Tag: ಗೃಹ ಪ್ರವೇಶ

  • ಭಾವಿ ಪತ್ನಿ ಹರ್ಷಿಕಾಗೆ ಭುವನ್ ಭರ್ಜರಿ ಗಿಫ್ಟ್ : ಗೃಹ ಪ್ರವೇಶದಲ್ಲಿ ಹರ್ಷಿಕಾ ಭಾಗಿ

    ಭಾವಿ ಪತ್ನಿ ಹರ್ಷಿಕಾಗೆ ಭುವನ್ ಭರ್ಜರಿ ಗಿಫ್ಟ್ : ಗೃಹ ಪ್ರವೇಶದಲ್ಲಿ ಹರ್ಷಿಕಾ ಭಾಗಿ

    ಟಿ ಹರ್ಷಿಕಾ (Harshika Poonachcha) ಮತ್ತು ನಟ ಭುವನ್ (Bhuvan) ನಾಳೆ ಕೊಡಗಿನಲ್ಲಿ (Kodagu) ಹೊಸ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇದಕ್ಕೂ ಮುನ್ನ ಭಾವಿ ಪತ್ನಿ ಹರ್ಷಿಕಾಗೆ ಭರ್ಜರಿ ಉಡುಗೊರೆಯೊಂದನ್ನು ನೀಡಿದ್ದಾರೆ ಭುವನ್. ಹರ್ಷಿಕಾಗಾಗಿಯೇ ಭುವನ್ ತೋಟದ ಮನೆ ಕಟ್ಟಿಸಿದ್ದು, ಮದುವೆ ಮುನ್ನವೇ ಹೊಸ ಮನೆ ಗೃಹ ಪ್ರವೇಶ ಮಾಡಿದ ಭುವನ್-ಹರ್ಷಿಕಾ ಜೋಡಿ. ಸಂಪ್ರದಾಯದಂತೆ ದೀಪ ಹಿಡಿದು ಹರ್ಷಿಕಾ ಹೊಸ ಮನೆಗೆ ಎಂಟ್ರಿಕೊಟ್ಟಿದ್ದರೆ, ಕೊಡವ ಶೈಲಿಯಲ್ಲಿ ಗನ್ ಹಿಡಿದು ಗುಂಡು ಹಾರಿಸಿ ಶುಭಕಾರ್ಯ ಶುರು ಮಾಡಿದ್ದಾರೆ ಭುವನ್.

    ಕೇವಲ ಮನೆ ಮಾತ್ರವಲ್ಲ, ವಾರದ ಹಿಂದೆಯಷ್ಟೇ ಅವರು ಮತ್ತೊಂದು ಉಡುಗೊರೆಯನ್ನು ಹರ್ಷಿಕಾಗೆ ನೀಡಿದ್ದರು. ತಮ್ಮದೇ ಸ್ವಂತ ಪ್ರೊಡಕ್ಷನ್ ಹೌಸ್ ಶುರು ಮಾಡಿ, ಜೊತೆಗೆ ಹೊಸ ಸಿನಿಮಾದ ಟೈಟಲ್ ಕೂಡ ಅನೌನ್ಸ್ ಮಾಡಿತ್ತು ಈ ಜೋಡಿ. ಹರ್ಷಿಕಾ ಈ ಚಿತ್ರಕ್ಕೆ ನಿರ್ಮಾಪಕಿಯಾದರೆ, ಭುವನ್ ಹೀರೋ.

    ಭುವನ್ ಹಾಗೂ ಹರ್ಷಿಕಾ ಅವರ ಪ್ರೊಡಕ್ಷನ್ ಹೌಸ್ ಗೆ ‘ಭುವನಂ ಎಂಟಟೈನ್ ಮೆಂಟ್’ ಎಂದು ಹೆಸರಿಡಲಾಗಿದ್ದು ಅದೇ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಚಿತ್ರಕ್ಕೆ (Movie) ‘ಭುವನಂ ಶ್ರೇಷ್ಠಮ್  ಗಚ್ಚಾಮಿ’ ಎಂದು ಹೆಸರಿಡಲಾಗಿದೆ. ಇದನ್ನೂ ಓದಿ:ಎಲ್ಲೆಲ್ಲೂ ‘ಜೈಲರ್’ ಚಿತ್ರದ ಹವಾ, ನಿಲ್ಲುತ್ತಿಲ್ಲ ರಜನಿ ತಾಕತ್ತು

    ಇದೊಂದು ಬಾಕ್ಸರ್ ನ ಕಥೆಯಾಗಿದ್ದು ಆರು ವರ್ಷದ ಹಿಂದೆಯೇ ಈ ರೀತಿಯ ಸಿನಿಮಾ ಒಂದನ್ನ ಮಾಡಬೇಕು ಎಂದು ಭುವನ್ ಹಾಗೂ ಹರ್ಷಿಕಾ ಪ್ಲಾನ್ ಮಾಡಿಕೊಂಡಿದ್ದರಂತೆ. ಬಾಕ್ಸರ್​ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಭುವನ್​ ಪೊನ್ನಣ್ಣ ಸಾಕಷ್ಟು ತರಬೇತಿ ಪಡೆದುಕೊಂಡಿದ್ದಾರೆ. ಈ ಪಾತ್ರಕ್ಕೆ ಹಲವು ಶೇಡ್​ ಇರಲಿದೆ. ಈ ಚಿತ್ರದಲ್ಲಿ  ರೆಟ್ರೊ ಶೈಲಿಯಲ್ಲೂ ಭುವನ್ ಅವರನ್ನು ನೋಡಬಹುದು. ಸಿನಿಮಾಗಳ ಸಂಖ್ಯೆಗಿಂತಲೂ ಗುಣಮಟ್ಟ ಮುಖ್ಯ ಎನ್ನುವ ಭುವನ್ ಗಡಿಬಿಡಿಯಲ್ಲಿ ಬೇರೆ ಯಾವುದೇ ಸಿನಿಮಾ ಒಪ್ಪಿಕೊಳ್ಳದೇ ಕಳೆದ ಎರಡು ವರ್ಷಗಳಿಂದ ಈ ಸಿನಿಮಾದ ಸ್ಕ್ರಿಪ್ಟ್​ ಮೇಲೆ  ಕೆಲಸ ಮಾಡುತ್ತಿದ್ದಾರೆ.

