Tag: ಗೂಡ್ಸ್ ವಾಹನ

  • ಕಾರು, ಗೂಡ್ಸ್ ವಾಹನ ಮುಖಾಮುಖಿ ಡಿಕ್ಕಿ – ಇಬ್ಬರು ಮಹಿಳೆಯರ ಸಾವು, 8 ಮಂದಿಗೆ ಗಾಯ

    ಕಾರು, ಗೂಡ್ಸ್ ವಾಹನ ಮುಖಾಮುಖಿ ಡಿಕ್ಕಿ – ಇಬ್ಬರು ಮಹಿಳೆಯರ ಸಾವು, 8 ಮಂದಿಗೆ ಗಾಯ

    ಬಾಗಲಕೋಟೆ: ಕಾರು (Car) ಹಾಗೂ ಗೂಡ್ಸ್ ವಾಹನ (Goods Vehicle) ಮುಖಾಮುಖಿ ಡಿಕ್ಕಿಯಾದ ಪರಿಣಾಮ ಇಬ್ಬರು ಮಹಿಳೆಯರು (Women) ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬಾಗಲಕೋಟೆ (Bagalkote) ಜಿಲ್ಲೆಯ ಹುನಗುಂದ (Hungund) ತಾಲೂಕಿನ ರಕ್ಕಸಗಿಯಲ್ಲಿ (Rakkasagi) ನಡೆದಿದೆ.

    ಮೃತ ಮಹಿಳೆಯರು ಗೂಡ್ಸ್ ವಾಹನದಲ್ಲಿದ್ದು, ಹುನಗುಂದದಿಂದ ಅಮೀನಗಢ ಮಾರ್ಗವಾಗಿ ಬರುತ್ತಿದ್ದರು. ಈ ವೇಳೆ ಕಾರು ಮತ್ತು ಗೂಡ್ಸ್ ವಾಹನ ಮುಖಾಮುಖಿ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಗಾಯಗೊಂಡ ಎಂಟು ಜನರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರಿನಲ್ಲಿದ್ದ ಏರ್‌ಬ್ಯಾಗ್ ಓಪನ್ ಆದ ಕಾರಣ ಕಾರು ಚಾಲಕ ಸಾವಿನಿಂದ ಪಾರಾಗಿದ್ದಾನೆ. ಇದನ್ನೂ ಓದಿ: ಪ್ರಿಯಕರನ ಜೊತೆ ಸೇರಿ ಉಸಿರುಗಟ್ಟಿಸಿ ಅತ್ತೆ ಕೊಂದಿದ್ದ ಸೊಸೆ ಅರೆಸ್ಟ್

    ಮೃತರು ರಾಯಚೂರು (Raichur) ಜಿಲ್ಲೆಯ ಲಿಂಗಸೂರು ಭಾಗದವರು ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಅಮೀನಗಢ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಘಟನೆ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಇದನ್ನೂ ಓದಿ: ಶಿವಾಜಿಗೆ ಅವಮಾನ – ಠಾಣೆ ಮುಂದೆ ಜನ ಸೇರುತ್ತಿದ್ದಂತೆ ಕಿಡಿಗೇಡಿಗಳ ವಿರುದ್ಧ ಎಫ್‌ಐಆರ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಟ್ಯೂಶನ್ ಮುಗಿಸಿ ಹೋಗ್ತಿದ್ದ ಮಕ್ಕಳಿಗೆ ಗೂಡ್ಸ್ ವಾಹನ ಡಿಕ್ಕಿ – ಗಾಯಗೊಂಡಿದ್ದ ಮತ್ತೊಂದು ಬಾಲಕ ಸಾವು

    ಟ್ಯೂಶನ್ ಮುಗಿಸಿ ಹೋಗ್ತಿದ್ದ ಮಕ್ಕಳಿಗೆ ಗೂಡ್ಸ್ ವಾಹನ ಡಿಕ್ಕಿ – ಗಾಯಗೊಂಡಿದ್ದ ಮತ್ತೊಂದು ಬಾಲಕ ಸಾವು

    ರಾಮನಗರ: ಟ್ಯೂಶನ್ (Tuition) ಮುಗಿಸಿ ಮನೆಗೆ ಹೋಗುತ್ತಿದ್ದ ಮಕ್ಕಳಿಗೆ ಗೂಡ್ಸ್ ವಾಹನ (Goods Vehicle) ಡಿಕ್ಕಿ ಹೊಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಗಾಯಗೊಂಡಿದ್ದ ಮತ್ತೊಂದು ಬಾಲಕ ಸಾವನ್ನಪ್ಪಿದ ಘಟನೆ ರಾಮನಗರದಲ್ಲಿ (Ramanagara) ನಡೆದಿದೆ.

    ಸುಚಿತ್ (10) ಮೃತ ದುರ್ದೈವಿ. ರಾಮನಗರ ತಾಲೂಕಿನ ಗೊಲ್ಲರದೊಡ್ಡಿ ಗ್ರಾಮದಲ್ಲಿ ಅಪಘಾತ ನಡೆದಿದ್ದು, ಸಾವಿನ ಸಂಖ್ಯೆ ಒಟ್ಟು ಮೂರಕ್ಕೆ ಏರಿದೆ. ಆಗಸ್ಟ್ 9ರಂದು ಟ್ಯೂಶನ್ ಮುಗಿಸಿಕೊಂಡು ಐವರು ಮಕ್ಕಳು ಮನೆಗೆ ಹೋಗುತ್ತಿದ್ದ ಸಂದರ್ಭ ಗೂಡ್ಸ್ ವಾಹನ ಡಿಕ್ಕಿಯಾಗಿದ್ದು, ಇಬ್ಬರು ಸಾವನ್ನಪ್ಪಿದ್ದರು. ಇದನ್ನೂ ಓದಿ: ರಾತ್ರಿ ತಡವಾಗಿ ಬಂದ ಮಗನಿಗೆ ಬುದ್ಧಿವಾದ ಹೇಳಿದ ತಾಯಿ- ಮನನೊಂದು ಯುವಕ ಆತ್ಮಹತ್ಯೆ

    ಘಟನೆಯಿಂದ ಬದುಕುಳಿದ ಮೂವರು ಮಕ್ಕಳಿಗೆ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಈ ಪೈಕಿ ಸುಚಿತ್ ಗುರುವಾರ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ. ಇನ್ನಿಬ್ಬರು ಮಕ್ಕಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿ: ಕೂಲಿ ಕಾರ್ಮಿಕನ ಕುಟುಂಬದ ಮೇಲೆ ಮೇಸ್ತ್ರಿಯಿಂದ ಮಾರಣಾಂತಿಕ ಹಲ್ಲೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹಣ್ಣಿನ ವಾಹನದಲ್ಲಿ ಗೋಮಾಂಸ ಸಾಗಾಟ – ಮೂವರು ಆರೋಪಿಗಳ ಬಂಧನ

    ಹಣ್ಣಿನ ವಾಹನದಲ್ಲಿ ಗೋಮಾಂಸ ಸಾಗಾಟ – ಮೂವರು ಆರೋಪಿಗಳ ಬಂಧನ

    ಕಾರವಾರ: ಹಣ್ಣಿನ ವಾಹನದಲ್ಲಿ ಗೋವಿನ ಮಾಂಸವನ್ನು ಅಡಗಿಸಿಟ್ಟುಕೊಂಡು ಭಟ್ಕಳಕ್ಕೆ ಸಾಗಾಟ ಮಾಡುತ್ತಿರುವುದನ್ನು ಪತ್ತೆ ಹಚ್ಚಿದ ಶಿರಾಲಿ ಚೆಕ್ ಪೋಸ್ಟ್ ಸಿಬ್ಬಂದಿ ಗೂಡ್ಸ್ ವಾಹನ ಸಹಿತ ಮೂವರನ್ನು ಬಂಧಿಸಿದ್ದಾರೆ.

    ಹೊನ್ನಾವರದಿಂದ ಭಟ್ಕಳದ ಕಡೆಗೆ ಕಲ್ಲಂಗಡಿ ಹಣ್ಣುಗಳೂ ಸೇರಿದಂತೆ ಇತರೇ ಹಣ್ಣುಗಳನ್ನು ತುಂಬಿಕೊಂಡು ಅದರ ಅಡಿಯಲ್ಲಿ ಸುಮಾರು 500 ಕೆ.ಜಿ.ಯಷ್ಟು ದನದ ಮಾಂಸವನ್ನು ಸಾಗಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪೊಲೀಸರು, ವಾಹನವು ಶಿರಾಲಿ ಚೆಕ್ ಪೋಸ್ಟ್ ಹತ್ತಿರ ತಲುಪುತ್ತಲೇ ನಿಲ್ಲಿಸಿ ತಪಾಸಣೆ ನಡೆಸಿದ್ದಾರೆ. ಈ ವೇಳೆ ವಾಹನದಲ್ಲಿ ತುಂಬಿದ್ದ ಹಣ್ಣುಗಳ ಅಡಿಯಲ್ಲಿ ಬಚ್ಚಿಟ್ಟಿದ್ದ ಗೋವಿನ ಮಾಂಸ ಪತ್ತೆಯಾಗಿದೆ. ಇದನ್ನೂ ಓದಿ: ಕಾರವಾರ ಸಮುದ್ರದ ತೀರ ಪ್ರದೇಶದಲ್ಲಿ ನೀಲಿ ಬೆಳಕಿನ ವಿಸ್ಮಯ!

    ಗೂಡ್ಸ್ ವಾಹನದಲ್ಲಿ ಗೋವಿನ ಮಾಂಸವನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಮೌಲಾ ಅಲಿ ಬಾಷಾ ಸಾಬ್ ತೋಟದ್ ಹಾನಗಲ್, ಜೀಲಾನಿ ಗೌಸ್ ಮೊಹಿದ್ದೀನ್ ಹಾಗೂ ಭಟ್ಕಳದ ಮುಝಾಫರ್ ಎನ್ನುವವರನ್ನು ಬಂಧಿಸಿದ್ದು, ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ನಿಂತಿದ್ದ ಟಾಟಾ ಏಸ್ ವಾಹನಕ್ಕೆ ಕಾರು ಡಿಕ್ಕಿ

    ನಿಂತಿದ್ದ ಟಾಟಾ ಏಸ್ ವಾಹನಕ್ಕೆ ಕಾರು ಡಿಕ್ಕಿ

    ಮಡಿಕೇರಿ: ತರಕಾರಿ ತುಂಬಿ ರಸ್ತೆ ಬದಿ ನಿಂತಿದ್ದ ಟಾಟಾ ಏಸ್ ವಾಹನಕ್ಕೆ ಕಾರು ಡಿಕ್ಕಿಯಾದ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಸುಂಟಿಕೊಪ್ಪ ಸಮೀಪದ 7ನೇ ಮೈಲಿ ಬಳಿ ಸಂಭವಿಸಿದೆ. ಅದೃಷ್ಟವಶಾತ್ ಎರಡೂ ವಾಹನಗಳಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಬೆಂಗಳೂರಿನಿಂದ ಮಡಿಕೇರಿ ಕಡೆಗೆ ತೆರಳುತ್ತಿದ್ದ ಮಾರುತಿ ಸುಜುಕಿ ಬಲೆನೋ ಕಾರು (ಕೆಎ13-ಪಿ.5434) ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ 7ನೇ ಮೈಲಿ ಬಳಿ, ತರಕಾರಿ ತುಂಬಿ ರಸ್ತೆ ಬದಿ ನಿಂತಿದ್ದ ಟಾಟಾ ಏಸ್ ವಾಹನಕ್ಕೆ ಡಿಕ್ಕಿಯಾಗಿದೆ. ಕಾರು ಡಿಕ್ಕಿಯಾದ ರಭಸಕ್ಕೆ ಟಾಟಾ ಏಸ್ ವಾಹನದಲ್ಲಿದ್ದ ತರಕಾರಿ ಚೆಲ್ಲಾಪಿಲಿಯಾಗಿ ರಸ್ತೆಗೆ ಬಿದ್ದಿವೆ.

    ಕಾರು ಅತೀ ವೇಗದಲ್ಲಿದ್ದ ಪರಿಣಾಮ ಎರಡು ಬಾರಿ ಪಲ್ಟಿಯಾಗಿ ರಸ್ತೆಗೆ ಬಿದ್ದಿದೆ. ಆದರೆ ವಾಹನದಲ್ಲಿದ್ದವರಿಗೆ ಸಣ್ಣ ಪ್ರಮಾಣದ ಗಾಯಗಳಿಂದ ಪಾರಾಗಿದ್ದಾರೆ. ಸುಂಟಿಕೊಪ್ಪ ಠಾಣಾಧಿಕಾರಿ ಪುನೀತ್ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

  • ಗೂಡ್ಸ್ ವಾಹನ ಚಾಲಕರಿಗೆ ಸರ್ಕಾರ ಸಹಾಯ ಮಾಡದಿದ್ದರೆ ಪ್ರತಿಭಟನೆಯ ಎಚ್ಚರಿಕೆ

    ಗೂಡ್ಸ್ ವಾಹನ ಚಾಲಕರಿಗೆ ಸರ್ಕಾರ ಸಹಾಯ ಮಾಡದಿದ್ದರೆ ಪ್ರತಿಭಟನೆಯ ಎಚ್ಚರಿಕೆ

    – ಪ್ಯಾಕೇಜ್ ಘೋಷಣೆಗೆ ಆಗ್ರಹ

    ನೆಲಮಂಗಲ: ರಾಜ್ಯ ಸರ್ಕಾರ ಗೂಡ್ಸ್ ವಾಹನ ಚಾಲಕರಿಗೆ ವಾಹನಗಳ ವಿಮಾಕಂತು ಹಾಗೂ ತೆರಿಗೆಗಳನ್ನು ಒಂದು ವರ್ಷ ಮುಂದೂಡುವ ಜೊತೆ ಚಾಲಕರಿಗೆ ಸಹಾಯವನ್ನು ಸರ್ಕಾರ ಮಾಡಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಪ್ರತಿಭಟನೆ ಮಾಡಲಾಗುವುದು ಎಂದು ಕರ್ನಾಟಕ ವಾಣಿಜ್ಯ ವಾಹನಗಳ ಮಾಲೀಕರು ಮತ್ತು ಚಾಲಕರ ಸಂಘ ಸಂಸ್ಥಾಪಕ ಅಧ್ಯಕ್ಷ ಎಂಪಿ ರವೀಶ್ ಎಚ್ಚರಿಕೆ ನೀಡಿದ್ದಾರೆ.

    ನೆಲಮಂಗಲ ಪೊಲೀಸ್ ಉಪವಿಭಾಗ ವ್ಯಾಪ್ತಿಯ ಮಾದವಾರದ ಬಳಿ ಕರ್ನಾಟಕ ವಾಣಿಜ್ಯ ವಾಹನಗಳ ಮಾಲೀಕರು ಮತ್ತು ಚಾಲಕರ ಸಂಘ ವತಿಯಿಂದ ಗೂಡ್ಸ್ ವಾಹನಗಳ ಚಾಲಕರಿಗೆ ಆಹಾರ ಪ್ಯಾಕೇಟ್ ನೀಡಿ ಮಾತನಾಡಿದ ಎಂಪಿ ರವೀಶ್, ಕೊರೊನಾ ಸಂಕಷ್ಟದಲ್ಲಿ ವೈದ್ಯಕೀಯ ಸಲಕರಣೆಗಳು, ದಿನಸಿ ಸಾಮಗ್ರಿಗಳು ಸೇರಿದಂತೆ ಪ್ರತಿಯೊಂದು ಸಾಮಗ್ರಿಗಳನ್ನು ಸಾಗಿಸುವ ಕೆಲಸ ನಾವು ಮಾಡುತ್ತಿದ್ದೇವೆ. ಈಗಾಗಲೇ ಅನೇಕ ಚಾಲಕರು ಕೊರೊನಾ ಸೋಂಕಿನಿಂದ ನಲುಗುತ್ತಿದ್ದಾರೆ. ಸರಿಯಾದ ಬಾಡಿಗೆಗಳು ಸಿಗದೇ ಗೂಡ್ಸ್ ವಾಹನಗಳು ನಷ್ಟ ಅನುಭವಿಸುತ್ತಿದ್ದು ಸರ್ಕಾರ ನಮ್ಮ ವಾಹನಗಳ ಇಎಮ್‍ಐ ಪಾವತಿಯಲ್ಲಿ ವಿನಾಯಿತಿ, ವಿಮಾಕಂತು ಹಾಗೂ ತೆರಿಗೆಯನ್ನು ಒಂದು ವರ್ಷ ಮುಂದೂಡಬೇಕೆಂದು ಆಗ್ರಹಿಸಿದರು. ಇದನ್ನೂ ಓದಿ: ಪಬ್ಲಿಕ್ ಟಿವಿ ಇಂಪ್ಯಾಕ್ಟ್ – ಕಾಸು ಕೊಟ್ರೆ ಡೆತ್ ಸರ್ಟಿಫಿಕೇಟ್ ಡೀಲ್ ತನಿಖೆಗೆ ಅಶೋಕ್ ಆರ್ಡರ್!

    ಗೂಡ್ಸ್ ವಾಹನ ಮಾಲೀಕರು ಹಾಗೂ ಚಾಲಕರ ಕಷ್ಟಕ್ಕೆ ಸರ್ಕಾರ ಸ್ಪಂದನೆ ನೀಡಬೇಕು, ನಮ್ಮ ಬೇಡಿಕೆಯ ಮನವಿ ಸ್ಪಂದನೆ ಸಿಗದಿದ್ದರೇ ರಾಜ್ಯಾದ್ಯಂತ ಗೂಡ್ಸ್ ವಾಹನಗಳನ್ನು ಸ್ಥಗಿತಗೊಳಿಸಿ ಹೋರಾಟ ಮಾಡಲಾಗುತ್ತದೆ ಎಂದರು. ಮಾದವರದ ಬಳಿ ಬೆಂಗಳೂರು ಹಾಗೂ ನೈಸ್ ರಸ್ತೆಯ ಮೂಲಕ ಹೋಗುವ ಗೂಡ್ಸ್ ವಾಹನಗಳ ಚಾಲಕರಿಗೆ ಕರ್ನಾಟಕ ವಾಣಿಜ್ಯ ವಾಹನಗಳ ಮಾಲೀಕರು ಮತ್ತು ಚಾಲಕರ ಸಂಘದಿಂದ ಒಂದು ಸಾವಿರದಷ್ಟು ನೀರಿನ ಬಾಟಲ್, ಆಹಾರದ ಪ್ಯಾಕೇಟ್ ಹಾಗೂ ಮಾಸ್ಕ್, ಸ್ಯಾನಿಟೈಸರ್ ನೀಡಲಾಯಿತು. ಈ ಸಂದರ್ಭದಲ್ಲಿ ಸಂಘದ ಗೌರವ ಅಧ್ಯಕ್ಷ ಹೆಚ್.ವಿಜಯಕುಮಾರ್, ರಾಜ್ಯಾಧ್ಯಕ್ಷ ಎಂ.ಮುನಿಕೃಷ್ಣ, ಉಪಾಧ್ಯಕ್ಷ ಕುಪ್ಪುಸ್ವಾಮಿ, ರಾಜ್ಯ ಸಹಕಾರ್ಯದರ್ಶಿ ರಮೇಶ್ ಮತ್ತಿತರರಿದ್ದರು.

  • ಬೈಕ್‍ಗೆ ಗೂಡ್ಸ್ ವಾಹನ ಡಿಕ್ಕಿ – ಸವಾರ ಸ್ಥಳದಲ್ಲೇ ಸಾವು

    ಬೈಕ್‍ಗೆ ಗೂಡ್ಸ್ ವಾಹನ ಡಿಕ್ಕಿ – ಸವಾರ ಸ್ಥಳದಲ್ಲೇ ಸಾವು

    – ಚಾಲಕನಿಗೆ ಸ್ಥಳೀಯರಿಂದ ಥಳಿತ

    ಮಂಡ್ಯ: ಬೈಕ್‍ಗೆ ಗೂಡ್ಸ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದು, ಸ್ಥಳೀಯರು ಚಾಲಕನ್ನು ಹಿಡಿದು ಥಳಿಸಿರುವ ಘಟನೆ ಮಂಡ್ಯ ಜಿಲ್ಲೆಯ ಕೆಆರ್ ಪೇಟೆ ತಾಲೂಕಿನ ಸಾಧುಗೋನಹಳ್ಳಿ ಗ್ರಾಮದ ಬಳಿ ಜರುಗಿದೆ.

    ಹೆಗ್ಗಡಹಳ್ಳಿ ಗ್ರಾಮದ ಮನು (32) ಮೃತ ಯುವಕ. ಮನು ಬೈಕ್ ನಲ್ಲಿ ಕೆ.ಆರ್.ಪೇಟೆಗೆ ದಿನಸಿ ತರಲು ತೆರಳಿದ್ದನು. ದಿನಸಿ ತೆಗೆದುಕೊಂಡು ವಾಪಸ್ಸು ಊರಿಗೆ ತೆರಳುತ್ತಿದ್ದ ವೇಳೆ ಹಿಂಬದಿಯಿಂದ ಗೂಡ್ಸ್ ವಾಹನ ಬೈಕ್‍ಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಬೈಕ್‍ನಿಂದ ಕೆಳಗೆ ಬಿದ್ದ ಮನುವಿನ ತಲೆಯ ಭಾಗಕ್ಕೆ ತೀವ್ರ ಪೆಟ್ಟು ಬಿದ್ದ ಕಾರಣ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

    ಈ ಸಂದರ್ಭದಲ್ಲಿ ಸ್ಥಳೀಯರು ಚಾಲಕನನ್ನು ಹಿಡಿದು ಥಳಿಸಿದ್ದಾರೆ. ನಂತರ ಗೂಡ್ಸ್ ವಾಹನದ ಚಾಲಕನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಕುರಿತು ಕೆಆರ್ ಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಬೆಂಗ್ಳೂರಲ್ಲಿ ರೇಷ್ಮೆ ಗೂಡು ಸಾಗಿಸುತ್ತಿದ್ದ ವಾಹನ ಪಲ್ಟಿ!

    ಬೆಂಗ್ಳೂರಲ್ಲಿ ರೇಷ್ಮೆ ಗೂಡು ಸಾಗಿಸುತ್ತಿದ್ದ ವಾಹನ ಪಲ್ಟಿ!

