Tag: ಗೂಗಲ್

  • ಮಹಿಳಾ ಉದ್ಯೋಗಿಗಳಿಗೆ ತಾರತಮ್ಯ – 921 ಕೋಟಿ ನೀಡಲು ಮುಂದಾದ ಗೂಗಲ್‌

    ಮಹಿಳಾ ಉದ್ಯೋಗಿಗಳಿಗೆ ತಾರತಮ್ಯ – 921 ಕೋಟಿ ನೀಡಲು ಮುಂದಾದ ಗೂಗಲ್‌

    ಸ್ಯಾನ್‌ಫ್ರಾನ್ಸಿಸ್ಕೋ: ಮಹಿಳಾ ಉದ್ಯೋಗಿಗಳಿಗೆ ಸಂಬಳದ ವಿಚಾರದಲ್ಲಿ ತಾರತಮ್ಯ ಮಾಡಿದ್ದಕ್ಕೆ ಗೂಗಲ್‌ 118 ದಶಲಕ್ಷ ಡಾಲರ್‌(ಅಂದಾಜು 921 ಕೋಟಿ ರೂ.) ಪರಿಹಾರ ನೀಡಲು ಒಪ್ಪಿಕೊಂಡಿದೆ.

    ಕ್ಯಾಲಿಫೋರ್ನಿಯಾದಲ್ಲಿ ಕೆಲಸ ಮಾಡುತ್ತಿರುವ 15,500 ಮಹಿಳಾ ಉದ್ಯೋಗಿಗಳು ನಮಗೆ ಸಂಬಳದಲ್ಲಿ ಅನ್ಯಾಯವಾಗಿದೆ. ಪುರುಷರಷ್ಟೇ ಕೆಲಸ ಮಾಡುತ್ತಿದ್ದರೂ ನಮ್ಮ ಸಂಬಳ ಕಡಿಮೆ ಎಂದು ಆರೋಪಿಸಿದ್ದರು.

    ಈ ಸಂಬಂಧ ಮಾಜಿ ಮಹಿಳಾ ಉದ್ಯೋಗಿಗಳು 2017ರಲ್ಲಿ ಗೂಗಲ್‌ ವಿರುದ್ಧ ಕೋರ್ಟ್‌ ಮೆಟ್ಟಿಲೇರಿದ್ದರು. ಇದನ್ನೂ ಓದಿ: ಇನ್ಮುಂದೆ ಅಮೆಜಾನ್‌ನಲ್ಲಿ ಶೂ ಕೊಳ್ಳುವುದಕ್ಕೂ ಮೊದಲು ವರ್ಚುವಲ್ ಆಗಿ ಟ್ರೈಮಾಡಿ

    ಗೂಗಲ್‌ ಎಲ್ಲ ಆರೋಪಗಳನ್ನು ತಿರಸ್ಕರಿಸಿ, ಉದ್ಯೋಗಿಗೆ ಸಂಬಂಧಿಸಿದ ಎಲ್ಲ ಕಾನೂನುಗಳನ್ನು ಸರಿಯಾಗಿ ಪಾಲಿಸಲಾಗುತ್ತಿದೆ ಎಂದು ಹೇಳಿತ್ತು. ಈಗ ಎಲ್ಲ ಮಾಜಿ ಉದ್ಯೋಗಿಗಳಿಗೆ ಪರಿಹಾರ ನೀಡುವುದಾಗಿ ಗೂಗಲ್‌ ಕೋರ್ಟ್‌ ಮುಂದೆ ಹೇಳಿದೆ.

    ಈ ಸಂಬಂಧ ಹೇಳಿಕೆ ಬಿಡುಗಡೆ ಮಾಡಿದ ಗೂಗಲ್‌, 5 ವರ್ಷಗಳ ಕಾಲ ನಡೆದ ಈ ಕಾನೂನು ಹೋರಾಟಕ್ಕೆ ಕೊನೆ ಹಾಡಲು ಮುಂದಾಗಿದ್ದೇವೆ. ಎರಡು ಕಡೆಯುವರು ಸಹಮತದ ನಿರ್ಧಾರಕ್ಕೆ ಬಂದಿದ್ದೇವೆ ಎಂದು ತಿಳಿಸಿದೆ.

  • ಗೂಗಲ್, ಆಪಲ್, ಮೈಕ್ರೋಸಾಫ್ಟ್‌ಗಳಲ್ಲಿ ಶೀಘ್ರವೇ ಬರಲಿದೆ ಪಾಸ್‌ವರ್ಡ್ ಲೆಸ್ ಸೈನ್ ಇನ್ ಸೇವೆ

    ವಾಷಿಂಗ್ಟನ್: ಮೂರು ದೊಡ್ಡ ತಂತ್ರಜ್ಞಾನ ಕಂಪನಿಗಳಾದ ಗೂಗಲ್, ಆಪಲ್ ಹಾಗೂ ಮೈಕ್ರೋಸಾಫ್ಟ್ ಪಾಸ್‌ವರ್ಡ್ ಬಳಕೆಯನ್ನು ಸಂಪೂರ್ಣವಾಗಿ ತೆಗೆದು ಹಾಕಲು ನಿರ್ಧರಿಸಿವೆ.

    ಹೌದು, ಇನ್ನು ಮುಂದೆ ಜನರು ತಮ್ಮ ಮೊಬೈಲ್, ಡೆಸ್ಕ್ ಟಾಪ್ ಹಾಗೂ ಬ್ರೌಸರ್ ಸಾಧನಗಳಲ್ಲಿ ಪಾಸ್‌ವರ್ಡ್ಗಳನ್ನು ನಮೂದಿಸುವ ಅಗತ್ಯವಿರುವುದಿಲ್ಲ. ಈ ಮೂರು ದೈತ್ಯ ತಂತ್ರಜ್ಞಾನ ಕಂಪನಿಗಳು ಒಟ್ಟಾಗಿ ಬಳಕೆದಾರರಿಗೆ ಪಾಸ್‌ವರ್ಡ್ ರಹಿತ ಸೇವೆ ನೀಡಲು ಮುಂದಾಗಿವೆ.

    ಆಪಲ್, ಗೂಗಲ್ ಹಾಗೂ ಮೈಕ್ರೋಸಾಫ್ಟ್ ಮೂಲಕ ಕಾರ್ಯನಿರ್ವಹಿಸುವ ಐಒಎಸ್, ಮ್ಯಾಕ್ ಒಎಸ್, ಆಂಡ್ರಾಯ್ಡ್, ವಿಂಡೋಸ್ ಬ್ರೌಸರ್‌ಗಳಾದ ಕ್ರೋಮ್, ಎಡ್ಜ್, ಸಫಾರಿ ಹಾಗೂ ಪ್ರಮುಖ ತಂತ್ರಜ್ಞಾನ ಸಾಧನಗಳ ಪ್ಲಾಟ್‌ಫಾರ್ಮ್ಗಳಿಗೆ ಪಾಸ್‌ವರ್ಡ್ ರಹಿತ ದೃಢೀಕರಣ ತರುವ ನಿಟ್ಟಿನಲ್ಲಿ ಈ 3 ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ. ಇದನ್ನೂ ಓದಿ: 2024ರಲ್ಲಿ ಶುಕ್ರಯಾನಕ್ಕೆ ISRO ಸಜ್ಜು- ಇಲ್ಲಿದೆ ಶುಕ್ರಗ್ರಹದ ಸ್ವಾರಸ್ಯಕರ ಸಂಗತಿ

    ಬಳಕೆದಾರರ ಆನ್‌ಲೈನ್ ಖಾತೆಗಳಿಗೆ ಸೈನ್ ಇನ್ ಮಾಡಲು ತಯಾರಾಗುತ್ತಿರುವ ಪಾಸ್‌ವರ್ಡ್ ರಹಿತ ಸೇವೆ, ಪಾಸ್‌ವರ್ಡ್ ಮೂಲಕ ಅನ್‌ಲಾಕ್ ಮಾಡುವುದಕ್ಕಿಂತಲೂ ಸುಲಭ ಹಾಗೂ ಸುರಕ್ಷಿತವಾಗಿರಲಿದೆ. ನಿಮ್ಮ ಫೋನ್ ಅನ್ನು ಅನ್‌ಲಾಕ್ ಮಾಡಲು ನೀವು ಪಾಸ್‌ವರ್ಡ್, ಪಿನ್ ಅಥವಾ ಪ್ಯಾಟರ್ನ್ ಅನ್ನು ಬಳಸುತ್ತೀರಿ ಹಾಗೂ ಫೋನ್ ಅನ್ನು ಅನ್‌ಲಾಕ್ ಮಾಡಲು ಪ್ರತಿ ಬಾರಿಯೂ ಇದನ್ನೇ ಬಳಸುತ್ತೀರಿ. ನಿಮ್ಮ ಆನ್‌ಲೈನ್ ಖಾತೆಗಳಿಗೂ ಅನುಮತಿಸಲು ಇದೇ ಪ್ರಕ್ರಿಯೆಯನ್ನು ಬಳಸಿದರೆ ಆಯ್ತು. ಪಾಸ್‌ವರ್ಡ್ ನಮೂದಿಸುವ ಅಗತ್ಯ ಇರುವುದಿಲ್ಲ.

    ಈ 3 ಕಂಪನಿಗಳು ಕಾರ್ಯನಿರ್ವಹಿಸುತ್ತಿರುವ ಹೊಸ ಎಫ್‌ಐಡಿಒ(ಫಾಸ್ಟ್ ಐಡಿ ಆನ್‌ಲೈನ್) ಸೇವೆ ಸಹಾಯದಿಂದ ಪಾಸ್‌ವರ್ಡ್ ರಹಿತವಾಗಿ ಅನ್‌ಲಾಕ್ ಮಾಡಲು ಸಹಾಯವಾಗಲಿದೆ ಎಂದು ಕಂಪನಿಗಳು ತಿಳಿಸಿವೆ. ಇದನ್ನು ಪಾಸ್‌ಕೀ ಎಂತಲೂ ಕರೆಯಲಾಗುತ್ತಿದ್ದು, ಬಳಕೆದಾರರು ತಮ್ಮ ಮೊಬೈಲ್ ಹಾಗೂ ವೆಬ್‌ಸೈಟ್‌ಗಳಲ್ಲಿ ಪಾಸ್‌ವರ್ಡ್ ರಹಿತವಾಗಿ ಸೈನ್ ಇನ್ ಆಗಲು ಸಹಾಯವಾಗಲಿದೆ. ಇದನ್ನೂ ಓದಿ: ಭಾರತದಲ್ಲಿ ಡೆಬಿಟ್, ಕ್ರೆಡಿಟ್ ಕಾರ್ಡ್ ಮೂಲಕದ ಪಾವತಿಯನ್ನು ಸ್ಥಗಿತಗೊಳಿಸಿದ ಆಪಲ್

    ಪಾಸ್‌ಕೀ ಸಹಾಯದಿಂದ ಬಳಕೆದಾರರು ಇನ್ನು ಮುಂದೆ ತಮ್ಮ ಪಾಸ್‌ವರ್ಡ್ಗಳನ್ನು ನೆನಪಿಟ್ಟುಕೊಳ್ಳುವ ಅಗತ್ಯ ಇರುವುದಿಲ್ಲ. ಕೆಲವರು ಪಾಸ್‌ವರ್ಡ್ಗಳನ್ನು ನೆನಪಿಟ್ಟುಕೊಳ್ಳಬೇಕೆಂಬ ಕಾರಣಕ್ಕೆ ತಮ್ಮ ಹಲವಾರು ಬೇರೆ ಬೇರೆ ರೀತಿಯ ಸಾಮಾಜಿಕ ಮಾಧ್ಯಮ ಅಕೌಂಟ್‌ಗಳಿಕೆ ಒಂದೇ ರೀತಿಯ ಪಾಸ್‌ವರ್ಡ್ ಬಳಸುತ್ತಾರೆ. ಈ ಕಾರಣದಿಂದ ಹ್ಯಾಕರ್‌ಗಳು ಸುಲಭವಾಗಿ ಬಳಕೆದಾರರ ಖಾತೆಗಳನ್ನು ಹ್ಯಾಕ್ ಮಾಡುತ್ತಾರೆ. ಆದರೆ ಪಾಸ್‌ಕೀ ಇಂತಹ ಅಪಾಯಗಳನ್ನು ಕಡಿಮೆ ಮಾಡುತ್ತದೆ ಎಂದು ಕಂಪನಿಗಳು ತಿಳಿಸಿವೆ.

    ಈ ಹೊಸ ಪಾಸ್‌ವರ್ಡ್ ರಹಿತ ದೃಢೀಕರಣ ವ್ಯವಸ್ಥೆಯನ್ನು ಆಪಲ್, ಗೂಗಲ್ ಹಾಗೂ ಮೈಕ್ರೋಸಾಫ್ಟ್ ಮುಂದಿನ ವರ್ಷ ಹೊರತರಲಿದೆ. ಒಂದುವೇಳೆ ನಿಮ್ಮ ಫೋನ್ ಅಥವಾ ಇತರ ಸಾಧನಗಳು ಕಳೆದು ಹೋದಲ್ಲಿ ಕ್ಲೌಡ್ ಬ್ಯಾಕ್‌ಅಪ್ ಮೂಲಕ ಪಾಸ್‌ಕೀಗಳನ್ನು ಹೊಸ ಸಾಧನಗಳಿಗೆ ಸಿಂಕ್ ಮಾಡಬಹುದು ಎಂದು ಗೂಗಲ್ ತಿಳಿಸಿದೆ.

  • ಸೆಕ್ಯೂರಿಟಿ ಗಾರ್ಡ್ ಕೆಲಸಕ್ಕೆ ಬಂದು ಡ್ರಗ್‌ಪೆಡ್ಲರ್ ಆದ ನಟೋರಿಯಸ್ ನೇಪಾಳಿ

    ಸೆಕ್ಯೂರಿಟಿ ಗಾರ್ಡ್ ಕೆಲಸಕ್ಕೆ ಬಂದು ಡ್ರಗ್‌ಪೆಡ್ಲರ್ ಆದ ನಟೋರಿಯಸ್ ನೇಪಾಳಿ

    ಬೆಂಗಳೂರು: ಗೂಗಲ್‌ನಲ್ಲಿ ಹುಡುಕಿ ಡ್ರಗ್ಸ್ ಖರೀದಿಸಿ ಮಾರಾಟ ಮಾಡುತ್ತಿದ್ದ ಇಲ್ಲಿನ ನೇಪಾಳಿ ಸೆಕ್ಯೂರಿಟಿ ಗಾರ್ಡ್ ಒಬ್ಬನನ್ನು ಸಿಸಿಬಿ ಪೊಲೀಸರು ಬಂಧಿಸಿರುವ ಘಟನೆ ಬಾಗಲೂರಿನ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.

    ಆರೋಪಿಯನ್ನು ಬಂಧಿಸಿದ್ದು, 3 ಲಕ್ಷ ಮೌಲ್ಯದ 10 ಗ್ರಾಂ ಎಂಡಿಎಂಎ ಡ್ರಗ್ಸ್ ಹಾಗೂ 80 ಗ್ರಾಂ ಚರಸ್ ಅನ್ನು ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ಸಾರ್ವಜನಿಕ ಶೌಚಾಲಯದಲ್ಲಿ 12ರ ಹುಡುಗಿ ಮೇಲೆ ಅತ್ಯಾಚಾರ

    crime

    ಘಟನೆ ಸಂಬಂಧ ಮಾಹಿತಿ ನೀಡಿರುವ ಅಧಿಕಾರಿಗಳು, ನೇಪಾಳದಿಂದ ಸೆಕ್ಯೂರಿಟಿ ಗಾರ್ಡ್ ಕೆಲಸಕ್ಕೆ ಬಂದಿದ್ದ ಈತ ಗೂಗಲ್‌ನಲ್ಲಿ ಹುಡುಕಿ ಡ್ರಗ್ಸ್ ಖರೀದಿ ಮಾಡಿ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ. ಒಂದು ಗ್ರಾಂಗೆ 5 ರಿಂದ 10 ಸಾವಿರ ರೂ. ಪಡೆಯುತ್ತಿದ್ದ. ಸದ್ಯ ಆರೋಪಿಯನ್ನು ಬಂಧಿಸಿದ್ದು, ಆತನ ಹಿನ್ನೆಲೆಯ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

     

  • ಬಳಕೆದಾರರ ಡೇಟಾ ಸಂಗ್ರಹಿಸ್ತಿದ್ದ ಆ್ಯಪ್‌ಗಳನ್ನು ಬ್ಯಾನ್ ಮಾಡಿದ ಗೂಗಲ್

    ಬಳಕೆದಾರರ ಡೇಟಾ ಸಂಗ್ರಹಿಸ್ತಿದ್ದ ಆ್ಯಪ್‌ಗಳನ್ನು ಬ್ಯಾನ್ ಮಾಡಿದ ಗೂಗಲ್

    ವಾಷಿಂಗ್ಟನ್: ಬಳಕೆದಾರರ ಫೋನ್ ನಂಬರ್ ಹಾಗೂ ಇತರ ಪ್ರಮುಖ ಡೇಟಾಗಳನ್ನು ರಹಸ್ಯವಾಗಿ ಸಂಗ್ರಹಿಸುತ್ತಿದ್ದ ಹತ್ತಾರು ಅಪ್ಲಿಕೇಶನ್‌ಗಳನ್ನು ಗೂಗಲ್ ಪ್ಲೇಸ್ಟೋರ್‌ನಿಂದ ಬ್ಯಾನ್ ಮಾಡಿದೆ.

    ಗೂಗಲ್ ನಿಷೇಧಿಸಿರುವ ಆ್ಯಪ್‌ಗಳಲ್ಲಿ ಮುಖ್ಯವಾಗಿ 1 ಕೋಟಿಗೂ ಹೆಚ್ಚು ಬಾರಿ ಡೌನ್‌ಲೋಡ್ ಆಗಿದ್ದ ಮುಸ್ಲಿಂ ಪ್ರಾರ್ಥನೆಯ ಅಪ್ಲಿಕೇಶನ್‌ಗಳು, ಬಾರ್‌ಕೋಡ್ ಸ್ಕ್ಯಾನಿಂಗ್ ಅಪ್ಲಿಕೇಶನ್‌ಗಳು, ಹೈವೇ ಸ್ಪೀಡ್ ಟ್ರ್ಯಾಪ್ ಡಿಟೆಕ್ಷನ್ ಅಪ್ಲಿಕೇಶನ್ ಹಾಗೂ ಇತರ ಹಲವಾರು ಬಳಕೆದಾರರ ಡೇಟಾಗಳನ್ನು ಸಂಗ್ರಹಿಸುತ್ತಿದ್ದ ಅಪ್ಲಿಕೇಶನ್‌ಗಳನ್ನು ಗೂಗಲ್ ಬ್ಯಾನ್ ಮಾಡಿದೆ. ಇದನ್ನೂ ಓದಿ: 48 ಗಂಟೆಗಳಲ್ಲಿ 3ನೇ ಸರ್ಕಾರಿ ಟ್ವಿಟ್ಟರ್ ಖಾತೆ ಹ್ಯಾಕ್

    ಗೂಗಲ್ ಪ್ಲೇಸ್ಟೋರ್‌ನಿಂದ ನಿಷೇಧಿಸಲಾದ ಅಪ್ಲಿಕೇಶನ್‌ಗಳು ಬಳಕೆದಾರರ ಸ್ಥಳ ಮಾಹಿತಿ, ಇ-ಮೇಲ್, ಫೋನ್ ನಂಬರ್, ಹತ್ತಿರದ ಸಾಧನಗಳು ಹಾಗೂ ಪಾಸ್‌ವರ್ಡ್‌ಗಳನ್ನು ಸಂಗ್ರಹಿಸುತ್ತಿದ್ದವು ಎಂಬುದು ತಿಳಿದುಬಂದಿದೆ. ಇದನ್ನೂ ಓದಿ: ಶೀಘ್ರವೇ ಸ್ವಯಂ ಚಾಲಿತ ಕಾರುಗಳನ್ನು ಬಿಡುಗಡೆ ಮಾಡಲಿದ್ದಾರೆ ಮಸ್ಕ್

    ಬಳಕೆದಾರರ ಡೇಟಾವನ್ನು ಹೊರತೆಗೆಯಲು ಈ ಅಪ್ಲಿಕೇಶನ್‌ಗಳಲ್ಲಿ ಕೋಡ್‌ಗಳನ್ನು ಸೇರಿಸಲಾಗುತ್ತಿದ್ದು, ಇದಕ್ಕಾಗಿ ಹಲವು ಕಂಪನಿಗಳು ಅಪ್ಲಿಕೇಶನ್‌ಗಳಿಗೆ ಪಾವತಿಸಿದೆ. ನಿಷೇಧಿತ ಅಪ್ಲಿಕೇಶನ್‌ಗಳಲ್ಲಿ ಕಂಡುಬಂದಿರುವ ಕೋಡ್‌ಗಳನ್ನು ಇತ್ತೀಚೆಗೆ ಸಂಶೋಧಕರು ಕಂಡುಹಿಡಿದಿದ್ದಾರೆ ಎಂದು ವರದಿಗಳು ತಿಳಿಸಿವೆ.

  • ಆಂಡ್ರಾಯ್ಡ್ ಬಳಕೆದಾರಿಗೆ ಮೋಸ ಮಾಡಿ ಸಿಕ್ಕಿಬಿದ್ದ ಗೂಗಲ್

    ಆಂಡ್ರಾಯ್ಡ್ ಬಳಕೆದಾರಿಗೆ ಮೋಸ ಮಾಡಿ ಸಿಕ್ಕಿಬಿದ್ದ ಗೂಗಲ್

    ಲಂಡನ್: ಆಂಡ್ರಾಯ್ಡ್ ನಲ್ಲಿ ಫೋನ್ ಮತ್ತು ಮೆಸೇಜ್ ಅಪ್ಲಿಕೇಶನ್ ಬಳಸಿಕೊಂಡು ಬಳಕೆದಾರರ ಡೇಟಾವನ್ನು ಗೂಗಲ್ ಸಂಗ್ರಹಿಸುತ್ತಿದ್ದು ಸಿಕ್ಕಿಬಿದ್ದಿದೆ.

    ಟೆಕ್ ಕಂಪನಿಗಳು ನಿಮ್ಮ ಬಗ್ಗೆ ಎಷ್ಟು ತಿಳಿದಿವೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ನಿಮ್ಮ ಡೇಟಾ ನಿಜವಾಗಿಯೂ ಖಾಸಗಿಯಾಗಿದೆಯೇ? ಎಂಬುದರ ಬಗ್ಗೆ ಬಳಕೆದಾರರು ಯೋಚಿಸಬೇಕು. ಲಂಡನ್‍ನ ಟ್ರಿನಿಟಿ ಕಾಲೇಜಿನ ಪ್ರೋಫೆಸರ್ ಡೌಗ್ಲಾಸ್ ಲೀತ್ ಪ್ರಕಟಿಸಿದ ಸಂಶೋಧನಾ ಪ್ರಬಂಧವು, ಗೂಗಲ್ ನಿಂದ ಆಂಡ್ರೊಯ್ ಫೋನ್‍ಗಳಲ್ಲಿ ಮೆಸೇಜ್ ಅಪ್ಲಿಕೇಶನ್ ಬಳಸುವ ಬಳಕೆದಾರರಿಂದ ಸಂಗ್ರಹಿಸಬಹುದಾದ ಡೇಟಾದ ಪ್ರಮಾಣವನ್ನು ವಿವರಿಸಿದ್ದಾರೆ. ಇದನ್ನೂ ಓದಿ: ರಾಜ್ಯಾದ್ಯಂತ ಎಎಪಿ ಸದಸ್ಯತ್ವ ಅಭಿಯಾನಕ್ಕೆ ಪೃಥ್ವಿ ರೆಡ್ಡಿ ಚಾಲನೆ 

    Google caught collecting user data using its Phone and Messages app for Android

    ಈ ಪ್ರಬಂಧದಲ್ಲಿ, ಗೂಗಲ್ ತನ್ನ ಬಳಕೆದಾರರ ಫೋನ್ ಕಾಲ್ ದಾಖಲೆ ಮತ್ತು ಮೇಸೆಜ್ ಲೀಟ್ಸ್‌ನನ್ನು ಅವರ ಒಪ್ಪಿಗೆಯಿಲ್ಲದೆ ಸಂಗ್ರಹಿಸುತ್ತಿದೆ. ಗೂಗಲ್ ಪೇ ಸೇವೆಗಳಿಂದಲೂ ಗೂಗಲ್ ಹೆಚ್ಚು ಡೇಟಾ ಸಂಗ್ರಹ ಮಾಡುತ್ತಿದೆ. ಈ ಮೂಲಕ ಡೇಟಾವನ್ನು ಸಿಂಕ್ ಮಾಡುತ್ತದೆ ಎಂದು ಬಳಕೆದಾರರಿಗೆ ಬಹಿರಂಗಪಡಿಸಿದೆ.

    ಗೂಗಲ್‍ನ ಗೌಪ್ಯತೆ ನೀತಿಗಳಲ್ಲಿ ಒಳಗೊಂಡಿರುವ ವ್ಯಾಪ್ತಿಯಿಂದ ಹೊರಗುಳಿದು ಗೂಗಲ್ ಡೇಟಾವನ್ನು ಸಂಗ್ರಹಿಸುತ್ತಿದೆ. ಉದಾಹರಣೆಗೆ ಮೇಸೆಜ್ ಅಪ್ಲಿಕೇಶನ್, ನಿಮ್ಮ ಸಂದೇಶದ ವಿಷಯ ಮತ್ತು ಟೈಮ್‍ಸ್ಟ್ಯಾಂಪ್‍ಗಳನ್ನು ತೆಗೆದುಕೊಳ್ಳುತ್ತದೆ. ಇದು ನಂತರ ಡೇಟಾವನ್ನು ಅನಾಮಧೇಯವಾಗಿಡಲು ಹ್ಯಾಶ್ ರಚಿಸುತ್ತದೆ. ಅದರ ಒಂದು ಭಾಗವನ್ನು ಗೂಗಲ್‍ನ ಸರ್ವರ್‌ಗಳಿಗೆ ಕಳುಹಿಸುತ್ತದೆ ಎಂದು ಪ್ರೋ.ಲೀತ್ ವಿವರಿಸುತ್ತಾರೆ. ಇದನ್ನೂ ಓದಿ: ಗಂಡನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಊರೆಲ್ಲಾ ಅರಚಾಡಿ ಹೈ-ಡ್ರಾಮಾ ಮಾಡಿದ ಪತ್ನಿ

    Google to Crack Down on Android Apps That Collect User Data Without Consent
    ಆಂಡ್ರೊಯ್ ಡೇಟಾವು ಮೆಸೇಜ್ ಲಿಸ್ಟ್‌ನ ಹ್ಯಾಶ್ ಮತ್ತು ಫೋನ್ ಕಾಲ್ ಅವಧಿಯನ್ನು ಒಳಗೊಂಡಿದೆ ಎಂದು ಡಬ್ಲಿನ್ ಪ್ರೋ.ಡೌಗ್ಲಾಸ್ ಲೀತ್ ಹೇಳಿದ್ದಾರೆ. ಇದನ್ನು ತಿಳಿಸಲು ಲೀತ್ ತಮ್ಮ ಸಂಶೋಧನೆಗಳನ್ನು ಗೂಗಲ್‍ನೊಂದಿಗೆ ಹಂಚಿಕೊಂಡರು. ನಂತರ ಅದರಲ್ಲಿ ನಡೆಯುವ ಬದಲಾವಣೆಗಳನ್ನು ನೇರವಾಗಿ ತೋರಿಸಿದ್ದಾರೆ.

  • ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ – ಕಂಪನಿಗಳಿಗೆ ಬಿಸಿ ಮುಟ್ಟಿಸಿದ ಕೇಂದ್ರ

    ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ – ಕಂಪನಿಗಳಿಗೆ ಬಿಸಿ ಮುಟ್ಟಿಸಿದ ಕೇಂದ್ರ

    ನವದೆಹಲಿ: ಸಾಮಾಜಿಕ ಜಾಲತಾಣಗಳಾದ ಪೇಸ್‍ಬುಕ್, ಟ್ವಿಟ್ಟರ್, ಗೂಗಲ್‍ನಲ್ಲಿ ಹರಿದಾಡುವ ಸುಳ್ಳು ಸುದ್ದಿಗಳನ್ನು ನಿಯಂತ್ರಿಸಬೇಕೆಂದು ಕೇಂದ್ರ ಕಂಪನಿಗಳೊಂದಿಗೆ ಸಭೆ ನಡೆಸಿ ವಾರ್ನಿಂಗ್ ನೀಡಿದೆ ಎಂದು ವರದಿಯಾಗಿದೆ.

    ಸಾಮಾಜಿಕ ಜಾಲತಾಣದಲ್ಲಿ ಅತೀ ಹೆಚ್ಚು ಪ್ರಚಲಿತದಲ್ಲಿರುವ ಫೇಸ್‌ಬುಕ್, ಟ್ವಿಟ್ಟರ್, ಗೂಗಲ್ ಸೇರಿ ಹಲವು ಸಾಮಾಜಿಕ ಜಾಲತಾಣಗಳೊಂದಿಗೆ ಕೇಂದ್ರ ಚರ್ಚಿಸಿದ್ದು, ಪ್ರಮುಖವಾಗಿ ಸುಳ್ಳು ಸುದ್ದಿಗಳನ್ನು ಹರಡದಂತೆ ನಿಯಂತ್ರಿಸಬೇಕೆಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಇಲಾಖೆ ಖಡಕ್ ವಾರ್ನಿಂಗ್ ಮಾಡಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: 24 ಗಂಟೆಯ ಒಳಗಡೆ ಆಕ್ಷೇಪಾರ್ಹ ವಿಷಯಗಳನ್ನು ತೆಗೆಯಲೇಬೇಕು – ಕೇಂದ್ರ ಸರ್ಕಾರ

    ವರ್ಚುವಲ್ ಮೂಲಕ ನಡೆದ ಸಭೆಯಲ್ಲಿ ಸಾಮಾಜಿಕ ಜಾಲತಾಣ ಕಂಪನಿಗಳ ಜೊತೆ ಚರ್ಚಿಸಿದ ಕೇಂದ್ರ, ಸುಳ್ಳು ಸುದ್ದಿಗಳ ಪ್ರಸಾರವನ್ನು ತಡೆಹಿಡಿಯಬೇಕು. ಈ ಬಗ್ಗೆ ಕೇಂದ್ರ ಕಟ್ಟುನಿಟ್ಟಿನ ಕ್ರಮಗಳನ್ನು ಮುಂದಿನ ದಿನಗಳಲ್ಲಿ ತೆಗೆದುಕೊಳ್ಳುತ್ತದೆ. ಈಗಾಗಲೇ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಈ ನಿಯಮಗಳನ್ನು ಪಾಲಿಸದೆ ಇದ್ದರೆ, ಸರಿಯಾದ ಬೆಲೆ ತೆರಬೇಕಾಗುತ್ತದೆ ಎಂದು ಸಭೆಯಲ್ಲಿ ಕಟ್ಟುನಿಟ್ಟಾಗಿ ಸೂಚನೆ ನೀಡಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಮಹತ್ವದ ದಾಖಲೆಗಳನ್ನು ವಾಟ್ಸಪ್ ಮಾಡಬೇಡಿ, ಸಭೆಗಳಲ್ಲಿ ಫೋನ್ ಬಳಸಬೇಡಿ – ಕೇಂದ್ರ ಸರ್ಕಾರ ಸೂಚನೆ

    ಈಗಾಗಲೇ ಡಿಜಿಟಲ್ ಮೀಡಿಯಾದಲ್ಲಿ ದ್ವೇಷ ಬಿತ್ತುವ ಮತ್ತು ನಕಲಿ ಸುದ್ದಿಗಳನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಹೊಸ ನಿಯಮಗಳನ್ನು ರೂಪಿಸಿದೆ. ಕೆಲದಿನಗಳ ಹಿಂದೆ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಮತ್ತು ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆಯ ಸಚಿವ ಪ್ರಕಾಶ್ ಜಾವಡೇಕರ್ ಸುದ್ದಿಗೋಷ್ಠಿ ನಡೆಸಿ ಜಾರಿಗೆ ತರಲಾದ ಹೊಸ ನಿಯಮಗಳನ್ನು ತಿಳಿಸಿದ್ದರು. ಇದನ್ನೂ ಓದಿ: ಏರ್‌ಟೆಲ್‌ನಲ್ಲಿ 7 ಸಾವಿರ ಕೋಟಿ ಹೂಡಿಕೆ ಮಾಡಲಿದೆ ಗೂಗಲ್

    ನಿಯಮದಲ್ಲಿ ಏನಿದೆ?
    ಅಶ್ಲೀಲ, ಮಾನಹಾನಿಕರ, ಆಕ್ಷೇಪಾರ್ಹ, ಅಪ್ರಾಪ್ತ ವಯಸ್ಕರಿಗೆ ಹಾನಿಕಾರಕವಾದ ವಿಷಯ, ಭಾರತದ ಏಕತೆ, ಸಮಗ್ರತೆ, ರಕ್ಷಣೆ, ಭದ್ರತೆ ಅಥವಾ ಸಾರ್ವಭೌಮತ್ವ ಮತ್ತು ಇತರ ದೇಶಗಳೊಂದಿಗಿನ ಸಂಬಂಧಕ್ಕೆ ಧಕ್ಕೆ ತರುವ ವಿಷಯಗಳನ್ನು ನಿಷೇಧಿಸಬೇಕು. ಸಾಮಾಜಿಕ ಜಾಲತಾಣಗಳು ಸೂಚನೆ ನೀಡಿದ ಅಥವಾ ಕೋರ್ಟ್ ಆದೇಶದ 36 ಗಂಟೆಯ ಒಳಗಡೆ ಕಾನೂನುಬಾಹಿರ ವಿಷಯವನ್ನು ತೆಗೆದುಹಾಕಬೇಕು ಅಥವಾ ನಿಷ್ಕ್ರಿಯಗೊಳಿಸಬೇಕು. ಸೋಶಿಯಲ್ ಮೀಡಿಯಾ ಮತ್ತು ಮೆಸೇಜಿಂಗ್ ಸೈಟ್‍ಗಳು ಮಾಹಿತಿಯನ್ನು ಮೊದಲ ಹಾಕಿದವರ ಟ್ರ್ಯಾಕಿಂಗ್ ಮಾಡಬೇಕು. ಕಾನೂನು ಉಲ್ಲಂಘನೆಯ ಬಗ್ಗೆ ತನಿಖೆ ನಡೆಸಲು ಅಧಿಕಾರ ಹೊಂದಿರುವ ಸರ್ಕಾರಿ ಸಂಸ್ಥೆಗೆ ಕಂಪನಿಗಳು 72 ಗಂಟೆಯ ಒಳಗಡೆ ಮಾಹಿತಿಯನ್ನು ಒದಗಿಸಬೇಕು. ದೂರು ನೀಡಿದ 24 ಗಂಟೆಗಳ ಒಳಗಡೆ ಕಾನೂನುಬಾಹಿರ ವಿಷಯವನ್ನು ತೆಗೆದುಹಾಕಬೇಕು ಅಥವಾ ನಿಷ್ಕ್ರಿಯಗೊಳಿಸಬೇಕು.

    ದೂರುಗಳನ್ನು ಸ್ವೀಕರಿಸಲು, ಅಂಗೀಕರಿಸಲು ಮತ್ತು ಒಂದು ತಿಂಗಳೊಳಗೆ ಪರಿಹರಿಸಲು ಕಂಪನಿಗಳು ಕುಂದುಕೊರತೆ ಅಧಿಕಾರಿಯನ್ನು ನೇಮಿಸಬೇಕು. ನಿಯಮವನ್ನು ಜಾರಿಗೊಳಿಸಲು ಮೂರು ಹಂತದ ಕಾರ್ಯವಿಧಾನ ಜಾರಿಯಾಗಬೇಕು. ಸ್ವಯಂ ನಿಯಂತ್ರಣ, ಸ್ವಯಂ-ನಿಯಂತ್ರಿಸುವ ಸಂಸ್ಥೆಗಳಿಂದ ಸ್ವಯಂ ನಿಯಂತ್ರಣ, ಸರ್ಕಾರದ ಮೇಲ್ವಿಚಾರಣೆ. ನೀತಿ ಸಂಹಿತೆಯ ಯಾವುದೇ ಉಲ್ಲಂಘನೆಯ ಕುರಿತು ಸಾರ್ವಜನಿಕರಿಂದ ಎಲ್ಲ ಕುಂದುಕೊರತೆಗಳನ್ನು ಸ್ವೀಕರಿಸಲು ಮತ್ತು ಪ್ರಕ್ರಿಯೆಗೊಳಿಸಲು ಆನ್‍ಲೈನ್ ಪೋರ್ಟಲ್ ತೆರೆಯಬೇಕು. ಕುಂದುಕೊರತೆಯನ್ನು 15 ದಿನಗಳ ಒಳಗಡೆ ಪರಿಹರಿಸಬೇಕು. ಈ ಸೇವೆ ನೀಡುವ ಟೆಕ್ ಕಂಪನಿಗಳು ಕುಂದುಕೊರತೆಯನ್ನು ನಿವಾರಿಸಲು ಅಧಿಕಾರಿಗಳನ್ನು ನೇಮಿಸಬೇಕು. ಕುಂದುಕೊರತೆಯನ್ನು ನಿವಾರಿಸುವ ಅಧಿಕಾರಿ ಭಾರತದಲ್ಲಿ ವಾಸಿಸಬೇಕು ಮತ್ತು ಪ್ರತಿ ಆರು ತಿಂಗಳಿಗೊಮ್ಮೆ ವರದಿ ನೀಡಬೇಕು ತಿಳಿಸಿದೆ.

  • ಏರ್‌ಟೆಲ್‌ನಲ್ಲಿ 7 ಸಾವಿರ ಕೋಟಿ ಹೂಡಿಕೆ ಮಾಡಲಿದೆ ಗೂಗಲ್

    ಏರ್‌ಟೆಲ್‌ನಲ್ಲಿ 7 ಸಾವಿರ ಕೋಟಿ ಹೂಡಿಕೆ ಮಾಡಲಿದೆ ಗೂಗಲ್

    ನವದೆಹಲಿ: ಅಮೆರಿಕಾ ತಂತ್ರಜ್ಞಾನ ದೈತ್ಯ ಗೂಗಲ್ ಟೆಲಿಕಾಂ ಕಂಪನಿ ಏರ್‌ಟೆಲ್‌ನೊಂದಿಗೆ ಒಂದು ಮಹತ್ತರ ಒಪ್ಪಂದ ನಡೆಸಿದೆ. ಈ ಮೂಲಕ ಗೂಗಲ್ ಏರ್‌ಟೆಲ್‌ನಲ್ಲಿ 7 ಸಾವಿರ ಕೋಟಿ ರೂ. ಹೂಡಿಕೆ ಮಾಡುವುದಾಗಿ ಘೋಷಿಸಿದೆ.

    ಗೂಗಲ್ ಭಾರತದ ಪ್ರಮುಖ ಟೆಲಿಕಾಂ ಸಂಸ್ಥೆ ಭಾರತಿ ಏರ್‌ಟೆಲ್‌ನಲ್ಲಿ ಮುಂದಿನ 5 ವರ್ಷಗಳ ಅವಧಿಯಲ್ಲಿ 1 ಬಿಲಿಯನ್ ಡಾಲರ್(7,400 ಕೋಟಿ ರೂ.) ಹೂಡಿಕೆ ಮಾಡಲಿದೆ ಎಂದು ವರದಿಯಾಗಿದೆ. ಈ ಒಪ್ಪಂದದ ಪ್ರಕಾರ ಗೂಗಲ್ ಸಂಸ್ಥೆ ಏರ್‌ಟೆಲ್‌ ಕಂಪನಿಯ ಶೇ. 1.28ರಷ್ಟು ಪಾಲುದಾರಿಕೆಯನ್ನು ತಲಾ ಷೇರಿಗೆ 734 ರೂ.ಯಂತೆ ಪಡೆದುಕೊಳ್ಳಲಿದೆ ಹಾಗೂ 300 ಮಿಲಿಯನ್ ಡಾಲರ್ ವಾಣಿಜ್ಯ ಒಪ್ಪಂದಗಳಿಗೆ ಹೂಡಿಕೆ ಮಾಡಲಿದೆ ಎಂದು ತಿಳಿಸಿದೆ. ಇದನ್ನೂ ಓದಿ: ಶೀಘ್ರವೇ 50 ದೇಶಗಳಲ್ಲಿ ಲಭ್ಯವಾಗಲಿದೆ ಡಿಸ್ನಿ ಪ್ಲಸ್

    ಈ ಒಪ್ಪಂದದ ಮೂಲಕ ಏರ್‌ಟೆಲ್‌ ಹಾಗೂ ಗೂಗಲ್ ಒಟ್ಟಾಗಿ ಗ್ರಾಹಕರಿಗೆ ಕೈಗೆಟಕುವಂತಹ ಹೊಸ ಕೊಡುಗೆಗಳನ್ನು ನೀಡಲು ಮುಂದಾಗುತ್ತಿದೆ. 5ಜಿ ಹಾಗೂ ಇತರ ಸಂಬಂಧಿತ ಸೌಲಭ್ಯಗಳ ಬಳಕೆಗೆ ನೆಟ್‍ವರ್ಕ್ ಡೊಮೈನ್ ರಚನೆಗೆ ಹೆಚ್ಚಿನ ಮಹತ್ವ ನೀಡಲಿದೆ ಎಂದು ಏರ್‌ಟೆಲ್‌ ತಿಳಿಸಿದೆ. ಇದನ್ನೂ ಓದಿ: ಮಿಲ್ಕಿ ವೇಯಲ್ಲಿ 18 ನಿಮಿಷಗಳಿಗೊಮ್ಮೆ ಸ್ಫೋಟವಾಗುವ ವಸ್ತು ಪತ್ತೆ

    ಡಿಜಿಟೈಸೇಶನ್ ಫಂಡ್‍ನ ಮುಂದುವರಿಕೆಯಾಗಿ ಹೊಸ ವ್ಯಾಪಾರ ಮಾದರಿಯನ್ನು ಬೆಂಬಲಿಸಲು ಹಾಗೂ ಸಂಪರ್ಕವನ್ನು ಹೆಚ್ಚಿಸಲು ಏರ್‌ಟೆಲ್‌ನಲ್ಲಿ ನಮ್ಮ ಹೂಡಿಕೆ ಪ್ರಾರಂಭಿಸಿದ್ದೇವೆ ಎಂದು ಗೂಗಲ್ ಹಾಗೂ ಆಲ್ಫಾಬೆಟ್ ಸಿಇಒ ಸುಂದರ್ ಪಿಚೈ ತಿಳಿಸಿದ್ದಾರೆ.

  • ಲಸಿಕೆ ಹಾಕಿಸಿಕೊಳ್ಳದ ಉದ್ಯೋಗಿಗಳಿಗೆ ವೇತನ ಇಲ್ಲ- ಗೂಗಲ್ ನಿರ್ಧಾರ

    ಲಸಿಕೆ ಹಾಕಿಸಿಕೊಳ್ಳದ ಉದ್ಯೋಗಿಗಳಿಗೆ ವೇತನ ಇಲ್ಲ- ಗೂಗಲ್ ನಿರ್ಧಾರ

    ವಾಷಿಂಗ್ಟನ್: ಕೋವಿಡ್ ನಿಯಮಗಳನ್ನು ಅನುಸರಿಸದ ಹಾಗೂ ಲಸಿಕೆಯನ್ನು ಪಡೆಯದೇ ಇರುವ ಉದ್ಯೋಗಿಗಳಿಗೆ ಗೂಗಲ್ ವೇತನ ನೀಡುವುದನ್ನು ನಿಲ್ಲಿಸಿದೆ. ಮಾತ್ರವಲ್ಲದೇ ಗೂಗಲ್ ಉದ್ಯೋಗಿಗಳಿಗೆ ಕೆಲಸದಿಂದ ವಜಾ ಗೊಳಿಸುವುದಾಗಿ ಎಚ್ಚರಿಕೆ ನೀಡಿದೆ.

    ಹೌದು, ಗೂಗಲ್ ತನ್ನ ಉದ್ಯೋಗಿಗಳಿಗೆ ಡಿಸೆಂಬರ್ 3ರ ಒಳಗಾಗಿ ತಮ್ಮ ಲಸಿಕೆಗಳ ವಿವರವನ್ನು ಸಲ್ಲಿಸ ಬೇಕೆಂಬ ಸೂಚನೆ ನೀಡಿತ್ತು. ಡಿಸೆಂಬರ್ 3ರ ಬಳಿಕವೂ ಯಾವುದೇ ವಿವರಗಳನ್ನು ಸಲ್ಲಿಸದ ಉದ್ಯೋಗಿಗಳನ್ನು ಗೂಗಲ್ ವೈಯಕ್ತಿಕವಾಗಿ ಸಂಪರ್ಕಿಸುವುದೆಂದು ಸೂಚನೆಯಲ್ಲಿ ತಿಳಿಸಿತ್ತು. ಇದನ್ನೂ ಓದಿ: ಭಾರತೀಯನಿಗೆ 3.5ಲಕ್ಷ ರೂ. ನೀಡಿದ ಗೂಗಲ್

    ಇದೀಗ ಗೂಗಲ್ ಲಸಿಕೆಯನ್ನು ಪಡೆಯದೇ ಇರುವ ಉದ್ಯೋಗಿಗಳಿಗೆ ಜನವರಿ 18ರ ವರೆಗೆ ಸಮಯಾವಕಾಶ ನೀಡಿದೆ. ಉದ್ಯೋಗಿಗಳು ಲಸಿಕೆಯನ್ನು ಪಡೆಯದೇ ಹೋದಲ್ಲಿ ಅವರಿಗೆ ವೇತನದೊಂದಿಗೆ 30 ದಿಗಳ ರಜೆಯನ್ನು ನೀಡಲಾಗುವುದು, ನಂತರ 6 ತಿಂಗಳ ವರೆಗೆ ವೇತನವಿಲ್ಲದ ವೈಯಕ್ತಿಕ ರಜೆಯಲ್ಲಿ ಇರಿಸಲಾಗುತ್ತದೆ ಎಂದಿದೆ.

    ಒಂದುವೇಳೆ ಈ ಸಮಯಾವಕಾಶದಲ್ಲಿಯೂ ಉದ್ಯೋಗಿಗಳು ಲಸಿಕೆಯನ್ನು ತೆಗೆದುಕೊಂಡಿಲ್ಲವಾದಲ್ಲಿ ಕೆಲಸದಿಂದಲೇ ಅವರನ್ನು ವಜಾ ಗೊಳಿಸುವುದಾಗಿ ತಿಳಿಸಿದೆ. ಇದನ್ನೂ ಓದಿ: ಅಮ್ಮನ ಫೋಟೋ ಹಿಡಿದುಕೊಂಡು ಹೆಜ್ಜೆ ಇಟ್ಟ ವಧು – ವೀಡೀಯೋ ವೈರಲ್‌

    ಗೂಗಲ್ ಜನವರಿ 2022ರ ಒಳಗಾಗಿ ತಮ್ಮ ಉದ್ಯೋಗಿಗಳನ್ನು ಆಫಿಸ್‌ಗೆ ಕರೆಸಿಕೊಳ್ಳುವ ಯೋಜನೆ ಮಾಡಿತ್ತು. ಆದರೆ ಓಮಿಕ್ರಾನ್ ಪ್ರಕರಣಗಳ ಹಠಾತ್ತನೆ ಏರಿಕೆಯಿಂದಾಗಿ ಗೂಗಲ್ ಸೇರಿದಂತೆ ಎಲ್ಲಾ ದೊಡ್ಡ ಟೆಕ್ ಕಂಪನಿಗಳು ಉದ್ಯೋಗಿಗಳನ್ನು ಆಫೀಸ್‌ಗೆ ಕರೆಸಿಕೊಳ್ಳುವ ಯೋಜನೆಯನ್ನು ಮುಂದೂಡಿದೆ.

  • ಭಾರತೀಯನಿಗೆ 3.5ಲಕ್ಷ ರೂ. ನೀಡಿದ ಗೂಗಲ್

    ದಿಸ್ಪುರ್: ಆಂಡ್ರಾಯ್ಡ್ನಲ್ಲಿದ್ದ ದೋಷವನ್ನು ಕಂಡು ಹುಡುಕಿ ಅದನ್ನು ಗೂಗಲ್‌ಗೆ ವರದಿ ನೀಡಿದ್ದಕ್ಕೆ ಗೂಗಲ್ 3.5ಲಕ್ಷ ರೂ.ಯನ್ನು ಬಹುಮಾನವಾಗಿ ನೀಡಿದೆ. ದೋಷವನ್ನು ಕಂಡುಹಿಡಿದ ಭಾರತೀಯ ರೋನಿ ದಾಸ್ ಅಸ್ಸಾಂ ಮೂಲದವರು.

    ಆಂಡ್ರಾಯ್ಡ್ನ ಫೋರ್‌ಗ್ರೌಂಡ್ ಸೇವೆಯಲ್ಲಿ ಕೆಲವು ದೋಷಗಳಿದ್ದು, ಇದರ ಮೂಲಕ ಹ್ಯಾಕರ್‌ಗಳು ಸುಲಭವಾಗಿ ಬಳಕೆದಾರರ ಫೋನ್‌ಗಳಿಂದ ವಯಕ್ತಿಕ ಮಾಹಿತಿ ಪಡೆಯಲು ಸಾಧ್ಯವಾಗುತ್ತಿತ್ತು. ರೋನಿ ದಾಸ್ ಸೈಬರ್-ಸೆಕ್ಯೂರಿಟಿಯ ಬಗ್ಗೆ ತಿಳುವಳಿಕೆ ಹೊಂದಿದ್ದು, ಆಂಡ್ರಾಯ್ಡ್ನಲ್ಲಿದ್ದ ಸಮಸ್ಯೆಯನ್ನು ಕಂಡುಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ನಮ್ಮಿಬ್ಬರ ಮದುವೆ ಯಾವಾಗ – ಆಲಿಯಾಗೆ ರಣಬೀರ್‌ ಪ್ರಶ್ನೆ

    ರೋನಿಯವರು ಆಂಡ್ರಾಯ್ಡ್ ಪ್ಲಾಟ್‌ಫಾರ್ಮ್ನಲ್ಲಿ ಅಪ್ಲಿಕೇಶನ್ ಒಂದನ್ನು ರಚಿಸುವಾಗ ತಾಂತ್ರಿಕ ಸಮಸ್ಯೆಯನ್ನು ಎದುರಿಸಿದ್ದರು. ಅದರಲ್ಲಿದ್ದ ದೋಷವನ್ನು ಕಂಡು ಹುಡುಕಿದ ರೋನಿ ಮೇ ತಿಂಗಳಿನಲ್ಲಿ ಗೂಗಲ್‌ಗೆ ದೋಷದ ಬಗ್ಗೆ ವರದಿ ಮಾಡಿದ್ದಾರೆ. ಇದನ್ನೂ ಓದಿ: ಹೆದ್ದಾರಿಯಲ್ಲಿ ಹೊಂಚು ಹಾಕಿ ಬೇಟೆಯಾಡಿದ ಚಿರತೆ – ವೀಡಿಯೋ ವೈರಲ್

    ದೋಷದ ಬಗ್ಗೆ ಮಾಹಿತಿ ಪಡೆದ ಗೂಗಲ್ ಆಂಡ್ರಾಯ್ಡ್ ಭದ್ರತಾ ತಂಡ ರೋನಿ ಯವರಿಗೆ ಇಮೇಲ್ ಮೂಲಕ ಧನ್ಯವಾದ ಹೆಳಿದೆ. ಇದರೊಂದಿಗೆ ರೋನಿಗೆ 5000 ಡಾಲರ್(3.5 ಲಕ್ಷ ರೂ.)ಅನ್ನೂ ನೀಡಿದೆ.

  • ಪಿಜ್ಜಾಗೆ ಡೂಡಲ್ ಸಮರ್ಪಿಸಿದ ಗೂಗಲ್

    ಪಿಜ್ಜಾಗೆ ಡೂಡಲ್ ಸಮರ್ಪಿಸಿದ ಗೂಗಲ್

    ನವದೆಹಲಿ: ಗೂಗಲ್ ತನ್ನ ಇಂಟರಾಕ್ಟಿವ್ ಡೂಡಲ್ ನ್ನು ಪ್ರತಿದಿನ ಒಂದೊಂದು ವಿಶೇಷವಾದ ಸ್ಥಳ, ವ್ಯಕ್ತಿಗೆ ಸಮರ್ಪಿಸುತ್ತಿರುತ್ತೆ. ಇಂದು ಪ್ರಪಂಚದಲ್ಲಿ ಹೆಚ್ಚು ಸೇವಿಸುತ್ತಿರುವ ಪಿಜ್ಜಾಗೆ ತನ್ನ ಡೂಡಲ್ ಅನ್ನು ಸಮರ್ಪಿಸಿದೆ.

    ಇತ್ತೀಚಿಗೆ ಚಿಕ್ಕವರಿಂದ ಹಿಡಿದು ದೊಡ್ಡವರವರೆಗೂ ಪಿಜ್ಜಾ ಎಂದರೆ ಬಾಯಲ್ಲಿ ನೀರು ಬರುತ್ತೆ. ಅದು ಅಲ್ಲದೇ ಇದು ವಿಶ್ವದ ಅತ್ಯಂತ ಜನಪ್ರಿಯ ಭಕ್ಷ್ಯಗಳಲ್ಲಿ ಒಂದಾಗಿದ್ದು, ಇದಕ್ಕೆ ಗೌರವ ಸಲ್ಲಿಸುವ ಸಲ್ಲುವಾಗಿ ಗೂಗಲ್ ಇಂದು ಸಂವಾದಾತ್ಮಕ ಡೂಡಲ್(ಇಂಟರಾಕ್ಟಿವ್ ಡೂಡಲ್) ನಲ್ಲಿ ಪಿಜ್ಜಾ ಚಿತ್ರವನ್ನು ಹಾಕಿದೆ.

    ಜಾಗತಿಕ ಸರ್ಚ್ ಇಂಜಿನ್ ತನ್ನ ವಿಶೇಷ ಡೂಡಲ್ನೊಂದಿಗೆ ನಿಯಾಪೊಲಿಟನ್ ‘ಪಿಜ್ಜೈಯುಲೊ’ ನ ಪಾಕಶಾಲೆಯ ಕಲೆಯನ್ನು ಹಾಕಿದೆ. ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ (ಯುನೆಸ್ಕೋ) ಪ್ರಕಾರ, ‘ನಿಯಾಪೊಲಿಟನ್ ‘ಪಿಜ್ಜೈಯುಲೊ’ ಕಲೆಯು ನಾಲ್ಕು ವಿಭಿನ್ನ ಹಂತಗಳನ್ನು ಒಳಗೊಂಡಿರುವ ಒಂದು ಪಾಕಶಾಲೆಯ ಅಭ್ಯಾಸವಾಗಿದೆ ಇದು ಭಿನ್ನ ಕಲೆಗಳಲ್ಲಿ ಒಂದಾಗಿದೆ ಎಂದಿದೆ. ಇದನ್ನೂ ಓದಿ: ಸಖತ್ ಟೇಸ್ಟ್ ಈ ಚಿಕನ್ ಹರಿಯಾಲಿ – ನೀವೂ ಒಮ್ಮೆ ಟ್ರೈ ಮಾಡಿ

    ಗೂಗಲ್ ಪ್ರಪಂಚದಾದ್ಯಂತದ 11 ಅತ್ಯಂತ ಜನಪ್ರಿಯ ಪಿಜ್ಜಾ ಪಝಲ್ ಗೇಮ್ ಅನ್ನು ಈ ಸಂದರ್ಭದಲ್ಲಿ ಸ್ಮರಿಸಿಕೊಂಡಿದೆ. ಈ ಗೇಮ್ ಆಟಗಾಗರಿಗೆ ಸವಾಲು ಹಾಕುತ್ತಾ ತನ್ನತ್ತ ಸೆಳೆಯುತ್ತೆ.