     

    ಸದ್ಯ ಮದುವೆಯ (Marriage) ಸಂದರ್ಭದಲ್ಲಿ ಈ ಖುಷಿಯ ಸುದ್ದಿಯನ್ನು ಕೂಡ ಭುವನ್ ಹಾಗೂ ಹರ್ಷಿಕಾ ಮಾಧ್ಯಮ ಮಿತ್ರರ ಜೊತೆ ಹಂಚಿಕೊಂಡಿದ್ದಾರೆ. ಮದುವೆ ಸಮಾರಂಭ ಎಲ್ಲವನ್ನು ಮುಗಿಸಿಕೊಂಡು ಶೀಘ್ರದಲ್ಲಿ ಸಿನಿಮಾ ಚಿತ್ರೀಕರಣವನ್ನು ಶುರು ಮಾಡಲಿದ್ದಾರೆ. ಇನ್ನು ಈ ಸಿನಿಮಾಗೆ ಭುವನ್ ಅವರೇ ಕಥೆ ಬರೆದು ನಿರ್ದೇಶನವನ್ನು ಮಾಡುತ್ತಿದ್ದಾರೆ ಚಿತ್ರದಲ್ಲಿ ಭುವನ್ ಅವರೇ ನಾಯಕನಾಗಿ ಕಾಣಿಸಿಕೊಳ್ಳಲಿದ್ದು ಹರ್ಷಿಕಾ ನಿರ್ಮಾಪಕಿಯಾಗಿ ಮೊದಲ‌ ಬಾರಿಗೆ ಜವಾಬ್ದಾರಿ ನಿರ್ವಹಿಸಲಿದ್ದಾರೆ. ಚಿತ್ರಕ್ಕೆ ನಾಯಕಿಯಾಗಿ ಕೊಡಗು ಮೂಲದ ಹೊಸ ಪ್ರತಿಭೆಯನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ ಎಂದು ಭುವನ್ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಏ.27ರಂದು ಪ್ರವೀಣ್ ನೆಟ್ಟಾರು ಮನೆ ಗೃಹಪ್ರವೇಶ- ಕೊಟ್ಟ ಮಾತು ಉಳಿಸಿಕೊಂಡ ಬಿಜೆಪಿಗೆ ಪ್ಲಸ್ ಆಗುತ್ತಾ?

    ಏ.27ರಂದು ಪ್ರವೀಣ್ ನೆಟ್ಟಾರು ಮನೆ ಗೃಹಪ್ರವೇಶ- ಕೊಟ್ಟ ಮಾತು ಉಳಿಸಿಕೊಂಡ ಬಿಜೆಪಿಗೆ ಪ್ಲಸ್ ಆಗುತ್ತಾ?

    ಮಂಗಳೂರು: ಚುನಾವಣೆ ಹೊತ್ತಲ್ಲಿ ಕರಾವಳಿಯಲ್ಲಿ ಬಿಜೆಪಿ (BJP) ಯಿಂದ ಮತ್ತೊಂದು ಹೊಸ ಅಸ್ತ್ರ ಪ್ರಯೋಗವಾಗಿದೆ. ಎಲೆಕ್ಷನ್ ಟೈಮಲ್ಲೇ ಹತ್ಯೆಯಾದ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು (Praveen Kumar Nettaru) ಹೊಸ ಮನೆ ಗೃಹ ಪ್ರವೇಶಕ್ಕೆ ಮುಹೂರ್ತ ನಿಗದಿಯಾಗಿದೆ. ಚುನಾವಣೆ ಹೊತ್ತಲ್ಲಿ ಇದು ಬಿಜೆಪಿಗೆ ಪ್ಲಸ್ ಆಗಲಿದೆಯಾ ಎಂಬ ಪ್ರಶ್ನೆ ಮೂಡಿದೆ.

    ರಾಜ್ಯ ಬಿಜೆಪಿ ಮತ್ತು ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ (Nalin Kumar Kateel) ನೇತೃತ್ವದಲ್ಲಿ 60 ಲಕ್ಷ ವೆಚ್ಚದಲ್ಲಿ ಮನೆ ನಿರ್ಮಾಣವಾಗುತ್ತಿದ್ದು, ನಿರ್ಮಾಣ ಕಾರ್ಯ ಬಹುತೇಕ ಪೂರ್ಣಗೊಂಡಿದೆ. 2,700 ಚದರ ಅಡಿಯಲ್ಲಿ ಮುಗ್ರೋಡಿ ಕನ್ಸ್ಟ್ರಕ್ಷನ್ ಮನೆ ನಿರ್ಮಾಣ ಮಾಡುತ್ತಿದೆ. ಇದನ್ನೂ ಓದಿ: SSLC ಪರೀಕ್ಷಾ ಕೇಂದ್ರದಲ್ಲಿ ನಕಲು – ಮುಖ್ಯೋಪಾಧ್ಯಾಯ ಸೇರಿ 15 ಸಿಬ್ಬಂದಿ ಅಮಾನತು

    2022ರ ನ. 2ರಂದು ದ.ಕ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆ (Bellare) ಯ ನೆಟ್ಟಾರುವಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಅವರು ಮನೆ ನಿರ್ಮಾಣಕ್ಕೆ ಗುದ್ದಲಿಪೂಜೆ ನೆರವೇರಿಸಿದ್ದರು. ಸದ್ಯ ಮನೆ ನಿರ್ಮಾಣ ಕಾರ್ಯ ವೇಗವಾಗಿ ಪೂರ್ತಿಗೊಂಡು ಏ.27 ರಂದು ಗೃಹಪ್ರವೇಶ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಮೂಲಕ ಹತ್ಯೆಯಾದ ಕಾರ್ಯಕರ್ತನ ಕುಟುಂಬದ ಪರ ನಿಂತಿದ್ದೇವೆ ಎಂಬ ಸಂದೇಶವನ್ನು ಬಿಜೆಪಿ ರವಾನಿಸಿದೆ. ಇತ್ತ ಪ್ರವೀಣ್ ಪತ್ನಿಗೆ ದ.ಕ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸರ್ಕಾರಿ ಉದ್ಯೋಗ ನೀಡಲಾಗಿದೆ.

    2022ರ ಜುಲೈ 26 ರಂದು ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ನಡೆದಿತ್ತು. ಪ್ರವೀಣ್ ಹತ್ಯೆ ಬಳಿಕ ಬಿಜೆಪಿ ನಾಯಕರು ತೀವ್ರ ಮುಜುಗರಕ್ಕೆ ಈಡಾಗಿದ್ದರು. ಹತ್ಯೆ ವೇಳೆ ಡ್ಯಾಮೇಜ್ ಆದ್ರೂ ಕುಟುಂಬದ ಪರ ನಿಂತು ಬಿಜೆಪಿ ಡ್ಯಾಮೇಜ್ ಸರಿಪಡಿಸಿಕೊಂಡಿದೆ.

  • ಸಾಹಸ ಸಿಂಹ ವಿಷ್ಣುವರ್ಧನ್ ಮನೆ ಗೃಹಪ್ರವೇಶ: ನಾನಾ ಗಣ್ಯರು ಭಾಗಿ

    ಸಾಹಸ ಸಿಂಹ ವಿಷ್ಣುವರ್ಧನ್ ಮನೆ ಗೃಹಪ್ರವೇಶ: ನಾನಾ ಗಣ್ಯರು ಭಾಗಿ

    ನ್ನಡದ ಹೆಸರಾಂತ ನಟ ಸಾಹಸ ಸಿಂಹ ವಿಷ್ಣುವರ್ಧನ್ ಅವರ ಹೊಸ ಮನೆ ಗೃಹ ಪ್ರವೇಶ ಇಂದು ನಡೆಯಿತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಂಸದೆ ಸುಮಲತಾ ಅಂಬರೀಶ್, ನಟ ಜಗ್ಗೇಶ್ ಸೇರಿದಂತೆ ಅನೇಕ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

    ಗೃಹ ಪ್ರವೇಶದ ಪೂಜೆಗೆ ಆಗಮಿಸಿದ್ದ ಸಿಎಂ ಬಸವರಾಜ ಬೊಮ್ಮಾಯಿ ಮಾಧ್ಯಮಗಳೊಂದಿಗೆ ಮಾತನಾಡಿ, ‘ಸಾಹಸಸಿಂಹ ನಮ್ಮ ಅಚ್ಚುಮೆಚ್ಚಿನ ನಟ. ವಿಷ್ಣುವರ್ಧನ್ ಮನೆ ತುಂಬಾ ಸುಂದರವಾಗಿದೆ. ಮೈಸೂರಿನಲ್ಲಿ ವಿಷ್ಣು ಸ್ಮಾರಕದ ಕೆಲಸಗಳು ನಡೀತಿವೆ. ಸದ್ಯದಲ್ಲೇ ವಿಷ್ಣು ಸ್ಮಾರಕದ ಉದ್ಘಾಟನೆ ಸಮಾರಂಭವಾಗುತ್ತೆ. ವಿಷ್ಣು ನಮ್ಮೆಲ್ಲರಿಗೂ ಮಾದರಿ ವ್ಯಕ್ತಿತ್ವ. ವಿಷ್ಣು ಘನತೆಯನ್ನ ಎತ್ತಿಹಿಡಿಯೋ ಮ್ಯೂಸಿಯಂ ಮಾಡ್ತೀವಿ’ ಎಂದರು. ಇದನ್ನೂ ಓದಿ: `ಗಾಲ್ವಾನ್ ಹಾಯ್’ ಎಂದ ನಟಿಗೆ ಚಳಿ ಬಿಡಿಸಿದ ಸಚಿವ – ಕಾನೂನು ಕ್ರಮಕ್ಕೆ ಚಿಂತನೆ

    ಜಗ್ಗೇಶ್ ಕೂಡ ಮಾತನಾಡಿ, ‘ವಿಷ್ಣುಮನೆಗೆ ಒಂದು ಬ್ಯುಟಿಫುಲ್ ಕಥೆಯಿದೆ. ವಿಷ್ಣು ಅವರಿಗೆ ಮೊದಲು ಯಾರೋ ಭಯ ಹುಟ್ಟಿಸಿದ್ರು. ಜಯನಗರದ ಮನೆ ವಿಷ್ಣು ಸರ್ ಗೆ ಪ್ರಿಯವಾದ ಜಾಗ. ಮನೆಯಲ್ಲಿ ಒಂದೊಂದು ಜಾಗವು ಕಾಡುತ್ತೆ. ಭಾವನೆಗಳನ್ನ ಕೆದಕುತ್ತೆ. ಇದು ಮನೆಯಲ್ಲ, ನಮ್ಮ ಪಾಲಿಗೆ ದೇವಸ್ಥಾನ. ಅನಿರುದ್ದ್ ವಿಷ್ಣುವರ್ಧನ್ ಮಗನ ಸಮಾನ. ಅನಿರುದ್ದ್ ಪರವಾಗಿ ಈಗಲೂ ನಿಲ್ಲಬೇಕು’ ಎಂದರು.

    ಗೃಹ ಪ್ರವೇಶದ ಸಮಾರಂಭಕ್ಕೆ ಸಿನಿಮಾ ರಂಗದ ಗಣ್ಯರು, ಅಭಿಮಾನಿಗಳು ಸೇರಿದಂತೆ ಅನೇಕರು ಹಾಜರಿದ್ದರು. ಬೆಳಗ್ಗೆಯಿಂದಲೇ ಪೂಜೆ, ಹೋಮ ಸೇರಿದಂತೆ ನಾನಾ ಧಾರ್ಮಿಕ ಕಾರ್ಯಗಳು ನಡೆದಿವೆ. ಮುಂದಿನ ತಿಂಗಳು ವಿಷ್ಣು ಸ್ಮಾರಕ ಕೂಡ ಉದ್ಘಾಟನೆ ಆಗಲಿದೆ.

