Tag: ಗೂಸಾ

  • ಮದ್ವೆಯಾಗಿದ್ರೂ ವಿದ್ಯಾರ್ಥಿನಿಯನ್ನ ಮಂಚಕ್ಕೆ ಕರೆದ ಅಂಕಲ್‍ಗೆ ಗೂಸಾ

    ಮದ್ವೆಯಾಗಿದ್ರೂ ವಿದ್ಯಾರ್ಥಿನಿಯನ್ನ ಮಂಚಕ್ಕೆ ಕರೆದ ಅಂಕಲ್‍ಗೆ ಗೂಸಾ

    – ಕೇಳಿದಷ್ಟು ಹಣ ಕೊಡ್ತೇನೆ ಮಂಚಕ್ಕೆ ಬಾ ಎಂದ
    – ಮದ್ವೆಯಾಗಿದ್ರೂ ವಿದ್ಯಾರ್ಥಿನಿ ಜೊತೆ ಮಂಚಕ್ಕೇರಲು ಪ್ಲಾನ್

    ವಿಜಯಪುರ: ರೋಡ್ ರೋಮಿಯೋ ಆದ ಸಿವಿಲ್(ಕಟ್ಟಡ ನಿರ್ಮಿಸುವ ಗುತ್ತಿಗೆದಾರ) ಕಾಂಟ್ರ್ಯಾಕ್ಟರ್‌ಗೆ ಸಖತ್ ಗೂಸಾ ನೀಡಿದ ಘಟನೆ ವಿಜಯಪುರದ ನಿಡಗುಂದಿ ಪಟ್ಟಣದಲ್ಲಿ ನಡೆದಿದೆ.

    ನಿಡಗುಂದಿ ನಿವಾಸಿಯಾದ ಕಾಮುಕ ಮೋತಿಸಾಬ್ ತಳೇವಾಡ ಗೂಸಾ ತಿಂದ ಕಾಂಟ್ರ್ಯಾಕ್ಟರ್. ಈತ ಪರಿಚಯಸ್ಥ ಕಾಲೇಜು ವಿದ್ಯಾರ್ಥಿನಿಯೊಬ್ಬಳಿಗೆ ಕೇಳಿದಷ್ಟು ಹಣ ಕೊಡುತ್ತೇನೆ ಮಂಚಕ್ಕೆ ಬಾ ಎಂದು ಕರೆದಿದ್ದಾನೆ. ತನಗೆ ಮದುವೆಯಾಗಿದ್ದರೂ ಯುವತಿಯ ಹಿಂದೆ ಬಿದ್ದು ಸುಮಾರು ದಿನದಿಂದ ಪೀಡಿಸುತ್ತಿದ್ದನು. ಅಲ್ಲದೇ ವಿದ್ಯಾರ್ಥಿನಿಯ ಫೋಟೋಗಳನ್ನು ತೆಗೆದುಕೊಂಡು ಮಂಚಕ್ಕೆರಲು ಪ್ಲಾನ್ ಮಾಡಿಕೊಂಡಿದ್ದನು.

    ಈ ವಿಷಯ ತಿಳಿದ ಯುವತಿಯ ಸಂಬಂಧಿಕರು ಪಟ್ಟಣದ ಹೊರವಲಯಕ್ಕೆ ಕಾಮುಕ ಮೋತಿಸಾಬ್ ತಳೇವಾಡನನ್ನು ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಚಪ್ಪಲಿಯಿಂದ ಧರ್ಮದೇಟು ನೀಡಿ ಬುದ್ಧಿ ಕಲಿಸಿದ್ದಾರೆ. ಎರಡು ದಿನದ ಹಿಂದೆ ಈ ಘಟನೆ ನಡೆದಿದ್ದು, ಸದ್ಯಕ್ಕೆ ಕಾಂಟ್ರ್ಯಾಕ್ಟರ್‌ಗೆ ಗೂಸಾ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಈ ಘಟನೆ ನಿಡಗುಂಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

  • ಚಮಕ್ ಕೊಟ್ಟ ಲಾರಿ ಚಾಲಕನಿಗೆ ಬಿತ್ತು ಗೂಸಾ!

    ಚಮಕ್ ಕೊಟ್ಟ ಲಾರಿ ಚಾಲಕನಿಗೆ ಬಿತ್ತು ಗೂಸಾ!

