Tag: ಗೂಗಲ್

  • ಗೂಗಲ್ ಕಂಪೆನಿಗೆ ಬೆಂಗ್ಳೂರು ವಿದ್ಯಾರ್ಥಿ ಆಯ್ಕೆ: ವಾರ್ಷಿಕ ವೇತನ ಬರೋಬ್ಬರಿ 1.2 ಕೋಟಿ ರೂ.

    ಗೂಗಲ್ ಕಂಪೆನಿಗೆ ಬೆಂಗ್ಳೂರು ವಿದ್ಯಾರ್ಥಿ ಆಯ್ಕೆ: ವಾರ್ಷಿಕ ವೇತನ ಬರೋಬ್ಬರಿ 1.2 ಕೋಟಿ ರೂ.

    ಬೆಂಗಳೂರು: ಅಂತರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ ಬೆಂಗಳೂರಿನ (ಐಐಐಟಿ-ಬಿ) 22 ವರ್ಷದ ವಿದ್ಯಾರ್ಥಿಯೊಬ್ಬರು ಗೂಗಲ್ ಸಂಸ್ಥೆಗೆ ಆಯ್ಕೆಯಾಗಿದ್ದು, ಸದ್ಯ ಅವರ ವಾರ್ಷಿಕ ವೇತನ ಬರೋಬ್ಬರಿ 1.2 ಕೋಟಿ ರೂ. ನಿಗದಿಯಾಗಿದೆ.

    ನ್ಯೂಯಾರ್ಕ್ ನಲ್ಲಿರುವ ಗೂಗಲ್ ಸಂಸ್ಥೆಯ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ರಿಸರ್ಚ್ ವಿಂಗ್‍ಗೆ ಐಐಐಟಿ-ಬಿ ವಿದ್ಯಾರ್ಥಿ ಆದಿತ್ಯ ಪಾಲಿವಾಲ್ ಅವರು ಆಯ್ಕೆಯಾಗಿದ್ದಾರೆ. ಆದಿತ್ಯ ಅವರು ಮುಂಬೈ ಮೂಲದವರು. ಬೆಂಗಳೂರಿನ ಐಐಐಟಿಯಲ್ಲಿ ಐದು ವರ್ಷ ಇಂಟಿಗ್ರೆಟೆಡ್ ವ್ಯಾಸಂಗ ಮಾಡಿ ಎಂ.ಟೆಕ್ ಪದವಿ ಪಡೆದಿದ್ದರು.

    ಬೆಂಗಳೂರು ಬಗ್ಗೆ ಆದಿತ್ಯ ಹೇಳಿದ್ದೇನು?
    ಬೆಂಗಳೂರಿನಲ್ಲಿ ಕಳೆದ ಐದು ವರ್ಷ ಅನುಭವ ಅದ್ಭುತವಾಗಿತ್ತು. ಕಾಲೇಜಿನ ಶಿಕ್ಷಕರು ಸೃಜನಾತ್ಮಕ ವಿಚಾರಗಳನ್ನು ಬೆಳೆಸುತ್ತಿದ್ದರು, ಅಷ್ಟೇ ಅಲ್ಲದೆ ಅದಕ್ಕೆ ಸೂಕ್ತ ಪ್ರೋತ್ಸಾಹ ನೀಡುತ್ತಿದ್ದರು. ಹಿರಿಯ ವಿದ್ಯಾರ್ಥಿಗಳು ಗೂಗಲ್ ಸಂಸ್ಥೆಯ ಆಯ್ಕೆಗೆ ನಿರ್ಣಾಯಕ ಪಾತ್ರ ವಹಿಸಿದ್ದಾರೆ ಎಂದು ಹೆಮ್ಮೆಯಿಂದ ಆದಿತ್ಯ ಹೇಳಿದರು.

    ಗೂಗಲ್ ಸಂಸ್ಥೆಯು ಕೋಡಿಂಗ್ ಸ್ಪರ್ಧೆಯನ್ನು ಆಯೋಜಿಸಿತ್ತು. ಈ ಸ್ಪರ್ಧೆಯಲ್ಲಿ ಜಗತ್ತಿನ ಸುಮಾರು 6 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅವರಲ್ಲಿ ಕೇವಲ 50 ವಿದ್ಯಾರ್ಥಿಗಳು ಮಾತ್ರ ಆಯ್ಕೆಯಾಗಿದ್ದು, ಆದಿತ್ಯ ಕೂಡಾ ಒಬ್ಬರಾಗಿದ್ದಾರೆ.

    2017-18ರಲ್ಲಿ ಎಸಿಎಂನಿಂದ ನಡೆಯುವ ಕಾಲೇಜು ಮಟ್ಟದ ಅಂತರಾಷ್ಟ್ರೀಯ ಪ್ರೋಗ್ರಾಮಿಂಗ್ ಸ್ಪರ್ಧೆ (ಐಸಿಪಿಸಿ)ಯ ಅಂತಿಮ ಸ್ಪರ್ಧಿಗಳಲ್ಲಿ ಆದಿತ್ಯ ಕೂಡಾ ಒಬ್ಬರಾಗಿದ್ದರು. ಆದಿತ್ಯ ಅವರ ತಂಡದಲ್ಲಿ ಸಿಮ್ರಾನ್ ಡೊಜನಿಯಾ ಹಾಗೂ ಶ್ಯಾಮ್ ಕೆ.ಬಿ. ಕೂಡಾ ಇದ್ದರು. ಈ ಸ್ಪರ್ಧೆಯು ಕಂಪ್ಯೂಟರ್ ಭಾಷೆಯ ಕೋಡಿಂಗ್ ಉತ್ಸಾಹಿಗಳಿಗೆ ಆಯೋಜಿಸುವ ಪ್ರತಿಷ್ಠಿತ ಸ್ಪರ್ಧೆಗಳಲ್ಲಿ ಒಂದಾಗಿದೆ. ಇದೇ ವರ್ಷ ಏಪ್ರಿಲ್ ನಲ್ಲಿ ನಡೆದ ಸ್ಪರ್ಧೆಯಲ್ಲಿ 3,098 ವಿಶ್ವವಿದ್ಯಾನಿಲಯಗಳ 50 ಸಾವಿರ ವಿದ್ಯಾರ್ಥಿಗಳು ಭಾಗವಹಸಿದ್ದರು.

  • ಟೆಸ್ಟ್ ಟ್ಯೂಬ್ ಬೇಬಿ ಪರಿಕಲ್ಪನೆ ರಾಮಾಯಣ ಕಾಲದಲ್ಲೇ ಇತ್ತು: ಯುಪಿ ಡಿಸಿಎಂ

    ಟೆಸ್ಟ್ ಟ್ಯೂಬ್ ಬೇಬಿ ಪರಿಕಲ್ಪನೆ ರಾಮಾಯಣ ಕಾಲದಲ್ಲೇ ಇತ್ತು: ಯುಪಿ ಡಿಸಿಎಂ

    ಲಕ್ನೋ: ರಾಮಾಯಣ ಕಾಲದಲ್ಲೇ ಟೆಸ್ಟ್ ಟ್ಯೂಬ್ ಬೇಬಿ ಪರಿಕಲ್ಪನೆ ಇತ್ತು ಅದಕ್ಕೆ ಸಾಕ್ಷಿ ಸೀತಾಜಿ ಎಂದು ಉತ್ತರ ಪ್ರದೇಶ ಉಪ ಮುಖ್ಯಮಂತ್ರಿ ದಿನೇಶ್ ಶರ್ಮಾ ಹೇಳಿದ್ದಾರೆ.

    ನಿನ್ನೆಯೆಷ್ಟೇ ಪತ್ರಿಕೋದ್ಯಮ ಮಹಾಭಾರತದ ಕಾಲದಲ್ಲೇ ಇತ್ತು ಎಂದು ಹೇಳಿದ್ದ ಅವರು ಇವತ್ತು ಸೀತಾಜಿ ಮಡಿಕೆಯಲ್ಲಿ ಜನಿಸಿದ್ದಳು ಎಂದು ಹೇಳಿದ್ದಾರೆ. ಸೀತಾ ಮಾತೆ ಮಡಿಕೆಯಲ್ಲಿ ಜನಿಸಿದ ಕಾರಣ ರಾಮಾಯಣದಲ್ಲೇ ಟೆಸ್ಟ್ ಟ್ಯೂಬ್ ಬೇಬಿ ಪರಿಕಲ್ಪನೆ ಇತ್ತು ಎಂದು ನಾವು ಊಹಿಸಿಕೊಳ್ಳಬಹುದು ಎಂದು ಹೇಳುವ ಮೂಲಕ ಸಮರ್ಥಿಸಿಕೊಂಡಿದ್ದಾರೆ.

