಶಾಂತ್ ಅಲ್ಲಿಂದ ಕಾರಿನೊಂದಿಗೆ ಪರಾರಿಯಾಗಿದ್ದಾನೆ. ಇದನ್ನೂ ಓದಿ: ಡಿಸೆಂಬರ್‌ನಲ್ಲಿ ಅಸ್ಪೃಶ್ಯತೆ ನಿವಾರಣೆಯ ಜಾಗೃತಿ ಸಮಾವೇಶ – ಏನಿದು ವಿನಯ ಸಾಮರಸ್ಯ ಯೋಜನೆ

    ಘಟನೆಗೆ ಸಂಬಂಧಿಸಿ ನದೀಮ್ ಶೇಖ್ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ನಾನಾ ಪೇಠ್ ಪ್ರದೇಶದಲ್ಲಿ ಇಶಾಂತ್ ಶರ್ಮಾನನ್ನು ಬಂಧಿಸಲಾಗಿದೆ. ಇದನ್ನೂ ಓದಿ: ಗುಜರಾತ್ ವಿಧಾನಸಭೆ ಚುನಾವಣೆ – ಎಸ್‍ಸಿ, ಎಸ್‍ಟಿ ಮತ ಸೆಳೆಯಲು ಬಿಜೆಪಿ ತಂತ್ರ

    Live Tv
    [brid partner=56869869 player=32851 video=960834 autoplay=true]

  • ಗೆಳತಿ ಹತ್ಯೆಗೈದಿದ್ದ ವ್ಯಕ್ತಿ ಕೋರ್ಟ್‌ ಮಹಡಿ ಮೇಲಿಂದ ಜಿಗಿದು ಸಾವು

    ಗೆಳತಿ ಹತ್ಯೆಗೈದಿದ್ದ ವ್ಯಕ್ತಿ ಕೋರ್ಟ್‌ ಮಹಡಿ ಮೇಲಿಂದ ಜಿಗಿದು ಸಾವು

    ಚಂಡೀಗಢ: ಗೆಳತಿಯನ್ನು ಹತ್ಯೆಗೈದಿದ್ದ ಆರೋಪಿ, ಫರಿದಾಬಾದ್ ಕೋರ್ಟ್ ಸಂಕೀರ್ಣದ ಆರನೇ ಮಹಡಿಯಿಂದ ಜಿಗಿದು ಸಾವಿಗೀಡಾಗಿರುವ ಘಟನೆ ಹರಿಯಾಣದಲ್ಲಿ (Haryana) ನಡೆದಿದೆ.

    ಮೃತರನ್ನು ಮಹೇಂದರ್ (24) ಎಂದು ಗುರುತಿಸಲಾಗಿದೆ. ಇನ್ನೊಬ್ಬ ವ್ಯಕ್ತಿಯೊಂದಿಗೆ ಕರೆ ಮಾಡಿ ಮಾತನಾಡುತ್ತಿದ್ದಳು ಎಂಬ ಶಂಕೆಯಿಂದ ಮಹೇಂದರ್ ಆಕೆಯನ್ನು ಕೊಂದಿದ್ದಾನೆ. ಬುಧವಾರ ಆಕೆಯನ್ನು ಥಳಿಸಿ ರಾತ್ರಿ ರಸ್ತೆ ಬದಿ ಬಿಟ್ಟು ಹೋಗಿದ್ದಾನೆ. ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಸಂಜೆ ಮೃತಪಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಜೊತೆ ಹೆಜ್ಜೆ ಹಾಕಿದ ಆದಿತ್ಯ ಠಾಕ್ರೆ

    Law

    ಸಾಯುವ ಮೊದಲು ರೋಹಿಣಿ ತನ್ನ ಸಹೋದರನಿಗೆ ಮಹೇಂದರ್‌ ಹಲ್ಲೆ ನಡೆಸಿರುವ ಬಗ್ಗೆ ಹೇಳಿದ್ದರು. ನಂತರ ಮುಜೆಸರ್‌ ಪೊಲೀಸ್‌ ಠಾಣೆಯಲ್ಲಿ ಘಟನೆಗೆ ಸಂಬಂಧಿಸಿದಂತೆ ದೂರು ದಾಖಲಿಸಲಾಗಿತ್ತು.

    ಆರೋಪಿಯು ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಮೃತಳ ಒಡೆದ ಫೋನ್ ಅನ್ನು ಅವನಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಮುಜೆಸರ್ ಪೊಲೀಸ್ ಠಾಣೆಯ ಎಸ್‌ಎಚ್‌ಒ ಇನ್ಸ್‌ಪೆಕ್ಟರ್ ಕಬೂಲ್ ಸಿಂಗ್ ಹೇಳಿದ್ದಾರೆ. ಇದನ್ನೂ ಓದಿ: ಮದುವೆಯಾಗ್ಬೇಕು, ಮಳೆಯಿಂದ ನೀರುತುಂಬಿದ ದೇವಸ್ಥಾನ ಕ್ಲೀನ್ ಮಾಡಿಸಿ – ವಧು, ವರರ ಮನವಿ

    ಶುಕ್ರವಾರ ಮಹೇಂದರ್‌ನನ್ನು ಫರಿದಾಬಾದ್‌ ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು. ಈ ವೇಳೆ ಆತ ಆರನೇ ಮಹಡಿಯಿಂದ ಜಿಗಿದಿದ್ದಾನೆ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅಷ್ಟೊತ್ತಿಗಾಗಲೇ ಆತ ಮೃತಪಟ್ಟಿದ್ದಾನೆ.

    Live Tv
    [brid partner=56869869 player=32851 video=960834 autoplay=true]