Tag: ಗೂಫಿ ಪೈಂಟಲ್

  • ಮಹಾಭಾರತದ ಶಕುನಿ ಪಾತ್ರಧಾರಿ ಗೂಫಿ ಪೈಂಟಲ್ ನಿಧನ

    ಮಹಾಭಾರತದ ಶಕುನಿ ಪಾತ್ರಧಾರಿ ಗೂಫಿ ಪೈಂಟಲ್ ನಿಧನ

    ಕಿರುತೆರೆಯ ಖ್ಯಾತ ನಟ, ದೂರದರ್ಶನದಲ್ಲಿ ಪ್ರಸಾರವಾದ ಜನಪ್ರಿಯ ಧಾರಾವಾಹಿ ‘ಮಹಾಭಾರತದ’ (Mahabharata) ಶಕುನಿ ಪಾತ್ರಧಾರಿ ಗೂಫಿ ಪೈಂಟಲ್ ನಿಧನರಾಗಿದ್ದಾರೆ. ಮೊನ್ನೆಯಷ್ಟೇ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎನ್ನುವ ಮಾಹಿತಿ ಇತ್ತು. ವಾರದ ಹಿಂದೆಯೇ ಅವರನ್ನು ಆಸ್ಪತ್ರೆಗೆ (Hospital)  ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಖ್ಯಾತ ಕಿರುತೆರೆ ನಟಿ ಟೀನಾ ಘಾಯ್ ಮಾಹಿತಿ ನೀಡಿದ್ದರು.

    ವಯೋ ಸಹಜ ಕಾಯಿಲೆಯಿಂದ ಬಳಲುತ್ತಿರುವ 78ರ ವಯಸ್ಸಿನ ಗೂಫಿಗೆ (Gufi Paintal) ವೈದ್ಯರು ಚಿಕಿತ್ಸೆ ನೀಡುತ್ತಿದ್ದು, ದಿನದಿಂದ ದಿನಕ್ಕೆ ಅವರ ಆರೋಗ್ಯ ಹದೆಗೆಡುತ್ತಿದೆ ಎಂದು ಮೊನ್ನೆಯಷ್ಟೇ ವರದಿಯಾಗಿತ್ತು.ಆದರೆ, ಚಿಕಿತ್ಸೆ ಫಲಕಾರಿಯಾಗದೇ ಗೂಫಿ ನಿಧನರಾಗಿದ್ದಾರೆ. ಅವರ ನಿಧನಕ್ಕೆ ಅನೇಕರು ಕಂಬನಿ ಮಿಡಿದಿದ್ದಾರೆ. ಇದನ್ನೂ ಓದಿ:ದಾಂಪತ್ಯ ಜೀವನಕ್ಕೆ ಕಾಲಿಟ್ಟ ಟಾಲಿವುಡ್‌ ನಟ ಶರ್ವಾನಂದ್

    ಗೂಫಿ ಕೇವಲ ಕಿರುತೆರೆಯಲ್ಲಿ ಮಾತ್ರವಲ್ಲ, ಬಾಲಿವುಡ್ ನಲ್ಲೂ ಹಲವು ಚಿತ್ರಗಳಲ್ಲಿ  ನಟಿಸಿದ್ದಾರೆ. ಮಹಾಭಾರತದ ಹೊರತಾಗಿಯೂ ಹಲವಾರು ಧಾರಾವಾಹಿಗಳಲ್ಲಿ ಅವರು ನಟಿಸಿದ್ದಾರೆ. ಮಹಾಭಾರತದ ಶಕುನಿ (Shakuni) ಪಾತ್ರ ಅವರಿಗೆ ಸಾಕಷ್ಟು ಜನಪ್ರಿಯತೆ ತಂದುಕೊಟ್ಟಿತು. ಮೂಲತಃ ಇವರು ಪಂಜಾಬ್ ನವರು. ವೃತ್ತಿ ಬದುಕಿಗಾಗಿ ಮುಂಬೈಗೆ ಅರಸಿ ಬಂದರು. ಮುಂಬೈನಲ್ಲೇ ಉಳಿದುಕೊಂಡು ಅನೇಕ ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ನಟಿಸಿದರು.

  • ಶಕುನಿ ಪಾತ್ರಧಾರಿ ಗೂಫಿ  ಆರೋಗ್ಯ ಸ್ಥಿತಿ ಗಂಭೀರ

    ಶಕುನಿ ಪಾತ್ರಧಾರಿ ಗೂಫಿ ಆರೋಗ್ಯ ಸ್ಥಿತಿ ಗಂಭೀರ

    ದೂರದರ್ಶನದಲ್ಲಿ ಪ್ರಸಾರವಾದ ಜನಪ್ರಿಯ ಧಾರಾವಾಹಿ ‘ಮಹಾಭಾರತದ’ (Mahabharata) ಶಕುನಿ ಪಾತ್ರಧಾರಿ ಗೂಫಿ ಪೈಂಟಲ್ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎನ್ನುವ ಮಾಹಿತಿ ಇದೆ. ಮೂರು ದಿನಗಳ ಹಿಂದೆಯೇ ಅವರನ್ನು ಆಸ್ಪತ್ರೆಗೆ (Hospital)  ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಖ್ಯಾತ ಕಿರುತೆರೆ ನಟಿ ಟೀನಾ ಘಾಯ್ ಖಚಿತ ಪಡಿಸಿದ್ದಾರೆ.

    ವಯೋ ಸಹಜ ಕಾಯಿಲೆಯಿಂದ ಬಳಲುತ್ತಿರುವ 78ರ ವಯಸ್ಸಿನ ಗೂಫಿಗೆ (Goofy Paintal) ವೈದ್ಯರು ಚಿಕಿತ್ಸೆ ನೀಡುತ್ತಿದ್ದು, ದಿನದಿಂದ ದಿನಕ್ಕೆ ಅವರ ಆರೋಗ್ಯ ಹದೆಗೆಡುತ್ತಿದೆ ಎಂದು ಹೇಳಲಾಗುತ್ತಿದೆ. ಆದರೆ, ಈ ಕುರಿತು ಕುಟುಂಬ ಮಾಹಿತಿ ನೀಡಲು ನಿರಾಕರಿಸಿದೆ ಎಂದು ಮಾಧ್ಯಮಗಳ ವರದಿ ಮಾಡಿವೆ. ಆದರೆ, ನಟಿ ಟೀನಾ ಘಾಯ್, ನಟನ ಆರೋಗ್ಯಕ್ಕಾಗಿ ಪ್ರಾರ್ಥಿಸಿ ಎಂದು ಹೇಳಿದ್ದಾರೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ:ನೀನು ಮುಸ್ಲಿಂ ಸಮುದಾಯಕ್ಕೆ ಕಳಂಕ ಎಂದವರಿಗೆ ನಟಿ ಸಾರಾ ಹೇಳಿದ್ದೇನು?