Tag: ಗುಲಾಂ ನಬಿ ಅಜಾದ್

  • ಹೊಸ ರಾಜಕೀಯ ಪಕ್ಷದ ಹೆಸರು ಘೋಷಿಸಿದ ಗುಲಾಂ ನಬಿ ಅಜಾದ್

    ಹೊಸ ರಾಜಕೀಯ ಪಕ್ಷದ ಹೆಸರು ಘೋಷಿಸಿದ ಗುಲಾಂ ನಬಿ ಅಜಾದ್

    ಶ್ರೀನಗರ: ಹಿರಿಯ ರಾಜಕೀಯ ಮುಖಂಡ, ಜಮ್ಮು ಮತ್ತು ಕಾಶ್ಮೀರದ (Jammu And Kashmir) ಮಾಜಿ ಮುಖ್ಯಮಂತ್ರಿ ಗುಲಾಂ ನಬಿ ಆಜಾದ್ (Ghulam Nabi Azad) ಹೊಸ ರಾಜಕೀಯ ಪಕ್ಷವನ್ನು ಘೋಷಿಸಿದ್ದಾರೆ. ‘ಡೆಮಾಕ್ರಟಿಕ್ ಆಜಾದ್ ಪಾರ್ಟಿ’ (Democratic Azad Party) ಹೆಸರಿನ ಪಕ್ಷವನ್ನು ಘೋಷಣೆ ಮಾಡಿ ಅದರ ಧ್ವಜವನ್ನು ಇಂದು ಬಿಡುಗಡೆ ಮಾಡಿದ್ದಾರೆ.

    ಜಮ್ಮುವಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪಕ್ಷದ ಸಿದ್ಧಾಂತವು ಅವರ ಹೆಸರಿನಂತೆ ಇರುತ್ತದೆ. ಇಲ್ಲಿ ಎಲ್ಲಾ ಜಾತ್ಯತೀತ ಜನರು ಸೇರಬಹುದು ಎಂದು ಪಕ್ಷದ ಕಾರ್ಯಸೂಚಿಯನ್ನು ಸ್ಪಷ್ಟಪಡಿಸಿದ್ದರು. ಹೊಸ ಪಕ್ಷ ಜಮ್ಮು ಮತ್ತು ಕಾಶ್ಮೀರಕ್ಕೆ ಸಂಪೂರ್ಣ ರಾಜ್ಯತ್ವವನ್ನು ಮರುಸ್ಥಾಪಿಸುವುದು, ಸ್ಥಳೀಯ ಜನರಿಗೆ ಭೂಮಿ ಮತ್ತು ಉದ್ಯೋಗದ ಹಕ್ಕುಗಳನ್ನು ಪಡೆಯಲು ಹೋರಾಟವನ್ನು ಮುಂದುವರಿಸುವುದನ್ನು ಒಳಗೊಂಡಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ನಮ್ಮನ್ನು ಮೂರ್ಖರನ್ನಾಗಿಸಲು ಸಾಧ್ಯವಿಲ್ಲ: ಅಮೆರಿಕಗೆ ನೇರವಾಗಿ ಜೈಶಂಕರ್ ತಿರುಗೇಟು

    ತಮ್ಮ ಧ್ವಜದಲ್ಲಿರುವ ಹಳದಿ ಬಣ್ಣವು ಸೃಜನಶೀಲತೆ ಮತ್ತು ವೈವಿಧ್ಯತೆಯಲ್ಲಿ ಏಕತೆಯನ್ನು ಸೂಚಿಸುತ್ತದೆ. ಬಿಳಿ ಶಾಂತಿಯನ್ನು ಸೂಚಿಸುತ್ತದೆ ಮತ್ತು ನೀಲಿ ಸ್ವಾತಂತ್ರ್ಯ, ಮುಕ್ತ ಸ್ಥಳ, ಕಲ್ಪನೆ ಮತ್ತು ಸಮುದ್ರದ ಆಳದಿಂದ ಆಕಾಶದ ಎತ್ತರದವರೆಗಿನ ಮಿತಿಗಳನ್ನು ಸೂಚಿಸುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ದೇಶದ ಬಹುದೊಡ್ಡ ಭಯೋತ್ಪಾದಕ ಸಂಘಟನೆ RSS : ಭಾಸ್ಕರ್ ಪ್ರಸಾದ್

    Congress

    ಕಳೆದ ಅಗಸ್ಟ್ 26 ರಂದು ಕಾಂಗ್ರೆಸ್ (Congress) ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದ ಗುಲಾಂ ನಬಿ ಆಜಾದ್ ಐದು ದಶಕಕ್ಕೂ ಹೆಚ್ಚಿನ ಹಳೆಯ ಸಂಬಂಧವನ್ನು ಕಡಿದುಕೊಂಡಿದ್ದರು. ರಾಜೀನಾಮೆ ಬಳಿಕ ಕಾಶ್ಮೀರದಲ್ಲಿ ಪ್ರಾದೇಶಿಕ ಪಕ್ಷವನ್ನು ಸ್ಥಾಪಿಸುವುದಾಗಿ ಹೇಳಿದ್ದರು. ಅಂತೆಯೇ ಇಂದು ಹೊಸ ಪಕ್ಷದ ಹೆಸರನ್ನು ಘೋಷಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಪದ್ಮ ಪ್ರಶಸ್ತಿ ಸ್ವೀಕಾರಕ್ಕೂ ಮುನ್ನ ಪ್ರಧಾನಿ ಕಾಲಿಗೆ ನಮಸ್ಕರಿಸಿದ 125 ವಯಸ್ಸಿನ ಯೋಗಿ