    Live Tv
    [brid partner=56869869 player=32851 video=960834 autoplay=true]

  • ನಟಿ ಕಾರುಣ್ಯ ರಾಮ್ ಗೃಹ ಪ್ರವೇಶದಲ್ಲಿ ಚಂದನವನದ ತಾರೆಯರು

    ನಟಿ ಕಾರುಣ್ಯ ರಾಮ್ ಗೃಹ ಪ್ರವೇಶದಲ್ಲಿ ಚಂದನವನದ ತಾರೆಯರು

    `ಬಿಗ್ ಬಾಸ್’ ಖ್ಯಾತಿಯ ಚೆಲುವೆ ಕಾರುಣ್ಯಾ ರಾಮ್ ಅವರು, ಹೊಸ ಮನೆ ಮಾಡಿದ ಖುಷಿಯಲ್ಲಿದ್ದಾರೆ. ನೂತನ ಗೃಹ ಪ್ರವೇಶದ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸಿನಿಮಾ, ಕಿರುತೆರೆಯ ಸೆಲೆಬ್ರಿಟಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.

    ಸದ್ಯ ವಜ್ರಕಾಯದ ಬೆಡಗಿ ಕಾರುಣ್ಯ `ಮನೆ ಮಾರಾಟಕ್ಕಿದೆ’, `ರೆಮೋ’, `ಪೆಟ್ರೋಮ್ಯಾಕ್ಸ್’ ಚಿತ್ರದಲ್ಲಿಯೂ ಕಾರುಣ್ಯಾ ರಾಮ್ ನಟಿಸುತ್ತಿದ್ದಾರೆ. ಕನ್ನಡದ ಬಿಗ್ ಬಾಸ್ ಸೀಸನ್ -4 ಸೇರಿ ಡ್ಯಾನ್ಸ್ ರಿಯಾಲಿಟಿ ಶೋ ಜೊತೆಗೆ ಕಾರುಣ್ಯಾ ಅವರು `ಕುಕು ವಿಥ್ ಕಿರಿಕ್ಕು’ ಶೋನಲ್ಲಿ ಭಾಗಿಯಾಗಿದ್ದಾರೆ. ಇದನ್ನೂ ಓದಿ: ಅಮೆರಿಕಾ ನಟಿಯ ಡ್ರೆಸ್ ಕಾಪಿ ಮಾಡಿ ಟ್ರೋಲ್ ಆದ ಜಾಹ್ನವಿ ಕಪೂರ್

    ಇನ್ನು ಕಾರುಣ್ಯ ರಾಮ್ ಅವರ ನೂತನ ಗೃಹ ಪ್ರವೇಶಕ್ಕೆ `ನೆನಪಿರಲಿ’ ಪ್ರೇಮ್ ಜ್ಯೋತಿ ದಂಪತಿ, ಸ್ವಾತಿ ಶರ್ಮಾ, ಪ್ರಿಯಾಂಕಾ ಉಪೇಂದ್ರ, ನಿರಂಜನ್ ಸುಧೀಂದ್ರ, ಜಗದೀಶ್ ಆರ್ ಚಂದ್ರ, ತೇಜಸ್ವಿನಿ ಪ್ರಕಾಶ್ ಮುಂತಾದವರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.

    ನಟನೆ ಜೊತೆಗೆ ಸಾಮಾಜಿಕ ಕೆಲಸದಲ್ಲಿಯೂ ಸಕ್ರಿಯವಾಗಿದ್ದಾರೆ. ಕೆಲದಿನಗಳ ಹಿಂದೆ ಕಾರುಣ್ಯಾ ರಾಮ್ ಅವರು ಕ್ಯಾನ್ಸರ್ ರೋಗಿಗಳಿಗೆ ಅವರ ಕೂದಲು ದಾನ ಮಾಡಿದ್ದರು. ಒಟ್ನಲ್ಲಿ ಸಿನಿಮಾ, ಹೊಸ ಬಗೆಯ ಫೋಟೋಶೂಟ್, ಸಾಮಾಜಿಕ ಕಾರ್ಯದ ಮೂಲಕ ಕಾರುಣ್ಯ ಸುದ್ದಿಯಾಗುತ್ತಲೇ ಇರುತ್ತಾರೆ.

    Live Tv

  • ಹೊಸ ಮನೆ ಖರೀದಿಸಿದ ನಟಿ ವೈಷ್ಣವಿ ಗೌಡ – ಅಗ್ನಿಸಾಕ್ಷಿ ಚೆಲುವೆಯ ಗೃಹ ಪ್ರವೇಶಕ್ಕೆ ದೊಡ್ಮನೆ ಮಂದಿ ಸಾಕ್ಷಿ

    ಹೊಸ ಮನೆ ಖರೀದಿಸಿದ ನಟಿ ವೈಷ್ಣವಿ ಗೌಡ – ಅಗ್ನಿಸಾಕ್ಷಿ ಚೆಲುವೆಯ ಗೃಹ ಪ್ರವೇಶಕ್ಕೆ ದೊಡ್ಮನೆ ಮಂದಿ ಸಾಕ್ಷಿ

    ನ್ನಡ ಕಿರುತೆರೆಯ ಖ್ಯಾತ ನಟಿ ಹಾಗೂ ಬಿಗ್‍ಬಾಸ್ ಸೀಸನ್-8ರ ಸ್ಪರ್ಧಿ ವೈಷ್ಣವಿ ಗೌಡ ಅವರ ಹೊಸ ಮನೆಯ ಗೃಹ ಪ್ರವೇಶ ಸಮಾರಂಭ ಭಾನುವಾರ ಅದ್ದೂರಿಯಾಗಿ ನೆರವೇರಿದೆ. ನಗರದಲ್ಲಿ ಹೊಸ ಮನೆಯನ್ನು ಖರೀದಿಸಿರುವ ವೈಷ್ಣವಿ ಗೃಹಪ್ರವೇಶ ಕಾರ್ಯಕ್ರಮ ಸಂಪ್ರದಾಯಬದ್ಧವಾಗಿ ಶಾಸ್ತ್ರೋಕ್ತವಾಗಿ ನಡೆಸಿದ್ದಾರೆ. ಈ ವಿಶೇಷ ಸಮಾರಂಭದಲ್ಲಿ ಬಿಗ್ ಬಾಸ್ ಸ್ಪರ್ಧಿಗಳು ಸೇರಿದಂತೆ ಹಲವಾರು ಕಲಾವಿದರು ಪಾಲ್ಗೊಂಡು ವೈಷ್ಣವಿ ಅವರಿಗೆ ಶುಭ ಹಾರೈಸಿದ್ದಾರೆ.

    ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈಷ್ಣವಿ ಹೊಸ ಮನೆಯ ಗೃಹ ಪ್ರವೇಶದ ಫೋಟೋಗಳು ಹರಿದಾಡುತ್ತಿದ್ದು, ಫೋಟೋದಲ್ಲಿ ವೈಷ್ಣವಿ ರೇಷ್ಮೆ ಸೀರೆಯುಟ್ಟು ಟ್ರೆಡಿಶನಲ್ ಲುಕ್‍ನಲ್ಲಿ ಮಿಂಚಿದ್ದಾರೆ. ಕೇವಲ ಆಪ್ತರು ಮತ್ತು ಕುಟುಂಬಸ್ಥರಿಗಷ್ಟೇ ಆಹ್ವಾನಿಸಲಾಗಿದ್ದ ಈ ಕಾರ್ಯಕ್ರಮದಲ್ಲಿ ನಟ ರಾಜೀವ್ ಮತ್ತು ಅವರ ಪತ್ನಿ, ದಿವ್ಯ ಉರುಡುಗ, ಅರವಿಂದ್ ಕೆಪಿ, ರಘು ವೈನ್ ಸ್ಟೋರ್, ಪ್ರಶಾಂತ್ ಸಂಬರಗಿ ಸೇರಿದಂತೆ ಹಲವರು ಮಂದಿ ಭಾಗಿಯಾಗಿದ್ದರು. ಇದನ್ನೂ ಓದಿ: ಸೋನಾಕ್ಷಿ ಸಿನ್ಹಾ ಬೆರಳಿಗೆ ವಜ್ರದುಂಗುರ: ಸದ್ದಿಲ್ಲದೇ ನಡೆದೇ ಹೋಯ್ತಾ ಗಿಣಿಮೂಗ ಸುಂದರಿಯ ಎಂಗೇಜ್ಮೆಂಟ್

     

    View this post on Instagram

     

    A post shared by Rajeev Hanu (@rajeevhanuofficial)

    ಕಾರ್ಯಕ್ರಮದಲ್ಲಿ ವೈಷ್ಣವಿ ಗೌಡ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿಕೊಂಡಿರುವ ರಾಜೀವ್ ಅವರು, ಅಭಿನಂದನೆಗಳು ವೈಷ್ಣವಿ. ಇದು ಅದ್ಭುತವಾದ ಗೃಹಪ್ರವೇಶದ ಕಾರ್ಯಕ್ರಮವಾಗಿತ್ತು. ಇಡೀ ಕುಟುಂಬಕ್ಕೆ ಒಳ್ಳೆಯದಾಗಲಿ. ನನ್ನ ಎಲ್ಲಾ ಸ್ನೇಹಿತರನ್ನು ಭೇಟಿ ಮಾಡಿದ್ದು ತುಂಬಾ ಸಂತೋಷವಾಗಿದೆ. ಲವ್ ಯು ಆಲ್ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ.

    ಮತ್ತೊಂದೆಡೆ ನಟ ವಿಜಯ್ ಸೂರ್ಯ ಅವರು ಕೂಡ ವೈಷ್ಣವಿ ಗೌಡ ಅವರ ಮನೆಯ ಗೃಹ ಪ್ರವೆಶಕ್ಕೆ ಆಗಮಿಸಿ ವಿಶ್ ಮಾಡಿದ್ದಾರೆ. ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಅಗ್ನಿ ಸಾಕ್ಷಿ ಧಾರಾವಾಹಿ ಮೂಲಕ ಮನೆ ಮಾತಾಗಿದ್ದ ವೈಷ್ಣವಿ ಗೌಡ ಮತ್ತು ವಿಜಯ್ ಸೂರ್ಯ ಎಲ್ಲರ ಅಚ್ಚುಮೆಚ್ಚಿನ ಜೋಡಿಯಾಗಿದ್ದರು. ರೀಲ್‍ನಲ್ಲಿ ಮಾತ್ರವಲ್ಲದೇ ರಿಯಲ್ ಲೈಫ್‍ನಲ್ಲೂ ಈ ಜೋಡಿ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಆದರೆ ವಿಜಯ್ ಸೂರ್ಯ ಅವರು ಮದುವೆಯಾಗುವ ಮೂಲಕ ಗಾಸಿಪ್‍ಗಳಿಗೆ ಫುಲ್ ಸ್ಟಾಪ್ ಇಟ್ಟರು. ಇದನ್ನೂ ಓದಿ : ಜೂನ್ 9ಕ್ಕೆ ನಯನತಾರಾ ಮದುವೆ ಫಿಕ್ಸ್ – ತಿರುಪತಿಯಲ್ಲಿ ವಿವಾಹ

  • ನೂತನ ಮನೆಯ ಗೃಹಪ್ರವೇಶ ಮಾಡಿದ ರಾಕಿಂಗ್ ಸ್ಟಾರ್ ಯಶ್

    ನೂತನ ಮನೆಯ ಗೃಹಪ್ರವೇಶ ಮಾಡಿದ ರಾಕಿಂಗ್ ಸ್ಟಾರ್ ಯಶ್

    ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅವರು ಇಂದು ಹೊಸ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.

    ಹೌದು. ಇಂದು ಯಶ್ ಅವರು ತಮ್ಮ ನೂತನ ಮನೆಯ ಗೃಹಪ್ರವೇಶವನ್ನು ಅತ್ಯಂತ ಸಿಂಪಲ್ ಆಗಿ ಮಾಡಿದ್ದಾರೆ. ಈ ಮೂಲಕ ಇಂದು ಹೊಸ ಮನೆಗೆ ಅವರ ಕುಟುಂಬ ಕಾಲಿಟ್ಟಿದೆ.

