Tag: ಗೂಳಿಹಟ್ಟಿ ಶೇಖರ್

  • ಮಾಜಿ ಸಚಿವ ಗೂಳಿಹಟ್ಟಿ ಶೇಖರ್‌ಗೆ ಮಾತೃವಿಯೋಗ

    ಮಾಜಿ ಸಚಿವ ಗೂಳಿಹಟ್ಟಿ ಶೇಖರ್‌ಗೆ ಮಾತೃವಿಯೋಗ

    ಚಿತ್ರದುರ್ಗ: ಮಾಜಿ ಸಚಿವ ಗೂಳಿಹಟ್ಟಿ ಶೇಖರ್ (Goolihatti Shekar) ತಾಯಿ ಪುಟ್ಟಮ್ಮ ಇಂದು ಮುಂಜಾನೆ 5 ಗಂಟೆಗೆ ನಿಧನರಾಗಿದ್ದಾರೆ.

    ಹೊಸದುರ್ಗ (Hosadurga) ಕ್ಷೇತ್ರದ ಮಾಜಿಸಚಿವ ಗೂಳಿಹಟ್ಟಿ ಶೇಖರ್ ತಾಯಿ ಬೋವಿಹಟ್ಟಿಯ ಪುಟ್ಟಮ್ಮ (79) ಭಾನುವಾರ ಬೆಳಗಿನ ಜಾವ ಕೊನೆಯುಸಿರೆಳೆದಿದ್ದಾರೆ. ಈ ಹಿಂದೆ ಪುಟ್ಟಮ್ಮ ಕ್ರೈಸ್ತ ಧರ್ಮಕ್ಕೆ ಮತಾಂತರವಾಗಿದ್ದರು. ಬಳಿಕ ಮಗನ ಒತ್ತಾಯಕ್ಕೆ ಮಣಿದು ಹಿಂದೂ ಧರ್ಮಕ್ಕೆ ಮರಳಿದ್ದರು. ಇದನ್ನೂ ಓದಿ: ಬಿಹಾರ ಬಜೆಟ್ ಕನ್ನಡಿಗರಿಗೆ ಅನ್ಯಾಯ ಮಾಡಿದೆ: ಪ್ರಿಯಾಂಕ್ ಖರ್ಗೆ

    ಇಂದು ಸಂಜೆ ಹಿಂದೂ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಪುತ್ರ ಗೂಳಿಹಟ್ಟಿ ಶೇಖರ್ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಉಡುಪಿ: ಡಿಸಿ ಕಚೇರಿಯಲ್ಲಿ ಶರಣಾದ ನಕ್ಸಲ್‌ ತೊಂಬಟ್ಟು ಲಕ್ಷ್ಮೀ

  • ಬಿಜೆಪಿ, ಸಂಘಪರಿವಾರದ ನಾಯಕರಿಗೆ ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ ಸವಾಲ್

    ಬಿಜೆಪಿ, ಸಂಘಪರಿವಾರದ ನಾಯಕರಿಗೆ ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ ಸವಾಲ್

    ಚಿತ್ರದುರ್ಗ:‌ ಬಿಜೆಪಿ (BJP) ನಾಯಕರು ಹಾಗೂ ಸಂಘಪರಿವಾರದ ವಿರುದ್ಧ ಬಿಜೆಪಿ ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ (Goolihatti Shekhar) ಸವಾಲು ಹಾಕಿರುವ ಮತ್ತೊಂದು ಆಡಿಯೋ ವೈರಲ್ ಆಗಿದೆ.

    ಈ ಹಿಂದೆ ನಾಗ್ಪುರದ ಹೆಡ್ಗೆವಾರ್ ಸ್ಮಾರಕದೊಳಗೆ ದಲಿತರ ಪ್ರವೇಶಕ್ಕೆ ನಿಷೇಧವಿರುವ ಬಗ್ಗೆ ರಾಷ್ಟ್ರೀಯ ಬಿಜೆಪಿ ‌ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್‌ಗೆ ಕಳುಹಿಸಿದ್ದ ಆಡಿಯೋ‌ದಲ್ಲಿ ಆಕ್ರೋಶ ಹೊರಹಾಕಿದ್ದ ಗೂಳಿಹಟ್ಟಿ ಶೇಖರ್ ವಿರುದ್ಧ‌ ಬಿಜೆಪಿ ನಾಯಕರು ಹಾಗೂ ಸಂಘಪರಿವಾರದ ಮುಖಂಡರು ಪ್ರತಿಕ್ರಿಯೆ ನೀಡಿದ್ದರು. ಇದನ್ನೂ ಓದಿ: ನನಗಾದ ನೋವು ಹೇಳಿದ್ದೇನೆ, RSS ಬಗ್ಗೆ ಗೌರವವಿದೆ: ಗೂಳಿಹಟ್ಟಿ ಶೇಖರ್ ಸ್ಪಷ್ಟನೆ

    ಗೂಳಿಹಟ್ಟಿ ಶೇಖರ್‌ ಆರೋಪ ಅಲ್ಲೆಗೆಳೆದಿದ್ದರು. ಹೀಗಾಗಿ ಮತ್ತಷ್ಟು ಕೆಂಡಂಮಡಲವಾಗಿರುವ ಹೊಸದುರ್ಗ ಕ್ಷೇತ್ರದ ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ ಮತ್ತೆ ಬಿಜೆಪಿ ವಿರುದ್ಧ ಗುಡುಗಿರುವ ಆಡಿಯೋ ವೈರಲ್ ಆಗಿದೆ. ‘ಹೆಡ್ಗೆವಾರ್ ಸ್ಮಾರಕದೊಳಗೆ ನಾನು ಹೋಗಿದ್ದ ವೀಡಿಯೋ ರಿಲೀಸ್ ಮಾಡುವಂತೆ ಆಗ್ರಹಿಸಿದ್ದಾರೆ. ಒಂದು ವೇಳೆ ‌ನನ್ನ ಮಾತು ಸುಳ್ಳಾಗಿದ್ರೆ, ನಿಮ್ಮ ಮನೆಗಳಲ್ಲಿ ಕಸ ಗುಡಿಸುವ ಕೆಲಸ ಮಾಡಿಕೊಂಡಿರುತ್ತೇನೆ ಎಂದು ಟಾಂಗ್‌ ಕೊಟ್ಟಿದ್ದಾರೆ.

    ನಿಮ್ಮಲ್ಲಿ ಸಿಸಿಟಿವಿ ಫೂಟೇಜ್ ಇರುತ್ತದಲ್ಲ ರಿಲೀಸ್ ಮಾಡಿ. ನಾನು ಹೇಳಿರುವ ಸಂಪ್ರದಾಯ ಸುಳ್ಳಾದ್ರೆ, ನಿಮ್ಮ ಮನೆ ಗೇಟ್‌ಕೀಪರ್ ಆಗಿ ಕೆಲಸ ಮಾಡಿಕೊಂಡಿರುತ್ತೇನೆ. ಅಲ್ದೇ ಕೆಲ ತಿಂಗಳ ಮುನ್ನ ನಾನು ಈ ವಿಷಯ ಹೇಳಿದ್ದರೆ, ಇನ್ನಷ್ಟು ಸೀಟ್ ಕಳೆದುಕೊಳ್ಳುತ್ತಿದ್ರಿ ಎಂದು ಸಂಘಪರಿವಾರದ ವಿರುದ್ಧ ಕಿಡಿಕಾರಿದ್ದಾರೆ. ಇದನ್ನೂ ಓದಿ: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಗೂಳಿಹಟ್ಟಿ ಶೇಖರ್- ಪಕ್ಷೇತರನಾಗಿ ಸ್ಪರ್ಧೆ

    ಬಿಜೆಪಿ ಮಾಜಿ ಶಾಸಕ ಪಿ.ರಾಜೀವ್ ಹೇಳಿಕೆಗೆ ಕೆಂಡಕಾರಿರುವ ಅವರು, ನಾನು ರಾತ್ರಿಯೆಲ್ಲಾ ಕುಡಿಯುತ್ತೇನೆ ರಾಜೀವ್ ಅಣ್ಣ. ನಮ್ಮಂಥ ಕುಡುಕರಿಂದ ನೀನು ಮಾಜಿ ಶಾಸಕರ ಪೆನ್ಷನ್ ತೆಗೆದುಕೊಳ್ತೀಯಣ್ಣ. ಸರ್ಕಾರ ಪ್ರಿಂಟ್ ಹಾಕಲ್ಲ, ಎಣ್ಣೆಯ ದುಡ್ಡೇ ಸರ್ಕಾರಕ್ಕೆ ಆದಾಯ ಎಂದು ತಿರುಗೇಟು ನೀಡಿದ್ದಾರೆ.

