ರಾಮನಗರ: ಗೂಡ್ಸ್ ವಾಹನ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದ ಇಬ್ಬರು (Children) ಮಕ್ಕಳು ಸಾವಿಗೀಡಾಗಿದ್ದಾರೆ.
ರಾಮನಗರ (Ramanagar) ತಾಲೂಕಿನ ಲಕ್ಷ್ಮೀಪುರ ಗ್ರಾಮದ ಬಳಿ ಟ್ಯೂಶನ್ ಮುಗಿಸಿ ಮನೆಗೆ ಹೊಗುತ್ತಿದ್ದಾಗ ಮಕ್ಕಳಿಗೆ ಗೂಡ್ಸ್ ವಾಹನ ಡಿಕ್ಕಿ ಹೊಡೆದಿತ್ತು. ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ಐವರು ಮಕ್ಕಳನ್ನ ರಾಮನಗರದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆ ಕೊಡಿಸಲಾಗ್ತಿತ್ತು.
ಆದರೆ ಚಿಕಿತ್ಸೆ ಫಲಿಸದೇ ರೋಹಿತ್ (5), ಶಾಲಿನಿ (8) ಮೃತಪಟ್ಟಿದ್ದಾರೆ. ಉಳಿದ ಸುಚಿತ್, ಗೌತಮಿ, ಲೇಖನಗೆ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಆಸ್ಪತ್ರೆಗೆ ಎಎಸ್ಪಿ ಸುರೇಶ್ ಭೇಟಿ, ಅಪಘಾತದ ಕುರಿತು ಮಾಹಿತಿ ಸಂಗ್ರಹಿಸಿದ್ದಾರೆ. ಇದನ್ನೂ ಓದಿ: ಯುವತಿ ಮದ್ವೆಗೆ ಒಪ್ಪಿಲ್ಲ ಅಂತ 850 ಅಡಿಕೆ ಗಿಡ ನಾಶ ಮಾಡಿದ ಕಿರಾತಕ
ಮಕ್ಕಳಿಗೆ ಗುದ್ದಿ ಎಸ್ಕೇಪ್ ಆಗಿದ್ದ ಗೂಡ್ಸ್ ವಾಹನ ಚಾಲಕ ತನ್ನ ವಾಹನವನ್ನ ಬೇರೆಡೆ ನಿಲ್ಲಿಸಿ ಎಸ್ಕೇಪ್ ಆಗಿದ್ದಾನೆ. ಈ ಸಂಬಂಧ ರಾಮನಗರ ಗ್ರಾಮಾಂತರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತುಮಕೂರು: ಅಂತರಸನಹಳ್ಳಿಯ ಟಾಟಾ ಪ್ರೇರಣಾ ಮೋಟರ್ಸ್ ನಲ್ಲಿ ಯುವ ರೈತ ಕುಮಾರ್ ಖರೀದಿಸಿದ್ದ ಟಾಟಾ ಇಂಟ್ರಾ ಗೂಡ್ಸ್ (TATA Intra Goods) ವಾಹನದಲ್ಲಿ ಮೋಸ ಮಾಡಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಶೋ ರೂಂ ಸರ್ವಿಸ್ ಮ್ಯಾನೇಜರ್ ಏಕನಾಥ್ ಸ್ಪಷ್ಟನೆ ಕೊಟ್ಟಿದ್ದಾರೆ.
