Tag: ಗೃಹ ಲಕ್ಷ್ಮಿ ಯೋಜನೆ

  • 3 ತಿಂಗಳಿಗೊಮ್ಮೆ ಗೃಹಲಕ್ಷ್ಮಿ ಹಣ ಕೊಡ್ತಿದ್ದೇವೆ, ಪ್ರತಿ ತಿಂಗಳು ಹಣ ಕೊಡೋಕೆ ತೊಡಕುಗಳಿವೆ: ಹೆಚ್.ಎಂ ರೇವಣ್ಣ

    3 ತಿಂಗಳಿಗೊಮ್ಮೆ ಗೃಹಲಕ್ಷ್ಮಿ ಹಣ ಕೊಡ್ತಿದ್ದೇವೆ, ಪ್ರತಿ ತಿಂಗಳು ಹಣ ಕೊಡೋಕೆ ತೊಡಕುಗಳಿವೆ: ಹೆಚ್.ಎಂ ರೇವಣ್ಣ

    ಮೈಸೂರು: ಪ್ರತಿ ತಿಂಗಳು ಹಣ ಕೊಡೋದಕ್ಕೆ ಕೆಲವು ತೊಡಕುಗಳಿವೆ. ಸದ್ಯ 3 ತಿಂಗಳಿಗೊಮ್ಮೆ ಗೃಹಲಕ್ಷ್ಮಿ ಹಣ ಕೊಡ್ತಿದ್ದೇವೆ ಗ್ಯಾರಂಟಿ ಯೋಜನೆ ಅಧ್ಯಕ್ಷ ಹೆಚ್.ಎಂ ರೇವಣ್ಣ (H M Revanna) ಹೇಳಿದ್ದಾರೆ.

    ಮೈಸೂರಿನಲ್ಲಿ (Mysuru) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೂರು ತಿಂಗಳಿಗೊಮ್ಮೆ ಗೃಹಲಕ್ಷ್ಮಿ (Gruhalakshmi) ಹಣ ಕೊಡುತ್ತಿದ್ದೇವೆ. ಜಿಎಸ್‌ಟಿ ವಿಚಾರದಲ್ಲಿ 1 ಲಕ್ಷ 20 ಸಾವಿರ ಜನರಿಗೆ ಹಣ ಹೋಗಿರಲಿಲ್ಲ. ಅದರಲ್ಲಿ ಈಗ 58 ಸಾವಿರ ಜನರ ಸಮಸ್ಯೆಯನ್ನ ಬಗೆಹರಿಸಿದ್ದೇವೆ. ಉಳಿದ ಜನರ ಸಮಸ್ಯೆ ಬಗೆ ಹರಿಸುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ಉಗ್ರರಿಗೆ ನೆರವು ನೀಡಿದ್ದ ಕೇಸ್‌ – ಎಎಸ್‌ಐ ಚಾಂದ್ ಪಾಷಾ ವಿರುದ್ಧ ಇಲಾಖೆ ಹಂತದ ತನಿಖೆಗೆ ಆದೇಶ

    ನಾವು ಅಧಿಕಾರಕ್ಕೆ ಬಂದಾಗಿನಿಂದ ಗೃಹಲಕ್ಷ್ಮಿ ಹಣ ನಿಲ್ಲಿಸಿಲ್ಲ. ಪ್ರತಿ ತಿಂಗಳು ಹಣ ಕೊಡೋದಕ್ಕೆ ಕೆಲವು ತೊಡಕುಗಳಿವೆ. ಹೀಗಾಗಿ ಕೊಡಲು ಆಗುತ್ತಿಲ್ಲ ಎನ್ನುವ ಮೂಲಕ ಪ್ರತಿ ತಿಂಗಳ ಗೃಹಲಕ್ಷ್ಮಿ ಹಣ ಕೊಡಲು ಆಗಲ್ಲ ಎಂದು ಪರೋಕ್ಷವಾಗಿ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಅನಾಮಧೇಯ ಭಕ್ತನಿಂದ ಶಿರಡಿ ಸನ್ನಿಧಿಗೆ 59 ಲಕ್ಷದ ಚಿನ್ನದ ಕಿರೀಟ ಸೇರಿ 65 ಲಕ್ಷ ಮೌಲ್ಯದ ಆಭರಣ ದಾನ

    ಸಿಎಂ ಬದಲಾವಣೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸಿಎಂ ಬದಲಾವಣೆ ವಿಚಾರ ಹೈಕಮಾಂಡ್ ಮಟ್ಟದಲ್ಲಿ ಈ ಚರ್ಚೆ ನಡೆದಿಲ್ಲ. ಕೆಲವೊಂದಿಷ್ಟು ಗೊಂದಲಗಳು ಇತ್ತು. ಗೊಂದಲಗಳನ್ನು ಹೈಕಮಾಂಡ್ ಬಗೆಹರಿಸಿದೆ. ಸಿಎಂ ಕುರ್ಚಿಯ ವಿಚಾರದಲ್ಲಿ ನಾವು ಮಾಧ್ಯಮಗಳ ಮುಂದೆ ಮಾತನಾಡದಂತೆ ಸೂಚನೆ ನೀಡಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಸರ್ಕಾರಿ ಶಾಲಾ ಮಕ್ಕಳಿಗೆ ಬಸ್‌ ಫ್ರೀ – ರಾಜ್ಯ ಸರ್ಕಾರದಿಂದ ಮಹತ್ವದ ಘೋಷಣೆ

    ಡಿಕೆಶಿ, ಸಿದ್ದರಾಮಯ್ಯ ಪಕ್ಷದ ಜೋಡೆತ್ತುಗಳು
    ಸಭೆಗಳಲ್ಲಿ ಒಂದಿಬ್ಬರು ಶಾಸಕರ ಹೇಳಿಕೆಯ ಬಗ್ಗೆ ಚರ್ಚೆಯಾಗಿದೆ. ಯಾವ ಶಾಸಕರ ಬೆಂಬಲ ಯಾರಿಗೆ ಇದೆ ಎಂಬ ಪ್ರಶ್ನೆ ಈಗ ಯಾಕೆ ಬಂತು ಗೊತ್ತಿಲ್ಲ. ಡಿ.ಕೆ.ಶಿವಕುಮಾರ್ (D K Shivakumar), ಸಿದ್ದರಾಮಯ್ಯ (Siddaramaiah) ಅವರು ಜೋಡೆತ್ತಿನ ರೀತಿ ಪಕ್ಷ ಕಟ್ಟಿ ಪಕ್ಷವನ್ನ ಅಧಿಕಾರಕ್ಕೆ ತಂದಿದ್ದಾರೆ. ರಾಜಕಾರಣದಲ್ಲಿ ಎಲ್ಲರಿಗೂ ಆಸೆ ಇರುತ್ತದೆ. ಅಂತಿಮ ತೀರ್ಮಾನಗಳು ಹೈಕಮಾಂಡ್‌ಗೆ ಬಿಟ್ಟದ್ದು ಎಂದಿದ್ದಾರೆ.

  • ಪ್ರತಿ ತಿಂಗಳು ಸರಿಯಾಗಿ ನಿಮಗೆ ಸಂಬಳ ಸಿಗುತ್ತಾ – ಗೃಹಲಕ್ಷ್ಮಿ ಹಣ ವಿಳಂಬಕ್ಕೆ ಹೆಬ್ಬಾಳ್ಕರ್‌ ಮೊಂಡುವಾದ

    ಪ್ರತಿ ತಿಂಗಳು ಸರಿಯಾಗಿ ನಿಮಗೆ ಸಂಬಳ ಸಿಗುತ್ತಾ – ಗೃಹಲಕ್ಷ್ಮಿ ಹಣ ವಿಳಂಬಕ್ಕೆ ಹೆಬ್ಬಾಳ್ಕರ್‌ ಮೊಂಡುವಾದ

    ಬೆಂಗಳೂರು: ಗೃಹಲಕ್ಷ್ಮಿ ಯೋಜನೆಯ (Gruhalakshmi Scheme) ಹಣ ವಿಳಂಬಕ್ಕೆ ಸಂಬಂಧಿಸಿದಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆಯ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ (Lakshmi Hebbalkar) ಮೊಂಡು ವಾದ ಮಂಡಿಸಿದ್ದಾರೆ.

    ಗೃಹಲಕ್ಷ್ಮಿ ಹಣ 2 ತಿಂಗಳು ಯಾಕೆ ಬರಲಿಲ್ಲ ಎಂಬ ಮಾಧ್ಯಮಗಳ ಪ್ರಶ್ನೆಗೆ, ನಿಮ್ಮ ಸಂಸ್ಥೆಗಳಲ್ಲಿ ನಿಮಗೆ ಪ್ರತಿ ತಿಂಗಳು ಸರಿಯಾಗಿ ಸಂಬಳ ಸಿಗುತ್ತಾ ಎಂದು ಮರು ಪ್ರಶ್ನೆ ಹಾಕಿದ್ದಾರೆ.

     

    ಈ ಪ್ರಶ್ನೆಗೆ ಮಾಧ್ಯಮಗಳು ಹೌದು ಮೇಡಂ ಸರಿಯಾಗಿ ಸಂಬಳ ಬರುತ್ತಿದೆ ಎಂದು ಉತ್ತರಿಸಿದ್ದಕ್ಕೆ ಸರ್ಕಾರಿ ಸಂಸ್ಥೆಗಳಲ್ಲಿ ಹಾಗಿಲ್ಲ. ಸರ್ಕಾರಿ ಸಂಸ್ಥೆಗಳಲ್ಲಿ 1 ತಿಂಗಳಿಗೊಮ್ಮೆ, 2 ತಿಂಗಳಿಗೊಮ್ಮೆ, 3 ತಿಂಗಳಿಗೊಮ್ಮೆ ಕೊಡುತ್ತಾರೆ. ಹಿಂದಿನಿಂದಲೂ ಹೀಗೆಯೇ ಇದೆ ಎಂದು ಉತ್ತರಿಸಿದ್ದಾರೆ. ಇದನ್ನೂ ಓದಿ: ಚುನಾವಣಾ ಬಾಂಡ್‌ ಬಳಸಿ ಸುಲಿಗೆ – ಸೀತಾರಾಮನ್‌, ಬಿಜೆಪಿ ನಾಯಕರ ಮೇಲಿದ್ದ ಕೇಸ್‌ ರದ್ದು

    ಗೃಹಲಕ್ಷ್ಮಿ ಯೋಜನೆಯ ಹಣ 1 ತಿಂಗಳು ತಡವಾದರೆ 500 ಫೋನ್ ಕರೆಗಳು ಬರುತ್ತವೆ. ಅವರನ್ನು ಸಮಾಧಾನ ಮಾಡುವುದರಲ್ಲೇ ಸಮಯ ಹಿಡಿಯುತ್ತದೆ. ತಿಂಗಳು ಬಂದಿಲ್ಲ ಎಂದರೆ ಮುಂದಿನ ತಿಂಗಳು ಬರಲ್ಲ ಅಂತ ವಿಪಕ್ಷಗಳು ಹೇಳುತ್ತವೆ. ನಾವು ವಚನಭ್ರಷ್ಟರು ಅಲ್ಲ. ವಚನ ಪಾಲನೆ ಮಾಡುತ್ತೇವೆ ಎಂದು ಹೇಳುವ ಮೂಲಕ ಹಣ ವಿಳಂಬವಾಗಿ ಪಾವತಿಯಾಗುವುದಕ್ಕೆ ಸಮರ್ಥನೆ ನೀಡಿದ್ದಾರೆ.

     

  • ಮುಸ್ಲಿಮರ ಮನೆಲಿ 2, 3 ಹೆಂಡತಿಯರು ಇರ್ತಾರೆ, ಗೃಹಲಕ್ಷ್ಮಿ ಹೆಸರಿನಲ್ಲಿ ಕುಟುಂಬದಲ್ಲಿ ಬೆಂಕಿ: ಪ್ರತಾಪ್ ಸಿಂಹ ವ್ಯಂಗ್ಯ

    ಮುಸ್ಲಿಮರ ಮನೆಲಿ 2, 3 ಹೆಂಡತಿಯರು ಇರ್ತಾರೆ, ಗೃಹಲಕ್ಷ್ಮಿ ಹೆಸರಿನಲ್ಲಿ ಕುಟುಂಬದಲ್ಲಿ ಬೆಂಕಿ: ಪ್ರತಾಪ್ ಸಿಂಹ ವ್ಯಂಗ್ಯ

    ಮೈಸೂರು: ಕಾಂಗ್ರೆಸ್ (Congress) ಸರ್ಕಾರದ ಗೃಹ ಲಕ್ಷ್ಮಿ ಯೋಜನೆಗೆ (Gruhalakshmi Scheme) ಹಿಂದೂಗಳ ಮನೆಯಲ್ಲಾದರೂ ಅತ್ತೆ-ಸೊಸೆ ನಡುವೆ ಯಜಮಾನಿ ಪಟ್ಟಕ್ಕೆ ಪೈಪೋಟಿ ಇರುತ್ತದೆ. ಆದರೆ ಮುಸ್ಲಿಮರ ಮನೆಯಲ್ಲಿ ಎರಡು, ಮೂರು ಹೆಂಡತಿಯರು ಇದ್ದಾರೆ. ಅವರಲ್ಲಿ ಯಾರು ಯಜಮಾನಿ ಆಗುತ್ತಾರೆ? ಅವರ ಮನೆಯೊಳಗೆ ಕಾಂಗ್ರೆಸ್‍ನವರು ಬೆಂಕಿ ಹಾಕುತ್ತಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ (Pratap Simha) ವ್ಯಂಗ್ಯವಾಡಿದ್ದಾರೆ.

    ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲರಿಗೂ ಜನ್ ಧನ್ ಅಕೌಂಟ್ ಓಪನ್ ಆಗಿದೆ. ಅದಕ್ಕೆ ಆಧಾರ್ ಕಾರ್ಡ್ ಲಿಂಕ್ ಸಹ ಆಗಿದೆ. ಹೀಗಿದ್ದರೂ ಗೃಹ ಲಕ್ಷ್ಮಿ ಜಾರಿ ಯಾಕೆ ಆಗುತ್ತಿಲ್ಲ. ಗೃಹ ಲಕ್ಷ್ಮಿ ಯೋಜನೆ ಮುಂದೂಡಲು ಕುಂಟು ನೆಪ ಹೇಳಲಾಗುತ್ತಿದೆ. ಮನೆ ಯಜಮಾನಿ ಯಾರು ಎಂದು ಅತ್ತೆ-ಸೊಸೆ ಕುಳಿತು ನಿರ್ಧರಿಸಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಇದರಿಂದ ಕುಟುಂಬ ಒಡೆಯುವ ಕೆಲಸ ಆಗುತ್ತಿದೆ ಎಂದು ದೂರಿದ್ದಾರೆ. ಇದನ್ನೂ ಓದಿ: ಒಡಿಶಾ ರೈಲು ದುರಂತ: ನೆರವಿಗೆ ಧಾವಿಸಿದ ಸಿಎಂ ಸಿದ್ದರಾಮಯ್ಯಗೆ ವಾಲಿಬಾಲ್ ಕ್ರೀಡಾಪಟುಗಳ ಧನ್ಯವಾದ

    ಚುನಾವಣೆಗೆ ಮೊದಲು ಕಾಂಗ್ರೆಸ್‍ನವರು ಎದೆ ಬಡಿದುಕೊಂಡು ಎಲ್ಲರಿಗೂ ವಿದ್ಯುತ್ ಉಚಿತ ಎಂದಿದ್ದರು. ಈಗ ಸರಾಸರಿ ತೆಗೆದು ಉಚಿತ ಕೊಡುತ್ತೇವೆ ಎಂದು ಹೇಳುತ್ತಿದ್ದಾರೆ. ಇದು ಮೋಸ ಅಲ್ಲವೇ? ಯಾವುದೇ ಷರತ್ತು ಇಲ್ಲದೆ ಎಲ್ಲರಿಗೂ 200 ಯೂನಿಟ್ ವಿದ್ಯುತ್ ಉಚಿತವಾಗಿ ಕೊಡಲೇಬೇಕು. ಕೆಎಸ್‍ಆರ್‌ಟಿಸಿ ಬಸ್ ಉಚಿತ ಎನ್ನುವ ಮಾಹಿತಿ ಇನ್ನೂ ಬಂದಿಲ್ಲ. ಸ್ವಾತಂತ್ರ್ಯ ಪೂರ್ವದಲ್ಲಿ ತಲೆ ಮೇಲೆ ಟೋಪಿ ಹಾಕಿಕೊಂಡವರನ್ನು ಕಾಂಗ್ರೆಸ್‍ನವರು ಎನ್ನುತ್ತಿದ್ದರು. ಈಗ ಜನರಿಗೆ ಟೋಪಿ ಹಾಕುವವರನ್ನು ಕಾಂಗ್ರೆಸ್‍ನವರು ಎನ್ನುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.

    6 ಕೆ.ಜಿ ಅಕ್ಕಿಯನ್ನು ಕೇಂದ್ರ ಸರ್ಕಾರ ಈಗಾಗಲೇ ಕೊಡುತ್ತಿದೆ. ಇದಕ್ಕೆ ನಾಲ್ಕು ಕೆ.ಜಿ ಸೇರಿಸಿ 10 ಕೆ.ಜಿ ಕೊಟ್ಟರೆ ಅದು ನಿಮ್ಮ ಗ್ಯಾರಂಟಿ ಹೇಗೆ ಆಗುತ್ತದೆ. ಯುವ ನಿಧಿ ಹೆಸರಲ್ಲೂ ಕಾಂಗ್ರೆಸ್ ಜನರಿಗೆ ಮೋಸ ಮಾಡುತ್ತಿದೆ. ಮತಗಳ ಹಗಲು ದರೋಡೆ ಮಾಡಿ ಈಗ ಜನರಿಗೆ ಟೋಪಿ ಹಾಕುವ ಕೆಲಸ ಆಗುತ್ತಿದೆ. ಸುಭಿಕ್ಷ ರಾಜ್ಯವನ್ನು ಕಾಂಗ್ರೆಸ್ ಭಿಕ್ಷಾ ರಾಜ್ಯ ಮಾಡುತ್ತಿದೆ. ಲೋಕಸಭಾ ಚುನಾವಣೆವರೆಗೂ ಗ್ಯಾರಂಟಿ ಜಾರಿ ವಿಚಾರವನ್ನು ಸರ್ಕಾರ ಎಳೆದಾಡುತ್ತದೆ ಎಂದಿದ್ದಾರೆ.

    ಕಾಂಗ್ರೆಸ್ ಗ್ಯಾರಂಟಿ (Congress Guarantee) ನೀತಿಗಳಿಂದ ರಾಜ್ಯ ದಿವಾಳಿ ಆಗುತ್ತಿದೆ. ಸದ್ಯದಲೇ ಎಲ್ಲಾ ರೀತಿಯ ತೆರಿಗೆ ಹೆಚ್ಚಾಗಲಿದೆ. ಕೇಜ್ರಿವಾಲ್ 2013ರಲ್ಲಿ ಕಳಪೆ ಫ್ರೀ ಯೋಜನೆ ತಂದಿದ್ದರು. ಈಗ ಅದನ್ನು ಕಾಂಗ್ರೆಸ್ ಸರ್ಕಾರ ಮಾಡಿದೆ. ಇದು ಕರ್ನಾಟಕ ಮಾಡೆಲ್ ಅಲ್ಲ. ಇದನ್ನು ಹಲವರು ರಾಜ್ಯದಲ್ಲಿ ಮಾಡಿ ಜನರಿಗೆ ಮೋಸ ಮಾಡಲಾಗಿದೆ. ಕಾಂಗ್ರೆಸ್‍ನ ಪ್ರಣಾಳಿಕೆ ಈಡೇರಿಸಲು ಕೇಂದದ್ರ ಬಜೆಟ್ ಹಣ ತಂದರು ಸಾಧ್ಯವಿಲ್ಲ. ಕರ್ನಾಟಕಕ್ಕೆ ಶ್ರೀಲಂಕಾ, ಬಾಂಗ್ಲಾದೇಶದ ಸ್ಥಿತಿ ಬರುವ ಕಾಲ ದೂರವಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಬೈಯಪ್ಪನಹಳ್ಳಿ ರೈಲು ನಿಲ್ದಾಣದಲ್ಲಿ ರಾತ್ರಿ ಕಳೆಯುವ ಕಾರ್ಮಿಕರ ನೆರವಿಗೆ ಧಾವಿಸುವಂತೆ ಸಿಎಂ ಸೂಚನೆ