    ವಿರೋಧ ಪಕ್ಷದ‌ ನಾಯಕ ನಮ್ಮ ಆರ್.ಅಶೋಕಣ್ಣ, ಸುರೇಶ್ ಕುಮಾರ್ ಸರ್ ಬಹಳ ಹಿರಿಯರು. ನಿನ್ನೆ ಮೊನ್ನೆ ನನ್ನ ಹೇಳಿಕೆ ಬಗ್ಗೆ ಅನೇಕರು ಕಾಮೆಂಟ್ ಮಾಡಿದ್ದಾರೆ. ನಾನು ಜನರಲ್ ಕ್ಷೇತ್ರದಲ್ಲಿ ಗೆದ್ದು 38 ವರ್ಷಕ್ಕೆ ಮಂತ್ರಿ ಆಗಿದ್ದೆ. ಪಿ.ರಾಜೀವಣ್ಣ ನಿನ್ನಂತೆ ರಿಸರ್ವ್ ಕ್ಷೇತ್ರದಲ್ಲಿ ಗೆದ್ದಿಲ್ಲ ನಾನು. 35 ವರ್ಷಕ್ಕೆ ನಾನು ಸಾಯಬೇಕಿತ್ತು. ಕೊಲೆ ಆಗಬೇಕಿತ್ತು ಇಲ್ಲ ಅಂದ್ರೆ ಆತ್ಮಹತ್ಯೆ ಮಾಡಿಕೊಳ್ಳಬೇಕಿತ್ತು. ಆದರೂ ನಾನು ಈಗ 55 ವರ್ಷ ಬದುಕಿದ್ದೇ ಗ್ರೇಟ್ ಎಂದು ಟೀಕಿಸಿರುವ ಗೂಳಿಹಟ್ಟಿ ಆಡಿಯೋ ಎಲ್ಲೆಡೆ ವೈರಲ್‌ ಆಗಿದೆ.

  • ಆರ್‌ಎಸ್‌ಎಸ್‌ನಲ್ಲಿ ಜಾತಿ ಕೇಳಿ ಒಳಬಿಡುವ ಪದ್ಧತಿಯಿಲ್ಲ: ರಾಜಕುಮಾರ್

    ಆರ್‌ಎಸ್‌ಎಸ್‌ನಲ್ಲಿ ಜಾತಿ ಕೇಳಿ ಒಳಬಿಡುವ ಪದ್ಧತಿಯಿಲ್ಲ: ರಾಜಕುಮಾರ್

    ಕಲಬುರಗಿ: ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ (Goolihatti Shekhar) ಅವರ ಮಾತು ಸತ್ಯಕ್ಕೆ ಅತ್ಯಂತ ದೂರವಾಗಿದ್ದು, ಆರ್‌ಎಸ್‌ಎಸ್ (RSS) ಜಾತ್ಯತೀತ ಹಾಗೂ ಸರ್ವಹಿತ ಕಾಪಾಡುವ ಸಂಘಟನೆಯಾಗಿದೆ ಎಂದು ಬಿಜೆಪಿ ರಾಜ್ಯ ವಕ್ತಾರ ರಾಜಕುಮಾರ್ ಪಾಟೀಲ್ ತೆಲ್ಕೂರ್ (Rajkumar Patil Telkur) ತಿಳಿಸಿದ್ದಾರೆ.

    ಈ ಕುರಿತು ಪ್ರಕಟಣೆ ನೀಡಿದ ಅವರು, ಆರ್‌ಎಸ್‌ಎಸ್ ಅಥವಾ ಸಂಘ ಪರಿವಾರದ ಯಾವುದೇ ಕಚೇರಿಯಲ್ಲಿ ಜಾತಿ, ವರ್ಗ ಕೇಳಿ ಒಳಬಿಡುವ ಪದ್ಧತಿಯಿಲ್ಲ. ಗೂಳಿಹಟ್ಟಿ ಶೇಖರ್ ಅವರ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ಕೇಳಿದ್ದೇನೆ. ಅವರ ಆರೋಪ ಶುದ್ಧ ಸುಳ್ಳು ಮತ್ತು ರಾಜಕೀಯ ದುರುದ್ದೇಶ ಎನಿಸುತ್ತದೆ ಎಂದರು. ಇದನ್ನೂ ಓದಿ: ಹಲ್ಲೆ ಪ್ರಕರಣ ಮುಚ್ಚಿ ಹಾಕಲು ಪ್ರಿಯಾಂಕ್ ಖರ್ಗೆ ಯತ್ನ – ಸುಳ್ಳು ಕೇಸ್‌ಗಳಿಗೆ ನಾವು ಭಯಪಡಲ್ಲ: ಮಣಿಕಂಠ್ ರಾಠೋಡ್

    ನಾನು ಆರ್‌ಎಸ್‌ಎಸ್‌ನಲ್ಲಿ ವಿದ್ಯಾರ್ಥಿ ದಿಸೆಯಿಂದ ವಿದ್ಯಾರ್ಥಿ ಪರಿಷತ್ತಿನಲ್ಲಿ ಕಾರ್ಯನಿರ್ವಹಿಸಿದ್ದೇನೆ. ಹೀಗಾಗಿ ರಾಷ್ಟ್ರಪ್ರೇಮ, ರಾಷ್ಟ್ರಭಕ್ತಿ ಮೆರೆಯುವ ಸಂಘದ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುವ ಕೆಲಸ ಮಾಡಲಾಗುತ್ತಿದೆ. ಗೂಳಿಹಟ್ಟಿಯವರು ಒಂದೆರಡು ಬೈಠಕ್‌ನಲ್ಲಿ ಭಾಗಿಯಾದರೆ ಆರ್‌ಎಸ್‌ಎಸ್ ಎಂತಹ ದೇಶಭಕ್ತ ಸಂಘಟನೆ ಎಂದು ಅವರಿಗೆ ತಿಳಿಯಲಿದ್ದು, ಬರುವುದಾದರೆ ಮುಕ್ತ ಅವಕಾಶ ಇದೆ ಎಂದು ಹೇಳಿದರು. ಇದನ್ನೂ ಓದಿ: ಪ್ರಮಾಣವಚನ ಸ್ವೀಕರಿಸಿದ ಕೆಲವೇ ನಿಮಿಷಗಳಲ್ಲಿ ಪ್ರಮುಖ ಭರವಸೆ ಈಡೇರಿಸಿದ ಸಿಎಂ ರೇವಂತ್ ರೆಡ್ಡಿ

    ಸುಳ್ಳು ಹೇಳುವುದು, ಗಾಳಿಯಲ್ಲಿ ಗುಂಡು ಹಾರಿಸುವ ಪ್ರವೃತ್ತಿಯಿಂದ ಗೂಳಿಹಟ್ಟಿ ಸೇರಿದಂತೆ ಉಳಿದ ನಾಯಕರು ಹೊರ ಬರಬೇಕು. ಪುರಾವೆ, ದಾಖಲೆಗಳು ಇದ್ದಲ್ಲಿ ಮಾತನಾಡಬೇಕು. ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಕಾಂಗ್ರೆಸ್ ನಾಯಕರು ತೋರಿದ ಅಗೌರವ ಏನು ಎನ್ನುವುದು ದೇಶದ ಜನತೆಗೆ ಗೊತ್ತಿದೆ. ಅವರನ್ನು ಚುನಾವಣೆಯಲ್ಲಿ ಸೋಲಿಸಿದ್ದು ಇದೇ ಕಾಂಗ್ರೆಸ್ (Congress) ಮತ್ತು ಅವರು ನಿಧನರಾದ ಸಂದರ್ಭದಲ್ಲಿ ಕಾಂಗ್ರೆಸ್ ತೋರಿದ ಅಗೌರವ. ಇದು ಕಾಂಗ್ರೆಸ್ ಬಾಬಾ ಸಾಹೇಬರನ್ನು ಕಂಡ ರೀತಿ ಎಂದು ಕಿಡಿಕಾರಿದರು. ಇದನ್ನೂ ಓದಿ: ಯತ್ನಾಳ್ ಆರೋಪಿಸಿದ ಅದೇ ಮೌಲ್ವಿ ಜೊತೆ ಗಡ್ಕರಿ ಫೋಟೋ ಬಿಡುಗಡೆ ಮಾಡಿದ ಕಾಂಗ್ರೆಸ್ ಮುಖಂಡ

  • ನನಗಾದ ನೋವು ಹೇಳಿದ್ದೇನೆ, RSS ಬಗ್ಗೆ ಗೌರವವಿದೆ: ಗೂಳಿಹಟ್ಟಿ ಶೇಖರ್ ಸ್ಪಷ್ಟನೆ

    ನನಗಾದ ನೋವು ಹೇಳಿದ್ದೇನೆ, RSS ಬಗ್ಗೆ ಗೌರವವಿದೆ: ಗೂಳಿಹಟ್ಟಿ ಶೇಖರ್ ಸ್ಪಷ್ಟನೆ

    ಬೆಂಗಳೂರು: ನನಗಾದ ನೋವನ್ನು ನಾನು ಹೇಳಿದ್ದೇನೆ. ಆರ್ ಎಸ್‍ಎಸ್ ಬಗ್ಗೆ ನನಗೆ ಅಪಾರ ಗೌರವವಿದೆ ಎಂದು ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ (Goolihatti Shekhar) ಸ್ಪಷ್ಟನೆ ನೀಡಿದ್ದಾರೆ.

    ಆರ್ ಎಸ್‍ಎಸ್‍ನ(RSS) ಕಚೇರಿ ಪ್ರವೇಶ ನೀಡದ ವಿಚಾರದ ಕುರಿತು ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿ, ಸಂಘದ ಕಚೇರಿಯಲ್ಲಲ್ಲ, ಹೆಗ್ಡೆವಾರ್ ಮ್ಯೂಸಿಯಂಗೆ ಹೋದಾಗ ನನಗೆ ಈ ಅನುಭವ ಆಗಿತ್ತು. ಅದಕ್ಕೆ ಈಗಾಗ್ಲೇ ಆರ್‍ಎಸ್‍ಎಸ್ ಅವರೇ ಅಸ್ಪøಶ್ಯತೆ ಇಲ್ಲ ಎಂದು ಹೇಳಿದ್ದಾರೆ. ಹೀಗಾಗಿ ಬಹಳ ಸಂತೋಷ ಆಗುತ್ತಿದೆ. ಆರ್‍ಎಸ್‍ಎಸ್ ಬಗ್ಗೆ ಗೌರವ ಇದೆ ಎಂದು ತಿಳಿಸಿದ್ದಾರೆ.

    ಆಗಿದ್ದೇನು..?: ಚುನಾವಣೆಗೂ ಮುನ್ನ ಸದನ ಸಮಿತಿ ಸದಸ್ಯರು ಟ್ರಿಪ್ ಹೋಗಿದ್ದೆವು. ಎಲ್ಲರು ಟ್ರಿಪ್ ಮುಗಿಸಿ ಬೇರೆ ಬೇರೆ ಕಡೆ ತೆರಳಿದ್ರು. ಆದರೆ ನಾನು ನಮ್ಮ ಆರ್‍ಎಸ್‍ಎಸ್‍ನ ಸಂಘ ಅಂತೇಳಿ ಹೆಗ್ಡೆವಾರ್ ಮ್ಯೂಸಿಯಂಗೆ ಹೋದೆ. ಮ್ಯೂಸಿಯಂ ಎಂಟ್ರಿಗೂ ಮುನ್ನ ನಮ್ಮ ಮಾಹಿತಿ ಬರೆಯುವಾಗ ನನ್ನ ಜೊತೆ ಇದ್ದ ವ್ಯಕ್ತಿಗೆ ಒಬ್ಬರು ಹೇಳಿದ್ರು. ಅವರಿಗೆ ಹೇಳಿದ ಹಿನ್ನೆಲೆ ನಾನೇ ಒಳ ಹೋಗದೇ ಅಲ್ಲೇ ಉಳಿದೆ. ಮನಸ್ಸಲ್ಲಿ ಆ ನೋವು ಇನ್ನೂ ಕಾಡುತ್ತಿದೆ. ಹಾಗಾಗಿಯೇ ಆಡಿಯೋ ರಿಲೀಸ್ ಮಾಡಿರುವುದಾಗಿ ತಿಳಿಸಿದರು.

    ಸಾಂದರ್ಭಿಕ ಚಿತ್ರ

    ಟಿಕೆಟ್ ಸಿಗಲಿಲ್ಲ, ಹಾಗಾಗಿ ಹೀಗೆ ಮಾಡಿದ್ದಾರಾ ಎಂದು ಕೆಲವರು ಹೇಳಿದ್ರು. ಆ ಕಾರಣ ಅಲ್ಲ. ನನಗೆ ಇನ್ನೂ ಘಟನೆ ಬಗ್ಗೆ ನೋವಿದೆ. ದಕ್ಷಿಣ ಕರ್ನಾಟಕದಲ್ಲಿ ಮೊದಲು ಬಿಜೆಪಿಯಲ್ಲಿ ಗೆದ್ದವನು ನಾನು. ಟಿಕೆಟ್ ವಿಚಾರಕ್ಕೆಲ್ಲ ಹೀಗೆಲ್ಲ ಮಾಡಲ್ಲ. ಇಂತಹ ವಿಚಾರದಲ್ಲಿ ರಾಜಕೀಯ ಸರಿಯಲ್ಲ. ಆಡಿಯೋ ಬಳಿಕ ಅನೇಕರು ಕರೆ ಮಾಡಿದ್ರು. ಅಲ್ಲಿ ಹಾಗಿಲ್ಲ ಅಂತ ಹೇಳಿದ್ರು. ಆದರೆ ನಾನು ನನಗೆ ಆದಂತಹ ಅನುಭವವನ್ನ ಹೇಳಿದೆ. ಅಲ್ಲಿ ಹಾಗಿಲ್ಲ ಅಂದ್ರೆ ಸಂತೋಷವೇ ಎಂದರು.

    ನಾನು ಅಲ್ಲಿಂದ ಬಂದಾಗಲೇ ಈ ಬಗ್ಗೆ ತಾಲೂಕಿನ ಕೆಲ ಪ್ರಮುಖರ ಜೊತೆ ಹೇಳಿದ್ದೆ. ತಪ್ಪು ಸಂದೇಶ ನಿಮಗೆ ಕೊಟ್ಟಿದ್ದಾರೆ ಅಂತ ಹೇಳಿದ್ರು. ಸದ್ಯ ನಾನೀಗ ಪಕ್ಷದಲ್ಲಿಲ್ಲ. ಅವರನ್ನ ಪ್ರಶ್ನೆ ಮಾಡೋಕೆ ಆಗಲ್ಲ. ಅವರಿಗೂ ಗೊತ್ತಿಲ್ಲ ಅನ್ನಿಸುತ್ತೆ. ಹೋದವರಿಗೆ ಆದ ಅನುಭವವನ್ನ ನಾನು ಹೇಳಿದ್ದೇನೆ. ಆ ನೋವು ಯಾವಾಗಲೂ ಕಾಡುತ್ತಿದೆ ಎಂದು ಗೂಳಿಹಟ್ಟಿ ಶೇಖರ್ ಬೇಸರ ವ್ಯಕ್ತಪಡಿಸಿದರು.

  • ಸಮಾಜದ ಮುಖಂಡರ ಕಡೆಗಣನೆ – ರಾಷ್ಟ್ರೀಯ ಪಕ್ಷಗಳ ವಿರುದ್ಧ ಭೋವಿ ಶ್ರೀ ಕಿಡಿ

    ಸಮಾಜದ ಮುಖಂಡರ ಕಡೆಗಣನೆ – ರಾಷ್ಟ್ರೀಯ ಪಕ್ಷಗಳ ವಿರುದ್ಧ ಭೋವಿ ಶ್ರೀ ಕಿಡಿ

    ಚಿತ್ರದುರ್ಗ: ಭೋವಿ ಸಮುದಾಯದ ಮುಖಂಡರಿಗೆ ಟಿಕೆಟ್ ನೀಡದ ಹಿನ್ನೆಲೆ ರಾಷ್ಟ್ರೀಯ ಪಕ್ಷಗಳ ವಿರುದ್ಧ ಭೋವಿ ಮಠದ ಇಮ್ಮಡಿ ಸಿದ್ಧರಾಮೇಶ್ವರ ಶ್ರೀ (Immadi Siddharameshwara Shri) ಅಸಮಾಧಾನ ಹೊರಹಾಕಿದ್ದಾರೆ.

    ಚಿತ್ರದುರ್ಗದ (chitradurga) ಭೋವಿ ಮಠದಲ್ಲಿ (Bovimath) ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಗಳು, ಬಿಜೆಪಿ ಅಧಿಕಾರಕ್ಕೆ ಬರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅರವಿಂದ ಲಿಂಬಾವಳಿ ಮತ್ತು ಗೂಳಿಹಟ್ಟಿ ಶೇಖರ್ ಅವರನ್ನು ಕಡೆಗಣನೆ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಅಖಂಡ ಶ್ರೀನಿವಾಸ್ ಅವರು ಹೆಚ್ಚಿನ ಅಂತರದಿಂದ ದಾಖಲೆಯ ಗೆಲುವು ಸಾಧಿಸಿದ್ದರು. ಅವರನ್ನು ಸಹ ಕಡೆಗಣನೆ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಸಿಎಂ ಬೊಮ್ಮಾಯಿ ಭೇಟಿ ರಾಜಕೀಯದ ಬಣ್ಣ ಬೇಡ : ನಟ ರಿಷಬ್ ಶೆಟ್ಟಿ

    ಈ ಹಿಂದೆ 8 ರಿಂದ 10 ಭೋವಿ ಸಮುದಾಯದ ಅಭ್ಯರ್ಥಿಗಳಿಗೆ ಟಿಕೆಟ್ ನೀಡುತ್ತಿದ್ದರು. ಈ ಬಾರಿ ಎರಡೂ ರಾಷ್ಟ್ರೀಯ ಪಕ್ಷದ ವರಿಷ್ಠರಿಗೆ ಭೋವಿ ಸಮಾಜದ (Bovi community) ಮುಖಂಡರಿಗೆ ಟಿಕೆಟ್ ನೀಡುವಂತೆ ಮನವಿ ಮಾಡಿದ್ದೆವು. ಆದರೆ ಈ ಬಾರಿ ಸಮುದಾಯವನ್ನು ಎರಡು ರಾಷ್ಟ್ರೀಯ ಪಕ್ಷಗಳು ಕಡೆಗಣಿಸಿವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    ಅರವಿಂದ ಲಿಂಬಾವಳಿ (Aravind Limbavali), ಗೂಳಿಹಟ್ಟಿ ಶೇಖರ್ (Gulihatti D Shekar) ಅವರಿಗೆ ಬಿಜೆಪಿ ಹಾಗೂ ಅಖಂಡ ಶ್ರೀನಿವಾಸ್ (Akhanda Srinivas) ಅವರಿಗೆ ಕಾಂಗ್ರೆಸ್ ಸಾಮಾಜಿಕ ನ್ಯಾಯದಡಿ ಟಿಕೆಟ್ ನೀಡಬೇಕು ಎಂದು ಸ್ವಾಮೀಜಿ ಆಗ್ರಹಿಸಿದ್ದಾರೆ. ಟಿಕೆಟ್ ನೀಡದಿದ್ದರೆ ಭೋವಿ ಸಮುದಾಯ ಕಡೆಗಣಿಸಿದ ಪಕ್ಷಗಳನ್ನು ಸಮುದಾಯ ಕೈಬಿಡಲಿದೆ ಎಂದು ಎರಡೂ ಪಕ್ಷದ ವರಿಷ್ಠರಿಗೆ ಶ್ರೀಗಳು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಪ್ರಯಾಣದ ನಡುವೆಯೇ ಪಕ್ಷದ ಕೆಲಸ, ಆಹಾರ ಸೇವನೆ, ವಿಶ್ರಾಂತಿ – ಇದು ಹೆಚ್‌ಡಿಕೆ ದಿನಚರಿ

  • ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಗೂಳಿಹಟ್ಟಿ ಶೇಖರ್- ಪಕ್ಷೇತರನಾಗಿ ಸ್ಪರ್ಧೆ

    ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಗೂಳಿಹಟ್ಟಿ ಶೇಖರ್- ಪಕ್ಷೇತರನಾಗಿ ಸ್ಪರ್ಧೆ

    ಕಾರವಾರ: ಚಿತ್ರದುರ್ಗದ (Chitradurga) ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್‌ರವರು (Goolihatti Shekar) ತಮ್ಮ ಶಾಸಕ ಸ್ಥಾನಕ್ಕೆ ರಾಜಿನಾಮೆ (Resignation) ನೀಡಿದ್ದಾರೆ.

