Tag: ಗುಲ್ಜಾರ್

  • ಸ್ಯಾಂಡಲ್ ವುಡ್ ಗೆ ಪ್ರವೇಶ ಮಾಡಿದ ಯುರೋಪಿನ್ ಮಾಡೆಲ್

    ಸ್ಯಾಂಡಲ್ ವುಡ್ ಗೆ ಪ್ರವೇಶ ಮಾಡಿದ ಯುರೋಪಿನ್ ಮಾಡೆಲ್

    ಬೆಂಗಳೂರು 69 ಚಲನಚಿತ್ರವನ್ನು ಟ್ರಿಪಲ್ ಎ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗಿದೆ ಮತ್ತು ಝಾಕಿರ್‌ಹುಷೇನ್ ಕರೀಂ ಖಾನ್, ದುಬೈ ಮೂಲದ ಕನ್ನಡಿಗ ಎನ್ಆರ್ಐ  ಮತ್ತು ಅವರ ಪತ್ನಿ ಗುಲ್ಜಾರ್ ಚಿತ್ರದ ನಿರ್ಮಾಪಕರು. ಬೆಂಗಳೂರು 69′, “ಟಗರು” ಖ್ಯಾತಿಯ ಅನಿತಾ ಭಟ್, 2015 ರ ಮಿಸ್ಟರ್ ವರ್ಲ್ಡ್ ಪವನ್ ಶೆಟ್ಟಿ ಮತ್ತು ತೆಲುಗು ನಟ “ಚತ್ರಪತಿ” ಶಫಿ ನಟಿಸಿದ್ದಾರೆ, ಫೆಬ್ರವರಿ 10′ 2023ರಂದು ಕರ್ನಾಟಕದಾದ್ಯಂತ ಬಿಡುಗಡೆಯಾಗಲು ಸಿದ್ಧವಾಗಿದೆ. ಇದು ಕ್ರಾಂತಿ ಚೈತನ್ಯ ನಿರ್ದೇಶನದ ಕ್ರೈಮ್ ಥ್ರಿಲ್ಲರ್.

    ಗ್ರೇಸಿಲಾ ಪಿಶ್ನರ್ ಈ ಚಿತ್ರದ ಮೂಲಕ ಭಾರತೀಯ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಚಿತ್ರಕ್ಕಾಗಿ ವಿಶೇಷ ಹಾಡೊಂದನ್ನು ಯೋಜಿಸಿರುವ ನಿರ್ಮಾಪಕ ಝಾಕಿರ್‌ ಹುಷೇನ್ ಕರೀಂ ಖಾನ್, ಅಸಾಧಾರಣ ಹಾಡಿನ ಚಿತ್ರೀಕರಣಕ್ಕಾಗಿ ಗ್ರೇಸಿಲಾ ಪಿಶ್ನರ್ ಹೆಸರಾಂತ ಯುರೋಪಿಯನ್ ಮಾಡೆಲ್, ಲ್ಯಾಟಿನ್ ಅಮೇರಿಕನ್ ನೃತ್ಯ ಸಂಯೋಜಕಿ ಅನುಬಿಸ್ ಮತ್ತು ರಷ್ಯಾ ಮತ್ತು ದಕ್ಷಿಣ ಆಫ್ರಿಕಾದ ತಂತ್ರಜ್ಞರನ್ನು ಕರೆತಂದಿದ್ದಾರೆ. ಅಮೇರಿಕನ್ ವಸ್ತ್ರ ವಿನ್ಯಾಸಕರು ಚಿತ್ರದಲ್ಲಿ ಗ್ರೇಸಿಲಾಗೆ ವೇಷಭೂಷಣಗಳನ್ನು ವಿನ್ಯಾಸಗೊಳಿಸಿದ್ದಾರೆ. ಚಿತ್ರದ ವಿಶೇಷ ಹಾಡನ್ನು ಯುನೈಟೆಡ್ ಅರಬ್ ಎಮಿರೇಟ್ಸ್‌ನ ಅನೇಕ ಸ್ಥಳಗಳಲ್ಲಿ ಚಿತ್ರೀಕರಿಸಲಾಗಿದೆ, ದುಬೈನ ಬುರ್ಜ್ ಖಲೀಫಾ ಮತ್ತು ಶಾರ್ಜಾ ಮರುಭೂಮಿಯ ಬಳಿಯ ರೆಡ್‌ಜೋನ್‌ನಂತ ಎರಿಯಾಗಳ್ಲಿ ಗ್ರೇಸಿಲಾ ಪಿಶ್ನರ್ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದರು. ಇದನ್ನೂ ಓದಿ:ಅಬ್ಬಬ್ಬಾ ಎನಿಸುವಷ್ಟಿದೆ ಸಮಂತಾ ಧರಿಸಿದ್ದ ಈ ಸೀರೆಯ ಬೆಲೆ?

    ಗ್ರೇಸಿಲಾ ಪಿಶ್ನರ್ ಅಂತರಾಷ್ಟ್ರೀಯ ಮೆಚ್ಚುಗೆ ಪಡೆದ ಚಲನಚಿತ್ರ “ಸಿಟಿ ಆಫ್ ಗಾಡ್” ನಲ್ಲಿ ನಟಿಸಬೇಕಿತ್ತು ಆದರೆ ಅವರು ವೈಯಕ್ತಿಕ ಕಾರಣಗಳಿಗಾಗಿ ಪ್ರಸ್ತಾಪವನ್ನು ತಿರಸ್ಕರಿಸಿದರು. ಚಿತ್ರಕ್ಕೆ ಪರಮೇಶ್ ಅವರ ಛಾಯಾಗ್ರಹಣವಿದೆ , ವಿಕ್ರಮ್ ಮತ್ತು ಚಂದನಾ ಸಂಗೀತ ಮತ್ತು ಸಂಕಲನವನ್ನು ಅಕ್ಷಯ್ ಪಿ ರಾವ್ ಸಂಯೋಜಿಸಿದ್ದಾರೆ , ಸಂಭಾಷಣೆಯನ್ನು ಪಿಎನ್ ವೈ ಪ್ರಸಾದ್ ಮತ್ತು ಜಯದೇವ್ ಮೋಹನ್ ಬರೆದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಅಗಲಿದ ಕೆಕೆ ಕೊನೆ ಹಾಡು ರಿಲೀಸ್ : ಭಾವುಕರಾದ ಕೇಳುಗರು

    ಅಗಲಿದ ಕೆಕೆ ಕೊನೆ ಹಾಡು ರಿಲೀಸ್ : ಭಾವುಕರಾದ ಕೇಳುಗರು

    ವಾರದ ಹಿಂದೆ ಕೋಲ್ಕತ್ತಾದಲ್ಲಿ ನಡೆದ ಕಾರ್ಯಕ್ರಮದ ನಂತರ ಹೃದಯಾಘಾತದಿಂದ ನಿಧನರಾದ ಕೆಕೆ ಎಂದೇ ಖ್ಯಾತರಾಗಿದ್ದ ಗಾಯಕ ಕೃಷ್ಣಕುಮಾರ್ ಕುನ್ನತ್ ಹಾಡಿದ ಕೊನೆಯ ಹಾಡು ರಿಲೀಸ್ ಆಗಿದೆ. ಇನ್ನಷ್ಟೇ ತೆರೆ ಕಾಣಬೇಕಿರುವ ಶೆರ್ಡಿಲ್ : ದಿ ಪಿಲಿಭೀತ್ ಸಾಗಾ ಸಿನಿಮಾದ ‘ಧೂಪ್ ಪಾನಿ ಹಹ್ನೆ ದೇ’ ಹಾಡನ್ನು ಇಂದು ಟಿ ಸೀರೀಸ್ ರಿಲೀಸ್ ಮಾಡಿದೆ.

    ಶಂತನು ಮೊಯಿತ್ರಾ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದಿರುವ ಈ ಹಾಡಿಗೆ ಗುಲ್ಜಾರ್ ಸಾಹಿತ್ಯ ಬರೆದಿದ್ದಾರೆ. ಪ್ರಕೃತಿ ಮಾತೆಯ ಕುರಿತಾದ ಹಾಡು ಇದಾಗಿದೆ. ಪರಿಸರವನ್ನು ಉಳಿಸಲು ಕೇಳಿಕೊಳ್ಳುವಂತಹ ಸಾಲುಗಳು ಈ ಹಾಡಿನಲ್ಲಿವೆ. ಹೀಗಾಗಿ ಒಂದೊಳ್ಳೆ ಹಾಡಿಗೆ ದನಿಯಾಗುವ ಮೂಲಕ ಪರಿಸರಕ್ಕೆ ತಮ್ಮ ಋಣ ತೀರಿಸಿದ್ದಾರೆ ಎಂದು ಅಭಿಮಾನಿಗಳು ಕೆಕೆ ಅವರನ್ನು ಭಾವುಕರಾಗಿ ಕೊಂಡಾಡುತ್ತಿದ್ದಾರೆ. ಇದನ್ನೂ ಓದಿ: ಚಿರಂಜೀವಿ ಸರ್ಜಾ ಅಗಲಿಕೆಗೆ ಎರಡು ವರ್ಷ : ಕುಟುಂಬದಿಂದ ಇಂದು ವಿಶೇಷ ಪೂಜೆ

    ಪಂಕಜ್ ತ್ರಿಪಾಠಿ ಸೇರಿದಂತೆ ಹಲವು ನಟರು ಈ ಸಿನಿಮಾದಲ್ಲಿದ್ದು, ಮೆಲೊಡಿ ಕಿಂಗ್ ಹಾಡಿನಿಂದಾಗಿ ಈ ಸಿನಿಮಾ ಮತ್ತಷ್ಟು ಜನರಿಗೆ ತಲುಪಲಿ ಎಂದು ಚಿತ್ರತಂಡ ಕೆಕೆ ಅವರನ್ನು ನೆನಪಿಸಿಕೊಂಡಿದೆ. ಈ ಮೂಲ ಅಗಲಿದ ಕೆಕೆಯ ಹಾಡನ್ನು ಸಾಮಾಜಿಕ ಜಾಲತಾಣದಲ್ಲೂ ಹಂಚಿಕೊಂಡಿದೆ. ಅಭಿಮಾನಿಗಳು ಈ ಹಾಡಿಗೆ ಫಿದಾ ಆಗಿದ್ದು, ಹಾಡು ಕೇಳುತ್ತಲೇ ಕಣ್ಣಿರು ಹಾಕುತ್ತಿದ್ದಾರೆ. ಕೆಕೆ ಅವರ ಕೊನೆಯ ಹಾಡು ಇದಾಗಿದ್ದರಿಂದ, ಅಭಿಮಾನಿಗಳು ಅಧಿಕ ಸಂಖ್ಯೆಯಲ್ಲಿ ಗೀತೆ ಕೇಳಿದ್ದಾರೆ.

  • ದಿಲ್ಜಿತ್‍ಗೆ ಜೊತೆಯಾದಳು ತಾಪ್ಸಿ ಪನ್ನು!

    ದಿಲ್ಜಿತ್‍ಗೆ ಜೊತೆಯಾದಳು ತಾಪ್ಸಿ ಪನ್ನು!

    – ಇದು ಹಾಕಿ ಪ್ಲೇಯರ್ ಫ್ಲಿಕರ್ ಸಿಂಗ್ ಕಥೆ

    ಬೆಂಗಳೂರು: ತಾನು ಮಾಡೋ ಪಾತ್ರಗಳೆಲ್ಲವೂ ಒಂದಿಲ್ಲೊಂದು ರೀತಿಯಲ್ಲಿ ಭಿನ್ನವಾಗಿರ ಬೇಕು ಮತ್ತು ಸವಾಲಿನದ್ದಾಗಿರಬೇಕೆಂಬ ತುಡಿತ ಹೊಂದಿರೋ ಅಪ್ಪಟ ನಟಿ ತಾಪ್ಸಿ ಪನ್ನು. ಈಕೆ ಇದೀಗ ತನ್ನ ಮನದಿಂಗಿತಕ್ಕೆ ತಕ್ಕುದಾದೊಂದು ಚಿತ್ರದಲ್ಲಿ ನಟಿಸುತ್ತಿದ್ದಾಳೆ. ಖ್ಯಾತ ಹಾಕಿ ಪ್ಲೇಯರ್ ಸಂದೀಪ್ ಸಿಂಗ್ ಅವರ ಜೀವನದ ನಿಜವಾದ ಘಟನೆಗಳನ್ನಾಧರಿಸಿದ ‘ಸೂರ್ಮಾ’ ಚಿತ್ರದಲ್ಲಿ ತಾಪ್ಸಿ ದಿಲ್ಜಿತ್ ದೂಸಾಂಜ್‍ಗೆ ಜೊತೆಯಾಗಿ ನಟಿಸುತ್ತಿದ್ದಾಳೆ.

    ಹಾಕಿ ಆಟದಲ್ಲಿ ಫ್ಲಿಕರ್ ಸಿಂಗ್ ಎಂದೇ ಖ್ಯಾತನಾಗಿರೋ ಸಂದೀಪ್ ಸಿಂಗ್ ಪಾತ್ರ ದಿಲ್ಜಿತ್‍ಗೆ ಸವಾಲಿನದ್ದಾದರೆ, ಆತನಿಗೆ ಜೊತೆಯಾಗಿ ನಟಿಸೋ ಪಾತ್ರವೂ ತಾಪ್ಸಿ ಪಾಲಿಗೆ ಚಾಲೆಂಜ್. ಇದೀಗ ಈ ಚಿತ್ರದ ಹಾಡೊಂದು ಅನಾವರಣಗೊಂಡಿದೆ. ಇದನ್ನು ಸ್ವತಃ ದಿಲ್ಜಿತ್ ಹಾಡಿರೋದು ವಿಶೇಷ. ಈ ಚಿತ್ರ ಹಾಕಿ ಆಟಕ್ಕೆ ಸಂಬಂಧಿಸಿದ್ದಾದರೂ ಕೂಡಾ ಸಂಗೀತಕ್ಕೂ ಹೆಚ್ಚಿನ ಪ್ರಾಧಾನ್ಯತೆ ಕೊಟ್ಟಿರುವುದು ಮತ್ತೊಂದು ವಿಶೇಷ.

    ದಿಲ್ಜಿತ್ ಸಿಂಗ್ ಹಾಡಿರೋ ಈ ಚಿತ್ರದ ಹಾಡನ್ನು ಬರೆದಿರುವವರು ಖ್ಯಾತ ಕವಿ ಗುಲ್ಜಾರ್. ಇದಕ್ಕೆ ಶಂಕರ್ ಇಶಾನ್ ಲಾಯ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಸಂದರ್ಭದಲ್ಲಿಯೇ ದಿಲ್ಜಿತ್ ಕವಿ ಗುಲ್ಜಾರ್ ಅವರನ್ನು ಭೇಟಿಯಾದ ಬಗ್ಗೆಯೂ ಖುಷಿಗೊಂಡಿದ್ದಾರೆ. ಜಗತ್ತಿನಲ್ಲಿಯೇ ಡೇಂಜರಸ್ ಆಗಿರೋ ಡ್ರ್ಯಾಗ್ ಫ್ಲಿಕರ್ಸ್ ಮೂಲಕವೇ ಖ್ಯಾತರಾದ ಸಂದೀಪ್ ಸಿಂಗ್ ಜೀವನದಿಂದ ಸ್ಫೂರ್ತಿ ಪಡೆದಿರೋ ಈ ಚಿತ್ರದಲ್ಲಿ ತಾಪ್ಸಿಯ ಪಾತ್ರವೂ ಗಮನಾರ್ಹವಾಗಿದೆಯಂತೆ.

    ತಾಪ್ಸಿ ಪನ್ನು ಸ್ವತಃ ಖುಷಿಯಿಂದ ಒಪ್ಪಿಕೊಂಡಿರೋ ಈ ಚಿತ್ರದ ಹಾಡೊಂದು ಇದೀಗ ಅನಾವರಣಗೊಂಡಿದೆ. ಈ ಚಿತ್ರ ಈ ವರ್ಷ ತಾಪ್ಸಿ ಅಕೌಂಟಿಗೆ ಮತ್ತೊಂದು ಹಿಟ್ ಚಿತ್ರವಾಗಿ ಜಮೆಯಾಗುತ್ತದೆಂಬ ಭರವಸೆ ಚಿತ್ರ ತಂಡದಲ್ಲಿದೆ.