    ಪದ್ಮ ಪ್ರಶಸ್ತಿ ಸ್ವೀಕಾರಕ್ಕೂ ಮುನ್ನ ಪ್ರಧಾನಿ ಕಾಲಿಗೆ ನಮಸ್ಕರಿಸಿದ 125 ವಯಸ್ಸಿನ ಯೋಗಿ

    ನವದೆಹಲಿ: ರಾಷ್ಟ್ರಪತಿ ಭವನದಲ್ಲಿ ಇಂದು ನಡೆದ ಪದ್ಮ ಪ್ರಶಸ್ತಿ ಪುರಸ್ಕಾರ ಸಮಾರಂಭ ಅಪರೂಪದ ಕ್ಷಣಗಳಿಗೆ ಸಾಕ್ಷಿ ಆಯಿತು. ವಾರಣಾಸಿಯ 125 ವರ್ಷ ವಯಸ್ಸಿನ ಯೋಗ ಗುರು ಸ್ವಾಮಿ ಶಿವಾನಂದ ಅವರು ಪ್ರಶಸ್ತಿ ಸ್ವೀಕರಿಸುವ ಮುನ್ನ ಪ್ರಧಾನಿ ಮೋದಿಗೆ ಪಾದಾಭಿವಂದನೆ ಮಾಡಿದರು. ಇದಕ್ಕೆ ಪ್ರತಿಯಾಗಿ ಮೋದಿ ಕೂಡ ಶಿರಬಾಗಿ ನಮಸ್ಕರಿಸಿದರು.

    ರಾಷ್ಟ್ರಪತಿಗಳಿಗೂ ಸ್ವಾಮಿ ಶಿವಾನಂದರು ನಮಸ್ಕರಿಸಿದರು. ರಾಷ್ಟ್ರಪತಿಗಳು ಕೂಡಲೇ ಅವರನ್ನು ಎಬ್ಬಿಸಿ ಪ್ರಶಸ್ತಿ ಪ್ರದಾನ ಮಾಡಿದರು. ಜನರಲ್ ಬಿಪಿನ್ ರಾವತ್, ಗೀತಾ ಪ್ರೆಸ್ ಮಾಲೀಕರಿಗೆ ಮರಣೋತ್ತರ ಪದ್ಮವಿಭೂಷಣ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಾಂಗ್ರೆಸ್ ಹಿರಿಯ ನಾಯಕ, ಪದ್ಮಭೂಷಣ ಗುಲಾಂ ನಬಿ ಆಜಾದ್ ಸೇರಿ ಒಟ್ಟು 63 ಗಣ್ಯರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಲಾಯಿತು. ಇದನ್ನೂ ಓದಿ: ರಾಜಕೀಯ ಪಕ್ಷಗಳು ಜನರ ನಡುವೆ ಒಡಕು ಮೂಡಿಸುತ್ತಿವೆ: ಗುಲಾಂ ನಾಬಿ ಅಜಾದ್

    ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನ ಸೇರಿದಂತೆ ಎರಡು ಪದಕ ಗೆದ್ದು ಇತಿಹಾಸ ನಿರ್ಮಿಸಿದ ಭಾರತದ ಶೂಟರ್ ಅವನಿ ಲೇಖರಾ ಅವರು ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದರು. ಜೊತೆಗೆ ಹಾಕಿ ಕ್ರೀಡಾಪಟು ವಂದನಾ ಕಟಾರಿಯಾ ಪ್ರಶಸ್ತಿ ಪಡೆದರು. ಇದನ್ನೂ ಓದಿ: ರಾಜ್ಯಸಭೆಗೆ ಕ್ರಿಕೆಟಿಗ ಹರ್ಭಜನ್ ಸಿಂಗ್ ನಾಮನಿರ್ದೇಶನ – ಅವಿರೋಧವಾಗಿ ಆಯ್ಕೆಯಾಗಲಿರುವ ಬಜ್ಜಿ

  • ಕಾಂಗ್ರೆಸ್‌ ಕೂಡ ಜನರಲ್ಲಿ ಒಡಕು ಮೂಡಿಸುತ್ತಿದೆ: ಗುಲಾಂ ನಬಿ ಅಜಾದ್‌ ಆರೋಪ ತಳ್ಳಿ ಹಾಕಿದ ಖರ್ಗೆ

    ಕಾಂಗ್ರೆಸ್‌ ಕೂಡ ಜನರಲ್ಲಿ ಒಡಕು ಮೂಡಿಸುತ್ತಿದೆ: ಗುಲಾಂ ನಬಿ ಅಜಾದ್‌ ಆರೋಪ ತಳ್ಳಿ ಹಾಕಿದ ಖರ್ಗೆ

    ನವದೆಹಲಿ: ಕಾಂಗ್ರೆಸ್‌ ಸೇರಿದಂತೆ ದೇಶದ ರಾಜಕೀಯ ಪಕ್ಷಗಳು ಜನರಲ್ಲಿ ಒಡಕು ಮೂಡಿಸುತ್ತಿವೆ ಎಂಬ ಕಾಂಗ್ರೆಸ್‌ ಹಿರಿಯ ನಾಯಕ ಗುಲಾಂ ನಬಿ ಅಜಾದ್‌ ಅವರ ಆರೋಪವನ್ನು ರಾಜ್ಯಸಭಾ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ತಳ್ಳಿ ಹಾಕಿದ್ದಾರೆ.

    ಭಾರತದಲ್ಲಿ ಯಾವುದೇ ರಾಜಕೀಯ ಪಕ್ಷಗಳು ಧರ್ಮ ಮತ್ತು ಜಾತಿ ರಾಜಕಾರಣ ಮಾಡಬಾರದು. ಧರ್ಮ ಅಥವಾ ಜಾತಿ ರಾಜಕಾರಣ ಮಾಡುವುದರಲ್ಲಿ ಕಾಂಗ್ರೆಸ್ ತೊಡಗಿಲ್ಲ. ಇದು ಅಜಾದ್ ಅವರ ವೈಯಕ್ತಿಕ ಅಭಿಪ್ರಾಯವಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ರಾಜಕೀಯ ಪಕ್ಷಗಳು ಜನರ ನಡುವೆ ಒಡಕು ಮೂಡಿಸುತ್ತಿವೆ: ಗುಲಾಂ ನಾಬಿ ಅಜಾದ್

    ಪ್ರತಿಯೊಂದು ರಾಜಕೀಯ ಪಕ್ಷಗಳು ಜಾತಿ ಮತ್ತು ಧರ್ಮದ ಆಧಾರದ ಮೇಲೆ ಜನರು ಮತ್ತು ಸಮಾಜದಲ್ಲಿ ಒಡಕು ಮೂಡಿಸುತ್ತಿವೆ. ಕಾಂಗ್ರೆಸ್ ಪಕ್ಷವೂ ಇಂತಹ ರಾಜಕೀಯ ಮಾಡುತ್ತಿದೆ. ಹಾಗೆ ಮಾಡಬಾರದು ಎಂಬುದು ನನ್ನ ಸಲಹೆ ಎಂದು ಗುಲಾಂ ನಬಿ ಅಜಾದ್‌ ಹೇಳಿಕೆ ನೀಡಿದ್ದರು.

    ಭಾರತ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, ಎಲ್ಲಾ ರಾಜಕೀಯ ಪಕ್ಷಗಳು ಭಾರತೀಯ ಸಂವಿಧಾನದ ಚೌಕಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದ್ದರು. ಇದನ್ನೂ ಓದಿ: ರಾಜ್ಯಸಭೆಗೆ ಕ್ರಿಕೆಟಿಗ ಹರ್ಭಜನ್ ಸಿಂಗ್ ನಾಮನಿರ್ದೇಶನ – ಅವಿರೋಧವಾಗಿ ಆಯ್ಕೆಯಾಗಲಿರುವ ಬಜ್ಜಿ

  • ಪ್ರಧಾನಿ ಮೋದಿ ನಮ್ಮ ದೇಶದ ಹೆಮ್ಮೆ: ಗುಲಾಂ ನಬಿ ಆಜಾದ್

    ಪ್ರಧಾನಿ ಮೋದಿ ನಮ್ಮ ದೇಶದ ಹೆಮ್ಮೆ: ಗುಲಾಂ ನಬಿ ಆಜಾದ್

    ಶ್ರೀನಗರ: ಪ್ರಧಾನಿ ನರೇಂದ್ರ ಮೋದಿ ಭಾರತ ದೇಶದ ಹೆಮ್ಮೆ. ಅವರು ತನ್ನ ಹಿಂದಿನ ದಿನಗಳ ಕುರಿತು ಮುಚ್ಚಿಡದೇ ಎಲ್ಲವನ್ನು ಹೇಳಿಕೊಂಡಿದ್ದಾರೆ ಎನ್ನುವ ಮೂಲಕ ಜಮ್ಮು ಕಾಶ್ಮೀರದ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಅವರು ಪ್ರಧಾನಿ ಮೋದಿ ಅವರನ್ನು ಗುಣಗಾನ ಮಾಡಿದ್ದಾರೆ.

    ಗುಜ್ಜರ್ ಚಾರಿಟೇಬಲ್ ಟ್ರಸ್ಟ್ ಕಾರ್ಯಕ್ರಮದಲ್ಲಿ ಮಾತನಾಡಿದ ಆಜಾದ್, ನಾನು ನಮ್ಮ ದೇಶದ ಹಲವು ನಾಯಕರ ಬಗ್ಗೆ ಹೆಮ್ಮೆ ಪಡುತ್ತೇನೆ. ಅದರಲ್ಲೂ ನನ್ನಂತೆ ಗ್ರಾಮೀಣ ಪ್ರದೇಶಗಳಿಂದ ಬಂದು ರಾಜಕೀಯದಲ್ಲಿರುವವರು ಹಲವು ನಾಯಕರಿದ್ದಾರೆ. ನಮ್ಮ ದೇಶದ ಪ್ರಧಾನಿ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ ದೇಶದ ಜನರು ಪ್ರಧಾನಿಯನ್ನು ನೋಡಿ ಹಲವು ವಿಷಯಗಳನ್ನು ಕಲಿಯಬೇಕಿದೆ. ಅವರು ಪ್ರಧಾನಿಯಾಗಿದ್ದರೂ ತಮ್ಮ ಹಿಂದಿನದಿನಗಳಲ್ಲಿ ಚಹಾ ಮಾರಾಟ ಮಾಡುತ್ತಿದ್ದ ಬಗ್ಗೆ ಹೆಮ್ಮೆಯಿಂದ ನಾನು ಚಾಯ್ ವಾಲಾ ಎಂದುಕೊಂಡಿದ್ದಾರೆ. ಮೋದಿ ತನ್ನ ಹಿಂದಿನ ಕಾಯಕವನ್ನು ಮುಚ್ಚುಮರೆಯಿಲ್ಲದೆ ಹೇಳಿಕೊಂಡಿರುವುವು ಅವರ ಒಳ್ಳೆಯ ಗುಣ ಎಂದಿದ್ದಾರೆ.

    ಕೊರೊನಾ ಮತ್ತು ಅರ್ಟಿಕಲ್ 370 ರಿಂದ ಜಮ್ಮು ಕಾಶ್ಮೀರ ಆರ್ಥಿಕವಾಗಿ ಕುಸಿದಿದೆ. ಇದರಿಂದ ಜಮ್ಮು ಕಾಶ್ಮೀರಕ್ಕೆ ಹೆಚ್ಚಿನ ಒತ್ತು ನೀಡಿ ಅಭಿವೃದ್ಧಿ ಕಾರ್ಯಗಳಿಗೆ ಸಹಕರಿಸಬೇಕಾಗಿದೆ. ಹಾಗೂ ಹೆಚ್ಚಿನ ಅನುದಾನವನ್ನು ನೀಡಿ ಕೈಗಾರಿಕೆಗಳನ್ನು ಬಲಪಡಿಸಬೇಕು ಎಂದು ಅಭಿಪ್ರಾಯಪಟ್ಟರು.

    ಕೆಲದಿನಗಳ ಹಿಂದೆ ರಾಜ್ಯಸಭೆಯಿಂದ ನಿವೃತ್ತಿಯಾದ ಆಜಾದ್ ಅವರ ಕೆಲಸವನ್ನು ಶ್ಲಾಘಿಸಿ ಪ್ರಧಾನಿ ಮೋದಿ ಭಾವುಕರಾಗಿ ಕಣ್ಣೀರು ಹಾಕಿದ್ದರು.

    ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಅಸಮಾಧಾನ ಹೊಂದಿರುವ 23 ಸದಸ್ಯರ ಗುಂಪಿನಲ್ಲಿರುವ ಆಜಾದ್ ಈಗಾಗಲೇ ಪಕ್ಷವನ್ನು ಆರಂಭದಿಂದ ಸಂಘಟಿಸಬೇಕು ಎಂದು ಹೇಳುತ್ತಿದ್ದಾರೆ. ಈ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳಿ ಹೈಕಮಾಂಡ್ ನಾಯಕರೇ ಹುಬ್ಬೇರುವಂತೆ ಮಾಡಿದ್ದಾರೆ.

  • ಪತ್ರಕ್ಕೆ ಸಹಿ ಹಾಕಿದ ನಾಯಕರಿಗಿಲ್ಲ ಸ್ಥಾನ, ಆಪ್ತರಿಗೆ ಮಣೆ – ಕಾಂಗ್ರೆಸ್‌ನಲ್ಲಿ ಕಡೆಗಣನೆ ಆರಂಭ?

    ಪತ್ರಕ್ಕೆ ಸಹಿ ಹಾಕಿದ ನಾಯಕರಿಗಿಲ್ಲ ಸ್ಥಾನ, ಆಪ್ತರಿಗೆ ಮಣೆ – ಕಾಂಗ್ರೆಸ್‌ನಲ್ಲಿ ಕಡೆಗಣನೆ ಆರಂಭ?

    ನವದೆಹಲಿ: ಗಾಂಧಿ ಕುಟುಂಬವನ್ನು ಪ್ರಶ್ನಿಸಿದರೆ ಕಾಂಗ್ರೆಸ್‌ನಲ್ಲಿ ಅವರನ್ನು ಕಡೆಗಣಿಸಿ ಕೊನೆಗೆ ಮೂಲೆಗುಂಪು ಮಾಡಲಾಗುತ್ತದೆ ಎಂಬುದು ಈ ಹಿಂದಿನಿಂದಲೂ ಕೇಳಿ ಬರುತ್ತಿರುವ ಮಾತು. ಈ ಮಾತಿಗೆ ಪೂರಕ ಎಂಬಂತೆ ಹೈಕಮಾಂಡ್‌ ನಾಯಕತ್ವ ಪ್ರಶ್ನಿಸಿ ಪತ್ರ ಬರೆದ ಹಿರಿಯ ನಾಯಕರ ಕಡೆಗಣನೆ ಆರಂಭವಾಗಿದೆ.

    ರಾಜ್ಯಭಾ ಮತ್ತು ಲೋಕಸಭಾ ಕಲಾಪ ಸಂಬಂಧ ಸೋನಿಯಾ ಗಾಂಧಿ 5 ಮಂದಿ ಸದಸ್ಯರ ಸಮಿತಿಯನ್ನು ರಚಿಸಿದ್ದಾರೆ. ಈ ಸಮಿತಿಯಲ್ಲಿ ಪತ್ರಕ್ಕೆ ಸಹಿ ಹಾಕಿದ ನಾಯಕರನ್ನು ಕಡೆಗಣಿಸಿ ಪತ್ರಕ್ಕೆ ಸಹಿ ಹಾಕದ ಆಪ್ತರಿಗೆ ಸ್ಥಾನ ನೀಡಲಾಗಿದೆ.

     

     

    ರಾಜ್ಯಸಭೆ ಸಮಿತಿಯಲ್ಲಿ ತನ್ನ ನಂಬಿಕಸ್ಥರಾಗಿರುವ ಅಹಮದ್‌ ಪಟೇಲ್‌, ಕೆಸಿ ವೇಣುಗೋಪಾಲ್‌ ಅವರಿಗೆ ಸ್ಥಾನ ನೀಡಲಾಗಿದೆ. ಕರ್ನಾಟಕದಿಂದ ಆಯ್ಕೆ ಆಗಿರುವ ಜೈರಾಂ ರಮೇಶ್‌ ಅವರಿಗೆ ಮುಖ್ಯ ಸಚೇತಕ ಸ್ಥಾನವನ್ನು ನೀಡಲಾಗಿದೆ. ಇದನ್ನೂ ಓದಿ: ಆಂತರಿಕ ಚುನಾವಣೆ ನಡೆಯದಿದ್ದರೆ 50 ವರ್ಷ ನಾವು ವಿರೋಧ ಪಕ್ಷದಲ್ಲಿರಬೇಕಾಗುತ್ತದೆ – ಗುಲಾಂ ನಬಿ ಗುಡುಗು

    ರಾಜ್ಯಸಭೆಯ ಪ್ರತಿಪಕ್ಷ ನಾಯಕ, ಉಪನಾಯಕರಾಗಿರುವ ಕಾರಣಕ್ಕೆ ಗುಲಾಂ ನಬಿ ಆಜಾದ್‌ ಹಾಗೂ ಆನಂದ ಶರ್ಮಾ ಅವರನ್ನು ಮುಂದುವರಿಸಲಾಗಿದೆ. ಈ ಇಬ್ಬರು ಪತ್ರಕ್ಕೆ ಸಹಿ ಹಾಕಿದ್ದರೂ ಸದ್ಯಕ್ಕೆ ಯಾವುದೇ ಕ್ರಮ ಜರುಗಿಸಿಲ್ಲ.

    ಕಾಂಗ್ರೆಸ್‌ ಪಕ್ಷವನ್ನು ಕಲಾಪಗಳಲ್ಲಿ, ನ್ಯಾಯಾಲಯದಲ್ಲಿ ಸದಾ ಸಮರ್ಥಿಸುತ್ತಿರುವ ಕಪಿಲ್‌ ಸಿಬಲ್‌ ಅವರಿಗೆ ಯಾವುದೇ ಹುದ್ದೆಯನ್ನೂ ನೀಡದೇ ಇರುವುದು ವಿಶೇಷವಾಗಿದೆ. ಮುಂಗಾರು ಅಧಿವೇಶನದ ಬಳಿಕ ಗುಲಾಂ ನಬಿ ಆಜಾದ್‌ ಹಾಗೂ ಶರ್ಮಾ ಹುದ್ದೆಗೂ ಕುತ್ತು ಬರಬಹುದು ಎಂದು ಮೂಲಗಳು ತಿಳಿಸಿವೆ.

    ಲೋಕಸಭೆಯ ಉಪನಾಯಕ ಸ್ಥಾನಕ್ಕೆ ಅಸ್ಸಾಂನ ಮಾಜಿ ಮುಖ್ಯಮಂತ್ರಿ, ನೆಹರು- ಗಾಂಧಿ ಕುಟುಂಬದ ಆಪ್ತ ತರುಣ್‌ ಗೊಗೊಯ್‌ ಪುತ್ರ ಗೌರವ್‌ ಗೊಗೊಯ್‌ ಅವರನ್ನು ನೇಮಕ ಮಾಡಲಾಗಿದೆ. ಸಚೇತಕರನ್ನಾಗಿ ಪಂಜಾಬ್‌ನ ಸಂಸದ ರವನೀತ್‌ ಅವರನ್ನು ಸೋನಿಯಾ ನೇಮಕ ಮಾಡಿದ್ದಾರೆ.

    ಹಿರಿಯ ಸಂಸದರಾದ ಮನೀಶ್‌ ತಿವಾರಿ, ಶಶಿ ತರೂರ್‌ ಈ ಹುದ್ದೆಯ ನಿರೀಕ್ಷೆಯಲ್ಲಿದ್ದರು. ಆದರೆ ಇವರಿಬ್ಬರು ಪತ್ರಕ್ಕೆ ಸಹಿ ಹಾಕಿದ ಕಾರಣಕ್ಕೆ ಉತ್ತಮ ವಾಗ್ಮಿಗಳಾಗಿದ್ದರೂ ಅವರನ್ನು ನಿರ್ಲಕ್ಷಿಸಲಾಗಿದೆ ಎಂದು ವರದಿಯಾಗಿದೆ.

  • ಪ್ರಜಾಪ್ರಭುತ್ವ ಮುಗಿಸೋದು ಬಿಜೆಪಿ ಹುನ್ನಾರ: ಗುಲಾಂ ನಬಿ ಅಜಾದ್

    ಪ್ರಜಾಪ್ರಭುತ್ವ ಮುಗಿಸೋದು ಬಿಜೆಪಿ ಹುನ್ನಾರ: ಗುಲಾಂ ನಬಿ ಅಜಾದ್

    ಬೆಂಗಳೂರು: ಬಿಜೆಪಿಯವರು ಲೋಕಸಭೆ, ರಾಜ್ಯಸಭೆ, ಶಾಸಕರು, ಕಾರ್ಪೋರೇಟರ್ ಗಳನ್ನು ತಮ್ಮ ಕಡೆ ಸೆಳೆಯುತ್ತಿದ್ದಾರೆ. ಈ ಮೂಲಕ ಪ್ರಜಾಪ್ರಭುತ್ವ ಮುಗಿಸುವ ಹುನ್ನಾರವನ್ನು ಹೊಂದಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಗುಲಾಂ ನಬಿ ಅಜಾದ್ ಆರೋಪಿಸಿದ್ದಾರೆ.

    ಕೆಕೆ ಗೆಸ್ಟ್ ಹೌಸ್ ಬಳಿ ಮಾತನಾಡಿದ ಅವರು, ಕೇಂದ್ರ ಬಿಜೆಪಿಯು ಕಳೆದ 5 ವರ್ಷಗಳಿಂದ ಒಂದೊಂದೇ ರಾಜ್ಯದಲ್ಲಿ ವಿಪಕ್ಷಗಳ ವಿರುದ್ಧ ಆಟವಾಡುತ್ತಿದೆ. ವಿರೋಧ ಪಕ್ಷವನ್ನು ಮುಗಿಸುವುದು ಬಿಜೆಪಿ ಪ್ಲ್ಯಾನ್. ಪ್ರಜಾಪ್ರಭುತ್ವ ಇವತ್ತು ಅರ್ಥ ಕಳೆದುಕೊಳ್ಳುವಂತೆ ಮಾಡುತ್ತಿದೆ. ಈ ಮೂಲಕ ದೇಶದಲ್ಲಿ ಬಿಜೆಪಿ ಬಿಟ್ಟು ಇನ್ಯಾವುದೇ ಪಕ್ಷ ಇರಬಾರದು ಎನ್ನುವುದು ಅವರ ವಿಚಾರವಾಗಿದೆ ಎಂದು ಕಿಡಿಕಾರಿದರು.

    ಕಾಂಗ್ರೆಸ್-ಜೆಡಿಎಸ್ ಶಾಸಕರನ್ನು ಸೆಳೆಯುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಕೆಲ ಶಾಸಕರು ಸುಪ್ರೀಂಕೋರ್ಟಿಗೆ ಹೋಗಿದ್ದಾರೆ. ಸುಪ್ರೀಂಕೋರ್ಟ್ ಬಗ್ಗೆ ನಾನು ಏನು ಮಾತನಾಡುವುದಿಲ್ಲ. ಸ್ಪೀಕರ್ ನಿರ್ಧಾರ ಅಂತಿಮ. ಎಲ್ಲರಿಗೂ ಸ್ಪೀಕರ್ ನ್ಯಾಯ ಕೊಡುತ್ತಾರೆ ಎನ್ನುವ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಕರ್ನಾಟಕದ ವಿದ್ಯಾಮಾನವನ್ನು ದೇಶದ ಜನ ನೋಡುತ್ತಿದ್ದಾರೆ. ಈ ಬಗ್ಗೆ ರಾಜ್ಯ ನಾಯಕರ ಜೊತೆ ಮಾತಾಡಿದ್ದೇನೆ. ಮುಂದೆ ಏನಾಗುತ್ತದೆ ಅಂತ ನೋಡಬೇಕಿದೆ ಎಂದು ಹೇಳಿದರು.

  • ಟ್ರಬಲ್ ಶೂಟರ್ ಕಾರ್ಯನಿರ್ವಹಿಸಲು ಬರುತ್ತಿದ್ದಾರೆ ಗುಲಾಂ ನಬಿ ಅಜಾದ್

    ಟ್ರಬಲ್ ಶೂಟರ್ ಕಾರ್ಯನಿರ್ವಹಿಸಲು ಬರುತ್ತಿದ್ದಾರೆ ಗುಲಾಂ ನಬಿ ಅಜಾದ್

    ಬೆಂಗಳೂರು: ಮೈತ್ರಿ ಸರ್ಕಾರದ ಶಾಸಕರ ರಾಜೀನಾಮೆ ಬಳಿಕ ಸಂಕಷ್ಟಕ್ಕೆ ಸಿಲುಕಿದ್ದ ಮೈತ್ರಿ ಸರ್ಕಾರ ಸ್ಪೀಕರ್ ಅವರ ಕ್ರಮದಿಂದ ಅತೃಪ್ತರ ಮನವೊಲಿಸಲು ಸಮಯ ಸಿಕ್ಕಿದೆ. ಇದರ ಬೆನ್ನಲ್ಲೇ ಹೈಕಮಾಂಡ್ ಆದೇಶದಂತೆ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಗುಲಾಂ ನಬಿ ಅಜಾದ್ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ.

    ಇಂದು ಬೆಂಗಳೂರಿನಲ್ಲಿ ಮೈತ್ರಿ ಪಕ್ಷದ ನಾಯಕರ ಜೊತೆ ಸಭೆ ನಡೆಯಲಿದ್ದು, ಜೆಡಿಎಸ್ ನಾಯಕರ ಜೊತೆ ಸಭೆಗೂ ಮುನ್ನ ಕಾಂಗ್ರೆಸ್ ನಾಯಕರ ಪ್ರತ್ಯೇಕ ಸಭೆ ನಡೆಯಲಿದೆ ಎಂಬ ಮಾಹಿತಿ ಲಭಿಸಿದೆ. ಕೆಕೆ ಗೆಸ್ಟ್ ಹೌಸ್ ನಲ್ಲಿ ಕಾಂಗ್ರೆಸ್ ನಾಯಕರ ಸಭೆ ನಡೆಯಲಿದ್ದು, ಆ ಬಳಿಕ ಜೆಡಿಎಸ್ ನಾಯಕರೊಂದಿಗೆ ಸಭೆ ನಡೆಯಲಿದೆ.

    ಬಂಡಾಯ ಶಾಸಕರು ತಮ್ಮ ನಿಲುವು ಸ್ಪಷ್ಟ ಎಂದು ಈಗಾಗಲೇ ಹಲವು ಬಾರಿ ಹೇಳಿದ್ದು, ಸದ್ಯ ಅವರು ಮತ್ತೆ ಬೆಂಗಳೂರಿಗೆ ಆಗಮಿಸುವ ಅವಕಾಶ ಇರುವುದರಿಂದ ಮತ್ತೆ ಅವರ ಮನವೊಲಿಕೆ ಕಾರ್ಯವನ್ನು ನಡೆಸುತ್ತಾರಾ ಎಂಬ ಕುತೂಹಲ ಮೂಡಿದೆ. ಅಲ್ಲದೇ ಸ್ಪೀಕರ್ ಅವರು ಭೇಟಿಗೆ ಸಮಯ ನೀಡಿರುವುದರಿಂದ 2ನೇ ಬಾರಿಗೆ ನಿಯಮಗಳಿಗೆ ಅನುಗುಣವಾಗಿ ರಾಜೀನಾಮೆ ಸಲ್ಲಿಸುವ ಅವಕಾಶ ಇದೆ. ಈ ಸಮಯದಲ್ಲಿ ಅತೃಪ್ತ ಶಾಸಕರಿಂದ ಉತ್ತಮ ಪ್ರತಿಕ್ರಿಯೆ ಲಭ್ಯವಾದರೆ ಗುಲಾಂ ನಬಿ ಅಜಾದ್ ಅವರು 3 ದಿನಗಳ ಕಾಲ ಬೆಂಗಳೂರಿನಲ್ಲೇ ಇರಲಿದ್ದಾರೆ ಎನ್ನಲಾಗಿದೆ.

    ಪ್ರಮುಖವಾಗಿ ಗುಲಾಂ ನಬಿ ಅಜಾದ್ ಅವರು ಹಿರಿಯ ನಾಯಕ ರಾಮಲಿಂಗಾ ರೆಡ್ಡಿ ಹಾಗೂ ರೋಷನ್ ಬೇಗ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸುವ ಸಾಧ್ಯತೆ ಇದೆ. ಈ ಸಂದರ್ಭದಲ್ಲಿ ಅವರ ಮನವೊಲಿಸುವ ಅವಕಾಶವಿದೆ. ಏಕೆಂದರೆ ರಾಜೀನಾಮೆ ಬಗ್ಗೆ ಈಗಾಗಲೇ ಸ್ಪಷ್ಟನೆ ನೀಡಿರುವ ರಾಮಲಿಂಗಾರೆಡ್ಡಿ ಅವರು, ನಾನು ಸ್ವ ಇಚ್ಛೆಯಿಂದ ತೀರ್ಮಾನ ಮಾಡಿದ್ದು, ಕಾಂಗ್ರೆಸ್ ಪಕ್ಷದಲ್ಲೇ ಇದ್ದೇನೆ. ಸ್ಪೀಕರ್ ಕೇಳಿದರೆ ಮತ್ತೊಮ್ಮೆ ರಾಜೀನಾಮೆ ನೀಡುತ್ತೇನೆ ಎಂದಿದ್ದಾರೆ.

  • ಕಾಂಗ್ರೆಸ್ಸಿನ ಟ್ರಬಲ್ ಶೂಟರಿಗೆ ಶುರುವಾಯ್ತು ಈಗ ಟ್ರಬಲ್!

    ಕಾಂಗ್ರೆಸ್ಸಿನ ಟ್ರಬಲ್ ಶೂಟರಿಗೆ ಶುರುವಾಯ್ತು ಈಗ ಟ್ರಬಲ್!

    ಬೆಂಗಳೂರು: ಹಣಕಾಸು ಖಾತೆ ಹಂಚಿಕೆ ಸಮಸ್ಯೆಯ ಬೆನ್ನಲ್ಲೇ ಈಗ ಇಂಧನ ಖಾತೆಗಾಗಿ ಜೆಡಿಎಸ್ ಶಾಸಕ ಎಚ್.ಡಿ.ರೇವಣ್ಣ ಹಾಗೂ ಕಾಂಗ್ರೆಸ್ ಶಾಸಕ ಡಿ.ಕೆ.ಶಿವಕುಮಾರ್ ಮಧ್ಯೆ ಪೈಪೋಟಿ ಆರಂಭವಾಗಿದೆ.

    ಲೋಕೋಪಯೋಗಿ ಹಾಗೂ ಇಂಧನ ಖಾತೆ ಎರಡು ತಮಗೆ ಬೇಕು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಸಹೋದರ ಎಚ್.ಡಿ.ರೇವಣ್ಣ ಅವರು ಪಟ್ಟುಹಿಡಿದರೆ, ಇಂಧನ ಖಾತೆಯನ್ನು ನನಗೆ ನೀಡಿ ಎಂದು ಡಿಕೆ ಶಿವಕುಮಾರ್ ಹಠ ಹಿಡಿದಿದ್ದಾರೆ.

    ಕಳೆದ 5 ವರ್ಷದಿಂದ ಇಂಧನ ಖಾತೆಯನ್ನು ನಾನು ನಿಭಾಯಿಸಿದ್ದೇನೆ. ಅಲ್ಲಿ ಇನ್ನಷ್ಟು ಕೆಲಸಗಳು ಉಳಿದಿದ್ದು, ನನಗೆ ಇಂಧನ ಖಾತೆ ಬೇಕೇ ಬೇಕು ಎಂದು ಡಿಕೆಶಿ ಹೈಕಮಾಂಡ್ ಮುಂದೆ ತಮ್ಮ ವಾದವನ್ನು ಮಂಡಿಸಿದ್ದಾರೆ. ಇಬ್ಬರು ಘಟಾನುಘಟಿ ನಾಯಕರಾದ ಕಾರಣ ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರು ಇಬ್ಬರನ್ನು ತೃಪ್ತಿ ಪಡಿಸಲು ಕೊನೆಗೆ ಸಂಧಾನ ಸೂತ್ರಕ್ಕೆ ಬಂದಿದ್ದಾರೆ.

    ಆರಂಭದಲ್ಲಿ ಇಬ್ಬರಿಗೂ ಈ ಖಾತೆಯನ್ನು ನೀಡದೇ ಇರುವ ತೀರ್ಮಾನಕ್ಕೆ ಬರಲಾಗಿತ್ತು. ಆದರೆ ಈಗ ಕಾಂಗ್ರೆಸ್ ಮುಖಂಡ ಗುಲಾಂ ನಬಿ ಅಜಾದ್ ಮಧ್ಯಸ್ಥಿಕೆ ವಹಿಸಿ ಡಿ.ಕೆ.ಶಿವಕುಮಾರ್ ಅವರಿಗೆ ಇಂಧನ ಖಾತೆಯನ್ನು ನೀಡಲು ನಿರ್ಧಾರ ತೆಗೆದುಕೊಂಡಿದ್ದಾರೆ.

    ರೇವಣ್ಣ ಅವರಿಗೆ ಜಲಸಂಪನ್ಮೂಲ ಖಾತೆಯನ್ನು ನೀಡಲು ಒಪ್ಪಿಗೆ ನೀಡಿದ್ದು, ಅವರ ಮನವೊಲಿಸುವ ಜವಾಬ್ದಾರಿಯನ್ನು ಕಾಂಗ್ರೆಸ್ ಮುಖಂಡರು ವಹಿಸಿಕೊಳ್ಳಬೇಕು ಎಂದು ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಕೈ ನಾಯಕರ ಈ ಸೂತ್ರಕ್ಕೆ ರೇವಣ್ಣ ಒಪ್ಪಿಗೆ ನೀಡಿದರೆ ಖಾತೆ ಬಿಕ್ಕಟ್ಟು ಇತ್ಯರ್ಥವಾಗಲಿದೆ.