Tag: ಗೂಗಲ್ ಡೂಡಲ್

  • ಗಣರಾಜ್ಯೋತ್ಸವ ಸಂಭ್ರಮ: ಗೂಗಲ್ ಡೂಡಲ್‍ನಿಂದ ವಿಶೇಷ ಗೌರವ

    ಗಣರಾಜ್ಯೋತ್ಸವ ಸಂಭ್ರಮ: ಗೂಗಲ್ ಡೂಡಲ್‍ನಿಂದ ವಿಶೇಷ ಗೌರವ

    ನವದೆಹಲಿ: 73ನೇ ಗಣರಾಜ್ಯೋತ್ಸವದ ಸ್ಮರಣಾರ್ಥವಾಗಿ ಗೂಗಲ್ ಡೂಡಲ್ ವಿಶೇಷ ಗೌರವವನ್ನು ಸಲ್ಲಿಸಿದೆ.

    ಈ ಎನಿಮೆಟೆಡ್ ಡೂಡಲ್‍ನಲ್ಲಿ ರಾಷ್ಟ್ರದ ಹೆಮ್ಮೆಯನ್ನು ಪ್ರತಿಬಿಂಬಿಸುವ ಅಂಶಗಳನ್ನು ಪ್ರದರ್ಶಿಸಲಾಗಿದೆ. ಗೂಗಲ್ ಸರ್ಚ್ ಇಂಜಿನ್‍ನ ಎಲ್ಲಾ ಅಕ್ಷರಗಳು ಗಣರಾಜ್ಯೋತ್ಸವದ ನಿಮಿತ್ತ ಮೆರವಣಿಗೆ ಮಾಡುತ್ತಿರುವುದನ್ನು ನೋಡಬಹುದಾಗಿದೆ.

    ಈ ಮೆರವಣಿಗೆಯಲ್ಲಿ ಆನೆ, ಕುದುರೆ, ನಾಯಿ, ಒಂಟೆ, ತಬಲಾ, ಮೆರವಣಿಗೆ ಮಾರ್ಗ, ಸ್ಯಾಕ್ಸೋಫೋನ್, ಪಾರಿವಾಳ, ಹಾಗೂ ರಾಷ್ಟ್ರಧ್ವಜದ ಬಣ್ಣಗಳನ್ನು ಗೂಗಲ್ ಡೂಡಲ್‍ನಲ್ಲಿ ಹಾಕಲಾಗಿದೆ.

    ಈ ಬಾರಿ ಗಣರಾಜ್ಯೋತ್ಸವವನ್ನು ನಾಲ್ಕು ದಿನಗಳ ಕಾಲ ಆಚರಿಸಲಾಗುತ್ತಿದೆ.. ಜನವರಿ 23ರಂದು ಸ್ವಾತಂತ್ರ್ಯ ಹೋರಾಟಗಾರ ಸುಭಾಸ್ ಚಂದ್ರ ಬೋಸ್ ಅವರ ಜನ್ಮದಿನದ ನಿಮಿತ್ತ ಅಂದಿನಿಂದಲೇ ಆಚರಣೆ ಆರಂಭವಾಗಿದೆ. ಇದನ್ನೂ ಓದಿ: UP Election: ಓವೈಸಿ ಪಕ್ಷದಿಂದ ನಾಲ್ವರು ಹಿಂದೂಗಳಿಗೆ ಟಿಕೆಟ್

    ಇಂದು ಗಣರಾಜ್ಯೋತ್ಸವದ ನಿಮಿತ್ತ ರಾಷ್ಟ್ರ ರಾಜಧಾನಿಯಲ್ಲಿ ಸ್ಥಬ್ಧ ಚಿತ್ರ ಪ್ರದರ್ಶನ, ಪರೇಡ್ ಸೇರಿದಂತೆ ಅನೇಕ ಕಾರ್ಯಕ್ರಮಗಳು ನಡೆಯಲಿದೆ. ಇದನ್ನೂ ಓದಿ: ಪದ್ಮಭೂಷಣ ಪ್ರಶಸ್ತಿ ನಿರಾಕರಿಸಿದ ಬುದ್ಧದೇವ್ ಭಟ್ಟಾಚಾರ್ಯ