    ಬೆಂಗಳೂರು: ಲಾರಿ ಚಾಲಕರೇ ಹುಷಾರ್, ಎಚ್ಚರ ತಪ್ಪಿ ರಸ್ತೆಯಲ್ಲಿ ಅತೀ ವೇಗವಾಗಿ ಚಲಿಸಿದರೆ, ಚಮಕ್ ಕೊಟ್ಟರೆ ಗೂಸಾ ಬೀಳುತ್ತವೆ. ಹೌದು, ನೆಲಮಂಗಲದ ಬಿನ್ನಮಂಗಲ ಬಳಿ ಶನಿವಾರ ರಾತ್ರಿ ಸವಾರನಿಗೆ ಚಮಕ್ ನೀಡಲು ಹೋಗಿ ಲಾರಿ ಚಾಲಕನೊಬ್ಬ ಗೂಸಾ ತಿಂದಿದ್ದಾನೆ.

    ನೆಲಮಂಗಲದಿಂದ ಬೆಂಗಳೂರು ಮಾರ್ಗವಾಗಿ ಬರುತ್ತಿದ್ದ ಬೈಕ್ ಸವಾರನಿಗೆ, ಅತಿ ವೇಗದ ಚಾಲನೆಯಿಂದ ಲಾರಿ ಚಾಲಕ ಚಮಕ್ ಕೊಟ್ಟನಂತೆ. ಚಾಲಕ ವರ್ತನೆ ಕಂಡ ಸ್ಥಳೀಯರು ಲಾರಿಯನ್ನು ಹಿಂಬಾಲಿಸಿ ಹಿಡಿದಿದ್ದಾರೆ. ಚಾಲಕನನ್ನು ಹೊರಗೆಳೆದ ಯುವಕರ ಗುಂಪು ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.

    ಲಾರಿ ಬಿಟ್ಟು ಕೆಳಗೆ ಬರುವಂತೆ ಹೇಳಿದ್ದಾರೆ. ಇದಕ್ಕೆ ಒಪ್ಪದಿದ್ದಾಗ, ಆತನ ಬಲಬದಿಗೆ ಇದ್ದ ಗಾಜು ಒಡೆದು ಆಕ್ರೋಶ ಹೊರ ಹಾಕಿದ್ದಾರೆ. ಬಳಿಕ ಚಾಲಕನನ್ನು ಹೊರಗೆಳೆದು ಗೂಸಾ ಕೊಟ್ಟಿದ್ದಾರೆ. ಮತ್ತೊಮ್ಮೆ ಹೀಗೆ ಮಾಡದಂತೆ ಎಚ್ಚರಿಕೆ ನೀಡಿದ್ದಾರೆ.

    ಲಾರಿ ಚಾಲಕನ ನಿರ್ಲಕ್ಷ್ಯದಿಂದ ಕಲಬುರಗಿಯಲ್ಲಿ ಇದೇ ತಿಂಗಳ 11ರಂದು ಭಾರೀ ಅನಾಹುತವೇ ನಡೆದಿತ್ತು. ಬಸ್‍ಗಾಗಿ ಕಾಯುತ್ತ ರಸ್ತೆ ಪಕ್ಕದಲ್ಲಿ ನಿಂತಿದ್ದ ಆರು ಜನರ ಮೇಲೆ ಲಾರಿ ಹರಿದು, ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಉಳಿದ ಮೂವರು ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳಲ್ಲಿ ಒಬ್ಬನ ಎರಡೂ ಕಾಲುಗಳು ಕತ್ತರಿಸಿದ್ದವು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಯುವತಿಯನ್ನ ಚುಡಾಯಿಸಿದ ರೋಡ್ ರೋಮಿಯೋಗೆ ಬಿತ್ತು ಗೂಸಾ

    ಯುವತಿಯನ್ನ ಚುಡಾಯಿಸಿದ ರೋಡ್ ರೋಮಿಯೋಗೆ ಬಿತ್ತು ಗೂಸಾ

    ಬೀದರ್: ಯುವತಿಯನ್ನು ಚುಡಾಯಿಸಿದ ರೋಡ್ ರೋಮಿಯೋಗೆ ಸಾರ್ವಜನಿಕರು ಸಖತ್ ಗೂಸಾ ನೀಡಿರುವ ಘಟನೆ ಬೀದರ್ ನಗರದ ರೈಲ್ವೆ ನಿಲ್ದಾಣ ಬಳಿ ನಡೆದಿದೆ.