ಸ್ಪಷ್ಟನೆ ಏನು?: 27 ಸಾವಿರ ಕಿ.ಮೀ. ಗಾಡಿ ರನ್ ಆಗಿದ್ದಾಗ ಒಂದು ಬಾರಿ ಸರ್ವಿಸ್ ಮಾಡಲು ಗಾಡಿ ತಂದಿದ್ದಾರೆ. ಪವರ್ ಸ್ಟೇರಿಂಗ್ ಸಮಸ್ಯೆ ಎಂದು ಬಂದಿದ್ದರು. ಅವಾಗ ನಾವು ಬದಲಾವಣೆ ಮಾಡಿಕೊಟ್ಟಿದ್ದೇವೆ. ಈಗ ಬಂದು ಹೊಸ ಸಮಸ್ಯೆ ಹೇಳುತ್ತಿದ್ದಾರೆ. ಹೊಂಡ ಗುಂಡಿಯಲ್ಲಿ ಗಾಡಿ ಬಿದ್ರೆ ಟಕ್ ಎಂದು ಸೌಂಡ್ ಬರುತ್ತೆ ಅಂತ ಹೇಳುತ್ತಿದ್ದಾರೆ. ಅದು ನಮಗೆ ಕಂಡು ಬರುತ್ತಿಲ್ಲ. ಇದನ್ನೂ ಓದಿ: ಖರೀದಿಸಿದ ಆರೇ ತಿಂಗಳಲ್ಲಿ ವಾಹನ ರಿಪೇರಿ- ಹಳೆ ಇಂಜಿನ್‍ಗೆ ಹೊಸ ಬಾಡಿ ಹಾಕಿರುವ ಆರೋಪ
ಗಾಡಿಯನ್ನು ಒಂದು ದಿನ ಸಂಪೂರ್ಣವಾಗಿ ಶೋ ರೂಂನಲ್ಲಿ ಬಿಟ್ಟು ಹೋಗಿ ನಾವು ರಿಪೇರಿ ಮಾಡಿಕೊಡುತ್ತೇವೆ ಎಂದು ಹೇಳಿದ್ದೇವೆ. ಆದರೂ ಅವರು ಗಾಡಿ ಬಿಟ್ಟು ಹೋಗಲಿಕ್ಕೆ ಮುಂದಾಗುತ್ತಿಲ್ಲ. ಒಂದು ದಿನ ಗಾಡಿ ಬಿಟ್ಟು ಹೋದರೆ ನಮಗೆ ವ್ಯವಹಾರ ನಷ್ಟ ಆಗುತ್ತದೆ ಅಂತ ಹೇಳುತ್ತಾರೆ. ಗಾಡಿ ರಿಪೇರಿಗೆ ಬಿಟ್ಟರೆ ಒಂದು ದಿನದ ಮಟ್ಟಿಗೆ ಬದಲಿ ಇನ್ನೊಂದು ಗಾಡಿ ಅವರಿಗೆ ಕೊಡಬೇಕಂತೆ. ಇಲ್ಲಾಂದ್ರೆ ಆ ದಿನದ ಒಂದು ಬಾಡಿಗೆ ಕೊಡಿ ಅಂತ ಹೇಳ್ತಾರೆ. ಯಾವ ಕಂಪನಿಯಲ್ಲೂ ಆ ರೀತಿ ಆಯ್ಕೆ ಇಲ್ಲ.
ಈ ಮಾದರಿಯ ವಾಹನದಲ್ಲಿ ಇಲ್ಲಿಯವರೆಗೆ ಯಾವುದೇ ರೀತಿಯ ದೂರು ಬಂದಿಲ್ಲ. ಮೊದಲ ಬಾರಿಗೆ ದೂರು ಬಂದಿದೆ. ಅವರು ಗಾಡಿಯನ್ನು ಒಂದಿನ ಪೂರ್ತಿ ಗ್ಯಾರೇಜ್ ನಲ್ಲಿ ಬಿಟ್ಟು ಹೋದರೆ ನಾವು ಫ್ರೀ ಆಫ್ ಕಾಸ್ಟ್ಲಿ ಎಲ್ಲವೂ ರೆಡಿ ಮಾಡಿಕೊಡುತ್ತೇವೆ. ನಿಮ್ಮ ಗಾಡಿಯ ಸಮಸ್ಯೆಯನ್ನು ನೀವೇ ಮುಂದೆ ನಿಂತು ರಿಪೇರಿ ಮಾಡಿಕೊಂಡು ಹೋಗಿ ಎಂದು ನಾವು ಹೇಳಿದ್ದೇವೆ. ಆದರೆ ಅವರು ನಮ್ಮ ಮಾತು ಕೇಳುತ್ತಿಲ್ಲ.
