Tag: ಗೆಣಸು

  • ಮುಂಬೈ ಸ್ಟ್ರೀಟ್ ಸೈಡ್ ಸ್ಟೈಲ್‌ನಲ್ಲಿ ಗೆಣಸು ಮನೆಯಲ್ಲೇ ಮಾಡಿ

    ಮುಂಬೈ ಸ್ಟ್ರೀಟ್ ಸೈಡ್ ಸ್ಟೈಲ್‌ನಲ್ಲಿ ಗೆಣಸು ಮನೆಯಲ್ಲೇ ಮಾಡಿ

    ಮುಂಬೈ ರಸ್ತೆ ಬದಿಯಲ್ಲಿ ಈ ಸ್ವೀಟ್ ಪೊಟೆಟೋ ರೆಸಿಪಿ ತುಂಬಾ ಫೇಮಸ್. ಮಕ್ಕಳು, ಹಿರಿಯರು ಶಾಲೆ ಅಥವಾ ಆಫೀಸ್‌ನಿಂದ ಮನೆಗೆ ಹಿಂತಿರುಗೋ ಹೊತ್ತಲ್ಲಿ ಸಂಜೆ ವೇಳೆ ಯಾವಾಗಲೂ ಸವಿಯಲು ಬಯಸುತ್ತಾರೆ. ಮುಂಬೈ ಸ್ಟ್ರೀಟ್ ಸೈಡ್ ಸ್ಟೈಲ್‌ನ ಗೆಣಸಿನ ರೆಸಿಪಿ ಮಾಡೋದು ಕಷ್ಟ ಏನಿಲ್ಲ. ಇದನ್ನು ಬಿಸಿಬಿಸಿಯಾಗಿ ಸವಿದರೆ ಮಾತ್ರವೇ ಸಖತ್ ರುಚಿ ಎನಿಸುತ್ತದೆ. ಮುಂಬೈ ಸ್ಟ್ರೀಟ್ ಸೈಡ್ ಸ್ಟೈಲ್‌ನಲ್ಲಿ ಗೆಣಸು ಮನೆಯಲ್ಲೇ ಹೇಗೆ ಮಾಡೋದು ಎಂಬುದನ್ನು ನೋಡೋಣ.

    ಬೇಕಾಗುವ ಪದಾರ್ಥಗಳು:
    ಗೆಣಸು – 2 (ಮಧ್ಯಮ ಗಾತ್ರದ್ದು)
    ಮೆಣಸಿನ ಪುಡಿ – ಅರ್ಧ ಟೀಸ್ಪೂನ್
    ಕಪ್ಪು ಉಪ್ಪು – ಅರ್ಧ ಟೀಸ್ಪೂನ್
    ಜೀರಿಗೆ ಪುಡಿ – ಅರ್ಧ ಟೀಸ್ಪೂನ್
    ನಿಂಬೆ ರಸ – 1 ಟೀಸ್ಪೂನ್ ಇದನ್ನೂ ಓದಿ: ಹೀಗೆ ಮಾಡಿ ಸಿಂಪಲ್ ಪೀನಟ್ ಬಟರ್‌ನ ಮಿಠಾಯಿ

    ಮಾಡುವ ವಿಧಾನ:
    * ಮೊದಲಿಗೆ ಗೆಣಸನ್ನು ಬೇಯಿಸಿಕೊಂಡು, ಅದರ ಸಿಪ್ಪೆ ಸುಲಿದು ಬಳಿಕ ಮಧ್ಯಮ ಗಾತ್ರದ ಘನಾಕಾರದ ತುಂಡುಗಳಾಗಿ ಕತ್ತರಿಸಿ.
    * ಒಂದು ಪ್ಲೇಟ್‌ಗೆ ಕತ್ತರಿಸಿದ ಗೆಣಸನ್ನು ಹಾಕಿ, ಅದರ ಮೇಲೆ ಮೆಣಸಿನ ಪುಡಿ, ಕಪ್ಪು ಉಪ್ಪು, ಜೀರಿಗೆ ಪುಡಿ ಹಾಗೂ ನಿಂಬೆ ರಸವನ್ನು ಚಿಮುಕಿಸಿ.
    * ಇದೀಗ ಮುಂಬೈ ಸ್ಟ್ರೀಟ್ ಸೈಡ್ ಸ್ಟೈಲ್‌ನ ಗೆಣಸು ತಯಾರಾಗಿದ್ದು, ಇದನ್ನು ಬಿಸಿ ಬಿಸಿಯಾಗಿ ಸವಿಯಿರಿ. ಇದನ್ನೂ ಓದಿ: ರುಚಿರುಚಿಯಾಗಿ ಮಾಡಿ ಚಿಲ್ಲಿ ಗಾರ್ಲಿಕ್ ಪರೋಟ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]