    ಬೀದರ್ ರೈಲು ನಿಲ್ದಾಣದಲ್ಲಿ ಯುವತಿ ತಮ್ಮ ಗ್ರಾಮಕ್ಕೆ ಹೋಗಲು ನಿಂತಿದ್ದಳು. ಈ ವೇಳೆ ರೋಡ್ ರೋಮಿಯೋ ಬಂದು ಯುವತಿಯನ್ನು ಚುಡಾಯಿಸಿದ್ದಾನೆ. ಅಷ್ಟೇ ಅಲ್ಲದೇ ಒತ್ತಾಯ ಪೂರ್ವಕವಾಗಿ ಯುವತಿ ಬಳಿಯಿದ್ದ ಮೊಬೈಲ್ ಕಸಿದುಕೊಂಡಿದ್ದಾನೆ. ಬಳಿಕ ಬ್ಲ್ಯಾಕ್ ಮೇಲ್ ಮಾಡಿ ಆಟೋದಲ್ಲಿ ಸಾಗಿಸಲು ಯತ್ನಿಸಿದ್ದಾನೆ ಎಂದು ತಿಳಿದು ಬಂದಿದೆ.

    ಈ ವೇಳೆ ಯುವತಿಗೆ ರಕ್ಷಣೆಗಾಗಿ ಕೂಗಿಗೊಂಡಿದ್ದಾಳೆ. ಇದನ್ನು ಕಂಡ ಸ್ಥಳೀಯರು ಕಾಮುಕನಿಂದ ಯುವತಿಯ ರಕ್ಷಣೆ ಮಾಡಿ ಆತನಿಗೆ ಧರ್ಮದೇಟು ನೀಡಿದ್ದಾರೆ. ಬಳಿಕ ರಸ್ತೆಯಲ್ಲಿಯೇ ಆರೋಪಿಗೆ ಗೂಸಾ ನೀಡುತ್ತಾ ಸಾರ್ವಜನಿಕರೇ ಪೊಲೀಸ್ ಠಾಣೆಗೆ ಎಳೆದುಕೊಂಡು ಹೋಗಿ ಪೊಲೀಸರಿಗೆ ಒಪ್ಪಿಸಿದ್ದಾರೆ.

    ನ್ಯೂಟೌ ನ ಪೊಲೀಸರು ಆರೋಪಿಯನ್ನ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪತ್ನಿಗೆ ಛೇಡಿಸಿದ ಬೀದಿಕಾಮಣ್ಣನಿಗೆ ಪತಿ ಗೂಸಾ

    ಪತ್ನಿಗೆ ಛೇಡಿಸಿದ ಬೀದಿಕಾಮಣ್ಣನಿಗೆ ಪತಿ ಗೂಸಾ

    ಮೈಸೂರು: ಪತ್ನಿಗೆ ಛೇಡಿಸಿದ ಬೀದಿಕಾಮಣ್ಣನಿಗೆ ಪತಿ ಗೂಸಾ ನೀಡಿರುವ ಘಟನೆ ಮೈಸೂರಿನ ಬೃಂದಾವನ ಬಡಾವಣೆಯಲ್ಲಿ ನಡೆದಿದೆ.

    ಕಲ್ಯಾಣ ಮಂಟಪದಲ್ಲಿ ಕೆಲಸ ಮಾಡುತ್ತಿದ್ದ ನಾಗಿಣಿಯನ್ನು ಬೀದಿಕಾಮಣ್ಣ ಮಂಜು ಛೇಡಿಸಿದ್ದಾನೆ. ವಿಚಾರ ತಿಳಿದ ನಾಗಿಣಿ ಪತಿ ರಮೇಶ್ ಗೌಡ ಸಿನಿಮೀಯ ಶೈಲಿಯಲ್ಲಿ ಚೇಸ್ ಮಾಡಿ ಬೃಂದಾವನ ಬಡಾವಣೆ ಬಳಿ ಮಂಜುನನ್ನು ಹಿಡಿದು ಸಾರ್ವಜನಿಕರ ಎದುರಲ್ಲೇ ಗೂಸಾ ಕೊಟ್ಟಿದ್ದಾರೆ.

    ನಂತರ ಮೇಟಗಳ್ಳಿ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಬಂದು ಮಂಜನನ್ನು ವಶಕ್ಕೆ ಪಡೆದಿದ್ದಾರೆ. ಸದ್ಯ ಗೂಸಾ ತಿಂದ ಬೀದಿ ಕಾಮಣ್ಣನನ್ನು ಪೊಲೀಸರ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬರ್ತಿಯಾ, ನಂಬರ್ ಕೊಡು ಎಂದಿದ್ದಕ್ಕೆ ಮಹಿಳೆಯಿಂದಲೇ ಸಖತ್ ಗೂಸಾ!