ಆರು ತಿಂಗಳಿಗೆ 70 ಸಾವಿರ ಕಿ.ಮೀ. ಗಾಡಿ ಓಡಿದೆ. ಅಷ್ಟೊಂದು ರನ್ ಆಗಲು ಹೇಗೆ ಸಾಧ್ಯ? ಟಾಟಾ ಮೋಟರ್ಸ್ ಮೊದಲ 72 ಸಾವಿರ ಕಿ.ಮೀ.ವರೆಗೆ ಮಾತ್ರ ಉಚಿತವಾಗಿ ರಿಪೇರಿ ಮಾಡಲಿಕ್ಕೆ ಅವಕಾಶ ಇದೆ. ನಾವು ರಿಪೇರಿ ಮಾಡಿಕೊಡುತ್ತೇವೆ ಎಂದು ಹೇಳಿದ್ದೇವೆ. ಆದರೂ ಅವರು ನಮ್ಮ ಮಾತನ್ನು ಕೇಳುತ್ತಿಲ್ಲ ಎಂದು ಏಕನಾಥ್ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಚೀಲ, ಬೆಡ್‍ಶೀಟ್‍ನಲ್ಲಿ ಸುತ್ತಿದ ರೀತಿಯಲ್ಲಿ ವೃದ್ಧನ ಮೃತದೇಹ ಪತ್ತೆ
ಏನಿದು ಪ್ರಕರಣ?
ಟಾಟಾ ಶೋ ರೂಂನಿಂದ ನನಗೆ ಮೋಸ ಆಗಿದೆ. ಖರೀದಿಸಿದ ಟಾಟಾ ಗೂಡ್ಸ್ ವಾಹನ (TaTa Goods) 25 ದಿನಕ್ಕೆ ಕೆಟ್ಟು ನಿಂತಿದೆ. ಹಳೇ ಇಂಜಿನ್‍ಗೆ ಹೊಸ ಬಾಡಿ ಫಿಕ್ಸ್ ಮಾಡಿ ಕೊಟ್ಟಿರಬಹುದು ಎಂದು ಅನುಮಾನ ವ್ಯಕ್ತಪಡಿಸಿ ಯುವ ರೈತನೋರ್ವ ಶೋ ರೂಂ ಎದುರುಗಡೆ ಪ್ರತಿಭಟನೆ ನಡೆಸಿದ್ದರು.
ತುಮಕೂರಿನ ಅಂತರಸಹಳ್ಳಿಯ ಟಾಟಾ ಶೋರೂಂನಲ್ಲಿ ಹೆಬ್ಬೂರಿನ ಕುಮಾರ್ ಎಂಬ ಯುವ ರೈತನೋರ್ವ ಮೇ ತಿಂಗಳಲ್ಲಿ ಟಾಟಾ ಇಂಟ್ರಾ ಗೂಡ್ಸ್ ವಾಹನ ಖರೀದಿಸಿದ್ದರು. ಆದರೆ ವಾಹನ ಖರೀದಿಸಿದ 25 ದಿನದಲ್ಲೇ ವಾಹನ ರಿಪೇರಿಗೆ ಬಂದಿದೆ. ಸ್ಟೇರಿಂಗ್ ಸಮಸ್ಯೆ, ಚಾರ್ಸಿ ವೆಲ್ಡಿಂಗ್, ಎಕ್ಸ್ ಲೇಟರ್ ಒತ್ತಿದಾಗ ಗಾಡಿ ಪೂರ್ತಿ ಶೇಖ್ ಆಗೋ ಸಮಸ್ಯೆ ಕಂಡು ಬಂದಿದೆ. ಕಂಪನಿ ರೂಲ್ಸ್ ಪ್ರಕಾರ 72 ಸಾವಿರ ಕಿ.ಮೀ. ಒಳಗೆ ಓಡಿದರೆ ರೀಪ್ಲೇಸ್‌ಮೆಂಟ್ ಮಾಡಿಕೊಡಬೇಕು. ಆದರೆ ಶೋ ರೂಂನವರು ಕಳೆದ 6 ತಿಂಗಳಲ್ಲಿ ಬರೋಬ್ಬರಿ 11 ಬಾರಿ ರಿಪೇರಿ ಮಾಡಿ ಕಳುಹಿಸಿದ್ದಾರೆಯೇ ಹೊರತು ಬದಲಿ ವಾಹನ ಕೊಟ್ಟಿಲ್ಲ. ಇದರಿಂದ ರೊಚ್ಚಿಗೆದ್ದ ಯುವ ರೈತ ಕುಮಾರ್ ಟಾಟಾ ಶೋ ರೂಂ ಬಳಿ ಪ್ರತಿಭಟನೆ ಮಾಡಿದ್ದಾರೆ.
ಯುವ ರೈತ ಕುಮಾರ್ ಕೃಷಿ ಬಳಕೆಗೆ ವಾಹನ ಬಳಸುವ ಜೊತೆಗೆ ರೈತರಿಂದ ಸಂಗ್ರಹಿಸಿದ ಹಾಲನ್ನೂ ವಾಹನದ ಮೂಲಕ ಡೈರಿಗೆ ಸರಬರಾಜು ಮಾಡುವ ಕೆಲಸ ಮಾಡುತ್ತಿದ್ದ. ಮೊನ್ನೆ ದಿನ ಗೂಡ್ಸ್ ವಾಹನ ಮತ್ತೇ ಇದ್ದಕ್ಕಿದ್ದ ಹಾಗೆ ಕೈಕೊಟ್ಟಿತು. ಪರಿಣಾಮ ಸಕಾಲಕ್ಕೆ ಡೈರಿಗೆ ತಲುಪಲು ಆಗದೇ ಸುಮಾರು 900 ಲೀಟರ್ ಹಾಲು ಕೆಟ್ಟು ಹೋಗಿ ಸುಮಾರು 27 ಸಾವಿರ ರೂ. ನಷ್ಟ ಆಗಿದೆ. ಕಾಟಾಚಾರಕ್ಕೆ ಶೋರೂಂನವರು ರಿಪೇರಿ ಮಾಡಿಕೊಡ್ತಿದ್ದಾರೆಯೇ ಹೊರತು ಬದಲಿ ವಾಹನ ಕೊಡುವ ಮಾತನಾಡುತ್ತಿಲ್ಲ. ಹಳೇ ಇಂಜಿನ್‍ಗೆ ಹೊಸ ಬಾಡಿ ಫಿಕ್ಸ್ ಮಾಡಿಕೊಟ್ಟಿದ್ದಾರೆ ಅನ್ನೋ ಆರೋಪ ಕುಮಾರ್ ಮಾಡಿದ್ದಾರೆ. ಆದರೆ ಶೋ ರೂಂನವರು ಈ ಆರೋಪವನ್ನು ತಳ್ಳಿಹಾಕಿದ್ದಾರೆ. ಇದನ್ನೂ ಓದಿ: ನವೆಂಬರ್ ಅಂತ್ಯಕ್ಕೆ ಶ್ರೀರಂಗಪಟ್ಟಣ-ಮದ್ದೂರು ಬೈಪಾಸ್ ಓಪನ್
ಸದ್ಯ ಈ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ವಾಹನ ಖರೀದಿಸಿ ಪರದಾಡುತ್ತಿದ್ದ ಯುವ ರೈತ ಕುಮಾರ್ ಬದಲಿ ವಾಹನ ಕೊಡುವಂತೆ ಪಟ್ಟು ಹಿಡಿದಿದ್ದಾನೆ.
Live Tv
[brid partner=56869869 player=32851 video=960834 autoplay=true]
ಕಲಬುರಗಿ: ಗೂಡ್ಸ್ ವಾಹನ ಹಾಗೂ ಕಾರು ಮುಖಾಮುಖಿ ಡಿಕ್ಕಿಯಾದ ಪರಿಣಾಮ ಎರಡು ವಾಹನಗಳ ಚಾಲಕರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಆಳಂದ ತಾಲೂಕಿನ ಚಿತಲಿ ಗ್ರಾಮದ ಬಳಿ ನಡೆದಿದೆ.
ಆಳಂದ ಪಟ್ಟಣದ ಬಾಳೇನಗಲ್ಲಿ ನಿವಾಸಿ, ಗೂಡ್ಸ್ ಚಾಲಕ ಜಾಫರ್ ಖಾಸೀಂ (27), ಗುಜರಾತ್ ಮೂಲದ ಉದ್ಯಮಿ ಕಾರು ಚಾಲಕ ಜೋಧಾರಾಮ ಜಸ್ವಂತ್ (40) ಮೃತ ದುರ್ದೈವಿಗಳು. ಕಾರಿನಲ್ಲಿದ್ದ ಇನ್ನೋರ್ವ ಹೀರಾರಾಮ ಎಂಬಾತ ಗಂಭೀರ ಗಾಯಗೊಂಡಿದ್ದು, ಹೈದರಾಬಾದ್‍ನ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಇದನ್ನೂ ಓದಿ: ನನಗೆ ಸಿಎಂ ಆಗೋ ಎಲ್ಲಾ ಅರ್ಹತೆಯಿದೆ: ಉಮೇಶ್ ಕತ್ತಿ
ಜಾಫರ್ ಆಳಂದನಿಂದ ಮಹಾರಾಷ್ಟ್ರದ ಉಮರ್ಗಾಕ್ಕೆ ಗೂಡ್ಸ್ ವಾಹನದಲ್ಲಿ ಸಾಗುತ್ತಿದ್ದ. ಗುಜರಾತ್ ಮೂಲದ ವ್ಯಾಪಾರಿಗಳಾದ ಜೋಧಾರಾಮ, ಹೀರಾರಾಮ ಉಮರ್ಗಾದಿಂದ ಕಾರಿನಲ್ಲಿ ಆಳಂದಕ್ಕೆ ಬರುತ್ತಿರುವಾಗ ಘಟನೆ ಸಂಭವಿಸಿದೆ. ಸ್ಥಳಕ್ಕೆ ಸಿಪಿಐ ಬಾಸು ಚವ್ಹಾಣ್, ಪಿಎಸ್‍ಐ ತಿರುಮಲೇಶ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಕುರಿತು ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಸೆಪ್ಟೆಂಬರ್‌ವರೆಗೂ ಉಚಿತ ಪಡಿತರ ಯೋಜನೆಯನ್ನು ವಿಸ್ತರಿಸಿದ ದೆಹಲಿ ಸರ್ಕಾರ
ಲಕ್ನೋ: ಗೂಡ್ಸ್ ರೈಲು ಹಳಿ ತಪ್ಪಿದ್ದು, ನಾಲ್ಕು ಬೋಗಿಗಳು ಪಲ್ಟಿಯಾಗಿ ಬಿದ್ದಿರುವ ಘಟನೆ ಕೊತ್ವಾಲಿ ಪ್ರದೇಶದಲ್ಲಿ ನಡೆದಿದೆ.
ಇಂದು ಮುಂಜಾನೆ ಸಿಮೆಂಟ್ ಮೂಟೆಗಳನ್ನು ತುಂಬಿಕೊಂಡು ಆಗ್ರಾದಿಂದ ದೆಹಲಿಗೆ ಹೋಗುತ್ತಿದ್ದ ಗೂಡ್ಸ್ ರೈಲು ಹಳಿ ತಪ್ಪಿದೆ. ನಾಲ್ಕು ಬೋಗಿಗಳು ಪಲ್ಟಿಯಾಗಿ ಬಿದ್ದಿವೆ. ನಾಲ್ಕು ಬೋಗಿ ಪಲ್ಟಿಯಾಗಿದ್ದರಿಂದ ಹಳಿ ಹಾಳಾಗಿದ್ದು, ಸ್ಥಳದಲ್ಲಿ ಜೆಸಿಬಿ ಹಾಗೂ ರೈಲ್ವೆ ತಂಡದಿಂದ ದುರಸ್ತಿ ಕಾರ್ಯಾಚರಣೆ ನಡೆಯುತ್ತಿದೆ. ಇದನ್ನೂ ಓದಿ: ಗೋವಾ ಚುನಾವಣೆ- ಜಗದೀಶ್ ಶೆಟ್ಟರ್ ಪ್ರಚಾರ, ಮತಯಾಚನೆ
ಇಂದು ಮುಂಜಾನೆ ಘಟನೆ ಸಂಭವಿಸಿದೆ. ಗೂಡ್ಸ್ ರೈಲು ಬೋಗಿ ಪಲ್ಟಿಯಾದ ಬಗ್ಗೆ ಮಾಹಿತಿ ಪಡೆದ ರೈಲ್ವೆ ಇಲಾಖೆ ಅಧಿಕಾರಿಗಳು ಮತ್ತು ಆರ್‌ಪಿಎಫ್ ತಂಡ ಸ್ಥಳಕ್ಕೆ ಧಾವಿಸಿ ಮಾಹಿತಿ ಕಲೆ ಹಾಕಿದ್ದಾರೆ. ಜೊತೆಗೆ ಈ ಮಾರ್ಗದಲ್ಲಿ ಸಂಚರಿಸುವ ವಾಹನಗಳ ಮಾರ್ಗ ಬದಲಿಸಲಾಗಿದೆ. ಸಿಮೆಂಟ್ ತುಂಬಿದ ಕೋಚ್‍ಗಳನ್ನು ತೆಗೆದುಹಾಕಲು 300ಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ:ಕೋವಿನ್ ಖಾಸಗಿ ಮಾಹಿತಿ ಸೋರಿಕೆ ಆಗಿಲ್ಲ: ಕೇಂದ್ರ
ಸರಕು ಸಾಗಣೆ ರೈಲು ಹಳಿ ತಪ್ಪಿದ ನಂತರ ಮಥುರಾ ಮತ್ತು ದೆಹಲಿ ನಡುವೆ ರೈಲು ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಹಾಸನ: ಚಾಲಕನ ನಿಯಂತ್ರಣ ತಪ್ಪಿದ ಬೊಲೆರೋ ಗೂಡ್ಸ್ ಗಾಡಿ ಹೆದ್ದಾರಿಯ ಪಕ್ಕದಲ್ಲಿದ್ದ ವಿದ್ಯುತ್ ಕಂಬಕ್ಕೆ ಗುದ್ದಿ ರಸ್ತೆ ಮಧ್ಯೆ ಅಡ್ಡಲಾಗಿ ಬಿದ್ದ ಘಟನೆ ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿ ನಡೆದಿದೆ.
ಅಕ್ಕಿ ತುಂಬಿಕೊಂಡು ಶಿವಮೊಗ್ಗದಿಂದ ಬೆಂಗಳೂರು ಕಡೆ ಸಾಗುತ್ತಿದ್ದ ಬೊಲೆರೋ ಗೂಡ್ಸ್ ಗಾಡಿ, ನಗರದ ಪಿಪಿ ವೃತ್ತದ ಸಮೀಪ ರಾಷ್ಟ್ರೀಯ ಹೆದ್ದಾರಿ 206ರ ಟಿಎಚ್ ರಸ್ತೆ ವಿಭಜಕದ ಮಧ್ಯೆ ಅಳವಡಿಸಿರುವ ವಿದ್ಯುತ್ ಕಂಬಕ್ಕೆ ಗುದ್ದಿ ಪಲ್ಟಿ ಹೊಡೆದಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ. ಇದನ್ನೂ ಓದಿ: ಜಾರ್ಖಂಡ್ ಭೀಕರ ರಸ್ತೆ ಅಪಘಾತ- ಮೃತರ ಕುಟುಂಬಕ್ಕೆ 2 ಲಕ್ಷ ರೂ. ಪರಿಹಾರ ಘೋಷಣೆ
ಸದಾ ವಾಹನ ದಟ್ಟಣೆಯಿಂದ ಕೂಡಿರುವ ಹೆದ್ದಾರಿಯಲ್ಲಿ ಅನಿರೀಕ್ಷಿತವಾಗಿ ಸಂಭವಿಸಿದ ರಸ್ತೆ ಅಪಘಾತದ ವೇಳೆ ಯಾವುದೇ ವಾಹನಗಳು ಸಾಗದೆ ಇದ್ದಿದ್ದರಿಂದಾಗಿ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತವೊಂದು ತಪ್ಪಿದೆ. ಮುಂಜಾನೆ ಅನಿರೀಕ್ಷಿತವಾಗಿ ಸಂಭವಿಸಿದ ಘಟನೆಯಿಂದಾಗಿ ಹೆದ್ದಾರಿ ಮೂಲಕ ಬೆಂಗಳೂರು ಮೈಸೂರು ಹಾಗೂ ಹಾಸನ ಸೇರಿದಂತೆ ಇತರೆ ಊರುಗಳಿಗೆ ಸಾಗುತ್ತಿದ್ದ ಪ್ರಯಾಣಿಕರು ಕೆಲ ಸಮಯ ತೊಂದರೆ ಅನುಭವಿಸುವಂತಾಯಿತು. ಈ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ತರಕಾರಿ, ಹಣ್ಣುಗಳನ್ನು ಲಂಚವಾಗಿ ಪಡೆಯುತ್ತಿದ್ದ ಅಧಿಕಾರಿಗಳು!
ಬೆಂಗಳೂರು: ಬೆಂಗಳೂರು ವಿಭಾಗವು ಸರಕು ಸಾಗಾಟದಲ್ಲಿ ಹೊಸ ದಾಖಲೆಯನ್ನು ಬರೆದಿದೆ. 2021-22ನೇ ಹಣಕಾಸು ವರ್ಷದಲ್ಲಿ ಅತ್ಯಧಿಕ ಮಾಸಿಕ ಸಾಧನೆಯನ್ನುಗಳಿಸಿದೆ.
ಈ ಕುರಿತಂತೆ ನೈರುತ್ಯ ರೈಲ್ವೇ ಬೆಂಗಳೂರು ವಿಭಾಗದ ಸಾರ್ವಜನಿಕ ಸಂಪರ್ಕಾಧಿಕಾರಿ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಬಿಡುಗಡೆ ಮಾಡಿದ್ದು, ನೈಋತ್ಯ ರೈಲ್ವೇಯ ಬೆಂಗಳೂರು ವಿಭಾಗವು ಇತ್ತೀಚಿನ ದಿನಗಳಲ್ಲಿ ಸರಕು ಸಾಗಣೆಯಲ್ಲಿ ದಾಪುಗಾಲು ಹಾಕುತ್ತಿದೆ. ಅಕ್ಟೋಬರ್ ತಿಂಗಳಿನಲ್ಲಿ ವಿಭಾಗವು 0.141 ಮಿಲಿಯನ್ ಟನ್‍ಗಳಷ್ಟು ಸರಕುಲೋಡ್ ಮಾಡಿದ್ದು, Rs.14.48 ಕೋಟಿಗಳ ಸರಕು ಸಾಗಣೆ ಆದಾಯವನ್ನು ದಾಖಲಿಸಿದೆ. ಇದು 2021-22ನೇ ಹಣಕಾಸು ವರ್ಷದಲ್ಲಿ ಅತ್ಯಧಿಕ ಮಾಸಿಕ ಸಾಧನೆಯಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ದೇಶದ ಅತಿ ದೊಡ್ಡ ಜೇಬುಗಳ್ಳ ಅಂದ್ರೆ ಕಾಂಗ್ರೆಸ್: ಬಿಜೆಪಿ ತಿರುಗೇಟು
2020ರ ಅಕ್ಟೋಬರ್ ನಲ್ಲಿ ದಿನಕ್ಕೆ 148 ವ್ಯಾಗನ್‍ಗಳಿಗೆ ಹೋಲಿಸಿದರೆ, 2021ರ ಅಕ್ಟೋಬರ್‍ನಲ್ಲಿ ದಿನಕ್ಕೆ ಸರಾಸರಿ 166 ವ್ಯಾಗನ್‍ಗಳನ್ನು ಲೋಡ್ ಮಾಡಲಾಗಿದೆ, ಇದು 28% ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಒಟ್ಟಾರೆಯಾಗಿ, ಕಳೆದ ಹಣಕಾಸು ವರ್ಷದಲ್ಲಿ ಅಕ್ಟೋಬರ್, 2020 ರವರೆಗಿನ ಸಂಚಿತ ಅಂಕಿಅಂಶಗಳಿಗೆ ಹೋಲಿಸಿದರೆ ವಿಭಾಗವು 7% ಟನ್ ಮತ್ತು 36.23% ಸರಕು ಸಾಗಣೆ ಆದಾಯದಲ್ಲಿ ಹೆಚ್ಚಳವನ್ನು ಕಂಡಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಪೆಟ್ರೋಲ್ 100.63, ಡೀಸೆಲ್ 85.03ರೂ. – ಸರ್ಕಾರದಿಂದ ಅಧಿಕೃತ ಅಧಿಸೂಚನೆ
ಬಿಡದಿ ಗೂಡ್ಸ್ ಶೆಡ್‍ನಲ್ಲಿ ಟೊಯಾಟಾ ಎಸ್‍ಯುವಿ ಲೋಡಿಂಗ್, ಹೊಸೂರಿನಲ್ಲಿ ಅಶೋಕ್ ಲೇಲ್ಯಾಂಡ್ ಟ್ರಕ್ ಲೋಡಿಂಗ್, ಧರ್ಮಪುರಿ ಮತ್ತು ಹೊಸೂರು ಗೂಡ್ಸ್ ಶೆಡ್‍ಗಳಿಂದ ರೈಸ್ ಲೋಡಿಂಗ್ ವಿಭಾಗದ ಈ ಸಾಧನೆಗೆ ಕಾರಣವೆಂದು ಹೇಳಬಹುದೆಂದಿದ್ದಾರೆ.