    ಬೆಂಗಳೂರು: ಗೂಡ್ಸ್ ತುಂಬಿಕೊಂಡು ತೆರಳುತ್ತಿದ್ದ ವಾಹನವೊಂದು ಪಲ್ಟಿಯಾದ ಘಟನೆ ಗೊರಗುಂಟೆ ಪಾಳ್ಯದ ಮಾರ್ಡನ್ ಬ್ರೀಡ್ ಫ್ಯಾಕ್ಟರಿ ಬಳಿ ನಡೆದಿದೆ.

    ವಾಹನದಲ್ಲಿ ರೇಷ್ಮೆ ಗೂಡನ್ನ ತುಂಬಿಕೊಂಡು ಶಿಡ್ಲಘಟ್ಟದಿಂದ ರಾಮನಗರಕ್ಕೆ ಸಾಗಿಸಲಾಗುತ್ತಿತ್ತು. ಈ ವೇಳೆ ಗೊರಗುಂಟೆ ಪಾಳ್ಯದ ಮಾರ್ಡನ್ ಬ್ರೀಡ್ ಫ್ಯಾಕ್ಟರಿ ಬಳಿ ತಿರುವು ತೆಗೆದುಕೊಳ್ಳುವ ವೇಳೆ ಮರದ ಕೊಂಬೆಗೆ ಟಚ್ ಆಗಿ ಗೂಡ್ಸ್ ಗಾಡಿ ಪಲ್ಟಿ ಹೊಡೆದಿದೆ.

    ಅದೃಷ್ಟವಶಾತ್ ಘಟನೆಯಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಯಶವಂತಪುರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • ಕಾರು ತಪಾಸಣೆ ವೇಳೆ ಗೂಡ್ಸ್ ಲಾರಿ ಡಿಕ್ಕಿ- ಕರ್ತವ್ಯ ನಿರತ ಮುಖ್ಯಪೇದೆ ದುರ್ಮರಣ

    ಕಾರು ತಪಾಸಣೆ ವೇಳೆ ಗೂಡ್ಸ್ ಲಾರಿ ಡಿಕ್ಕಿ- ಕರ್ತವ್ಯ ನಿರತ ಮುಖ್ಯಪೇದೆ ದುರ್ಮರಣ

    ರಾಮನಗರ: ಚುನಾವಣೆ ಹಿನ್ನೆಲೆಯಲ್ಲಿ ಚೆಕ್ ಪೋಸ್ಟ್ ನಲ್ಲಿ ತಪಾಸಣೆ ನಿರತ ಮುಖ್ಯಪೇದೆಗೆ ಗೂಡ್ಸ್ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಮೃತಪಟ್ಟ ಘಟನೆ ರಾಮನಗರ ತಾಲೂಕಿನ ಹೆಜ್ಜಾಲ ಬಳಿ ನಡೆದಿದೆ.

    ಮಹಾಲಿಂಗ(39) ಸಾವನ್ನಪ್ಪಿದ ಪೇದೆಯಾಗಿದ್ದು, ಇವರು ಬಿಡದಿ ಪೊಲೀಸ್ ಠಾಣೆಯ ಮುಖ್ಯಪೇದೆ. ಚುನಾವಣೆ ಹಿನ್ನೆಲೆ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ರಾತ್ರಿ ಚೆಕ್ ಪೋಸ್ಟ್ ನಲ್ಲಿ ಕಾರು ತಪಾಸಣೆ ನಡೆಸುವ ವೇಳೆ ವೇಗವಾಗಿ ಬಂದ ಗೂಡ್ಸ್ ವಾಹನ ಇವರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದ ಪೇದೆ ಮಹಾಲಿಂಗ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲು ತೆರಳುವ ವೇಳೆ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ.

    ಇನ್ನೂ ಗೂಡ್ಸ್ ವಾಹನದ ಚಾಲಕ ಪರಾರಿಯಾಗಿದ್ದು, ಬಿಡದಿಯ ಕುಂಬಳಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.