    ಉತ್ತರ ಕನ್ನಡ (Uttara Kannada) ಜಿಲ್ಲೆಯ ಶಿರಸಿಗೆ (Sirsi) ಆಗಮಿಸಿದ ಗೂಳಿಹಟ್ಟಿ ಶೇಖರ್, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರ (Vishweshwar Hegde Kageri) ಕಚೇರಿಗೆ ತೆರಳಿ ರಾಜೀನಾಮೆ ಸಲ್ಲಿಕೆ ಮಾಡಿದರು. ಈ ಸಂದರ್ಭದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, 2023ರ ಚುನಾವಣೆಗೆ (Election) ಪಕ್ಷೇತರನಾಗಿ ಸ್ಪರ್ಧೆ ಮಾಡುತ್ತೇನೆ. ಎಸ್‌ಸಿ (SC) ಜನಾಂಗದವರು ಎಸ್‌ಸಿ ಕ್ಷೇತ್ರದಲ್ಲಿ ನಿಲ್ಲಬೇಕು, ಎಸ್‌ಟಿ (ST) ಕ್ಷೇತ್ರದಲ್ಲಿ ಎಸ್‌ಟಿ ಜನಾಂಗದವರು ಚುನಾವಣೆಗೆ ನಿಲ್ಲಬೇಕು. ಜನರಲ್‌ನವರು (General) ಜನರಲ್‌ನಲ್ಲಿ ನಿಲ್ಲಬೇಕು ಎಂಬ ನಿಯಮ ನಾವೇ ಮಾಡಿಕೊಂಡಿದ್ದೇವೆ. ಈ ನಿಯಮದಡಿ ಪಕ್ಷ ಸಿದ್ಧಾಂತ ಹಾಗೂ ಸಾಮಾಜಿಕ ನ್ಯಾಯದ ನಿಯಮ ಮಾಡಿಕೊಂಡಿದೆ ಎಂದರು. ಇದನ್ನೂ ಓದಿ: ಒಂದು ಲಕ್ಷ ಮತಗಳೊಂದಿಗೆ ಗೆಲುವು ಸಾಧಿಸುವೆ: ಪ್ರೀತಂ ಗೌಡ 

    ಎಸ್‌ಸಿ ಜನಾಂಗದವನಾಗಿ ಜನರಲ್‌ನಲ್ಲಿ ಟಿಕೆಟ್ ಕೇಳಿರುವುದು ನನ್ನ ತಪ್ಪು. ಪಕ್ಷದಲ್ಲಿ ಸಾಮಾಜಿಕ ನ್ಯಾಯ ಮತ್ತು ತತ್ವ ಸಿದ್ಧಾಂತಗಳು ಅವರದ್ದೇ ಆಗಿರುತ್ತದೆ. ಪಕ್ಷದ ಜನರಲ್‌ನಲ್ಲಿ ಟಿಕೆಟ್ ಕೇಳಿದ್ದರಿಂದ ಬೇರೆಯವರಿಗೆ ಅವಕಾಶ ಮಾಡಿಕೊಟ್ಟಿದೆ. ಹೀಗಾಗಿ ಜನರ ಮಧ್ಯದಿಂದ ಬಂದವನಾಗಿ ಜನರ ಮಧ್ಯೆ ಇರಬೇಕು ಎನ್ನುವ ದೃಷ್ಟಿಯಿಂದ ಕ್ಷೇತ್ರದ ಮತದಾರರ ಆಕಾಂಕ್ಷೆಯಂತೆ ಈ ಚುನಾವಣೆಯಲ್ಲಿ ಪಕ್ಷೇತರನಾಗಿ ಸ್ಪರ್ಧೆ ಮಾಡುತ್ತೇನೆ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ವರುಣಾ, ಚಾಮರಾಜನಗರ ಎರಡೂ ಕ್ಷೇತ್ರದಲ್ಲಿ ಗೆಲ್ಲುತ್ತೇವೆ: ಪುಟ್ಟರಂಗಶೆಟ್ಟಿ

  • ಚುನಾವಣೆಗೆ‌ ಸ್ಪರ್ಧಿಸಲು ಗೂಳಿಹಟ್ಟಿ ಶೇಖರ್‌ಗೆ ದೇಣಿಗೆ ನೀಡಿದ ಮತದಾರರು

    ಚುನಾವಣೆಗೆ‌ ಸ್ಪರ್ಧಿಸಲು ಗೂಳಿಹಟ್ಟಿ ಶೇಖರ್‌ಗೆ ದೇಣಿಗೆ ನೀಡಿದ ಮತದಾರರು

    ಚಿತ್ರದುರ್ಗ: ಚುನಾವಣೆಗೆ ‌ಸ್ಪರ್ಧಿಸುವಂತೆ ಒತ್ತಾಯಿಸಿ, ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್‌ಗೆ (Gulihatti Shekar) ಕ್ಷೇತ್ರದ ಮತದಾರರು‌ ದೇಣಿಗೆ‌ ನೀಡಿದ್ದಾರೆ.

    ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಮಾಡದಕೆರೆ ಹೋಬಳಿಯ ಮಲ್ಲಾಪುರ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಭೂಮಿಯ ಪೂಜೆ ಕಾರ್ಯಕ್ರಮದ‌ ವೇಳೆ ಸ್ಥಳಕ್ಕೆ ಆಗಮಿಸಿದ್ದ ಕೂಲಿ ಕಾರ್ಮಿಕ ಮಹಿಳೆಯರು ಹಾಗೂ ಸ್ತ್ರೀ ಸಂಘಗಳ ಕೆಲ ಮಹಿಳೆಯರು ಶಾಸಕ‌ಗೂಳಿಹಟ್ಟಿ ಶೇಖರ್ ಚುನಾವಣೆ (Election) ಖರ್ಚಿಗಾಗಿ ಹಣ ಕೊಟ್ಟು‌ ಬೆಂಬಲ ವ್ಯಕ್ತಪಡಿಸಿದ್ದಾರೆ.

    ಬಡ ಕೂಲಿ ಕಾರ್ಮಿಕರು ಹಾಗೂ ಸ್ತ್ರೀ ಶಕ್ತಿ ಸಂಘದ ಮಹಿಳೆಯರು ದಿಢೀರ್ ಅಂತ ಹಣ ನೀಡಲು ಬಂದಾಗ ಕ್ಷಣಕಾಲ ಶಾಸಕ ಶೇಖರ್ ಮುಜುಗರಕ್ಕೊಳಗಾದರು. ಈ ವೇಳೆ ಮಾಡದಕೆರೆ ಹೋಬಳಿಯ ಬಿಜೆಪಿ ‌(BJP) ಮುಖಂಡರು‌ ಹಾಗೂ ಶಾಸಕರ‌ ಬೆಂಬಲಿಗರು ಇದ್ದರು.

    ಕಳೆದ 2018ರ ಚುನಾವಣೆಯಲ್ಲೂ ಸಹ ಹೊಸದುರ್ಗ ಕ್ಷೇತ್ರದಾದ್ಯಂತ ಶಾಸಕ ಶೇಖರ್‌ಗೆ ಜನರು ದೇಣಿಗೆ ನೀಡಿದ್ದರು. ಆದರೆ ಈ ಬಾರಿ ಚುನಾವಣೆಗೂ ಮುನ್ನವೇ ದೇಣಿಗೆ ನೀಡಿ, ಶಾಸಕರಿಗೆ ಶುಭ ಹಾರೈಸಿದ್ದಾರೆ. ಇದನ್ನೂ ಓದಿ: ಗಗನಸಖಿ ಗೆಳತಿಯನ್ನು ಅಪಾರ್ಟ್‌ಮೆಂಟ್‌ನಿಂದ ತಳ್ಳಿ ಆತ್ಮಹತ್ಮೆ ನಾಟಕವಾಡಿದ್ದ ಟೆಕ್ಕಿ ಅರೆಸ್ಟ್‌

    ಈ ಬಾರಿ ಕ್ಷೇತ್ರದಲ್ಲಾಗಿರುವ ಏರುಪೇರು ಹಾಗೂ ಸ್ವಪಕ್ಷ‌ ಬಿಜೆಪಿ ಸರ್ಕಾರದ ವಿರುದ್ಧವೇ ಟೆಂಡರ್‌ ವಿಚಾರದಲ್ಲಿ ಶಾಸಕ‌ ಶೇಖರ್ ಗುಡುಗಿದ್ದನ್ನೆ ದಾಳವಾಗಿ ಬಳಸಿಕೊಂಡು ಅವರಿಗೆ ಟಿಕೆಟ್ ತಪ್ಪಿಸಲು ಕೆಲ ಬಿಜೆಪಿ ಟಿಕೆಟ್ ಆಕಾಂಕ್ಷಿಗಳು‌ ಭಾರೀ ಕಸರತ್ತು ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಟಿಕೆಟ್‌ಗಾಗಿ ಮುಖಂಡರಾದ ಲಿಂಗಮೂರ್ತಿ ಹಾಗೂ ಶಾಸಕ ಶೇಖರ್ ಮಧ್ಯೆ ಬಾರಿ ಪೈಪೋಟಿ‌ ಶುರುವಾಗಿದೆ. ಇದನ್ನೂ ಓದಿ: ಮೋದಿ ಬಂದ ಬೆನ್ನಲ್ಲೇ ಅಖಾಡಕ್ಕಿಳಿದ ಎಚ್‌ಡಿಡಿ – ಮಂಡ್ಯ ನಾಯಕರಿಗೆ ಖಡಕ್‌ ಸೂಚನೆ

  • RSS ಬಗ್ಗೆ ಮಾತನಾಡೋದು ಬೆಂಕಿ ಜೊತೆ ಸರಸವಿದ್ದಂತೆ: ಈಶ್ವರಪ್ಪ

    RSS ಬಗ್ಗೆ ಮಾತನಾಡೋದು ಬೆಂಕಿ ಜೊತೆ ಸರಸವಿದ್ದಂತೆ: ಈಶ್ವರಪ್ಪ

    ಚಿತ್ರದುರ್ಗ: ಆರ್‌ಎಸ್‌ಎಸ್ ಬಗ್ಗೆ ಮಾತನಾಡೋದು ಬೆಂಕಿ ಜೊತೆ ಸರಸವಿದ್ದಂತೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೊಸದುರ್ಗ ಪಟ್ಟಣದಲ್ಲಿ ಎಚ್ಚರಿಸಿದ್ದಾರೆ.

    ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಪಟ್ಟಣದಲ್ಲಿ ನಡೆದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಶಂಕು ಸ್ಥಾಪನೆ ನೆರೆವೇರಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನೆಹರು ಹಾಗೂ ಇಂದಿರಾಗಾಂಧಿ ಆರ್‌ಎಸ್‌ಎಸ್ ಬಗ್ಗೆ ಮಾತನಾಡಿ ಅನುಭವಿಸಿದ್ದಾರೆ. ಹೀಗಾಗಿ ಮಾಜಿ ಸಿಎಂಗಳಾದ ಸಿದ್ದರಾಮಯ್ಯ, ಹೆಚ್‍ಡಿ ಕುಮಾರಸ್ವಾಮಿ ಮತ್ತು ಡಿಕೆ ಶಿವಕುಮಾರ್ ಅವರಿಗೆ ಹೇಳಲು ಬಯಸುತ್ತೇನೆ. ಆರ್‌ಎಸ್‌ಎಸ್ ಬಗ್ಗೆ ಮಾತನಾಡೋದು ಬೆಂಕಿ ಜತೆ ಸರಸವಾಡಿದಂತೆ ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿ:  ಬಿಜೆಪಿ ತ್ಯಜಿಸಿ ಕಾಂಗ್ರೆಸ್ ಸೇರ್ಪಡೆಗೊಂಡ ಸಚಿವ ಯಶಪಾಲ್ ಆರ್ಯ, ಶಾಸಕ ಸಂಜೀವ್ ಆರ್ಯ

    ರಾಮನ ಬಗ್ಗೆ ರಾವಣನಿಗೆ ಎಲ್ಲಾ ಗೊತ್ತಿತ್ತು. ಆದರೆ ಶಿವಾಜಿ ಬಗ್ಗೆ ಔರಂಗಜೇಬ್ ಗೆ ಏನೂ ಗೊತ್ತಿರಲಿಲ್ಲ. ಹೀಗಾಗಿ ಅಂದು ಶಿವಾಜಿ ಹುಟ್ಟಿಲ್ಲದಿದ್ದರೆ ಈ ದೇಶದಲ್ಲಿ ಹಿಂದೂಗಳು ಯಾರು ಸಹ ಇರುತ್ತಿರಲಿಲ್ಲ. ಹಾಗೆಯೇ ಆರ್‌ಎಸ್‌ಎಸ್ ಇಲ್ಲದಿದ್ದರೆ ಯೋಚನೆ ಮಾಡಬೇಕಿತ್ತು. ಎಂದೋ ಈ ದೇಶ ಪಾಕಿಸ್ತಾನವೋ, ಇನ್ನೊಂದೆನೋ ಆಗುತ್ತಿತ್ತು. ಆದರೆ ಮುಸ್ಲಿಂ ಮತಕ್ಕಾಗಿ ಸಿದ್ದರಾಮಯ್ಯ ಅವರು ಬಾಯಿಗೆ ಬಂದಂತೆ ಮಾತನಾಡ್ತಿದ್ದಾರೆ. ಅವರೊಂದಿಗೆ ಕ್ರೈಸ್ತರ ಸಭೆಗೆ ಹೋಗಿ ಅವರ ಸಂತೃಪ್ತಿಗೊಳಿಸಲು ಹೆಚ್‍ಡಿಕೆ ಸಹ ಅವರನ್ನು ಅನುಸರಿಸಿ ಕ್ರೈಸ್ತರನ್ನ ಓಲೈಸುವ ಮಾತನಾಡ್ತಿದ್ದಾರೆ ಎಂದು ಟೀಕಿಸಿದ್ದಾರೆ.

    ಸಿದ್ದರಾಮಯ್ಯ, ಡಿಕೆಶಿ ಮತ್ತು ಕುಮಾರಸ್ವಾಮಿ ಅವರಿಗೆ ಹೇಳಬಯಸ್ತೀನಿ, ರಾಜಕೀಯದಲ್ಲಿ ಮಾಡಲು ಬೇಕಾದಷ್ಟು ವಿಚಾರಗಳಿವೆ. ಅದನ್ನ ಬಿಟ್ಟು ರಾಷ್ಟ್ರೀಯ ವಿಚಾರಗಳ ಬಗ್ಗೆ ರಾಜಕಾರಣ ಮಾಡೋದು ಬೇಡ. ಏಕೆಂದರೆ ಆರ್‌ಎಸ್‌ಎಸ್ ಯುವಕರಿಗೆ ರಾಷ್ಟ್ರೀಯ ವಿಚಾರ ಹಾಗು ಸಿದ್ಧಾಂತಗಳನ್ನು ತಿಳಿಸುತ್ತಿದೆ. ಸ್ವತಃ ಗಾಂಧೀಜಿ ಅವರೇ ಆರ್‌ಎಸ್‌ಎಸ್ ಕ್ಯಾಂಪಿಗೆ ಬಂದಿದ್ದರು. ಬಹಳ ಒಳ್ಳೆಯ ಕೆಲಸ ಮಾಡುತ್ತಿದ್ದೀರಿ ಎಂದು ಆರ್‌ಎಸ್‌ಎಸ್ ನಡೆಯನ್ನ ಒಪ್ಪಿಕೊಂಡಿದ್ದರು ಎಂದು ಹೇಳಿದ್ದಾರೆ. ಇದನ್ನೂ ಓದಿ:  ಕಸ ಸಂಗ್ರಹಣಾ ವಾಹನ ಚಲಾಯಿಸಿ ಜಾಗೃತಿ ಮೂಡಿಸಿದ ಶ್ರೀರಾಮುಲು

    ಈ ವೇಳೆ ಬಿಜೆಪಿಯನ್ನು ಕೊಲೆಗಡುಕ ಸರ್ಕಾರ ಎನ್ನುವ ಸಿದ್ದರಾಮಯ್ಯ ಅವರ ಸರ್ಕಾರ ಗೋ ಹತ್ಯೆ ನಿಷೇಧಕ್ಕಾಗಿ ಹೋರಾಡಿದ ಹಿಂದೂ ಯುವಕರನ್ನು ಕೊಲೆಗೈದಿದ್ದರು. ಆಕ್ಷಣವೇ ಸಿದ್ದರಾಮಯ್ಯ ಸಿಎಂ ಸ್ಥಾನ ಕಳೆದುಕೊಂಡಿದ್ರು. ಹೀಗಾಗಿ ಕೊಲೆಗಡುಕರು ಕಾಂಗ್ರೆಸ್ಸಿಗರು ಬಿಜೆಪಿ ಅವರು ಅಲ್ಲ ಎಂದು ಕಿಡಿಕಾರಿದ್ದಾರೆ. ಈ ಸಂದರ್ಭದಲ್ಲಿ ಈಶ್ವರಪ್ಪ ಅವರ ಜೊತೆ ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್ ಇದ್ದರು.

  • ಹೊಸದುರ್ಗದಲ್ಲಿ 4 ಕುಟುಂಬಗಳು ಹಿಂದೂ ಧರ್ಮಕ್ಕೆ ವಾಪಸ್‌

    ಹೊಸದುರ್ಗದಲ್ಲಿ 4 ಕುಟುಂಬಗಳು ಹಿಂದೂ ಧರ್ಮಕ್ಕೆ ವಾಪಸ್‌

    – ತಾಯಿ ಮರಳಿದ್ದಾರೆ ಎಂದ ಗೂಳಿಹಟ್ಟಿ ಶೇಖರ್‌
    – ಹಾಲುರಾಮೇಶ್ವರ ದೇಗುಲದಲ್ಲಿ ಹಿಂದೂ ಧರ್ಮಕ್ಕೆ ಸ್ವಾಗತ

    ಚಿತ್ರದುರ್ಗ: ಆಮಿಷಗಳಿಗೆ ಬಲಿಯಾಗಿ ಅನ್ಯ ಧರ್ಮಕ್ಕೆ ಮತಾಂತರವಾಗಿದ್ದ ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕಿನ ಬಲ್ಲಾಳಸಮುದ್ರದ ನಾಲ್ಕು ಕುಟುಂಬಗಳು ಇಂದು ಹಿಂದೂ ಧರ್ಮಕ್ಕೆ ಮರಳಿದ್ದಾರೆ.

    ಕುಟುಂಬದ ಆಧಾರಸ್ತಂಭವಾಗಿದ್ದ ಮನೆಯ ಯಜಮಾನನಿಗೆ ವಕ್ಕರಿಸಿದ್ದ ಕ್ಯಾನ್ಸರ್ ರೋಗವನ್ನೇ ಬಂಡವಾಳ ಮಾಡಿಕೊಂಡು ಪ್ರದೀಪ್ ಎಂಬವರ ಕುಟುಂಬವನ್ನು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಲಾಗಿತ್ತು. ಮತಾಂತರವಾಗಿ ಎರಡು ವರ್ಷ ಕಳೆದರೂ ಸಹ ಅವರ ತಂದೆಗೆ ರೋಗ ನಿವಾರಣೆ ಆಗಲಿಲ್ಲ. ಹೀಗಾಗಿ ಇಂದು ಹೊಸದುರ್ಗದ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಸಮ್ಮುಖದಲ್ಲಿ ನಾಲ್ಕು ಕುಟುಂಬಗಳು ಸ್ವಪ್ರೇರಣೆಯಿಂದ ಹಿಂದೂ ಧರ್ಮಕ್ಕೆ ಮರಳಿವೆ. ಇದನ್ನೂ ಓದಿ: ವಿದ್ಯುತ್‌ಗೆ ಸಮಸ್ಯೆ ಆಗಲ್ಲ, ದೇಶದಲ್ಲಿ ಕಲ್ಲಿದ್ದಲು ದಾಸ್ತಾನಿದೆ- ಪ್ರಹ್ಲಾದ್‌ ಜೋಷಿ ಸ್ಪಷ್ಟನೆ

    ಹಾಲುರಾಮೇಶ್ವರ ದೇಗುಲದಲ್ಲಿ ಕೇಸರಿ ಬಟ್ಟೆಯನ್ನು ಹಾಕುವ ಮೂಲಕ ಹಿಂದೂ ಧರ್ಮಕ್ಕೆ ಅವರನ್ನು ಸ್ವಾಗತಿಸಲಾಯಿತು. ಹಾಲು ರಾಮೇಶ್ವರನಿಗೆ ಪೂಜೆ ಸಲ್ಲಿಸಿ,ಪ್ರಸಾದ ಸ್ವೀಕರಿಸುವ ಮೂಲಕ ಹಿಂದೂ ಧರ್ಮಕ್ಕೆ ಘರ್ ವಾಪ್ಸಿ ಆಗಿದ್ದಾರೆ. ಇದನ್ನೂ ಓದಿ: ಚೀನಾ ಕೈಯಿಂದ ನಾರ್ವೆಯ ಸೋಲಾರ್‌ ಕಂಪನಿ ಖರೀದಿಸಿದ ರಿಲಯನ್ಸ್‌ 

    ಕಾಳ್ಗಿಚ್ಚಿನಂತೆ ನಮ್ಮ ಕ್ಷೇತ್ರದಲ್ಲಿ ಮತಾಂತರ ಹರಡುತ್ತಿದೆ ಎಂದು ಕ್ರೈಸ್ತ ಮಿಷಿನರಿಗಳ ವಿರುದ್ಧ ವಿಧಾನಸೌಧದಲ್ಲಿ ಗುಡುಗಿದ್ದ ಹೊಸದುರ್ಗದ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್, ಹುಟ್ಟಿನಿಂದಲೂ ಕ್ರೈಸ್ತ ಧರ್ಮದಲ್ಲಿರುವವರಿಗೆ ನನ್ನ ಮಾತುಗಳಿಂದ ನೋವಾಗಿದ್ದರೆ ಕ್ಷಮಿಸಬೇಕು ಅಂತ ಕ್ಷಮೆಯಾಚಿಸಿದ್ದಾರೆ. ಸ್ವತಃ ಅವರ ತಾಯಿಯೇ ಮತಂತಾರವಾಗಿದ್ದಾರೆಂದು ಅಸಮಧಾನ ವ್ಯಕ್ತಪಡಿಸಿದ್ದ ಅವರು, ಹೊಸದುರ್ಗ ಕ್ಷೇತ್ರದಲ್ಲಿ ಮತಾಂತರದ ವಿರುದ್ಧ ಸಮರ ಸಾರಿದ್ದಾರೆ. ಹೀಗಾಗಿ ಇಂದು ಹೊಸದುರ್ಗ ತಾಲ್ಲೂಕಿನ ಬಲ್ಲಾಳಸಮುದ್ರ ಗ್ರಾಮದಲ್ಲಿ ಮತಾಂತರವಾಗಿದ್ದ ನಾಲ್ಕು ಕುಟುಂಬಗಳನ್ನು ಇಂದು ವಾಪಸ್ ಹಿಂದೂ ಧರ್ಮಕ್ಕೆ ಕರೆ ತರುವಲ್ಲಿ ಯಶಸ್ವಿಯಾಗಿದ್ದಾರೆ.

