Tag: ಗುರು

  • ಪುಲ್ವಾಮಾದಲ್ಲಿ ಮಂಡ್ಯದ ಯೋಧ ಹುತಾತ್ಮ – ಫೆ.10ಕ್ಕೆ ರಜೆ ಮುಗಿಸಿ ಊರಿಂದ ಹೊರಟಿದ್ದರು

    ಪುಲ್ವಾಮಾದಲ್ಲಿ ಮಂಡ್ಯದ ಯೋಧ ಹುತಾತ್ಮ – ಫೆ.10ಕ್ಕೆ ರಜೆ ಮುಗಿಸಿ ಊರಿಂದ ಹೊರಟಿದ್ದರು

    ಸಂತೋಷ್ ದಿಂಡಗೂರು
    ಮಂಡ್ಯ: ಜಮ್ಮು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಆವಂತಿಪುರದಲ್ಲಿ ನಡೆದ ಉಗ್ರರ ಆತ್ಮಾಹುತಿ ದಾಳಿಯಲ್ಲಿ ರಾಜ್ಯದ ಯೋಧರೊಬ್ಬರು ವೀರಮರಣವನ್ನಪ್ಪಿದ್ದಾರೆ. ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕೆ.ಎಂ.ದೊಡ್ಡಿ ಸಮೀಪದ ಗುಡಿಗೆರೆ ಕಾಲೋನಿಯ ಗುರು.ಎಚ್. (33) ಹುತಾತ್ಮ ಯೋಧ.

    ಗುರು ಅವರು ಸಿಆರ್‌ಪಿಎಫ್‌ ನ 82ನೇ ಬೆಟಾಲಿಯನ್‍ನಲ್ಲಿ ಸೇವೆ ಸಲ್ಲಿಸುತ್ತಿದ್ದು, 2011ರಲ್ಲಿ ಸಿಆರ್‌ಪಿಎಫ್‌ ಗೆ ಸೇರ್ಪಡೆಯಾಗಿದ್ದರು. ಜಾರ್ಖಂಡ್‍ ನಲ್ಲಿ 94ನೇ ಬೆಟಾಲಿಯನ್ ನಲ್ಲಿದ್ದ ಗುರು ಬಳಿಕ ಶ್ರೀನಗರದಲ್ಲಿ ಸೇವೆ ಸಲ್ಲಿಸಲು ನಿಯೋಜನೆಗೊಂಡಿದ್ದರು.

    ಹುತಾತ್ಮ ಯೋಧ ಗುರು ಯಾರು?: ಗುಡಿಗೆರೆ ಕಾಲೋನಿಯ ಹೊನ್ನಯ್ಯ ಹಾಗೂ ಚಿಕ್ಕೋಳಮ್ಮ ದಂಪತಿಯ ಮೂವರು ಮಕ್ಕಳಲ್ಲಿ ಹಿರಿಯ ಪುತ್ರ ಗುರು. ಇವರಿಗೆ ಇಬ್ಬರು ತಮ್ಮಂದಿರಿದ್ದು ಮಧು ಕೆಇಬಿಯಲ್ಲಿ ಕೆಲಸ ಮಾಡುತ್ತಿದ್ದು, ಆನಂದ್ ಹೋಂ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದಾರೆ. ಗುರು ಅವರ ಅಪ್ಪ ಅಮ್ಮ ಕೆಎಂ ದೊಡ್ಡಿಯಲ್ಲಿ ಇಸ್ತ್ರಿ ಅಂಗಡಿ ಇಟ್ಟುಕೊಂಡು ದುಡಿಯುತ್ತಿದ್ದರು.

    ಒಂದು ವರ್ಷ ಹಿಂದೆ ಗೃಹ ಪ್ರವೇಶ ಮಾಡಿಕೊಂಡಿದ್ದ ಗುರು ಅವರಿಗೆ 10 ತಿಂಗಳ ಹಿಂದೆ ಮದುವೆಯಾಗಿತ್ತು. ಸ್ವಂತ ಮಾವನ ಮಗಳಾದ, ಹಲಗೂರು ಬಳಿಯ ಸಾಸಲಾಪುರ ಗ್ರಾಮದವರಾದ ಕಲಾವತಿಯನ್ನು ವಿವಾಹವಾಗಿದ್ದರು. 15 ದಿನದ ಹಿಂದೆ ರಜೆಗೆಂದು ಬಂದಿದ್ದ ಗುರು ಅವರು ಫೆಬ್ರವರಿ 10ರಂದು ಗುಡಿಗೆರೆ ಕಾಲೋನಿಯಿಂದ ರಜೆ ಮುಗಿಸಿಕೊಂಡು ಹೊರಟಿದ್ದರು. ಹೀಗೆ ಹೊರಟಿದ್ದ ಗುರು ಗುರುವಾರವಷ್ಟೇ ಕರ್ತವ್ಯಕ್ಕೆ ಹಾಜರಾಗಿದ್ದರು. ಆದರೆ, ಕರ್ತವ್ಯಕ್ಕೆ ವಾಪಸ್ ಬರುತ್ತಿದ್ದಂತೆಯೇ ಮಾರಣಹೋಮದಲ್ಲಿ ಸಾವನ್ನಪ್ಪಿದ್ದು ವಿಧಿ ವಿಪರ್ಯಾಸ. ಗುರು ಸಾವಿನ ಸುದ್ದಿ ಕೇಳಿ ಗುಡಿಗೆರೆ ಕಾಲೋನಿಯ ನಿವಾಸದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

    ಇಲ್ಲೇ ಬಂದ್ಬಿಡು ಅಂದಿದ್ದರಂತೆ ತಾಯಿ!: ಮೊನ್ನೆ ಫೆಬ್ರವರಿ 10ರಂದು ರಜೆ ಮುಗಿಸಿ ವಾಪಸ್ ತೆರಳುವ ಮುನ್ನ ಗುರು ತಾಯಿ ಚಿಕ್ಕೋಳಮ್ಮ, ಏನಕ್ಕೆ ಹೋಗ್ತೀಯಾ..? ಈ ಕೆಲಸ ಬಿಟ್ಟು ಬಿಡು, ಇಲ್ಲೇ ಇರು ಎಂದು ಗುರುವಿಗೆ ಕಿವಿ ಮಾತು ಹೇಳಿದ್ದರಂತೆ. ಆದರೆ ಇದಕ್ಕೆ ಗುರು, ನಾನು ದೇಶ ಸೇವೆ ಮಾಡಬೇಕು. ನನ್ನಂತ ತುಂಬಾ ಜನರು ಯೋಧರಿದ್ದಾರೆ. ನಾವು ಕೋಟ್ಯಂತರ ಜನರ ರಕ್ಷಣೆ ಮಾಡಬೇಕು. ನಾನು ಕೆಲಸ ಬಿಡಲ್ಲ ಎಂದು ಹೇಳಿದ್ದರಂತೆ. ಪುತ್ರನ ಸಾವಿನ ವಿಷಯ ತಿಳಿದು ತಂದೆ ಹೊನ್ನಯ್ಯ ಅಸ್ವಸ್ಥರಾಗಿದ್ದಾರೆ. ಸದ್ಯ ಗುರು ಪತ್ನಿ ಕಲಾವತಿ ತವರು ಮನೆಯಲ್ಲಿದ್ದು, ಸಂಬಂಧಿಕರ ಜೊತೆ ಗುಡಿಗೆರೆ ಕಾಲೋನಿಗೆ ಆಗಮಿಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    https://youtu.be/5JqTWRx0JWA

    ಘಟನೆ ವಿವರ: ಗುರುವಾರ ಮಧ್ಯಾಹ್ನ 3.30ರ ಸುಮಾರಿಗೆ ಜೈಶ್-ಎ- ಮೊಹಮ್ಮದ್ ಉಗ್ರ ಸಂಘಟನೆಗೆ ಸೇರಿದ ಅದಿಲ್ ದರ್ ಎಂಬ ಉಗ್ರ ಸ್ಕಾರ್ಪಿಯೋ ಕಾರಿನಲ್ಲಿ ಸ್ಫೋಟಕ ತುಂಬಿ ಆತ್ಮಾಹುತಿ ದಾಳಿ ಮಾಡಿದ್ದ. ಈ ದಾಳಿಯಲ್ಲಿ ಇದುವರೆಗೆ 44 ಯೋಧರು ಹುತಾತ್ಮರಾಗಿದ್ದು, ಹಲವರು ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಸೇನಾಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಶುಕ್ರವಾರ ಬೆಳಗ್ಗೆ ಕೇಂದ್ರ ಸಚಿವ ಸಂಪುಟದ ತುರ್ತು ಸಭೆ ನಡೆಯಲಿದೆ. ಇದರ ಬೆನ್ನಲ್ಲೇ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಪುಲ್ವಾಮಾಗೆ ಭೇಟಿ ನೀಡಲಿದ್ದಾರೆ.

  • ಶಿಷ್ಯ ಪ್ರೇಮ್ ಮೇಲೆ ಮುನಿಸಿಕೊಂಡಿದ್ದ ಎ.ಆರ್.ಬಾಬು

    ಶಿಷ್ಯ ಪ್ರೇಮ್ ಮೇಲೆ ಮುನಿಸಿಕೊಂಡಿದ್ದ ಎ.ಆರ್.ಬಾಬು

    ಬೆಂಗಳೂರು: ನಿರ್ದೇಶಕ ಎ.ಆರ್.ಬಾಬು ನಿಧನಕ್ಕೆ ಇಡೀ ಚಿತ್ರರಂಗವೇ ಕಣ್ಣೀರು ಇಡುತ್ತಿದೆ. ನಿರ್ದೇಶಕ ಜೋಗಿ ಪ್ರೇಮ್ ಸಹ ಬಾಬು ಅವರ ಗರಡಿಯಲ್ಲಿ ಪಳಗಿದ್ದರು. ಆದ್ರೆ ಕೆಲ ತಿಂಗಳ ಹಿಂದೆ ಬಾಬು ತಮ್ಮ ಶಿಷ್ಯನ ಮೇಲೆ ಮುನಿಸಿಕೊಂಡಿದ್ದರು.

    ದಿ ವಿಲನ್ ಸಿನಿಮಾ ಬಿಡುಗಡೆಗೆ ಮುನ್ನ ಚಿತ್ರದ ಹಾಡಿನ ಸಾಹಿತ್ಯ ಹಲವರ ಅಸಮಾಧಾನಕ್ಕೆ ಕಾರಣವಾಗಿತ್ತು. ಈ ವೇಳೆ ಅಭಿಮಾನಿಗಳಿಗೆ ಸ್ಪಷ್ಟನೆ ನೀಡಲು ಪ್ರೇಮ್ ಫೇಸ್ ಬುಕ್ ಲೈವ್ ಬಂದಿದ್ದರು. ಕೆಲ ನಿರ್ದೇಶಕರು ಹಣಕಾಸಿನ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಟಿ ಮಾಲ್‍ನಲ್ಲಿ ವಿಲನ್ ಚಿತ್ರದ ಟೀಸರ್ ಬಿಡುಗಡೆ ಮಾಡುತ್ತಿದ್ದು, ಈ ಕಾರ್ಯಕ್ರಮಕ್ಕೆ ಆಗಮಿಸುವ ಪ್ರೆಕ್ಷಕರಿಗೆ 500 ರೂ. ಟಿಕೆಟ್ ದರವನ್ನು ನಿಗದಿ ಮಾಡಿದ್ದೇವೆ. ಅಲ್ಲಿ ಸಂಗ್ರಹವಾದ ಆ ಹಣವನ್ನು ಹಿರಿಯ ನಿರ್ದೇಶಕರ ಕುಟುಂಬಕ್ಕೆ ಅಲ್ಲೆ ನೀಡಲಾಗುವುದು ಅಂದಿದ್ದರು. ಇದನ್ನೂ ಓದಿ: ನನ್ನ ಆತ್ಮೀಯ ಅಲ್ಲಾಹುವಿನ ಪಾದ ಸೇರಿದ-ಎಆರ್ ಬಾಬು ನಿಧನಕ್ಕೆ ಜಗ್ಗೇಶ್ ಕಂಬನಿ

    ಈ ವೇಳೆ ತಮ್ಮ ಮಾತಿನಲ್ಲಿ ಹಣಕಾಸಿನ ಸಮಸ್ಯೆ ಎದುರಿಸುತ್ತಿರುವ ನಿರ್ದೇಶಕರು ಎ.ಟಿ.ರಘು, ಎ.ಆರ್.ಬಾಬು ಸೇರಿದಂತೆ ಹಲವರು ನಿರ್ಗತಿಕರಾಗಿದ್ದಾರೆ ಎಂದು ಹೇಳಿದ್ದರು. ನಿರ್ದೇಶಕರಿಗೆ ನಿರ್ಗತಿಕರು ಎಂಬ ಪದ ಬಳಸಿದ್ದಕ್ಕೆ ಎ.ಆರ್.ಬಾಬು ಆಕ್ರೋಶ ವ್ಯಕ್ತಪಡಿಸಿದ್ದರು. ಚಂದನವನದ ಹಿರಿಯ ನಿರ್ದೇಶಕರು ಆರ್ಥಿಕ ಸಂಕಷ್ಟದಲ್ಲಿರೋದು ನಿಜ. ಆದ್ರೆ ಪ್ರೇಮ್ ನಿರ್ಗತಿಕರು ಎಂಬ ಪದ ಬಳಸಿರೋದು ತಪ್ಪು. ನಿರ್ಗತಿಕರು ಅಂದ್ರೆ ಯಾರು ಇಲ್ಲದವರರು ಎಂದರ್ಥವಾಗುತ್ತದೆ ಎಂದು ಬಾಬು ಅವರು ತಮ್ಮ ಅಸಮಾಧಾನವನ್ನು ಹೊರಹಾಕಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಗುರುಗ್ರಾಮ ಶೂಟೌಟ್ ಕೇಸ್ – ನಾಲ್ಕು ದಿನಗಳಿಂದ ನಿದ್ದೆ ಇಲ್ಲದೇ ಜಡ್ಜ್ ಪತ್ನಿಯನ್ನು ಕೊಂದೇಬಿಟ್ಟ!

    ಗುರುಗ್ರಾಮ ಶೂಟೌಟ್ ಕೇಸ್ – ನಾಲ್ಕು ದಿನಗಳಿಂದ ನಿದ್ದೆ ಇಲ್ಲದೇ ಜಡ್ಜ್ ಪತ್ನಿಯನ್ನು ಕೊಂದೇಬಿಟ್ಟ!

    ಗುರುಗ್ರಾಮ: ನ್ಯಾಯಾಧೀಶರ ಪತ್ನಿಯನ್ನು ಗುಂಡಿಟ್ಟು ಕೊಲೆ ಮಾಡಿದ ಆರೋಪಿ ಹೆಡ್ ಕಾನ್ಸ್‌ಸ್ಟೇಬಲ್ ಮಹಿಪಾಲ್ ಕೌಟುಂಬಿಕ ಸಮಸ್ಯೆಯಿಂದ ನರಳುತ್ತಿದ್ದ ವಿಚಾರ ತನಿಖೆ ವೇಳೆ ಬೆಳಕಿಗೆ ಬಂದಿದೆ.

    ಆರೋಪಿ ಮಹಿಪಾಲ್ ಹರ್ಯಾಣದ ಗಾಯಕಿ ಕವಯಿತ್ರಿಯೊಬ್ಬರನ್ನು ಮದುವೆಯಾಗಿದ್ದು, ಕಳೆದ ನಾಲ್ಕು ದಿನಗಳಿಂದ ನಿದ್ರೆಯಿಲ್ಲದೆ ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಿದ್ದ. ಆರೋಪಿ ಗುರು ಮತ್ತು ಗುರುಮಾತೆ ಪ್ರಭಾವಕ್ಕೆ ಒಳಗಾಗಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

    2016ರಿಂದ ಮಹಿಪಾಲ್ ಭದ್ರತಾ ಸಿಬ್ಬಂದಿಯಾಗಿ ನಿಯೋಜನೆಗೊಂಡಿದ್ದು, ಇದೂವರೆಗೂ ಆತನ ವಿರುದ್ಧ ಯಾವುದೇ ದೂರು ದಾಖಲಾಗಿಲ್ಲ. ಅಷ್ಟೇ ಅಲ್ಲದೇ ಮಹಿಪಾಲ್ ಜಡ್ಜ್ ಬಗ್ಗೆ ಯಾವುದೇ ದೂರು ನೀಡಿಲ್ಲ. ಹೀಗಾಗಿ ಮಹಿಪಾಲ್ ಈ ಕೃತ್ಯ ಎಸಗಲು ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಇದನ್ನು ಓದಿ:  ನಡುರಸ್ತೆಯಲ್ಲಿ ಜಡ್ಜ್ ಪತ್ನಿ, ಮಗನನ್ನು ಗುಂಡಿಕ್ಕಿ ಫೋನ್ ಮಾಡಿ ತಿಳಿಸಿದ!

    ಆರೋಪಿಯನ್ನು ಕೆಲಸದಿಂದ ವಜಾಮಾಡಲಾಗಿದ್ದು ಪೊಲೀಸರು 4 ದಿನಗಳ ಕಾಲ ಆತನನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ ಪ್ರಕರಣಕ್ಕಾಗಿ ವಿಶೇಷ ತನಿಖಾ ತಂಡವನ್ನು ಹರ್ಯಾಣ ಪೊಲೀಸ್ ರಚಿಸಿದೆ.

    ವಿಲಕ್ಷಣ ಪೋಸ್ಟ್ ಹಾಕಿದ್ದ:
    ಶೂಟ್ ನಡೆಸುವ ಮುನ್ನ ದಿನವಾದ ಶುಕ್ರವಾರ ಮಹಿಪಾಲ್ ಫೇಸ್‍ಬುಕ್ ನಲ್ಲಿ ವಿಲಕ್ಷಣ ಪೋಸ್ಟ್ ಒಂದನ್ನು ಪ್ರಕಟಿಸಿದ್ದ. ನೀಲಿ ಪೆನ್ನಿನಲ್ಲಿ ‘ಪ್ಯಾಸ್ಟರ್ ರಾಬಿನ್’ ಎಂದು ಬರೆದು ಫೋಟೋ ಅಪ್ಲೋಡ್ ಮಾಡಿದ್ದ. ಈಗ ಪೊಲೀಸರು ಈ ನಿಟ್ಟಿನಲ್ಲೂ ತನಿಖೆ ಮುಂದುವರಿಸಿದ್ದಾರೆ.

    ಬಾಲ್ಯದಲ್ಲೇ ಪೋಷಕರನ್ನು ಕಳೆದುಕೊಂಡಿದ್ದ ಮಹಿಪಾಲ್ ಚಿಕ್ಕಪ್ಪನ ಆಶ್ರಯದಲ್ಲಿ ಬೆಳೆದಿದ್ದ. 2007ರಲ್ಲಿ ಪೊಲೀಸ್ ಉದ್ಯೋಗಕ್ಕೆ ಸೇರಿದ್ದ ಈತ 2008ರಲ್ಲಿ ಮೀನಾ ಅವರನ್ನು ಮದುವೆಯಾಗಿದ್ದ. ಈ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.

    ಮಹಿಪಾಲ್ ಗುರು ಇಂದ್ರಜೀತ್ ಸಿಂಗ್ ಎಂದು ಶಂಕೆ ವ್ಯಕ್ತವಾಗಿದ್ದು, 2015ರ ಆಗಸ್ಟ್ ನಲ್ಲಿ ಮತಾಂತರ ಮಾಡುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಹೋಟೆಲ್ ಮೇಲೆ ದಾಳಿ ನಡೆಸಿ ಇಂದ್ರಜೀತ್ ಸಿಂಗ್ ಸೇರಿದಂತೆ 8 ಮಂದಿಯನ್ನು ಪೊಲೀಸರು ಬಂಧಿಸಿದ್ದರು. ಮಹಿಪಾಲ್ ಸಿಂಗ್ ಮಧ್ಯಸ್ಥಿಕೆಯ ಬಳಿಕ ಎಲ್ಲರನ್ನೂ ಬಿಡುಗಡೆ ಮಾಡಲಾಗಿತ್ತು ಎನ್ನುವ ವಿಚಾರ ತಿಳಿದುಬಂದಿದೆ.

    ಆರೋಗ್ಯ ಪರೀಕ್ಷೆಯ ವೇಳೆ ಆತನಿಗೆ ಯಾವುದೇ ಸಮಸ್ಯೆ ಇಲ್ಲ ಎನ್ನುವ ಫಲಿತಾಂಶ ಬಂದಿದ್ದು, ಯಾವುದೋ ಒತ್ತಡಕ್ಕೆ ಒಳಗಾಗಿ ಈ ಕೃತ್ಯ ಎಸಗಿರಬಹುದು ಎನ್ನುವ ಶಂಕೆ ಈಗ ವ್ಯಕ್ತವಾಗಿದೆ.

    ಗುರುಗ್ರಾಮದಲ್ಲಿ ಶನಿವಾರ ಮಹಿಪಾಲ್ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರಾದ ಕೃಷ್ಣ ಕಾಂತ್ ಅವರ ಪತ್ನಿ ರಿತು ಮತ್ತು ಮಗ ಧ್ರುವ್ ಮೇಲೆ ಗುಂಡಿನ ದಾಳಿ ನಡೆಸಿದ್ದ. ಮಾರುಕಟ್ಟೆಯಲ್ಲಿ ಶಾಪಿಂಗ್ ಮಾಡುತ್ತಿದ್ದ ವೇಳೆ ಈ ಕೃತ್ಯ ಎಸಗಿದ್ದ. ಕೃತ್ಯದ ಬಳಿಕ ನ್ಯಾಯಾಧೀಶರಿಗೆ ಫೋನ್ ಕರೆ ಮಾಡಿ ಮಾಹಿತಿ ನೀಡಿದ್ದ. ರಿತು ಮತ್ತು ಧ್ರುವ್ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ರಿತು ಮೃತಪಟ್ಟಿದ್ದಾರೆ. ಧ್ರುವ್ ಪರಿಸ್ಥಿತಿ ಗಂಭೀರವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅಕ್ಷರಸ್ಥರನ್ನಾಗಿ ಮಾಡಿದ್ದ ಗುರುವಿನ ಕಂಚಿನ ಪುತ್ಥಳಿ ಪ್ರತಿಷ್ಠಾಪನೆ ಮಾಡಿ ಆರಾಧನೆ

    ಅಕ್ಷರಸ್ಥರನ್ನಾಗಿ ಮಾಡಿದ್ದ ಗುರುವಿನ ಕಂಚಿನ ಪುತ್ಥಳಿ ಪ್ರತಿಷ್ಠಾಪನೆ ಮಾಡಿ ಆರಾಧನೆ

    ವಿಜಯಪುರ: ಜಿಲ್ಲೆಯ ಇಂಡಿ ತಾಲೂಕಿನ ಅಥರಗಾ ಗ್ರಾಮದಲ್ಲಿ ಹೆಣ್ಣು ಮಕ್ಕಳ ಸರ್ಕಾರಿ ಶಾಲೆಯೊಂದರಲ್ಲಿ ಅಕ್ಷರಸ್ಥರನ್ನಾಗಿ ಮಾಡಿದ್ದ ಗುರುವಿನ ಕಂಚಿನ ಪುತ್ಥಳಿ ಪ್ರತಿಷ್ಠಾಪನೆ ಮಾಡಿ ದೇವಸ್ಥಾನವನ್ನು ನಿರ್ಮಿಸಿದ್ದಾರೆ.

    ಗ್ರಾಮದ ಸರ್ಕಾರಿ ಕನ್ನಡ ಹೆಣ್ಣುಮಕ್ಕಳ ಶಾಲೆಯಾಗಿರುವ ಇದು 106 ವರ್ಷದ ಹಳೆಯದಾಗಿದ್ದು, ಅಲ್ಲಿ ಈ ಶಾಲೆಯ ಶಿಕ್ಷಕ ರೇವಣಸಿದ್ದ ಎಂಬವರ ದೇವಾಲಯವನ್ನು ಕಟ್ಟಿಸಿದ್ದಾರೆ. ರೇವಣಸಿದ್ದ ಶಿಕ್ಷಕರು ವಿಜಯಪುರದ ಮನಗೂಳಿ ಗ್ರಾಮದಲ್ಲಿ 1925 ಜನಿಸಿ ನಂತರ ಶಿಕ್ಷಕರಾಗಿ ಅಥರಗಾ ಗ್ರಾಮದಲ್ಲಿ 30 ವರ್ಷ ಸೇವೆಸಲ್ಲಿದ್ದರು. ಅನಕ್ಷರತೆ, ಬಡತನ ಸೇರಿದಂತೆ ಶಾಲೆ ಬಿಟ್ಟ ಮಕ್ಕಳು ಹೆಚ್ಚಿಗಿದ್ದರು. ಆಗ ರೇವಣಸಿದ್ದ ಶಿಕ್ಷಕರು ದೊಡ್ಡವರಿಂದ ಹಿಡಿದು ಎಲ್ಲ ಮಕ್ಕಳಿಗೂ ಅಕ್ಷರಸ್ಥರನ್ನಾಗಿ ಮಾಡಲು ಶ್ರಮಿಸಿದ್ದರು.

    ಅದಕ್ಕಾಗಿ ಅವರ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಸೇರಿ ಅವರು ತೀರಿ ಹೋದ ಮೇಲೆ ಶಾಲೆಯಲ್ಲಿ ಅವರ ಕಂಚಿನ ಪುತ್ಥಳಿ ಪ್ರತಿಷ್ಠಾಪಿಸಿ ದೇವಾಲಯವನ್ನೆ ಕಟ್ಟಿಸಿದ್ದಾರೆ. ಪ್ರತಿ ನಿತ್ಯ ವಿದ್ಯಾರ್ಥಿಗಳು ಸೇರಿದಂತೆ ಗ್ರಾಮಸ್ಥರು ಅವರಿಗೆ ಪೂಜೆ ಪುನಸ್ಕಾರ ನೆರವೇರುಸುತ್ತಾ ಬಂದಿದ್ದು, ಅವರನ್ನು ದೇವರ ಸಮಾನರಾಗಿ ಕಾಣುತ್ತಾರೆ.

    ಗುರು ಬ್ರಹ್ಮ ಗುರು ವಿಷ್ಣು ಗುರುದೇವೊ ಮಹೇಶ್ವರ ಎಂಬಂತೆ ಇಲ್ಲಿ ರೇವಣಸಿದ್ದ ಶಿಕ್ಷಕರನ್ನು ದೇವರ ಸಮಾನರಾಗಿ ಕಾಣುವುದರ ಜೊತೆಗೆ ಅವರನ್ನು ದೇವರಂತೆ ಪೂಜಿಸುತ್ತಿರುವುದು ಶಿಕ್ಷಕ ವೃತ್ತಿಗೆ ಸಂದ ಅಭೂತ ಪೂರ್ವ ಗೌರವವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಗುರಿ ಇದೆ, ಆದ್ರೆ ಗುರು ಇಲ್ಲ- ಕಂಚಿನ ಕಂಠದ ಬಾಲಕನಿಗೆ ಬೇಕಿದೆ ಸಂಗೀತ ಶಿಕ್ಷಣದ ನೆರವು

    ಗುರಿ ಇದೆ, ಆದ್ರೆ ಗುರು ಇಲ್ಲ- ಕಂಚಿನ ಕಂಠದ ಬಾಲಕನಿಗೆ ಬೇಕಿದೆ ಸಂಗೀತ ಶಿಕ್ಷಣದ ನೆರವು

    ಗದಗ: ಸಂಗೀತದ ಕಲೆ ಕಂಡಕಂಡವರ ಸ್ವತ್ತಲ್ಲ, ಅದು ಬಲ್ಲವರ ಮುತ್ತು. ಈ ಮಾತು ಆ ಬಾಲ ಕಲಾರಾಧಕನಿಗೆ ಹೇಳಿ ಮಾಡಿಸಿರುವಂತಹದ್ದು. ಸಂಗೀತದಲ್ಲಿ ಏನನ್ನಾದ್ರು ಸಾಧಿಸಬೇಕು ಅನ್ನೋದು ಆ ಬಾಲಕನ ಹಂಬಲ. ಆದ್ರೆ ಕಡು ಬಡತನ ಆ ಕಲಾಪ್ರತಿಭೆಯ ಕೈ ಕಟ್ಟಿಹಾಕಿದೆ. ಸಂಗೀತದಲ್ಲಿ ಸಾಧನೆ ಮಾಡಬೇಕೆನ್ನುವ ಛಲದಂಕಮಲ್ಲ ಇದೀಗ ಪಬ್ಲಿಕ್ ಟಿವಿ ಬೆಳಕು ಕಾರ್ಯಕ್ರಮ ಆಶ್ರಯಿಸಿ ಬಂದಿದ್ದಾನೆ.

    ಜನರನ್ನ ಆಕರ್ಷಿಸೋ ಕಂಠಸಿರಿ, ಸಂಗೀತ ಪ್ರತಿಭೆಯ ಮೂಲಕ ಎಂಥವರನ್ನು ತನ್ನತ್ತ ಸೆಳೆದುಕೊಳ್ಳೋ ಬಾಲಕ. ಇದು ಅಪ್ಪಟ ಗ್ರಾಮೀಣ ಸೊಗಡಿನಲ್ಲಿ ಬೆಳೆಯುತ್ತಿರೋ ಬಾಲ ಪ್ರತಿಭೆಯ ಕಲೆಯ ಅನಾವರಣ. ಗದಗ ಜಿಲ್ಲೆ ರೋಣ ತಾಲೂಕಿನ ಯಾವಗಲ್ ಗ್ರಾಮದ 14 ವರ್ಷದ ಚನ್ನಪ್ಪ ಎಲಿ ಚೆಂದನೆಯ ಹಾಡುಗಾರ. ತನ್ನ ಕಂಠಸಿರಿಯಿಂದಲೇ ಎಂಥವರನ್ನು ಮೋಡಿ ಮಾಡೋ ಮೊಡಿಗಾರ ಬಾಲಕ. ತಂದೆ ಈರಪ್ಪ ಎಲಿ ತೀರಿಕೊಂಡಾಗಿನಿಂದ ತಾಯಿ ಆಶ್ರಯದಲ್ಲೆ ಬೆಳೆಯುತ್ತಿರೋ ಚನ್ನಪ್ಪ ಸದ್ಯ 9ನೇ ತರಗತಿಯಲ್ಲಿ ವ್ಯಾಸಂಗ ಮಾಡ್ತಿದ್ದಾನೆ. ತಂದೆ ತೀರಿಕೊಂಡು ಎರಡು ವರ್ಷವಾಗಿದೆ. ತಂದೆ ತೀರಿಕೊಂಡಾಗಿನಿಂದ ಈ ಕುಟುಂಬಕ್ಕೆ ಬಡತನ ಕಿತ್ತು ತಿನ್ನುತ್ತಿದೆ. ತಾಯಿ ಕಸ್ತೂರೆವ್ವ ಹಾಗೂ ಮಗ ಚನ್ನಪ್ಪ ಇವರಿಬ್ಬರು ಬಡತನದ ಕಣ್ಣಿರಿನಲ್ಲಿ ಕೈ ತೊಳೆಯುತ್ತಿದ್ದಾರೆ.

    ಚನ್ನಪ್ಪನಿಗೆ ಸಂಗೀತದಲ್ಲಿ ಸಾಧನೆ ಮಾಡಬೇಕೆಂಬ ಛಲವಿದೆ. ಆದ್ರೆ ಈ ಬಾಲ ಪ್ರತಿಭೆಗೆ ಕುಡುಬಡತನ ಕೈಕಟ್ಟಿ ಕುರಿಸಿದಂತಾಗಿದೆ. ಸಂಗೀತದಲ್ಲಿ ಶಾಸ್ತ್ರೀಯ ಹಾಗೂ ಹಿಂದೂಸ್ತಾನಿ ಸಂಗೀತ ಅಂದ್ರೆ ಈತನಿಗೆ ಅಚ್ಚು ಮೆಚ್ಚು. ಆದ್ರೆ ಸಂಗೀತ ತರಬೇತಿ ಹಾಗೂ ಕಲಾಪರಿಕರಗಳನ್ನು ಕೊಳ್ಳುವುದು ಈತನಿಗೆ ಕನಸಿನ ಮಾತಾಗಿದೆ. ಪಬ್ಲಿಕ್ ಟಿವಿ ಬೆಳಕು ಕಾರ್ಯಕ್ರಮದ ಮೂಲಕ ಸಂಗೀತ ಶಿಕ್ಷಣ ಹಾಗೂ ಪರಿಕರಗಳನ್ನ ನೀಡಿ ಬಾಳಿಗೆ ಬೆಳಕಾಗಬೇಕು ಎಂಬುದು ಇವರ ಆಸೆಯ.

    ಸುತ್ತು ಹಳ್ಳಿಗಳಲ್ಲಿ ಯಾವಗಲ್ ಚೆನ್ನಪ್ಪನ ಹಾಡೆಂದ್ರೆ ಎಲ್ಲರಿಗೂ ಅಚ್ಚುಮೆಚ್ಚು. ಭಜನೆ ಪದ, ಜನಪದ ಗೀತೆ, ಭಾವಗೀತೆ, ಭಕ್ತಿಗೀತೆ, ಡೊಳ್ಳಿನ ಪದ, ಚಿತ್ರಗೀತೆಗಳನ್ನು ಹಾಡುವ ಮೂಲಕ ಜನರನ್ನು ಆಕರ್ಷಿಸಿದ್ದಾನೆ. ಚನ್ನಪ್ಪನಿಗೆ ಸಂಗೀತದಲ್ಲಿ ಮಹೊನ್ನತಿ ಹೊಂದುವ ಆಸೆ. ಆದ್ರೆ ಬಡತನ ಇರುವುದರಿಂದ ಏನನ್ನೂ ಮಾಡಲು ಸಾಧ್ಯವಾಗ್ತಿಲ್ಲ. ಬಾಲಕ ಹಾಡು ಹಾಡುತ್ತಿದ್ರೆ ಜನ ನಿಬ್ಬೆರಗಾಗಿ ಕೇಳ್ತಾರೆ. ಚನ್ನಪ್ಪನಲ್ಲಿ ಅದ್ಭುತ ಸಂಗೀತ ಕಲೆ, ಮಧುರ ಕಂಠವಿದೆ. ಆದ್ರೆ ಬಡತನ ಹಾಸು ಹೊಕ್ಕಾಗಿರುವುದರಿಂದ ಕಲೆಗೆ ಬೆಲೆ ಸಿಗದಂತಾಗಿದೆ. ಗಾನ ಕೋಗಿಲೆಗೆ ನೆಲೆ ಬೇಕಾಗಿದೆ. ಬಾಲ್ಯದಿಂದಲೇ ಆರಂಭವಾದ ಈತನ ಗಾನಯಾನ ಉತ್ತುಂಗಕ್ಕೇರಿದಾಗ ಮಾತ್ರ ಇಂತಹ ಗ್ರಾಮೀಣ ಪ್ರತಿಭೆಗೊಂದು ಮನ್ನಣೆ ದೊರೆಯಲು ಸಾಧ್ಯ. ಈತನಿಗೆ ಗುರಿ ಇದೆ, ಆದ್ರೆ ಗುರು ಇಲ್ಲ. ಬಡ ಸಂಗೀತ ಕಲಾವಿನ ಪಾಲಿಗೆ ಬೆಳಕು ಕಾರ್ಯಕ್ರಮ ಸಂಗೀತ ವಿದ್ಯಾಭ್ಯಾಸ ಕೊಡಿಸಿ ದಾರಿ ದೀಪವಾಗಬೇಕು ಅಂತಿದ್ದಾರೆ ಸ್ಥಳಿಯರು.

    ಯಾರೋ ದಾರಿ ದೀಪಗಳು ಅವರವರ ಪಾಲಿಗೆ ಅಂತಾರೆ. ಇಂತಹ ಬಾಲ ಕಲಾಸಕ್ತನಿಗೆ ಪ್ರೋತ್ಸಾಹ ದೊರೆತದ್ದೇ ಆದ್ರೆ ಈ ನಾಡಿನಲ್ಲಿ ಚೆನ್ನಪ್ಪ ಸಂಗೀತ ಕ್ಷೇತ್ರದ ಚಿನ್ನಪ್ಪನಾಗೋದ್ರಲ್ಲಿ ಸಂದೇಹವಿಲ್ಲ.

    https://www.youtube.com/watch?v=QMEWBdErnLE