Tag: ಗೂಗಲ್

  • ಶೀಘ್ರವೇ ಕೊನೆಯಾಗಲಿದೆ ಉಚಿತ ವಾಟ್ಸಪ್‌ ಸ್ಟೋರೇಜ್‌ ಫೀಚರ್‌ – ನಿಮ್ಮ ಮುಂದಿರುವ ಆಯ್ಕೆ ಏನು?

    ಶೀಘ್ರವೇ ಕೊನೆಯಾಗಲಿದೆ ಉಚಿತ ವಾಟ್ಸಪ್‌ ಸ್ಟೋರೇಜ್‌ ಫೀಚರ್‌ – ನಿಮ್ಮ ಮುಂದಿರುವ ಆಯ್ಕೆ ಏನು?

    ವಾಷಿಂಗ್ಟನ್‌: ವಾಟ್ಸಪ್‌ (Whatssap) ಇಲ್ಲಿಯವರೆಗೆ ನೀಡುತ್ತಿದ್ದ ಫ್ರೀ ಗೂಗಲ್‌ ಡ್ರೈವ್‌ (Google Drive) ಸ್ಟೋರೇಜ್‌ ಅನ್ನು 2024ರ ಮಧ್ಯದಲ್ಲಿ ನಿಲ್ಲಿಸಲಿದೆ.

    ಈಗಾಗಲೇ ವಾಟ್ಸಪ್‌ ಬೀಟಾ ಅವೃತ್ತಿ ಬಳಸುತ್ತಿರುವ ಬಳಕೆದಾರರಿಗೆ ಸೆಟ್ಟಿಂಗ್ಸ್‌ನಲ್ಲಿ ಗೂಗಲ್‌ ಡ್ರೈವ್‌ ಬ್ಯಾಕಪ್‌ ಆಯ್ಕೆಯನ್ನು ತೋರಿಸುತ್ತಿದೆ. ವಾಟ್ಸಪ್‌ನಲ್ಲಿ ಇಲ್ಲಿಯವರೆಗೆ ಚಾಟ್‌, ಫೋಟೋ, ವಿಡಿಯೋಗಳು ಗೂಗಲ್‌ ಡ್ರೈವ್‌ನಲ್ಲಿ ಸೇವ್‌ ಆಗುತ್ತಿತ್ತು. ಇದಕ್ಕೆ ಯಾವುದೇ ಮಿತಿ ಇರುತ್ತಿರಲಿಲ್ಲ.

    ಯಾಕೆ ಈ ಬದಲಾವಣೆ?
    ಯಾವ ಕಾರಣಕ್ಕೆ ಈ ಬದಲಾವಣೆ ಮಾಡುತ್ತಿದ್ದೇವೆ ಎಂಬುದರ ಬಗ್ಗೆ ವಾಟ್ಸಪ್‌ ಮತ್ತು ಗೂಗಲ್‌ ಇಲ್ಲಿಯವರೆಗೆ ಹೇಳಿಲ್ಲ. ಎಲ್ಲರಿಗೂ ಫ್ರೀ ಕ್ಲೌಡ್‌ ಸ್ಟೋರೇಜ್‌ ನೀಡುವುದು ಕಾರ್ಯಸಾಧ್ಯವಲ್ಲ ಎಂಬ ಕಾರಣಕ್ಕೆ ವಾಟ್ಸಪ್‌ ನಿರ್ಧಾರಕ್ಕೆ ಬಂದಿದೆ ಎಂದು ವರದಿಯಾಗಿದೆ.   ಇದನ್ನೂ ಓದಿ: ರನ್‌ವೇಯಲ್ಲಿ ಹೊತ್ತಿ ಉರಿದ ಜಪಾನ್‌ ವಿಮಾನ – 367 ಮಂದಿ ಗ್ರೇಟ್‌ ಎಸ್ಕೇಪ್‌

    ಆಂಡ್ರಾಯ್ಡ್‌ ಆಪರೇಟಿಂಗ್‌ ಸಿಸ್ಟಂ ಮಾಲೀಕತ್ವವನ್ನು ಹೊಂದಿರುವ ಗೂಗಲ್‌ ಉಚಿತ 15 ಜಿಬಿ ಮಿತಿ ಮಗಿದ ಬಳಿಕ ಮತ್ತೆ ಡ್ರೈವ್‌ನಲ್ಲಿ ಸ್ಟೋರ್‌ ಮಾಡಿದರೆ ಶುಲ್ಕ ವಿಧಿಸುತ್ತದೆ. ಆದರೆ ಇಲ್ಲಿಯವರೆಗೆ ವಾಟ್ಸಪ್‌ ಡೇಟಾಗಳು ಸ್ಟೋರ್‌ ಆಗಿದ್ದಕ್ಕೆ ಯಾವುದೇ ಶುಲ್ಕ ವಿಧಿಸುತ್ತಿರಲಿಲ್ಲ.

    ಪ್ರಸ್ತುತ ಗೂಗಲ್‌ ಡ್ರೈವ್‌ನಲ್ಲಿ ಗರಿಷ್ಠ 15 ಜಿಬಿವರೆಗಿನ ಡೇಟಾವನ್ನು ಸೇವ್‌ ಮಾಡಬಹುದು. ಜಿಮೇಲ್‌, ಫೋಟೋ, ಡ್ರೈವ್‌ ಡೇಟಾ… ಎಲ್ಲಾಸೇರಿ 15ಜಿಬಿ ಸಂಗ್ರಹಕ್ಕೆ ಮಾತ್ರ ಅನುಮತಿ ನೀಡುತ್ತದೆ. ಇನ್ನು ಮುಂದೆ ವಾಟ್ಸಪ್‌ ಡೇಟಾ ಸೇರಿದಂತೆ ಎಲ್ಲಾ ಡೇಟಾಗಳು 15 ಜಿಬಿ ಮಿತಿ ಒಳಗಡೆ ಇರಬೇಕಾಗುತ್ತದೆ.

    ಒಂದು ವೇಳೆ ಇದಕ್ಕಿಂತ ಹೆಚ್ಚಿನ ಪ್ರಮಾಣದ ಡೇಟಾವನ್ನು ಗೂಗಲ್‌ ಡ್ರೈವ್‌ನಲ್ಲಿ ಸೇವ್‌ ಮಾಡಬೇಕಾದರೆ ಗೂಗಲ್‌ ಒನ್‌ (Google One) ಮೂಲಕ ಸಬ್‌ಸ್ಕ್ರೈಬ್‌ ಆಗಿ ತಿಂಗಳ ಮತ್ತು ವರ್ಷದ ಪ್ಲ್ಯಾನ್‌ ಖರೀದಿಸಬೇಕು.

    ಗೂಗಲ್‌ ಒನ್‌ನಲ್ಲಿ ಬೇಸಿಕ್‌ 100 ಜಿಬಿ ಡೇಟಾಗೆ 3 ತಿಂಗಳು 35 ರೂ. ಪಾವತಿಸಿ ನಂತರ ಪ್ರತಿ ತಿಂಗಳು 130 ರೂ. ಪಾವತಿಸಬೇಕಾಗುತ್ತದೆ.

     

  • 2 ವರ್ಷಗಳಿಂದ ಜಿ-ಮೇಲ್‌ ಅಕೌಂಟ್‌ನಲ್ಲಿ ನೀವು ಆ್ಯಕ್ಟಿವ್‌ ಆಗಿಲ್ವಾ? – ಹಾಗಾದ್ರೆ ತಪ್ಪದೇ ಈ ಸುದ್ದಿ ಓದಿ..

    2 ವರ್ಷಗಳಿಂದ ಜಿ-ಮೇಲ್‌ ಅಕೌಂಟ್‌ನಲ್ಲಿ ನೀವು ಆ್ಯಕ್ಟಿವ್‌ ಆಗಿಲ್ವಾ? – ಹಾಗಾದ್ರೆ ತಪ್ಪದೇ ಈ ಸುದ್ದಿ ಓದಿ..

    ನವದೆಹಲಿ: ಗೂಗಲ್‌ (Google) ಕಂಪನಿ ತನ್ನ ಸುರಕ್ಷತಾ ನಿಯಮಗಳನ್ನು ಅಪ್‌ಡೇಟ್‌ ಮಾಡಿದ್ದು, ಜಿ-ಮೇಲ್‌ ಖಾತೆ ಹೊಂದಿದ್ದು, ಸಕ್ರಿಯರಾಗಿಲ್ಲದವರಿಗೆ ಶಾಕಿಂಗ್‌ ನ್ಯೂಸ್‌ ಕೊಟ್ಟಿದೆ.

    ಹೌದು, 2 ವರ್ಷ ಬಳಸದೇ ಇರುವ ಜಿ-ಮೇಲ್‌ ಖಾತೆಗಳನ್ನು (Gmail Accounts) ಡಿಸೆಂಬರ್‌ನಲ್ಲಿ ಬಂದ್‌ ಮಾಡಲಾಗುವುದು ಎಂದು ತಿಳಿಸಿದೆ. ಹೀಗಾಗಿ ಒಮ್ಮೆ ಲಾಗಿನ್‌ ಆಗಿ ಖಾತೆ ಉಳಿಸಿಕೊಳ್ಳಿ ಎಂಬ ಎಚ್ಚರಿಕೆಯ ಸಂದೇಶವನ್ನೂ ರವಾನಿಸಿದೆ. ಇದನ್ನೂ ಓದಿ: PublicTV Explainer: ‘ಸೋಷಿಯಲ್‌’ನಲ್ಲಿ ಬೆತ್ತಲಾದ ‘ಡೀಪ್‌ಫೇಕ್’; ಏನಿದು ತಂತ್ರಜ್ಞಾನ? ಇದರ ಆಳ ಎಷ್ಟು? ಅಪರಾಧಕ್ಕೆ ಶಿಕ್ಷೆ ಏನು?

    ಗೂಗಲ್‌ ಕಂಪನಿಯು ಸುರಕ್ಷತಾ ನಿಯಮಗಳನ್ನು ಕಳೆದ ಮೇ ತಿಂಗಳಲ್ಲಿ ಅಪ್‌ಡೇಟ್‌ ಮಾಡಿತ್ತು. ಆಗಲೇ ಅದರ ಉಪಾಧ್ಯಕ್ಷೆ ರೂತ್‌ ಕ್ರಿಚೇಲ್‌, ಮುಂಬರುವ ಡಿಸೆಂಬರ್‌ನಲ್ಲಿ ಕಳೆದ 2 ವರ್ಷಗಳಿಂದ ಒಮ್ಮೆಯೂ ಲಾಗಿನ್‌ ಮಾಡದ ಅಥವಾ ಬಳಕೆ ಮಾಡದ ವೈಯಕ್ತಿಕ ಗೂಗಲ್‌ ಖಾತೆಗಳನ್ನು ಡಿಲೀಟ್‌ ಮಾಡಲು ಆರಂಭಿಸುತ್ತೇವೆ ಎಂದು ತಿಳಿಸಿದ್ದರು. ಮುಂದಿನ ಎರಡು ವರ್ಷಗಳಲ್ಲಿ ಕನಿಷ್ಠ ಬಳಕೆ ಮಾಡದ ಖಾತೆಗಳನ್ನು ನಿರಂತರವಾಗಿ ರದ್ದುಪಡಿಸುತ್ತೇವೆ ಎಂದು ಸೂಚನೆ ನೀಡಿದ್ದಾರೆ.

    ನಿಯಮದ ಪ್ರಕಾರ, ವೈಯಕ್ತಿಕ ಗೂಗಲ್‌ ಖಾತೆಗಳು (ಜಿ-ಮೇಲ್‌, ಡಾಕ್ಸ್‌, ಡ್ರೈವ್‌, ಮೀಟ್‌, ಕ್ಯಾಲೆಂಡರ್‌, ಗೂಗಲ್‌ ಫೋಟೋಸ್‌ ಇತ್ಯಾದಿ) ಮಾತ್ರ ಡಿಲೀಟ್‌ ಆಗಲಿವೆ. ಸಾಂಸ್ಥಿಕ ಅಂದರೆ ಕಂಪನಿಗಳು ಅಥವಾ ಶಾಲೆ ಇತ್ಯಾದಿ ಸಂಸ್ಥೆಗಳು ಹೊಂದಿರುವ ಗೂಗಲ್‌ ಖಾತೆಗಳು ಡಿಲೀಟ್‌ ಆಗುವುದಿಲ್ಲ. ಇದನ್ನೂ ಓದಿ: ನೊಬೆಲ್ ಪ್ರಶಸ್ತಿ ವಿಜೇತ ಭಾರತೀಯ ಸಾಧಕನ ಹೆಸರನ್ನು ಮಗನಿಗಿಟ್ಟ ಮಸ್ಕ್

    ಮರೆತ, ಬಳಸದ ಖಾತೆಗಳು ಗೂಗಲ್‌ ಅಥವಾ ಖಾತೆದಾರರಿಗೆ ಅಪಾಯ ತರಬಹುದು ಎಂಬ ಕಾರಣಕ್ಕೆ ಡಿಲೀಟ್‌ ಮಾಡಲು ಗೂಗಲ್‌ ಮುಂದಾಗಿದೆ. ಜಿ-ಮೇಲ್‌ ಅಕೌಂಟ್‌ಗಳು ಡಿಲೀಟ್‌ ಆಗಬಾರದು ಎನ್ನುವವರು ಕಳೆದ 2 ವರ್ಷಗಳಿಂದ ಖಾತೆ ಬಳಸದಿದ್ದರೆ ಲಾಗಿನ್‌ ಆಗಬೇಕಿದೆ.

  • 25 ವರ್ಷ ಪೂರೈಸಿದ ಸಂಭ್ರಮದಲ್ಲಿ ಗೂಗಲ್

    25 ವರ್ಷ ಪೂರೈಸಿದ ಸಂಭ್ರಮದಲ್ಲಿ ಗೂಗಲ್

    ವಾಷಿಂಗ್ಟನ್: ಜಾಗತಿಕವಾಗಿ ಇಂಟರ್ನೆಟ್ ಅಲ್ಲಿ ಅತಿ ಹೆಚ್ಚು ಬಳಕೆಯಲ್ಲಿರುವ ಸರ್ಚ್ ಎಂಜಿನ್ ಗೂಗಲ್ (Google) ಇಂದು 25 ವರ್ಷವನ್ನು ಪೂರೈಸಿದೆ. ಬುಧವಾರ ವಿಭಿನ್ನವಾದ ಡೂಡಲ್‌ನೊಂದಿಗೆ ಗೂಗಲ್ ತನ್ನ 25ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದೆ.

    ಗೂಗಲ್ ಈ ಬಗ್ಗೆ ತನ್ನ ಬ್ಲಾಗ್‌ನಲ್ಲಿ ಬರೆದುಕೊಂಡಿದೆ. ಕಳೆದ 25 ವರ್ಷಗಳಲ್ಲಿ ಕಂಪನಿ ಬೆಳೆದು ಬಂದ ಹಾದಿ, 1998ರಿಂದ 2023ರ ವರೆಗೆ ತನ್ನ ಬದಲಾದ ಲೋಗೋಗಳನ್ನು ತೋರಿಸುವ ಡೂಡಲ್ ಅನ್ನು ತನ್ನ ಬ್ಲಾಗ್‌ನಲ್ಲಿ ಹಂಚಿಕೊಂಡಿದೆ.

    90ರ ದಶಕದ ಉತ್ತರಾರ್ಧದಲ್ಲಿ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದ ಕಂಪ್ಯೂಟರ್ ವಿಜ್ಞಾನ ಕಾರ್ಯಕ್ರಮದಲ್ಲಿ ಭೇಟಿಯಾದ ಡಾಕ್ಟರೇಟ್ ವಿದ್ಯಾರ್ಥಿಗಳಾದ ಸೆರ್ಗೆ ಬ್ರಿನ್ ಮತ್ತು ಲ್ಯಾರಿ ಪೇಜ್ ಅವರು ಗೂಗಲ್ ಅನ್ನು ಅಭಿವೃದ್ಧಿಪಡಿಸಿದರು. ಇದನ್ನು ಜಾಗತಿಕ ವಿಸ್ತರಿಸಲು ಅವರು ಸಿಲಿಕಾನ್ ವ್ಯಾಲಿಯಲ್ಲಿ ಹೂಡಿಕೆದಾರರನ್ನು ಹುಡುಕಿದರು. ಇದಕ್ಕೆ ಸನ್ ಮೈಕ್ರೊಸಿಸ್ಟಮ್ಸ್ 1 ಲಕ್ಷ ಅಮೆರಿಕನ್ ಡಾಲರ್ ಅನ್ನು ಗೂಗಲ್‌ನಲ್ಲಿ ಹೂಡಿತು. ಬಳಿಕ ಗೂಗಲ್ 1998ರ ಸೆಪ್ಟೆಂಬರ್ 27ರಂದು ಕ್ಯಾಲಿಫೋರ್ನಿಯಾದಲ್ಲಿ ಅಧಿಕೃತವಾಗಿ ಆರಂಭವಾಯಿತು. ಇದನ್ನೂ ಓದಿ: ರಿಲಯನ್ಸ್ ಜಿಯೋ: ಐಫೋನ್ 15 ಖರೀದಿಸಿದರೆ 6 ತಿಂಗಳು ಫ್ರೀ ಪ್ಲಾನ್

    ಗೂಗಲ್‌ನ ಪ್ರಸ್ತುತ ಸಿಇಒ ಸುಂದರ್ ಪಿಚೈ ಅವರು ಕಳೆದ ತಿಂಗಳು ಕಂಪನಿಯ ಹುಟ್ಟುಹಬ್ಬವನ್ನು ಗುರುತಿಸಲು ಟಿಪ್ಪಣಿಯನ್ನು ಬರೆದಿದ್ದರು. ಅವರು ಕಂಪನಿಯ ಪ್ರಯಾಣ, ತಂತ್ರಜ್ಞಾನವನ್ನು ಪರಿವರ್ತಿಸುವಲ್ಲಿ ಅದರ ಪಾತ್ರ ಮತ್ತು ಭವಿಷ್ಯದ ಹಾದಿಯನ್ನು ರೂಪಿಸಿದ ಬಗ್ಗೆ ಮೆಲುಕು ಹಾಕಿದರು. ಗೂಗಲ್‌ನ ಯಶಸ್ಸಿನ ಭಾಗವಾಗಿರುವ ಬಳಕೆದಾರರು, ಉದ್ಯೋಗಿಗಳು ಮತ್ತು ಪಾಲುದಾರರಿಗೆ ಅವರು ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿದರು. ಹೊಸತನದ ನಿರಂತರ ಸವಾಲು ಮತ್ತು ಹಿಂದಿನ ಮತ್ತು ಪ್ರಸ್ತುತ ಗೂಗ್ಲರ್‌ಗಳ ಸಮರ್ಪಣೆಗಾಗಿ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

    ಕಳೆದ 25 ವರ್ಷಗಳಲ್ಲಿ ಗೂಗಲ್ ಕೇವಲ ಸರ್ಚ್ ಎಂಜಿನ್ ಆಗಿ ಉಳಿದಿರದೇ ಇಮೇಲ್, ಯೂಟ್ಯೂಬ್‌ನಿಂದ ಹಿಡಿದು ಕೃತಕ ಬುದ್ಧಿಮತ್ತೆಯ ಚಾಟ್‌ಬಾಟ್‌ವರೆಗೂ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಿ ಬೆಳೆದು ನಿಂತಿದೆ. ಇದನ್ನೂ ಓದಿ: ಆರು ವರ್ಷದ ನಂತರ ಕಾರವಾರಕ್ಕೆ ಬಂದಿಳಿದ ಟುಪೋಲೆವ್ ಯುದ್ಧ ವಿಮಾನ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 41 ಕೋಟಿಯೊಂದಿಗೆ 35ನೇ ವಯಸ್ಸಿನಲ್ಲಿ ನಿವೃತ್ತಿ – ಬೆರಗಾಗಿಸಿದ 22 ವರ್ಷದ ಗೂಗಲ್ ಟೆಕ್ಕಿಯ ಫ್ಯೂಚರ್ ಪ್ಲ್ಯಾನ್

    41 ಕೋಟಿಯೊಂದಿಗೆ 35ನೇ ವಯಸ್ಸಿನಲ್ಲಿ ನಿವೃತ್ತಿ – ಬೆರಗಾಗಿಸಿದ 22 ವರ್ಷದ ಗೂಗಲ್ ಟೆಕ್ಕಿಯ ಫ್ಯೂಚರ್ ಪ್ಲ್ಯಾನ್

    ವಾಷಿಂಗ್ಟನ್: ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಯುವಕರು ಸಾಕಷು ಹಣವನ್ನು ಉಳಿತಾಯ ಮಾಡಲು ಹಾಗೂ ಹೂಡಿಕೆ (Investment) ಮಾಡಲು ಬಯಸುತ್ತಾರೆ. ಈ ಮೂಲಕ ಬೇಗನೆ ನಿವೃತ್ತರಾಗಲು ಬಯಸುತ್ತಾರೆ. ಇಲ್ಲೊಬ್ಬ ಗೂಗಲ್‌ನ ಸಾಫ್ಟ್‌ವೇರ್ ಎಂಜಿನಿಯರ್ (Google Software Engineer) ತನ್ನ 22 ವಯಸ್ಸಿನಲ್ಲಿ ವೃತ್ತಿಯನ್ನು ಪ್ರಾರಂಭಿಸುತ್ತಲೇ ತಮ್ಮ 35ನೇ ವಯಸ್ಸಿನೊಳಗೆ 5 ಮಿಲಿಯನ್ ಡಾಲರ್ (ಸುಮಾರು 41 ಕೋಟಿ ರೂ.) ಹೂಡಿಕೆ ಮಾಡಿ, ನಿವೃತ್ತಿ (Retirement) ಹೊಂದುವ ಗುರಿಯನ್ನು ಹೊಂಡಿದ್ದಾರೆ. ಅವರ ಫ್ಯೂಚರ್ ಪ್ಲ್ಯಾನ್ ಯುವಕರಿಗೆ ಸ್ಪೂರ್ತಿದಾಯಕವಾಗಿದೆ.

    ಗೂಗಲ್‌ನ ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ 22 ವರ್ಷದ ಎಥಾನ್ ನ್ಗುನ್ಲಿ (Ethan Nguonly) ಇಂತಹ ಒಂದು ಯೋಜನೆಯನ್ನು ಮಾಡಿದ್ದಾರೆ. ಕ್ಯಾಲಿಫೋರ್ನಿಯಾದ ಆರೆಂಜ್ ಕೌಂಟಿಯಲ್ಲಿ ವಾಸವಿರೋ ಟೆಕ್ಕಿ ತನ್ನ ಹಣವನ್ನು ಉಳಿತಾಯ ಮಾಡುವುದಕ್ಕಿಂತ ಹೆಚ್ಚಾಗಿ ಷೇರುಗಳಲ್ಲಿ ಹೂಡಿಕೆ ಮಾಡುವುದರ ಮಹತ್ವದ ಬಗ್ಗೆ ತನ್ನ ಹೆತ್ತವರು ಹೇಗೆ ಪ್ರೋತ್ಸಾಹ ನೀಡಿದರು ಎಂದು ವಿವರಿಸಿದ್ದಾರೆ.

    ನೀವು ನಿಮ್ಮ ಹಣವನ್ನು ಉಳಿತಾಯ ಖಾತೆಯಲ್ಲಿ ಇಟ್ಟು ಬಿಟ್ಟರೆ ಅದು ಯಾವುದೇ ಕೆಲಸಕ್ಕೂ ಬರಲ್ಲ. ಕಾಲಾನಂತರ ಅದು ನಿಷ್ಪ್ರಯೋಜಕ ಆಗಿಬಿಡುತ್ತದೆ. ಆದರೆ ನಿಮ್ಮ ಹಣದಿಂದ ಏನಾದರೂ ಪ್ರಯೋಜನ ಆಗಬೇಕೆಂದರೆ ಅದನ್ನು ಹೂಡಿಕೆ ಮಾಡಿ ಎಂದು ಪೋಷಕರು ತನಗೆ ತಿಳಿಸಿದ್ದಾಗಿ ನ್ಗುನ್ಲಿ ಹೇಳಿದ್ದಾರೆ.

    ನಾನು ಚಿಕ್ಕವನಿದ್ದಾಗಲೇ ಯೋಚಿಸುತ್ತಿದ್ದ ಮುಖ್ಯ ವಿಷಯವೆಂದರೆ, ಈ ಹಣ ಎಲ್ಲಾ ದೊಡ್ಡದಾಗುತ್ತಾ ಹೋಗುತ್ತದೆ, ಬೆಳೆಯುತ್ತಲೇ ಇರುತ್ತದೆ. ಆದರೆ ಇದಕ್ಕಾಗಿ ನಾವು ಯಾವುದೇ ಕೆಲಸ ಮಾಡುವ ಅಗತ್ಯವೇ ಇಲ್ಲ. ಇದು ನಿಜವಾಗಿಯೂ ನನ್ನ ಹಣವನ್ನು ಹೂಡಿಕೆಗಳಲ್ಲಿ ವಿನಿಯೋಗಿಸಬಹುದು ಎಂಬ ನನ್ನ ಕಲ್ಪನೆಯನ್ನು ಬಹಿರಂಗಪಡಿಸಿತು. ಅದಕ್ಕಾಗಿ ಸಕ್ರಿಯವಾಗಿ ಕೆಲಸ ಮಾಡೋ ಬದಲು ಅದನ್ನು ಹೂಡಿಕೆ ಮಾಡುವುದೇ ಉತ್ತಮ ಎಂದು ಹೇಳಿದರು.

    ನ್ಗುನ್ಲಿ ಇಂತಹ ಯೋಜನೆಯೊಂದಿಗೆಯೇ ಯುನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾದಲ್ಲಿ ಕಂಪ್ಯೂಟರ್ ಸೈನ್ಸ್‌ನಲ್ಲಿ ಪದವಿ ಪಡೆದಿದ್ದಾರೆ. ಇದಕ್ಕಾಗಿ ಅವರು ಯಾವುದೇ ಸಾಲ ಮಾಡುವ ಪರಿಸ್ಥಿತಿ ಎದುರಾಗಿಲ್ಲ. ನಂತರ ಅವರು ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡಿಕೊಂಡೇ ಮಾಹಿತಿ ಹಾಗೂ ಡೇಟಾ ಸೈನ್ಸ್‌ನಲ್ಲಿ ಸ್ನಾತಕೋತ್ತರ ಪದವಿಯನ್ನು ಪ್ರಾರಂಭಿಸಿದರು. 2022ರ ಆಗಸ್ಟ್‌ನಲ್ಲಿ ಕೋರ್ಸ್ ಅನ್ನು ಪೂರ್ಣಗೊಳಿಸಿದ್ದಾರೆ. ಸ್ನಾತಕೋತ್ತರ ಪದವಿ ಪಡೆಯುವುದಕ್ಕೂ ಮೊದಲೇ ನ್ಗುನ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಗೂಗಲ್‌ನಲ್ಲಿ ಉದ್ಯೋಗ ಗಿಟ್ಟಿಸಿಕೊಂಡರು.

    ನ್ಗುನ್ಲಿ ವಾರ್ಷಿಕ ಆದಾಯ 194,000 ಡಾಲರ್ (ಸುಮಾರು 1.60 ಕೋಟಿ ರೂ.). ಪ್ರಸ್ತುತ ಅವರು ತಮ್ಮ ನಿವೃತ್ತಿ ಹಾಗೂ ಇತರ ಹೂಡಿಕೆ ಖಾತೆಗಳಲ್ಲಿ ಹಾಗೂ ಫ್ಲೋರಿಡಾ ಮತ್ತು ಕ್ಯಾಲಿಫೋರ್ನಿಯಾದ ಮನೆಗಳಲ್ಲಿ 135,000 ಡಾಲರ್ (ಸುಮಾರು 1.11 ಕೋಟಿ ರೂ.) ಹೂಡಿಕೆ ಮಾಡಿದ್ದಾರೆ. ತಮ್ಮ ವೇತನದಲ್ಲಿ ಅವರು 35% ರಷ್ಟು ಹೂಡಿಕೆಗಳಲ್ಲಿ ವಿನಿಯೋಗಿಸಲು ಮುಂದಾಗಿದ್ದಾರೆ. ಜೊತೆಗೆ ರಿಯಲ್ ಎಸ್ಟೇಟ್‌ನಲ್ಲೂ ವಿನಿಯೋಗಿಸಲು ಯೋಜಿಸಿದ್ದಾರೆ. ಇದನ್ನೂ ಓದಿ: ಪಾಕ್‌, ಚೀನಾಗೆ ಠಕ್ಕರ್‌ ಕೊಡಲು ʻಇಂದ್ರಜಾಲ್‌ʼ ಅಸ್ತ್ರ – ಅತ್ಯಾಧುನಿಕ ಆ್ಯಂಟಿ ಡ್ರೋನ್‌ ಅನಾವರಣ

    ನ್ಗುನ್ಲಿ ಊಟಕ್ಕಾಗಿ ಹೆಚ್ಚೇನೂ ಖರ್ಚು ಮಾಡಲ್ಲ. ಏಕೆಂದರೆ ಗೂಗಲ್ ಉಚಿತ ಊಟ, ಉಪಹಾರ ನೀಡುತ್ತದೆ. ಬ್ರ್ಯಾಂಡೆಡ್ ಬಟ್ಟೆಗಳಿಗಾಗಿ ಹೆಚ್ಚಿನ ಖರ್ಚು ಮಾಡಲ್ಲ. ಬದಲಿಗೆ ಸರಳ ಹಾಗೂ ಕೈಗೆಟಕೋ ಬೆಲೆಯಲ್ಲಿ ಸಿಗುವ ಬಟ್ಟೆಗಳಲ್ಲಿ ಧರಿಸಲು ಇಷ್ಟ ಪಡುತ್ತಾರೆ. ಪ್ರಯಾಣವನ್ನು ಹೆಚ್ಚು ಇಷ್ಟಪಡೋ ಅವರು ವರ್ಷಕ್ಕೆ 3-4 ಬಾರಿ ಪ್ರವಾಸ ಹೋಗುತ್ತಾರೆ. ಐಷಾರಾಮಿ ವಸತಿಗೆ ಹಣ ವ್ಯಯಿಸುವ ಬದಲು ಕಡಿಮೆ ವೆಚ್ಚದ ಆಯ್ಕೆಗಳನ್ನು ಮಾಡುತ್ತಾರೆ.

    5 ಮಿಲಿಯನ್ ಡಾಲರ್‌ನೊಂದಿಗೆ 35ನೇ ವಯಸ್ಸಿನಲ್ಲಿ ನಿವೃತ್ತಿ ಪಡೆಯೋ ಗುರಿಯನ್ನು ತಲುಪಲು ನ್ಗುನ್ಲಿ ತಮ್ಮ ನಿವೃತ್ತಿ ಖಾತೆಯಲ್ಲಿ ಹೂಡಿಕೆ ಮಾಡುವುದನ್ನು ಮುಂದುವರಿಸಲು ಯೋಜಿಸಿದ್ದಾರೆ. ಪ್ರತಿ 2 ವರ್ಷಗಳಿಗೊಮ್ಮೆ ಹೊಸ ಆಸ್ತಿಯನ್ನು ಖರೀದಿ ಮಾಡುವ ಮೂಲಕ ತಮ್ಮ ರಿಯಲ್ ಎಸ್ಟೇಟ್ ಪೋರ್ಟ್ಫೋಲಿಯೋಗೆ ಸೇರಿಸುತ್ತಾರೆ. ನಾನು 67ನೇ ವಯಸ್ಸಿನಲ್ಲಿ ಪರ್ವತ ಏರಲು ಬಯಸಲ್ಲ. ಬದಲಿಗೆ ಎಲ್ಲಿಯವರೆಗೆ ಯುವಕನಾಗಿ, ಆರೋಗ್ಯವಾಗಿರುತ್ತೇನೋ ಅಲ್ಲಿಯವರೆಗೆ ಪ್ರಯಾಣವನ್ನು ಮಾಡಿ ಅನುಭವ ಪಡೆಯುತ್ತೇನೆ ಎಂದು ನ್ಗುನ್ಲಿ ಹೇಳುತ್ತಾರೆ. ಇದನ್ನೂ ಓದಿ: ದೇಶದಲ್ಲಿ ಲ್ಯಾಪ್‌ಟಾಪ್‌ ತಯಾರಿಸಲು 32 ಕಂಪನಿಗಳಿಂದ ಅರ್ಜಿ – 75 ಸಾವಿರ ಉದ್ಯೋಗ ಸೃಷ್ಟಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಲೇಸರ್ ಇಂಟರ್ನೆಟ್ ತಂತ್ರಜ್ಞಾನ – ಭಾರತದಲ್ಲಿ ಇದರ ಬಳಕೆ ಹೇಗೆ?

    ಲೇಸರ್ ಇಂಟರ್ನೆಟ್ ತಂತ್ರಜ್ಞಾನ – ಭಾರತದಲ್ಲಿ ಇದರ ಬಳಕೆ ಹೇಗೆ?

    ಟೆಲಿಕಾಂ ಪೂರೈಕೆದಾರ ಭಾರತಿ ಏರ್‌ಟೆಲ್ (Bharti Airtel) ಇತ್ತೀಚಿಗೆ ಗೂಗಲ್‌ನ (Google) ಮಾತೃಸಂಸ್ಥೆಯೊಂದಿಗೆ ತನ್ನ ಪಾಲುದಾರಿಕೆಯನ್ನು ಹೊಂದಿದ್ದು, ಭಾರತದ ಗ್ರಾಮೀಣ ಮತ್ತು ದೂರದ ಪ್ರದೇಶಗಳಲ್ಲಿ ಲೇಸರ್ ಇಂಟರ್ನೆಟ್ (Laser Internet) ಮೂಲಕ ಹೆಚ್ಚಿನ ಇಂಟರ್ನೆಟ್ ಸೇವೆಯನ್ನು ಒದಗಿಸಲು ಪ್ರಯತ್ನಿಸುತ್ತಿದೆ.

    ಈ ಕಂಪನಿಗಳು ವೇಗದ ಇಂಟರ್ನೆಟ್ ಸೇವೆಯನ್ನು ತಲುಪಿಸುವ ಸಲುವಾಗಿ ಬೆಳಕಿನ ಕಿರಣಗಳನ್ನು (ಲೇಸರ್) ಬಳಸುವ ಹೊಸ ತಂತ್ರಜ್ಞಾನವನ್ನು ಬಳಸುತ್ತಿದೆ. ಈ ಎರಡು ಕಂಪನಿಗಳು ಈ ಕುರಿತು ಶೋಧನೆಯನ್ನು ಮಾಡಿ ಭಾರತದ ವಿವಿಧೆಡೆ ಇದನ್ನು ಪರೀಕ್ಷಿಸಿದ್ದು, ಪ್ರಾಯೋಗಿಕ ಪರೀಕ್ಷೆಯು ಯಶಸ್ವಿಯಾಗಿವೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಮೊಬೈಲ್ ಫೋನ್ ಕಳೆದು ಹೋದ್ರೆ ಇನ್ನು ಚಿಂತಿಸಬೇಕಿಲ್ಲ – ಶೀಘ್ರವೇ ಕೇಂದ್ರ ತರಲಿದೆ ಟ್ರ್ಯಾಕಿಂಗ್ ಸಿಸ್ಟಮ್

    ಇತ್ತೀಚಿನ ಲೇಸರ್ ಆಧಾರಿತ ಇಂಟರ್ನೆಟ್ ತಂತ್ರಜ್ಞಾನವನ್ನು ಆಲ್ಫಾಬೆಟ್‌ನ ಕ್ಯಾಲಿಫೋರ್ನಿಯಾ ಇನ್ನೋವೇಶನ್ ಲ್ಯಾಬ್‌ನಲ್ಲಿ ಅಭಿವೃದ್ಧಿಪಡಿಸಿದ್ದು, ಇದನ್ನು ಎಕ್ಸ್ (X) ಎಂದು ಕರೆಯಲಾಗುತ್ತದೆ. ಈ ಯೋಜನೆಯನ್ನು ‘ತಾರಾ’ (Taara) ಎಂದು ಕರೆಯಲಾಗುತ್ತದೆ. ವೇಗದ ಇಂಟರ್ನೆಟ್ ಸೇವೆಯನ್ನು ಒದಗಿಸುವ ಸಲುವಾಗಿ ಈ ತಂತ್ರಜ್ಞಾನವು ಬೆಳಕಿನ ಕಿರಣಗಳನ್ನು ಬಳಸುತ್ತದೆ. ಫೈಬರ್ ರೀತಿಯಲ್ಲಿ ಕೇಬಲ್‌ಗಳಿಲ್ಲದೇ ಪ್ರಾಜೆಕ್ಟ್ ತಾರಾ ಅತ್ಯಂತ ಕಿರಿದಾದ ಮತ್ತು ಅಗೋಚರ ಕಿರಣದ ರೂಪದಲ್ಲಿ ಗಾಳಿಯ ಮೂಲಕ ಅತಿ ಹೆಚ್ಚು ವೇಗದಲ್ಲಿ ಮಾಹಿತಿಯನ್ನು ರವಾನಿಸಲು ಲೇಸರ್ ಅನ್ನು ಬಳಸುತ್ತದೆ ಎಂದು ಆಲ್ಫಾಬೆಟ್‌ನ ವೆಬ್‌ಸೈಟ್ ತಿಳಿಸಿದೆ. ಈ ತಂತ್ರಜ್ಞಾನವು 20 ಜಿಬಿಪಿಎಸ್ (GBPS) ವೇಗದಲ್ಲಿ ಡೇಟಾವನ್ನು ರವಾನಿಸುತ್ತದೆ ಎಂದು ಖಚಿತಪಡಿಸಿದೆ. ಇದನ್ನೂ ಓದಿ: ಕುಳಿತಲ್ಲೇ ನೋಡಿ ನಿಮ್ಮ ನಗರ – ಗೂಗಲ್  ಸ್ಟ್ರೀಟ್ ವ್ಯೂ ಈಗ ಇಡೀ ಭಾರತದಲ್ಲಿ ಲಭ್ಯ

