Tag: ಗೃಹ ಸಾಲ

  • ಮತ್ತೆ ಬಂದಿದೆ ‘ನಮ್ಮ ಮನೆ’ ಎಕ್ಸ್ ಪೋ-ಒಂದೇ ಸೂರಿನಡಿ ವಿಲ್ಲಾ, ಮನೆಗಳ ಮಾಹಿತಿ

    ಮತ್ತೆ ಬಂದಿದೆ ‘ನಮ್ಮ ಮನೆ’ ಎಕ್ಸ್ ಪೋ-ಒಂದೇ ಸೂರಿನಡಿ ವಿಲ್ಲಾ, ಮನೆಗಳ ಮಾಹಿತಿ

    -‘ನಮ್ಮ ಮನೆ’ ಹಬ್ಬಕ್ಕೆ ಪ್ರವೇಶ ಉಚಿತ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಒಂದು ಸೈಟ್ ತಗೆದುಕೊಳ್ಳಬೇಕು. ಒಂದು ಒಳ್ಳೆಯ ಮನೆ ಕಟ್ಟಿಸಬೇಕು ಅನ್ನೋದು ಎಲ್ಲರ ಕನಸು. ಈಗ ನಿಮ್ಮ ಕನಸನ್ನ ನನಸು ಮಾಡೋಕೆ ಪಬ್ಲಿಕ್ ಟಿವಿ ವೇದಿಕೆ ಕಲ್ಪಿಸಿದೆ. ಪಬ್ಲಿಕ್ ಟಿವಿ ಪ್ರಸ್ತುತ ಪಡಿಸುವ ಎಂಕೆಬಿ ಡೆವಲಪರ್ಸ್ ನಮ್ಮ ಮನೆ ಎಕ್ಸ್ ಪೋ ಮತ್ತೆ ಬಂದಿದೆ.

    ಮನೆ ಕೊಳ್ಳುವವರಿಗೆ, ಸೈಟ್ ಖರೀದಿ ಮಾಡೋರಿಗೆ ಇದು ಸುವರ್ಣಾವಕಾಶ. ಕಾರಣ ಎಲ್ಲವೂ ಒಂದೇ ಸೂರಿನಡಿ ಸಿಗೋ ನಮ್ಮ ಮನೆ ಎಕ್ಸ್ ಪೋ ಮತ್ತೆ ಬಂದಿದೆ. ಪಬ್ಲಿಕ್ ಟಿವಿ ಪ್ರಸ್ತುತ ಪಡಿಸುತ್ತಿರುವ ಎಂಕೆಬಿ ಡೆವಲಪರ್ಸ್ ‘ನಮ್ಮ ಮನೆ’ ಎಕ್ಸ್ ಪೋ ಮೊದಲ ಆವೃತ್ತಿ ಸಾವಿರಾರು ಮಂದಿಗೆ ಸೂರು ಕಲ್ಪಿಸಿತ್ತು. ಈಗ ನಮ್ಮ ಮನೆ ಎಕ್ಸ್ ಪೋ ಮತ್ತೆ ಬಂದಿದೆ. ಇಂದು ಮತ್ತು ನಾಳೆ ಮಲ್ಲೇಶ್ವರಂನ ಕೆಸಿ ಜನರಲ್ ಆಸ್ಪತ್ರೆ ಮುಂಭಾಗದ ಸರ್ಕಾರಿ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ನಮ್ಮ ಮನೆ ಎಕ್ಸ್ ಪೋ ಕಾರ್ಯಕ್ರಮ ನಡೆಯಲಿದೆ.

    ಎರಡನೇ ಆವೃತ್ತಿಯ ನಮ್ಮ ಮನೆ ಎಕ್ಸ್ ಪೋಗೆ ಭರ್ಜರಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಹಾಗಂತ ಎಕ್ಸ್ ಪೋಗೆ ಹೋಗಲು ಎಂಟ್ರಿ ಫೀಸ್ ಕೊಡಬೇಕು ಅನ್ನೋ ಟೆನ್ಶನ್ ಬೇಡ. ಇಂದಿನಿಂದ ಎರಡು ದಿನಗಳ ಕಾಲ ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆವರೆಗೂ ನಡೆಯಲಿರುವ ಈ ಕಾರ್ಯಕ್ರಮಕ್ಕೆ ಉಚಿತ ಪ್ರವೇಶ ಕಲ್ಪಿಸಲಾಗಿದೆ.

