Tag: ಗುರೂಜಿ

  • ಆರ್ಯವರ್ಧನ್ ಗುರೂಜಿ ಬಾಯಿಂದ ಬೈಗುಳ ಬರೋಕೆ ಗ್ರಹಗತಿ ಕಾರಣವಂತೆ

    ಆರ್ಯವರ್ಧನ್ ಗುರೂಜಿ ಬಾಯಿಂದ ಬೈಗುಳ ಬರೋಕೆ ಗ್ರಹಗತಿ ಕಾರಣವಂತೆ

    ಬಿಗ್ ಬಾಸ್ (Bigg Boss Season 9) ಮನೆಯಲ್ಲಿ ವಿಚಿತ್ರ ಸಂಗತಿಗಳು ನಡೆಯುತ್ತಲೇ ಇವೆ. ಪ್ರಶಾಂತ್ ಸಂಬರಗಿ ಜೋರು ಧ್ವನಿಯಲ್ಲಿ ಮಾತನಾಡಿದರೆ, ಅರುಣ್ ಸಾಗರ್ ವಿಪರೀತ ಮಾತನಾಡಿ ಮನೆಯಾಚೆ ಟ್ರೋಲ್ ಆಗುತ್ತಿದ್ದಾರೆ. ರೂಪೇಶ್ ಶೆಟ್ಟಿ ಮತ್ತು ಸಾನ್ಯ ಅಯ್ಯರ್ ನಡುವಿನ ಸ್ನೇಹಿ ವಿಚಿತ್ರ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಕಾವ್ಯಶ್ರೀ ಮತ್ತು ವಿನೋದ್ ನಡುವೆ ಮನಸ್ತಾಪ ಮುಂದುವರೆಯುತ್ತಲೇ ಇದೆ. ಅದೇ ರೀತಿಯ ಆರ್ಯವರ್ಧನ್ ಗುರೂಜಿಯ ಮಾತುಗಳು ಮನೆಯಲ್ಲಿರುವವರಿಗೆ ಇಷ್ಟವಾಗುತ್ತಿಲ್ಲ.

    ಆರ್ಯವರ್ಧನ್ (Aryavardhan) ಬಾಯ್ಬಿಟ್ಟರೆ ಬೈಗಳು ಕೇಳಿಸುತ್ತದೆ. ಹೀಗೆ ಬೈದರೆ ಹೇಗೆ ಎಂದು ಯಾರಾದರೂ ಕೇಳಿದರೆ, ಅದನ್ನೆಲ್ಲ ಕಟ್ ಮಾಡಿ ವಾಹಿನಿಯವರು ಪ್ರಸಾರ ಮಾಡ್ತಾರೆ ಬಿಡಿ ಅಂತಾರೆ. ಒಂದೊಂದು ಸಲ ಬಿಗ್ ಬಾಸ್ ಮನೆಯಲ್ಲಿ ಇರುವವರೂ ಮುಜುಗರ ಪಟ್ಟುಕೊಳ್ಳುವಷ್ಟು ಕೆಟ್ಟ ಪದಗಳಿಂದ ಅವರು ಬೈಯುತ್ತಾರೆ. ಈ ಮಾತುಗಳು ಸ್ವತಃ ಸುದೀಪ್ ಅವರಿಗೂ ನೋವನ್ನುಂಟು ಮಾಡಿವೆ. ಹಾಗಾಗಿಯೇ ಈ ಬಾರಿ ಈ ಕುರಿತು ಸುದೀಪ್ ‍(Sudeep) ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ:ರಚಿತಾ ರಾಮ್ @30: ಹ್ಯಾಪಿ ಬರ್ತ್‌ಡೇ ರಚ್ಚು ಅಂದ್ರು ಫ್ಯಾನ್ಸ್

    ಈ ವಾರ ನಡೆದ ಕಿಚ್ಚನ ಜೊತೆಗಿನ ಮಾತುಕತೆಯಲ್ಲಿ ಆರ್ಯವರ್ಧನ್ ಗುರೂಜಿ ಜೊತೆ ಮಾತನಾಡಿದ ಸುದೀಪ್, ‘ಯಾಕೆ ನೀವು ಅಷ್ಟೊಂದು ಕೆಟ್ಟದ್ದಾಗಿ ಬೈತಿರಿ? ಬೈಗುಳ (Baigula) ಕಂಟ್ರೋಲ್ ಮಾಡಿಕೊಳ್ಳಲು ಆಗುವುದಿಲ್ಲವಾ? ಎಂದು ಕೇಳುತ್ತಾರೆ. ಅದಕ್ಕೆ ಗುರೂಜಿ ಕೊಟ್ಟ ಉತ್ತರಕ್ಕೆ ಸುದೀಪ್ ತೃಪ್ತಿ ಆಗುವುದಿಲ್ಲ. ನಾನು ಹಳ್ಳಿಯಿಂದ ಬಂದವನು, ಹಳ್ಳಿಯ ಬೈಗುಳ ಸಡನ್ನಾಗಿ ಬರುತ್ತವೆ. ಅದು ನನಗೆ ಗೊತ್ತಿಲ್ಲದೇ ಬರುವಂಥದ್ದು ಅಂತಾರೆ.