    ಮಥುರಾ ದಲ್ಲಿ ನಡೆಯುತ್ತಿರುವ ಹಿಂದಿ ಪತ್ರಿಕೋದ್ಯಮ ದಿನದಲ್ಲಿ ಭಾಗವಹಿಸಿ ಮಾತನಾಡಿದ ಅವರು ಮಹಾಭಾರತ ಯುದ್ಧದ ಚಿತ್ರಣವನ್ನು ಹಸ್ತಿನಾವತಿಯಲ್ಲಿದ್ದ ಧೃತರಾಷ್ಟ್ರನಿಗೆ ಸಂಜಯನು ವಿವರಿಸುತ್ತಿದ್ದನು. ಇದನ್ನು ಗಮನಿಸಿದಾಗ ಲೈವ್ ಟೆಲಿಕಾಸ್ಟ್ ಮಹಾಭಾರತದ ಸಮಯದಲ್ಲೇ ಇತ್ತು ಎಂದು ಹೇಳಿಕೆ ನೀಡಿದ್ದರು.

    ಇನ್ನು ನಾರದನನ್ನು ಇವತ್ತಿನ ಗೂಗಲ್ ಗೆ ಹೋಲಿಸಿ ಮಾತನಾಡಿದ ಅವರು ಮಾಹಿತಿಯನ್ನು ಯಾರಿಂದ ಯಾರಿಗೆ ಬೇಕಾದರೂ ಯಾವ ಜಾಗಕ್ಕೂ ಮೂರು ಬಾರಿ ನಾರಾಯಣ ಎಂದು ಹೇಳಿ ತಲುಪಿಸುತ್ತಿದ್ದರು ಎಂದು ತಿಳಿಸಿದ್ದರು.

  • ಪ್ರಧಾನಿ ಮೋದಿ ಫೋಟೋದಿಂದಾಗಿ ಗೂಗಲ್ ವಿರುದ್ಧ ರಮ್ಯಾ ಕಿಡಿ

    ಪ್ರಧಾನಿ ಮೋದಿ ಫೋಟೋದಿಂದಾಗಿ ಗೂಗಲ್ ವಿರುದ್ಧ ರಮ್ಯಾ ಕಿಡಿ

    ಬೆಂಗಳೂರು: ಕಾಂಗ್ರೆಸ್‍ನ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ, ಮಾಜಿ ಸಂಸದೆ ರಮ್ಯಾ ಈಗ ಗೂಗಲ್ ವಿರುದ್ಧ ಹರಿಹಾಯ್ದಿದ್ದಾರೆ.

    ರಮ್ಯಾ ಗೂಗಲ್ ಸರ್ಚ್ ಇಂಜಿನ್‍ನಲ್ಲಿ`India first pm’ (ಭಾರತದ ಮೊದಲ ಪ್ರಧಾನಿ) ಎಂದು ಟೈಪ್ ಮಾಡಿ ಹುಡುಕಿದ್ದಾರೆ. ಆಗ ಅವರಿಗೆ ಜವಾಹರಲಾಲ್ ನೆಹರೂ ಹೆಸರು ಬಂದಿದೆ. ಆದರೆ ಅದರಲ್ಲಿ ಫೋಟೋ ಮಾತ್ರ ಪ್ರಧಾನಿ ನರೇಂದ್ರ ಮೋದಿಯವರದ್ದು ಕಾಣಿಸಿಕೊಂಡಿದೆ. ಇದರಿಂದ ರಮ್ಯಾ ಗೂಗಲ್ ವಿರುದ್ಧ ಕಿಡಿ ಕಾರಿದ್ದಾರೆ.

    ರಮ್ಯಾ ಫೋಟೋ ನೋಡಿದ ನಂತರ ಅದರ ಸ್ಕ್ರೀನ್ ಶಾಟ್ ತೆಗೆದು ಗೂಗಲ್ ಮತ್ತು ಗೂಗಲ್ ಇಂಡಿಯಾಗೆ ಟ್ವಿಟ್ಟರ್ ನಲ್ಲಿ ಟ್ಯಾಗ್ ಮಾಡಿ, “ನಿಮ್ಮ ಕ್ರಮಾವಳಿಯಿಂದಾಗಿ ಹೀಗಾಗಿದೆ? ನಿಮ್ಮ ಸಂಗ್ರಹದಲ್ಲಿ ಬರೀ ಕಸಕಡ್ಡಿ ತುಂಬಿದೆ” ಎಂದು ಸಿಡಿಮಿಡಿಗೊಂಡಿದ್ದಾರೆ. ಇದನ್ನೂ ಓದಿ: 8 ಮಂದಿಯನ್ನು ಜೈಲಿನಿಂದ ವಿಧಾನಸೌಧಕ್ಕೆ ಕರ್ಕೊಂಡು ಬರ್ತಿದ್ದಾರೆ ಮೋದಿ- ರಾಹುಲ್ ಲೇವಡಿ

    ರಮ್ಯಾ ಈ ರೀತಿ ಫೋಟೋ ಹಾಕಿ ಟ್ವೀಟ್ ಮಾಡಿದ ಕೂಡಲೇ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದ್ದು, ಟ್ವಿಟ್ಟಿಗರು ಪರ-ವಿರೋಧ ಚರ್ಚೆ ಮಾಡುತ್ತಿದ್ದಾರೆ.

    ನಿನ್ನೆಯಷ್ಟೇ ರಮ್ಯಾ ದೇಶದ ಪ್ರಧಾನಿ ಬಗ್ಗೆ ಟ್ವೀಟ್ ಮಾಡುವ ಮೂಲಕ ಮತ್ತೆ ಮೋದಿ ಕಾಲೆಳೆದಿದ್ದರು. ಕಾಂಗ್ರೆಸ್ ಟ್ವಿಟ್ಟರ್ ಖಾತೆಯಲ್ಲಿ ಸಂಸತ್ತಿನಲ್ಲಿ ಪ್ರಧಾನಿ ಮೋದಿ ಅವರಿಗೆ ರಾಹುಲ್ ಜೊತೆ 15 ನಿಮಿಷದ ಚರ್ಚೆಯಲ್ಲಿ ಪಾಲ್ಗೊಳಲು ಧೈರ್ಯವಿದೆಯಾ ಅನ್ನೋ ಪ್ರಶ್ನೋತ್ತರವನ್ನು ಪೋಸ್ಟ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ರಮ್ಯಾ, ಪ್ರಧಾನಿ ಮೋದಿ ಅವರು ಹೇಳುವಂತೆ 56 ಇಂಚು ಎದೆ ಇಲ್ಲದೇ ಹೋದರೂ ಸಂಸತ್ತಿನಲ್ಲಿ 15 ನಿಮಿಷ ರಾಹುಲ್ ಗಾಂಧಿಯವರನ್ನು ಎದುರಿಸುವ ಸವಾಲು ಸ್ವೀಕರಿಸುವರೆಂದು ನಂಬಿದ್ದೇನೆ ಅಂತ ಹೇಳುವ ಮೂಲಕ ಲೇವಡಿ ಮಾಡಿದ್ದರು.

  • ಗೂಗಲ್ ಚಿತ್ರದ ಪ್ರಮೋಶನ್ ವೇಳೆ ಮದ್ವೆ ವದಂತಿ ಬಗ್ಗೆ ರಹಸ್ಯ ಬಿಚ್ಚಿಟ್ಟ ಶುಭಾ ಪೂಂಜಾ

    ಗೂಗಲ್ ಚಿತ್ರದ ಪ್ರಮೋಶನ್ ವೇಳೆ ಮದ್ವೆ ವದಂತಿ ಬಗ್ಗೆ ರಹಸ್ಯ ಬಿಚ್ಚಿಟ್ಟ ಶುಭಾ ಪೂಂಜಾ

    ಚಿತ್ರದುರ್ಗ: ಸ್ಯಾಂಡಲ್‍ವುಡ್‍ನ ಮೊಗ್ಗಿನ ಮನಸ್ಸಿನ ನಟಿ ಶುಭಾ ಪೂಂಜಾ ಮದುವೆ ಹಾಗೂ ರಾಜಕೀಯದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

    ನಟಿ ಶುಭಾ ಪೂಂಜಾ ಬುಧವಾರ ಕೋಟೆನಾಡು ಚಿತ್ರದುರ್ಗಕ್ಕೆ ಗೂಗಲ್ ಚಿತ್ರತಂಡದೊಂದಿಗೆ ಪ್ರಮೋಶನ್ ಗಾಗಿ ಆಗಮಿಸಿದ್ದರು. ಈ ವೇಳೆ ಅವರ ನಿಜಜೀವನದ ಅನೇಕ ಸತ್ಯಗಳನ್ನು ಪಬ್ಲಿಕ್ ಟಿವಿ ಮುಂದೆ ಬಿಚ್ಚಿಟ್ಟರು. ಅದೇನೆಂದರೆ ಈ ಹಿಂದೆ ಶೂಟಿಂಗ್ ವೇಳೆ ಯಾರೋ ಅಭಿಮಾನಿಗಳು ಮಾಡಿದ ಅವಾಂತರಕ್ಕೆ ಶುಭ ಪೂಂಜಾ ವಿವಾಹ ಗೂಗಲ್ ಚಿತ್ರದ ನಿರ್ದೇಶಕ ಹಾಗು ನಟ ನಾಗೇಂದ್ರ ಪ್ರಸಾದ್ ಜೊತೆ ಆಯಿತು ಎಂದು ಎಲ್ಲರೂ ಭಾವಿಸಿದ್ದರು. ಆದರೆ ವಿವಾಹ ಆಗಿಲ್ಲ, ಅದು ಕೇವಲ ಚಿತ್ರೀಕರಣಕ್ಕಾಗಿ ಹಾಗೆ ಸಿದ್ಧವಾಗಿದ್ದೆವು. ಆದರೆ ದೇವಸ್ಥಾನದಲ್ಲಿ ಶೂಟಿಂಗ್ ಮಾಡೋ ವೇಳೆ ಯಾರೋ ಅಭಿಮಾನಿಯೊಬ್ಬ ಆ ಚಿತ್ರ ತೆಗೆದು ಎಲ್ಲೆಡೆ ಪ್ರಚಾರ ಮಾಡಿದ್ದ ಎಂದರು.

    ನಾನು ಸದ್ಯಕ್ಕೆ ಇನ್ನು ನಾಲ್ಕು ವರ್ಷದವರೆಗೆ ರಾಜಕೀಯಕ್ಕೆ ಬರಲ್ಲ. ಆದರೆ ಮುಂದೇನು ಆಗುತ್ತೆ ಎನ್ನುವುದು ಗೊತ್ತಿಲ್ಲ ಎಂದು ಹೇಳುವ ಮೂಲಕ ರಾಜಕೀಯ ಪ್ರವೇಶಿಸುವ ಇಂಗಿತ ವ್ಯಕ್ತಪಡಿಸಿದರು.

    ಈ ಗೂಗಲ್ ಚಿತ್ರದಲ್ಲಿ ಸಾಹಿತಿ ನಾಗೇಂದ್ರ ಪ್ರಸಾದ್ ನಟಿಸಿ ನಿರ್ದೇಶಿಸಿದ್ದಾರೆ. ಚಿತ್ರದ ಬಗ್ಗೆ ಮಾತನಾಡಿದ ನಾಗೇಂದ್ರ ಪ್ರಸಾದ್, ನಿತ್ಯವೂ ಮಧ್ಯಮ ವರ್ಗದ ಕುಟುಂಬಗಳಲ್ಲಿ ನಡೆಯುವ ಘಟನೆಗಳ ಆಧಾರಿತ ಚಿತ್ರ ಇದಾಗಿದೆ. ಎಲ್ಲಾ ವಯೋಮಾನದವರಿಗೂ ಈ ಗೂಗಲ್ ಚಿತ್ರ ಇಷ್ಟವಾಗಲಿದ್ದು, ಈಗಾಗಲೇ ಚಿತ್ರದ ಹಾಡುಗಳು ಎಲ್ಲರ ಮನಸೆಳೆದಿವೆ. ಅಲ್ಲದೇ ಈವರಗೆ ಕೇವಲ ಗ್ಲಾಮರಸ್ ಹಾಗು ಹಳ್ಳಿ ಹುಡುಗಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಶುಭಾ ಪೂಂಜಾ ಈ ಚಿತ್ರದಲ್ಲಿ ವಿಭಿನ್ನ ಪಾತ್ರದಲ್ಲಿ ಗೃಹಿಣಿಯಾಗಿ ಅಭಿನಯಿಸುತ್ತಿದ್ದಾರೆ. ಯುವಕರ ಹಾರ್ಟ್ ಬೀಟ್ ಇನ್ನಷ್ಟು ಹೆಚ್ಚಿಸುವಂಥಹ ಸಂಭಾಷಣೆ, ಚಿತ್ರಕಥೆ ಹಾಗು ರಸಿಕತೆಯ ದೃಶ್ಯಗಳು ಚಿತ್ರದಲ್ಲಿದೆ. ಆದರೆ ಶುಭಾ ಪೂಂಜಾ ಜೊತೆ ನಾನು ವಿವಾಹವಾಗಿಲ್ಲ. ಕೇವಲ ಶೂಟಿಂಗ್ ಗಾಗಿ ಹಾಕಿದ್ದ ಕಾಸ್ಟ್ಯೂಮ್ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ಈ ಅವಾಂತರ ಸೃಷ್ಟಿಸಿದೆ ಎಂದು ಸ್ಪಷ್ಟಪಡಿಸಿದರು.

    ಬ್ಯೂಟಿ ಕ್ವೀನ್ ಅಮೃತರಾವ್ ಹಾಗು ಉದಯೋನ್ಮುಖ ನಾಯಕನಟ ದೀಪಕ್ ಕೂಡ ಉತ್ತಮವಾಗಿ ಅಭಿನಯಿಸಿ ಎಲ್ಲರನ್ನು ರಂಜಿಸಲಿದ್ದಾರೆ ಎಂದು ನಾಗೇಂದ್ರ ಪ್ರಸಾದ್ ತಿಳಿಸಿದ್ರು.

    ಒಟ್ಟಾರೆ ಕೋಟೆನಾಡು ಚಿತ್ರದುರ್ಗದಲ್ಲಿ ಗೂಗಲ್ ಚಿತ್ರತಂಡ ಭರ್ಜರಿಯಾಗಿ ಪ್ರಮೋಷನ್ ಮಾಡಿತು. ಕಾಲೇಜುಗಳ ಆವರಣ ಹಾಗು ಕೋಟೆ ಮುಂಭಾಗದಲ್ಲಿ ಅಭಿಮಾನಿಗಳೊಂದಿಗೆ ಚಿತ್ರದ ಹಾಡುಗಳನ್ನು ಸ್ಥಳದಲ್ಲಿಯೇ ಬಾರ್ ಕೋಡ್ ಮೂಲಕ ಡೌನ್‍ಲೋಡ್ ಮಾಡಿಕೊಳ್ಳುವ ಅವಕಾಶ ಕಲ್ಪಿಸಿ ವಿಭಿನ್ನವಾಗಿ ಪ್ರಮೋಶನ್ ಮಾಡಿ ಮನಸೆಳೆದರು.

  • ಯಾರೇ ಎಷ್ಟೇ ಹತ್ರ ಇದ್ದರೂ, ತಮ್ಮ ಮೊಬೈಲ್ ಮುಟ್ಟೋಕೆ ಬಿಡೋದಿಲ್ಲ- ಅಂತರಂಗದ ಕಥೆ ಹೇಳಲು ಬರ್ತಿದೆ ‘ಗೂಗಲ್’ ಸರ್ಚ್

    ಯಾರೇ ಎಷ್ಟೇ ಹತ್ರ ಇದ್ದರೂ, ತಮ್ಮ ಮೊಬೈಲ್ ಮುಟ್ಟೋಕೆ ಬಿಡೋದಿಲ್ಲ- ಅಂತರಂಗದ ಕಥೆ ಹೇಳಲು ಬರ್ತಿದೆ ‘ಗೂಗಲ್’ ಸರ್ಚ್

    ಬೆಂಗಳೂರು: ಗೀತ ಸಾಹಿತಿ, ಕವಿ ವಿ.ನಾಗೇಂದ್ರ ಪ್ರಸಾದ್ ನಿರ್ದೇಶಿಸಿರುವ ‘ಗೂಗಲ್-ಈ ಭೂಮಿ ಬಣ್ಣದ ಬುಗುರಿ’ ಸಿನಿಮಾ ಫೆಬ್ರವರಿ 16ರಂದು ತೆರೆಕಾಣಲಿದೆ. ಫೆಬ್ರವರಿ 3ರಂದು ಗೂಗಲ್ ಚಿತ್ರದ ಟ್ರೇಲರ್ ಬಿಡುಗಡೆ ಆಗಿದ್ದು, ಚಂದನವನದಲ್ಲಿ ಭರವಸೆಯನ್ನು ಮೂಡಿಸಿದೆ.

    2.27 ನಿಮಿಷದ ಗೂಗಲ್ ಟ್ರೇಲರ್ ಹಲವು ವಿಷಯಗಳನ್ನು ನೋಡುಗರಿಗೆ ವಿಭಿನ್ನವಾಗಿ ನೀಡಲಿದೆ. ಚಿತ್ರದ ಟ್ರೇಲರ್‍ನಲ್ಲಿ ವಿ.ನಾಗೇಂದ್ರ ಪ್ರಸಾದ್ ಸಿನಿಮಾದ ಹೈಲೈಟ್ಸ್ ಹೇಳಿದ್ದಾರೆ. ಯಾರ ಹತ್ತಿರವೂ ಹೇಳಿಕೊಳ್ಳಕ್ಕಾಗದ ವಿಷಯವನ್ನು ಸ್ನೇಹಿತರ ಬಳಿ ಹೇಳಿ ಕೊಳ್ಳಬಹುದು. ಐ ಲವ್ ಯು ಅಂತಾ ಹೇಳೋಕೆ ಒಂದು ಕ್ಷಣ ಸಾಕು ಆದ್ರೆ ಅದನ್ನು ಪ್ರೂವ್ ಮಾಡಲು ಇಡೀ ಜೀವನವೇ ಬೇಕು. ಗಂಡನಿಗೆ ಮನೆಯೇ ಪ್ರಪಂಚ, ಹೆಂಡತಿಗೆ ಪತಿಯೇ ಪ್ರಪಂಚ, ನಮ್ಮಿಬ್ಬರಿಗೆ ಮಕ್ಕಳೇ ಪ್ರಪಂಚ. ಯಾರೇ ಎಷ್ಟೇ ಹತ್ರ ಇದ್ದರೂ, ತಮ್ಮ ಮೊಬೈಲ್ ಮುಟ್ಟೋಕೆ ಬಿಡೋದಿಲ್ಲ. ಆದ್ರೆ ಅಂತರಂಗದ ಕಥೆ ಹೇಳಲು ಬರ್ತಿದೆ ‘ಗೂಗಲ್’ ಸರ್ಚ್ ಎಂಬ ಹಿನ್ನೆಲೆ ಧ್ವನಿಯಲ್ಲಿ ಟ್ರೇಲರ್ ಮೂಡಿ ಬಂದಿದೆ.

    2001ರಲ್ಲಿ ನಡೆದ ಸತ್ಯ ಘಟನೆ ಆಧಾರಿತ ಸಿನಿಮಾ ಎಂದು ವಿ.ನಾಗೇಂದ್ರ ಪ್ರಸಾದ್ ಟ್ರೇಲರ್ ಅರಂಭದಲ್ಲಿಯೇ ಹೇಳಿಕೊಂಡಿದ್ದಾರೆ. ಚಿತ್ರದಲ್ಲಿನ ಹೆಚ್ಚಿನ ಹೊಸ ಕಲಾವಿದರು ನಟಿಸಿದ್ದಾರೆ. ನಾಯಕ ನಟನಾಗಿ ನಾಗೇಂದ್ರ ಪ್ರಸಾದ್ ನಟಿಸಿದ್ರೆ, ನಾಯಕಿಯಾಗಿ ಮೊಗ್ಗಿನ ಮನಸ್ಸಿನ ಹುಡುಗಿ ಶುಭಾ ಪೂಂಜಾ ಬಣ್ಣ ಹಚ್ಚಿದ್ದಾರೆ.

    ಈ ಹಿಂದೆಯೇ ಈ ಚಿತ್ರದ ಫೋಟೋವೊಂದು ಸಖತ್ ವೈರಲ್ ಆಗಿತ್ತು. ನಾಗೇಂದ್ರ ಪ್ರಸಾದ್ ಹಾಗೂ ಶುಭಪೂಂಜಾ ಹಾರ ಬದಲಾಯಿಸಿಕೊಳ್ಳುವ ಫೋಟೋ ಸುದ್ದಿ ಆಗಿತ್ತು. ಇವರಿಬ್ಬರು ಮದುವೆಯೇ ಆಗಿದ್ದಾರೆ ಎಂಬಂತೆ ಸುದ್ದಿಗಳು ಹರಿದಾಡಿದ್ದವು. ಕಡೆಗೆ ನಾಗೇಂದ್ರ ಪ್ರಸಾದ್ ಅವರೇ ಸ್ವತಃ ವಿವರಣೆ ನೀಡಬೇಕಾಯಿತು. ಚಿತ್ರೀಕರಣ ಸಮಯದಲ್ಲಿ ಯಾರೋ ಕಿಡಿಗೇಡಿಗಳು ಮದುವೆ ಸೀನ್ ಫೋಟೋ ತೆಗೆದು ಈ ರೀತಿ ಮಾಡಿದ್ದಾರೆಂದು ಸ್ಪಷ್ಟೀಕರಣ ನೀಡಿದ್ದರು.

    ನಾಗೇಂದ್ರ ಪ್ರಸಾದ್ ‘ಉತ್ಸವ ಮೂವೀಸ್’ ಎಂಬ ಬ್ಯಾನರ್ ಹುಟ್ಟು ಹಾಕಿ, ‘ಗೂಗಲ್’ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಕಥೆ, ಚಿತ್ರಕಥೆ, ಸಾಹಿತ್ಯ, ನಿರ್ದೇಶನ, ಸಂಭಾಷಣೆ ಮತ್ತು ಸಂಗೀತ ಎಲ್ಲವನ್ನು ವಿ.ನಾಗೇಂದ್ರ ಪ್ರಸಾದ್ ನಿರ್ವಹಿಸಿದ್ದಾರೆ.

  • ಐಟಿ ಉದ್ಯೋಗಕ್ಕೆ ಗೂಗಲ್ ಆರಂಭಿಸಿದೆ ಕೋರ್ಸ್: ಏನಿದು ಆನ್‍ಲೈನ್ ಕೋರ್ಸ್? ಶುಲ್ಕ ಎಷ್ಟು? ಇಲ್ಲಿದೆ ವಿವರ

    ಐಟಿ ಉದ್ಯೋಗಕ್ಕೆ ಗೂಗಲ್ ಆರಂಭಿಸಿದೆ ಕೋರ್ಸ್: ಏನಿದು ಆನ್‍ಲೈನ್ ಕೋರ್ಸ್? ಶುಲ್ಕ ಎಷ್ಟು? ಇಲ್ಲಿದೆ ವಿವರ

    ನವದೆಹಲಿ: ಎಂಜಿನಿಯರಿಂಗ್ ಪದವಿ ಓದಿರುವ ವಿದ್ಯಾರ್ಥಿಗಳು ಕೇವಲ ಪಠ್ಯದಲ್ಲಿ ಮಾತ್ರ ಪರಿಣಿತರಾಗಿದ್ದು ಉದ್ಯೋಗಕ್ಕೆ ಬೇಕಾದ ಕೌಶಲ್ಯಗಳು ಅವರಲ್ಲಿ ಇಲ್ಲ ಎನ್ನುವ ಆರೋಪಗಳನ್ನು ಐಟಿ ಕಂಪೆನಿಗಳು ಮಾಡುವುದು ನಿಮಗೆ ಗೊತ್ತೆ ಇದೆ. ಈ ಆರೋಪದಿಂದ ಮುಕ್ತರನ್ನಾಗಿಸಲು ಗೂಗಲ್ ಮುಂದಾಗಿದ್ದು ಆನ್ ಲೈನ್ ಕೋರ್ಸ್ ಆರಂಭಿಸಿದೆ.

    ಸಂಪೂರ್ಣವಾಗಿ ಆನ್‍ಲೈನ್ ಮೂಲಕವೇ ನಡೆಯುವ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದರೆ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರ ಲಭ್ಯವಾಗಲಿದೆ. ಈ ಮೂಲಕ ಪ್ರಸಿದ್ಧ ಐಟಿ ಕಂಪನಿಗಳಲ್ಲಿ ಉದ್ಯೋಗ ಪಡೆಯುವ ಅವಕಾಶ ಸಿಗಲಿದೆ.

    ಗೂಗಲ್ ಅನುಭವಿ ತಜ್ಞರು ಕೋರ್ಸ್ ಪಠ್ಯವನ್ನು ಸಿದ್ಧಪಡಿಸಿದ್ದು, ಈ ಕೋರ್ಸ್‍ನಲ್ಲಿ 6 ವಿಷಯಗಳು ಲಭ್ಯವಿದೆ. ಅಭ್ಯರ್ಥಿಗಳು ತಮಗೇ ಇಷ್ಟವಾದ ವಿಷಯವನ್ನು ಆಯ್ಕೆ ಮಾಡವಬಹುದಾಗಿದೆ. ಅಲ್ಲದೇ 6 ವಿಷಯಗಳನ್ನು ಏಕಕಾಲದಲ್ಲಿ ಆಯ್ಕೆ ಮಾಡುವ ವಿಶೇಷ ಅವಕಾಶವನ್ನು ನೀಡಲಾಗಿದೆ.

    ಸಾಂದರ್ಭಿಕ ಚಿತ್ರ

    ಈ ತರಬೇತಿಯಲ್ಲಿ ಮೂಲಭೂತ ಕಂಪ್ಯೂಟರ್ ತಾಂತ್ರಿಕ ಅಂಶಗಳಾದ ಬೇಸಿಕ್ ಕಂಪ್ಯೂಟರ್ ಹಾರ್ಡ್‍ವೇರ್, ಕಂಪ್ಯೂಟರ್ ಅಪರೇಟಿಂಗ್ ಸಿಸ್ಟಮ್ಸ್, ಸಿಸ್ಟಮ್ ಅಡ್ಮಿನಿಸ್ಟ್ರೇಷನ್, ಐಟಿ ಅಟೊಮೇಷನ್ ಮತ್ತು ಸೆಕ್ಯೂರಿಟಿ ಅಂಶಗಳ ತರಬೇತಿ ನೀಡಲಾಗುತ್ತದೆ.

    ಪ್ರತಿ ವಿದ್ಯಾರ್ಥಿಗೆ ಉತ್ತಮ ತರಬೇತಿ ನೀಡುವ ಮೂಲಕ ಐಟಿ ಕಂಪೆನಿಗಳಲ್ಲಿ ಕಾರ್ಯನಿರ್ವಹಿಸಲು ಬೇಕಾದ ಕೌಶಲ್ಯಗಳನ್ನು ಬೆಳೆಸುವ ಉದ್ದೇಶವನ್ನು ಈ ಕಾರ್ಯಕ್ರಮ ಹೊಂದಿದೆ. ಆನ್ ಲೈನ್ ಕೋರ್ಸ್ ಮುಕ್ತಾಯವಾದ ಬಳಿಕ ಉದ್ಯೋಗಕ್ಕೆ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ದೈತ್ಯ ಕಂಪನಿಗಳಾಗಿರುವ ಬ್ಯಾಂಕ್ ಆಫ್ ಆಮೆರಿಕ, ವಾಲ್‍ಮಾರ್ಟ್, ಸ್ಪ್ರಿಂಟ್, ಜಿಇ ಡಿಜಿಟಲ್, ಪಿಎನ್‍ಸಿ ಬ್ಯಾಂಕ್, ಇನ್ಫೋಸಿಸ್, ಟಿಇಕೆ ಸಿಸ್ಟಮ್ಸ್, ಯುಪಿಸಿ ಸೇರಿದಂತೆ ವಿವಿಧ ಐಟಿ ಕಂಪೆನಿ ಹಾಗೂ ಗೂಗಲ್ ಸಂಸ್ಥೆಯಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿದೆ.

    ಸಾಂದರ್ಭಿಕ ಚಿತ್ರ

    ಕೋರ್ಸ್ ಅವಧಿ: ಈ ತರಬೇತಿ ಕಾರ್ಯಕ್ರಮದಲ್ಲಿ 6 ವಿಷಯಗಳಿಗೂ ಸೇರಿ 64 ತರಗತಿಗಳು, ಪ್ರಾಜೆಕ್ಟ್ ಗಳನ್ನು ಹೊಂದಿದೆ. ಪ್ರತಿ ಅಭ್ಯರ್ಥಿಯು ವಾರದಲ್ಲಿ 8 ರಿಂದ 10 ಗಂಟೆಗಳ ಕಾಲ ಭಾಗವಹಿಸಿದರೆ 8 ರಿಂದ 12 ತಿಂಗಳುಗಳಲ್ಲಿ ತರಬೇತಿಯನ್ನು ಪೂರ್ಣಗೊಳಿಸಬಹುದು. ಅವಶ್ಯಕ ಸಂದರ್ಭಗಳಲ್ಲಿ ವಿದ್ಯಾರ್ಥಿಗಳು ತಮ್ಮ ಕೋರ್ಸ್ ಅವಧಿಯಲ್ಲಿ ನೀಡಲಾಗುವ ವಿಷಯದಲ್ಲಿ ಪ್ರಾವಿಣ್ಯತೆ ಹೊಂದಿದ್ದರೆ ಅಂತಹ ವಿಷಯಗಳನ್ನು ಸ್ಕಿಪ್ ಮಾಡುವ ಅವಕಾಶಗಳನ್ನು ನೀಡಲಾಗಿದೆ.

    ಕೋರ್ಸ್ ವೆಚ್ಚ: ಒಂದು ಕೋರ್ಸ್ ಪೂರ್ಣಗೊಳಸಿಲು 49 ಅಮೆರಿಕನ್ ಡಾಲರ್ (ಅಂದಾಜು 3,100 ರೂ.) ವೆಚ್ಚವಾಗುತ್ತದೆ. ಕೋರ್ಸ್‍ನಲ್ಲಿ ಭಾರತೀಯ ವಿದ್ಯಾರ್ಥಿಗಳಿಗೆ ಯಾವುದೇ ಆರ್ಥಿಕ ಸಹಾಯವನ್ನು ಸಂಸ್ಥೆ ನೀಡುವುದಿಲ್ಲ. ಅಲ್ಲದೇ ಕೋರ್ಸ್ ಕುರಿತ ತೆರಿಗೆ, ಸೇವಾ ಶುಲ್ಕಗಳು ಅನ್ವಯವಾಗುತ್ತದೆ. ಮೊದಲಿಗೆ ಒಂದು ಕೋರ್ಸ್ ಆಯ್ಕೆ ಮಾಡಿಕೊಂಡು ನಂತರ ಬೇರೆ ವಿಷಯಗಳ ಆಯ್ಕೆಗೆ ಅವಕಾಶ ನೀಡಲಾಗಿದೆ.

    ಶುಲ್ಕ ಪಾವತಿ ಹೇಗೆ? ಕೋರ್ಸ್ ಬಗ್ಗೆ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಸಂಸ್ಥೆಯ coursera.org ವೆಬ್‍ಸೈಟ್ ಗೆ ಭೇಟಿ ತಮ್ಮ ಗೂಗಲ್ ಅಕೌಂಟ್‍ಗಳ ಮೂಲಕ ಲಾಗಿನ್ ಮಾಡಬಹುದಾಗಿದೆ. ಅಲ್ಲದೇ ಅಭ್ಯರ್ಥಿಗಳು ತಮ್ಮ ಡೆಬಿಟ್ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್ ಬಳಸಿ ಶುಲ್ಕ ಪಾವತಿ ಮಾಡಬಹುದು. ಜನವರಿ 24 ರಿಂದ ಈ ಕೋರ್ಸ್‍ಗಳು ಆರಂಭವಾಗಿದೆ.

    ಕೋರ್ಸ್ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಕ್ಲಿಕ್ ಮಾಡಿ: www.coursera.org

    ಸಾಂದರ್ಭಿಕ ಚಿತ್ರ
  • ಜಸ್ಟ್ 2 ಸಾವಿರ ರೂ.ಗೆ ಗೂಗಲ್ ಒರಿಯೋ ಫೋನ್: ಏನಿದರ ವಿಶೇಷತೆ? ಕಡಿಮೆ ಬೆಲೆಗೆ ಈ ಫೋನ್ ಹೇಗೆ ಸಿಗುತ್ತೆ?

    ಜಸ್ಟ್ 2 ಸಾವಿರ ರೂ.ಗೆ ಗೂಗಲ್ ಒರಿಯೋ ಫೋನ್: ಏನಿದರ ವಿಶೇಷತೆ? ಕಡಿಮೆ ಬೆಲೆಗೆ ಈ ಫೋನ್ ಹೇಗೆ ಸಿಗುತ್ತೆ?

    ಬೆಂಗಳೂರು: ಗೂಗಲ್ ಸಹಭಾಗಿತ್ವದಲ್ಲಿ ದೇಶೀಯ ಫೋನ್ ತಯಾರಿಕಾ ಕಂಪೆನಿ ಮೈಕ್ರೋಮ್ಯಾಕ್ಸ್ ಅತಿ ಕಡಿಮೆ ಬೆಲೆಯಲ್ಲಿ ಅತ್ಯಾಧುನಿಕ ಸ್ಮಾರ್ಟ್ ಫೋನ್ ತಯಾರಿಸಿದ್ದು ಜನವರಿ 26 ರಂದು ಈ ಫೋನ್ ಬಿಡುಗಡೆಯಾಗುವ ಸಾಧ್ಯತೆ ಇದೆ.

    ಆಂಡ್ರಾಯ್ಡ್ ಓಒರಿಯೋ ಗೊ ಆಪರೇಟಿಂಗ್ ಸಿಸ್ಟಂ ಮೂಲಕ ಕಾರ್ಯನಿರ್ವಹಿಸುವ ವಿಶ್ವದ ಮೊದಲ ಫೋನ್ ಇದಾಗಿದ್ದು, ಈ ಸ್ಮಾರ್ಟ್‍ಫೋನ್ ಬೆಲೆ ಕೇವಲ 2 ಸಾವಿರ ರೂ. ಇರಲಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಈ ಫೋನ್ ವೋಲ್ಟ್ ಮತ್ತು 4ಜಿ ಟೆಕ್ನಾಲಜಿಗೆ ಸಪೋರ್ಟ್ ಮಾಡುತ್ತದೆ.

    ಗೂಗಲ್ ಮೈಕ್ರೋಮ್ಯಾಕ್ಸ್ ಅಲ್ಲದೇ ಲಾವಾ, ಕಾರ್ಬನ್, ಇಂಟೆಕ್ಸ್ ಜೊತೆಗೂಡಿ ಒರಿಯೋ ಗೋ ಫೋನ್ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ.

    ಒರಿಯೋ ಗೋ ಫೋನ್ ವಿಶೇಷತೆ ಏನು?
    ಆಪರೇಟಿಂಗ್ ಸಿಸ್ಟಂ ರನ್ ಆಗಲು ಫೋನ್ ಗಳಲ್ಲಿ ಇಂತಿಷ್ಟೆ ಪ್ರಮಾಣದ ರ‍್ಯಾಮ್, ಪ್ರೊಸೆಸರ್, ಆಂತರಿಕ ಮೆಮೊರಿ ಇರಬೇಕು ಎನ್ನುವ ನಿಯಮವಿದೆ. ಆದರೆ ಒರಿಯೋ ಗೋ ಫೋನ್ ಗಳಲ್ಲಿ ಕಡಿಮೆ ಮೆಮೊರಿ ಇದ್ದರೂ ಅಪ್ಲಿಕೇಶನ್ ಗಳು ರನ್ ಆಗುತ್ತದೆ. 512 ಎಂಬಿ ಆಂತರಿಕ ಮೆಮೊರಿ, 1ಜಿಬಿ ರಾಮ್ ಇದ್ದರೆ ಸಾಕಾಗುತ್ತದೆ. ಈ ಕಾರಣಕ್ಕಾಗಿ ಈ ಫೋನ್ ಗಳ ಬೆಲೆ ಮಾರುಕಟ್ಟೆಯಲ್ಲಿರುವ ಫೋನ್ ಗಳಿಗಿಂತ ಕಡಿಮೆ ಬೆಲೆಯಲ್ಲಿ ನಿಗದಿಯಾಗಿರುತ್ತದೆ. ಅಷ್ಟೇ ಅಲ್ಲದೇ ಗೂಗಲ್ ಆಂಡ್ರಾಯ್ಡ್ ಒನ್ ಮಾನದಂಡದಲ್ಲಿ ಫೋನ್ ಗಳ ಹಾರ್ಡ್‍ವೇರ್ ಇರಲಿದೆ.

    ಗೂಗಲ್ ಹೇಳುವಂತೆ ಆಂಡ್ರಾಯ್ಡ್ ಒರಿಯೋ ಗೋ ಆವೃತ್ತಿ ಆಪರೇಟಿಂಗ್ ಸಿಸ್ಟಂ, ಗೂಗಲ್ ಅಪ್ಲಿಕೇಶನ್ ಮತ್ತು ಪ್ಲೇ ಸ್ಟೋರ್ ಎನ್ನುವ ತತ್ವದ ಅಡಿ ಕಾರ್ಯನಿರ್ವಹಿಸುತ್ತದೆ. ಹೊಸ ಸಾಫ್ಟ್ ವೇರ್ ನಲ್ಲಿ ಅಪ್ಲಿಕೇಶನ್ ಒಂದು 15% ವೇಗವಾಗಿ ಕಾರ್ಯನಿರ್ವಹಿಸುತ್ತದೆ.

    ಈ ಆವೃತ್ತಿಗಾಗಿಯೇ ಗೂಗಲ್ ವಿಶೇಷ ಅಪ್ಲಿಕೇಶನ್ ರೂಪಿಸಿದೆ. ಗೂಗಲ್ ಗೋ, ಗೂಗಲ್ ಅಸಿಸ್ಟೆಂಟ್ ಗೋ, ಯೂ ಟ್ಯೂಬ್ ಗೋ, ಗೂಗಲ್ ಮ್ಯಾಪ್ಸ್ ಗೋ, ಜಿಮೇಲ್ ಗೋ, ಜಿ ಬೋರ್ಡ್, ಗೂಗಲ್ ಪ್ಲೇ, ಕ್ರೋಮ್, ಮತ್ತು ಫೈಲ್ಸ್ ಗೋ ಅಪ್‍ಗಳ ಗುಚ್ಛಗಳು ಈ ಫೋನಿನಲ್ಲಿ ಪ್ರಿ ಲೋಡೆಡ್ ಆಗಿರಲಿವೆ. ಈ ಎಲ್ಲ ಅಪ್ಲಿಕೇಶನ್ ಗಳು ಕಡಿಮೆ ಮೆಮರಿಯನ್ನು ಹೊಂದಿದ್ದು, ವಿಶೇಷವಾಗಿ ಗೂಗಲ್ ಗೋ 5 ಎಂಬಿಗಿಂತಲೂ ಕಡಿಮೆ ಇರಲಿದೆ.

     

    ಏನಿದು ಗೂಗಲ್ ಆಂಡ್ರಾಯ್ಡ್ ಒನ್?
    ಗೂಗಲ್ ಈ ಹಿಂದೆ ಏಷ್ಯಾ, ಆಫ್ರಿಕಾ ಖಂಡದಲ್ಲಿ ಮಾರುಕಟ್ಟೆ ವಿಸ್ತರಿಸಲು ಆಂಡ್ರಾಯ್ಡ್ ಓಎಸ್ ಆಧಾರಿತ ಆಂಡ್ರಾಯ್ಡ್ ಒನ್ ಫೋನ್‍ಗಳನ್ನು ಬಿಡುಗಡೆ ಮಾಡಿತ್ತು. ಈ ಫೋನ್‍ಗಳ ಬೆಲೆ ಕಡಿಮೆ ಇದ್ದು, ಗೂಗಲ್ ಮಾನದಂಡಕ್ಕೆ ಅನುಗುಣವಾಗಿ ಹಾರ್ಡ್ ವೇರ್ ಮತ್ತು ಸಾಫ್ಟ್ ವೇರ್ ಗಳನ್ನು ಹೊಂದಿದ ಫೋನ್‍ಗಳನ್ನು ಕಂಪೆನಿಗಳು ತಯಾರಿಸಬೇಕಾಗುತ್ತದೆ. ವಿಶ್ವದಲ್ಲೇ ಮೊದಲ ಬಾರಿಗೆ 2014ರಲ್ಲಿ ಭಾರತದಲ್ಲಿ ಆಂಡ್ರಾಯ್ಡ್ ಓನ್ ಫೋನ್‍ಗಳು ಬಿಡುಗಡೆಯಾಗಿತ್ತು. ಭಾರತದಲ್ಲಿ ಕಾರ್ಬನ್, ಮೈಕ್ರೋಮ್ಯಾಕ್ಸ್, ಸ್ಪೈಸ್ ಕಂಪೆನಿಗಳು ಆಂಡ್ರಾಯ್ಡ್ ಓನ್ ಅಡಿಯಲ್ಲಿ ಫೋನ್ ತಯಾರಿಸಿತ್ತು

    2017ರಜನವರಿಯಲ್ಲಿ ಗೂಗಲ್ ಸಿಇಒ ಸುಂದರ್ ಪಿಚೈ ಭಾರತಕ್ಕೆ ಬಂದಿದ್ದಾಗ ಕಡಿಮೆ ಬೆಲೆಯಲ್ಲಿ ಆಂಡ್ರಾಯ್ಡ್ ಫೋನ್ ತಯಾರಿಸಲಾಗುವುದು ಎಂದು ತಿಳಿಸಿದ್ದರು. ಭಾರತಕ್ಕೆ 30 ಡಾಲರ್(2 ಸಾವಿರ ರೂ.) ಬೆಲೆಯ ಆಂಡ್ರಾಯ್ಡ್ ಫೋನ್ ಅಗತ್ಯವಿದೆ ಎಂದು ಹೇಳಿದ್ದರು. ಇದಕ್ಕೆ ಪೂರಕ ಎಂಬಂತೆ ಈಗ ಮೈಕ್ರೋಮ್ಯಾಕ್ಸ್ ಜೊತೆಗೂಡಿ ಗೂಗಲ್ ಈ ಫೋನ್ ಬಿಡುಗಡೆ ಮಾಡಲು ಮುಂದಾಗಿದೆ.

     

  • ಗೂಗಲ್ ಸರ್ಚ್ ನಲ್ಲಿ ಕುವೆಂಪು ಫೋಟೋ ಬಂದಿದ್ದು ಹೇಗೆ? ಇಲ್ಲಿದೆ ಡೂಡಲ್ ಸೃಷ್ಟಿಕರ್ತನ ಕತೆ

    ಗೂಗಲ್ ಸರ್ಚ್ ನಲ್ಲಿ ಕುವೆಂಪು ಫೋಟೋ ಬಂದಿದ್ದು ಹೇಗೆ? ಇಲ್ಲಿದೆ ಡೂಡಲ್ ಸೃಷ್ಟಿಕರ್ತನ ಕತೆ

    ಬೆಂಗಳೂರು: ಇಂದು ರಾಷ್ಟ್ರಕವಿ ಕುಪ್ಪಳಿ ವೆಂಕಟಪ್ಪ ಪುಟಪ್ಪ ಅವರ 113 ಜನ್ಮ ವಾರ್ಷಿಕೋತ್ಸವ. ಕುವೆಂಪು ಅವರ ಜನ್ಮದಿನದಂದು ಗೂಗಲ್ ಡೂಡಲ್‍ನಲ್ಲಿ ಅವರ ಚಿತ್ರವನ್ನು ಪ್ರಕಟಿಸಿ ಅವರಿಗೆ ವಿಶೇಷ ಗೌರವ ಸಲ್ಲಿಸಿದೆ.

    ಡೂಡಲ್ ನಲ್ಲಿ ಕುವೆಂಪು ಚಿತ್ರ ಮೂಡಿ ಬರಲು ಕಾರಣರಾದ ವ್ಯಕ್ತಿ ಉಪಮನ್ಯು ಭಟ್ಟಚಾರ್ಯ. ಕೋಲ್ಕತ್ತಾ ಮೂಲದ ಆನಿಮೇಟರ್ ಆಗಿರುವ ಉಪಮನ್ಯು ಈಗ ಕ್ಯಾಲಿಫೋರ್ನಿಯಾದಲ್ಲಿದ್ದೇನೆ ಎಂದು ಇನ್ ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ. ಗೂಗಲ್ ನಲ್ಲಿ ಕನ್ನಡ ಪದವನ್ನು ಬರೆಯಲು ಇವರಿಗೆ ಹೇಳಿಕೊಟ್ಟವರು ಸ್ವಾತಿ ಶೇಲರ್.

    ಕುವೆಂಪು ಅವರ ಜನ್ಮದಿನಕ್ಕೆ ಡೂಡಲ್ ಮಾಡಿಕೊಡಿ ಎಂದು ಗೂಗಲ್ ಅವರು ಕೇಳೀಕೊಂಡಾಗ ನನಗೆ ಇದನ್ನು ನಂಬಲಿಕ್ಕೆ ಸಾಧ್ಯವಿಲ್ಲ. ಈ ಡೂಡಲ್ ನಾನು ಮಾಡಿದ್ದು, ಇದಕ್ಕೆ ಕನ್ನಡ ಪದವನ್ನು ಹಾಕಲು ಸ್ವಾತಿ ಶೇಲರ್ ಸಹಾಯ ಮಾಡಿದ್ದಾರೆ ಹಾಗೂ ಆಂಗ್ಲ ಮತ್ತು ಕನ್ನಡ ಭಾಷೆಯಲ್ಲಿ ಗೂಗಲ್ ಎಂದು ಬರೆಯಲಾಗಿದೆ ಎಂದು ಉಪಮನ್ಯೂ ಭಟ್ಟಚಾರ್ಯ ಬರೆದು ತಮ್ಮ ಇನ್ ಸ್ಟಾಗ್ರಾಂನಲ್ಲಿ ಪೊಸ್ಟ್ ಮಾಡಿದ್ದಾರೆ.

    ಕವಿಶೈಲದ ಪ್ರಕೃತಿಯ ಮಡಲಲ್ಲಿ ಬಂಡೆಯ ಮೇಲೆ ಕುಳಿತು ಕುವೆಂಪು ಸಾಹಿತ್ಯ ಸೃಷ್ಟಿಸುತ್ತಿರುವ ಚಿತ್ರವನ್ನು ಡೂಡಲ್‍ ಗೆ ಬಳಸಿಕೊಳ್ಳಲಾಗಿದೆ. ಮತ್ತೊಂದು ವಿಶಿಷ್ಟವೇನೆಂದರೆ ಕುವೆಂಪು ಚಿತ್ರದ ಹಿಂಭಾಗದಲ್ಲಿ ಗೂಗಲ್ ಎಂದು ಕನ್ನಡದಲ್ಲಿ ಬರೆಯಲಾಗಿದೆ. ಇದನ್ನು ಉಪಮನ್ಯೂ ಭಟ್ಟಚಾರ್ಯ ಬರೆದಿದ್ದು, ಸ್ವಾತಿ ಶೇಲರ್ ಕನ್ನಡ ಪದ ಬರೆಯಲು ಸಹಾಯ ಮಾಡಿದ್ದಾರೆ.

