Tag: ಗೂಗಲ್ ಕ್ರೋಮ್

  • ಕ್ರೋಮ್‌, ಫೈರ್‌ಫಾಕ್ಸ್‌, ಎಡ್ಜ್‌ಗೆ ಸೆಡ್ಡು – ದೇಶಿ ಬ್ರೌಸರ್‌ ಅಭಿವೃದ್ಧಿ ಪಡಿಸಿ, ಕೋಟಿ ರೂ. ಗೆಲ್ಲಿ

    ಕ್ರೋಮ್‌, ಫೈರ್‌ಫಾಕ್ಸ್‌, ಎಡ್ಜ್‌ಗೆ ಸೆಡ್ಡು – ದೇಶಿ ಬ್ರೌಸರ್‌ ಅಭಿವೃದ್ಧಿ ಪಡಿಸಿ, ಕೋಟಿ ರೂ. ಗೆಲ್ಲಿ

    ನವದೆಹಲಿ: ಭಾರತ ಸಾಫ್ಟ್‌ವೇರ್‌ ಕ್ಷೇತ್ರದಲ್ಲಿ ವಿಶ್ವದಲ್ಲೇ ಗುರುತಿಸಿಕೊಂಡಿದ್ದರೂ ಬ್ರೌಸರ್‌ (Web Browser) ವಿಷಯದಲ್ಲಿ ನಾವು ಹಿಂದಿದ್ದೇವೆ. ಈ ನಿಟ್ಟಿನಲ್ಲಿ ಗೂಗಲ್‌ ಕ್ರೋಮ್‌, ಮೊಝಿಲ್ಲಾ ಫೈರ್‌ಫಾಕ್ಸ್‌, ಮೈಕ್ರೋಸಾಫ್ಟ್‌ ಎಡ್ಜ್‌ಗೆ ಸೆಡ್ಡು ಹೊಡೆಯಲು ದೇಶೀಯವಾಗಿ ಅಭಿವೃದ್ಧಿ ಪಡಿಸುವ ಬ್ರೌಸರ್‌ಗೆ ನೆರವು ನೀಡಲು ಕೇಂದ್ರ ಸರ್ಕಾರ ಬ್ರೌಸರ್‌ ಚಾಲೆಂಜ್‌ ಆರಂಭಿಸಿದೆ.

    ಆತ್ಮನಿರ್ಭರ ಭಾರತ ಪರಿಕಲ್ಪನೆಯ ಭಾಗವಾಗಿ ದೇಶೀಯ ಬ್ರೌಸರ್‌ ಅನ್ನು ಅಭಿವೃದ್ಧಿ ಪಡಿಸಲು ಸರ್ಕಾರ ಮುಂದಾಗಿದೆ. ಈ ಸಂಬಂಧ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಇಂಡಿಯನ್ ವೆಬ್ ಬ್ರೌಸರ್ ಡೆವಲಪ್‌ಮೆಂಟ್ ಚಾಲೆಂಜ್ (Web Browser Development Challenge) ಆಯೋಜಿಸಿದೆ.

     

    ದೇಶಿ ಬ್ರೌಸರ್‌ ಯಾಕೆ?
    ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿ ಹೊರಹೊಮ್ಮುತ್ತಿರುವ ಭಾರತ ಡಿಜಿಟಲ್‌ ಭವಿಷ್ಯವನ್ನು ಭದ್ರಗೊಳಿಸುವ ಅನಿವಾರ್ಯತೆ ಇದೆ. ವಿದೇಶಿ ಬ್ರೌಸರ್‌ಗಳನ್ನು ಅವಲಂಬನೆ ತಪ್ಪಿಸಲು ಮತ್ತು ಜನರ ಡಿಜಿಟಲ್‌ ಡೇಟಾಗಳನ್ನು ರಕ್ಷಿಸಿಕೊಳ್ಳುವ ಉದ್ದೇಶದಿಂದ ಸ್ವದೇಶಿ ಬ್ರೌಸರ್‌ಗೆ ಒತ್ತು ನೀಡಲು ಸರ್ಕಾರ ಮುಂದಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ನಾವು ಕಾಶ್ಮೀರಿಗಳೊಂದಿಗೆ ಮಾತನಾಡುತ್ತೇವೆ ಹೊರತು ಪಾಕಿಸ್ತಾನಿಗಳೊಂದಿಗಲ್ಲ: ಅಮಿತ್ ಶಾ

    ಷರತ್ತು ಏನು?
    ಬ್ರೌಸರ್ ಅಂತರರಾಷ್ಟ್ರೀಯ ಮಾನದಂಡಗಳಿಗೆ ಬದ್ಧವಾಗಿರಬೇಕು ಮತ್ತು ವೈಯಕ್ತಿಕ ಡೇಟಾವನ್ನು ರಕ್ಷಿಸಬೇಕು. ಡಿಜಿಟಲ್‌ ಸಿಗ್ನೇಚರ್‌ ಒದಗಿಸುವುದರ ಜೊತೆಗೆ ಎಲ್ಲಾ ಭಾಷೆಗಳನ್ನು ಬೆಂಬಲಿಸಬೇಕು. ಅರ್ಜಿ ಸಲ್ಲಿಸುವ ಘಟಕ ಭಾರತೀಯ ನಾಗರಿಕರ ಬಳಿ ಅಥವಾ ಭಾರತೀಯ ಮೂಲದ ವ್ಯಕ್ತಿಗಳು ಕನಿಷ್ಠ 51 ಪ್ರತಿಶತದಷ್ಟು ಷೇರುಗಳನ್ನು ಹೊಂದಿರಬೇಕು. ಯಾವುದೇ ವಿದೇಶಿ ನಿಗಮದ ಅಂಗಸಂಸ್ಥೆಯಾಗಿರಬಾರದು.

    ಬಹುಮಾನ ಎಷ್ಟು?
    ಸ್ಥಳೀಯ ಬ್ರೌಸರ್ ಅನ್ನು ಯಶಸ್ವಿಯಾಗಿ ರಚಿಸುವ ಡೆವಲಪರ್‌ಗಳಿಗೆ 3.4 ಕೋಟಿ ರೂಪಾಯಿಗಳ ನಗದು ಬಹುಮಾನ ನೀಡಲಾಗುವುದು ಎಂದು ಸರ್ಕಾರ ಘೋಷಿಸಿದೆ. ದೇಶೀಯ ಸ್ಟಾರ್ಟ್‌ಅಪ್‌ಗಳು, ಶೈಕ್ಷಣಿಕ ಸಂಸ್ಥೆಗಳು ಮತ್ತು ಕಂಪನಿಗಳು ಈ ಚಾಲೆಂಜ್‌ನಲ್ಲಿ ಭಾಗವಹಿಸಲು ಸರ್ಕಾರ ಆಹ್ವಾನ ನೀಡಿದೆ.

    ಯಾರ ಪಾಲು ಎಷ್ಟು?
    ಭಾರತದಲ್ಲಿ ಸರಿ ಸುಮಾರು 85 ಕೋಟಿ ಮಂದಿ ಇಂಟರ್‌ನೆಟ್‌ ಬಳಕೆದಾರರಿದ್ದು ಗೂಗಲ್‌ ಅಭಿವೃದ್ಧಿ ಪಡಿಸಿರುವ ಕ್ರೋಮ್‌ ಬ್ರೌಸರ್‌ ಮೊದಲ ಸ್ಥಾನಲ್ಲಿದೆ. Similarweb ಡೇಟಾ ಪ್ರಕಾರ ಕ್ರೋಮ್‌ ಬಳಕೆದಾರರ ಸಂಖ್ಯೆ 88.47% ಇದ್ದರೆ, ಸಫಾರಿ 5.22%, ಮೈಕ್ರೋಸಾಫ್ಟ್‌ ಎಡ್ಜ್‌ 2%, ಸ್ಯಾಮಸಂಗ್‌ ಇಂಟರ್‌ನೆಟ್‌ 1.5%, ಮೊಝಿಲ್ಲಾ ಫೈರ್‌ಫಾಕ್ಸ್‌ ಬ್ರೌಸರನ್ನು 1.28% ಮಂದಿ ಬಳಕೆ ಮಾಡುತ್ತಿದ್ದಾರೆ. 1.53% ಮಂದಿ ಇತರೇ ಬ್ರೌಸರ್‌ ಬಳಕೆ ಮಾಡುತ್ತಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]