    ಏನಿದು ತಾರಾ ಪ್ರಾಜೆಕ್ಟ್?
    ತಾರಾ ಎಂಬುದು ಆಲ್ಫಾಬೆಟ್‌ನ ಇನ್ನೋವೇಶನ್ ಲ್ಯಾಬ್‌ನ ಒಂದು ಭಾಗವಾಗಿದೆ. ಇದನ್ನು ‘ಮೂನ್ ಶಾಟ್ ಫ್ಯಾಕ್ಟರಿ’ ಎಂದು ಇನ್ನೊಂದು ಹೆಸರಿನಲ್ಲಿ ಕರೆಯಲಾಗುತ್ತದೆ. ಎಕ್ಸ್ ಎಂಬುದು ಆಲ್ಫಾಬೆಟ್‌ನ ಸಂಶೋಧನಾ ವಿಭಾಗವಾಗಿದೆ. 2011ರಲ್ಲಿ ಆಲ್ಫಾಬೆಟ್ ಅಂಗಸಂಸ್ಥೆ ಗೂಗಲ್ ಎಕ್ಸ್ ಕ್ಯಾಲಿಫೋರ್ನಿಯಾದಲ್ಲಿ ತನ್ನ ಕೆಲಸ ಆರಂಭಿಸಿತು. 2013ರಲ್ಲಿ ಗೂಗಲ್ ಈ ಯೋಜನೆಯನ್ನು ಆರಂಭಿಸಿದ್ದು, ಈ ಪ್ರಾಜೆಕ್ಟ್ ಅನ್ನು ಲೂನ್ ಎಂದು ಕರೆಯಲಾಯಿತು. ಎತ್ತರದ ಬಲೂನ್‌ಗಳಲ್ಲಿ ಲೇಸರ್ ಆಧಾರಿತ ತಂತ್ರಜ್ಞಾನವನ್ನು ಬಳಸಿಕೊಂಡು ಕಡಿಮೆ ಮತ್ತು ಪ್ರತ್ಯೇಕವಾದ ಸಮುದಾಯಗಳಿಗೆ 3G ಇಂಟರ್ನೆಟ್ ಸೇವೆಯನ್ನು ಒದಗಿಸುವುದು ಇದರ ಉದ್ಧೇಶವಾಗಿತ್ತು. ಆದರೆ ವೆಚ್ಚ ಹೆಚ್ಚಾಗಿದ್ದರಿಂದ ಮತ್ತು ಸಂಕೀರ್ಣತೆಗಳ ಕಾರಣಗಳಿಂದ ಈ ಯೋಜನೆಯನ್ನು 2021ರಲ್ಲಿ ರದ್ದುಗೊಳಿಸಲಾಯಿತು. ಆದರೆ ಯೋಜನೆಗಾಗಿ ಅಭಿವೃದ್ಧಿಪಡಿಸಿದ ತಂತ್ರಜ್ಞಾನವು ತಾರಾ ಪ್ರಾಜೆಕ್ಟ್ ಉದಯವಾಗಲು ಕಾರಣವಾಯಿತು. ಇದನ್ನೂ ಓದಿ: ಜೈಲಿನಿಂದ ಬಿಡುಗಡೆಯಾಗಿ ಮತ್ತೆ ಕಳ್ಳತನ ಎಸಗಿದ್ರೂ ಕಳ್ಳರು ಸಿಕ್ಕಿಬಿಳ್ತಾರೆ

    ಇದರ ಕೆಲಸ ಹೇಗೆ?
    ತಾರಾ ತಂಡವು ಟ್ರಾಫಿಕ್ ಲೈಟ್‌ನಂತಹ ಯಂತ್ರವನ್ನು ರೂಪುಗೊಳಿಸಿದ್ದು, ಡೇಟಾ ಸಾಗಿಸುವ ಲೇಸರ್ ಕಿರಣಗಳನ್ನು ಹೊರಸೂಸುತ್ತದೆ. ಇದು ಕೇಬಲ್‌ಗಳಿಲ್ಲದ ಇಂಟರ್ನೆಟ್ ಫೈಬರ್ ಆಪ್ಟಿಕ್ಸ್ ಆಗಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಸಂವಹನ ಮೂಲಸೌಕರ್ಯವನ್ನು ನಿರ್ಮಿಸುತ್ತದೆ. ಈ ದೀಪಗಳು ದೂರದ ಸ್ಥಳಗಳಲ್ಲಿ ಅತ್ಯಂತ ವೇಗವಾಗಿ ಡೇಟಾವನ್ನು ಸಾಗಿಸುವ ಲೇಸರ್ ಅನ್ನು ಹೊಂದಿರುತ್ತವೆ. ಇಂಟರ್ನೆಟ್ ಸೌಕರ್ಯಗಳಿಲ್ಲದ ಪ್ರದೇಶಗಳಲ್ಲಿ ಇಂಟರ್ನೆಟ್ ಸೇವೆಯನ್ನು ಒದಗಿಸಲು ಮೊಬೈಲ್ ವೈಫೈ ರೂಟರ್‌ಗಳನ್ನು ಸಾಗಿಸಲು ಬಲೂನ್‌ಗಳನ್ನು ಬಳಸಲು ಯೋಜಿಸಿತ್ತು. ಆದರೆ ಈ ಯೋಜನೆ ವಿಫಲವಾಯಿತು. ಬಳಿಕ ತಾರಾ ಯೋಜನೆ ಜಾರಿಗೆ ಬಂದಿದ್ದು, ಇದು ಬಾಹ್ಯಾಕಾಶದಲ್ಲಿ ಮತ್ತು ಭೂಮಿಯ ಮೇಲೆ ಇರಿಸಲಾಗಿರುವ ಲೇಸರ್ ಟರ್ಮಿನಲ್‌ಗಳ ಸಹಾಯದಿಂದ ಕೆಲಸ ನಿರ್ವಹಿಸುತ್ತದೆ. ಇದನ್ನೂ ಓದಿ: Twitter ನಲ್ಲಿ ಪೋಸ್ಟ್‌ ಓದುವ ಮಿತಿ ಹೆಚ್ಚಳ – ಮಹತ್ವದ ಬದಲಾವಣೆ ಘೋಷಿಸಿದ ಮಸ್ಕ್‌

    ಲೇಸರ್ ಟರ್ಮಿನಲ್‌ಗಳು ಆಪ್ಟಿಕಲ್‌ಗಳು ಟ್ರಾನ್ಸ್‌ಮೀಟರ್‌ಗಳು ಮತ್ತು ರಿಸೀವರ್‌ಗಳಾಗಿ ಕೆಲಸ ನಿರ್ವಹಿಸುತ್ತವೆ. ಅಲ್ಲದೇ ಇದು ಪರಸ್ಪರ ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳುತ್ತವೆ. ಇದರ ಒಂದು ತುದಿಯಲ್ಲಿ ಟರ್ಮಿನಲ್ ಇದ್ದು, ದೂರದ ನೆಟ್‌ವರ್ಕ್‌ಗೆ ಸಂಪರ್ಕವನ್ನು ಹೊಂದುತ್ತದೆ. ಇನ್ನೊಂದು ತುದಿಯಲ್ಲಿ ಆಪರೇಟರ್‌ನ ನೆಟ್‌ವರ್ಕ್ ಮೂಲಸೌಕರ್ಯಕ್ಕೆ ಅಪ್‌ಲಿಂಕ್ ಆಗಿ ಕಾರ್ಯನಿರ್ವಹಿಸುತ್ತದೆ. ಸೆಲ್ಯುಲಾರ್ ಕವರೇಜ್ ಇಲ್ಲದ ಅಥವಾ ತುಂಬಾ ದುರ್ಬಲ ನೆಟ್‌ವರ್ಕ್ ಹೊಂದಿರುವ ಪ್ರದೇಶಗಳಲ್ಲಿ ಇಂಟರ್ನೆಟ್ ಪ್ರವೇಶವನ್ನು ಒದಗಿಸಲು ಈ ತಂತ್ರಜ್ಞಾನವು ಸಹಕಾರಿಯಾಗಿದೆ. ಇಂಟರ್ನೆಟ್ ವೇಗವನ್ನು ಹೆಚ್ಚಿಸಲು ಈ ಲೇಸರ್ ಟರ್ಮಿನಲ್‌ಗಳು ಸಹಾಯ ಮಾಡುತ್ತವೆ. ಇದನ್ನೂ ಓದಿ: ಟ್ವಿಟ್ಟರ್‌ಗೆ ಸೆಡ್ಡು ಹೊಡೆಯಲು Meta ಮಾಸ್ಟರ್‌ ಪ್ಲ್ಯಾನ್‌

    ಪ್ರತಿಯೊಂದು ತಾರಾ ಟರ್ಮಿನಲ್‌ಗಳು 20 GBವರೆಗಿನ ಬ್ಯಾಂಡ್‌ವಿಡ್ತ್‌ನೊಂದಿಗೆ ಡೇಟಾವನ್ನು ರವಾನಿಸಲು ಮತ್ತು ಸ್ವೀಕರಿಸಲು ಸಮರ್ಥವಾಗಿದೆ. ಇದರ ಜೊತೆಗೆ ಈ ತಂತ್ರಜ್ಞಾನವು ರೇಡಿಯೋ ತರಂಗಗಳನ್ನು ಬಳಸುವಾಗ ಹೆಚ್ಚು ಸ್ಥಿರ ಮತ್ತು ವೇಗದ ಸಂಪರ್ಕವನ್ನು ಒದಗಿಸುತ್ತದೆ. ಇದರಲ್ಲಿರುವ ಸಮಸ್ಯೆಯೇನೆಂದರೆ ಲೇಸರ್ ಸಿಗ್ನಲ್ ಹವಾಮಾನ ಪರಿಸ್ಥಿತಿಗಳಿಗೆ ಬಹಳ ಸೂಕ್ಷ್ಮವಾಗಿರುತ್ತವೆ. ಮೋಡ, ಮಂಜು ಮತ್ತು ಹೊಗೆಯಂತಹ ಅಡೆತಡೆಗಳು ಉಂಟಾದರೆ ಇದು ದುರ್ಬಲಗೊಳ್ಳುವ ಸಾಧ್ಯತೆಗಳು ಹೆಚ್ಚಾಗಿವೆ ಎಂದು ವರದಿಗಳು ಹೇಳಿವೆ. ಇದನ್ನೂ ಓದಿ: ಜಸ್ಟ್‌ 999 ರೂ.ಗೆ ಜಿಯೋ ಭಾರತ್‌ 4ಜಿ ಫೋನ್‌ ಬಿಡುಗಡೆ – ಗುಣ ವೈಶಿಷ್ಟ್ಯಗಳೇನು?

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕುಳಿತಲ್ಲೇ ನೋಡಿ ನಿಮ್ಮ ನಗರ – ಗೂಗಲ್  ಸ್ಟ್ರೀಟ್ ವ್ಯೂ ಈಗ ಇಡೀ ಭಾರತದಲ್ಲಿ ಲಭ್ಯ

    ಕುಳಿತಲ್ಲೇ ನೋಡಿ ನಿಮ್ಮ ನಗರ – ಗೂಗಲ್  ಸ್ಟ್ರೀಟ್ ವ್ಯೂ ಈಗ ಇಡೀ ಭಾರತದಲ್ಲಿ ಲಭ್ಯ

    ನವದೆಹಲಿ: ಗೂಗಲ್ ಮ್ಯಾಪ್‌ನ (Google Maps) ಅತ್ಯಂತ ಉಪಯುಕ್ತವಾಗಿರೋ ಸ್ಟ್ರೀಟ್ ವ್ಯೂ (Street View) ಫೀಚರ್ ಇದೀಗ ಇಡೀ ಭಾರತದಲ್ಲಿ (India) ಲಭ್ಯವಾಗಿದೆ. ಈ ಫೀಚರ್ ಬಳಸಿ ಬಳಕೆದಾರರು ಕುಳಿತಲ್ಲೇ ತಮ್ಮ ನಗರ, ಹಳ್ಳಿ, ಶಾಲೆ, ಪಟ್ಟಣದ ಚಿತ್ರವನ್ನು 360 ಡಿಗ್ರಿ ಆಂಗಲ್‌ನಲ್ಲಿ ವೀಕ್ಷಿಸಬಹುದು.

    2016ರಲ್ಲಿ ಭಾರತದಲ್ಲಿ ಪ್ರಾರಂಭವಾಗಬೇಕಿದ್ದ ಈ ಫೀಚರ್ ಭದ್ರತಾ ಕಾರಣಗಳಿಂದಾಗಿ ತಡವಾಗಿ ಕಳೆದ ವರ್ಷ ದೇಶಕ್ಕೆ ಲಗ್ಗೆಯಿಟ್ಟಿತು. ಆದರೆ ಆರಂಭದಲ್ಲಿ ಬೆಂಗಳೂರು ಸೇರಿದಂತೆ ಭಾರತದ 10 ನಗರಗಳಲ್ಲಿ ಮಾತ್ರವೇ ಈ ಫೀಚರ್ ಲಭ್ಯವಾಗಿತ್ತು. ಇದೀಗ ಗೂಗಲ್ ಸ್ಟ್ರೀಟ್ ವ್ಯೂ ದೇಶದ ಬಹುತೇಕ ಮೂಲೆಗಳನ್ನು ಆವರಿಸಿಕೊಂಡಿದ್ದು, ಬಳಕೆದಾರರು ಪ್ರವಾಸವನ್ನು ಕೈಗೊಳ್ಳದೇ ತಾವು ಇಷ್ಟಪಡುವ ಪ್ರದೇಶವನ್ನು ಕುಳಿತಲ್ಲಿಯೇ 360 ಡಿಗ್ರಿ ಕೋನದಲ್ಲಿ ವೀಕ್ಷಿಸಲು ಅನುವು ಮಾಡಿಕೊಡುತ್ತಿದೆ.

    ಏನಿದರ ಉಪಯೋಗ?
    ನೀವು ಯಾವುದೇ ಒಂದು ಪ್ರದೇಶಕ್ಕೆ ಹೋಗಬಯಸಿದರೆ ಆ ಸ್ಥಳದ ಸ್ಥಿತಿಯ ಬಗ್ಗೆ ಮೊದಲೇ ತಿಳಿದುಕೊಳ್ಳಲು ಗೂಗಲ್ ಸ್ಟ್ರೀಟ್ ವ್ಯೂ (Google Street View) ಸಹಾಯ ಮಾಡುತ್ತದೆ. ಇದಕ್ಕಾಗಿ ನೀವು ಆ ಪ್ರದೇಶಕ್ಕೆ ತೆರಳಿ ಪರಿಶೀಲಿಸಬೇಕಾಗಿಲ್ಲ. ಬದಲಿಗೆ ಕುಳಿತಲ್ಲಿಯೇ ನೀವು ನೋಡ ಬಯಸುವ ಪ್ರದೇಶದ ಚಿತ್ರವನ್ನು ಅದು ತೋರಿಸುತ್ತದೆ. ಈ ರೀತಿ ನೀವು ಮೊದಲೇ ಸ್ಥಳ ಪರಿಶೀಲನೆ ಮಾಡಿ ಬಳಿಕ ಆ ಪ್ರದೇಶಕ್ಕೆ ಸುರಕ್ಷಿತವಾಗಿ ಪ್ರಯಾಣ ಬೆಳೆಸಬಹುದು. ಇದನ್ನೂ ಓದಿ: ಹುಟ್ಟಿನಿಂದ ಸ್ತ್ರೀ, ಬಳಿಕ ಪುರುಷ- ದಾಖಲೆಯಲ್ಲಿ ಲಿಂಗ ಬದಲಾವಣೆ ಅರ್ಜಿಗೆ ಕೋರ್ಟ್ ಹೇಳಿದ್ದೇನು?

    ಬಳಸೋದು ಹೇಗೆ?
    * ಗೂಗಲ್ ಸ್ಟ್ರೀಟ್ ವ್ಯೂ ಅನ್ನು ಬಳಸಲು ನೀವು ಮೊದಲು ನಿಮ್ಮ ಆಂಡ್ರಾಯ್ಡ್ ಅಥವಾ ಐಒಎಸ್ ಸಾಧನಗಳಲ್ಲಿ ಗೂಗಲ್ ಮ್ಯಾಪ್ ಅನ್ನು ತೆರೆಯಬೇಕು.
    * ಸರ್ಚ್ ಪಟ್ಟಿಯ ಅಡಿಯಲ್ಲಿ ಬಲ ಭಾಗದಲ್ಲಿ ಕಾಣಿಸುವ ಲೇಯರ್ ಬಾಕ್ಸ್ ಅನ್ನು ಆಯ್ಕೆ ಮಾಡಬೇಕು. ಅದರಲ್ಲಿ ಗೋಚರಿಸುವ ಸ್ಟ್ರೀಟ್ ವ್ಯೂ ಆಯ್ಕೆಯನ್ನು ಕ್ಲಿಕ್ ಮಾಡಬೇಕು.
    * ಈಗ ನಿಮ್ಮ ಗೂಗಲ್ ಮ್ಯಾಪ್‌ನಲ್ಲಿ ನೀಲಿ ಬಣ್ಣದ ಗೆರೆಗಳನ್ನು ಗಮನಿಸಬಹುದು. ಈ ಗೆರೆಗಳು ಇರುವ ಪ್ರದೇಶಗಳನ್ನು ನೀವು ಕುಳಿತಲ್ಲಿಯೇ ಮೊಬೈಲಿನಲ್ಲಿ ವೀಕ್ಷಿಸಬಹುದು.
    * ಈಗ ನೀವು ಅನ್ವೇಷಿಸಲು ಬಯಸುವ ಪ್ರದೇಶವನ್ನು ಸರ್ಚ್ ಮಾಡಿ, ಮ್ಯಾಪ್‌ನಲ್ಲಿ ಕಾಣಿಸುವ ಚಿಕ್ಕ ಚಿಕ್ಕ ವೃತ್ತಗಳನ್ನು ಕ್ಲಿಕ್ ಮಾಡಿದರೆ ಆ ಪ್ರದೇಶವನ್ನು ನೀವು 360 ಡಿಗ್ರಿ ಕೋನದಲ್ಲಿ ವೀಕ್ಷಿಸಬಹುದು.
    * ನೀವು ಆ ಪ್ರದೇಶವನ್ನು ಇನ್ನಷ್ಟು ನಿಖರವಾಗಿ ಹಾಗೂ ಮುಂದಕ್ಕೆ, ಹಿಂದಕ್ಕೆ ಚಲಿಸಿ ವೀಕ್ಷಿಸಲು ಬಯಸಿದರೆ ಸ್ಕ್ರೀನ್‌ನಲ್ಲಿ ಕಾಣಿಸುವ ಬಾಣದ ಗುರುತುಗಳನ್ನು ಬಳಸಬಹುದು.
    * ನೀವು ಆ ಚಿತ್ರವನ್ನು ಝೂಮ್ ಮಾಡಿಯೂ ನೋಡಬಹುದು. ಪರದೆಯ ಕೆಳ ಭಾಗದಲ್ಲಿ ಆ ಚಿತ್ರವನ್ನು ಯಾವಾಗ ಸೆರೆಹಿಡಿಯಲಾಗಿದೆ ಎಂಬುದನ್ನು ನೀವು ನೋಡಬಹುದು.
    * ನೀವು ಬ್ರೌಸರ್‌ನಲ್ಲಿ ಸ್ಟ್ರೀಟ್ ವ್ಯೂ ಬಳಸಲು ಬಯಸಿದರೆ, ಮೊದಲು ಗೂಗಲ್ ಕ್ರೋಮ್ ಅನ್ನು ತೆರೆಯಿರಿ. ಬಲ ಭಾಗದಲ್ಲಿ ಕಾಣಿಸುವ ಆ್ಯಪ್ಸ್ ಆಯ್ಕೆಯಲ್ಲಿ ಗೂಗಲ್ ಮ್ಯಾಪ್ ವೆಬ್‌ಸೈಟ್ ಅನ್ನು ಓಪನ್ ಮಾಡಿಕೊಳ್ಳಿ.
    * ಈಗ ಕಾಣಿಸುವ ಮ್ಯಾಪ್‌ನ ಬಲ ಭಾಗದಲ್ಲಿ ಲೇಯರ್‌ನ ಆಯ್ಕೆಯನ್ನು ಕ್ಲಿಕ್ ಮಾಡಿದರೆ ಸ್ಟ್ರೀಟ್ ವ್ಯೂ ಆಯ್ಕೆ ಕಾಣಿಸುತ್ತದೆ.
    * ನೀವು ಅನ್ವೇಷಿಸಲು ಬಯಸುವ ಪ್ರದೇಶವನ್ನು ಸರ್ಚ್ ಮಾಡಿ, ಅಪ್ಲಿಕೇಶನ್ ಬಳಸಿದಂತೆಯೇ ಅನುಸರಿಸಿ.

    ಸ್ಟ್ರೀಟ್ ವ್ಯೂ ಫೀಚರ್ ಭಾರತದಲ್ಲಿ ಹೆಚ್ಚಿನ ಪ್ರದೇಶಗಳನ್ನು ಕವರ್ ಮಾಡಲು ಜೆನೆಸಿಸ್ ಇಂಟರ್‌ನ್ಯಾಷನಲ್ ಹಾಗೂ ಟೆಕ್ ಮಹೀಂದ್ರದೊಂದಿಗೆ ಗೂಗಲ್ ಕೈ ಜೋಡಿಸಿದೆ. ಆದರೂ ಕೆಲ ಭದ್ರತಾ ಸಮಸ್ಯೆಗಳನ್ನು ಗೂಗಲ್ ಸ್ಟ್ರೀಟ್ ವ್ಯೂ ಎದುರಿಸುತ್ತಿದ್ದು, ಸದ್ಯ ಗೌಪ್ಯತೆಯನ್ನು ಕಾಪಾಡಲು ಫೋಟೋಗಳಲ್ಲಿ ಕಾಣಿಸುವ ಜನರ ಮುಖಗಳನ್ನು ಬ್ಲರ್ ಮಾಡಲಾಗುತ್ತಿದೆ. ಇದನ್ನೂ ಓದಿ: ಅಪಾಚಿ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ – ಪೈಲಟ್‌ ಸಮಯಪ್ರಜ್ಞೆಯಿಂದ ತಪ್ಪಿದ ದುರಂತ

  • ಧರ್ಮಗುರು ಹೆಂಡತಿಯನ್ನು ಹೇಗೆ ಕೊಂದ? – ಗೂಗಲ್ ಸರ್ಚ್‍ನಿಂದ ಸಿಕ್ಕಿಬಿದ್ದ ಅಪರಾಧಿಗೆ ಜೀವಾವಧಿ ಶಿಕ್ಷೆ

    ಧರ್ಮಗುರು ಹೆಂಡತಿಯನ್ನು ಹೇಗೆ ಕೊಂದ? – ಗೂಗಲ್ ಸರ್ಚ್‍ನಿಂದ ಸಿಕ್ಕಿಬಿದ್ದ ಅಪರಾಧಿಗೆ ಜೀವಾವಧಿ ಶಿಕ್ಷೆ

    ತಿರುವನಂತನಪುರಂ: ಆ ಧರ್ಮ ಗುರು (Spiritual Guru) ತನ್ನ ಹೆಂಡತಿಯನ್ನು ಹೇಗೆ ಕೊಂದ? ಎಂದು ಗೂಗಲ್‍ನಲ್ಲಿ (Google) ಸರ್ಚ್ ಮಾಡಿ ಸಂಚು ರೂಪಿಸಿ ಪ್ರೇಯಸಿಯನ್ನು ಕೊಲೆಗೈದ‌ (Murder) ದುಷ್ಕರ್ಮಿಗೆ ಜೀವಾವಧಿ ಶಿಕ್ಷೆ ಹಾಗೂ 2.5 ಲಕ್ಷ ರೂ. ದಂಡ ವಿಧಿಸಿ ಕೊಲ್ಲಂನ (Kollam) ಹೆಚ್ಚುವರಿ ಸೆಷನ್ಸ್ ಕೋರ್ಟ್ (Sessions Court) ತೀರ್ಪು ನೀಡಿದೆ.

    ಅಪರಾಧಿ ಪ್ರಶಾಂತ್ ನಂಬಿಯಾರ್, 2020ರ ಮಾ. 20ರಂದು ಇಂಟರ್‌ನೆಟ್ ಕೊಲೆಯ ಪ್ರಕರಣವೊಂದನ್ನು ಸರ್ಚ್ ಮಾಡಿ, ಅದರಂತೆ ಪ್ರೇಯಸಿ ಸುಚಿತ್ರಾ ಪಿಳ್ಳೈಯನ್ನು (42) ಹತ್ಯೆ ಮಾಡಿದ್ದ. ಅಲ್ಲದೆ ಕೊಲೆಗೈದ ನಂತರ ಚಲನಚಿತ್ರವೊಂದನ್ನು ನೋಡಿ, ಅದರಲ್ಲಿ ದೇಹವನ್ನು ಕತ್ತರಿಸಿದ್ದ ರೀತಿಯಲ್ಲೇ ತುಂಡು ತುಂಡಾಗಿ ಕತ್ತರಿಸಿದ್ದ. ಬಳಿಕ ಮನೆಯ ಹಿಂದಿನ ಹೊಂಡದಲ್ಲಿ ಎಸೆದಿದ್ದ. ಪ್ರಕರಣದ ಬೆನ್ನು ಹತ್ತಿದ್ದ ಪೊಲೀಸರು ಆತನ ಗೂಗಲ್ ಸರ್ಚ್ ಹಿಸ್ಟರಿಯಿಂದ ಕೊಲೆ ರಹಸ್ಯ ಬಯಲಿಗೆಳೆದಿದ್ದರು. ಇದನ್ನೂ ಓದಿ:ಹಿಂಡನ್‍ಬರ್ಗ್ ಪ್ರಕರಣ – ಮೂರು ತಿಂಗಳಲ್ಲಿ ತನಿಖೆಯ ಪ್ರಗತಿ ತೋರಿಸಲು ಸೆಬಿಗೆ ಸುಪ್ರೀಂ ಸೂಚನೆ

    ಖಾಸಗಿ ಶಾಲೆಯಲ್ಲಿ ಸಂಗೀತ ಶಿಕ್ಷಕನಾಗಿ ಕಾರ್ಯ ನಿರ್ವಹಿಸುತ್ತಿದ್ದ ಅಪರಾಧಿ, ತನ್ನ ಹೆಂಡತಿಯ ಸಂಬಂಧಿ ಸುಚಿತ್ರಾಳನ್ನು ಕುಟುಂಬದ ಕಾರ್ಯಕ್ರಮದಲ್ಲಿ ಪರಿಚಯ ಮಾಡಿಕೊಂಡಿದ್ದ. ಬಳಿಕ ಸಾಮಾಜಿಕ ಜಾಲತಾಣದ ಮೂಲಕ ಇಬ್ಬರ ಸ್ನೇಹ ಪ್ರೇಮಕ್ಕೆ ತಿರುಗಿತ್ತು.

    ಎರಡು ಬಾರಿ ವಿಚ್ಛೇದನ ಪಡೆದಿದ್ದ ಸುಚಿತ್ರಾ, ಅಪರಾಧಿಯನ್ನು ಮದುವೆಯಾಗಲು ತಯಾರಿ ನಡೆಸಿದ್ದಳು. ಆತನಿಂದ ಮಗುವನ್ನು ಹೊಂದಿದ್ದಳು. ಆದರೆ ಈಗಾಗಲೇ ಮದುವೆಯಾಗಿ ಪತ್ನಿಯೊಂದಿಗೆ ವಾಸವಾಗಿದ್ದ ಪ್ರಶಾಂತ್ ಮದುವೆಗೆ ನಿರಾಕರಿಸಿದ್ದ. ಆದರೆ ಮದುವೆಯಾಗುವಂತೆ ಪಟ್ಟು ಹಿಡಿದಿದ್ದ ಆಕೆಯನ್ನು ಹತ್ಯೆ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷೆಗೆ ಕಿರುಕುಳ – ಬಿವಿ ಶ್ರೀನಿವಾಸ್‍ಗೆ ಸುಪ್ರೀಂ ಜಾಮೀನು

  • ಯುರೋಪ್‌ನಲ್ಲಿ ಗೂಗಲ್ ಉದ್ಯೋಗಿಗಳ ಸಾಮೂಹಿಕ ವಜಾ- ಕಚೇರಿಯಲ್ಲಿ ಪ್ರತಿಭಟನೆ

    ಯುರೋಪ್‌ನಲ್ಲಿ ಗೂಗಲ್ ಉದ್ಯೋಗಿಗಳ ಸಾಮೂಹಿಕ ವಜಾ- ಕಚೇರಿಯಲ್ಲಿ ಪ್ರತಿಭಟನೆ

    ಬರ್ನ್: ಗೂಗಲ್ (Google) ಕಂಪನಿ ಉದ್ಯೋಗಿಗಳ (Employees) ಸಾಮೂಹಿಕ ವಜಾ (Layoff) ಮುಂದುವರಿಸಿದ್ದು, ಇದೀಗ 200 ಉದ್ಯೋಗಿಗಳನ್ನು ವಜಾಗೊಳಿಸಿರುವ ಹಿನ್ನೆಲೆ ಸ್ವಿಟ್ಜರ್‌ಲೆಂಡ್‌ನ (Switzerland) ಜ್ಯೂರಿಯಲ್ಲಿರುವ ಕಂಪನಿಯ ಕಚೇರಿಯಲ್ಲಿ ಉದ್ಯೋಗಿಗಳು ಕೆಲಸವನ್ನು ನಿಲ್ಲಿಸಿ, ಪ್ರತಿಭಟನೆ ನಡೆಸಿದ್ದಾರೆ.

    ಗೂಗಲ್‌ನ ಮೂಲ ಕಂಪನಿ ಆಲ್ಫಾಬೆಟ್ ಜನವರಿಯಲ್ಲಿ ಪ್ರಪಂಚದಾದ್ಯಂತ ಸುಮಾರು 12,000 ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಘೋಷಿಸಿತ್ತು. ಇದು ಜಾಗತಿಕವಾಗಿ ಶೇ.9 ರಷ್ಟು ಕಂಪನಿಯ ಉದ್ಯೋಗಿಗಳಿಗೆ ಸಮವಾದ ಸಂಖ್ಯೆಯಾಗಿದೆ. ಇದೀಗ ಗೂಗಲ್ ಉದ್ಯೋಗಿಗಳನ್ನು ಕಡಿತಗೊಳಿಸುವುದಾಗಿ ಘೋಷಿಸಿದೆ.

    ಸುಮಾರು 5,000 ಉದ್ಯೋಗಿಗಳಿರುವ ಗೂಗಲ್‌ನ ಜ್ಯೂರಿ ಕಚೇರಿಯಲ್ಲಿ ಕಳೆದ ತಿಂಗಳು ಉದ್ಯೋಗಿಗಳನ್ನು ಕಡಿತಗೊಳಿಸುವುದರ ವಿರುದ್ಧ ಪ್ರತಿಭಟನೆ ನಡೆಸಲಾಗಿತ್ತು. ವಜಾಗೊಳ್ಳುತ್ತಿರುವ ಉದ್ಯೋಗಿಗಳಿಗೆ ಬೆಂಬಲಿಸಿ ಇತರ ಉದ್ಯೋಗಿಗಳು ಕೆಲಸವನ್ನು ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದ್ದಾರೆ. ಇದನ್ನೂ ಓದಿ: ಉದ್ಯೋಗಿಗಳಿಗೆ ಈಗ ಬೋನಸ್ ಇಲ್ಲ, ಹೊಸ ನೇಮಕಾತಿ ಸ್ಥಗಿತಗೊಳಿಸಿದ ಆಪಲ್

    ಉದ್ಯೋಗಿಗಳನ್ನು ವಜಾಗೊಳಿಸುತ್ತಿರುವಲ್ಲಿ ಪಾರದರ್ಶಕತೆಯನ್ನು ತೋರ್ಪಡಿಸಲಾಗುತ್ತಿಲ್ಲ. ಕಂಪನಿ ಪ್ರತಿ ವರ್ಷ ಭಾರೀ ಲಾಭ ಗಳಿಸುತ್ತಿರುವ ಸಮಯದಲ್ಲಿಯೂ ಉದ್ಯೋಗಿಗಳನ್ನು ವಜಾಗೊಳಿಸುತ್ತಿರುವುದು ಅವರಲ್ಲಿ ನಿರಾಸೆ ಮೂಡಿಸಲು ಕಾರಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಉದ್ಯೋಗಿಗಳನ್ನು ಕಡಿತಗೊಳಿಸುತ್ತಿರುವುದರ ಬಗ್ಗೆ ಗೂಗಲ್ ವಕ್ತಾರರು, ಕಂಪನಿಯು ಅಗತ್ಯಕ್ಕಿಂತಲೂ ಹೆಚ್ಚಿನ ಉದ್ಯೋಗಿಗಳನ್ನು ಹೊಂದಿರುವ ಹಿನ್ನೆಲೆ ಕಡಿತಗೊಳಿಸಲು ಮುಂದಾಗಿರುವುದಾಗಿ ತಿಳಿಸಿದೆ. ಇದನ್ನೂ ಓದಿ: ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯ – ಒಂದೇ ಬೆಡ್ ಮೇಲೆ ಇಬ್ಬರು ರೋಗಿಗಳ ನರಳಾಟ

  • ಭಾರತ ಮೂಲದ ನೀಲ್ ಮೋಹನ್ YouTubeನ ಹೊಸ CEO

    ಭಾರತ ಮೂಲದ ನೀಲ್ ಮೋಹನ್ YouTubeನ ಹೊಸ CEO

    ವಾಷಿಂಗ್ಟನ್: ವಿಶ್ವದಲ್ಲೇ ಅತಿ ದೊಡ್ಡ ಆನ್‌ಲೈನ್ ವೀಡಿಯೋ ಪ್ಲಾಟ್‌ಫಾರ್ಮ್ ಎನಿಸಿಕೊಂಡಿರುವ ಯೂಟ್ಯೂಬ್‌ಗೆ (YouTube) ಹೊಸ ಸಿಇಒ (CEO) ಆಗಿ ಭಾರತ ಮೂಲದ ನೀಲ್ ಮೋಹನ್ (Neal Mohan) ನೇಮಕಗೊಂಡಿದ್ದಾರೆ.

    ಕಳೆದ 9 ವರ್ಷಗಳಿಂದ ಯೂಟ್ಯೂಬ್ ಸಿಇಒ ಆಗಿ ಕಾರ್ಯನಿರ್ವಹಿಸಿದ್ದ ಸುಸಾನ್ ವೊಜ್ಸಿಕಿ (Susan Wojcicki) ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದು, ಅವರ ಸ್ಥಾನವನ್ನು ಈಗ ನೀಲ್ ಮೋಹನ್ ವಹಿಸಿಕೊಳ್ಳಲಿದ್ದಾರೆ. 54 ವರ್ಷದ ಸುಸಾನ್ ತಮ್ಮ ಕುಟುಂಬ ಹಾಗೂ ವೈಯಕ್ತಿಕ ಜೀವನಕ್ಕೆ ಇದೀಗ ಹೆಚ್ಚಿನ ಆದ್ಯತೆ ನೀಡುವ ಸಲುವಾಗಿ ತಮ್ಮ ಸ್ಥಾನದಿಂದ ಕೆಳಗಿಳಿಯಲು ಮುಂದಾಗಿರುವುದಾಗಿ ತಿಳಿಸಿದ್ದಾರೆ.

    ನೀಲ್ ಮೋಹನ್ ಯಾರು?: ಭಾರತ ಮೂಲದ ನೀಲ್ ಮೋಹನ್ ಅವರು ಈ ಹಿಂದೆ ಯೂಟ್ಯೂಬ್‌ನ ಮುಖ್ಯ ಉತ್ಪನ್ನಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. 2008ರಲ್ಲಿ ಯೂಟ್ಯೂಬ್‌ನ ಮಾತೃ ಕಂಪನಿಯಾಗಿರುವ ಗೂಗಲ್‌ಗೆ (Google) ಸೇರಿದ ಅವರು 15 ವರ್ಷಗಳ ಕಾಲ ವೊಜ್ಸಿಕಿ ಅವರ ಯೋಜನೆಗಳಿಗೆ ಸಹಕರಿಸಿದ್ದಾರೆ. ಡಿಸ್‌ಪ್ಲೇ ಹಾಗೂ ವೀಡಿಯೋ ಜಾಹೀರಾತುಗಳ ಹಿರಿಯ ಉಪಾಧ್ಯಕ್ಷರಾಗಿದ್ದ ಅವರು 2015ರಲ್ಲಿ ಯೂಟ್ಯೂಬ್‌ನ ಮುಖ್ಯ ಉತ್ಪನ್ನಾಧಿಕಾರಿಯಾಗಿ ನೇಮಕಗೊಂಡರು. ಇದನ್ನೂ ಓದಿ: Aero India 2023: ಇಂದು ಕೊನೆಯ ದಿನದ ಏರ್‌ಶೋ ಕಣ್ತುಂಬಿಕೊಳ್ಳಿ

    ನೀಲ್ ಮೋಹನ್ 1996 ರಲ್ಲಿ ಅಮೆರಿಕದ ಸ್ಟ್ಯಾಂಡ್‌ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಎಲೆಕ್ಟಿçಕಲ್ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ನಂತರ 2005 ರಲ್ಲಿ ಸ್ಟ್ಯಾನ್‌ಫೋರ್ಡ್ ಯೂನಿವರ್ಸಿಟಿ ಗ್ರಾಜುಯೇಟ್ ಸ್ಕೂಲ್ ಆಫ್ ಬ್ಯುಸಿನೆಸ್‌ನಲ್ಲಿ ತಮ್ಮ ಎಂಬಿಎ ಮುಗಿಸಿದರು. ಯೂಟ್ಯೂಬ್ ಮಾತ್ರವಲ್ಲದೇ ಅವರು ಬಟ್ಟೆ ಮತ್ತು ಫ್ಯಾಶನ್ ಕಂಪನಿ ಸ್ಟಿಚ್ ಫಿಕ್ಸ್‌ಗೆ ಮಂಡಳಿಯ ನಿರ್ದೇಶಕರಾಗಿ ಸೇವೆಯನ್ನೂ ಸಲ್ಲಿಸಿದ್ದಾರೆ. 23 ಆಂಡ್‌ಮಿ ಜೈವಿಕ ತಂತ್ರಜ್ಞಾನ ಸಂಶೋಧನಾ ಕಂಪನಿಯ ನಿರ್ದೇಶಕರ ಮಂಡಳಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇದನ್ನೂ ಓದಿ: ಉಕ್ರೇನ್ ಯುದ್ಧದಲ್ಲಿ ಮಡಿದ ಮಗನ ಹೆಸರಲ್ಲಿ ಮನೆ ನಿರ್ಮಿಸಿದ ತಂದೆ-ತಾಯಿ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k