  • ಲಸಿಕೆ ಜಾಗೃತಿ ಮೂಡಿಸಿದ ಗೂಗಲ್ ಡೂಡಲ್

    ಲಸಿಕೆ ಜಾಗೃತಿ ಮೂಡಿಸಿದ ಗೂಗಲ್ ಡೂಡಲ್

    ನವದೆಹಲಿ: ವಿಶ್ವದಲ್ಲೇ ಓಮಿಕ್ರಾನ್ ಹಾಗೂ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಅಧಿಕಗೊಳ್ಳುತ್ತಿದೆ. ಇದಕ್ಕಾಗಿ ಗೂಗಲ್ ಡೂಡಲ್ ಕೊರೊನಾ, ಓಮಿಕ್ರಾನ್‍ನನ್ನು ತಡೆಯಲು ಮಾಸ್ಕ್ ಹಾಗೂ ಇನ್ನಿತರೆ ಸುರಕ್ಷಿತ ಕ್ರಮಗಳನ್ನು ಅನುಸರಿಸಿ ಜಾಗೃತಿ ಮೂಡಿಸುವ ಪ್ರಯತ್ನವನ್ನು ಮಾಡಿದೆ.

    ಈ ಅನಿಮೇಟೆಡ್ ಡೂಡಲ್‍ನಲ್ಲಿ, ಕೊರೊನಾ ಲಸಿಕೆ ತೆಗೆದುಕೊಂಡ ನಂತರ ಗೂಗಲ್ ಸರ್ಚ್ ಎಂಜಿನ್‍ನ ಎಲ್ಲಾ ಅಕ್ಷರಗಳು ಮಾಸ್ಕ್ ಹಾಕಿಕೊಂಡು ಸಂಭ್ರಮಿಸುತ್ತಿರುವುದನ್ನು ಗೂಗಲ್‍ನಲ್ಲಿ ಕಾಣಬಹುದು.

    ಮಾಸ್ಕ್ ಹಾಗೂ ಲಸಿಕೆಯನ್ನು ಹಾಕಿಕೊಂಡು ಎಲ್ಲರೂ ತಮ್ಮ ಜೀವವನ್ನು ಉಳಿಸಿಕೊಳ್ಳಿ ಎಂದು ಗೂಗಲ್ ಡೂಡಲ್ ಸಂದೇಶವನ್ನು ಸಾರಿದೆ. ಕೊರೊನಾ ಕುರಿತು ಮಾಹಿತಿ ಪಡೆಯಲು ಹಾಗೂ ಲಸಿಕೆಯನ್ನು ಪಡೆದುಕೊಳ್ಳಲು ಹತ್ತಿರದ ಮಾಹಿತಿ ಕೇಂದ್ರಗಳು ಎಲ್ಲಿವೆ ಎನ್ನುವುದರ ಕುರಿತು ಇದರಲ್ಲಿ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ.

    ಕೊರೊನಾ ಲಸಿಕೆ ಪಡೆಯದವರಿಗೆ ತಮ್ಮ ಹತ್ತಿರದ ಲಸಿಕಾ ಕೇಂದ್ರ ಎಲ್ಲಿದೆ ಹಾಗೂ ಅಲ್ಲಿ ಲಸಿಕೆಯನ್ನು ಪಡೆದುಕೊಳ್ಳಲು ನೋಂದಾಯಿಸಿಕೊಳ್ಳುವುದು ಹೇಗೆ ಎನ್ನುವುದರ ಕುರಿತು ವಿವರವಾಗಿ ಮಾಹಿತಿ ದೊರೆಯುತ್ತದೆ.  ಇದನ್ನೂ ಓದಿ: ಪಕ್ಷದಿಂದ ಸಚಿವನ ಉಚ್ಛಾಟಿಸಿದ ಬಿಜೆಪಿ – ಮತ್ತೆ ‘ಕೈ’ ಹಿಡೀತಾರಾ ಹರಕ್ ಸಿಂಗ್ ರಾವತ್?

    ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 2,58,089 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಇಲ್ಲಿಯವರೆಗೆ 8,209 ಓಮಿಕ್ರಾನ್ ಪ್ರಕರಣಗಳು ಪತ್ತೆಯಾಗಿವೆ. ಲಸಿಕಾಭಿಯಾನದಲ್ಲಿ ದೇಶದಲ್ಲಿ ಇದುವರೆಗೆ ಒಂದನೇ ಹಾಗೂ ಎರಡನೇ ಲಸಿಕೆಯನ್ನು ಸೇರಿ 157.20 ಕೋಟಿ ಲಸಿಕೆ ನೀಡಲಾಗಿದೆ. ಆದರೂ ಕೊರೊನಾ ವೇಗವಾಗಿ ಹರಡುತ್ತಿದೆ. ಇದನ್ನೂ ಓದಿ: ಪಕ್ಷದಿಂದ ಸಚಿವನ ಉಚ್ಛಾಟಿಸಿದ ಬಿಜೆಪಿ – ಮತ್ತೆ ‘ಕೈ’ ಹಿಡೀತಾರಾ ಹರಕ್ ಸಿಂಗ್ ರಾವತ್?

  • ಮುಸ್ಲಿಂ ಸಮುದಾಯದ ಮೊದಲ ಶಿಕ್ಷಕಿಗೆ ಗೂಗಲ್ ಡೂಡಲ್ ವಿಶೇಷ ಗೌರವ

    ಮುಸ್ಲಿಂ ಸಮುದಾಯದ ಮೊದಲ ಶಿಕ್ಷಕಿಗೆ ಗೂಗಲ್ ಡೂಡಲ್ ವಿಶೇಷ ಗೌರವ

    ನವದೆಹಲಿ: ಮುಸ್ಲಿಂ ಸಮುದಾಯದ ಭಾರತದ ಮೊದಲ ಶಿಕ್ಷಕಿ ಎಂದು ಗುರುತಿಸಲ್ಪಟ್ಟಿರುವ ಫಾತಿಮಾ ಶೇಖ್‍ಗೆ ಗೂಗಲ್ ಡೂಡಲ್ ವಿಶೇಷ ಗೌರವ ಸಲ್ಲಿಸಿದೆ.

    ಹಿನ್ನೆಲೆ: ಫಾತಿಮಾ ಶೇಖ್ ಅವರು 1831 ಜನವರಿ 9ರಂದು ಪುಣೆಯಲ್ಲಿ ಜನಿಸಿದರು. ಫಾತಿಮಾ ತನ್ನ ಸಹೋದರ ಉಸ್ಮಾನ್‍ನೊಂದಿಗೆ ವಾಸಿಸುತ್ತಿದ್ದರು. ಕೆಳಜಾತಿಗಳ ಜನರಿಗೆ ಶಿಕ್ಷಣ ನೀಡಲು ಪ್ರಯತ್ನಿಸಿದ್ದಕ್ಕಾಗಿ ಫುಲೆ ದಂಪತಿಗಳನ್ನು ಮನೆಯಿಂದ ಹೊರಹಾಕಿದ್ದಾಗ ಫಾತಿಮಾ ಕುಟುಂಬ ಫುಲೆ ದಂಪತಿಗೆ ಆಶ್ರಯ ನೀಡಿತ್ತು. ಸಮಾಜ ಸುಧಾರಕರಾದ ಜ್ಯೋತಿರಾವ್ ಮತ್ತು ಸಾವಿತ್ರಿಬಾಯಿ ಫುಲೆ ಅವರ ಸಹ ಪ್ರವರ್ತಕರಾದ ಫಾತಿಮಾ ಶೇಖ್ ಸಮಾಜಿಕ ಸೇವೆಯಲ್ಲಿ ಭಾಗಿಯಾಗಿದ್ದರು.

    1848ರಲ್ಲಿ ಫಾತಿಮಾ ಶೇಖ್ ಶಾಲೆಯೊಂದನ್ನು ಸ್ಥಾಪಿಸಿದ್ದು, ಇದು ಭಾರತದಲ್ಲಿ ಬಾಲಕಿಯರಿಗಾಗಿ ಆರಂಭಿಸಿದ ಮೊದಲ ಶಾಲೆಯಾಗಿದೆ. ಶೇಖ್‍ಗಳ ಮನೆಯ ಛಾವಣಿಯ ಅಡಿಯಲ್ಲಿಯೇ ಫುಲೆ ದಂಪತಿ ಶಾಲೆ ಆರಂಭಿಸಿದ್ದರು. ಸಾವಿತ್ರಿಬಾಯಿ ಫುಲೆ ಮತ್ತು ಫಾತಿಮಾ ಶೇಖ್ ಅವರು ವರ್ಗ, ಧರ್ಮ ಅಥವಾ ಲಿಂಗದ ಆಧಾರದ ಮೇಲೆ ಶಿಕ್ಷಣದಿಂದ ವಂಚಿತರಾದ ದಲಿತ, ಮುಸ್ಲಿಂ ಮಹಿಳೆಯರು ಮತ್ತು ಮಕ್ಕಳಿಗೆ ಶಿಕ್ಷಣ ಕಲಿಸಿಸುತ್ತಿದ್ದರು. ಇದನ್ನೂ ಓದಿ: ಅಂಡರ್‌ಗ್ರೌಂಡ್‌ನಲ್ಲಿ ಕಂತೆ ಕಂತೆ ನೋಟು ಬಚ್ಚಿಟ್ಟಿದ್ದ ಉದ್ಯಮಿ – ಇವನ ಆಸ್ತಿ ಬಗ್ಗೆ ಮಾಹಿತಿ ನೀಡಿದ್ರೆ 10,000 ಬಹುಮಾನ

    ಭಾರತ ಸರ್ಕಾರವು 2014ರಲ್ಲಿ ಉರ್ದು ಪಠ್ಯಪುಸ್ತಕಗಳಲ್ಲಿ ಇತರ ಶಿಕ್ಷಣ ತಜ್ಞರೊಂದಿಗೆ ಫಾತಿಮಾ ಶೇಖ್ ಅವರ ಸಾಧನೆಗಳನ್ನು ಸೇರಿಸುವ ಮೂಲಕ ಫಾತಿಮಾ ಅವರ ಕಾರ್ಯಗಳನ್ನು ಮತ್ತಷ್ಟು ಪರಿಚಯಿಸಿತು. ಇದನ್ನೂ ಓದಿ: ಪಾಠ ಮಾಡುವ ಗುರುಗಳಿಗೆ ಇನ್ಮುಂದೆ ಸರ್, ಮೇಡಂ ಎನ್ನುವಂತಿಲ್ಲ!

  • ಭಾರತದ ಮೊದಲ ಮಹಿಳಾ ಶಾಸಕಿ ಡಾ. ಮುತ್ತುಲಕ್ಷ್ಮಿ ರೆಡ್ಡಿಗೆ ಗೂಗಲ್ ಡೂಡಲ್ ಗೌರವ

    ಭಾರತದ ಮೊದಲ ಮಹಿಳಾ ಶಾಸಕಿ ಡಾ. ಮುತ್ತುಲಕ್ಷ್ಮಿ ರೆಡ್ಡಿಗೆ ಗೂಗಲ್ ಡೂಡಲ್ ಗೌರವ

    ನವದೆಹಲಿ: ಇಂದು ಭಾರತದ ಮೊದಲ ಮಹಿಳಾ ಶಾಸಕಿ ಡಾ. ಮುತ್ತುಲಕ್ಷ್ಮಿ ರೆಡ್ಡಿ ಅವರ 133ರ ಹುಟ್ಟುಹಬ್ಬ. ಈ ಹಿನ್ನೆಲೆ ಗೂಗಲ್ ತನ್ನ ಡೂಡಲ್‍ನಲ್ಲಿ ಗೌರವ ಸಲ್ಲಿಸಿದೆ.

    ಭಾರತೀಯ ವೈದ್ಯೆ, ಪತ್ರಕರ್ತೆ, ಸಾಮಾಜಿಕ ಸುಧಾರಕಿ, ಪದ್ಮಭೂಷಣ ಪ್ರಶಸ್ತಿ ವಿಜೇತೆ, ಹಾಗೂ ಭಾರತದ ಮೊಟ್ಟ ಮೊದಲ ಮಹಿಳಾ ಶಾಸಕಿ ಎಂಬ ಕೀರ್ತಿಗೆ ಡಾ. ಮುತ್ತುಲಕ್ಷ್ಮಿ ರೆಡ್ಡಿ ಭಾಜನರಾಗಿದ್ದಾರೆ. ಇಂದು ಈ ಸಾಧಕಿಯ ಜನ್ಮದಿನವಾಗಿದೆ.

    ಮುತ್ತುಲಕ್ಷ್ಮಿ ಅವರು, 1886ರ ಜುಲೈ 30ರಂದು ತಮಿಳುನಾಡಿನ ಪುದುಕೋಟೆಯ ರಾಜವಂಶದ ಕುಟುಂಬದಲ್ಲಿ ಜನಿಸಿದ್ದರು. ಮುತ್ತುಲಕ್ಷ್ಮಿ ಅವರ ತಂದೆ ಎಸ್.ನಾರಾಯಣಸ್ವಾಮಿ ಹಾಗೂ ತಾಯಿ ಹೆಸರು ಚಂದ್ರಮಳಲ್. ಮಹಿಳಾ ಶಿಕ್ಷಣಕ್ಕೆ ಭಾರಿ ವಿರೋಧವಿದ್ದ ಕಾಲದಲ್ಲೇ ಮುತ್ತುಲಕ್ಷ್ಮಿ ಅವರು ಉನ್ನತ ಶಿಕ್ಷಣ ಪಡೆದಿದ್ದರು. 1912ನಲ್ಲಿ ಪದವಿ ಮುಗಿಸಿದ ಮುತ್ತುಲಕ್ಷ್ಮಿ ಅವರು ಭಾರತದಲ್ಲಿ ವೈದ್ಯಕೀಯ ಪದವಿ ಪಡೆದು ಮೊದಲ ಮಹಿಳಾ ವೈದ್ಯರಾದರು.

    1914ರಲ್ಲಿ ಡಾ. ಸುಂದರ ರೆಡ್ಡಿ ಅವರನ್ನು ಮುತ್ತುಲಕ್ಷ್ಮಿ ಅವರು ವಿವಾಹವಾದರು. 1927ರಲ್ಲಿ ಇವರು ಮದ್ರಾಸ್ ಶಾಸಕಾಂಗ ಸಭೆಗೆ ನೇಮಕಗೊಂಡರು. ಈ ಮೂಲಕ ಬ್ರಿಟಿಷ್ ಇಂಡಿಯಾದ ಮೊದಲ ಮಹಿಳಾ ಶಾಸಕಿಯಾಗಿ ಹೊರಹೊಮ್ಮಿದರು. ದೇವದಾಸಿ ಪದ್ಧತಿಯನ್ನು ನಿಷೇಧಿಸುವಲ್ಲಿ ಇವರು ಪ್ರಮುಖ ಪಾತ್ರ ವಹಿಸಿದ್ದರು.

    1930ರಲ್ಲಿ ಅವರು ಮದ್ರಾಸ್ ಶಾಸನ ಸಭೆಗೆ ರಾಜೀನಾಮೆ ನೀಡಿದರು. ಬಳಿಕ ಮಹಿಳಾ ಸಂಘದ ಸಂಸ್ಥಾಪಕ-ಅಧ್ಯಕ್ಷರಾಗಿದ್ದರು ಮತ್ತು ಮದ್ರಾಸ್ ಕಾರ್ಪೊರೇಶನ್ ನ ಮೊದಲ ಆಲ್ಡರ್ ವುಮನ್ ಆಗಿ ನೇಮಕವಾದರು. ಭಾರತಕ್ಕೆ ಸ್ವಾತಂತ್ರ್ಯ ತಂದುಕೊಡುವಲ್ಲಿ ಮುತ್ತುಲಕ್ಷ್ಮಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಮಹಾತ್ಮ ಗಾಂಧಿಜೀ ಅವರೊಂದಿಗೆ ಸೇರಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದರು. ಉಪ್ಪಿನ ಸತ್ಯಾಗ್ರಹದಲ್ಲಿ ಕೂಡ ಮುತ್ತುಲಕ್ಷ್ಮಿ ಅವರು ಭಾಗವಹಿಸಿದ್ದರು.

    ಕ್ಯಾನ್ಸರ್‍ನಿಂದ ತಮ್ಮ ಸಹೋದರಿ ತೀರಿಹೋದ ಬಳಿಕ ಮುತ್ತುಲಕ್ಷ್ಮಿ ಅವರು 1954ರಲ್ಲಿ ಚೆನ್ನೈನಲ್ಲಿ ಅಡ್ಯಾರ್ ಕ್ಯಾನ್ಸರ್ ಸಂಸ್ಥೆಯನ್ನು ಸ್ಥಾಪಿಸಿದರು. ಈ ಸಂಸ್ಥೆಯೂ ವಿಶ್ವದ ಅತ್ಯಂತ ಗೌರವಾನ್ವಿತ ಅಂಕಾಲಾಜಿ ಕೇಂದ್ರಗಳಲ್ಲಿ ಒಂದಾಗಿದ್ದು, ಪ್ರತಿವರ್ಷ 80 ಸಾವಿರಕ್ಕೂ ಹೆಚ್ಚು ರೋಗಿಗಳು ಇಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಮುತ್ತುಲಕ್ಷ್ಮಿ ಅವರು ದೇಶಕ್ಕೆ ನೀಡಿರುವ ಅತ್ಯುತ್ತಮ ಕೊಡುಗೆಗಾಗಿ ಭಾರತ ಸರ್ಕಾರ 1956ರಲ್ಲಿ ಅವರಿಗೆ ಪದ್ಮ ಭೂಷಣ ಪ್ರಶಸ್ತಿ ನೀಡಿ ಗೌರವಿಸಿತ್ತು. 1968ರ ಜುಲೈ 22ರಂದು ಚೆನ್ನೈನಲ್ಲಿ ಮುತ್ತುಲಕ್ಷ್ಮಿ ಅವರು ನಿಧನರಾದರು.

  • ಗೂಗಲ್ ಡೂಡಲ್ ನಲ್ಲಿ ಸರ್.ಎಂ. ವಿಶ್ವೇಶ್ವರಯ್ಯ

    ಗೂಗಲ್ ಡೂಡಲ್ ನಲ್ಲಿ ಸರ್.ಎಂ. ವಿಶ್ವೇಶ್ವರಯ್ಯ

    ಬೆಂಗಳೂರು: ಇಂದು ಕನ್ನಡಿಗರ ಹೆಮ್ಮೆಯ ಸರ್.ಎಂ. ವಿಶ್ವೇಶ್ವರಯ್ಯ ಅವರ 157ನೇ ಜನ್ಮದಿನವಾಗಿದ್ದು, ಈ ಹಿನ್ನೆಲೆಯಲ್ಲಿ ಗೂಗಲ್ ಅವರು ಅವರ ಫೋಟೋವನ್ನು ಡೂಡಲ್ ನಲ್ಲಿ ಹಾಕುವ ಮೂಲಕ ಅವರಿಗೆ ಗೌರವವನ್ನು ಸೂಚಿಸಿದೆ.

    ಎಂಜಿನಿಯರ್ ಗಳ ದಿನಾಚರಣೆಯನ್ನು ಸರ್.ಎಂ. ವಿಶ್ವೇಶ್ವರಯ್ಯ ಜನ್ಮ ದಿನವೆಂದು ಆಚರಿಸಲಾಗುತ್ತದೆ. ವಿಶ್ವೇಶ್ವರಯ್ಯ ಅವರು ಎಂಜಿನಿಯರ್ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿದ್ದು, ಜೊತೆಗೆ ಸೇವೆ ಸಲ್ಲಿಸಿದ್ದಾರೆ. ಆದ್ದರಿಂದ ಅವರ ಹುಟ್ಟುಹಬ್ಬವನ್ನು ಎಂಜಿನಿಯರ್ಸ್ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ.

    ಇವರು ಪೂರ್ಣ ಹೆಸರು ಮೋಕ್ಷಗುಂಡಂ ವಿಶ್ವೇಶ್ವರಯ್ಯ, ಇವರು ಸೆಪ್ಟೆಂಬರ್ 15, 1861ರಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿ ಗ್ರಾಮದಲ್ಲಿ ಜನಿಸಿದ್ದರು. ಪುಣೆಯ ವಿಜ್ಞಾನ ಕಾಲೇಜಿನಲ್ಲಿ ಸಿವಿಲ್ ಎಂಜಿನಿಯರಿಂಗ್ ಪದವಿಯನ್ನು ಪಡೆದುಕೊಂಡಿದ್ದರು.

    ವಿಶ್ವೇಶ್ವರಯ್ಯ ಅವರು ಮೊದಲು 1884ರಲ್ಲಿ ಮುಂಬಯಿ ನಗರದಲ್ಲಿ ಲೋಕೋಪಯೋಗಿ ಇಲಾಖೆಗೆ ಸೇರುವ ಮೂಲಕ ವೃತ್ತಿ ಜೀವನ ಆರಂಭಿಸಿದರು. ಬಳಿಕ 1912ರಿಂದ 1918ರವರೆಗೆ ವಿಶ್ವೇಶ್ವರಯ್ಯನವರು ಮೈಸೂರಿನ ದಿವಾನರಾಗಿದ್ದರು. ಮೈಸೂರಿನ ಕೃಷ್ಣರಾಜಸಾಗರ (ಕೆಆರ್‍ಎಸ್) ಡ್ಯಾಂನ ನಿರ್ಮಾಣ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಅಣೆಕಟ್ಟು ನಿರ್ಮಾಣ ಮಾಡಲು ಇವರೇ ಸ್ಪೂರ್ತಿಯಾಗಿದ್ದರಿಂದ ಇಂದಿಗೂ ಕೆಆರ್ ಎಸ್ ನಿರ್ಮಾಣವನ್ನು ವಿಶ್ವೇಶ್ವರಯ್ಯ ಅವರ ಕೊಡುಗೆ ಎಂದು ಗುರುತಿಸಲಾಗುತ್ತದೆ.

    ವಿಶ್ವೇಶ್ವರಯ್ಯನವರು ದಿವಾನರಾಗಿದ್ದಾಗ ಬ್ರಿಟಿಷ್ ಸರ್ಕಾರ ಅವರಿಗೆ ‘ಸರ್’ ಪದವಿಯನ್ನು ನೀಡಿದೆ. ಬಳಿಕ ವಿಶ್ವೇಶ್ವರಯ್ಯ ಅವರು ಸಮಾಜಕ್ಕಾಗಿ ನೀಡಿರುವ ಕೊಡುಗೆಯನ್ನು ಗುರುತಿಸಿ ಭಾರತ ಸರ್ಕಾರ 1955ರಲ್ಲಿ ಅವರಿಗೆ ‘ಭಾರತ ರತ್ನ’ ನೀಡಿ ಗೌರವಿಸಲಾಗಿದೆ.

    ಅಷ್ಟೇ ಅಲ್ಲದೆ ಭಾರತ ರತ್ನ ಪಡೆದ ಮೊದಲು ಕನ್ನಡಿಗರಾಗಿದ್ದಾರೆ. ಕರ್ನಾಟಕದಲ್ಲಿ ಹೆಚ್ಚಾಗಿ ಶಾಲಾ-ಕಾಲೇಜುಗಳಿಗೆ ಇವರ ಹೆಸರನ್ನಿಟ್ಟು ಗೌರವಿಸಲಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv