Tag: ಗೃಹಪ್ರವೇಶ

  • ದಕ್ಷಿಣ ಕನ್ನಡದ ಪುಣ್ಯಕ್ಷೇತ್ರಗಳಿಗೆ ನಟ ದರ್ಶನ್ ಭೇಟಿ

    ದಕ್ಷಿಣ ಕನ್ನಡದ ಪುಣ್ಯಕ್ಷೇತ್ರಗಳಿಗೆ ನಟ ದರ್ಶನ್ ಭೇಟಿ

    ಮಂಗಳೂರು: ಸ್ಯಾಂಡಲ್‍ವುಡ್ ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಅವರು ದಕ್ಷಿಣ ಕನ್ನಡ ಜಿಲ್ಲೆಯ ಹಲವು ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.

    ದರ್ಶನ್ ಅವರು ಪುತ್ತೂರಿನ ಸ್ನೇಹಿತರೊಬ್ಬರ ಗೃಹಪ್ರವೇಶ ಕಾರ್ಯಕ್ರಮಕ್ಕೆ ಬಂದಿದ್ದರು. ಗೃಹಪ್ರವೇಶ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ದರ್ಶನ್ ಪುತ್ತೂರಿನ ಇತಿಹಾಸ ಪ್ರಸಿದ್ಧ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.

    ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ನಂತರ ಸೌತಡ್ಕ ಮಹಾಗಣಪತಿ ದೇವಸ್ಥಾನ ಹಾಗೂ ಧರ್ಮಸ್ಥಳ ಮಂಜುನಾಥೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಸೌತಡ್ಕ ಹಾಗೂ ಧರ್ಮಸ್ಥಳ ದೇವಸ್ಥಾನಕ್ಕೆ ಭೇಟಿ ಕೊಟ್ಟ ಬಳಿಕ ದರ್ಶನ್ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೂ ಭೇಟಿ ನೀಡಿ ಸುಬ್ರಹ್ಮಣ್ಯನ ಅನುಗ್ರಹ ಪಡೆದರು.

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜೊತೆಗೆ ಅವರ ಆಪ್ತ ವರ್ಗವೂ ಭಾಗಿಯಾಗಿತ್ತು. ಇದೇ ವೇಳೆ ಅಭಿಮಾನಿಗಳು ನಟ ದರ್ಶನ್ ಅವರನ್ನು ನೋಡಿ ಸಂತಸಪಟ್ಟಿದ್ದಾರೆ.

  • ಚುನಾವಣೆ ನಂತ್ರ ಪ್ರಥಮ ಬಾರಿಗೆ ಮಂಡ್ಯಕ್ಕೆ ಆಗಮಿಸಲಿದ್ದಾರೆ ಯಶ್

    ಚುನಾವಣೆ ನಂತ್ರ ಪ್ರಥಮ ಬಾರಿಗೆ ಮಂಡ್ಯಕ್ಕೆ ಆಗಮಿಸಲಿದ್ದಾರೆ ಯಶ್

    ಮಂಡ್ಯ: ಲೋಕಸಭಾ ಚುನಾವಣೆ ನಂತರ ರಾಕಿಂಗ್ ಸ್ಟಾರ್ ಯಶ್ ಮೊದಲ ಬಾರಿಗೆ ಮಂಡ್ಯಗೆ ಆಗಮಿಸಲಿದ್ದಾರೆ.

    ಯಶ್ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕೆರೆಮೇಗಳದೊಡ್ಡಿ ಗ್ರಾಮಕ್ಕೆ ಆಗಮಿಸುತ್ತಿದ್ದಾರೆ. ಇಂದು ಮಧ್ಯಾಹ್ನ 2 ಗಂಟೆಗೆ ಅಭಿಮಾನಿಯೊಬ್ಬರ ಮನೆಯ ಗೃಹಪ್ರವೇಶ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಯಶ್ ಆಗಮಿಸಲಿದ್ದಾರೆ ಎಂದು ಉಚ್ಚಾಟಿತ ಕೆಪಿಸಿಸಿ ಸದಸ್ಯ, ಸುಮಲತಾ ಬೆಂಬಲಿಗ ಇಂಡವಾಳು ಸಚ್ಚಿದಾನಂದ ಹೇಳಿದ್ದಾರೆ.

    ಚುನಾವಣೆ ಮುಗಿದ ಬಳಿಕ ಯಶ್ ಹಾಗೂ ದರ್ಶನ್ ಮಂಡ್ಯಕ್ಕೆ ಬರುವುದಿಲ್ಲ ಎಂದು ಜೆಡಿಎಸ್ ನಾಯಕರು ಹೇಳುತ್ತಿದ್ದರು. ಇದೀಗ ಅಭಿಮಾನಿಯ ಮನೆಯ ಗೃಹ ಪ್ರವೇಶಕ್ಕೆ ಯಶ್ ಆಗಮಿಸುತ್ತಿದ್ದಾರೆ. ಅದೇ ರೀತಿ ಮಂಡ್ಯ ಜನರ ಕಷ್ಟ ಹಾಗೂ ಸುಖಗಳಿಗೆ ಯಶ್ ಹಾಗೂ ದರ್ಶನ್ ಸ್ಪಂದಿಸುತ್ತಾರೆ. ತಮ್ಮ ಕೆಲಸದ ನಡುವೆ ಬಿಡುವಾದಾಗ ಯಶ್ ಹಾಗೂ ದರ್ಶನ್ ಮಂಡ್ಯಕ್ಕೆ ಬರುತ್ತಾರೆ. ಇಲ್ಲಿಯ ಜನರ ಜೊತೆ ಇರುತ್ತಾರೆ ಎಂದು ಸಚ್ಚಿದಾನಂದ ತಿಳಿಸಿದ್ದಾರೆ.

    ಸದ್ಯ ಯಶ್ ಆಗಮನದ ಹಿನ್ನೆಲೆಯಲ್ಲಿ ಸಚ್ಚಿದಾನಂದ ಅವರ ನೇತೃತ್ವದಲ್ಲಿ ಅದ್ಧೂರಿ ಸ್ವಾಗತಕ್ಕೆ ಬೆಸಗರಹಳ್ಳಿಯಲ್ಲಿ ಸಿದ್ಧತೆ ನಡೆಯುತ್ತಿದೆ.

  • ಗೇಟಿಗೆ ಬೀಗ ಹಾಕಿ ಸರ್ಕಾರಿ ನಿವಾಸದ ಗೃಹಪ್ರವೇಶ ನಡೆಸಿದ ರೇವಣ್ಣ!

    ಗೇಟಿಗೆ ಬೀಗ ಹಾಕಿ ಸರ್ಕಾರಿ ನಿವಾಸದ ಗೃಹಪ್ರವೇಶ ನಡೆಸಿದ ರೇವಣ್ಣ!

    ಬೆಂಗಳೂರು: ನಗರದ ಶಿವಾನಂದ ಸರ್ಕಲ್ ಬಳಿಯಿರುವ ಸರ್ಕಾರಿ ಬಂಗಲೆ ಗೇಟಿಗೆ ಬೀಗ ಹಾಕಿ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಗೃಹಪ್ರವೇಶವನ್ನು ನೆರವೇರಿಸಿದ್ದಾರೆ.

    ನವೀಕರಣದಿಂದಲೇ ಸುದ್ದಿಯಾಗಿದ್ದ ರೇವಣ್ಣರ ಸರ್ಕಾರಿ ಬಂಗಲೆಗೆ ಗೃಹ ಪ್ರವೇಶದ ಭಾಗ್ಯ ಸಿಕ್ಕಿದ್ದು, ಶ್ರಾವಣ ಮಾಸದ ಮೊದಲ ಸೋಮವಾರದ ದಿನದಂದು ಗೃಹಪ್ರವೇಶ ನೆರವೇರಿಸಿದ್ದಾರೆ. ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ದೇವೇಗೌಡರು, ತಾಯಿ ಚೆನ್ನಮ್ಮ ಸೇರಿದಂತೆ ಇಡೀ ದೇವೇಗೌಡರ ಕುಟುಂಬವೇ ಆಗಮಿಸಿತ್ತು. ಸರ್ಕಾರಿ ಬಂಗಲೆಯಲ್ಲಿ ವಿಶೇಷ ಪೂಜೆ, ಹೋಮ, ಹವನ ನಡೆಸಿ ಶಾಸ್ತ್ರೋಕ್ತವಾಗಿ ಗೃಹ ಪ್ರವೇಶ ಮಾಡಲಾಯಿತು.

    ಮಾಧ್ಯಮಗಳಿಗೆ ಪ್ರವೇಶ ನಿರಾಕರಿಸುವ ಉದ್ದೇಶದಿಂದ ಗೇಟ್‍ಗೆ ಬೀಗ ಹಾಕಿದ್ದಾರೆಂದು ಹೇಳಲಾಗಿದ್ದು, ಗೃಹಪ್ರವೇಶಕ್ಕೆ ಬಂದಿದ್ದ ಪಕ್ಷದ ಯಾವೊಬ್ಬ ಮುಖಂಡರುಗಳು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡದೆ ಸ್ಥಳದಿಂದ ತೆರಳಿದರು.

    ಗೃಹಪ್ರವೇಶ ಕಾರ್ಯಕ್ರಮಕ್ಕೆ ಸಚಿವ ಬಂಡೆಪ್ಪ ಕಾಶಂಪುರ್, ಮಾಜಿ ಶಾಸಕ ಕೋನರೆಡ್ಡಿ, ಪರಿಷತ್ ಸದಸ್ಯ ಶರವಣ, ರಾಜ್ಯ ಸಭಾ ಸದಸ್ಯ ಕುಪ್ಪೇಂದ್ರರೆಡ್ಡಿ, ಮಾಜಿ ಸಚಿವ ರೇವುನಾಯಕ್ ಬೆಳಮಗಿ ಆಗಮಿಸಿದ್ದರು. ಅಲ್ಲದೇ ಶಾಲಿನಿ ರಜನೀಶ್, ರಜನೀಶ್ ಗೋಯಲ್, ನಾಗಲಾಂಭಿಕ ದೇವಿ, ಆರ್.ಪಿ.ಶರ್ಮಾ ಹಾಗೂ ಚಂದ್ರಗುಪ್ತ ಸೇರಿದಂತೆ ಹಿರಿಯ ಐಎಎಸ್, ಐಪಿಎಸ್ ಅಧಿಕಾರಿಗಳ ದಂಡೆ ಆಗಮಿಸಿತ್ತು.

    ಗೃಹಪ್ರವೇಶ ಕಾರ್ಯಕ್ರಮದಿಂದ ತೆರಳುವಾಗ ಮಾತನಾಡಿದ ಮಾಜಿ ಪ್ರಧಾನಿ ದೇವೇಗೌಡರು, ಕೇರಳ ಪ್ರವಾಹ ಹಾಗೂ ಕೊಡಗು ಮಹಾ ಮಳೆ ಸಂತ್ರಸ್ಥರಿಗೆ ನನ್ನ ಒಂದೊಂದು ತಿಂಗಳ ಸಂಬಳ ಕೊಡಲು ನಿರ್ಧರಿಸಿದ್ದೇನೆ. ಪ್ರವಾಹ ಪರಿಸ್ಥಿತಿಯ ಕುರಿತು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಸಂಪರ್ಕದಲ್ಲಿದೆ. ಕುಮಾರಸ್ವಾಮಿಯವರನ್ನು ಈಗಾಗಲೇ ರಾಷ್ಟ್ರಪತಿ ಹಾಗೂ ಪ್ರಧಾನಮಂತ್ರಿಗಳು ಸಂಪರ್ಕ ಮಾಡಿ ಮಾಹಿತಿ ಪಡೆದುಕೊಂಡಿದ್ದಾರೆ. ಸುಮಾರು 9 ಸಾವಿರ ಕೋಟಿ ರೂ. ನಷ್ಟವಾಗಿದೆ ಎಂದು ಹೇಳುತ್ತಿದ್ದಾರೆ ಎಂದು ತಿಳಿಸಿದರು.

    ನನಗೆ ನಡೆಯಲು ಸಾಧ್ಯವಾಗುತ್ತಿಲ್ಲ, ನಾನು ಚಿಕಿತ್ಸೆ ಪಡೆಯುತ್ತಿದ್ದೇನೆ. ಹೀಗಾಗಿ 5 ದಿನಗಳ ನಂತರ ಸ್ಥಳ ಪರಿಶೀಲನೆ ಮಾಡುತ್ತೇನೆ. ಕೊಡಗು ಜನತೆಗೆ ಪರಿಹಾರ ಕಲ್ಪಿಸುವಲ್ಲಿ ಸರ್ಕಾರ ಹಿಂದೆ ಬಿದ್ದಿಲ್ಲ. ಕೇಂದ್ರದಿಂದ ಹೆಚ್ಚಿನ ಅನುದಾನಕ್ಕೆ ನಾವು ಒತ್ತಾಯ ಮಾಡುತ್ತೇವೆ ಎಂದರು.

    ಈ ವೇಳೆ ಮಾಧ್ಯಮಗಳು ಸಚಿವ ರೇವಣ್ಣ ನಿರಾಶ್ರಿತರಿಗೆ ಬಿಸ್ಕೆಟ್ ಎಸೆದ ವಿಚಾರ ಪ್ರಸ್ತಾಪಿಸಿದಾಗ, ಈ ಕುರಿತು ನಿರಾಕರಿಸಿದ ದೇವೇಗೌಡರು, ಯಾಕಪ್ಪ ಅದಕ್ಕೆಲ್ಲಾ ಉತ್ತರ ಕೊಡಬೇಕು ಹೇಳಿ ಅಲ್ಲಿಂದ ತೆರಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಧ್ವಜಾರೋಹಣ ಮಾಡಿ ಹೊಸ ಮನೆಗೆ ಎಂಟ್ರಿ ಕೊಟ್ಟ ಹುಬ್ಬಳ್ಳಿ ದಂಪತಿ!

    ಧ್ವಜಾರೋಹಣ ಮಾಡಿ ಹೊಸ ಮನೆಗೆ ಎಂಟ್ರಿ ಕೊಟ್ಟ ಹುಬ್ಬಳ್ಳಿ ದಂಪತಿ!

    ಹುಬ್ಬಳ್ಳಿ: ಇಲ್ಲಿನ ದಂಪತಿ ತಾವು ದುಡಿದು ಕಟ್ಟಿದ ಮನೆಯ ಗೃಹಪ್ರವೇಶವನ್ನು ಧ್ವಜಾರೋಹಣ ಮಾಡೋ ಮೂಲಕ ದೇಶಪ್ರೇಮ ಮೆರೆದಿದ್ದಾರೆ.

    ಸಾಯಿನಗರದ ಮಲ್ಲಪ್ಪ ತಡಸದ್ ದಂಪತಿ ಸ್ವಾತಂತ್ರ್ಯ ದಿನಾಚರಣೆಯಂದೇ ಗೃಹ ಪ್ರವೇಶ ಮಾಡಿದ್ರು. ಕುಂಬಳಕಾಯಿ, ಹೋಮ-ಹವನ ಅಂತ ಮೌಢ್ಯಕ್ಕೆ ದಾಸರಾಗದೇ ದೇಶಪ್ರೇಮ ತೋರಿದ್ದಾರೆ. ಸರಳವಾಗಿ, ಸುಂದರವಾಗಿ ಮನೆಕಟ್ಟಿದ್ದಲ್ಲದೇ ಅಷ್ಟೇ ಸರಳತೆಯಿಂದಲೇ ಹೊಸ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.

    ಸ್ವಾತಂತ್ರ್ಯಕ್ಕಾಗಿ ತ್ಯಾಗ-ಬಲಿದಾನ ಮಾಡಿದ ಮಹಾಪುರುಷರನ್ನ ನೆನೆಯಬೇಕಿದೆ. ಅಷ್ಟೇ ಅಲ್ಲ, ಇದು ಮುಂದಿನ ಪೀಳಿಗೆ ಮಹಾನ್ ಪುರುಷರ ಜೀವನಗಾಥೆ ಅರಿಯುವಂತಾಗಲಿ ಅನ್ನೋ ಆಶಯವನ್ನು ದಂಪತಿ ಹೊಂದಿದ್ದಾರೆ. ಮಂತ್ರ-ತಂತ್ರ ಹೋಮ ಹವನದ ಬದಲಾಗಿ ಧ್ವಜಾರೋಹಣದ ಬಳಿಕ ರಾಷ್ಟ್ರಗೀತೆ ಹಾಡಿರೋದೇ ಈ ಮನೆಗೆ ಮಂಗಳಕರ ಅಂತ ನಂಬಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನನ್ನ ಮನೆಯಲ್ಲ ಇದು ಬಿಜೆಪಿ ಕಾರ್ಯಕರ್ತರ ಮನೆ- ವರುಣಾದಲ್ಲಿ ಬಿಎಸ್‍ವೈ ಪುತ್ರ ವಿಜಯೇಂದ್ರ ಗೃಹ ಪ್ರವೇಶ

    ನನ್ನ ಮನೆಯಲ್ಲ ಇದು ಬಿಜೆಪಿ ಕಾರ್ಯಕರ್ತರ ಮನೆ- ವರುಣಾದಲ್ಲಿ ಬಿಎಸ್‍ವೈ ಪುತ್ರ ವಿಜಯೇಂದ್ರ ಗೃಹ ಪ್ರವೇಶ

    ಮೈಸೂರು: ವರುಣಾ ಕ್ಷೇತ್ರದಿಂದ ಬಿಜೆಪಿಯ ಸಂಭಾವ್ಯ ಅಭ್ಯರ್ಥಿ ಬಿಎಸ್ ಯಡಿಯೂರಪ್ಪ ಪುತ್ರ ವಿಜಯೇಂದ್ರ ತಾಲೂಕಿನ ವರುಣಾ ಗ್ರಾಮದಲ್ಲಿ ವಾಸಕ್ಕಾಗಿ ಪಡೆದಿರುವ ಮನೆಯ ಗೃಹಪ್ರವೇಶ ಇಂದು ನೆರವೇರಿತು.

    ಕುಟುಂಬ ಸಮೇತರಾಗಿ ವಿಜಯೇಂದ್ರ ಹೋಮ ಹವನ ನಡೆಸಿ ಗೃಹಪ್ರವೇಶ ಮಾಡಿದರು. ಹೋಮಕುಂಡ ಪೂಜೆಯಲ್ಲಿ ವಿಜಯೇಂದ್ರ ಮತ್ತು ಅವರ ಪತ್ನಿ ಪ್ರೇಮ ಭಾಗಿಯಾಗಿದ್ದರು. ಗಣಹೋಮ, ವಿಜಯೀ ಹೋಮಗಳನ್ನ ನೆರವೇರಿಸಿ, ಕುಲದೇವ ಯಡಿಯೂರು ಸಿದ್ದಲಿಂಗಶ್ವೇರ, ಉಮಾಮಹೇಶ್ವರಿ, ಕ್ಷೇತ್ರದ ಅಧಿದೇವ ಬಸವೇಶ್ವರರಿಗೂ ಪೂಜೆ ಸಲ್ಲಿಸಿದರು. ತಾಯಿ ಮೈತ್ರಿದೇವಿ ಭಾವಚಿತ್ರವಿಟ್ಟು ಮಾತೃಪೂಜೆ ನೆರವೇರಿಸಿದರು.

    ಗೃಹಪ್ರವೇಶದಲ್ಲಿ ಬಿಜೆಪಿ ಮುಖಂಡರು, ನೂರಾರು ಬಿಜೆಪಿ ಕಾರ್ಯಕರ್ತರು ಭಾಗಿಯಾಗಿದ್ದರು. ಈ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಬಿವೈ ವಿಜಯೇಂದ್ರ ಅವರು, ಇದು ನನ್ನ ಮನೆಯಲ್ಲ ಬಿಜೆಪಿ ಕಾರ್ಯಕರ್ತರ ಮನೆ. ಚುನಾವಣೆವರೆಗೂ ಇಲ್ಲಿಗೆ ಬರುತ್ತೇನೆ. ಚುನಾವಣೆ ಮುಗಿದ ಮೇಲೂ ಇಲ್ಲೆ ಇರುತ್ತೇನೆ ಎಂದರು.

    ತಮ್ಮ ಮನೆಯ ಬಾಗಿಲು ಸದಾ ಕಾಲ ಜನರ ಸೇವೆಗೆ ಸದಾ ಬಾಗಿಲು ತೆರೆದಿರುತ್ತೆ. ಯಾರು ಬೇಕಾದರು ಬರಬಹುದು ಹೋಗಬಹುದು. ದೈವಕೃಪೆ ಬೇಕು ಎನ್ನುವ ಕಾರಣಕ್ಕೆ ಕುಟುಂಬ ಸಮೇತರಾಗಿ ಪೂಜೆ ಸಲ್ಲಿಸಿದ್ದೇನೆ. ವಲಸಿಗ ಅನ್ನುವ ಆರೋಪ ಕಳೆದು ಕೊಳ್ಳಲು ಅಥವಾ ಇತರರ ತೃಪ್ತಿಗೆ ನಾನು ಇಲ್ಲಿ ಮನೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು. ಮುಂದೆ ವರುಣಾ ಕ್ಷೇತ್ರದ ಪಕ್ಷದ ಕಚೇರಿಯೂ ಇದೆ ಆಗಲಿದೆ. ಸಿದ್ದರಾಮಯ್ಯನವರು ಇಲ್ಲಿನ ವಾತವರಣ ನೋಡಿಯೇ ಬದಾಮಿಗೆ ಹೋಗಿದ್ದಾರೆ ಎಂದು ಹೇಳಿದರು.

  • ಲಕ್ಷ ಲಕ್ಷ ಖರ್ಚು ಮಾಡಿ ಮನೆ ನಿರ್ಮಾಣ- ಗೃಹಪ್ರವೇಶಕ್ಕೂ ಮುನ್ನ ಬಂದು ಕುಳಿತ ನಾಗಪ್ಪ

    ಲಕ್ಷ ಲಕ್ಷ ಖರ್ಚು ಮಾಡಿ ಮನೆ ನಿರ್ಮಾಣ- ಗೃಹಪ್ರವೇಶಕ್ಕೂ ಮುನ್ನ ಬಂದು ಕುಳಿತ ನಾಗಪ್ಪ

    ಮಂಡ್ಯ: ಲಕ್ಷಾಂತರ ರೂ. ಖರ್ಚು ಮಾಡಿ ನಿರ್ಮಿಸಿದ ಮನೆಯ ಗೃಹಪ್ರವೇಶಕ್ಕೂ ಮುನ್ನ ನಾಗಪ್ಪ ಬಂದು ಮನೆಯಲ್ಲಿ ನೆಲೆಸಿದ ಘಟನೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಬಿದರ ಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಮಹೇಶ್ ಎಂಬವರು ತಮ್ಮ ಜಮೀನಿನಲ್ಲಿ 8 ವರ್ಷಗಳ ಹಿಂದೆ ಮನೆ ಕಟ್ಟಲು ಆರಂಭಿಸಿದ್ದರು. ಆದರೆ ನಿರ್ಮಾಣ ಹಂತದಲ್ಲಿದ್ದ ಮನೆಯಲ್ಲಿ ಹುತ್ತ ಬೆಳೆಯಲಾರಂಭಿಸಿತ್ತು. ಮೊದಲಿಗೆ ಮಹೇಶ್ ಹುತ್ತವನ್ನು ಕಿತ್ತು ಹಾಕಿ ಮನೆ ನಿರ್ಮಾಣದ ಕಡೆ ಗಮನಕೊಟ್ಟರು. ಆದರೆ ನಂತರ ಮಹೇಶ್ ಅವರ ಆರ್ಥಿಕ ಸಂಕಷ್ಟ ಹೆಚ್ಚಿ, ಮಕ್ಕಳಿಗೆ ಆರೋಗ್ಯದ ಸಮಸ್ಯೆ ಶುರುವಾಗಿತ್ತು.

    ಇದರಿಂದ ಹೆದರಿರೋ ಮಹೇಶ್ ಮನೆಯೊಳಗೆ ಬೆಳೆದ ಹುತ್ತವನ್ನು ಹಾಗೇ ಬಿಟ್ಟಿದ್ದಾರೆ. ಒಂದು ಬಾರಿ ಹಾವು ಕಾಣಿಸಿಕೊಂಡಿದ್ದು, ಹುತ್ತ ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇದೆ. ಅರ್ಧದಷ್ಟು ಪೂರ್ಣಗೊಂಡಿರುವ ಮನೆಯಲ್ಲಿ ಕಳೆದೊಂದು ವರ್ಷದಿಂದ ವಾಸಿಸುತ್ತಿದ್ದು, ಹುತ್ತಕ್ಕೆ ಪೂಜೆ ಸಲ್ಲಿಸುತ್ತಿದ್ದಾರೆ.