Tag: ಗೂಗಲ್ ಸರ್ಚ್

  • ಗೂಗಲ್ ಸರ್ಚ್‍ನಲ್ಲಿ ಸಿಕ್ಕ ಫ್ಲಿಪ್ಕಾರ್ಟ್ ನಂಬರ್ – ಕರೆ ಮಾಡಿ 2 ಲಕ್ಷ ಕಳ್ಕೊಂಡ

    ಗೂಗಲ್ ಸರ್ಚ್‍ನಲ್ಲಿ ಸಿಕ್ಕ ಫ್ಲಿಪ್ಕಾರ್ಟ್ ನಂಬರ್ – ಕರೆ ಮಾಡಿ 2 ಲಕ್ಷ ಕಳ್ಕೊಂಡ

    ಯಾದಗಿರಿ: ಗೂಗಲ್ ಸರ್ಚ್‍ನಲ್ಲಿ ಸಿಕ್ಕ ಫ್ಲಿಪ್ಕಾರ್ಟ್ ಕಸ್ಟಮರ್ ಕೇರ್ ನಂಬರಿಗೆ ಕಾಲ್ ಮಾಡಿ ವ್ಯಕ್ತಿಯೊಬ್ಬರು ಎರಡು ಲಕ್ಷ ಕಳೆದುಕೊಂಡ ಘಟನೆ ಯಾದಗಿರಿಯಲ್ಲಿ ನಡೆದಿದೆ.

    ಯಾದಗಿರಿಯ ಗಣೇಶ ನಗರದ ನಿವಾಸಿ ಹೇಮನಾರಾಯಣ ಎಂಬವರು, ಫ್ಲಿಪ್ಕಾರ್ಟ್‍ನಲ್ಲಿ ಬಟ್ಟೆಯನ್ನು ಆರ್ಡರ್ ಮಾಡಿದ್ದು, ಬಟ್ಟೆಯು ಇಷ್ಟವಾಗದ ಕಾರಣ ಆರ್ಡರನ್ನು ಕ್ಯಾನ್ಸಲ್ ಮಾಡಿದ್ದಾರೆ. ಆರ್ಡರ್ ಕ್ಯಾನ್ಸಲ್ ಮಾಡಿದ ಹಿನ್ನೆಲೆ ಅವರ ಖಾತೆಗೆ ಹಣ ಮರಳಿ ಬಾರದೆ ಇರುವುದರಿಂದ, ಗೂಗಲ್‍ನಲ್ಲಿ ಫ್ಲಿಪ್ಕಾರ್ಟ್ ಕಸ್ಟಮರ್ ಕೇರ್ ನಂಬರ್ ಹುಡುಕಾಡಿದ್ದಾರೆ. ಇದನ್ನೂ ಓದಿ: ಜೆಡಿಎಸ್‌ ಬಗ್ಗೆ ಕಾಂಗ್ರೆಸ್ ನಡೆಸಿದ ಅಪಪ್ರಚಾರಕ್ಕೆ ಫಲಿತಾಂಶವೇ ಉತ್ತರ ನೀಡಿದೆ: ಹೆಚ್‌ಡಿಕೆ

    ಬಳಿಕ ಅಲ್ಲಿ ಸಿಕ್ಕ ನಂಬರಿಗೆ ಕಾಲ್ ಮಾಡಿ ವಿಚಾರಿಸಿದಾಗ, ಅವರು ಹೇಮನಾರಾಯಣರವರ ಬ್ಯಾಂಕಿಗೆ ಸಂಬಂಧಪಟ್ಟ ವಿಷಯಗಳನ್ನು ಕೇಳಿದ್ದಾರೆ. ಇದಕ್ಕೆ ನಾರಾಯಣರವರು ಮಾಹಿತಿಯನ್ನು ನೀಡಿದ್ದಾರೆ. ಅಲ್ಲದೆ ಅವರ ಮೊಬೈಲಿಗೆ ಬಂದ ಓಟಿಪಿ ಸಹ ಹೇಳಿದ್ದಾರೆ. ಓಟಿಪಿ ಶೇರ್ ಆದ ತಕ್ಷಣ ನಾರಾಯಣ ಅವರ ಬ್ಯಾಂಕ್ ಖಾತೆಗೆ ಕನ್ನಹಾಕಿದ್ದ ಖದೀಮರು, ಅವರ ಖಾತೆಯಿಂದ ಸುಮಾರು ಎರಡು ಲಕ್ಷ ರೂಪಾಯಿಗಳನ್ನು ಎಗರಿಸಿದ್ದಾರೆ. ಇದನ್ನೂ ಓದಿ: ಸಿಂದಗಿ ಉಪ ಚುನಾವಣೆ; ಜಯದ ನಗೆ ಬೀರಿದ ಬಿಜೆಪಿ