    ಈ ವೇಳೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಕ್ಷೇತ್ರದಾದ್ಯಂತ ಹಿಂದೂ ಧರ್ಮಕ್ಕೆ ವಾಪಸ್ ಕರೆ ತರಲು ಘರ್ ವಾಪ್ಸಿ ಕಾರ್ಯಕ್ರಮ ನಡೆಸುತ್ತಿದ್ದೇನೆ. ಮತಾಂತರವಾಗಿದ್ದ ನನ್ನ ತಾಯಿ ಸಹ ಮರಳಿ ನಮ್ಮ ಹಿಂದೂ ಧರ್ಮಕ್ಕೆ ಬಂದಿದ್ದಾರೆ. ನನ್ನ ಮನೆಯಲ್ಲಿ ತಾಯಿ ಕ್ಷೇಮವಾಗಿದ್ದಾರೆ. ಹಾಗೆಯೇ ಮತಾಂತರ ಮಾಡುತ್ತಿರುವ ಮಿಷನರಿಗಳ ವಿರುದ್ಧ ನಾನು ಗುಡುಗಿದ್ದೇನೆ ಹೊರತು ಹುಟ್ಟಿನಿಂದಲೇ ಕ್ರೈಸ್ತ ಧರ್ಮದಲ್ಲಿರುವವರ ವಿಚಾರದಲ್ಲಿ ನನಗೆ ಸೋದರತೆಯ ಭಾವವಿದೆ. ಆದರೂ ಸಹ ನನ್ನ ಈ ಹೋರಾಟದಿಂದ ಅವರಿಗೆ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ. ಮತಾಂತರ ವಿಚಾರ ಇಟ್ಟುಕೊಂಡು ನಾನು ಹೊಸದುರ್ಗದಲ್ಲಿ ರಾಜಕೀಯ ಗಿಮಿಕ್ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

  • ಮತಾಂತರದ ಪಿಡುಗಿನ ಮಧ್ಯೆ ಯುವತಿ ಸಾಧನೆಯನ್ನು ಕೊಂಡಾಡಿದ ಗೂಳಿಹಟ್ಟಿ

    ಮತಾಂತರದ ಪಿಡುಗಿನ ಮಧ್ಯೆ ಯುವತಿ ಸಾಧನೆಯನ್ನು ಕೊಂಡಾಡಿದ ಗೂಳಿಹಟ್ಟಿ

    – UPSC ಪರೀಕ್ಷೆಯಲ್ಲಿ ಮಮತಾಗೆ 707ನೇ ರ‍್ಯಾಂಕ್

    ಚಿತ್ರದುರ್ಗ: ಕೇಂದ್ರ ಲೋಕಸೇವಾ ಆಯೋಗ (UPSC) ಪರೀಕ್ಷೆಯಲ್ಲಿ 707ನೇ ರ‍್ಯಾಂಕ್ ಪಡೆದಿರುವ ಮಮತಾ ಅವರಿಗೆ ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

    ಈ ಕುರಿತು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಬರೆದುಕೊಂಡು ಸಂತಸದ ಜೊತೆಗೆ ಮೆಚ್ಚುಗೆ ಕೂಡ ವ್ಯಕ್ತಪಡಿಸಿದ್ದಾರೆ. ನಮ್ಮ ಕ್ಷೇತ್ರಕ್ಕೆ ಅಂಟಿಕೊಂಡಿರುವ ಮತಾಂತರ ಪಿಡುಗಿನ ನಡುವೇ ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ದೇವಪುರ ಭೋವಿಹಟ್ಟಿ ಗ್ರಾಮದ ಮಮತಾ ಜಿ. ಅವರು ಯುಪಿಎಸ್ ಸಿ ಪರೀಕ್ಷೆಯಲ್ಲಿ 707ನೇ ರ‍್ಯಾಂಕ್ ಪಡೆದಿರೋದು ಶ್ಲಾಘನೀಯ ಎಂದಿದ್ದಾರೆ.

    ದೇವಪುರ ಭೋವಿಹಟ್ಟಿ ಗ್ರಾಮದ ಯುವತಿ ಜಿ.ಮಮತಾ ಖಾಸಗಿ ಶಾಲಾ ಶಿಕ್ಷಕರಾದಗೋವಿಂದಪ್ಪನವರ ಪುತ್ರಿ. ಇವರು ಅನೇಕ ಸಮಸ್ಯೆಗಳನ್ನು ಎದುರಿಸಿದ್ದಾರೆ. ಇಂತಹ ವೇಳೆ ಯಾವುದಕ್ಕೂ ಎದೆಗುಂದದೆ ಯುಪಿಎಸ್‍ಸಿ ಪರೀಕ್ಷೆಯಲ್ಲಿ ನನ್ನ ಕ್ಷೇತ್ರದ ಯುವತಿ ಸಾಧನೆ ನಮಗೆ ಅತೀವ ಸಂತೋಷ ತಂದಿದೆ. ಈ ಗ್ರಾಮದಲ್ಲಿ ಸುಮಾರು 20ಕ್ಕೂ ಅಧಿಕ ಕುಟುಂಬಗಳು ಮತಾಂತರ ಆಗಿವೆ. ಆದರೂ ಇದ್ಯಾವುದನ್ನು ಮನಸ್ಸಿಗೆ ತೆಗೆದುಕೊಳ್ಳದೇ ಶ್ರಮವಹಿಸಿ ಯುಪಿಎಸ್‍ಸಿ ಪರೀಕ್ಷೆಯಲ್ಲಿ ಉತ್ತಮ ಸ್ಥಾನ ಗಳಿಸಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಯುಪಿಎಸ್‍ಸಿ ಅಂತಿಮ ಫಲಿತಾಂಶ ಪ್ರಕಟ- ರಾಜ್ಯದ 18 ಮಂದಿ ಉತ್ತೀರ್ಣ

    ಈ ಹಿಂದೆ ಅಧಿವೇಶನದಲ್ಲಿ ಮತಾಂತರದ ಬಗ್ಗೆ ಸ್ವತಃ ಶಾಸಕರೇ ಪ್ರಸ್ತಾಪ ಮಾಡಿದ್ದು, ಇದೊಂದೇ ಗ್ರಾಮದಲ್ಲಿ ಬಹುಸಂಖ್ಯೆಯ ಜನರು ಮತಾಂತರ ಆಗಿದ್ದಾರೆ. ಆದರೆ ಇಂತಹ ಗೊಂದಲದ ಮಧ್ಯೆ ತನ್ನ ಸಾಧನೆಯನ್ನು ಸಾಧಿಸಿರುವ ಮಮತಾ ಅವರಿಗೆ ಅಭಿನಂದನೆಗಳ ಪೂರ ಹರಿದುಬರುತ್ತಿವೆ ಎಂದರು. ಇದನ್ನೂ ಓದಿ: ನನ್ನ ಹೆತ್ತ ತಾಯಿಯನ್ನ ಮತಾಂತರ ಮಾಡಿದ್ದಾರೆ: ಗೂಳಿಹಟ್ಟಿ ಶೇಖರ್

    ಸದ್ಯ ಮಮತಾ ಸಾಧನೆಯ ಬಗ್ಗೆ ಸಾಮಾಜಿಕ ಜಾಲಾತಾಣಗಳಲ್ಲಿ ಶಾಕರು ಸೇರಿದಂತೆ ಕೋಟೆನಾಡಿನ ಜನರು ವಾಟ್ಸಪ್ ಹಾಗೂ ಸೋಶಿಯಲ್ ಮೀಡಿಯಾ ಮುಖಪುಟದಲ್ಲಿ ಭಾವಚಿತ್ರ ಸಹಿತ ಬರೆದುಕೊಂಡು ಅಭಿನಂದನೆಗಳನ್ನು ಸಲ್ಲಿಸುತ್ತಿದ್ದಾರೆ.