    ಗುರೂಜಿ (Guruji) ಮಾತನ್ನು ಒಪ್ಪಿಕೊಳ್ಳದ ಸುದೀಪ್, ಏನೇನೋ ಮಾತಾಡಿ ಹಳ್ಳಿಯ ಮರ್ಯಾದೆ ತಗೆಯಬೇಡಿ. ಡಾ.ರಾಜ್ ಕುಮಾರ್ ಕೂಡ ಹಳ್ಳಿಯಿಂದಲೇ ಬಂದವರು. ಎಂದೂ ಅವರು ಕೆಟ್ಟ ಮಾತುಗಳನ್ನು ಆಡಲಿಲ್ಲ. ಅದೆಷ್ಟೋ ಜನರು ಹಳ್ಳಿಯಿಂದ ಬಂದಿದ್ದಾರೆ. ಅವರೆಲ್ಲರೂ ಅಂತಹ ಪದಗಳನ್ನು ಬಳಸುವುದಿಲ್ಲ ಎಂದು ಹೇಳುತ್ತಾರೆ. ಹೀಗೆ ಸಮರ್ಥನೆ ಮಾಡಿ ಹಳ್ಳಿಗೆ ಅವಮಾನ ಮಾಡಬೇಡಿ ಎನ್ನುತ್ತಾರೆ ಸುದೀಪ್.

    ಮತ್ತೆ ತಮ್ಮ ಮಾತನ್ನು ಮುಂದುವರೆಸುವ ಗುರೂಜಿ, ನಾನು ಹೀಗೆ ಆಡುವುದಕ್ಕೆ ಗ್ರಹಗತಿ ಕಾರಣ ಎಂದು ತಮ್ಮದೇ ಆದ ಲೆಕ್ಕಾಚಾರವನ್ನು ಮುಂದುವರೆಸುತ್ತಾರೆ ಗುರೂಜಿ. ಮೂರನೇ ಮನೆಯಲ್ಲಿ ಶನಿ ಇದ್ದಾನೆ. ಎರಡನೇ ಮನೆ ವಾಸಸ್ಥಾನ ಮತ್ತು ಮೂರನೇ ಮನೆ ಕೋಪ ಸ್ಥಾನ ಎಂದು ಹೇಳಲು ಶುರು ಮಾಡುತ್ತಾರೆ ಗುರೂಜಿ. ನನ್ನಿಂದ ಈ ಮಾತುಗಳು ಬರುತ್ತಿಲ್ಲ, ಗ್ರಹಗತಿಗಳೇ ನನ್ನಿಂದ ಹಾಗೆ ಆಡಿಸುತ್ತವೆ ಎಂದು ಹೇಳಿದಾಗ, ಸುದೀಪ್ ಅದನ್ನು ಒಪ್ಪಿಕೊಳ್ಳುವುದಿಲ್ಲ. ಎಲ್ಲದಕ್ಕೂ ಗ್ರಹಗತಿ ಅನ್ನಬೇಡಿ. ಕೆಟ್ ಕೆಟ್ ಪದಗಳನ್ನು ಆಡೋದು ಬೇಡ  ಎನ್ನುತ್ತಾರೆ.

    Live Tv
    [brid partner=56869869 player=32851 video=960834 autoplay=true]

  • ರೂಪೇಶ್ ಶೆಟ್ಟಿ ನನ್ನ ಮಗ ಇದ್ದಂತೆ ಎಂದು ಬಿಗ್ ಬಾಸ್ ಮನೆಯಲ್ಲಿ ಕಣ್ಣೀರಿಟ್ಟ ಗುರೂಜಿ

    ರೂಪೇಶ್ ಶೆಟ್ಟಿ ನನ್ನ ಮಗ ಇದ್ದಂತೆ ಎಂದು ಬಿಗ್ ಬಾಸ್ ಮನೆಯಲ್ಲಿ ಕಣ್ಣೀರಿಟ್ಟ ಗುರೂಜಿ

    ಬಿಗ್ ಬಾಸ್ (Bigg Boss Season 9) ಮನೆ ಒಳಗೆ ಪ್ರವೇಶ ಮಾಡುವಾಗ ಪ್ರತಿ ಸ್ಪರ್ಧಿಗೂ ಸುದೀಪ್ (Sudeep) ಒಂದೊಂದು ಬ್ಯಾಂಡ್ ಕೊಟ್ಟು ಮನೆ ಒಳಗೆ ಕಳುಹಿಸಿದ್ದರು. ಬಿಗ್ ಬಾಸ್ ಆದೇಶ ಮಾಡೋ ತನಕ ಈ ಪಟ್ಟಿ ನಿಮ್ಮ ಬಳಿ ಇರಲಿ ಎಂದು ಎಚ್ಚರಿಕೆಯನ್ನೂ ಕೊಟ್ಟು ಕಳುಹಿಸಿದ್ದರು. ಬಿಗ್ ಬಾಸ್ ಆದೇಶದ ನಂತರ ನಿಮಗೆ ಇಷ್ಟವಾದ ಸದಸ್ಯರಿಗೆ ಈ ಪಟ್ಟಿಯನ್ನು ಕೈಗೆ ಕಟ್ಬೇಕು, ಅದಕ್ಕೆ ಕಾರಣವನ್ನೂ ತಿಳಿಸಬೇಕು ಎಂದು ಹೇಳಲಾಗಿತ್ತು. ಇದೀಗ ಆ ಬ್ಯಾಂಡ್ (Band) ಕಟ್ಟುವ ಸಮಯ ಬಂದಿದೆ.

    ಮನೆಯ ಸದಸ್ಯರು ತಮಗೆ ಸಿಕ್ಕಿರುವ ಬ್ಯಾಂಡ್ ಅನ್ನು ತಮಗಿಷ್ಟದ ವ್ಯಕ್ತಿಗಳಿಗೆ ಕಟ್ಟಿದ್ದಾರೆ. ಅದಕ್ಕೆ ಕಾರಣವನ್ನೂ ಕೊಟ್ಟಿದ್ದಾರೆ. ಆದರೆ, ಆರ್ಯವರ್ಧನ್  (Aryavardhan) ಗುರೂಜಿ ಆಯ್ಕೆ ಮಾಡಿಕೊಂಡ ವ್ಯಕ್ತಿ ಮತ್ತು ಅವರು ಕೊಟ್ಟ ಕಾರಣದಿಂದಾಗಿ ಬಿಗ್ ಬಾಸ್ ಮನೆಯ ಸದಸ್ಯರು ಕೆಲ ನಿಮಿಷಗಳ ಕಾಲ ಭಾವುಕತೆಗೆ ಸಾಕ್ಷಿಯಾದರು. ಸ್ವತಃ ಗುರೂಜಿ (Guruji) ಕಣ್ಣೀರಿಟ್ಟು ಆ ಬ್ಯಾಂಡ್ ಅನ್ನು ವ್ಯಕ್ತಿಗೆ ನೀಡಿದರು. ಇದನ್ನೂ ಓದಿ: ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಆಸ್ಪತ್ರೆ ದಾಖಲು: ಅಭಿಮಾನಿಗಳಿಗೆ ಹೆಚ್ಚಿದೆ ಆತಂಕ

    ನಾನು ಸೋತ ವೇಳೆಯಲ್ಲಿ, ಹತಾಶನಾದ ಟೈಮ್ನಲ್ಲಿ ನನ್ನ ಜೊತೆ ನಿಂತವನು ರೂಪೇಶ್ ಶೆಟ್ಟಿ (Rupesh Shetty), ನಾನು ನನ್ನ ಮಗನನ್ನು ಎಷ್ಟು ಪ್ರೀತಿಸುತ್ತೇನೋ ಅಷ್ಟೇ ಪ್ರೀತಿಯನ್ನು ರೂಪೇಶ್‍ ಗೆ ಕೊಡುವೆ. ಅವನು ನನ್ನ ಮಗನಿದ್ದಂತೆ ಎಂದು ಘೋಷಿಸಿದರು. ಈ ವೇಳೆಯಲ್ಲಿ ಭಾವುಕರೂ ಆದರು. ಭಾವುಕತೆಯ ತೀವ್ರ ಎಷ್ಟಿತ್ತು ಅಂದರೆ, ರೂಪೇಶ್ ಹೆಸರಿನ ಬದಲಾಗಿ ರಾಕೇಶ್ (Rakesh Adiga) ಎಂದು ಹೇಳಿದರು. ಈ ಮಾತು ಕೇಳಿ ರಾಕೇಶ್ ಅಚ್ಚರಿ ವ್ಯಕ್ತ ಪಡಿಸಿದರು. ಕೊನೆಗೆ ರಾಕೇಶ್ ಅಲ್ಲ ರೂಪೇಶ್ ಎಂದು ತಿದ್ದಿಕೊಂಡು ರೂಪೇಶ್ ಗೆ ಬ್ಯಾಂಡ್ ಕಟ್ಟಿದರು ಗುರೂಜಿ.

    ಬಿಗ್ ಬಾಸ್ ಮನೆಯಲ್ಲಿ ರೂಪೇಶ್ ರಕ್ಷಣಾತ್ಮಕವಾಗಿ ಆಟ ಆಡುತ್ತಿದ್ದಾರೆ. ಬಿಗ್ ಬಾಸ್ ಓಟಿಟಿಯಲ್ಲಿಯ ಅನುಭವವನ್ನೂ ಈ ಮನೆಯಲ್ಲೂ ಉಪಯೋಗಿಸ್ತಿದ್ದಾರೆ. ಹಾಗಾಗಿ ರೂಪೇಶ್ ಎಲ್ಲರ ನೆಚ್ಚಿನ ಡಾರ್ಲಿಂಗ್ ಆಗಿದ್ದಾರೆ. ಅದರಲ್ಲೂ ಸದಾ ಗುರೂಜಿಯ ಬೆನ್ನಿಗೆ ನಿಂತ ಕಾರಣದಿಂದಾಗಿ ಪ್ರೀತಿಯ ಬ್ಯಾಂಡ್ ಅನ್ನು ಪಡೆದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ‘ಈ ಶನಿವಾರ ನಿನ್ನ ಮನೆಗೆ ಕಳಿಸ್ತಾರೆ’ ಎಂದು ಗುರೂಜಿಗೆ ಭವಿಷ್ಯ ನುಡಿದ ಸೋನು ಶ್ರೀನಿವಾಸ್ ಗೌಡ

    ‘ಈ ಶನಿವಾರ ನಿನ್ನ ಮನೆಗೆ ಕಳಿಸ್ತಾರೆ’ ಎಂದು ಗುರೂಜಿಗೆ ಭವಿಷ್ಯ ನುಡಿದ ಸೋನು ಶ್ರೀನಿವಾಸ್ ಗೌಡ

    ರಿಗೆ ಭವಿಷ್ಯ ಹೇಳುವ ಆರ್ಯವರ್ಧನ್ ಗುರೂಜಿಗೆ ಈ ಬಾರಿ ಸೋನು ಶ್ರೀನಿವಾಸ್ ಗೌಡ (Sonu Srinivas Gowda) ಭವಿಷ್ಯ ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಆ ಭವಿಷ್ಯ ನಿಜವಾಗತ್ತೋ ಬಿಡತ್ತೋ. ಆದರೆ, ನಿಜವಾದರೆ ಸೋನು ಗೌಡನ ಬಾಯಿಗೆ ನೂರು ತೆಂಗಿನಕಾಯಿ ಒಡೆಯುವುದಾಗಿ ಗುರೂಜಿ ಹೇಳಿದ್ದಾರೆ. ಅಲ್ಲಿಗೆ ಈ ಶನಿವಾರ ಬಿಗ್ ಬಾಸ್ ಮನೆಯಿಂದ ಗುರೂಜಿ ಹೊರ ಬೀಳುತ್ತಾರಾ? ಅಥವಾ ಫಿನಾಲೆ ವಾರಕ್ಕೆ ಜಂಪ್ ಆಗ್ತಾರೆ ಎನ್ನುವುದು ಸದ್ಯದ ಕುತೂಹಲ.

    ಆರ್ಯವರ್ಧನ್ (Aryavardhan) ಗುರೂಜಿದು ದಢೂತಿ ದೇಹವಿದ್ದರೂ ಸದಾ ಚಟುವಟಿಕೆಯಿಂದಲೇ ಇರುತ್ತಾರೆ. ಅಡುಗೆ ಮನೆಗೂ ಸೈ, ಆಟಕ್ಕೂ ಜೈ ಎನ್ನುವ ಅವರಿಗೆ ಮತ್ತೆ ಮತ್ತೆ ಮನೆ ನೆನಪಾಗುತ್ತಿದೆ. ‘ಮನೆಯಲ್ಲಿ ತಿಂದುಂಡು ಆರಾಮಾಗಿದ್ದವನನ್ನು ಯಾಕಪ್ಪ ಕರ್ಕೊಂಡ್ ಬಂದು ಹಿಂಸೆ ಕೊಡ್ತಿದ್ದೀರಿ’ ಎಂದು ನೇರವಾಗಿಯೇ ತಮಾಷೆಯ ನುಡಿಗಳಲ್ಲಿ ಆರ್ಯವರ್ಧನ್ ಬಿಗ್ ಬಾಸ್ ಮನೆಯಲ್ಲಿ ಮಾತನಾಡಿದ್ದಾರೆ. ನನಗೆ ಇಲ್ಲಿ ಇರೋಕೆ ಆಗ್ತಿಲ್ಲ ಎಂದೂ ಹೇಳಿಕೊಂಡಿದ್ದಾರೆ. ಇಷ್ಟೂ ವಿಷಯಗಳು ತಮಾಷೆ ಅನಿಸಿದರೂ, ಒಂದಷ್ಟು ವಿಷಯದಲ್ಲಿ ಅವರಿಗೆ ಬೇಸರವಾಗಿದೆ. ಇದನ್ನೂ ಓದಿ:ಪಾಕಿಸ್ತಾನಿ ಬೌಲರ್ ನಸೀಮ್ ಶಾಗೆ ಬೋಲ್ಡ್ ಆದ `ಐರಾವತ’ ನಟಿ

    ಪದೇ ಪದೇ ‘ಯಾಕಪ್ಪ ನನ್ನ ಇಲ್ಲಿಗೆ ಕರ್ಕೊಂಡು ಬಂದ್ರಿ’ ಎಂದು ಗುರೂಜಿ (Guruji) ಆಡಿದಾಗ, ತಕ್ಷಣವೇ ಮಾತು ಪೋಣಿಸಿದ ಸೋನು ಶ್ರೀನಿವಾಸ್ ಗೌಡ ‘ಅಷ್ಟೊಂದು ನೊಂದ್ಕೊಬೇಡಿ. ಈ ಶನಿವಾರ ನಿಮ್ಮನ್ನ ಮನೆಗೆ ಕಳಿಸ್ತಾರೆ ಬಿಡಿ’ ಎನ್ನುತ್ತಾರೆ. ‘ಅಯ್ಯೋ.. ಹಾಗ್ ಏನಾದರೂ ಮಾಡಿದರೆ, ನಿನ್ನ ಬಾಯಿಗೆ ನೂರು ತೆಂಗಿನ ಕಾಯಿ ಒಡೆಯುತ್ತೇನೆ’ ಎಂದು ಸೋನುಗೆ ಹೇಳುತ್ತಾರೆ ಗುರೂಜಿ. ಸೋನು ಭವಿಷ್ಯ ನುಡಿದಂತೆ ಆಗತ್ತಾ? ಅಥವಾ ಗುರೂಜಿ ಸೇಫ್ ಆಗಿ ಮನೆಯಲ್ಲೇ ಉಳಿಯುತ್ತಾರಾ ಎನ್ನುವುದು ಸದ್ಯಕ್ಕಿರುವ ಕುತೂಹಲ.

    ಸೋನು ಶ್ರೀನಿವಾಸ್ ಗೌಡ ಮತ್ತು ಗುರೂಜಿ ಇತ್ತೀಚಿನ ದಿನಗಳಲ್ಲಿ ತುಂಬಾ ಆತ್ಮೀಯರಾಗುತ್ತಿದ್ದಾರೆ. ಗುರೂಜಿ ಅಡುಗೆ ಮನೆಯಲ್ಲಿದ್ದರೆ, ಅವರ ಸಹಾಯಕ್ಕೆ ಸೋನು ಬರುತ್ತಾರೆ. ವಾಕಿಂಗ್ ಮಾಡುತ್ತಿದ್ದರೆ ಜೊತೆಯಾಗಿಯೇ ಹೆಜ್ಜೆ ಹಾಕುತ್ತಾರೆ. ಗುರೂಜಿ ಮಾತಿಗೆ ಸಖತ್ ಕೌಂಟರ್ ಕೊಡುತ್ತಾ ಮನರಂಜಿಸುತ್ತಿದ್ದಾರೆ. ಈ ವಾರದಲ್ಲಿ (Big Boss) ಮನೆಯಿಂದ ಸೋನು ಆಚೆ ಬರುತ್ತಾರಾ ಅಥವಾ ಗುರೂಜಿಗೆ ಏನಾದರೂ ಕೆಟ್ಟ ಭವಿಷ್ಯ ಕಾದಿದೆಯಾ ನೋಡಬೇಕು.

    Live Tv
    [brid partner=56869869 player=32851 video=960834 autoplay=true]

  • ‘ಅಲ್ಲಾಡ್ಸು ಗುರೂ, ಹೊಟ್ಟೆ ಅಲ್ಲಾಡ್ಸು’ ಎನ್ನುತ್ತಾ ಬಿಗ್ ಬಾಸ್ ಮನೆತುಂಬಾ ಡೊಳ್ಳು ಹೊಟ್ಟೆ ಅಲ್ಲಾಡಿಸ್ತಿರೋ ಗುರೂಜಿ

    ‘ಅಲ್ಲಾಡ್ಸು ಗುರೂ, ಹೊಟ್ಟೆ ಅಲ್ಲಾಡ್ಸು’ ಎನ್ನುತ್ತಾ ಬಿಗ್ ಬಾಸ್ ಮನೆತುಂಬಾ ಡೊಳ್ಳು ಹೊಟ್ಟೆ ಅಲ್ಲಾಡಿಸ್ತಿರೋ ಗುರೂಜಿ

    ಬಿಗ್ ಬಾಸ್ ಮನೆಯ ವಿಡಿಯೋ ತುಣುಕೊಂದನ್ನು ಕಲರ್ಸ್ ವಾಹಿನಿಯು ಇನ್ಸ್ಟಾದಲ್ಲಿ ಪೋಸ್ಟ್ ಮಾಡಿದೆ. ಅದು ಆರ್ಯವರ್ಧನ್ ಗುರೂಜಿಗೆ ಸಂಬಂಧಿಸಿದ ವಿಡಿಯೋ. ಬಿಗ್ ಬಾಸ್ ಮನೆಯಲ್ಲಿ ಇದ್ದವರಿಗೆ ಟಾಸ್ಕ್ ಹೇಗೆ ಗೆಲ್ಲೋದು ಎನ್ನುವುದು ಚಿಂತೆಯಾದರೆ, ಆರ್ಯವರ್ಧನ್ ಗುರೂಜಿದ್ದು ತಮ್ಮ ಹೊಟ್ಟೆಯನ್ನು ಹೇಗೆ ಕರೆಗಿಸೋದು ಎನ್ನುವ ಚಿಂತೆ. ಹಾಗಾಗಿಯೇ ಯಾವಾಗಲೂ ತಮ್ಮ ಹೊಟ್ಟೆಯನ್ನು ಅಲ್ಲಾಡಿಸುತ್ತಾ ಅದನ್ನು ಕರಗಿಸೋ ಪ್ರಯತ್ನ ಮಾಡುತ್ತಲೇ ಇರುತ್ತಾರೆ.

    ಒಂದು ಸಲ ಅಂಗಾತ ಮಲಗಿಕೊಂಡು ಹೊಟ್ಟೆ ಅಲ್ಲಾಡಿಸಿದರೆ, ಮತ್ತೊಂದು ಸಲ ಸೈಡ್ ಗೆ ಮಲಗಿ ಹೊಟ್ಟೆಯನ್ನು ಮುಟ್ಟಿಕೊಳ್ಳುತ್ತಾರೆ. ಇಂತಹ ಹೊಟ್ಟೆ ಇರುವ ಕಾರಣದಿಂದಾಗಿಯೇ ತಮಗೆ ಪದೇ ಪದೇ ಅಡುಗೆ ಮನೆ ನೆನಪಾಗುತ್ತಿದೆ ಎಂದು ಹೇಳುತ್ತಾರೆ. ಅವರಿಗೆ ಹೊಟ್ಟೆಯದ್ದೇ ಬಹುದೊಡ್ಡ ಚಿಂತೆಯಾಗಿದೆ. ಏನಾದರೂ ಮಾಡಿ, ಇದನ್ನು ಕರಗಿಸಲೇಬೇಕಲ್ಲ ಎಂದು ಪಣತೊಟ್ಟಿರುವ ರೀತಿಯಲ್ಲಿ ಹೊಟ್ಟೆಯನ್ನು ಸದಾ ಮುಟ್ಟಿಕೊಂಡು ಅಲ್ಲಾಡಿಸ್ತಾ ಇರುತ್ತಾರೆ. ಇದನ್ನೂ ಓದಿ:ಜಯಶ್ರೀ ಜೊತೆ ಸೋನು ಶ್ರೀನಿವಾಸ್ ಗೌಡ ಕಿರಿಕ್

    ಕೇವಲ ಆರ್ಯವರ್ಧನ್ ಗುರೂಜಿಗೆ ಮಾತ್ರ ಹೊಟ್ಟೆ ಬಗ್ಗೆ ಯೋಚನೆ ಇಲ್ಲ. ಸಹ ಸ್ಪರ್ಧಿಗಳು ಕೂಡ ಗುರೂಜಿ ಹೊಟ್ಟೆಯ ಬಗ್ಗೆಯೇ ಮಾತಾಡುವಂತಾಗಿದೆ. ಕೆಲವರು ಆರ್ಯವರ್ಧನ್ ಅವರ ಡೊಳ್ಳು ಹೊಟ್ಟೆನ್ನು ಮುಟ್ಟಿ, ಏನ್ ಸಖತ್ತಾಗಿ ಬೆಳೆಸಿದ್ದೀರಿ ಸರ್ ಎಂದು ತಮಾಷೆ ಮಾಡುತ್ತಾರೆ. ಹೊಟ್ಟೆ ಮುಟ್ಟಿ ಮುಟ್ಟಿ ತಮಾಷೆ ತಗೆದುಕೊಳ್ಳುತ್ತಾರೆ. ಏನೇ ಇರಲಿ, ಪಾಪ ಅಂತಹ ಹೊಟ್ಟೆ ಇಟ್ಟುಕೊಂಡು ಗುರೂಜಿ ಸಖತ್ ಆಗಿಯೇ ಆಟ ಆಡುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬಿಗ್ ಬಾಸ್ ಮನೆಯಲ್ಲಿ ಬಿಕ್ಕಿ ಬಿಕ್ಕಿ ಅತ್ತ ಆರ್ಯವರ್ಧನ್ ಗುರೂಜಿ

    ಬಿಗ್ ಬಾಸ್ ಮನೆಯಲ್ಲಿ ಬಿಕ್ಕಿ ಬಿಕ್ಕಿ ಅತ್ತ ಆರ್ಯವರ್ಧನ್ ಗುರೂಜಿ

    ಬಿಗ್ ಬಾಸ್ ಮನೆಗೆ ಮೊದಲ ಸ್ಪರ್ಧಿಯಾಗಿ ಕಾಲಿಟ್ಟ ಆರ್ಯವರ್ಧನ್ ಗುರೂಜಿ ಸದ್ಯ ಬಿಗ್ ಬಾಸ್ ಮನೆಯಲ್ಲೇ ಯಾರಿಗೂ ಬೇಡವಾಗಿದ್ದಾರೆ. ಟಾಸ್ಕ್ ವೊಂದರಲ್ಲಿ ಭಾಗಿಯಾಗಲು ಎರಡು ತಂಡಗಳನ್ನು ರಚಿಸಲಾಗಿತ್ತು. ಕರುನಾಡ ವಾರಿಯರ್ಸ್ ಮತ್ತು ಶಕ್ತಿ ಹೆಸರಿನಲ್ಲಿ ತಯಾರಾದ ಎರಡು ತಂಡಗಳು ತಲಾ ಆರು ಜನರನ್ನು ಆಯ್ಕೆ ಮಾಡಿಕೊಳ್ಳಬೇಕಿತ್ತು. ಎರಡೂ ತಂಡಗಳ ಕ್ಯಾಪ್ಟನ್ ಗುರೂಜಿ ಅವರನ್ನು ಬಿಟ್ಟೆ ತಂಡಕ್ಕೆ ಸದಸ್ಯರನ್ನು ಆಯ್ಕೆ ಮಾಡಿಕೊಂಡರು. ಹೀಗಾಗಿ ಆರ್ಯವರ್ಧನ್ ಯಾರಿಗೂ ಬೇಡವಾದ ಸ್ಪರ್ಧಿಯಾಗಿ ಉಳಿಯಬೇಕಾಯಿತು.

    ತಾವೂ ಯಾವುದೇ ತಂಡದಲ್ಲಿ ಇಲ್ಲ ಎನ್ನುವ ನೋವು ಅವರನ್ನು ಕಾಡುತ್ತಿತ್ತು. ಹಾಗಾಗಿ ವೋಟ್ಸ್ ಪೋಲ್ ವೊಂದನ್ನು ಮಾಡಿ, ಆರ್ಯವರ್ಧನ್ ಗುರೂಜಿಯನ್ನು ತಂಡದಲ್ಲಿ ಸೇರಿಸಿಕೊಳ್ಳಬೇಕಿತ್ತಾ ಎಂದು ಪ್ರಶ್ನೆಯನ್ನು ಕೇಳಿತ್ತು. ಅದಕ್ಕೆ ನೋಡುಗರು ಸಕಾರಾತ್ಮಕ ರೀತಿಯಲ್ಲೇ ಉತ್ತರಿಸಿದ್ದರು. ಹಾಗಾಗಿ ಅನಿವಾರ್ಯವಾಗಿ ಅವರನ್ನು ತಂಡದಲ್ಲಿ ಸೇರಿಸಿಕೊಳ್ಳಬೇಕಾಯಿತು. ಈ ವಿಷಯವನ್ನು ಕೇಳಿದ ತಕ್ಷಣವೇ ಗುರೂಜಿ ಭಾವುಕರಾದರು. ಇದನ್ನೂ ಓದಿ:ಶೂಟಿಂಗ್ ವೇಳೆ ಅವಘಡ: ಆಸ್ಪತ್ರೆ ಸೇರಿದ ಬಾಹುಬಲಿ ಬಿಜ್ಜಳದೇವ ಪಾತ್ರಧಾರಿ ನಾಸರ್

    ತಮ್ಮನ್ನು ಜನರು ಆಯ್ಕೆ ಮಾಡಿದ್ದಾರೆ ಎಂದು ವಿಷಯ ತಿಳಿದ ತಕ್ಷಣವೇ ಭಾವುಕರಾಗಿ ಕ್ಯಾಮೆರಾ ಮುಂದೆ ಬಂದ ಆರ್ಯವರ್ಧನ್, ಬಿಕ್ಕಿ ಬಿಕ್ಕಿ ಅತ್ತರು. ನಿಮ್ಮ ಋಣವನ್ನು ನಾನು ಎಂದಿಗೂ ಮರೆಯುವುದಿಲ್ಲ ಎಂದು ಅಭಿಮಾನಿಗಳಿಗೆ ಕೈ ಮುಗಿದು ಕೇಳಿಕೊಂಡರು. ಈ ಪ್ರೀತಿ ನಿರಂತರವಾಗಿರಲಿ ಎಂದು ಕೇಳಿಕೊಂಡರು.

    Live Tv
    [brid partner=56869869 player=32851 video=960834 autoplay=true]

  • ಆರ್ಯವರ್ಧನ್ ಗುರೂಜಿ ಆಸ್ತಿ 5 ಸಾವಿರ ಕೋಟಿಯಂತೆ: ಸಿನಿಮಾ ರಂಗಕ್ಕೂ ಕೊಟ್ಟಿದ್ದಾರಂತೆ ಸಾಲ

    ಆರ್ಯವರ್ಧನ್ ಗುರೂಜಿ ಆಸ್ತಿ 5 ಸಾವಿರ ಕೋಟಿಯಂತೆ: ಸಿನಿಮಾ ರಂಗಕ್ಕೂ ಕೊಟ್ಟಿದ್ದಾರಂತೆ ಸಾಲ

    ಬಿಗ್ ಬಾಸ್ ಮನೆಯಲ್ಲಿ ಒಂದು ಕಡೆ ಟ್ರ್ಯಾಜಿಡಿ ಕಥೆಗಳೇ ಓಡುತ್ತಿದ್ದರೆ, ಮತ್ತೊಂದು ಕಡೆ ಆರ್ಯವರ್ಧನ್ ಗುರೂಜಿ ತಮ್ಮ ಪಾಡಿಗೆ ತಾವು ಅನಿಸಿದನ್ನೂ ಮಾಡುತ್ತಾ ಹೋಗುತ್ತಿದ್ದಾರೆ. ರಾಕೇಶ್ ಅಡಿಗ, ಸೋನು ಶ್ರೀನಿವಾಸ್ ಗೌಡ, ಸಾನ್ಯ ಅಯ್ಯರ್ ಸೇರಿದಂತೆ ಹಲವರು ತಮ್ಮ ಮೇಲೆ ನಡೆದ ಮಾನಸಿಕ ಮತ್ತು ದೈಹಿಕ ಶೋಷಣೆಯನ್ನು ಹಂಚಿಕೊಂಡಿದ್ದಾರೆ. ಕೆಲವರು ತಮ್ಮ ಬ್ರೇಕ್ ಅಪ್ ಕಥೆಗಳನ್ನು ಹೇಳಿದ್ದರೆ ಮತ್ತಷ್ಟು ಜನ ಡಿವೋರ್ಸ್ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ. ಈ ನಡುವೆ ಆರ್ಯವರ್ಧನ್ ಗುರೂಜಿ ಬೇರೆ ರೀತಿಯಲ್ಲೇ ಇದನ್ನು ವ್ಯಾಖ್ಯಾನಿಸಿದ್ದಾರೆ.

    ತಂದೆ ತಾಯಿ ಗಲಾಟೆ, ಪ್ರೇಮ, ವಿರಹ, ಬ್ರೇಕ್ ಅಪ್ ಈ ರೀತಿಯ ವಿಷಯಗಳನ್ನು ಮನೆಯಲ್ಲಿ ಇದ್ದವರು ಹೇಳಿಕೊಂಡು ಸಿಂಪತಿ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಎಲ್ಲರ ಜೀವನದಲ್ಲೂ ಕಹಿ ಘಟನೆಗಳು ನಡೆದಿರುತ್ತವೆ. ಅವುಗಳನ್ನು ದಾಟಿಕೊಂಡು ಮುಂದೆ ಸಾಗಬೇಕು ಎಂದಿದ್ದಾರೆ. ಸಿಂಪತಿ ಪಡೆಯುವಂತಹ ವಿಷಯಗಳನ್ನು ಕಡಿಮೆ ಮಾಡಿ ಎಂದು ಸಲಹೆ ನೀಡಿದ್ದಾರೆ. ಈ ನಡುವೆ ತಾವು ಸಾವಿರಾರು ಕೋಟಿ ಒಡೆಯರು ಎಂದು ಆರ್ಯರ್ವಧನ್ ಗುರೂಜಿ ಹೇಳಿಕೊಂಡಿದ್ದಾರೆ. ಇದನ್ನೂ ಓದಿ:ಮಲತಂದೆಯ ಅಸಲಿ ಮುಖವಾಡ ಬಿಚ್ಚಿಟ್ಟ ನಟಿ ಸಾನ್ಯ ಅಯ್ಯರ್: ಯುವನಟಿಯ ಬದುಕಿನಲ್ಲಿ ಇದೆಂಥ ಬಿರುಗಾಳಿ?

    ತಮ್ಮದು ಮೂಲತಃ ಹಳ್ಳಿ. ತಮ್ಮ ಹಿರಿಯರ ಆಸ್ತಿಯು ಸುಮಾರು ಐದು ಸಾವಿರ ಕೋಟಿಗೂ ಅಧಿಕ ಬೆಲೆ ಬಾಳುತ್ತದೆ. ನಾನಂತೂ ಕಷ್ಟದಲ್ಲಿ ಹುಟ್ಟಿಲ್ಲ. ಒಳ್ಳೆಯ ರೀತಿಯಲ್ಲೇ ಬದುಕಿದ್ದೇನೆ. ಅನೇಕರಿಗೆ ಸಹಾಯ ಮಾಡಿದ್ದೇನೆ. ಸಿನಿಮಾ ರಂಗಕ್ಕೂ ಸಾಲ ಕೊಟ್ಟಿದ್ದೇನೆ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಅನೇಕ ನಿರ್ದೇಶಕರಿಗೆ ಮತ್ತು ನಿರ್ಮಾಪಕರಿಗೆ ಆರ್ಯವರ್ಧನ್ ಗುರೂಜಿ ಸಾಲ ಕೊಟ್ಟಿರುವುದಾಗಿ ತಿಳಿಸಿದ್ದಾರೆ. ಯಾರೆಲ್ಲ ಸಾಲವನ್ನು ಪಡೆದುಕೊಂಡಿದ್ದಾರೆ ಎಂದು ಅವರು ಹೇಳಿಕೊಳ್ಳಲಿಲ್ಲ.

    Live Tv
    [brid partner=56869869 player=32851 video=960834 autoplay=true]