    ಯಶ್ ಅವರ ನೂತನ ನಿವಾಸ ಪ್ರೆಸ್ಟಿಜ್ ಗಾಲ್ಫ್ ಅಪಾರ್ಟ್ ಮೆಂಟ್ ನಲ್ಲಿದ್ದು, ಕಳೆದ ಎರಡು ವರ್ಷಗಳ ಹಿಂದೆ ಯಶ್ ಸಿಲಿಕಾನ್ ಸಿಟಿಯಲ್ಲಿ ಹೊಸ ಮನೆ ಖರೀದಿ ಮಾಡಿದ್ದರು. ಇಷ್ಟು ದಿನ ಮನೆಯ ವಿನ್ಯಾಸ ಕೆಲಸ ನಡೆಯುತ್ತಿತ್ತು.

    ಇದೀಗ ಇಂದು ಸಿಂಪಲ್ ಆಗಿ ರಾಕಿಭಾಯ್ ಕುಟುಂಬ ಮುಹೂರ್ತ ನಿಗದಿ ಮಾಡಿ ಮನೆಯೊಳಗೆ ಕಾಲಿಟ್ಟಿದೆ.

  • ಅಂಧ ಗಾಯಕಿಯರಿಗೆ ಮನೆ- ಗೃಹ ಪ್ರವೇಶ ನೆರವೇರಿಸಿದ ಜಗ್ಗೇಶ್ ದಂಪತಿ

    ಅಂಧ ಗಾಯಕಿಯರಿಗೆ ಮನೆ- ಗೃಹ ಪ್ರವೇಶ ನೆರವೇರಿಸಿದ ಜಗ್ಗೇಶ್ ದಂಪತಿ

    – ಗಾಯಕಿಯ ಕೈ ಹಿಡಿದು ಮನೆಗೆ ಬಲಗಾಲಿಡಿಸಿದ ಜಗ್ಗೇಶ್

    ತುಮಕೂರು: ನವರಸನಾಯಕ ಜಗ್ಗೇಶ್ ಮತ್ತು ಅವರ ಪತ್ನಿ ಪರಿಮಳ ಅವರು ಇಂದು ಅಂಧ ಸಹೋದರಿಯರ ಚಂದದ ಮನೆಯನ್ನು ಉದ್ಘಾಟಿಸಿದ್ದಾರೆ.

    ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಸರಿಗಮಪ ಶೋಗೆ ರತ್ನಮ್ಮ ಮತ್ತು ಮಂಜಮ್ಮ ಇಬ್ಬರೂ ಅಂಧ ಸಹೋದರಿಯರು ಬಂದಿದ್ದರು. ಇವರು ತಮ್ಮ ಸುಮಧುರ ಕಂಠಸಿರಿಯ ಮೂಲಕ ನಾಡಿನ ಜನತೆಯ ಮನಗೆದ್ದರು. ಇದೇ ವೇಳೆ ಅಂಧ ಸಹೋದರಿಯರು ತಮ್ಮ ಕಷ್ಟವನ್ನು ಹೇಳಿಕೊಂಡಿದ್ದರು. ಅವರ ಕಷ್ಟವನ್ನು ಆಲಿಸಿದ ಜಗ್ಗೇಶ್ ಮನೆ ಕಟ್ಟಿಸಿಕೊಡುವುದಾಗಿ ಭರವಸೆ ಕೊಟ್ಟಿದ್ದರು. ಅವರು ಕೊಟ್ಟು ಭರವಸೆಯನ್ನು ಒಂದು ತಿಂಗಳಲ್ಲಿಯೇ ಜಗ್ಗೇಶ್ ಅಭಿಮಾನಿಗಳು ನೆರೆವೇರಿಸಿದ್ದಾರೆ. ಅಂದರೆ ಸೋದರಿಯರಿಗಾಗಿ ಒಂದು ಸುಂದರವಾದ ಮನೆಯನ್ನು ನಿರ್ಮಾಣ ಮಾಡಿದ್ದರು.

    ಇಂದು ಅಂಧ ಗಾಯಕಿಯರ ಮನೆಯ ಗೃಹ ಪ್ರವೇಶ ನೆರೆವೇರಿದೆ. ಜಿಲ್ಲೆಯ ಮಧುಗಿರಿ ತಾಲೂಕಿನ ಡಿ.ವಿ.ಹಳ್ಳಿಯಲ್ಲಿ ಗೃಹಪ್ರವೇಶ ನಡೆದಿದ್ದು, ನಟ ಜಗ್ಗೇಶ್ ದಂಪತಿಯಿಂದ ಉದ್ಘಾಟನೆ ಮಾಡಲಾಗಿದೆ. ಮೊದಲಿಗೆ ಮಧುಗಿರಿಗೆ ಹೋಗುವ ದಾರಿ ಮಧ್ಯೆ ಗೊರವನಹಳ್ಳಿ ದೇವಸ್ಥಾನಕ್ಕೆ ಜಗ್ಗೇಶ್ ದಂಪತಿ ಭೇಟಿ ಕೊಟ್ಟು ಪೂಜೆ ಮಾಡಿಸಿದ್ದರು. ನಂತರ ರಿಬ್ಬನ್ ಕಟ್ ಮಾಡುವ ಮೂಲಕ ಅಂಧ ಗಾಯಕಿಯರ ಚಂದದ ಮನೆಯನ್ನು ನಟ ಜಗ್ಗೇಶ್ ಉದ್ಘಾಟಿಸಿದರು.

     

    ರಿಬ್ಬನ್ ಕಟ್ ಮಾಡಿದ ನಂತರ ಜಗ್ಗೇಶ್ ಗಾಯಕಿ ರತ್ನಮ್ಮರ ಕೈ ಹಿಡಿದುಕೊಂಡು ಬಲಗಾಲಿಡುವಂತೆ ಸೂಚಿಸಿದ್ದಾರೆ. ಜಗ್ಗೇಶ್ ಸೂಚಿಸಿದಂತೆ ರತ್ನಮ್ಮ ಬಲಗಾಲಿಟ್ಟು ಮನೆ ಪ್ರವೇಶ ಮಾಡಿದ್ದಾರೆ. ಜಗ್ಗೇಶ್ ಮತ್ತು ಅವರ ಅಭಿಮಾನಿಗಳು ಅಂಧ ಗಾಯಕಿ ಸಹೋದರಿಯರಿಗಾಗಿ ಡಿ.ವಿ.ಹಳ್ಳಿಯಲ್ಲಿ ಈ ಮನೆಯನ್ನು ನಿರ್ಮಾಣ ಮಾಡಿದ್ದಾರೆ.

  • ಜನ್ಮದಿನದಂದೇ ಅದೃಷ್ಟದ ಮನೆಗೆ ಬಿಎಸ್‍ವೈ ಎಂಟ್ರಿ

    ಜನ್ಮದಿನದಂದೇ ಅದೃಷ್ಟದ ಮನೆಗೆ ಬಿಎಸ್‍ವೈ ಎಂಟ್ರಿ

    -ಕಾವೇರಿಯಲ್ಲಿ ಸಿಎಂ ಗೃಹ ಪ್ರವೇಶ ಪೂಜೆ

    ಬೆಂಗಳೂರು: ಸಿಎಂ ಯಡಿಯೂರಪ್ಪ ಅವರು ತಮ್ಮ 78ನೇ ಹುಟ್ಟುಹಬ್ಬದಂದೇ ಅದೃಷ್ಟದ ಮನೆಗೆ ಕಾಲಿಡುತ್ತಿದ್ದಾರೆ. ಸರ್ಕಾರಿ ಬಂಗಲೆ ತಮ್ಮ ಅದೃಷ್ಟದ ಕಾವೇರಿ ನಿವಾಸಕ್ಕೆ ಯಡಿಯೂರಪ್ಪ ಅವರು ಪೂಜೆ ಮಾಡಿದ್ದಾರೆ.

    ಯಡಿಯೂರಪ್ಪ ಅವರು ಇಂದು ಗೃಹಪ್ರವೇಶ ಪೂಜೆ ಮಾಡಿ ಕೆಲ ದಿನಗಳಲ್ಲಿ ಕಾವೇರಿ ನಿವಾಸಕ್ಕೆ ಶಿಫ್ಟ್ ಆಗಲಿದ್ದಾರೆ. ಇಂದು ಮುಂಜಾನೆಯೇ ಬಿಎಸ್‍ವೈ ಹಾಗೂ ಅವರ ಕುಟುಂಬಸ್ಥರು ಗೃಹ ಪ್ರವೇಶ ಪೂಜೆ ಮಾಡಿದ್ದಾರೆ. ಬಿಜೆಪಿ ಸರ್ಕಾರ ಬಂದರು ಕಾವೇರಿ ನಿವಾಸದಲ್ಲೇ ಮಾಜಿ ಸಿಎಂ ಸಿದ್ದರಾಮಯ್ಯ ವಾಸವಿದ್ದರು. ಸಿದ್ದರಾಮಯ್ಯರ ಮನೆ ಖಾಲಿ ಮಾಡಿದ್ದು, ಇಂದು ಬಿಎಸ್ ವೈ ಕಾವೇರಿಗೆ ಎಂಟ್ರಿ ಕೊಟ್ಟಿದ್ದಾರೆ. ಲಕ್ಕಿ ಮನೆ ಎಂದು ಬಿಎಸ್‍ವೈ ಖುಷಿಖುಷಿಯಾಗಿ ಗೃಹ ಪ್ರವೇಶ ಪೂಜೆ ಮಾಡಿದ್ದಾರೆ.

    ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಇಂದು ಸಂಜೆ ಅರಮನೆ ಮೈದಾನದ ವೈಟ್‍ಪೆಟಲ್ಸ್ ಸಭಾಂಗಣದಲ್ಲಿ ಸಂಜೆ ಸಿಎಂಗೆ ಅಭಿನಂದನಾ ಸಮಾರಂಭ ನಡೆಯಲಿದೆ. ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಸಿಎಂ ಕುಮಾರಸ್ವಾಮಿ ಕೂಡ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಭಾಗಿಯಾಗುವ ನಿರೀಕ್ಷೆ ಇದೆ. ಇನ್ನು ಯಾರೂ ಕೂಡ ಹಾರ-ತುರಾಯಿ, ಕಾಣಿಕೆಗಳನ್ನು ತರಬಾರದು ಎಂದು ಆಪ್ತೇಷ್ಠರಿಗೆ ಟ್ವಿಟರ್ ಮೂಲಕ ಸಿಎಂ ಮನವಿ ಮಾಡಿ, ನಿಮ್ಮ ಪ್ರೀತಿ ಸದಾ ಹೀಗೆಯೇ ಇರಲಿ ಅಭಿಮಾನಿಗಳಿಗೆ ಹೇಳಿದ್ದರು.

  • ಹೆಂಡ್ತಿ ಇದ್ರೂ ಗೃಹ ಪ್ರವೇಶದ ಆಹ್ವಾನ ಪತ್ರಿಕೆಯಲ್ಲಿ ಬೇರೆ ಮಹಿಳೆಯ ಹೆಸ್ರು ಮುದ್ರಣ

    ಹೆಂಡ್ತಿ ಇದ್ರೂ ಗೃಹ ಪ್ರವೇಶದ ಆಹ್ವಾನ ಪತ್ರಿಕೆಯಲ್ಲಿ ಬೇರೆ ಮಹಿಳೆಯ ಹೆಸ್ರು ಮುದ್ರಣ

    – ಮನನೊಂದ ಪತ್ನಿ ಆತ್ಮಹತ್ಯೆಗೆ ಯತ್ನ

    ನೆಲಮಂಗಲ: ಪತ್ನಿ ಇದ್ದರೂ ಗೃಹ ಪ್ರವೇಶದ ಆಹ್ವಾನ ಪತ್ರಿಕೆಯಲ್ಲಿ ಬೇರೆ ಮಹಿಳೆಯ ಹೆಸರು ಮುದ್ರಣ. ಮನನೊಂದ ಪತ್ನಿ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಹೊರವಲಯ ನೆಲಮಂಗಲ ಸಮೀಪದ ಕುದುರೆಗೆರೆ ಗ್ರಾಮದಲ್ಲಿ ನಡೆದಿದೆ.