    ನಮ್ಮ ಮನೆ ಎಕ್ಸ್ ಪೋ ವಿಶೇಷತೆ
    * ಒಂದೇ ಸೂರಿನಡಿ 40ಕ್ಕೂ ಹೆಚ್ಚು ಪ್ರಸಿದ್ಧ ಡೆವಲಪರ್ಸ್, ಬಿಲ್ಡರ್ಸ್
    * ಕೈಗೆಟುಕುವ ದರದಲ್ಲಿ ಸೈಟ್, ಫ್ಲ್ಯಾಟ್, ಮನೆ, ವಿಲ್ಲಾ ಪ್ರದರ್ಶನ
    * ಬೆಂಗಳೂರು ಮಾತ್ರವಲ್ಲ ರಾಜ್ಯದ ಇತರೆಡೆಯ ‘ನಮ್ಮ ಮನೆ’ ಮಾಹಿತಿ
    * ಬಿಡಿಎ, ಬಿಎಂಆರ್‍ಡಿಎ ಅನುಮೋದಿಸಲ್ಪಟ್ಟ ಫ್ಲ್ಯಾಟ್ ಬಗ್ಗೆ ಮಾಹಿತಿ
    * ಎಕ್ಸ್ ಪೋಗೆ ಬಂದವರಿಗೆ ಸೈಟ್, ಫ್ಲ್ಯಾಟ್ ವೀಕ್ಷಣೆಗೆ ಉಚಿತ ಅವಕಾಶ
    * ಸ್ಥಳದಲ್ಲೇ ಬ್ಯಾಂಕ್‍ಗಳಿಂದ ಸಾಲ ಸೌಲಭ್ಯ
    * ಹೊಸ ಯೋಜನೆಗಳಿಗೆ ದಸರಾ ಹಬ್ಬದ ವಿಶೇಷ ಕೊಡುಗೆ
    * ನೋಂದಾಯಿಸಲ್ಪಟ್ಟ ಗ್ರಾಹಕರಿಗೆ ಪ್ರತಿ ಅರ್ಧ ಗಂಟೆಗೆ ಲಕ್ಕಿ ಡಿಪ್
    * ಲಕ್ಕಿ ಡಿಪ್‍ನಲ್ಲಿ ಆಯ್ಕೆಯಾದವರಿಗೆ ಎಂಕೆಬಿ ಡೆವಲ್ಲಪರ್ಸ್‍ನಿಂದ ಬೆಳ್ಳಿ ನಾಣ್ಯ ಗಿಫ್ಟ್

    ಒಟ್ಟಿನಲ್ಲಿ ಮನೆ ಕೊಳ್ಳುವವರಿಗೆ ಇದು ಸುವರ್ಣಾವಕಾಶ. ಎಲ್ಲವೂ ಒಂದೇ ಕಡೆ ಮಾಹಿತಿ ಸಿಗಲಿದ್ದು ಸಾಲಕ್ಕಾಗಿ ಬೇರೆಡೆ ಅಲೆದಾಡಬೇಕೆನ್ನುವ ಸಮಸ್ಯೆ ಬೇಡ. ಯಾಕಂದ್ರೆ ಸಾಲ ಸೌಲಭ್ಯನೂ ಇಲ್ಲೇ ಸಿಗಲಿದೆ. ಅಲ್ಲದೇ ಎಕ್ಸ್ ಪೋದಲ್ಲಿ ನೋಂದಾಯಿಸಲ್ಪಟ್ಟ ಗ್ರಾಹಕರು ಗಿಫ್ಟ್ ಕೂಡ ತಮ್ಮದಾಗಿಸಿಕೊಳ್ಳಬಹುದು. ಪಬ್ಲಿಕ್ ಟಿವಿ ಪ್ರಸ್ತುತ ಪಡಿಸುತ್ತಿರುವ ಎಂಕೆಬಿ ಡೆವಲಪರ್ಸ್ ‘ನಮ್ಮ ಮನೆ ಎಕ್ಸ್ ಪೋಗೆ ಬನ್ನಿ.

    ನಮ್ಮ ಎಕ್ಸ್ ಪೋ ನಡೆಯುವ ವಿಳಾಸ:
    ಮಲ್ಲೇಶ್ವರಂ ಸರ್ಕಾರಿ ಶಾಲೆಯ ಆಟದ ಮೈದಾನ,
    ಕೆಸಿ ಜನರಲ್ ಆಸ್ಪತ್ರೆ ಮುಂಭಾಗ,
    ಬೆಂಗಳೂರು.

  • ಗುಡ್‍ನ್ಯೂಸ್, ಸಾಲದ ಮೇಲಿನ ಬಡ್ಡಿ ದರ ಇಳಿಕೆ

    ಗುಡ್‍ನ್ಯೂಸ್, ಸಾಲದ ಮೇಲಿನ ಬಡ್ಡಿ ದರ ಇಳಿಕೆ

    – ಎಲ್ಲ ಅವಧಿಯ ಎಂಸಿಎಲ್‍ಆರ್ ದರ ಕಡಿತ
    – ಸೆ.10 ರಿಂದ ಎಲ್ಲ ದರ ಅನ್ವಯ

    ನವದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‍ಬಿಐ) ಸಾಲ ಪಡೆದ ಗ್ರಾಹಕರಿಗೆ ಗುಡ್ ನ್ಯೂಸ್ ನೀಡಿದೆ. ಎಸ್‍ಬಿಐ ಎಲ್ಲ ಅವಧಿಯ ಸಾಲದ ಮೇಲಿನ ಮಾರ್ಜಿನಲ್ ಕಾಸ್ಟ್ ಆಫ್ ಲ್ಯಾಂಡಿಂಗ್ ರೇಟ್ (ಎಂಸಿಎಲ್‍ಆರ್) 10 ಬೇಸಿಸ್ ಪಾಯಿಂಟ್ (ಬಿಪಿಎಸ್) ಕಡಿತಗೊಳಿಸಿದ್ದು, ಹೊಸ ಬಡ್ಡಿ ದರಗಳು ಸೆಪ್ಟೆಂಬರ್ 10ರಿಂದ ಅನ್ವಯವಾಗಲಿದೆ. (1 ಬೇಸಿಸ್ ಪಾಯಿಂಟ್=0.01%)

    ಬಿಪಿಎಸ್ ಕಡಿತಗೊಂಡ ಪರಿಣಾಮ ಒಂದು ವರ್ಷದ ಅವಧಿಯ ಎಂಸಿಎಲ್‍ಆರ್ 8.25% ರಿಂದ 8.15% ಕ್ಕೆ ಇಳಿಕೆಯಾಗಲಿದೆ. 2019-20ರ ಅರ್ಥಿಕ ವರ್ಷದಲ್ಲಿ ಎಸ್‍ಬಿಐ ಐದನೇ ಬಾರಿ ಎಂಸಿಎಲ್‍ಆರ್ ಕಡಿತಗೊಳಿಸಿದೆ. ಆಗಸ್ಟ್ ನಲ್ಲಿ ಆರ್ ಬಿಐ ಹಣಕಾಸಿನ ನೀತಿಯ ವಿಮರ್ಶೆ ಬಳಿಕ ಬ್ಯಾಂಕುಗಳ ಎಂಸಿಎಲ್‍ಆರ್ ಎರಡನೇ ಬಾರಿ ಕಡಿತಗೊಳಿಸಿತ್ತು. ಹಣಕಾಸಿನ ನೀತಿಯ ವಿಮರ್ಶೆ ಬಳಿಕ ಆರ್ ಬಿಐ 15 ಬೇಸಿಸ್ ಪಾಯಿಂಟ್ ಗಳನ್ನು ಕಡಿತಗೊಳಿಸಿದಾಗ, ಹೊಸ ನಿಯಮ ಆಗಸ್ಟ್ 10ರಿಂದ ಅನ್ವಯವಾಗಿತ್ತು. ಈಗ ಸೆಪ್ಟೆಂಬರ್ ನಲ್ಲಿ 10 ಬೇಸಿಸ್ ಪಾಯಿಂಟ್ ಕಡಿತಗೊಳಿಸಿದೆ.

    ಕೇವಲ ಎಸ್‍ಬಿಐ ಅಲ್ಲದೇ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಎಕ್ಸಿಸ್ ಬ್ಯಾಂಕ್, ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್, ಐಡಿಬಿಐ ಮತ್ತು ಐಡಿಎಫ್‍ಸಿ ಬ್ಯಾಂಕುಗಳು ಸಹ ಎಂಸಿಎಲ್‍ಅರ್ ಕಡಿತಗೊಳಿಸಿವೆ.

    ಪ್ರಸ್ತುತ ಆರ್ಥಿಕ ವರ್ಷದಲ್ಲಿ ಆರ್ ಬಿಐ ರಿಪೋ ದರದಲ್ಲಿ 110 ಬೇಸಿಸ್ ಪಾಯಿಂಟ್ ಅಂದ್ರೆ 1.10% ರಷ್ಟು ಕಡಿತ ಮಾಡಿದೆ. ಆದರೆ ಬ್ಯಾಂಕುಗಳು ಇದರ ಸಂಪೂರ್ಣ ಲಾಭವನ್ನು ಗ್ರಾಹಕರಿಗೆ ತಲುಪಿಸಿರಲಿಲ್ಲ. ಸತತವಾಗಿ ಕೇಂದ್ರ ಬ್ಯಾಂಕ್ ಎಲ್ಲ ರಿಪೋ ದರ ಕಡಿತಗೊಳಿಸುತ್ತಾ ಬಂದ ಹಿನ್ನೆಲೆಯಲ್ಲಿ ಅಕ್ಟೋಬರ್ 1ರಿಂದಲೇ ಹೊಸ ಮಾನದಂಡಗಳನ್ನು ಬ್ಯಾಂಕುಗಳು ಅಳವಡಿಸಿಕೊಳ್ಳಬೇಕೆಂದು ನಿರ್ದೇಶನ ನೀಡಿತ್ತು.

    ಎಂಸಿಎಲ್‍ಆರ್ ಕಡಿತದಿಂದಾಗಿ ಸಾಲದ ಮೇಲಿನ ಬಡ್ಡಿ ದರ ಇಳಿಕೆಯಾಗಲಿದೆ. ಮತ್ತೊಂದು ಕಡೆ ನಿಶ್ಚಿಯ ಠೇವಣಿ (ಫಿಕ್ಸಡ್ ಡೆಪಾಸಿಟ್) ಮೇಲಿನ ಬಡ್ಡಿ ಇಳಿಕೆಯಾಗಲಿದೆ. ಎಲ್ಲ ಅವಧಿಯ ನಿಶ್ಚಿತ ಠೇವಣಿಗಳ ಮೇಲಿನ ಮೊತ್ತದ ಮೇಲೆ 20-25 ಬೇಸಿಸ್ ಪಾಯಿಂಟ್ ಕಡಿತಗೊಳಿಸುವಂತೆ ಆದೇಶಿಸಲಾಗಿದೆ. ಬಲ್ಕ್ ಡೆಪಾಸಿಟ್ ಮೇಲಿನ ದರವನ್ನು 10-20 ಬಿಪಿಎಸ್ ಕಡಿತಗೊಳಿಸಲಾಗಿದೆ. ಎಲ್ಲ ಹೊಸ ಬಡ್ಡಿ ದರಗಳು ಸೆಪ್ಟೆಂಬರ್ 10ರಿಂದ ಅನ್ವಯವಾಗಲಿವೆ.

  • ಸಾಲ ಪಾವತಿಸದ ವಾಟಾಳ್ – ಮನೆಗೆ ಎಂಟ್ರಿಕೊಟ್ಟು ಶಾಕ್ ಕೊಟ್ಟ ಬ್ಯಾಂಕ್ ಸಿಬ್ಬಂದಿ!

    ಸಾಲ ಪಾವತಿಸದ ವಾಟಾಳ್ – ಮನೆಗೆ ಎಂಟ್ರಿಕೊಟ್ಟು ಶಾಕ್ ಕೊಟ್ಟ ಬ್ಯಾಂಕ್ ಸಿಬ್ಬಂದಿ!

    ಬೆಂಗಳೂರು: ಮಾತೆತ್ತಿದ್ರೆ ಬಂದ್ ಬಂದ್ ಎನ್ನುವ ವಾಟಾಳ್ ನಾಗರಾಜ್‍ಗೆ ಇಂದು ಬ್ಯಾಂಕ್‍ನವರು ದಿಢೀರ್ ಶಾಕ್ ಕೊಟ್ಟಿದ್ದಾರೆ. ಕತ್ತೆ ಕುರಿ ಎಮ್ಮೆ ಜೊತೆ ಬೀದಿಗೆ ಬಂದು ಪ್ರತಿಭಟನೆ ನಡೆಸುವ ವಾಟಾಳ್ ಮನೆ ಮುಂದೆ ಮಧ್ಯಾಹ್ನ ಬ್ಯಾಕ್‍ನವರು ಬಂದಿದ್ದರು.

    ವಾಟಾಳ್ ವಿಜಯ ಬ್ಯಾಂಕಿನಿಂದ ಗೃಹ ಸಾಲವನ್ನು ಪಡೆದಿದ್ದರು. ಗೃಹ ಸಾಲದ 17 ಲಕ್ಷ ರೂ. ಹಣವನ್ನು ವಾಟಾಳ್ ಪಾವತಿಸಬೇಕಿತ್ತು. 2017ಕ್ಕೆ ಜುಲೈ ತಿಂಗಳಿಗೆ ಸಾಲ ಪಾವತಿಸಬೇಕಿತ್ತು. ಈ ಸಾಲದ ಹಣವನ್ನು ಪಾವತಿಸದ ಹಿನ್ನೆಲೆಯಲ್ಲಿ ಬ್ಯಾಂಕ್ ನೋಟಿಸ್ ನೀಡಿತ್ತು.

    ಮೂರು ನೋಟಿಸ್ ಕಳುಹಿಸಿದರೂ ವಾಟಾಳ್ ನಾಗರಾಜ್ ಅವರು ಉತ್ತರ ನೀಡಿರಲಿಲ್ಲ. ನೋಟಿಸ್ ಗೆ ಕ್ಯಾರೇ ಅನ್ನದ ವಾಟಾಳ್ ಮನೆಗೆ ಇಂದು ವಿಜಯ ಬ್ಯಾಂಕ್ ಸಿಬ್ಬಂದಿ ಲಾಯರ್ ಜೊತೆ ಆಗಮಿಸಿದ್ದರು.

    ಬ್ಯಾಂಕ್‍ನವರು ಬಂದಿರುವ ಸುದ್ದಿ ಕೇಳುತ್ತಿದ್ದಂತೆ ವಾಟಾಳ್ ಮನೆಗೆ ಆಗಮಿಸಿದ್ದಾರೆ. ಬ್ಯಾಂಕ್‍ನವರನ್ನು ಹೆಂಗೋ ಮಾತಾನಾಡಿ ಸಾಗ ಹಾಕಿದ್ದಾರೆ. ವಾಟಾಳ್ ಮನವಿಯ ಹಿನ್ನೆಲೆಯಲ್ಲಿ ಬ್ಯಾಂಕ್ ಸಿಬ್ಬಂದಿ ಸ್ಥಳದಿಂದ ತೆರಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv