Tag: ಗುಹೆ

  • ‘ಮನ್ ಕಿ ಬಾತ್’ನಲ್ಲಿ 1,700ಕ್ಕೂ ಅಧಿಕ ಗುಹೆಗಳನ್ನು ಕಂಡುಹಿಡಿದ ಮೇಘಾಲಯ ವ್ಯಕ್ತಿಗೆ ಮೋದಿ ಮೆಚ್ಚುಗೆ

    ‘ಮನ್ ಕಿ ಬಾತ್’ನಲ್ಲಿ 1,700ಕ್ಕೂ ಅಧಿಕ ಗುಹೆಗಳನ್ನು ಕಂಡುಹಿಡಿದ ಮೇಘಾಲಯ ವ್ಯಕ್ತಿಗೆ ಮೋದಿ ಮೆಚ್ಚುಗೆ

    ಶಿಲ್ಲಾಂಗ್: ಭಾನುವಾರ ನಡೆದ ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು (Narendra Modi) 1,700ಕ್ಕೂ ಅಧಿಕ ಗುಹೆಗಳನ್ನು ಕಂಡುಹಿಡಿದ ಮೇಘಾಲಯದ (Meghalaya) ನಿವಾಸಿ ಬ್ರಿಯಾನ್ ಡಿ ಖರ್ಪ್ರಾನ್ (Brian D Kharpran) ಅವರನ್ನು ಮತ್ತು ಅವರ ತಂಡವನ್ನು ಶ್ಲಾಘಿಸಿದ್ದಾರೆ.

    ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ, 1964ರಲ್ಲಿ ಬ್ರಿಯಾನ್ ಶಾಲೆಗೆ ಹೋಗುವ ಹುಡುಗನಾಗಿ ತಮ್ಮ ಅನ್ವೇಷಣೆಯನ್ನು ಪ್ರಾರಂಭಿಸಿದರು. 1990ರಲ್ಲಿ ಅವರು ತಮ್ಮ ಸ್ನೇಹಿತರೊಂದಿಗೆ ಒಂದು ಸಂಘವನ್ನು ಸ್ಥಾಪಿಸಿ ಮೇಘಾಲಯದಲ್ಲಿರುವ ಅಜ್ಞಾತ ಗುಹೆಗಳ (Caves) ಬಗ್ಗೆ ಹುಡುಕಲು ಪ್ರಾರಂಭಿಸಿದರು. ಬ್ರಿಯಾನ್ ತಮ್ಮ ತಂಡದೊಂದಿಗೆ ಮೇಘಾಲಯದಲ್ಲಿ 1,700ಕ್ಕೂ ಹೆಚ್ಚು ಗುಹೆಗಳನ್ನು ಕಂಡುಹಿಡಿದರು ಮತ್ತು ರಾಜ್ಯವನ್ನು ವಿಶ್ವ ಗುಹೆ ನಕ್ಷೆಯಲ್ಲಿ ಸೇರಿಸಿದರು. ಭಾರತದ ಕೆಲವು ಉದ್ದವಾದ ಮತ್ತು ಆಳವಾದ ಗುಹೆಗಳು ಮೇಘಾಲಯದಲ್ಲಿವೆ ಎಂದರು. ಇದನ್ನೂ ಓದಿ: ಚಂದ್ರಲೋಕದಲ್ಲಿ ಜೈ ಹಿಂದ್‌ – ಮೊದಲ ಬಾರಿಗೆ ತಾಪಮಾನ ಪರೀಕ್ಷೆ

    ಅಲ್ಲದೇ ಮೇಘಾಲಯದ ಗುಹೆಗಳಿಗೆ ಭೇಟಿ ನೀಡುವಂತೆ ಪ್ರಧಾನಿ ಮೋದಿ ಜನರನ್ನು ಒತ್ತಾಯಿಸಿದರು. ಅವುಗಳಲ್ಲಿ ಕೆಲವು ದೇಶದ ಅತ್ಯಂತ ಉದ್ದವಾದ ಮತ್ತು ಆಳವಾದ ಗುಹೆಗಳಾಗಿವೆ. ಮೇಘಾಲಯ ಅಡ್ವೆಂಚರರ್ಸ್ ಸಂಘದ ಸ್ಥಾಪಕ ಕಾರ್ಯದರ್ಶಿಯಾಗಿರುವ ಬ್ರಿಯಾನ್ ಡಿ ಖರ್ಪ್ರಾನ್ ಅವರು ಇದುವರೆಗೆ ರಾಜ್ಯದಲ್ಲಿ 537.6 ಕಿಲೋ ಮೀಟರ್ ಗುಹೆಗಳನ್ನು ನಕ್ಷೆ ಮಾಡಿದ್ದಾರೆ. ಇದನ್ನೂ ಓದಿ: ಮೂರನೇ ಅತಿದೊಡ್ಡ ಆರ್ಥಿಕತೆಯಾಗುತ್ತಾ ಭಾರತ?

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮುಳ್ಳುಹಂದಿ ಬೇಟೆಯಾಡಲು ಗುಹೆಗೆ ನುಗ್ಗಿದ್ದ ಇಬ್ಬರು ಉಸಿರುಗಟ್ಟಿ ಸಾವು

    ಮುಳ್ಳುಹಂದಿ ಬೇಟೆಯಾಡಲು ಗುಹೆಗೆ ನುಗ್ಗಿದ್ದ ಇಬ್ಬರು ಉಸಿರುಗಟ್ಟಿ ಸಾವು

    ಚಿಕ್ಕಮಗಳೂರು: ಮೂಲತಃ ತಮಿಳುನಾಡಿನವರು (Tamil Nadu) ಕಾಫಿ ತೋಟದ ಕೆಲಸಕ್ಕೆ ಬಂದು ಮುಳ್ಳುಹಂದಿ (Porcupine) ಬೇಟೆಗೆ ಹಂದಿಗಳ ಗುಹೆಗೆ ನುಗ್ಗಿ ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಮಾಳಿಗನಾಡು ಗ್ರಾಮದಲ್ಲಿ ನಡೆದಿದೆ.

    ಮಾಳಿಗನಾಡು ಸಮೀಪದ ಆನೆಗುಂಡಿ ಎಸ್ಟೇಟ್‌ನ ಸಮೀಪದ ಬೆಟ್ಟದ ಸುರಂಗದಲ್ಲಿ ಮುಳ್ಳುಹಂದಿ ಹಿಡಿಯುಲು ಹೋದಾಗ ಈ ದುರ್ಘಟನೆ ಸಂಭವಿಸಿದೆ. ಮೃತರು ತಮಿಳುನಾಡು ಮೂಲದ ಕಾರ್ಮಿಕರೆಂದು ತಿಳಿದುಬಂದಿದೆ. ಮೃತರನ್ನ ಗೋವಿಂದರಾಜು (30) ಹಾಗೂ ವಿಜಯ್ ಕುಮಾರ್ (29) ಎಂದು ಗುರುತಿಸಲಾಗಿದೆ. ಬೇಟೆಗೆ ಹೋದಾಗ ಮಣ್ಣು ಕುಸಿತವಾದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇದನ್ನೂ ಓದಿ: ವಾಟರ್ ಹೀಟರ್‌ನಿಂದ ವಿದ್ಯುತ್ ಶಾಕ್ – ತಾಯಿ ಮಗು ಬಲಿ

    ಕಾಫಿ ತೋಟದಲ್ಲಿ ಕಾಳುಮೆಣಸು ಕೊಯ್ಯಲು ಬಂದಿದ್ದ ತಮಿಳುನಾಡು ಮೂಲದ ನಾಲ್ವರು ಕಾರ್ಮಿಕರು ಬೆಟ್ಟದಲ್ಲಿ ಮುಳ್ಳುಹಂದಿ ಶಿಕಾರಿಗೆ ತೆರಳಿದ್ದರು. ಮುಳ್ಳುಹಂದಿ ಗುಹೆಗೆ ಹೊಗೆ ಹಾಕಿ ನಂತರ ಒಬ್ಬೊಬ್ಬರಾಗಿ ಸುರಂಗದ ಒಳಗೆ ಹೋಗಿದ್ದಾರೆ. ಒಬ್ಬರು ಬರಲಿಲ್ಲ ಎಂದು ಮತ್ತೊಬ್ಬರು ಹೋಗಿದ್ದಾರೆ. ಕೊನೆಗೆ ಇಬ್ಬರು ವಾಪಾಸ್ಸು ಬಂದಿದ್ದು, ಇನ್ನಿಬ್ಬರು ಸುರಂಗದೊಳಗೇ ಸಿಲುಕಿದ್ದಾರೆ. ಅಲ್ಲಿಯೇ ಉಸಿರುಕಟ್ಟಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.

    ಸ್ಥಳಕ್ಕೆ ಪೊಲೀಸ್, ಅರಣ್ಯ ಹಾಗೂ ಅಗ್ನಿಶಾಮಕ ತಂಡ ಭೇಟಿ ನೀಡಿ ಗುಹೆಯಿಂದ ಶವಗಳನ್ನು ಹೊರತೆಗೆದಿದ್ದಾರೆ. ಬಣಕಲ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ಸದ್ಯಕ್ಕೆ ಟೋಲ್‌ ಸಂಗ್ರಹ ಇಲ್ಲ

  • ಎಲ್ಲರ ಗಮನ ಸೆಳೆದ ಗುಹೆಗಳ ಮಾದರಿ ಅಂಗನವಾಡಿ ವಿನ್ಯಾಸ

    ಎಲ್ಲರ ಗಮನ ಸೆಳೆದ ಗುಹೆಗಳ ಮಾದರಿ ಅಂಗನವಾಡಿ ವಿನ್ಯಾಸ

    ಚಿಕ್ಕಬಳ್ಳಾಪುರ: ಅಂಗನವಾಡಿಗಳು ಅಂದ್ರೆ ಸಾಕು ಸೋರೋ ಕಟ್ಟಡಗಳು, ಬಿರುಕು ಬಿಟ್ಟ ಗೋಡೆಗಳು, ಪಾಳು ಬೀಳೋ ಹಂತಕ್ಕೆ ತಲುಪಿರೋ ಕಟ್ಟಡಗಳೇ ಜಾಸ್ತಿ. ಇಂತಹ ಅಂಗನವಾಡಿಗಳ ಮಧ್ಯೆ ರಾಜ್ಯದಲ್ಲೇ ಮಾದರಿ ಎಂಬಂತೆ ಅಂಗನವಾಡಿಯೊಂದು ತಲೆ ಎತ್ತಿದೆ.

    ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ತಿಮ್ಮಸಂದ್ರ ಗ್ರಾಮದಲ್ಲಿ ಗುಹೆಯ ಮಾದರಿಯಲ್ಲಿ ನಿರ್ಮಾಣ ಆಗಿರೋ ಮಾಡೆಲ್ ಅಂಗನವಾಡಿ ಫಸ್ಟ್ ಲುಕ್ ಅಲ್ಲೇ ಎಲ್ಲರ ಗಮನ ಸೆಳೆಯುತ್ತಿದೆ. ಇದನ್ನೂ ಓದಿ: ಸಿಎಂ ನೋಡಲು ಡಿಸೇಂಟ್ ಆದರೆ, ನಿರ್ಣಯಗಳು ತುಂಬಾ ಸ್ಟ್ರಾಂಗ್: ಸುಧಾಕರ್

    ಅಂದಹಾಗೆ ಗ್ರಾಮದಲ್ಲಿದ್ದ ಹಳೆಯ ಅಂಗನವಾಡಿ ಸೋರೋಕೆ ಶುರುವಾಗಿ ಈಗಲೋ, ಆಗಲೋ ಕುಸಿದು ಬೀಳುವ ಹಂತಕ್ಕೆ ಬಂದು ನಿಂತಿತ್ತು. ಇದ್ರಿಂದ ಎಚ್ಚೆತ್ತ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾಧಿಕಾರಿಗಳು ಈಗ ನೂತನ ಅಂಗನವಾಡಿ ಕಟ್ಟಡ ಲೋಕಾರ್ಪಣೆ ಮಾಡಲು ಸಕಲ ಸಿದ್ಧತೆಗಳನ್ನ ನಡೆಸಿದ್ದಾರೆ.

    ದೊಡ್ಡಬಳ್ಳಾಪುರ ಕೈಗಾರಿಕಾ ಪ್ರದೇಶದಲ್ಲಿನ ಏಜಾಕ್ಸ್ ಸಂಸ್ಥೆಯ ಸಹಯೋಗದೊಂದಿಗೆ ಸಿಎಸ್‍ಆರ್ ಅನುದಾನದಡಿಯಲ್ಲಿ ಈ ಹೊಚ್ಚ ಹೊಸ ಹೈಟೆಕ್ ಮಾದರಿಯ ಅಂಗನವಾಡಿಯನ್ನ ನಿರ್ಮಿಸಲಾಗಿದೆ. 22 ಲಕ್ಷ ರೂ. ವೆಚ್ಚದಲ್ಲಿ ಮೂರು ಕೊಠಡಿಗಳುಳ್ಳ ಗುಹೆಗಳ ಮಾದರಿಯ ಕಟ್ಟಡ ಇದಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಿಡಿಪಿಒ ಅನಿತಾ ತಿಳಿಸಿದ್ದಾರೆ.

    ಕಟ್ಟಡದ ವಿನ್ಯಾಸವೇ ವಿಚಿತ್ರವಾಗಿದ್ದು, ವಿಭಿನ್ನ ಎಂಬಂತಿದೆ. ಮೂರು ಗುಹೆಗಳ ಮಾದರಿಯ ಕೊಠಡಿಗಳಲ್ಲಿ ಒಂದು ಪಾಠ ಪ್ರವಚನಕ್ಕೆ, ಮತ್ತೊಂದು ಅಡುಗೆ ಕೋಣೆ, ಮಗದೊಂದರಲ್ಲಿ ಶೌಚಾಲಯ ಹಾಗೂ ವಿಶ್ರಾಂತಿಧಾಮವಿದೆ. ಥೇಟ್ ವಿಲ್ಲಾಗಳಂತೆ ಹೈಟೆಕ್ ಆಗಿರೋ ಈ ಆಂಗನವಾಡಿ ಪುಟಾಣಿ ಮಕ್ಕಳನ್ನ ಆಕರ್ಷಿಸೋದೆ ಅಷ್ಟೇ ಅಲ್ಲದೆ ನೋಡುಗರ ಗಮನವನ್ನ ಸೆಳೆಯುತ್ತಿದೆ. ಇಂತಹ ಮಾಡೆಲ್ ಅಂಗನವಾಡಿಗಳಿಗೆ ಮತ್ತಷ್ಟು ಬೇಡಿಕೆ ಬರ್ತಿದೆ. ಇದನ್ನೂ ಓದಿ:  ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಕಾನ್ಸ್‌ಟೇಬಲ್ ಅರೆಸ್ಟ್ 

    ಅಂಗನವಾಡಿ ಕಟ್ಟಡ ನಿರ್ಮಾಣ ಅಂತಿಮವಾಗಿ ಉದ್ಗಾಟನೆಗೆ ದಿನಗಣನೆ ಶುರುವಾಗಿದ್ದು ಅಧಿಕಾರಿಗಳು ಅಂತಿಮ ಹಂತದ ಸಿದ್ದತೆಗಳನ್ನ ಮಾಡಿಕೊಳ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಪುರಾತನ ಕಾಲದ ಗುಹೆ, ಪೂಜಾ ಸಾಮಗ್ರಿಗಳು ಪತ್ತೆ

    ಪುರಾತನ ಕಾಲದ ಗುಹೆ, ಪೂಜಾ ಸಾಮಗ್ರಿಗಳು ಪತ್ತೆ

    ಬೆಂಗಳೂರು/ನೆಲಮಂಗಲ: ಜಮೀನಿನಲ್ಲಿ ಜೆಸಿಬಿ ಯಂತ್ರದ ಮೂಲಕ ಕಾಲುವೆ ಕೆಲಸ ಮಾಡುವ ವೇಳೆ ಚಾಲಕನಿಗೆ ಹಾಗೂ ಸ್ಥಳೀಯ ಜನರಿಗೆ ವಿಸ್ಮಯಕಾರಿಯ ಗುಹೆ ಪತ್ತೆಯಾಗಿ ಜನರಲ್ಲಿ ಅಚ್ಚರಿಗೆ ಕಾರಣವಾಗಿದೆ.

    ಬೆಂಗಳೂರು ಹೊರವಲಯ ಸೋಲೂರು ಸಮೀಪದ ಕುದೂರಿನ ಮಕ್ಕಳ ದೇವರ ಮಠದ ಜಮೀನಿನಲ್ಲಿ ಈ ವಸ್ತುಗಳು ಪತ್ತೆಯಾಗಿವೆ. ಪುರಾತನ ಕಾಲದ ಗುಹೆ ಹಾಗೂ ಆ ಗುಹೆಯ ಒಳ ಭಾಗದಲ್ಲಿ ಪೂಜಾ ಸಾಮಗ್ರಿಗಳು, ಮಣ್ಣಿನ ಮಡಿಕೆಗಳು ಪತ್ತೆಯಾಗಿವೆ. ಮಣ್ಣಿನ ಮಡಿಕೆಯ ಮೇಲೆ ಬಸವಯ್ಯ ಮಕ್ಕಳ ಕೊಡುಗೆ ಎಂಬ ಬರಹಕೂಡ ಕಂಡುಬಂದಿದೆ.

    ಪವಾಡವೆಂಬಂತೆ ಅಲ್ಲಿ ಸಿಕ್ಕ ದೀಪಗಳು ಎಣ್ಣೆ ಮತ್ತು ಬತ್ತಿ ಇಲ್ಲದೆ ಉರಿಯುತ್ತಿತ್ತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿಕೆ ಹೇಳಿದ್ದು, ಈ ಅಪರೂಪದ ವಸ್ತುಗಳ ಆಕರ್ಷಣೆಯ ಕೇಂದ್ರವಾಗಿ ಸ್ಥಳೀಯ ಜನರಲ್ಲಿ ಕುತೂಹಲ ಮೂಡಿಸಿದೆ. ಈ ವಿಷಯ ತಿಳಿಯತ್ತಿದ್ದಂತೆ ಗ್ರಾಮಸ್ಥರು ಪತ್ತೆಯಾದ ವಸ್ತುಗಳನ್ನು ನೋಡಲು ದೌಡಾಯಿಸುತ್ತಿದ್ದಾರೆ. ಇದನ್ನೂ ಓದಿ: ಕೊರೊನಾ 3ನೇ ಅಲೆ ಭೀತಿ – ಆರತಿ ಉಕ್ಕಡ, ಮಹದೇಶ್ವರ ಬೆಟ್ಟಕ್ಕೆ ಭಕ್ತರ ನಿಷೇಧ

  • ಪ್ರಧಾನಿ ಮೋದಿ ಧ್ಯಾನದ ಗುಹೆಯ ವಿಶೇಷತೆ ಏನು?

    ಪ್ರಧಾನಿ ಮೋದಿ ಧ್ಯಾನದ ಗುಹೆಯ ವಿಶೇಷತೆ ಏನು?

    – ಗುಹೆಯಲ್ಲಿ ಸಿಸಿಟಿವಿ, ಶೌಚಾಲಯ, ವಿದ್ಯುತ್

    ನವದೆಹಲಿ: ಲೋಕಸಮರದ ಬಹಿರಂಗ ಪ್ರಚಾರಕ್ಕೆ ತೆರೆ ಬೀಳುತ್ತಲೇ ಶನಿವಾರ ಪಹರಿ ಉಡುಗೆಯಲ್ಲಿ ಕೇದಾರನಾಥದಲ್ಲಿ ಪ್ರಧಾನಿ ಮೋದಿ ಪೂಜೆ ಸಲ್ಲಿಸಿದರು. ಅಲ್ಲಿಂದ ಮಳೆಯಲ್ಲೇ ನಡೆದು ಸುಮಾರು ಎರಡು ಕಿ.ಮೀ ದೂರವಿರುವ ಗುಹಾಲಯಕ್ಕೆ ತೆರಳಿ ಗವಿಯೊಳಗೆ ಧ್ಯಾನ ಮಾಡಿದರು. ಪ್ರಧಾನಿಗಳು ಧ್ಯಾನ ಕೈಗೊಂಡ ಗುಹಾಲಯದಲ್ಲಿ ಸಿಸಿಟಿವಿ, ಶೌಚಾಲಯ ಮತ್ತು ವಿದ್ಯುತ್ ವ್ಯವಸ್ಥೆಯನ್ನು ಒಳಗೊಂಡಿತ್ತು ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ಪ್ರಧಾನಿಗಳು ಧ್ಯಾನಕ್ಕೆ ಕುಳಿತ ಗುಹೆ ಮೂಲಭೂತ ಸೌಲಭ್ಯಗಳನ್ನು ಒಳಗೊಂಡಿತ್ತು. ಗುಹೆಯಲ್ಲಿ ಸುಸಜ್ಜಿತ ಕೋಣೆ, ಶೌಚಾಲಯ ಒಳಗೊಂಡಿತ್ತು. ಇಲ್ಲಿಯೇ ಪ್ರಧಾನಿಗಳು ಬರೋಬ್ಬರಿ 17 ಗಂಟೆಗಳ ಕಾಲ ಧ್ಯಾನ ಮಾಡಿದ್ದಾರೆ. ಸಮುದ್ರ ಮಟ್ಟದಿಂದ 12 ಸಾವಿರ ಕಿ.ಮೀ.ಎತ್ತರದಲ್ಲಿರುವ ಈ ಗುಹೆಯಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. ಗುಹೆ ಕಿಟಿಕಿಯನ್ನು ಹೊಂದಿದ್ದು, ಇಲ್ಲಿಂದಲೇ ನೇರವಾಗಿ ಕೇದಾರನಾಥ ಧಾಮದ ದರ್ಶನ ಮಾಡಬಹುದು. ಗುಹೆ 10 ಅಡಿ ಎತ್ತರವನ್ನು ಹೊಂದಿದ್ದು, ಸಾಮಾನ್ಯ ವ್ಯಕ್ತಿ ಸರಳವಾಗಿ ನಡೆದಾಡಬಹುದು.

    ಪ್ರಧಾನಿಗಳು ಕೇದಾರನಾಥ ಧಾಮಕ್ಕೆ ಬರುವ ಮೊದಲೇ ಗುಹೆಯಲ್ಲಿ ನೀರು, ವಿದ್ಯುತ ಸೇರಿದಂತೆ ಎಲ್ಲ ಸೌಲಭ್ಯವನ್ನು ಅಳವಡಿಸಲಾಗಿತ್ತು ಎಂದು ನೆಹರು ಇನ್ಸಿಟ್ಯೂಟ್ ಆಫ್ ಮೌಂಟೇನಿಯರಿಂಗ್ ಸಿಬ್ಬಂದಿ ಹೇಳಿದ್ದಾರೆ.

    ದೊಡ್ಡ ಕಲ್ಲಿನಲ್ಲಿ ಕೊರೆದು ಈ ಗುಹೆಯನ್ನು ನಿರ್ಮಿಸಲಾಗಿತ್ತು. ಬಹುದಿನಗಳವರೆಗೆ ಬಂದ್ ಆಗಿದ್ದ ಗುಹೆಯನ್ನು ಸುರಕ್ಷೆಯ ದೃಷ್ಟಿಯಿಂದ ಸಂಪೂರ್ಣವಾಗಿ ಪರಿಶೀಲಿಸಿ ಪ್ರಧಾನಿಗಳ ಧ್ಯಾನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಗುಹೆಯ ಹೊರಗಡೆ ಎಸ್‍ಪಿಜಿ ಸಿಬ್ಬಂದಿಯನ್ನು ಕಾವಲು ಇರಿಸಲಾಗಿತ್ತು.

  • ಥೈಲ್ಯಾಂಡ್ ಗುಹೆಯಲ್ಲಿ ಸಿಲುಕಿದ್ದ ಎಲ್ಲ ಮಕ್ಕಳು 17 ದಿನಗಳ ಬಳಿಕ ಹೊರಬಂದ್ರು!

    ಥೈಲ್ಯಾಂಡ್ ಗುಹೆಯಲ್ಲಿ ಸಿಲುಕಿದ್ದ ಎಲ್ಲ ಮಕ್ಕಳು 17 ದಿನಗಳ ಬಳಿಕ ಹೊರಬಂದ್ರು!

    ಚಿಯಾಂಗ್ ರಾಯ್: 17 ದಿನಗಳ ನಿರಂತರ ಕಾರ್ಯಾಚರಣೆ ಮೂಲಕ ಥೈಲ್ಯಾಂಡ್ ಥಮ್ ಲುವಾಂಗ್ ಗುಹೆಯಲ್ಲಿ ಸಿಲುಕಿದ್ದ 13 ಮಂದಿಯನ್ನು ರಕ್ಷಿಸಲಾಗಿದ್ದು, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಗುಹೆಯಲ್ಲಿ ಒಟ್ಟು 19 ಮಂದಿ ಡೈವರ್ (ಮುಳುಗು ತಜ್ಞರು) ಹೋಗಿದ್ದು, ಹಂತ ಹಂತವಾಗಿ 12 ಜನ ಮಕ್ಕಳು ಹಾಗೂ ಒಬ್ಬ ಕೋಚ್ ಅನ್ನು ಹೊರತರುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನು ಓದಿ: ಥೈಲ್ಯಾಂಡ್ ಗುಹೆಯಲ್ಲಿ ಸಿಲುಕಿದ ಮಕ್ಕಳು: ಗುಹೆಯ ವಿಶೇಷತೆ ಏನು? ಸಿಲುಕಿದ್ದು ಹೇಗೆ? ಏನಿದು ಕಾರ್ಯಾಚರಣೆ?

    ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಡೈವರ್ ಸೇರಿದಂತೆ ಅನೇಕ ನುರಿತ ತಜ್ಞರ ತಂಡಕ್ಕೆ ವಿಶ್ವದ ನಾಯಕರಿಂದ ಪ್ರಶಂಸನೆ ಕೇಳಿ ಬರುತ್ತಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಟ್ವೀಟ್ ಮಾಡುವ ಮೂಲಕ ರಕ್ಷಣಾ ಕಾರ್ಯದಲ್ಲಿ ಭಾಗವಹಿದ್ದವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. 17 ದಿನಗಳ ಕಾಲ ಹಗಲು ರಾತ್ರಿ ಎನ್ನದೇ ನಿರಂತರವಾಗಿ ಕಾರ್ಯಾಚರಣೆ ನಡೆಸಲಾಗಿತ್ತು.

    ಪಾರಾದ ಎಲ್ಲ ಮಕ್ಕಳು ಈ ಬಾರಿಯ ಫಿಫಾ ವಿಶ್ವಕಪ್ ಫೈನಲ್ ಪಂದ್ಯ ವೀಕ್ಷಣೆಯ ಟಿಕೆಟ್ ಸಿಕ್ಕಿದೆ. ಜುಲೈ 15 ರಂದು ನಡೆಯಲಿರುವ ಫೈನಲ್ ಪಂದ್ಯಕ್ಕು ಮುನ್ನ ಈ ಮಕ್ಕಳು ಗುಹೆಯಿಂದ ಪಾರಾದರೆ ಅವರಿಗೆ ಈ ಪಂದ್ಯದ ಟಿಕೆಟ್ ಗಳನ್ನು ಉಚಿತವಾಗಿ ನೀಡಲಾಗುವುದು ಎಂದು ಫಿಫಾ ಅಧ್ಯಕ್ಷರು ಈ ಹಿಂದೆ ಪ್ರಕಟಿಸಿದ್ದರು.

  • ಥೈಲ್ಯಾಂಡ್ ಗುಹೆಯಲ್ಲಿ ಸಿಲುಕಿದ ಮಕ್ಕಳು: ಗುಹೆಯ ವಿಶೇಷತೆ ಏನು? ಸಿಲುಕಿದ್ದು ಹೇಗೆ? ಏನಿದು ಕಾರ್ಯಾಚರಣೆ?

    ಥೈಲ್ಯಾಂಡ್ ಗುಹೆಯಲ್ಲಿ ಸಿಲುಕಿದ ಮಕ್ಕಳು: ಗುಹೆಯ ವಿಶೇಷತೆ ಏನು? ಸಿಲುಕಿದ್ದು ಹೇಗೆ? ಏನಿದು ಕಾರ್ಯಾಚರಣೆ?

    ಚಿಯಾಂಗ್ ರಾಯ್: ಥೈಲ್ಯಾಂಡ್ ಥಮ್ ಲುವಾಂಗ್ ಗುಹೆಯಲ್ಲಿ ಸಿಲುಕಿದ್ದ 13 ಮಂದಿ ಪೈಕಿ ಸದ್ಯ 9 ಬಾಲಕರನ್ನು ರಕ್ಷಣೆ ಮಾಡಲಾಗಿದ್ದು, ಉಳಿದ ಬಾಲಕರ ರಕ್ಷಣೆಗಾಗಿ ಕಾರ್ಯಾಚರಣೆ ನಡೆಯುತ್ತಿದೆ. ಜೀವವನ್ನು ಲೆಕ್ಕಿಸಿದೆ ವಿವಿಧ ದೇಶಗಳ ಡೈವರ್ (ಮುಳುಗು ತಜ್ಞರು) ಕಾರ್ಯಾಚರಣೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಹೀಗಾಗಿ ಇಲ್ಲಿ ಕಾರ್ಯಾಚರಣೆ ಹೇಗೆ ನಡೆಯುತ್ತಿದೆ ಎನ್ನುವ ಬಗ್ಗೆ ಕಿರು ವಿವರವನ್ನು ನೀಡಲಾಗಿದೆ.

    ಎಲ್ಲಿದೇ ಥಮ್‍ಲುವಾಂಗ್ ಗುಹೆ?
    ಥೈಲ್ಯಾಂಡ್ ದೇಶದ ಉತ್ತರ ಭಾಗದಲ್ಲಿ ಚಿಯಾಂಗ್ ರೈ ಪ್ರಾಂತ್ಯದ ಕುನ್ ನಮ್ ನಂಗ್ ಅರಣ್ಯದಲ್ಲಿ ಥಮ್ ಲುವಾಂಗ್ ನಂಗ್ ನಾನ್ ಬೆಟ್ಟವಿದೆ. ಮಯನ್ಮಾರ್ ದೇಶದ ಗಡಿ ಭಾಗದಲ್ಲಿರುವ ಈ ಗುಹೆಯಲ್ಲಿ ಬುದ್ಧನ ದೇವಾಲಯವಿದೆ. ಹೀಗಾಗಿ ಇಲ್ಲಿಗೆ ವೈಲ್ಡ್ ಬೊವಾರ್ ಫುಟ್‍ಬಾಲ್ ತಂಡದ 12 ಬಾಲಕರು ಹಾಗೂ ಕೋಚ್ ಜೂನ್ 23ರಂದು ಹೋಗಿದ್ದರು.

    ಮಳೆಯೇ ಕಾರಣ ಹೇಗೆ?
    6 ರಿಂದ 12 ವರ್ಷದ ಒಳಗಿನ ಬಾಲಕರು 25 ವರ್ಷದ ಕೋಚ್ ಜೊತೆ ಗುಹೆಯಲ್ಲಿ 4 ಕಿ.ಮೀ ಕ್ರಮಿಸಿದ್ದಾರೆ. ಈ ವೇಳೆ ಮಳೆ ಆರಂಭಗೊಂಡು ಗುಹೆ ಕೆಲವು ಭಾಗದಲ್ಲಿ ನೀರಿನಿಂದ ಆವೃತವಾಗಿದೆ. ಹೀಗಾಗಿ ಅವರಿಗೆ ಇದ್ದ ರಸ್ತೆಗಳು ಮುಚ್ಚಿ ಹೋಗಿವೆ. ಈ ವೇಳೆ ನೆರೆಯಿಂದ ಪಾರಾಗಲು ಅನಿವಾರ್ಯ ಎಂಬಂತೆ ಅವರು ಮಣ್ಣಿನ ಗುಡ್ಡದಂತಹ ಜಾಗದಲ್ಲಿ ಆಶ್ರಯ ಪಡೆದಿದ್ದರು.

    ರಕ್ಷಣಾ ಕಾರ್ಯಾಚರಣೆ ಕಷ್ಟವಾಗಿದ್ದು ಯಾಕೆ?
    ಥೈಲ್ಯಾಂಡ್‍ನಲ್ಲಿ ಈಗ ಮಳೆಗಾಲವಾಗಿದ್ದು, ಭಾರೀ ಮಳೆ ಸುರಿಯುತ್ತಿದೆ. ಇನ್ನೂ ಒಂದು ವಾರ ಕಾಲ ಮಳೆ ಬೀಳಲಿದೆ ಎಂದು ಅಲ್ಲಿನ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹೀಗಾಗಿ ದೊಡ್ಡ ದೊಡ್ಡ ಪಂಪ್‍ಗಳನ್ನು ಇಟ್ಟು ನೀರನ್ನು ಹೊರಹಾಕುವ ಪ್ರಯತ್ನ ನಡೆಯುತ್ತಿದೆ. ಮಕ್ಕಳ ಹೊರತರಲು 2 ವಾರಗಳಿಂದ ನಿರಂತರವಾಗಿ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ವಿಶ್ವದ ಅನೇಕ ರಾಷ್ಟ್ರಗಳು ನೆರವಿಗೆ ಧಾವಿಸಿದೆ. ಮಕ್ಕಳು ಇರುವ ಜಾಗಕ್ಕೆ ಹೋಗಿ ಬರಲು 5 ಗಂಟೆ ಬೇಕಾಗುತ್ತದೆ. ಗುಹೆಯ ಒಳಗಡೆ ಆಮ್ಲಜನಕ ಸಮಸ್ಯೆ ಇದೆ. ಆಮ್ಲಜನ ಸಿಲಿಂಡರ್ ಬೆನ್ನಿಗೆ ಕಟ್ಟಿಕೊಂಡು ಹೋಗಲಾಗುತ್ತದೆ. ಮಕ್ಕಳು ಸಿಲುಕಿರುವ ಜಾಗದ ಭೂ ಮೇಲ್ಭಾಗದಿಂದ ಡ್ರಿಲ್ಲಿಂಗ್ ಮಾಡಿ ಮಕ್ಕಳನ್ನು ಹೊರ ತೆಗೆಯುವ ನಿಟ್ಟಿನಲ್ಲೂ ಕಾರ್ಯಾಚರಣೆ ನಡೆದಿದೆ.

    ಸ್ಪೇಸ್ ಎಕ್ಸ್ ನೆರವು:
    ಸ್ಪೇಸ್ ಎಕ್ಸ್ ಸಂಸ್ಥಾಪಕ ಇಲಾನ್ ಮಸ್ಕ್ ಕೂಡ ತಮ್ಮ ಬೋರಿಂಗ್ ಕಂಪೆನಿಯ ತಜ್ಞರನ್ನು ಕಾರ್ಯಾಚರಣೆಯ ಸ್ಥಳಕ್ಕೆ ಕಳುಹಿಸಿ ಕೊಟ್ಟಿದ್ದು, ಹೊಸದಾಗಿ ಪುಟಾನಿ ಸಬ್‍ಮರೀನ್ ಕಳುಹಿಸಿಕೊಟ್ಟಿದ್ದಾರೆ. ಇಷ್ಟೇ ಅಲ್ಲದೆ ಮಕ್ಕಳ ರಕ್ಷಣೆಗೆ ಸಹಾಯ ನೀಡಲು ವಿಶ್ವದ ಪ್ರಮುಖ ದೇಶಗಳಾದ ಅಮೆರಿಕ, ಬ್ರಿಟನ್, ಯುರೋಪಿನ್ ಕೇವ್ ರಿಸ್ಕ್ ಸಂಘಟನೆಯೂ ಕೈ ಜೋಡಿಸಿದೆ.

    ಅಲ್ಲಿಂದ ಮಕ್ಕಳು ಪತ್ರ ಕಳುಹಿಸಿದರು:
    ಮಕ್ಕಳು ಇರುವ ಜಾಗಕ್ಕೆ ಹೋಗಿದ್ದ ಡ್ರೈವರ್ ಗಳು ಮಕ್ಕಳಿಂದ ಪತ್ರ ತಂದಿದ್ದಾರೆ. ನಾವು ಕ್ಷೇಮವಾಗಿದ್ದೇವೆ ಎಂದು ಮಕ್ಕಳು ಪತ್ರದಲ್ಲಿ ಹೇಳಿಕೊಂಡಿದ್ದಾರೆ. ಮತ್ತೊಬ್ಬ ಬಾಲಕ ಮನೆಗೆ ಬಂದ ಕೂಡಲೇ ತನಗೆ ಬಿಕನ್ ಫ್ರೈಡ್ ರೈಸ್ ಬೇಕು ಎಂದು ಬೇಡಿಕೆ ಇಟ್ಟಿದ್ದಾನೆ.

    ಕಾಪಾಡಲು ಹೋದವನೇ ಸಾವು:
    ಮಕ್ಕಳ ರಕ್ಷಣೆಗಾಗಿ ಹೋಗಿದ್ದ ಸೀಲ್ ಮಾಜಿ ಡೈವರ್ (ಮುಳುಗು ತಜ್ಞ) ಒಬ್ಬರು ಉಸಿರುಗಟ್ಟಿ ಪ್ರಾಣ ಕಳೆದುಕೊಂಡಿದ್ದಾರೆ. ನುರಿತ ಡೈವರ್ ಆಗಿದ್ದ ಸಮನ್ ಅಪಾಯವನ್ನೂ ಲೆಕ್ಕಿಸದೇ ಒಳಕ್ಕೆ ಇಳಿದಿದ್ದರು. ಆದರೆ ಹಿಂದಿರುಗುವ ವೇಲೆ ಏರ್ ಬ್ಯಾಗ್ ಖಾಲಿಯಾಗಿ ಪ್ರಜ್ಞೆ ತಪ್ಪಿ ಸಾವನ್ನಪ್ಪಿದ್ದರು. ಬ್ರಿಟಿಷ್ ಡೈವರ್ ಮೊದಲು ಮಕ್ಕಳು ಇರುವ ಸ್ಥಳವನ್ನು ಪತ್ತೆ ಮಾಡಿದ್ದು, ಅಷ್ಟೇ ಅಲ್ಲದೇ ವಿಶ್ವದ ಪ್ರಮುಖ ಡೈವರ್‍ಗಳು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ. ಥೈಲ್ಯಾಂಡ್ ದೇಶದ ಸೇನೆಯಲ್ಲಿ ಸೀಲ್ ತಂಡವೊಂದಿದೆ. ಈ ತಂಡದ 110ಕ್ಕೂ ಹೆಚ್ಚು ಡೈವರ್ ಗಳು ಕಾರ್ಯಾಚರಣೆಯಲ್ಲಿ ಮುಂಚೂಣಿಯಲ್ಲಿದ್ದಾರೆ.

    ಮಕ್ಕಳ ಸ್ಥಿತಿ ಹೇಗಿದೆ?
    ಗುಹೆಯಲ್ಲಿ ಸಿಲುಕಿರುವ ಮಕ್ಕಳಿಗೆ ಆಹಾರ, ಔಷಧಿ, ಬೆಡ್‍ಶೀಟ್ ಇನ್ನಿತರ ಸವಲತ್ತುಗಳನ್ನು ಡೈವರ್ ಗಳು ತಲುಪಿಸುತ್ತಿದ್ದಾರೆ. ಇದರಿಂದ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎನ್ನಬಹುದು. ಆದರೆ ಆಮ್ಲಜನಕದ ಪ್ರಮಾಣ ಇಳಿಕೆ ಆಗುತ್ತಿರುವುದು ಮಕ್ಕಳ ಜೀವ ರಕ್ಷಣೆಗೆ ಬಹು ದೊಡ್ಡ ಸವಾಲು. ಮಕ್ಕಳು ಹಾಗೂ ಕೋಚ್ ಇರುವ ಸ್ಥಳಕ್ಕೆ ಆಮ್ಲಜನಕವನ್ನು ದೊಡ್ಡ ಪ್ರಮಾಣದಲ್ಲಿ ಪಂಪ್ ಮಾಡಲಾಗುತ್ತಿದೆ.

    ಗುಹೆ ಹೊರಗೆ ಜಾತ್ರೆ
    ಬಾಲಕರು ಸಿಲುಕಿರುವ ಥಮ್ ಲುವಾಂಗ್ ಗುಹೆ ಹೊರ ಭಾಗದಲ್ಲಿ ಮಕ್ಕಳ ಪೋಷಕರು, ಸಂಬಂಧಿಕರು, ಬೀಡುಬಿಟ್ಟಿದ್ದಾರೆ. ರಕ್ಷಣೆಯ ಕಾರ್ಯ ವೀಕ್ಷಿಸಲು ವಿದೇಶದಿಂದಲೂ ಜನರು ಧಾವಿಸುತ್ತಿದ್ದಾರೆ. ಬೌದ್ಧ ಸನ್ಯಾಸಿಗಳು ಕೂಡ ಗುಹೆಯ ಹೊರಭಾಗದಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಊಟ, ತಿಂಡಿಗೆ ವ್ಯವಸ್ಥೆಯಾಗುತ್ತಿದೆ.