    ಅನುಸೂಯ ಆತ್ಮಹತ್ಯೆಗೆ ಯತ್ನಿಸಿರುವ ಮಹಿಳೆ. ಸದ್ಯಕ್ಕೆ ಖಾಸಗಿ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತಿದ್ದಾರೆ. ಇತ್ತ ಪತಿ ಸತೀಶ್ ಮೇಲೆ ಬೇರೆ ಮಹಿಳೆಯ ಹೆಸರು ಮುದ್ರಣ ಮಾಡಿರುವ ಆರೋಪ ಇದ್ದು, ಇಂದು ಗೃಹ ಪ್ರವೇಶದ ಮನೆಗೆ ಅನುಸೂಯ ಸಂಬಂಧಿಗಳು ಮುತ್ತಿಗೆ ಹಾಕಿ ತಮ್ಮ ಆಕ್ರೋಶವನ್ನ ವ್ಯಕ್ತಪಡಿಸಿದ್ದಾರೆ.

    20 ವರ್ಷದ ಹಿಂದೆ ಅನುಸೂಯ ಮತ್ತು ಸತೀಶ್ ಮದುವೆಯಾಗಿತ್ತು. ಈ ದಂಪತಿಗೆ ಇಬ್ಬರು ಮಕ್ಕಳು ಕೂಡ ಇದ್ದಾರೆ. ಆದರೆ ಗೃಹ ಪ್ರವೇಶದ ಆಹ್ವಾನ ಪತ್ರಿಕೆಯಲ್ಲಿ ಬೇರೆ ಮಹಿಳೆಯ ಹೆಸರು ಮುದ್ರಣವಾಗಿದ್ದರಿಂದ ಮನನೊಂದ ಪತ್ನಿ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

    ವಿಚಾರ ತಿಳಿದ ಅನುಸೂಯ ಕುಟುಂಬಸ್ಥರು ಮನೆಗೆ ನುಗ್ಗುತಿದ್ದಂತೆ ಸತೀಶ್ ಮನೆಯಿಂದ ನಾಪತ್ತೆಯಾಗಿದ್ದಾನೆ ಎಂದು ಆರೋಪಿಸಿದ್ದಾರೆ. ಪತ್ನಿ ಅನುಸೂಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡಿಯುತ್ತಿದ್ದರೆ, ಇತ್ತ ಪತಿಯ ಮನೆಯಲ್ಲಿ ಭಾರೀ ಭೋಜನ ವ್ಯವಸ್ಥೆಯನ್ನು ಕಂಡು ಕುಟುಂಬಸ್ಥರು ಗರಂ ಆಗಿದ್ದಾರೆ.

    ಕುಟುಂಬಸ್ಥರು ಈ ಕುರಿತು ಪೊಲೀಸರಿಗೆ ದೂರು ನೀಡಿದ್ದು, ಮಗಳಿಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದ್ದಾರೆ. ಸದ್ಯಕ್ಕೆ ಈ ಕುರಿತು ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಅಂಬರೀಶ್ ಕನಸಿನ ಮನೆಯ ಗೃಹಪ್ರವೇಶ

    ಅಂಬರೀಶ್ ಕನಸಿನ ಮನೆಯ ಗೃಹಪ್ರವೇಶ

    ಬೆಂಗಳೂರು: ದಿವಂಗತ ನಟ ಅಂಬರೀಶ್ ಅವರ ಕನಸಿನ ಮನೆಯ ಗೃಹ ಪ್ರವೇಶವನ್ನು ಪತ್ನಿ ಸುಮಲತಾ ಅಂಬರೀಶ್ ಮತ್ತು ಪುತ್ರ ಅಭಿಷೇಕ್ ಅವರು ಸರಳವಾಗಿ ಶುಕ್ರವಾರ ನೆರವೇರಿಸಿದ್ದಾರೆ.

    ಬೆಂಗಳೂರಿನ ಜೆಪಿ ನಗರದ ರೆಬೆಲ್ ಸ್ಟಾರ್ ಅಂಬರೀಶ್ ನಿವಾಸಕ್ಕೆ ಗೃಹ ಪ್ರವೇಶ ಮಾಡಿ ಸುಮಲತಾ ಮತ್ತು ಅಭಿಷೇಕ್ ಹೋಗಿದ್ದಾರೆ. ಅಂಬರೀಶ್ ಅವರು ಬದುಕಿದ್ದಾಗ ಈ ಮನೆಯನ್ನ ಕೆಡವಿ ನವೀಕರಣ ಕಾರ್ಯಕ್ಕೆ ಚಾಲನೆ ಕೊಟ್ಟಿದ್ದರು. ಸುಮಾರು ಮೂರ್ನಾಲ್ಕು ವರ್ಷದಿಂದ ಇಲ್ಲಿ ನವೀಕರಣ ಕೆಲಸ ನಡೆಯುತ್ತಿತ್ತು.

    ಇನ್ನೂ ಸ್ವಲ್ಪ ಕೆಲಸ ಬಾಕಿ ಉಳಿದಿದೆ. ಹೀಗಿರುವಾಗಲೇ ಶುಕ್ರವಾರ ಒಳ್ಳೆಯ ದಿನ ಅನ್ನೋ ಕಾರಣಕ್ಕೆ ಪೂಜೆ ಸಲ್ಲಿಸಿ ಹೊಸ ಮನೆಗೆ ಹೋಗಿದ್ದಾರೆ. ಗೃಹ ಪ್ರವೇಶವನ್ನು ಸರಳವಾಗಿ ಮಾಡಿದ್ದು, ಆಪ್ತರು, ಕುಟುಂಬದ ಸದಸ್ಯರು ಮಾತ್ರ ಪಾಲ್ಗೊಂಡಿದ್ದರು.