    ಬರ್ತಿಯಾ, ನಂಬರ್ ಕೊಡು ಎಂದಿದ್ದಕ್ಕೆ ಮಹಿಳೆಯಿಂದಲೇ ಸಖತ್ ಗೂಸಾ!

    ದಾವಣಗೆರೆ: ಚುಡಾಯಿಸುತ್ತಿದ್ದ ಕಾಮುಕನಿಗೆ ಮಹಿಳೆಯೇ ಸಖತ್ ಗೂಸಾ ಕೊಟ್ಟಿರುವ ಘಟನೆ ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.

    ಬುಧವಾರ ರಾತ್ರಿ ಜಿಲ್ಲಾಸ್ಪತ್ರೆಗೆ ರೋಗಿಯ ಜೊತೆ ಮಹಿಳೆಯೊಬ್ಬರು ಬಂದಿದ್ದಾರೆ. ರೋಗಿ ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭದಲ್ಲಿ ಇವರು ಆಸ್ಪತ್ರೆಯ ಆವರಣದಲ್ಲಿ ಕುಳಿತಿದ್ದರು. ಈ ವೇಳೆ ಆಸ್ಪತ್ರೆಗೆ ಬಂದ ವ್ಯಕ್ತಿಯೊಬ್ಬ ಅಸಭ್ಯವಾಗಿ ವರ್ತಿಸಿದ್ದಾನೆ. ಅಲ್ಲದೇ ಬರ್ತಿಯಾ, ನಂಬರ್ ಕೊಡು ಎಂದು ಪೀಡಿಸಿದ್ದಾನೆ.

    ಮಹಿಳೆ ಆತನ ಅಸಭ್ಯ ವರ್ತನೆಯನ್ನು ಆಸ್ಪತ್ರೆಯ ಸೆಕ್ಯೂರಿಟಿ ಗಾರ್ಡ್ ಗೆ ಹೇಳಿದ್ದಾರೆ. ನಂತರ ಸೆಕ್ಯೂರಿಟಿ ಗಾರ್ಡ್ ಆತನನ್ನು ಹಿಂಬಾಲಿಸಿಕೊಂಡು ಹೋಗಿದ್ದಾರೆ. ಆದರೆ ಆತ ತಪ್ಪಿಸಿಕೊಂಡು ಹೋಗಿದ್ದಾನೆ. ಬಳಿಕ ಕೆಲ ನಿಮಿಷಗಳ ನಂತರ ಕಾಮುಕ ಮತ್ತೆ ಆಸ್ಪತ್ರೆಗೆ ಬಂದು ತನ್ನ ಚಾಳಿಯನ್ನು ಶುರುಮಾಡಿದ್ದಾನೆ.

    ಇದರಿಂದ ರೋಸಿಹೋದ ಮಹಿಳೆ ಆತನನ್ನು ಹಿಡಿದು ಸಖತ್ ಗೂಸಾ ಕೊಟ್ಟಿದ್ದಾರೆ. ನಂತರ ಇತರೆ ಜನರು ಮತ್ತು ಸೆಕ್ಯೂರಿಟಿ ಗಾರ್ಡ್ ಬಂದು ಅವರು ಹೊಡೆದಿದ್ದಾರೆ. ಬಳಿಕ ಪೊಲೀಸರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ಆಸ್ಪತ್ರೆಗೆ ಪೊಲೀಸರು ಬಂದು ಆರೋಪಿ ಕಾಮುಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

  • KSRTC ಬಸ್‍ನಲ್ಲಿ ಲೈಟ್ ಆಫ್ ಮಾಡಿ ಯುವತಿಯ ಮೈ ಕೈ ಮುಟ್ಟಿದ ಕಾಮುಕ ಕಂಡಕ್ಟರ್ ಗೆ ಗೂಸಾ

    KSRTC ಬಸ್‍ನಲ್ಲಿ ಲೈಟ್ ಆಫ್ ಮಾಡಿ ಯುವತಿಯ ಮೈ ಕೈ ಮುಟ್ಟಿದ ಕಾಮುಕ ಕಂಡಕ್ಟರ್ ಗೆ ಗೂಸಾ

    ತುಮಕೂರು: ಕೆ.ಎಸ್.ಆರ್.ಟಿ.ಸಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಯುವತಿ ಜೊತೆ ಅಸಭ್ಯವಾಗಿ ವರ್ತಿಸಿದ ಕಾಮುಕ ಕಂಡಕ್ಟರ್ ಗೆ ಸಹಪ್ರಯಾಣಿಕರೆಲ್ಲರೂ ಸೇರಿ ಸಖತ್ ಗೂಸಾ ಕೊಟ್ಟಿರುವ ಘಟನೆ ತುಮಕೂರಿನ ಕುಣಿಗಲ್ ನಲ್ಲಿ ನಡೆದಿದೆ.

