Tag: ಗೂಢಾಚಾರಿ

  • ನರಿಬುದ್ಧಿ ಬಿಡದ ಪಾಕಿಸ್ತಾನ – ಪಾಕ್ ಗೂಢಾಚಾರಿ ಅರೆಸ್ಟ್

    ನರಿಬುದ್ಧಿ ಬಿಡದ ಪಾಕಿಸ್ತಾನ – ಪಾಕ್ ಗೂಢಾಚಾರಿ ಅರೆಸ್ಟ್

    ಜೈಪುರ: ರಾಜಸ್ಥಾನದ ಬಾರ್ಮೆರ್ ಪ್ರದೇಶದಲ್ಲಿ ಪಾಕಿಸ್ತಾನದ ಗೂಢಾಚಾರಿಯನ್ನು ರಕ್ಷಣಾ ಪಡೆಗಳು ಬಂಧಿಸಲಾಗಿದೆ.

    ರಾಜಸ್ಥಾನದ ಬಾರ್ಮೆರ್ ಗಡಿ ಪ್ರದೇಶವನ್ನು ದಾಟಿ ಬರುತ್ತಿದ್ದ ವೇಳೆ ಬೇಹುಗಾರಿಕಾ ವ್ಯಕ್ತಿಯನ್ನು ಬಂಧಿಸಲಾಗಿದೆ. ಪಾಕಿಸ್ತಾನ ಸೈನ್ಯಕ್ಕೆ ಸಹಾಯ ಮಾಡುವ ಉದ್ದೇಶದಿಂದ ಭಾರತೀಯ ಸೇನೆ ಹಾಗೂ ಗಡಿ ಭದ್ರತಾ ಪಡೆ (ಬಿಎಸ್‍ಎಫ್)ಯ ಮಾಹಿತಿಯನ್ನು ಆರೋಪಿ ಸಂಗ್ರಹಿಸುತ್ತಿದ್ದ ಎಂಬ ಮಾಹಿತಿ ಲಭಿಸಿದೆ.

    ಮಾಧ್ಯಮ ವರದಿಯ ಅನ್ವಯ, ಪಾಕಿಸ್ತಾನದಿಂದ ಬಂದ ವ್ಯಕ್ತಿಯನ್ನು ಕಿಶೋರ್ ಎಂದು ಗುರುತಿಸಲಾಗಿದ್ದು, ಹೆಚ್ಚಿನ ವಿಚಾರಣೆಗಾಗಿ ಜೈಪುರಕ್ಕೆ ಕಳುಹಿಸಿಕೊಡಲಾಗಿದೆ. ಗಡಿಯಲ್ಲಿ ಅಳವಡಿಸಿದ್ದ ಬೇಲಿಯ ಕೆಳಗೆ ತೆವಳಿಕೊಂಡು ಗಡಿದಾಟಿದ್ದ ಎನ್ನಲಾಗಿದ್ದು, ಸ್ಥಳೀಯ ಗ್ರಾಮಸ್ಥರು ಗಮನಿಸಿ ರಕ್ಷಣಾ ಪಡೆಗೆ ಮಾಹಿತಿ ನೀಡಿದ್ದಾರೆ.

    ಕಿಶೋರ್ ಬಾಯ್ಬಿಟ್ಟಿರುವ ಮಾಹಿತಿಯ ಅನ್ವಯ, ಆತನನ್ನು ಬಿಎಸ್‍ಎಫ್ ಹಾಗೂ ಭಾರತದ ಸೈನ್ಯದ ಮಾಹಿತಿಯನ್ನು ಸಂಗ್ರಹಿಸಿ ತರುವಂತೆ ಗೂಢಾಚಾರಿಯಂತೆ ಕಳುಹಿಸಲಾಗಿತ್ತು ಎಂದು ತಿಳಿಸಿದ್ದಾನೆ. ಮೊದಲ ಆತನ ಹಳ್ಳಿಯಿಂದ ಭಾರತ ಗಡಿ ಪ್ರದೇಶದ ಬಳಿಗೆ ರೈಲಿನ ಮೂಲಕ ಕರೆ ತಂದಿದ್ದು, ಆ ಬಳಿಕ ಪಾಕ್ ಸೇನೆ ಆತನಿಗೆ ಗಡಿ ದಾಟಲು ಸಹಾಯ ಮಾಡಿದೆ ತಿಳಿಸಿದ್ದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.

    ಗಡಿ ದಾಟುವ ಸಂದರ್ಭದಲ್ಲಿ ಹಸಿರು ಬಣ್ಣದ ಬಟ್ಟೆ ಧರಿಸಿದ್ದ ಕಾರಣ ಆತ ರಕ್ಷಣಾ ಪಡೆಯ ಕಣ್ಣಿಗೆ ಕಾಣದಂತೆ ಬಂದಿರುವ ಕುರಿತು ಮಾಹಿತಿ ಲಭಿಸಿದೆ. ಅಲ್ಲದೇ ಪಾಕಿಸ್ತಾನ ಸೇನೆ ಹಾಗೂ ಐಎಸ್‍ಐ ಸಹಾಯದಿಂದ ಉಗ್ರರು ಭಾರತದಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸಿದ್ದಾರೆ ಎಂದು ಬಂಧಿತ ತಿಳಿಸಿದ್ದಾನೆ. ಈಗಾಗಲೇ ಭಾರತದ ಜಮ್ಮು ಕಾಶ್ಮೀರ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಉಗ್ರರು ದಾಳಿ ನಡೆಸಲು ಸಂಚು ರೂಪಿಸಿದ್ದಾರೆ ಎಂದು ಭಾರತೀಯ ಗೂಢಾಚಾರ ಇಲಾಖೆ ಎಚ್ಚರಿಕೆ ನೀಡಿದ್ದು, ಸೂಕ್ಷ್ಮ ಪ್ರದೇಶಗಳಲ್ಲಿ ಎಚ್ಚರಿಕೆಯಿಂದ ಇರುವಂತೆ ಕೇಂದ್ರ ಈಗಾಗಲೇ ಸೂಚನೆ ನೀಡಿದೆ.

  • ನರಿಬುದ್ಧಿ ಬಿಡದ ಪಾಕಿಸ್ತಾನ – ಪಾಕ್ ಗೂಢಾಚಾರಿಯ ಬಂಧನ

    ನರಿಬುದ್ಧಿ ಬಿಡದ ಪಾಕಿಸ್ತಾನ – ಪಾಕ್ ಗೂಢಾಚಾರಿಯ ಬಂಧನ

    ನವದೆಹಲಿ: ಪಂಜಾಬ್‍ನ ಫಿರೋಜ್ ಪುರದಲ್ಲಿ ಪಾಕಿಸ್ತಾನದ ಬೇಹುಗಾರನನ್ನು ಬಂಧಿಸಲಾಗಿದೆ.

    ಗಡಿ ಭದ್ರತಾ ಪಡೆ(ಬಿಎಸ್‍ಎಫ್‍) ನಿಂದ ಪಾಕ್ ಬೇಹುಗಾರನ ಬಂಧನವಾಗಿದೆ. ಅತ್ತ ಪಾಕ್ ಶಾಂತಿ ಮಂತ್ರವನ್ನು ಪಠಿಸುತ್ತಿದೆ. ಆದರೆ ಇತ್ತ ಬೇಹುಗಾರನನ್ನು ಕಳುಹಿಸುವ ಮೂಲಕ ಮತ್ತೆ ಪಾಕಿಸ್ತಾನ ತನ್ನ ನರಿ ಬುದ್ಧಿಯನ್ನು ಪ್ರದರ್ಶಿಸಿದೆ.

    ಈಗಾಗಲೇ ಕುಲ್‍ದೀಪ್ ಭೂಷಣ್ ಪಾಕಿಸ್ತಾನದಲ್ಲಿ ಇದ್ದಾರೆ. ಈ ಬಗ್ಗೆ ಅಂತರಾಷ್ಟ್ರೀಯ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತದೆ. ಅಲ್ಲದೇ ಇದೀಗ ಪಾಕ್ ವಶದಲ್ಲಿರುವ ವಿಂಗ್ ಕಮಾಂಡರ್ ಅಭಿನಂದನ್ ವರ್ಥಮಾನ್ ಅವರನ್ನು ಶಾಂತಿ ಸ್ಥಾಪನೆಯ ಉದ್ದೇಶದಿಂದ ಬಿಡುಗಡೆ ಮಾಡುತ್ತೇವೆ ಎಂದು ಹೇಳಿತ್ತು. ಆದ್ರೆ ಈ ಮಧ್ಯೆ ಬೇಹುಗಾರನೊಬ್ಬನನ್ನು ಭಾರತಕ್ಕೆ ಕಳುಹಿಸಿದ್ದು, ಇದೀಗ ಆತ ಸಿಕ್ಕಿಹಾಕಿಕೊಂಡಿದ್ದಾನೆ. ಈ ಬಗ್ಗೆ ಪಾಕಿಸ್ತಾನ ಏನು ಉತ್ತರ ಕೊಡುತ್ತದೆ ಹಾಗೂ ಭಾರತ ಏನು ಕ್ರಮ ಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

    ಅಷ್ಟೆ ಅಲ್ಲದೆ ಮುಂಜಾನೆ ಪಾಕಿಸ್ತಾನದ ಭಯೋತ್ಪಾದಕರು ಭದ್ರತಾ ಪಡೆಯ ಮೇಲೆ ಗುಂಡಿನ ಚಕಮಕಿ ನಡೆಸಿದ್ದಾರೆ. ನಮ್ಮ ಭಾರತೀಯ ಸೇನೆ ಇಬ್ಬರು ಉಗ್ರರನ್ನು ಹೊಡೆದುರುಳಿಸಿತ್ತು. ಜೊತೆಗೆ ಮೂವರು ಉಗ್ರರನ್ನು ಸುತ್ತುವರಿದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬೇಹುಗಾರಿಕೆಯಲ್ಲಿ ತೊಡಗಿದ್ದ ಚೀನಾದ ಗೂಢಚಾರನ ಬಂಧನ: ಆತನ ಬಳಿ ಸಿಕ್ಕಿದ್ದು ಏನು?

    ಬೇಹುಗಾರಿಕೆಯಲ್ಲಿ ತೊಡಗಿದ್ದ ಚೀನಾದ ಗೂಢಚಾರನ ಬಂಧನ: ಆತನ ಬಳಿ ಸಿಕ್ಕಿದ್ದು ಏನು?

    ನವದೆಹಲಿ: ಭಾರತದಲ್ಲಿ ಬೇಹುಗಾರಿಕೆ ನಡೆಸುತ್ತಿದ್ದ ಶಂಕೆ ಹಿನ್ನೆಲೆಯಲ್ಲಿ ದೆಹಲಿಯ ಪೊಲೀಸರು ಚೀನಾದ ಗೂಢಾಚಾರನೊಬ್ಬನನ್ನು ಬಂಧಿಸಿದ್ದಾರೆ.

    39 ವರ್ಷದ ಚಾರ್ಲಿ ಪೆಂಗ್ ಬಂದಿತ ಚೀನಾದ ಗೂಢಚಾರ. ಆರೋಪಿಯನ್ನು ಸೆಪ್ಟಂಬರ್ 13ರಂದು ಮಂಜು ಕಾ ತಿಲ್ಲಾ ಎಂಬಲ್ಲಿ ಪೊಲೀಸರು ಬಂಧಿಸಿದ್ದರು. ಈ ವೇಳೆ ಆರೋಪಿ ಬಳಿ ಭಾರತೀಯ ಪಾಸ್‍ಪೋರ್ಟ್, ಆಧಾರ್ ಕಾರ್ಡ್, 3.5 ಲಕ್ಷ ರೂಪಾಯಿ ನಗದು, ಒಂದು ಕಾರು ಹಾಗೂ ಮಹತ್ವದ ದಾಖಲೆಗಳನ್ನು ವಶಪಡಿಸಕೊಂಡಿದ್ದಾರೆ. ಇದಲ್ಲದೇ 2,000 ಸಾವಿರ ಅಮೆರಿಕನ್ ಡಾಲರ್ ಹಾಗೂ 2,000 ಥಾಯ್ ಕರೆನ್ಸಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

    ಪ್ರಾಥಮಿಕ ಮಾಹಿತಿಗಳ ಪ್ರಕಾರ ಚಾರ್ಲಿ ಪೆಂಗ್ ಒಬ್ಬ ನುರಿತ ಗುಢಾಚಾರನೆಂದು ಹೇಳಲಾಗುತ್ತಿದೆ. ಈತ 5 ವರ್ಷಗಳ ಹಿಂದೆ ಭಾರತಕ್ಕೆ ಬಂದು ದೆಹಲಿಯಲ್ಲಿ ನೆಲೆಸಿದ್ದನು. ಅಲ್ಲದೇ ಪದೇ ಪದೇ ಹಿಮಾಚಲ ಪ್ರದೇಶ ಮತ್ತು ಈಶಾನ್ಯ ರಾಜ್ಯಗಳಿಗೆ ಭೇಟಿ ನೀಡುತ್ತಿದ್ದನು ಎಂದು ತಿಳಿದು ಬಂದಿದೆ.

    ಈತ ಭಾರತೀಯ ಯುವತಿಯನ್ನು ವಿವಾಹವಾಗಿ ಆಕೆಯ ಮೂಲಕ ಮಣಿಪುರ ವಿಳಾಸದ ಆಧಾರದ ಮೇಲೆ ಭಾರತದ ಆಧಾರ್ ಕಾರ್ಡ್ ಹಾಗೂ ಪಾಸ್‍ಪೋರ್ಟ್ ಹೊಂದಿದ್ದನು. ಈತ ದೆಹಲಿಯ ಗುರುಗ್ರಾಮದಲ್ಲಿ ವಿದೇಶಿ ವಿನಿಯ ಕರೆನ್ಸಿ ಕಚೇರಿಯನ್ನು ಹೊಂದಿ ಬೇಹುಗಾರಿಕೆಯನ್ನು ನಡೆಸುತ್ತಿದ್ದ ಎನ್ನುವ ಮಾಹಿತಿ ವಿಚಾರಣೆ ವೇಳೆ ತಿಳಿದು ಬಂದಿದೆ ಎಂದು ವರದಿಯಾಗಿದೆ.

    ಚಾರ್ಲಿ ಪೆಂಗ್ ತನ್ನ ವಿದೇಶಿ ವಿನಿಮಯ ಕಚೇರಿಯ ಮೂಲಕ ಹವಾಲ ದಂದೆ ನಡೆಸುತ್ತಿದ್ದರ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದರು. ಆದರೆ ಈತನನ್ನು ತೀವ್ರವಾಗಿ ವಿಚಾರಣೆಗೆ ಒಳಪಡಿಸಿದಾಗ ಚಾರ್ಲಿ ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವುದು ಬೆಳಕಿಗೆ ಬಂದಿದೆ. ಹೀಗಾಗಿ ಸದ್ಯ ಆರೋಪಿಯನ್ನು ಸ್ಥಳೀಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರು ಪಡಿಸಿ, ಹೆಚ್ಚಿನ ವಿಚಾರಣೆಗೆ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv