Tag: ಗುಲಾಬ್ ಜಾಮೂನ್ ಸಮೋಸ

  • ಗುಲಾಬ್ ಜಾಮೂನ್ ಸಮೋಸ ಸವಿದ ವ್ಯಕ್ತಿ – ರಿಯಾಕ್ಟ್ ಮಾಡಿದ್ದೇಗೆ ಗೊತ್ತಾ?

    ಗುಲಾಬ್ ಜಾಮೂನ್ ಸಮೋಸ ಸವಿದ ವ್ಯಕ್ತಿ – ರಿಯಾಕ್ಟ್ ಮಾಡಿದ್ದೇಗೆ ಗೊತ್ತಾ?

    ನವದೆಹಲಿ: ದೆಹಲಿಯ ರಸ್ತೆಬದಿಯಲ್ಲಿ ದೊರೆಯುತ್ತಿರುವ ಗುಲಾಬ್ ಜಾಮೂನ್ ಸಮೋಸ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಸಾಮಾನ್ಯವಾಗಿ ಜನರು ರೆಸ್ಟೋರೆಂಟ್, ಹೋಟೆಲ್, ಫುಡ್ ಸ್ಟ್ರೀಟ್‍ಗಳಿಗೆ ಭೇಟಿ ನೀಡಿದಾಗ ಹೊಸ ರೀತಿಯ ವಿವಿಧ ಬಗೆಯ ಟೇಸ್ಟಿ ಫುಡ್ ಸವಿಯಲು ಹೆಚ್ಚಾಗಿ ಇಷ್ಟಪಡುತ್ತಾರೆ. ಆದರೆ ಹೊಸ ರೀತಿಯ ಟೇಸ್ಟಿ ಫುಡ್‍ಗಳು ಕೆಲವರಿ ಇಷ್ಟವಾಗುತ್ತದೆ. ಇನ್ನೂ ಕೆಲವರಿಗೆ ಇಷ್ಟವಾಗುವುದಿಲ್ಲ. ಇದನ್ನೂ ಓದಿ: ಭಾರತದ ಭದ್ರ ಬುನಾದಿ ದುರ್ಬಲಗೊಳಿಸಲಾಗುತ್ತಿದೆ: ಸೋನಿಯಾ ಗಾಂಧಿ

    ಅದೇ ರೀತಿ ದೆಹಲಿಯ ರಸ್ತೆಬದಿಯಲ್ಲಿ ಮಾರಾಟವಾಗುತ್ತಿರುವ ಗುಲಾಬ್ ಜಾಮೂನ್ ಸಮೋಸ ತಿಂದ ವ್ಯಕ್ತಿಯ ರಿಯಾಕ್ಷನ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅಭಿಷೇಕ್ ಎಂಬವರು ಈ ವೀಡಿಯೋವನ್ನು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

     

    View this post on Instagram

     

    A post shared by KOMAL || ABHISHEK (@thefoodiehat)

    ವೀಡಿಯೋದಲ್ಲಿ ಸಮೋಸ ಹಿಟ್ಟಿನೊಳಗೆ ಗುಲಾಬ್ ಜಾಮೂನ್ ಇಟ್ಟು, ಅದನ್ನು ಬಾಣಲಿಯಲ್ಲಿರುವ ಎಣ್ಣೆಯಲ್ಲಿ ಕರಿದು ಸರ್ವ್ ಮಾಡುತ್ತಾರೆ. ನಂತರ ಈ ಸಮೋಸ ಸವಿದ ವ್ಯಕ್ತಿ ಸೇವಿಸಲು ಆಗದೇ ಅದನ್ನು ಅರ್ಧದಲ್ಲಿಯೇ ಎಸೆದಿದ್ದಾರೆ. ಇದನ್ನೂ ಓದಿ: ನೈಟ್ ಕರ್ಫ್ಯೂ ನಿಯಮ ಉಲ್ಲಂಘಿಸಿದ್ರೆ ಎಫ್‌ಐಆರ್ – ಬಳ್ಳಾರಿ ಎಸ್‌ಪಿ ಎಚ್ಚರಿಕೆ

    ಇದೀಗ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಇಲ್ಲಿಯವರೆಗೂ ಸುಮಾರು 20 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ ಮತ್ತು ಹಲವಾರು ಮಂದಿಕಾಮೆಂಟ್ ಮಾಡಿದ್ದಾರೆ.