Tag: ಗೃಹಲಕ್ಷ್ಮೀ ಯೋಜನೆ

  • ಗೃಹಲಕ್ಷ್ಮೀ ಯೋಜನೆಯ ಹಣದಿಂದ ಗ್ರಂಥಾಲಯ ಸ್ಥಾಪಿಸಿ, ಯುವಜನತೆಗೆ ನೆರವಾದ ಮಹಿಳೆ

    ಗೃಹಲಕ್ಷ್ಮೀ ಯೋಜನೆಯ ಹಣದಿಂದ ಗ್ರಂಥಾಲಯ ಸ್ಥಾಪಿಸಿ, ಯುವಜನತೆಗೆ ನೆರವಾದ ಮಹಿಳೆ

    ಚಿಕ್ಕೋಡಿ: ರಾಜ್ಯ ಕಾಂಗ್ರೆಸ್ (Congress) ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಯ (GruhaLakshmi Scheme) ಹಣದಿಂದ ಬೈಕ್ ಖರೀದಿ, ವ್ಯಾಪಾರ ಆರಂಭ ಸೇರಿದಂತೆ ಅನೇಕರು ಲಾಭ ಪಡೆದಿದ್ದಾರೆ. ಆದರೆ ಇಲ್ಲೋರ್ವ ಮಹಿಳೆ ಗೃಹಲಕ್ಷ್ಮೀ ಯೋಜನೆಯ ಹಣದಿಂದ ಜಿಲ್ಲೆಯ ರಾಯಭಾಗ (Rayabhaga) ತಾಲೂಕಿನ ಮಂಟೂರಿನಲ್ಲಿ ಗ್ರಂಥಾಲಯ ಸ್ಥಾಪಿಸಿ ಮಾದರಿಯಾಗಿದ್ದಾರೆ.

    ಮಂಟೂರು (Manturu) ಗ್ರಾಮದ ನಿವಾಸಿಯಾದ ಮಲ್ಲವ್ವ ಮೇಟಿ, ಮಂಟೂರು ಗ್ರಾಮ ಪಂಚಾಯಿತಿ ಸದಸ್ಯೆಯಾಗಿದ್ದು, ಗೃಹಲಕ್ಷ್ಮೀ ಯೋಜನೆಯ 13 ಕಂತುಗಳ ಹಣದಿಂದ ಚಿಕ್ಕ ಕೋಣೆಯಲ್ಲಿ ಸುಸಜ್ಜಿತವಾಗಿ ಗ್ರಂಥಾಲಯವನ್ನು ನಿರ್ಮಿಸಿದ್ದಾರೆ.ಇದನ್ನೂ ಓದಿ: ದಾಖಲೆ ತೋರಿಸಿದ್ರೆ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜಕೀಯ ಸನ್ಯಾಸತ್ವ ಸ್ವೀಕರಿಸುತ್ತೇನೆ: ಸಿ.ಟಿ ರವಿ

    ಕೇವಲ ಗೃಹಲಕ್ಷ್ಮೀ ಹಣದಿಂದ ಮಾತ್ರವಲ್ಲ, ತಮಗೆ ಬರುವ ಆದಾಯದ ಹಣವನ್ನು ಸೇರಿಸಿ, ಒಂದು ಲಕ್ಷ ರೂ. ಖರ್ಚು ಮಾಡಿ ಗ್ರಂಥಾಲಯ ನಿರ್ಮಿಸಿದ್ದಾರೆ.

    ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗೆ ಧಾರವಾಡ, ಬೆಂಗಳೂರು ನಗರಗಳಿಗೆ ತೆರಳಿ ಗ್ರಾಮೀಣ ಭಾಗದ ಯುವಜನತೆ ಸಾವಿರಾರು ರೂ. ಹಣವನ್ನು ಖರ್ಚು ಮಾಡುತ್ತಾರೆ. ಗ್ರಂಥಾಲಯದಿಂದ ಯುವಜನತೆಗೆ ಹಣದ ಖರ್ಚು ಕಡಿಮೆಯಾಗುತ್ತದೆ ಎನ್ನುವ ಸದುದ್ದೇಶದಿಂದ ಗ್ರಂಥಾಲಯ ಸ್ಥಾಪಿಸಿ ನೆರವಾಗಿದ್ದಾರೆ. ನೆರವಾಗಲು ಸಹಾಯ ಮಾಡಿದ ಸಿಎಂ ಸಿದ್ದರಾಮಯ್ಯ (CM Siddaramaiah) ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar) ಅವರಿಗೆ ಧನ್ಯವಾದ ತಿಳಿಸಿದ್ದಾರೆ.

    ಗ್ರಂಥಾಲಯಕ್ಕೆ ಬರುವ ವಿದ್ಯಾರ್ಥಿಗಳಿಂದ ಯಾವುದೇ ಹಣ ಪಡೆಯದೇ ಉಚಿತವಾಗಿ ಪುಸ್ತಕಗಳನ್ನು ಓದಲು ಅನುಕೂಲ ಮಾಡಿಕೊಟ್ಟಿದ್ದಾರೆ. ಕೇವಲ ಮಲ್ಲವ್ವ ಅವರು ಮಾತ್ರವಲ್ಲದೇ ಅವರ ಕುಟುಂಬದವರು ಕೂಡ ಇದಕ್ಕೆ ಸಹಕಾರಿಯಾಗಿದ್ದಾರೆ.ಇದನ್ನೂ ಓದಿ: ಬಿಷ್ಣೋಯ್‌ ಗ್ಯಾಂಗ್‌ಗೆ ಭಾರತದ ಸರ್ಕಾರಿ ಏಜೆಂಟ್‌ ಜೊತೆ ನಂಟಿದೆ: ಕೆನಡಾ ಪೊಲೀಸರ ಗಂಭೀರ ಆರೋಪ

  • ಇತಿಹಾಸ ಹೇಳಿದ್ರೆ ಕಾಂಗ್ರೆಸ್‌ನವ್ರಿಗೆ ಮೈಯೆಲ್ಲಾ ಉರಿಯುತ್ತೆ, ಜನಕ್ಕೆ ಮೊದಲು ಗ್ಯಾರಂಟಿ ಕೊಡಿ – ಸೂಲಿಬೆಲೆ ತಿರುಗೇಟು

    ಇತಿಹಾಸ ಹೇಳಿದ್ರೆ ಕಾಂಗ್ರೆಸ್‌ನವ್ರಿಗೆ ಮೈಯೆಲ್ಲಾ ಉರಿಯುತ್ತೆ, ಜನಕ್ಕೆ ಮೊದಲು ಗ್ಯಾರಂಟಿ ಕೊಡಿ – ಸೂಲಿಬೆಲೆ ತಿರುಗೇಟು

    ಬೆಂಗಳೂರು: ಕಾಂಗ್ರೆಸ್‌ನವ್ರಿಗೆ (Congress) ರಾಷ್ಟ್ರೀಯವಾದಿಗಳ ಇತಿಹಾಸ ಹೇಳಿದ್ರೆ ಮೈಯೆಲ್ಲಾ ಉರಿಯುತ್ತೆ. ಭಗತ್ ಸಿಂಗ್, ರಾಜ್‌ಗುರು, ಸಾವರ್ಕರ್ ಇತಿಹಾಸ ಕೇಳೋದಿಲ್ಲ. ರಾಷ್ಟ್ರೀಯತೆಯನ್ನ ಕಂಡರೆ ಅವರಿಗೆ ಕೋಪ, ಎಲ್ಲರೂ ಒಂದುಗೂಡುವುದು ಅವರಿಗೆ ಇಷ್ಟವಿಲ್ಲ ಎಂದು ಯುವಬ್ರಿಗೆಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ (Chakravarti Sulibele) ವಾಗ್ದಾಳಿ ನಡೆಸಿದ್ದಾರೆ.

    ಚಕ್ರವರ್ತಿ ಸೂಲಿಬೆಲೆ ಬರೆದಿರೋ ಪಠ್ಯ ತೆಗೆಯುತ್ತೇವೆ ಎಂಬ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಅವರ ಹೇಳಿಕೆಗೆ ಸೂಲಿಬೆಲೆ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಚಕ್ರವರ್ತಿ ಸೂಲಿಬೆಲೆ ಬರೆದಿರೋ ಪಠ್ಯ ತೆಗೆಯುತ್ತೇವೆ: ಪ್ರಿಯಾಂಕ್ ಖರ್ಗೆ

    ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸರ್ಕಾರಕ್ಕೆ ಪಠ್ಯಪುಸ್ತಕದ ಕೆಲಸವೇ ಆದ್ಯತೆಯ ಕೆಲಸ ಅನ್ನೋದು ಅಚ್ಚರಿಯಾಗಿಬಿಟ್ಟಿದೆ. ಪ್ರಿಯಾಂಕ್ ಖರ್ಗೆ ಅವರು ನನ್ನ ವಿದ್ಯಾರ್ಹತೆಯನ್ನ ಪ್ರಶ್ನೆ ಮಾಡಿದ್ದಾರೆ. ಜನ ಏನಾದ್ರೂ ಅವರ ವಿದ್ಯಾರ್ಹತೆ ಪ್ರಶ್ನೆ ಮಾಡಿದ್ರೆ ಕಷ್ಟ ಆಗೋದು ಅವರಿಗೇನೆ. ನನ್ನ ಬಗ್ಗೆ ಮಾತನಾಡದೇ ಇದ್ದರೆ ಒಳ್ಳೆಯದು ಎಂದು ಕುಟುಕಿದ್ದಾರೆ.

    ಪಠ್ಯಪುಸ್ತಕ ಬದಲಾವಣೆ ಮಾಡ್ತಾರೆ ಅನ್ನೋದು ಮುಂಚೆಯೇ ಗೊತ್ತಿತ್ತು. ದೇಶದ ಇತಿಹಾಸ ಮುಚ್ಚಿಡೋದು ಅವರಿಗೆ ಅಭ್ಯಾಸ ಆಗಿದೆ. ಸಿಖ್ಖರ ಹತ್ಯಾಕಾಂಡ, ತುರ್ತು ಪರಿಸ್ಥಿತಿ ಸಮಯದಲ್ಲಿ ಏನಾಯ್ತು? ಅದೆಲ್ಲವನ್ನ ಮುಚ್ಚಿಟ್ಟಿದ್ದಾರೆ. ಇತಿಹಾಸವನ್ನ ಮುಚ್ಚಿಟ್ಟು ಅದರ ಮೇಲೆ ಕೂತಿದ್ದಾರೆ. ರಾಷ್ಟ್ರೀಯವಾದಿಗಳ ಇತಿಹಾಸ ಹೇಳಿದ್ರೆ ಅವರಿಗೆ ಮೈಯೆಲ್ಲಾ ಉರಿಯುತ್ತೆ. ರಾಷ್ಟ್ರೀಯತೆ ಕಂಡರೆ ಅವರಿಗೆ ಕೋಪ, ಎಲ್ಲರೂ ಒಂದುಗೂಡುವುದು ಅವರಿಗೆ ಇಷ್ಟವಿಲ್ಲ ಎಂದು ಕಿಡಿ ಕಾರಿದ್ದಾರೆ. ಇದನ್ನೂ ಓದಿ: ವಿದ್ಯುತ್ ಸಂಪರ್ಕ ನೀಡಲು 2 ಲಕ್ಷ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದ ಎಇಇ

    ಮುಂದುವರಿದು, ನೀವು ಪಠ್ಯವನ್ನಾದರೂ ಬದಲಾವಣೆ ಮಾಡಿ ಪಾಠವನ್ನಾದರೂ ಮಾಡಿ, ಆದ್ರೆ ಮೊದಲು ಹೇಳಿರುವ ಗ್ಯಾರಂಟಿಗಳನ್ನ ಕೊಡಿ. ಮಕ್ಕಳು ಓದಲು 200 ಯೂನಿಟ್ ಕರೆಂಟ್ ಫ್ರೀ ಕೊಡಿ, ಮಗುವಿನ ತಾಯಿಗೆ 2,000 ಸಾವಿರ ರೂ. ಕೊಡಿ, ಮಗುವಿನ ಟೀಚರ್‌ಗೆ ಬಸ್ ಫ್ರೀ ಮಾಡಿ, ನೀವು ಹೇಳಿದ್ದ ಗ್ಯಾರೆಂಟಿಗಳನ್ನ ಯಾವುದೇ ಕಂಡಿಷನ್ ಇಲ್ಲದೇ ಜಾರಿಗೆ ತನ್ನಿ ಎಂದು ಒತ್ತಾಯಿಸಿದ್ದಾರೆ.

  • ಚಕ್ರವರ್ತಿ ಸೂಲಿಬೆಲೆ ಬರೆದಿರೋ ಪಠ್ಯ ತೆಗೆಯುತ್ತೇವೆ: ಪ್ರಿಯಾಂಕ್ ಖರ್ಗೆ

    ಚಕ್ರವರ್ತಿ ಸೂಲಿಬೆಲೆ ಬರೆದಿರೋ ಪಠ್ಯ ತೆಗೆಯುತ್ತೇವೆ: ಪ್ರಿಯಾಂಕ್ ಖರ್ಗೆ

    ಬೆಂಗಳೂರು: ಚಕ್ರವರ್ತಿ ಸೂಲಿಬೆಲೆ (Chakravarti Sulibele) ಬರೆದಿರುವ ಪಠ್ಯ ತೆಗೆಯುತ್ತೇವೆ ಎಂದು ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಸ್ಪಷ್ಟನೆ ನೀಡಿದ್ದಾರೆ.

    ಬಿಜೆಪಿ (BJP) ಅವಧಿಯ ಪಠ್ಯ ಪರಿಷ್ಕರಣೆ (Text Book Revision) ವಿಚಾರವಾಗಿ ಬೆಂಗಳೂರಿನಲ್ಲಿ (Bengaluru) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಚಕ್ರವರ್ತಿ ಸೂಲಿಬೆಲೆ ಬರೆದಿರುವ ಪಠ್ಯ ಓದಿಲ್ಲ. ಆದರೂ ಅವರು ಬರೆದಿರುವ ಪಠ್ಯ ನಮ್ಮ ಮಕ್ಕಳು ಓದುವುದು ಬೇಡ. ಯಾವ ಆಧಾರದಲ್ಲಿ ಚಕ್ರವರ್ತಿ ಸೂಲಿಬೆಲೆ ಅವರ ಪಾಠ ಪುಸ್ತಕದಲ್ಲಿ ಸೇರ್ಪಡೆ ಮಾಡಿದ್ದಾರೆ? ಅವರು ಪಿಹೆಚ್‌ಡಿ ಮಾಡಿದ್ದಾರಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ವಿದ್ಯುತ್ ಸಂಪರ್ಕ ನೀಡಲು 2 ಲಕ್ಷ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದ ಎಇಇ

    ಬಾಡಿಗೆ ಭಾಷಣಕಾರರನ್ನೆಲ್ಲ ನೀವು ಲೇಖಕರು, ಸಾಹಿತಿಗಳು ಮಾಡಿದ್ದೀರಿ. ಅದನ್ನು ನಮ್ಮ ಮಕ್ಕಳು ಓದಬೇಕಾ? ಕರ್ನಾಟಕ ಸಾಹಿತ್ಯಕ್ಕೆ ಅಷ್ಟು ಬರ ಬಂದಿದೆಯಾ? ಯಾರು ಇವರೆಲ್ಲಾ? ವಾಟ್ಸಪ್ ಯೂನಿವರ್ಸಿಟಿಯಲ್ಲಿ ಓದೋರುವವರು ಇವರು. ಅವರೆಲ್ಲಾ ಪಠ್ಯ ರಚನೆ ಮಾಡಲು ಪ್ರಾರಂಭಿಸಿದ್ದಾರೆ. ಅಂತಹ ಪಾಠ ನಮ್ಮ ಮಕ್ಕಳು ಕಲಿತರೆ ನಮ್ಮ ಮಕ್ಕಳ ಭವಿಷ್ಯ ಏನಾಗಬೇಕು ಎಂದು ಸೂಲಿಬೆಲೆ ವಿರುದ್ಧ ಕಿಡಿಕಾರಿದರು. ಇದನ್ನೂ ಓದಿ: ಸಿದ್ದು ಪ್ರಮಾಣವಚನ ವೇಳೆ ವೇದಿಕೆಯಲ್ಲಿ ಕ್ರಿಮಿನಲ್‌ ಹಿನ್ನಲೆಯುಳ್ಳ ವ್ಯಕ್ತಿ – ತನಿಖೆಗೆ ರಾಜ್ಯಪಾಲರ ಪತ್ರ

    ಚಕ್ರವರ್ತಿ ಸೂಲಿಬೆಲೆಯವರು ಭಗತ್‌ಸಿಂಗ್, ಸುಖದೇವ್ ಅವರ ಬಗ್ಗೆ ಬರೆದಿರುವುದು ಎಂಬ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಭಗತ್ ಸಿಂಗ್ ಬಗ್ಗೆ ಅಪಾರವಾದ ಗೌರವವಿದೆ. ಅವರ ನಿಜವಾದ ಇತಿಹಾಸ ನಾವು ಹೇಳುತ್ತೇವೆ. ನಾನು ನಾಸ್ತಿಕ ಏಕೆ ಆಗಿದ್ದೇನೆ ಎಂಬ ಭಗತ್ ಸಿಂಗ್ ಪುಸ್ತಕವಿದೆ. ಅದನ್ನು ಚಕ್ರವರ್ತಿ ಸೂಲಿಬೆಲೆ ಓದಲಿ ಸಾಕು. ಇತಿಹಾಸ ತಿರುಚಿಲ್ಲದ ಪಾಠ ನಾವು ಇಡುತ್ತೇವೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಅತ್ತೆ, ಸೊಸೆ ಇಬ್ಬರಿಗೂ ಎರಡು ಸಾವಿರ ಹಣ ನೀಡಿ: ರೇಣುಕಾಚಾರ್ಯ

    ಚಕ್ರವರ್ತಿಗಿಂತ ಒಳ್ಳೆಯ ಸಾಹಿತಿಗಳು ನಮ್ಮಲ್ಲಿ ಇಲ್ಲವಾ? ಚಕ್ರವರ್ತಿ ಸೂಲಿಬೆಲೆ ವಾಸ್ತವ ಹೇಳುವ ವ್ಯಕ್ತಿ ಅಲ್ಲ. ಅವರು ಬರೆದಿರುವ ಪಠ್ಯ ನಾನು ಯಾಕೆ ಓದಲಿ? ನನಗೆ ಓದೋಕೆ ಸಾಕಷ್ಟಿದೆ. ಅವರು ಬರೆದಿರುವ ಪಠ್ಯ ನಾನು ಓದಿಲ್ಲ. ಚಕ್ರವರ್ತಿ ಸೂಲಿಬೆಲೆ ಪಾಠ ನಮ್ಮ ಜನರಿಗೆ, ಮಕ್ಕಳಿಗೆ ಅಗತ್ಯವಿಲ್ಲ. ಯಾವುದು ಕೇಸರೀಕರಣವಿದೆ. ಯಾವುದು ಸತ್ಯ ಅಲ್ಲ ಅದೆಲ್ಲವನ್ನೂ ತೆಗೆಯುತ್ತೇವೆ ಎಂದರು.  ಇದನ್ನೂ ಓದಿ: ಲಂಚ ತೆಗೆದುಕೊಳ್ಳುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪೊಲೀಸರು – ತಪ್ಪಾಯ್ತು ಬಿಟ್ಬಿಡಿ ಅಣ್ಣಾ ಎಂದು ಸಾರ್ವಜನಿಕರಲ್ಲಿ ಕ್ಷಮೆ

    ಸಾಹಿತಿಗಳ ಹಿನ್ನೆಲೆ ಇಲ್ಲದೇ ಬರೆದವರ ಪಠ್ಯ ಯಾಕೆ ಓದಬೇಕು? ಆಡಳಿತ ಪಕ್ಷಕ್ಕೆ ಹತ್ತಿರದವರಾಗಿದ್ದೆ ಎಂದು ಪಠ್ಯ ಹಾಕುವುದು ಸರಿನಾ? ನಾವು ಅದರ ವಿರುದ್ಧ ಇದ್ದೇವೆ. ನಮ್ಮ ಮಕ್ಕಳು ವಾಟ್ಸಪ್ ಯೂನಿವರ್ಸಿಟಿ ಓದಬೇಕಾ ಅಥವಾ ಒಳ್ಳೆಯ ಯೂನಿವರ್ಸಿಟಿ ಓದಬೇಕಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಟಿಕೆಟ್.. ಟಿಕೆಟ್.. ಟಿಕೆಟ್.. – ಸರ್ಕಾರಿ ಬಸ್ ಕಂಡಕ್ಟರ್ ಆಗಲಿದ್ದಾರೆ ಸಿಎಂ ಸಿದ್ದು!

    ಗೃಹಲಕ್ಷ್ಮೀ (Gruhalakshmi) ವಿಚಾರದಲ್ಲಿ ಮಕ್ಕಳು ತೆರಿಗೆ ಕಟ್ಟಿದರೆ ಯೋಜನೆ ಅನ್ವಯ ಆಗಲ್ಲ ಎಂಬ ನಿಯಮ ಕುರಿತು ಮಾತನಾಡಿದ ಅವರು, ಮಾರ್ಗಸೂಚಿಗಳು ಈಗ ಕ್ಲಿಯರ್ ಆಗಿವೆ. ಟ್ಯಾಕ್ಸ್ ಕಟ್ಟೋರು, ಜಿಎಸ್‌ಟಿ ಕಟ್ಟುವವರಿಗೆ ಯೋಜನೆ ಅನ್ವಯ ಆಗಲ್ಲ ಎಂದು ಹೇಳಿದ್ದೇವೆ. ಆ ನಿಯಮ ಸರಿಯಾಗಿಯೇ ಇದೆ. ಮುಂಚೆಯೂ ನಾವು ಹೇಳಿದ್ದೆವು. ಸಮಾಜದ ಕಟ್ಟ ಕಡೆಯ ಮನುಷ್ಯನನ್ನು ಸಮಾಜದ ಮುಖ್ಯವಾಹಿನಿಗೆ ತರೋದು ನಮ್ಮ ಸರ್ಕಾರದ ಮೂಲ ಉದ್ದೇಶ. ಫೇಸ್ 1ರಲ್ಲಿ ಈಗ ಇರುವ ನಿಯಮವೇ ಅಂತಿಮ. ಫೇಸ್ 2ರಲ್ಲಿ ಇದೆಲ್ಲವನ್ನೂ ಮುಂದೆ ನೋಡೋಣ ಎಂದು ಕಾಂಗ್ರೆಸ್ (Congress) ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡರು. ಇದನ್ನೂ ಓದಿ: ಕಾಂಗ್ರೆಸ್ ಗ್ಯಾರಂಟಿಗಳಿಂದಲೇ ನಮಗೆ ಸೋಲು – ಬಿಜೆಪಿ ಆತ್ಮಾವಲೋಕನ ಸಭೆಯಲ್ಲಿ ಏನಾಯ್ತು?

  • ಅತ್ತೆ, ಸೊಸೆ ಇಬ್ಬರಿಗೂ ಎರಡು ಸಾವಿರ ಹಣ ನೀಡಿ: ರೇಣುಕಾಚಾರ್ಯ

    ಅತ್ತೆ, ಸೊಸೆ ಇಬ್ಬರಿಗೂ ಎರಡು ಸಾವಿರ ಹಣ ನೀಡಿ: ರೇಣುಕಾಚಾರ್ಯ

    ದಾವಣಗೆರೆ: ಅತ್ತೆ ಹಾಗೂ ಸೊಸೆ ಇಬ್ಬರಿಗೂ ಎರಡು ಸಾವಿರ ಹಣ ನೀಡಿ. ಇದು ಮನೆಯಲ್ಲಿ ಜಗಳ ತಂದಿಡಲು ಮಾಡಿದ ಯೋಜನೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ (M.P.Renukacharya) ಕಾಂಗ್ರೆಸ್ (Congress) ವಿರುದ್ಧ ಕಿಡಿಕಾರಿದ್ದಾರೆ.

    ದಿನ ಬೆಳಗಾದರೆ ರೇಣುಕಾಚಾರ್ಯ ಅವರು ಹಳ್ಳಿ ಹಳ್ಳಿ ಸುತ್ತಿ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ವಿರುದ್ಧ ಜನ ಜಾಗೃತಿಗೆ ಮುಂದಾಗಿದ್ದಾರೆ. ಅದೇ ರೀತಿ ಜಿಲ್ಲೆಯ ಹೊನ್ನಾಳಿ (Honnali) ತಾಲೂಕಿನ ಕುರವ ಹಳೆದಿಬ್ಬ ಗ್ರಾಮಗಳಿಗೆ ತೆರಳಿ ಮಹಿಳೆಯರಿಗೆ ಗ್ಯಾರಂಟಿ ಯೋಜನೆ (Guarantee Scheme) ಬಗ್ಗೆ ಜಾಗೃತಿ ಮೂಡಿಸಿದ್ದಾರೆ. ಇದನ್ನೂ ಓದಿ: ಟಿಕೆಟ್.. ಟಿಕೆಟ್.. ಟಿಕೆಟ್.. – ಸರ್ಕಾರಿ ಬಸ್ ಕಂಡಕ್ಟರ್ ಆಗಲಿದ್ದಾರೆ ಸಿಎಂ ಸಿದ್ದು!

    ಈ ಸಂದರ್ಭ ಮಾತನಾಡಿದ ಅವರು, ಅತ್ತೆ ಹಾಗೂ ಸೊಸೆ ಇಬ್ಬರಿಗೂ ಎರಡು ಸಾವಿರ ಹಣ ನೀಡಿ. ಕಾಂಗ್ರೆಸ್‌ನವರು ದಿನಕ್ಕೊಂದು ನಿಬಂಧನೆ ಹಾಕುತ್ತಿದ್ದಾರೆ. ಈ ಹಿಂದೆ ಎಲ್ಲರಿಗೂ ಸೌಲಭ್ಯ ಎಂದರು. ಈಗ ಆದಾಯ ತೆರಿಗೆ ಕಟ್ಟುವವರಿಗೆ ಇಲ್ಲಾ ಎನ್ನುತ್ತಿದ್ದಾರೆ. ಇದು ಮನೆ ಮನೆಯಲ್ಲಿ ಜಗಳ ತಂದಿಡುವ ಕೆಲಸ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಲಂಚ ತೆಗೆದುಕೊಳ್ಳುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪೊಲೀಸರು – ತಪ್ಪಾಯ್ತು ಬಿಟ್ಬಿಡಿ ಅಣ್ಣಾ ಎಂದು ಸಾರ್ವಜನಿಕರಲ್ಲಿ ಕ್ಷಮೆ