    ಹಣ ಕಟ್ ಆದ ಬಳಿಕ ಮತ್ತೆ ಆ ನಂಬರಿಗೆ ಕಾಲ್ ಮಾಡಿದಾಗ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ತಮಗೆ ಆದ ಆನ್ ಲೈನ್ ಮೋಸದ ಬಗ್ಗೆ ತಡವಾಗಿ ಅರಿತುಕೊಂಡ ನಾರಾಯಣ ಸೈಬರ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದನ್ನೂ ಓದಿ: ನೀಟ್ ಪರೀಕ್ಷೆಯಲ್ಲಿ 384ನೇ ರ‍್ಯಾಂಕ್ ಪಡೆದ RLS ವಿದ್ಯಾರ್ಥಿ

  • 2017ರ ಗೂಗಲ್ ಸರ್ಚ್ ನಲ್ಲಿ ಸನ್ನಿ ಲಿಯೋನ್ ನಂಬರ್ 1: 2ನೇ ಸ್ಥಾನದಲ್ಲಿ ಬಿಗ್ ಬಾಸ್ ಸ್ಪರ್ಧಿ!

    2017ರ ಗೂಗಲ್ ಸರ್ಚ್ ನಲ್ಲಿ ಸನ್ನಿ ಲಿಯೋನ್ ನಂಬರ್ 1: 2ನೇ ಸ್ಥಾನದಲ್ಲಿ ಬಿಗ್ ಬಾಸ್ ಸ್ಪರ್ಧಿ!

    ಮುಂಬೈ: ಈ ವರ್ಷ ಭಾರತದಲ್ಲಿ ಅತೀ ಹೆಚ್ಚು ಬಾರಿ ಗೂಗಲ್‍ ನಲ್ಲಿ ಸರ್ಚ್ ಆದ ನಟಿಯರಲ್ಲಿ ಬಾಲಿವುಡ್ ಹಾಟ್ ಬ್ಯೂಟಿ ಸನ್ನಿ ಲಿಯೋನ್ ಮೊದಲನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.

    ಹೌದು. ಭಾರತದಲ್ಲೇ ಸನ್ನಿ ಲಿಯೋನ್ ಹೆಸರನ್ನು ಗೂಗಲ್‍ ನಲ್ಲಿ ಅತಿಯಾಗಿ ಸರ್ಚ್ ಮಾಡಲಾಗಿದೆ. ಇದಾದ ಬಳಿಕ ಎರಡನೇ ಸ್ಥಾನವನ್ನು ಬಿಗ್ ಬಾಸ್ ಸ್ಪರ್ಧಿ ಆರ್ಶಿ ಖಾನ್ ಪಡೆದುಕೊಂಡಿದ್ದು, ಮೂರನೇ ಸ್ಥಾನವನ್ನು ಸಪ್ನಾ ಚೌಧರಿ ಪಡೆದುಕೊಂಡಿದ್ದಾರೆ. ನಾಲ್ಕನೇ ಸ್ಥಾನವನ್ನು ಗಾಯಕಿ ವಿದ್ಯಾ ವಾಕ್ಸ್ ಹಾಗೂ ಐದನೇ ಸ್ಥಾನವನ್ನು ನಟಿ ದಿಶಾ ಪಠಾಣಿ ಪಡೆದುಕೊಂಡಿದ್ದಾರೆ.

    ಎಸ್‍ಎಸ್ ರಾಜಮೌಳಿ ನಿರ್ದೇಶನದ ‘ಬಾಹುಬಲಿ- ದಿ ಕನ್‍ಕ್ಲೂಶನ್’ ಚಿತ್ರ ಈ ವರ್ಷ ಗೂಗಲ್ ನಲ್ಲಿ ಟಾಪ್ ಟ್ರೆಂಡಿಂಗ್ ಆಗಿದ್ದ ಸರ್ಚ್ ವಿಷಯ. ಬಾಹುಬಲಿ-2 ಚಿತ್ರದ ನಂತರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2ನೇ ಸ್ಥಾನವನ್ನು ಪಡೆದುಕೊಂಡಿದೆ. ಪಂದ್ಯದ ಲೈವ್ ಸ್ಕೋರ್ ತಿಳಿಯಲು ಜನರು ಗೂಗಲ್ ಸರ್ಚ್ ಮಾಡಿದ್ದಾರೆ.

    ಈ ವರ್ಷ ಅತಿಯಾಗಿ ಸರ್ಚ್ ಆಗಿರುವ ಟಾಪ್ ಟ್ರೆಂಡಿಂಗ್ ಎಂಟರ್ ಟೈನರ್, ಟಾಪ್ ಟ್ರೆಂಡಿಂಗ್ ಮೂವಿಸ್, ಟಾಪ್ ಟ್ರೆಂಡಿಂಗ್ ಸಾಂಗ್ಸ್, ಟಾಪ್ ಟೆಂಡ್ರಿಂಗ್ ನ್ಯೂಸ್ ಇವೆಲ್ಲದರ ಬಗ್ಗೆ ಗೂಗಲ್ ಮಾಹಿತಿ ನೀಡಿದೆ. ಒಟ್ಟಾರೆ ಟಾಪ್ ಟ್ರೆಂಡಿಂಗ್ ಸರ್ಚ್‍ನಲ್ಲಿ ದಂಗಲ್ ಚಿತ್ರ ಮೊದಲ ಸ್ಥಾನದಲ್ಲಿದ್ದು, ಹಾಫ್ ಗರ್ಲ್ ಫ್ರೆಂಡ್ ಎರಡನೇ ಸ್ಥಾನದಲ್ಲಿದೆ. ಆದಾದ ಬಳಿಕ ಬದ್ರಿನಾಥ್ ಕೀ ದುಲ್ಹಾನಿಯಾ ಹಾಗೂ ಚಾಂಪಿಯನ್ಸ್ ಟ್ರೋಫಿ ಮೂರನೇ ಮತ್ತು ನಾಲ್ಕನೇ ಸ್ಥಾನ ಪಡೆದುಕೊಂಡಿದೆ.

    ಟಾಪ್ ಟ್ರೆಂಡಿಂಗ್ ಬಾಲಿವುಡ್ ಸಾಂಗ್ಸ್ ನಲ್ಲಿ ಅರ್ಜುನ್ ಕಪೂರ್ ನಟಿಸಿದ ಮುಬಾರಖಾನ್ ಚಿತ್ರದ ‘ಹವಾ ಹವಾ’ ಹಾಡು ಮೊದಲನೇ ಸ್ಥಾನದಲ್ಲಿದೆ. ಟಾಪ್ ಟ್ರೆಂಡಿಂಗ್ ನ್ಯೂಸ್ ನಲ್ಲಿ ಸಿಬಿಎಸ್‍ಇ ಫಲಿತಾಂಶ, ಉತ್ತರಪ್ರದೇಶ ಚುನಾವಣೆ ಹಾಗೂ ಜಿಎಸ್‍ಟಿ ಒಳಗೊಂಡಿದೆ.

                                                                                                  ಆರ್ಶಿ ಖಾನ್
                                                                                                  ಸಪ್ನಾ ಚೌಧರಿ
                                                                                                                 ವಿದ್ಯಾ ವಾಕ್ಸ್ 

     

                                                                                                            ದಿಶಾ ಪಠಾಣಿ