    ಯಾವಾಗಲ್ಲೂ ಪ್ರಕೃತಿ ಸೌಂದರ್ಯವನ್ನು ಇಷ್ಟಪಡುತ್ತಿದ್ದ ಕುವೆಂಪು ಅವರಿಗೆ ‘ಪೂವು’ ಎಂಬ ಡೂಡಲ್ ಬಳಸಿಕೊಳ್ಳಲಾಗಿದೆ. ಕುವೆಂಪು ಅವರು ತಮ್ಮ ಕವಿತೆಗಳಲ್ಲಿ ತಮ್ಮ ಸುತ್ತಮುತ್ತಲಿರುವ ಪ್ರಪಂಚದ ಸರಳ ಅದ್ಭುತವನ್ನು, ವಿಶೇಷವಾದ ಹೂವುಗಳಗೆ ಪ್ರತಿಬಿಂಬಿಸಿ ಪ್ರೀತಿಸುತ್ತಿದ್ದರು.

    ಕುವೆಂಪು ಅವರು 1904ರ ಡಿಸೆಂಬರ್ 29ರಂದು ಜನಿಸಿದ್ದು, ರಾಮಾಯಣ ದರ್ಶನಂ ಮೂಲಕ ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿಯನ್ನು ತಂದುಕೊಟ್ಟಿದ್ದರು. ನವೆಂಬರ್ 11, 1994ರಲ್ಲಿ ಕುವೆಂಪು ವಿಧಿವಶರಾದ್ರು.

    ಉಪಮನ್ಯು ಭಟ್ಟಚಾರ್ಯ ಅವರು ಅನಿಮೇಷನ್ ಮೂಲಕ ಬೇರೆ ಬೇರೆ ಫೋಟೋಗಳನ್ನು ರಚಿಸಿದ್ದು ಅವುಗಳನ್ನು ಇಲ್ಲಿ ನೀಡಲಾಗಿದೆ.

  • ರಾಷ್ಟ್ರಕವಿ ಕುವೆಂಪು ಜನ್ಮದಿನಕ್ಕೆ ಗೂಗಲ್‍ನಿಂದ ವಿಶೇಷ ಗೌರವ

    ರಾಷ್ಟ್ರಕವಿ ಕುವೆಂಪು ಜನ್ಮದಿನಕ್ಕೆ ಗೂಗಲ್‍ನಿಂದ ವಿಶೇಷ ಗೌರವ

    ಬೆಂಗಳೂರು: ಇಂದು ರಾಷ್ಟ್ರಕವಿ, ವಿಶ್ವಮಾನವ ಸಂದೇಶ ಸಾರಿದ ನಮ್ಮ ಹೆಮ್ಮೆಯ ಕುವೆಂಪು ಅವರ 113ನೇ ಜನ್ಮದಿನ. ಈ ವಿಶಿಷ್ಟ ದಿನದಂದು ಗೂಗಲ್ ಡೂಡಲ್ ಮೂಲಕ ಕುವೆಂಪು ಅವರಿಗೆ ವಿಶೇಷ ಗೌರವ ಸಲ್ಲಿಸಿದೆ.

    ಕವಿಶೈಲದ ಪ್ರಕೃತಿಯ ಮಡಲಲ್ಲಿ ಬಂಡೆಯ ಮೇಲೆ ಕುಳಿತು ಕುವೆಂಪು ಸಾಹಿತ್ಯ ಸೃಷ್ಟಿಸುತ್ತಿರುವ ಚಿತ್ರವನ್ನು ಡೂಡಲ್‍ಗೆ ಬಳಸಿಕೊಳ್ಳಲಾಗಿದೆ. ಮತ್ತೊಂದು ವಿಶಿಷ್ಟವೇನೆಂದರೆ ಕುವೆಂಪು ಚಿತ್ರದ ಹಿಂಭಾಗದಲ್ಲಿ ಗೂಗಲ್ ಎಂದು ಕನ್ನಡದಲ್ಲಿ ಬರೆಯಲಾಗಿದೆ. ಅಷ್ಟೇ ಅಲ್ಲದೆ ಕುವೆಂಪು ಅವರಿಗೆ ಇಷ್ಟವಾದ ಬಂಡೆ, ಕಾಜಾಣ ಹಕ್ಕಿಯನ್ನು ಚಿತ್ರಿಸಿದ್ದು, ಇದ್ದಕ್ಕೆ ಕನ್ನಡಿಗರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

    ಕುವೆಂಪು ಅವರು 1904ರ ಡಿಸೆಂಬರ್ 29ರಂದು ಜನಿಸಿದ್ದು, ರಾಮಾಯಣ ದರ್ಶನಂ ಮೂಲಕ ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿಯನ್ನು ತಂದುಕೊಟ್ಟಿದ್ದರು. ನವೆಂಬರ್ 11, 1994ರಲ್ಲಿ ಕುವೆಂಪು ವಿಧಿವಶರಾದ್ರು.

  • ಗೂಗಲ್ ಸರ್ಚ್ ನಲ್ಲಿ ಪಾಕ್ ನಲ್ಲೂ ವಿರಾಟ್ ಕೊಹ್ಲಿ ಫುಲ್ ಕಮಾಲ್!

    ಗೂಗಲ್ ಸರ್ಚ್ ನಲ್ಲಿ ಪಾಕ್ ನಲ್ಲೂ ವಿರಾಟ್ ಕೊಹ್ಲಿ ಫುಲ್ ಕಮಾಲ್!

    ನವದೆಹಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿಶ್ವದಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿದ್ದು, ನೆರೆಯ ಪಾಕಿಸ್ತಾನದಲ್ಲೂ ಹೆಚ್ಚಿನ ಜನಪ್ರಿಯತೆಯನ್ನು ಪಡೆದಿದ್ದಾರೆ.

    ಹೌದು, ಗೂಗಲ್ ಟ್ರೆಂಡ್ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ ಕಳೆದ ಒಂದು ವರ್ಷ ಅವಧಿಯಲ್ಲಿ ಪಾಕಿಸ್ತಾನದಲ್ಲಿ ಅತಿ ಹೆಚ್ಚು ಸರ್ಚ್ ಮಾಡಿದ ಆಟಗಾರ ಎನಿಸಿಕೊಂಡಿದ್ದಾರೆ.

    ಗೂಗಲ್ ಸರ್ಚ್ ಟ್ರೆಂಡ್ ನಲ್ಲಿ ಪಾಕ್ ಕ್ರಿಕೆಟಿಗರನ್ನು ಹಿಂದಿಕ್ಕಿದ್ದೂ, ಪಾಕ್ ಕ್ರಿಕೆಟ್ ತಂಡದ ನಾಯಕ ಸರ್ಫರಾಜ್ ಅಹ್ಮದ್, ಬೌಲರ್ ಮೊಹಮ್ಮದ್ ಆಮೀರ್ ಮತ್ತು ಬ್ಯಾಟ್ಸ್ ಮನ್ ಅಹಮ್ಮದ್ ಶೆಹ್ಜಾದ್ ಕೊಹ್ಲಿ ನಂತರದ ಸ್ಥಾನವನ್ನು ಪಡೆದಿದ್ದಾರೆ.

    ಇತ್ತೀಚೆಗಷ್ಟೇ ಬಹುಕಾಲದ ಗೆಳತಿ ಅನುಷ್ಕಾ ಶರ್ಮಾ ಅವರನ್ನು ಮದುವೆಯಾಗಿರುವ ಕೊಹ್ಲಿಗೆ ಹಲವು ಪಾಕಿಸ್ತಾನ ಆಟಗಾರರು ಶುಭಾಶಯ ತಿಳಿಸಿದ್ದರು. ಕೊಹ್ಲಿ ಸದ್ಯ ಟೀಂ ಇಂಡಿಯಾದಿಂದ ದೂರವಿದ್ದು ಮುಂದಿನ ದಕ್ಷಿಣ ಆಫ್ರಿಕಾ ಸರಣಿಯ ವೇಳೆಗೆ ತಂಡವನ್ನು ಸೇರಿಕೊಳ್ಳಲಿದ್ದಾರೆ.