Tag: ಗುಳಿಗ

  • ಒಂದೇ ಕ್ಷೇತ್ರದಲ್ಲಿ ಒಂದೇ ಗಳಿಗೆಯಲ್ಲಿ ಅಬ್ಬರಿಸಿದ ನವ ಗುಳಿಗ- ಬೆಳ್ತಂಗಡಿಯಲ್ಲಿ ಕಣ್ತುಂಬಿಕೊಂಡ ಭಕ್ತರು

    ಒಂದೇ ಕ್ಷೇತ್ರದಲ್ಲಿ ಒಂದೇ ಗಳಿಗೆಯಲ್ಲಿ ಅಬ್ಬರಿಸಿದ ನವ ಗುಳಿಗ- ಬೆಳ್ತಂಗಡಿಯಲ್ಲಿ ಕಣ್ತುಂಬಿಕೊಂಡ ಭಕ್ತರು

    ಮಂಗಳೂರು: ಕರಾವಳಿ ಭಾಗದ ಜನರಿಂದ ಹೆಚ್ಚಾಗಿ ಆರಾಧಿಸಲ್ಪಡುವ ಗುಳಿಗ (Guliga) ದೈವಕ್ಕೆ ಸಾಮಾನ್ಯವಾಗಿ ಏಕಕಾಲದಲ್ಲಿ ಒಂದೆರಡು ದೈವಗಳು ನರ್ತನ ಸೇವೆ ಮಾಡೋದು ಇದೆ. ಆದರೆ ಇಲ್ಲಿ 9 ಗುಳಿಗ ದೈವಗಳಿಗೆ ವಿಶೇಷವಾಗಿ ನರ್ತನ ಸೇವೆ ನೀಡಲಾಗುತ್ತಿದ್ದು, ಇದು ಕರಾವಳಿಯಲ್ಲಿ ನಡೆದಿರೋ ಏಕೈಕ ನವಗುಳಿಗ ಸೇವೆ.

    ಹೌದು. ಬೆಳ್ತಂಗಡಿ (Belthangady) ತಾಲೂಕಿನ ವೇಣೂರಿನ ಬರ್ಕಾಜೆ ಎಂಬ ಪುಟ್ಟ ಗ್ರಾಮದಲ್ಲಿ ನವದುರ್ಗೆಯರ ದೇವಸ್ಥಾನದಲ್ಲಿ ಈ ನವಗುಳಿಗ ದೈವಗಳ ನರ್ತನ ಸೇವೆ ನಡೆಸಲಾಗಿತ್ತು. ದುರ್ಗಾಪರಮೇಶ್ವರಿ ಕ್ಷೇತ್ರಪಾಲಕರಾಗಿ 9 ಗುಳಿಗ ದೈವಗಳು ಇಲ್ಲಿ ನೆಲೆಯಾಗಿರೋ ಕಾರಣ ಇಲ್ಲಿ ಈ ನವ ಗುಳಿಗ ನರ್ತನ ಸೇವೆ ನಡೆಸಲಾಗಿದೆ.

    ಸಾಮಾನ್ಯವಾಗಿ ದುರ್ಗಾದೇವಿ ನೆಲೆಸಿರುವ ಕ್ಷೇತ್ರಗಳಲ್ಲಿ ಕ್ಷೇತ್ರಪಾಲಕನಾಗಿ ಗುಳಿಗ ಇದ್ದೇ ಇರ್ತಾನೆ. ಇಂತಹ ಕ್ಷೇತ್ರಗಳಲ್ಲಿ ವಾರ್ಷಿಕವಾಗಿ ಗುಳಿಗನಿಗೆ ಈ ರೀತಿಯಾಗಿ ನರ್ತನ ಸೇವೆಯನ್ನು ನೀಡಲಾಗುತ್ತದೆ. ತುಳುನಾಡಿನ ಹೆಚ್ಚಿನ ಜನರ ಮನೆಯಲ್ಲೂ ಈ ಗುಳಿಗನ ಆರಾಧನೆ ನಡೆಯುತ್ತದೆ. ಆದರೆ ಕೆಲ ವರ್ಷಗಳ ಹಿಂದೆ ಬರ್ಕಾಜೆ ಎಂಬ ಗ್ರಾಮದಲ್ಲಿ ಪುನರ್ ನಿರ್ಮಾಣವಾದ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನ (Sri Durgaparameshwari Temple) ದಲ್ಲಿ ನವ ಗುಳಿಗ ದೈವಗಳು ಕ್ಷೇತ್ರಪಾಲಕರಾಗಿ ನೆಲೆಸಿದ್ದಾರೆ ಅನ್ನೋ ವಿಚಾರ ಗೊತ್ತಾಗಿತ್ತು. ಹೀಗಾಗಿ ಆ 9 ದೈವಗಳಿಗೂ ಏಕಕಾಲದಲ್ಲಿ ನರ್ತನ ಸೇವೆ ಮಾಡಲಾಗುತ್ತಿದೆ.

    ಇದು ತುಳುನಾಡ ಇತಿಹಾಸದಲ್ಲೇ ಮೊದಲಾಗಿದ್ದು, ಇದನ್ನು ವೀಕ್ಷಿಸೋದಿಕ್ಕೆ ದೂರದ ಊರುಗಳಿಂದಲೂ ಜನ ಇಲ್ಲಿಗೆ ಬಂದಿದ್ದು ವಿಶೇಷ. ಈ ಕ್ಷೇತ್ರದಲ್ಲಿ ಪ್ರಾರ್ಥಿಸಿ ಹೋದವರಿಗೆ ಎದುರಾಗುವ ಎಲ್ಲಾ ಸಂಕಷ್ಟಗಳೂ ನಿವಾರಣೆ ಆಗುತ್ತೆ ಅನ್ನೋ ನಂಬಿಕೆ ಕೂಡಾ ಇದೆ. ಹೀಗಾಗಿ ಮುಂಬೈ, ಬೆಂಗಳೂರು, ಚೆನೈ ಮೊದಲಾದೆಡೆಯಿಂದಲೂ ಜನರು ಇಲ್ಲಿಗೆ ಆಗಮಿಸಿ ಈ ನವ ಗುಳಿಗ ನರ್ತನ ಸೇವೆಯನ್ನು ಕಣ್ತುಂಬಿಕೊಂಡಿದ್ದಾರೆ. ಇದನ್ನೂ ಓದಿ: ಏಕಕಾಲದಲ್ಲಿ ಒಂಬತ್ತು ಗುಳಿಗ ದೈವಗಳ ನರ್ತನ – ಬೆಳ್ತಂಗಡಿಯ ಬರ್ಕಜೆಯಲ್ಲಿ ಗಗ್ಗರ ಸೇವೆ

    ಕಾಂತರ ಸಿನಿಮಾ ಬಂದ ಬಳಿಕ ತುಳುನಾಡಿನ ದೈವಾರಧಾನೆ ಸಾಕಷ್ಟು ಪ್ರಚಾರ ಪಡೆದುಕೊಂಡಿದೆ. ಅದರಲ್ಲೂ ವಿಶೇಷವಾಗಿ ಕಾಂತರದ ಕ್ಷೇತ್ರಪಾಲ ಗುಳಿಗ ಹಾಗೂ ಪಂಜುರ್ಲಿ ದೈವಗಳ ನರ್ತನ ನೋಡಲು ಹೊರ ರಾಜ್ಯದಿಂದಲೂ ಜನರು ಬರಲು ಆರಂಭಿಸಿದ್ದಾರೆ. ಹೀಗಿರುವಾಗ ಈ ನವ ಗುಳಿಗಳ ನರ್ತನ ಸೇವೆ ತುಳನಾಡಿನ ಜನರಿಗೆ ಅಚ್ಚರಿ ಮೂಡಿಸಿರುವುದಂತು ಸುಳ್ಳಲ್ಲ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ದೈವಿ ಕ್ಷೇತ್ರಗಳಿಗೆ ಕಾಂತಾರ ನಟಿ ಭೇಟಿ : ಕೊರಗಜ್ಜ, ಗುಳಿಗ ಸನ್ನಿಧಿಯಲ್ಲಿ ಸಪ್ತಮಿ

    ದೈವಿ ಕ್ಷೇತ್ರಗಳಿಗೆ ಕಾಂತಾರ ನಟಿ ಭೇಟಿ : ಕೊರಗಜ್ಜ, ಗುಳಿಗ ಸನ್ನಿಧಿಯಲ್ಲಿ ಸಪ್ತಮಿ

    ದೈವ ಶಕ್ತಿಯ ಮೂಲಕವೇ ಅಪಾರ ಜನಮನ್ನಣೆ ಪಡೆದಿರುವ ಮತ್ತು ರಾಷ್ಟ್ರದಾದ್ಯಂತ ಯಶಸ್ಸಿ ಪ್ರದರ್ಶನ ಕಾಣುತ್ತಿರುವ ಕಾಂತಾರ ಸಿನಿಮಾದ ನಟಿ ಸಪ್ತಮಿ ಗೌಡ, ತಮ್ಮ ಸಿನಿಮಾದ ಗೆಲುವಿಗೆ ಕಾರಣರಾದ ದೈವಗಳಿಗೆ ಭೇಟಿ ನೀಡಿ, ಅವರ ಆಶೀರ್ವಾದ ಪಡೆದಿದ್ದಾರೆ. ತಮ್ಮ ಬಿಡುವಿಲ್ಲದ ಸಮಯದ ನಡುವೆಯೂ ಮಂಗಳೂರಿನ ದೈವೀ ಕ್ಷೇತ್ರಗಳಿಗೆ ಭೇಟಿ ನೀಡಿ, ಪ್ರಾರ್ಥನೆ ಸಲ್ಲಿಸಿದ್ದಾರೆ.

    ಮಂಗಳೂರಿನ ಕಲ್ಲಾಪು ಬಳಿಯ ಬುರ್ದುಗೋಳಿಯ ಗುಳಿಗ ದೇವಸ್ಥಾನ, ಕೊರಗ ತನಿಯ ದೈವಗಳ ಉದ್ಭವ ಶಿಲೆಯ ಆದಿಸ್ಥಳಕ್ಕೆ ಭೇಟಿ ನೀಡಿರುವ ಅವರು, ಕೆಲ ಸಮಯ ಅಲ್ಲಿಯೇ ಇದ್ದು ಪೂಜೆ ಸಲ್ಲಿಸಿದ್ದಾರೆ. ಇವರ ಜೊತೆ ಸಿನಿಮಾದಲ್ಲಿ ಕೆಲಸ ಮಾಡಿದ ಹಲವು ಸದಸ್ಯರು ಮತ್ತು ಸಪ್ತಮಿ ಕುಟುಂಬ ಕೂಡ ಈ ಸಂದರ್ಭದಲ್ಲಿ ಹಾಜರಿತ್ತು. ಕ್ಷೇತ್ರದ ಸಮಿತಿಯವರು ನಟಿಯನ್ನು ಬರಮಾಡಿಕೊಂಡು, ಕ್ಷೇತ್ರದ ಮಹಿಮೆಯನ್ನು ತಿಳಿಸಿದರು. ಇದನ್ನೂ ಓದಿ:ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ನಿರ್ಮಾಣದ ಸಿನಿಮಾದ ಶೂಟಿಂಗ್ ಮುಕ್ತಾಯ

    ಈ ಸಂದರ್ಭದಲ್ಲಿ ಮಾತನಾಡಿದ ಸಪ್ತಮಿ, ತುಳು ನಾಡಿನ ದೈವಗಳ ಆಶೀರ್ವಾದದಿಂದ ತಮ್ಮ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ದೈವಗಳ ಮೇಲೆ ನನಗೂ ನಂಬಿಕೆ ಇದೆ. ಈ ಕಾರಣದಿಂದಾಗಿಯೇ ನನ್ನನ್ನು ಕಾಂತಾರ ಸಿನಿಮಾದ ಮೂಲಕ ನಾಡಿಗೆ ಪರಿಚಯವಾದೆ. ಇದಕ್ಕೆಲ್ಲ ದೈವಗಳ ಆಶೀರ್ವಾದವೇ ಕಾರಣ. ಸಿನಿಮಾ ಮಾಡಲುವಾಗಲೇ ಅಷ್ಟೇ ಶ್ರದ್ಧೆಯಿಂದ ಕೆಲಸ ಮಾಡಿದೆ. ಈಗಲೂ ಅದೇ ಶ್ರದ್ಧೆಯಿಂದ ಇಲ್ಲಿಗೆ ಬಂದಿರುವೆ ಎಂದರು.

    ಕಾಂತಾರ ಸಿನಿಮಾದ ನಂತರ ಸಪ್ತಮಿ ಗೌಡ ಅವರಿಗೆ ಹಲವು ಆಫರ್ಸ್ ಬರುತ್ತಿದ್ದು, ಈಗಾಗಲೇ ಎರಡು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲದೇ, ಒಂದು ಸಿನಿಮಾದ ಸ್ಕ್ರೀಪ್ಟ್ ರೀಡಿಂಗ್ ಕೂಡ ನಡೆಯುತ್ತಿದೆ ಎಂದು ಅವರೇ ಸ್ವತಃ ಹೇಳಿಕೊಂಡಿದ್ದಾರೆ. ಈ ಸಿನಿಮಾದಿಂದಾಗಿ ಅವರು ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಈ ಸಕ್ಸಸ್ ಅನ್ನು ಸದ್ಯ ಸಪ್ತಮಿ ಎಂಜಾಯ್ ಮಾಡುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]