    ಹೊಳೆನರಸೀಪುರ ಡಿಪೋ ಕಂಡಕ್ಟರ್ ಜವಾಹರ್ ಅಹಮದ್ ಪ್ರಯಾಣಿಕರಿಂದ ಗೂಸಾ ತಿಂದ ಕಂಡಕ್ಟರ್. ಹಾಸನದಿಂದ ಬೆಂಗಳೂರಿಗೆ ಹೊರಟ್ಟಿದ್ದ ಬಸ್ಸಿನಲ್ಲಿ ಸೋಮವಾರ ತಡರಾತ್ರಿ ಈ ಘಟನೆ ನಡೆದಿದೆ. ರೇಖಾ ಎಂಬ ಯುವತಿ ಹಾಸನದಿಂದ ಬಸ್ ಹತ್ತಿದ್ದಾರೆ. ಸೀಟ್ ಇಲ್ಲದೆ ಇದ್ದ ಕಾರಣ ನಿರ್ವಾಹಕನ ಸೀಟ್ ಪಕ್ಕದಲ್ಲಿ ಕುಳಿತಿದ್ದರು.

    ಬಸ್ ಚನ್ನರಾಯಪಟ್ಟಣ ದಾಟಿ ಕುಣಿಗಲ್ ಕಡೆ ಬರುತ್ತಿದ್ದಂತೆ ಆರೋಪಿ ಜವಾಹರ್ ಬಸ್ ಲೈಟ್ ಆಫ್ ಮಾಡಿದ್ದಾನೆ. ಬಳಿಕ ಕತ್ತಲೆಯಲ್ಲಿ ಜವಾಹರ್ ಯುವತಿ ರೇಖಾ ಜೊತೆ ಅಸಭ್ಯವಾಗಿ ವರ್ತಿಸಿದ್ದಾನೆ. ಮೈ ಕೈ ಮುಟ್ಟಿ ಲೈಂಗಿಕ ಕಿರುಕುಳ ನೀಡಿದ್ದಾನೆ. ಯುವತಿ ನಿರ್ವಾಹಕನ ವರ್ತನೆಗೆ ಪ್ರತಿರೋಧ ಒಡ್ಡಿ ಕಿರುಚಿಕೊಂಡಿದ್ದಾರೆ.

    ಯುವತಿಯ ಕಿರುಚಾಟ ಕೇಳಿದ ತಕ್ಷಣ ಸಹಪ್ರಯಾಣಿಕರು ಯುವತಿ ನೆರವಿಗೆ ಬಂದು ಕಾಮುಕ ಕಂಡಕ್ಟರ್ ಗೆ ಥಳಿಸಿದ್ದಾರೆ. ಈ ಸಂಬಂಧ ಕುಣಿಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಜವಾಹರ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

  • ಫೋಟೋಗೆ ಅಶ್ಲೀಲ ಪದ ಬಳಸಿ ಫೇಸ್ಬುಕ್ ಗೆ ಪೋಸ್ಟ್- ಲಕ್ಷ ಲಕ್ಷ ಡಿಮ್ಯಾಂಡ್ ಇಟ್ಟಿದ್ದ ವ್ಯಕ್ತಿಗೆ ಸಖತ್ ಗೂಸಾ

    ಫೋಟೋಗೆ ಅಶ್ಲೀಲ ಪದ ಬಳಸಿ ಫೇಸ್ಬುಕ್ ಗೆ ಪೋಸ್ಟ್- ಲಕ್ಷ ಲಕ್ಷ ಡಿಮ್ಯಾಂಡ್ ಇಟ್ಟಿದ್ದ ವ್ಯಕ್ತಿಗೆ ಸಖತ್ ಗೂಸಾ

    ತುಮಕೂರು: ವಿವಾಹಿತ ಮಹಿಳೆಗೆ ಫೇಸ್ಬುಕ್ ನಲ್ಲಿ ಲೈಂಗಿಕ ಕಿರುಕುಳ ನೀಡಿದ್ದ ವ್ಯಕ್ತಿಯೋರ್ವನನ್ನು ಸಾರ್ವಜನಿಕರು ಹಿಡಿದು ಗೂಸಾ ಕೊಟ್ಟ ಘಟನೆ ತುಮಕೂರು ನಗರದ ಭೀಮಸಂದ್ರದಲ್ಲಿ ನಡೆದಿದೆ.

    ನೆಲಮಂಗಲ ಮೂಲದ ಮೋಹನ್ ಗೂಸಾ ತಿಂದ ವ್ಯಕ್ತಿ. ಈತ ಫೇಸ್ಬುಕ್ ನಲ್ಲಿ ಭೀಮಸಂದ್ರದ ಮಹಿಳೆಯನ್ನ ಪರಿಚಯ ಮಾಡಿಕೊಂಡು ಬಳಿಕ ಅವರ ಫೋಟೋಗೆ ಅಶ್ಲೀಲ ಪದಗಳನ್ನು ಬಳಸಿ ಪೋಸ್ಟ್ ಮಾಡಿದ್ದಾನೆ. ನಂತರ ಆ ಫೋಟೋ ತೋರಿಸಿ ಬ್ಲಾಕ್ ಮೇಲ್ ಮಾಡಿದ್ದಾನೆ. ಜೊತೆಗೆ ಮಹಿಳೆಯ ಸಹೋದರ ಮಂಜುನಾಥ್ ಮತ್ತು ಕುಟುಂಬದವರಿಗೆ ಕಳೆದ ಆರು ತಿಂಗಳಿನಿಂದ ಕರೆಮಾಡಿ ಮಾನಸಿಕವಾಗಿ ಹಿಂಸೆ ನೀಡಿದ್ದಲ್ಲದೆ, 5 ಲಕ್ಷ, 15 ಲಕ್ಷ ಹಣ ನೀಡುವಂತೆ ಡಿಮ್ಯಾಂಡ್ ಕೂಡ ಮಾಡಿದ್ದಾನೆ ಎಂಬುವುದಾಗಿ ತಿಳಿದುಬಂದಿದೆ.

    ಮೋಹನ್ ವರ್ತನೆಯಿಂದ ಬೇಸತ್ತಿದ್ದ ಮಹಿಳೆಯ ಪೋಷಕರು 6-7 ತಿಂಗಳಿನಿಂದ ಮೋಹನನ್ನು ಹಿಡಿಯಲು ಪ್ರಯತ್ನಿಸಿದ್ದಾರೆ. ಆದರೆ ಕಿಲಾಡಿ ಮೋಹನ ಅವರಿಗೆ ಚಳ್ಳೆಹಣ್ಣು ತಿನ್ನಿಸಿ ಓಡಾಡುತ್ತಿದ್ದನು. ಆದ್ರೆ ಇಂದು ಬೆಳಗ್ಗೆ ಮಹಿಳೆಯ ಸಹೋದರ ಮಂಜುನಾಥನ ಕೈಗೆ ಅಚಾನಕ್ಕಾಗಿ ಮೋಹನ್ ಭೀಮಸಂದ್ರದ ಬಳಿ ಯಾವುದೋ ಮದುವೆ ಮನೆಗೆ ಬಂದವನು ಸಿಕ್ಕಿಬಿದ್ದಿದ್ದಾನೆ.

    ಕೂಡಲೇ ಮಂಜುನಾಥ್ ಮೋಹನ್ ನನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಈತ ಕಾರು ಚಾಲಕನ ಕೆಲಸ ಮಾಡುತ್ತಿರೋದಾಗಿ ತಿಳಿದುಬಂದಿದೆ. ಜೊತೆಗೆ ನಾನು ಫೇಸ್ಬುಕ್ ನಲ್ಲಿ ಮಹಿಳೆಯ ಫೋಟೋ ಪೋಸ್ಟ್ ಮಾಡಿದ್ದು ನಿಜ ಎಂಬುದಾಗಿ ಆರೋಪಿ ಮೋಹನ್ ಮಾಧ್ಯಮಗಳ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ.

    https://www.youtube.com/watch?v=sPePsZEFJ48

     

  • ಯುವತಿಗೆ ಅಶ್ಲೀಲ ಮೇಸೆಜ್ ಮಾಡಿದ್ದಕ್ಕೆ ಬಿತ್ತು ಸಖತ್ ಗೂಸಾ!

    ಯುವತಿಗೆ ಅಶ್ಲೀಲ ಮೇಸೆಜ್ ಮಾಡಿದ್ದಕ್ಕೆ ಬಿತ್ತು ಸಖತ್ ಗೂಸಾ!

    ಬಳ್ಳಾರಿ: ಉದ್ಯೋಗಿಯೊಬ್ಬ ಯುವತಿಗೆ ಅಶ್ಲೀಲವಾಗಿ ಮೇಸೆಜ್ ಮಾಡಿದಕ್ಕೆ ಸಖತ್ ಹಿಗ್ಗಾಮುಗ್ಗಾ ಥಳಿಸಿಕೊಂಡ ಘಟನೆ ಜಿಲ್ಲೆಯ ಜಿಂದಾಲ್ ಕಾರ್ಖಾನೆಯ ಹೊರಗಡೆ ನಡೆದಿದೆ. ಗೂಸಾ ನೀಡುತ್ತಿರುವ ವಿಡಿಯೋ ಈಗ ವೈರಲ್ ಆಗಿದೆ.

    ಬಳ್ಳಾರಿ ಮೂಲದ ಯುವತಿಯೊಬ್ಬಳಿಗೆ ಜಿಂದಾಲ್ ಕಾರ್ಖಾನೆಯ ಎಚ್‍ಆರ್‍ಡಿ ವಿಭಾಗದ ಪಿಎಫ್ ಆಫೀಸರ್ ಸಂಜೀವ ನಾಯಕ ಎಂಬಾತ ಅಶ್ಲೀಲವಾಗಿ ಮೇಸೆಜ್ ಮಾಡಿದ್ದ. ಹೀಗಾಗಿ ಯುವತಿಯ ಕಡೆಯ ಮೂರು ಮಂದಿ ಮುಗಿಬಿದ್ದು ಹಿಗ್ಗಾಮುಗ್ಗಾ ಥಳಿಸಿದ್ದಾರೆ.

    ಹಲ್ಲೆಗೆ ಒಳಗಾದ ಸಂಜೀವ ತಪ್ಪಾಯ್ತು ಕ್ಷಮಿಸಿ ಅಂತಾ ಕೈ ಮುಗಿದರೂ ಯುವತಿಯ ಕಡೆಯವರು ಹಿಗ್ಗಾಮುಗ್ಗಾ ಗೂಸಾ ನೀಡಿದ್ದಾರೆ. ಹಲ್ಲೆಗೆ ಒಳಗಾದ ಸಂಜೀವನ ಬಾಯಲ್ಲಿ ರಕ್ತ ಬರುವ ಹಾಗೆ ಹಲ್ಲೆ ಮಾಡಿದ್ದಾರೆ.

    ತೋರಣಗಲ್ ಪೊಲೀಸರು ಹಲ್ಲೆ ಮಾಡಿದ ಆರೋಪಿಗಳಿಗೆ ಶೋಧ ನಡೆಸುತ್ತಿದ್ದಾರೆ. ಆದರೆ ಹಲ್ಲೆಗೆ ಒಳಗಾದ ಸಂಜೀವ್ ಮಾತ್ರ ಈ ಬಗ್ಗೆ ಪೊಲೀಸರಿಗೆ ಇದೂವರೆಗೂ ಸಹ ದೂರು ನೀಡಿಲ್ಲ.

  • ಸ್ನೇಹಿತನ ಹೆಂಡ್ತಿಗೆ ಹಣ ತೋರಿಸಿ ಮಂಚಕ್ಕೆ ಕರೆದ – ತುಮಕೂರಿನಲ್ಲಿ ಕಾಮುಕನಿಗೆ ಗೂಸಾ

    ಸ್ನೇಹಿತನ ಹೆಂಡ್ತಿಗೆ ಹಣ ತೋರಿಸಿ ಮಂಚಕ್ಕೆ ಕರೆದ – ತುಮಕೂರಿನಲ್ಲಿ ಕಾಮುಕನಿಗೆ ಗೂಸಾ

    ತುಮಕೂರು: ಸ್ನೇಹಿತನ ಪತ್ನಿಯ ಮೇಲೆ ಕಾಮದ ಕಣ್ಣು ಹಾಕಿದ ವ್ಯಕ್ತಿಯೊಬ್ಬ ಆ ಮಹಿಳೆಯಿಂದಲೇ ಗೂಸಾ ತಿಂದ ಘಟನೆ ತುಮಕೂರು ಜಿಲ್ಲೆ ಕೊರಟಗೆರೆ ಪಟ್ಟಣದಲ್ಲಿ ನಡೆದಿದೆ.

    ಪಟ್ಟಣದ ಕೋಟೆ ಬೀದಿ ನಿವಾಸಿ ರಮೇಶ್ ಎಂಬ ವ್ಯಕ್ತಿ ತನ್ನ ಸ್ನೇಹಿತ ಮನೆಯಲ್ಲಿ ಇರದ ಸಂದರ್ಭದಲ್ಲಿ ಮನೆಗೆ ಹೋಗಿ ಸ್ನೇಹಿತನ ಹೆಂಡತಿ ಜೊತೆ ಅಸಭ್ಯವಾಗಿ ವರ್ತಿಸಿದ್ದ. ಆಕೆಗೆ ದುಡ್ಡಿನ ಆಸೆ ತೋರಿಸಿ ಅಶ್ಲೀಲವಾಗಿ ನಡೆದುಕೊಂಡಿದ್ದ. ಇದಕ್ಕೆ ಆ ಮಹಿಳೆ ಪ್ರತಿರೋಧ ಒಡ್ಡಿದಾಗ ಜಗಳವಾಗಿ ಓಡಿ ಹೋಗಿದ್ದ.

    ಇಂದು ಕಾಮುಕ ರಮೇಶನನ್ನು ಹುಡುಕಿ ಸಖತ್ ಗೂಸಾ ನೀಡಿದ್ದಾರೆ.

     

  • ವಿಧವೆಯನ್ನು ಚುಡಾಯಿಸಿದ್ದಕ್ಕೆ ಯುವಕನಿಗೆ ಬಿತ್ತು ಗೂಸಾ

    ವಿಧವೆಯನ್ನು ಚುಡಾಯಿಸಿದ್ದಕ್ಕೆ ಯುವಕನಿಗೆ ಬಿತ್ತು ಗೂಸಾ

    ತುಮಕೂರು: ವಿಧವೆಯನ್ನು ಚುಡಾಯಿಸುತ್ತಿದ್ದ ವ್ಯಕ್ತಿಯನ್ನು ಸಾರ್ವಜನಿಕರು ಹಿಡಿದು ಥಳಿಸಿದ ಘಟನೆ ತುಮಕೂರು ಜಿಲ್ಲೆಯ ಪಾವಗಡ ಪಟ್ಟಣದಲ್ಲಿ ನಡೆದಿದೆ.

    ಪಟ್ಟಣದಲ್ಲಿ ಮೊಬೈಲ್ ಶಾಪ್ ನಡೆಸುತಿದ್ದ ನರೇಶ್ ಎಂಬವನೇ ಗೂಸಾ ತಿಂದ ವ್ಯಕ್ತಿ. ನರೇಶ್ ಇಲ್ಲಿನ ಎಸ್‍ಎಫ್‍ಕೆ ಸಮುದಾಯ ಭವನದಲ್ಲಿ ಕೆಲಸ ಮಾಡಿಕೊಂಡಿದ್ದ ವಿಧವೆಗೆ ಚುಡಾಯಿಸುತಿದ್ದ. ಅಲ್ಲದೇ ಪದೇ ಪದೇ ಸಮುದಾಯ ಭವನಕ್ಕೆ ಹೋಗಿ ಅಸಭ್ಯವಾಗಿ ವರ್ತಿಸುತ್ತಿದ್ದ. ಈತನ ಕಿರುಕುಳದಿಂದ ಬೆಸತ್ತ ಮಹಿಳೆ ತಮ್ಮ ಸಂಬಂಧಿಕರಿಗೆ ಈ ಬಗ್ಗೆ ತಿಳಿಸಿದ್ದರು ಎನ್ನಲಾಗಿದೆ.

    ಈ ಹಿನ್ನೆಲೆಯಲ್ಲಿ ನರೇಶ್‍ನ ಮೊಬೈಲ್ ಶಾಪ್ ಬಳಿ ಬಂದ ಮಹಿಳೆಯ ಸಂಬಂಧಿಕರು ಆತನನ್ನು ಹೊರಕ್ಕೆ ಎಳೆದುಕೊಂಡು ಬಂದು ಸಖತ್ ಗೂಸಾ ನೀಡಿದ್ದಾರೆ. ಇವರ ಜೊತೆಗೆ ಸಾರ್ವಜನಿಕರೂ ಸೇರಿಕೊಂಡು ಧರ್ಮದೇಟು ನೀಡಿ ನರೇಶ್‍ನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

    https://www.youtube.com/watch?v=6WMAHAuDJf4&feature=youtu.be