Tag: ಗೂಸ

  • ಯುವತಿಯನ್ನ ಚುಡಾಯಿಸಿದಕ್ಕೆ ಮಹಿಳೆಯರಿಂದ ಬಿತ್ತು ಸಖತ್ ಗೂಸ

    ಯುವತಿಯನ್ನ ಚುಡಾಯಿಸಿದಕ್ಕೆ ಮಹಿಳೆಯರಿಂದ ಬಿತ್ತು ಸಖತ್ ಗೂಸ

    ಬೀದರ್: ಯುವತಿಯನ್ನು ಚುಡಾಯಿಸಿದಕ್ಕೆ ಕಾಮುಕನಿಗೆ ಮಹಿಳೆ ಮತ್ತು ಯುವತಿಯಿಂದ ಸಖತ್ ಗೂಸ ನೀಡಿದ ಘಟನೆ ಜಿಲ್ಲೆಯ ಹುಮನಾಬಾದ್ ಬಸ್ ನಿಲ್ದಾಣದಲ್ಲಿ ನಡೆದಿದೆ.

    ಯುವಕನಿಗೆ ಚಪ್ಪಲಿಯಿಂದ ಥಳಿಸಿರುವ ವಿಡಿಯೋ ವೈರಲ್ ಫುಲ್ ವೈರಲ್ ಆಗಿದ್ದು, ಫೇಸ್‍ಬುಕ್, ವಾಟ್ಸಾಪ್‍ನಲ್ಲಿ ಹರಿದಾಡುತ್ತಿದೆ. ಮಂಗಳವಾರ ಹುಮನಾಬಾದ್ ಬಸ್ ನಿಲ್ದಾಣದಲ್ಲಿ ಯುವತಿಯರು ನಿಂತಿದ್ದರು. ಈ ವೇಳೆ ಬಸ್ ನಿಲ್ದಾಣಕ್ಕೆ ಬಂದ ಕಾಮುಕ ಯುವತಿಯರನ್ನು ಅಸಭ್ಯವಾಗಿ ಚುಡಾಯಿಸಿದ್ದಾನೆ.

    ಅದೇ ಬಸ್ ನಿಲ್ದಾಣದಲ್ಲಿ ನಿಂತಿದ್ದ ಮಹಿಳೆ ಯುವತಿಯನ್ನು ಚುಡಾಯಿಸುತ್ತಿದ್ದನ್ನು ನೋಡಿದ್ದು, ಕಾಮುಕನ ಅಂಗಿ ಹಿಡಿದು ಚಪ್ಪಲಿ ಸೇವೆ ಮಾಡಿದ್ದಾರೆ. ಮಹಿಳೆ ಯುವಕನಿಗೆ ಥಳಿಸುತ್ತಿರುವುನ್ನು ಬಸ್ ನಿಲ್ದಾಣದಲ್ಲಿದ್ದ ಮಹಿಳೆಯರು ಗಮನಿಸಿದ್ದು, ಅವರು ಸಹ ಬಂದು ಕಾಮುಕನಿಗೆ ಸಖತ್ ಆಗಿಯೇ ಥಳಿಸಿದ್ದಾರೆ.

  • ಶಾಲಾ ಬಾಲಕಿಯನ್ನು ಚುಡಾಯಿಸಿದವನಿಗೆ ಗ್ರಾಮಸ್ಥರಿಂದ ಗೂಸ

    ಶಾಲಾ ಬಾಲಕಿಯನ್ನು ಚುಡಾಯಿಸಿದವನಿಗೆ ಗ್ರಾಮಸ್ಥರಿಂದ ಗೂಸ

    ದಾವಣಗೆರೆ: ಶಾಲೆಯಿಂದ ಮನೆಗೆ ತೆರಳುತ್ತಿದ್ದ ಬಾಲಕಿಯನ್ನು ಆಟೋ ಹತ್ತುವಂತೆ ಚುಡಾಯಿಸುತ್ತಿದ್ದ ಯುವಕನಿಗೆ ಗ್ರಾಮಸ್ಥರು ಥಳಿಸಿರುವ ಘಟನೆ ಜಿಲ್ಲೆಯ ಲಿಂಗದಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಸಂಜೆ ಶಾಲೆ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದ ಶಾಲಾ ಬಾಲಕಿಯನ್ನು ಆಟೋದಲ್ಲಿ ಬಂದ ನಾಲ್ವರು ಯುವಕರು ಚುಡಾಯಿಸಿ ಆಟೋ ಏರುವಂತೆ ಕಾಟ ಕೊಟ್ಟಿದ್ದಾರೆ. ಪ್ರಶ್ನಿಸಿದ ಲಿಂಗದಹಳ್ಳಿ ಗ್ರಾಮಸ್ಥರ ಮೇಲೆ ಯುವಕರು ಹಲ್ಲೆ ನಡೆಸಿದ್ದಾರೆ. ಹಲ್ಲೆ ನಡೆಸಿದ ನಂತರ ಗ್ರಾಮಸ್ಥರೆಲ್ಲ ಬಂದಾಗ ಯುವಕರನ್ನು ಹಿಡಿಯಲು ಹೋದಾಗ ಆಟೋದಲ್ಲಿದ್ದ ನಿಟ್ಟುವಳ್ಳಿಯ ಅರುಣ್, ಗಣೇಶ್, ಫಯಾಜ್ ಪರಾರಿಯಾಗಿದ್ದಾರೆ.

    ಪುಂಡರ ಜೊತೆಗಿದ್ದ ಚಂದ್ರು ಮಾತ್ರ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದಿದ್ದಾನೆ. ಸಿಕ್ಕಿಬಿದ್ದ ರೋಡ್ ರೊಮಿಯೋ ಚಂದ್ರನಿಗೆ ಸರಿಯಾಗಿ ಗೂಸ ಕೊಟ್ಟಿದ್ದಾರೆ. ಅಲ್ಲದೇ ಮದ್ಯಪಾನ ಸೇವನೆ ಮಾಡಿ ಆಟೋದಲ್ಲಿ ಲಿಂಗದಹಳ್ಳಿ ಗ್ರಾಮಕ್ಕೆ ಯುವಕರು ಬಂದಿದ್ದರು ಎಣ್ಣೆ ಗುಂಗಿನಲ್ಲಿ ಈ ರೀತಿಯಾಯಿತ್ತು ಎನ್ನುತ್ತಿದ್ದಾರೆ ಪುಂಡರು.

    ಇನ್ನು ಸ್ಥಳಕ್ಕೆ ಗ್ರಾಮಾಂತರ ಠಾಣಾ ಪೊಲೀಸರು ಭೇಟಿ ನೀಡಿ ಯುವಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

  • ವಿಡಿಯೋ: ಯುವತಿಯನ್ನು ಚುಡಾಯಿಸ್ತಿದ್ದ ಯುವಕರಿಗೆ ನಡುರಸ್ತೆಯಲ್ಲೇ ಹಿಗ್ಗಾಮುಗ್ಗಾ ಗೂಸ

    ವಿಡಿಯೋ: ಯುವತಿಯನ್ನು ಚುಡಾಯಿಸ್ತಿದ್ದ ಯುವಕರಿಗೆ ನಡುರಸ್ತೆಯಲ್ಲೇ ಹಿಗ್ಗಾಮುಗ್ಗಾ ಗೂಸ

    ಬೆಂಗಳೂರು: ಕೆಲ ದಿನಗಳಿಂದ ರಸ್ತೆಯಲ್ಲಿ ಸಂಚರಿಸುತ್ತಿದ್ದ ಯುವತಿಯೊಬ್ಬಳಿಗೆ ಚುಡಾಯಿಸುತ್ತಿದ್ದ ಯುವಕರು ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದು ಹಿಗ್ಗಾಮುಗ್ಗಾ ಗೂಸ ತಿಂದಿದ್ದಾರೆ.

    ಹಿಗ್ಗಾಮುಗ್ಗಾ ಥಳಿಸುತ್ತಿರುವ ದೃಶ್ಯ ಕಂಡುಬಂದಿದ್ದು ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಬನ್ನೇರುಘಟ್ಟ ರಸ್ತೆಯ ರಾಗಿಹಳ್ಳಿ ಗ್ರಾಮದಲ್ಲಿ. ಇದೇ ಗ್ರಾಮದ ಯುವತಿಯನ್ನು ನಾಲ್ವರು ಯುವಕರು ಕೆಲ ದಿನಗಳಿಂದ ಹಿಂಬಾಲಿಸಿಕೊಂಡು ಚುಡಾಯಿಸುತ್ತಿದ್ದರು.

    ಆದರೆ ಆ ಯುವಕರ ಗ್ರಹಚಾರ ಕೆಟ್ಟಿತ್ತು. ಈ ಇಬ್ಬರು ಯುವಕರು ಗ್ರಾಮಸ್ಥರ ಕೈಗೆ ಸಿಕ್ಕಿ ಬಿದ್ದಿದ್ದಾರೆ. ಈ ವೇಳೆ ಯುವತಿಯನ್ನು ಚುಡಾಯಿಸಿದ್ದಕ್ಕೆ ಆಕ್ರೋಶಗೊಂಡ ಗ್ರಾಮಸ್ಥರು ನಡುರಸ್ತೆಯಲ್ಲಿ ಹಗ್ಗದಿಂದ ಕಟ್ಟಿ ಥಳಿಸಿದ್ದಾರೆ. ರಾಗಿಹಳ್ಳಿ ಗ್ರಾಮದಿಂದ ಬನ್ನೇರುಘಟ್ಟ ಪೊಲೀಸ್ ಠಾಣೆವರೆಗೂ ಥಳಿಸಿಕೊಂಡು ಬಂದು ಪೊಲೀಸರಿಗೆ ಒಪ್ಪಿಸಿದ್ದಾರೆ.

    ಈ ಯುವಕರು ಕಳೆದ ಕೆಲವು ದಿನಗಳಿಂದ ಕಾಲೇಜು ಬಳಿ ಹಾಗೂ ಬಸ್ಸಿನಲ್ಲಿ ಯುವತಿಗೆ ಕಿರುಕುಳ ನೀಡುತ್ತಿದ್ದು ತನ್ನನ್ನು ಪ್ರೀತಿಸು ಎಂದು ಹಿಂದೆ ಬಿದ್ದಿದ್ದರು ಎಂದು ತಿಳಿದುಬಂದಿದೆ. ಇದರಿಂದ ಮನನೊಂದ ಯುವತಿ ಪೋಷಕರಿಗೆ ವಿಷಯ ತಿಳಿಸಿದ್ದಾಳೆ. ಪೋಷಕರು ಹಾಗೂ ಸ್ನೇಹಿತರು ಶುಕ್ರವಾರ ಬಸ್ ಸ್ಟ್ಯಾಂಡ್ ಬಳಿ ಹೋಗುತ್ತಿದ್ದಾಗ ಮತ್ತೆ ಇದೇ ಯುವಕರು ಯುವತಿಯನ್ನು ಹಿಂಬಾಲಿಸಿಕೊಂಡು ಬಂದು ನೇರವಾಗಿ ಸಿಕ್ಕಿಬಿದ್ದಿದ್ದು ಇದೀಗ ಪೊಲೀಸರ ಅಥಿತಿಯಾಗಿದ್ದಾರೆ.

    https://youtu.be/DlGlUvR0VPE