Tag: ಗೂಂಡಾಕಾಯ್ದೆ

  • ಹುಬ್ಬಳ್ಳಿ ಗಲಭೆ – ಪುಂಡರ ವಿರುದ್ಧ ಗೂಂಡಾ ಕಾಯ್ದೆ ಪ್ರಯೋಗಕ್ಕೆ ಪ್ಲ್ಯಾನ್

    ಹುಬ್ಬಳ್ಳಿ ಗಲಭೆ – ಪುಂಡರ ವಿರುದ್ಧ ಗೂಂಡಾ ಕಾಯ್ದೆ ಪ್ರಯೋಗಕ್ಕೆ ಪ್ಲ್ಯಾನ್

    ಹುಬ್ಬಳ್ಳಿ: ನಗರದ ಗಲಭೆ ಪ್ರಕರಣದಲ್ಲಿ ಬಂಧಿತ ಆರೋಪಿಗಳ ಪೈಕಿ 40 ಕ್ಕೂ ಹೆಚ್ಚು ಪುಂಡರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕ್ಕೆ ಪೊಲೀಸರು ಚಿಂತನೆ ನಡೆಸಿದ್ದಾರೆ.

    ಹುಬ್ಬಳ್ಳಿ ಪೊಲೀಸರು 40 ಜನ ಆರೋಪಿಗಳ ವಿರುದ್ಧ ರೌಡಿ ಶೀಟ್ ಓಪನ್ ಮಾಡಲು ಮುಂದಾಗಿದ್ದಾರೆ. ಗಲಭೆಯ ಸೂತ್ರಧಾರಿಗಳ ವಿರುದ್ಧ ಗೂಂಡಾ ಕಾಯ್ದೆ ಪ್ರಯೋಗಿಸಲು ಸಿದ್ಧತೆ ನಡೆಸಿದ್ದಾರೆ. 20 ಆರೋಪಿಗಳ ವಿರುದ್ಧ ಕಮ್ಯೂನಲ್ ಗೂಂಡಾಗಳು ಎಂದು ಗುರುತಿಸಲು ಚಿಂತನೆ ನಡೆಸಿದ್ದಾರೆ. ಇದನ್ನೂ ಓದಿ: ಹುಬ್ಬಳ್ಳಿ ಗಲಭೆ ಪ್ರಕರಣ – ಮೌಲ್ವಿ ವಾಸೀಂ ಪಠಾಣ್ ಇಂದು ಕೋರ್ಟ್‍ಗೆ

    HUBBALLI WASIM ARREST

    ಗಲಭೆಯ ಮಾಸ್ಟರ್ ಮೈಂಡ್‍ಗಳ ವಿರುದ್ಧ ಗೂಂಡಾ ಕಾಯ್ದೆ ಅಸ್ತ್ರ ಪ್ರಯೋಗಿಸಲು ಪ್ಲಾನ್ ಮಾಡಲಾಗಿದೆ. ವಸೀಂ ಪಠಾಣ್, ಮಹಮ್ಮದ್ ಆರೀಯ, ತೌಫೀಲ್ ಮುಲ್ಲಾ, ಮಲ್ಲಿಕ್ ಬೇಪಾರಿ ಕಮ್ಯೂನಲ್ ಗೂಂಡಾಗಳಾಗಿದ್ದಾರೆ. ಅಷ್ಟೇ ಅಲ್ಲ ಎಐಎಂಐಎಂನ ಇರ್ಫಾನ್ ನಾಲತವಾಡ, ಕಾರ್ಪೊರೇಟರ್ ನಜೀರ್ ಹೊನ್ಯಾಳ್, ದಾದಪೀರ್ ಬೆಟಗೇರಿ ವಿರುದ್ಧ ಗೂಂಡಾ ಅಸ್ತ್ರ ಪ್ರಯೋಗಿಸಲು ಸಿದ್ಧತೆ ನಡೆಸಿದ್ದಾರೆ. ಇದನ್ನೂ ಓದಿ: ಪತ್ನಿ ಸಂಬಳ ನೀಡದಿದ್ದಕ್ಕೆ ಶಿಕ್ಷಣ ಇಲಾಖೆಯ ಮಹಿಳಾ ಅಧಿಕಾರಿ ಮೇಲೆ ಪತಿಯಿಂದ ಹಲ್ಲೆ

    HUBBALLI INCIDENT

    ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ಲಾಬೂರಾಮ್ ಅವರಿಂದ ಪುಂಡರ ದಂಡಿಸಲು ಸಿದ್ಧತೆ ನಡೆದಿದೆ. ಹುಬ್ಬಳ್ಳಿ ಪೊಲೀಸರು ಗಲಭೆಯ ಒಬ್ಬ ಸೂತ್ರಧಾರಿಯನ್ನೂ ಬಿಡದೆ ಬೆನ್ನತ್ತಿದ್ದಾರೆ.