Tag: ಗುರು

  • ಸಂತಾಪದ ವೇಳೆ ಶಾಲೆಯಲ್ಲಿ ಭಾವುಕರಾದ ಹುತಾತ್ಮ ಯೋಧನ ಶಿಕ್ಷಕರು

    ಸಂತಾಪದ ವೇಳೆ ಶಾಲೆಯಲ್ಲಿ ಭಾವುಕರಾದ ಹುತಾತ್ಮ ಯೋಧನ ಶಿಕ್ಷಕರು

    ಮಂಡ್ಯ: ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರನ ಆತ್ಮಾಹುತಿ ದಾಳಿಯಲ್ಲಿ ಮಂಡ್ಯದ ಯೋಧ ಗುರು ಹುತಾತ್ಮರಾಗಿದ್ದು, ಇದೀಗ ಜಿಲ್ಲೆಯಲ್ಲಿ ನೀರವ ಮೌನ ಆವರಿಸಿದೆ. ಗುರುವನ್ನು ನೆನಪು ಮಾಡಿಕೊಂಡು ಅವರ ಶಿಕ್ಷಕರು ಸಂತಾಪ ಸೂಚಿಸುವ ವೇಳೆ ಭಾವುಕರಾಗಿದ್ದಾರೆ.

    ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ, ಕೆಎಂ ದೊಡ್ಡಿಯಲ್ಲಿ ಸರ್ಕಾರಿ ಪ್ರೌಢಶಾಲೆಯಲ್ಲಿ 8ನೇ ತರಗತಿಯಿಂದ 10ನೇ ತರಗತಿಯವರೆಗೂ ವಿದ್ಯಾಭ್ಯಾಸ ಮಾಡಿದ್ದಾರೆ. ಗುರುವಾರ ಅವರು ಹುತಾತ್ಮರಾದ ಹಿನ್ನೆಲೆಯಲ್ಲಿ ಅವರು ಓದಿದ ಶಾಲೆಯಲ್ಲಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಸಂತಾಪ ಸೂಚಿಸಿದರು. ಈ ವೇಳೆ ಗುರು ಅವರಿಗೆ ಪಾಠ ಮಾಡಿದ ಶಿಕ್ಷಕರು ಭಾವುಕರಾದರು.

    ಶಿಕ್ಷಕಿ ಲತಾ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿ, “ಗುರು ಶಾಲೆಯಲ್ಲಿ ತುಂಬಾ ಒಳ್ಳೆ ವಿದ್ಯಾರ್ಥಿ. ಓದಿನಲ್ಲಿ ಮಾತ್ರವಲ್ಲದೇ ಇತರ ಚಟುವಟಿಕೆಯಲ್ಲಿ ತುಂಬಾ ಸಕ್ರಿಯರಾಗಿ ಭಾಗಿಯಾಗುತ್ತಿದ್ದರು. ನಿಮ್ಮ ಭವಿಷ್ಯ ಏನು ಎಂದು ಕೇಳುತ್ತಿದ್ದಾಗ ಗುರು ಹಾಗೂ ಅವರ ಸ್ನೇಹಿತರು ನಾವು ಸೈನಿಕರಾಗುತ್ತೇವೆ ಎಂದು ಉತ್ತರಿಸಿದ್ದರು” ಎಂದು ಹಳೆಯ ನೆನಪನ್ನು ಹಂಚಿಕೊಂಡಿದ್ದಾರೆ.

    ಗುರು ನಮ್ಮ ಶಾಲೆಯಲ್ಲಿ ಓದಿದ್ದಾರೆ ಎಂಬ ಹೆಮ್ಮೆ ಒಂದು ಕಡೆ ಇದ್ದರೆ, ಮತ್ತೊಂದೆಡೆ ದೇಶ ಪ್ರೇಮ ಇಟ್ಟುಕೊಂಡು ದೇಶ ಸೇವೆ ಮಾಡಬೇಕು ಎಂದು ಸೈನ್ಯ ಸೇರಿದ ಗುರು ಅವರು ಉಗ್ರರ ದಾಳಿಗೆ ಬಲಿಯಾಗಿರುವುದು ನೋವಿನ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.

    ಗುರು ಅವರ ಮದುವೆ ಆಗಿ ಕೇವಲ 8 ತಿಂಗಳು ಎಂಬ ವಿಷಯ ತಿಳಿಯಿತು. ಗುರು ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬಕ್ಕೆ ಧೈರ್ಯ ಸಿಗಲಿ. ಉಗ್ರರಿಗೆ ತಕ್ಕ ಶಿಕ್ಷೆ ಆಗಬೇಕು ಹಾಗೂ ಮುಂದೆ ಈ ರೀತಿ ಆಗದಂತೆ ಸರ್ಕಾರ ನೋಡಿಕೊಳ್ಳಬೇಕು ಎಂದು ಲತಾ ಹೇಳಿದರು.

    https://www.youtube.com/watch?v=P8Y_QHDFbO4&feature=youtu.be

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅಣ್ಣ ಹೂವನ್ನು ಹಾಕ್ಬೇಡಣ್ಣ ಎಂದು ಅಳುತ್ತಾ ಗೋಳಾಡಿದ ಗುರು ಪತ್ನಿ

    ಅಣ್ಣ ಹೂವನ್ನು ಹಾಕ್ಬೇಡಣ್ಣ ಎಂದು ಅಳುತ್ತಾ ಗೋಳಾಡಿದ ಗುರು ಪತ್ನಿ

    ಮಂಡ್ಯ: ಅಣ್ಣ ಫೋಟೋಗೆ ಹೂವನ್ನು ಹಾಕ ಬೇಡಣ್ಣ ಎಂದು ಹುತಾತ್ಮ ಯೋಧ ಗುರು ಅವರ ಪತ್ನಿ ಕಲಾವತಿ ಗೋಳಾಡುತ್ತಿದ್ದಾರೆ.

    ತನ್ನ ಪತಿ ಇಹಲೋಕ ತ್ಯಜಿಸಿದ್ದಾರೆ ಎಂಬ ದೃಷ್ಟಿಯಿಂದ ನೋಡಲು ಕಲಾವತಿ ಅವರ ಮನಸ್ಸು ಒಪ್ಪುತ್ತಿಲ್ಲ. ಇಂದು ಗೆಳೆಯರು ಹಾಗೂ ಸಂಬಂಧಿಕರು ಮನೆ ಮುಂದೆ ಗುರು ಅವರ ಫೋಟೋ ಇಟ್ಟು, ಹೂವಿನ ಹಾರ ಹಾಕಲು ಮುಂದಾದರು. ಈ ವೇಳೆ ಕಲಾವತಿ ಅವರು ಅಣ್ಣ ಹೂವನ್ನು ಹಾಕಬೇಡಣ್ಣ ಎಂದು ಅಳುತ್ತಾ ಗೋಳಾಡಿದ್ದಾರೆ.

    ಕಲಾವತಿ ಅವರ ಬೇಡಿಕೆಗೆ ಮಣಿದು ಗೆಳೆಯರು ಹಾಗೂ ಸಂಬಂಧಿಕರು ಮನೆ ಮುಂದೆ ಫೋಟೋ ಇಡದೇ, ಹೂವಿನ ಹಾರ ಹಾಕದೆ ಸುಮ್ಮನಾದರು. ಗುರು ಪತ್ನಿ ಕಣ್ಣೀರಿಟ್ಟ ಭಾವುಕ ಸನ್ನಿವೇಶ ನೋಡಿ ಬಂಧುಗಳು ಹಾಗೂ ಸ್ನೇಹಿತರು ತಾವು ಕಣ್ಣೀರಿಟ್ಟಿದ್ದಾರೆ.

    ಪತಿ ನಾನು ಏಪ್ರಿಲ್‍ಗೆ ಬರುತ್ತೇನೆ ಎಂದು ಹೇಳಿ ಹೋಗಿದ್ದರು. ಆದರೂ ನಾವು ಅವರು ಡ್ಯೂಟಿಗೆ ಹೋದಾಗೆಲ್ಲಾ ಹುಷಾರು, ಹುಷಾರು ಎಂದು ಹೇಳುತ್ತಿದ್ದೆವು. ಇಂದು ಈ ಸುದ್ದಿ ತಂದುಕೊಡುವುದಕ್ಕೆ ಬಿಡಲಿಲ್ಲ ಅನ್ನಿಸುತ್ತದೆ ಎಂದು ಕಣ್ಣೀರು ಹಾಕಿಕೊಂಡು ಹೇಳಿದ್ದಾರೆ.

    ನಾನು ಇನ್ನೂ ಹತ್ತು ವರ್ಷ ಸೇವೆ ಸಲ್ಲಿಸದೇ ಕೆಲಸ ಬಿಡುವುದಿಲ್ಲ ಎಂದಿದ್ದರು. ಮದುವೆಯಾಗಿ ವರ್ಷವಾಗಿಲ್ಲ, ಜೀವನದಲ್ಲಿ ಅವರಿಗೆ ನೆಮ್ಮದಿ ಅನ್ನುವುದು ಸಿಗಲಿಲ್ಲ. ದೇಶ ಕಾಯುವವರನ್ನೇ ಸಾಯಿಸಿದ್ದಾರೆ. ಅವರು ಏನು ಮಾಡಿದ್ದರು? ಇದರಿಂದ ಅವರಿಗೆ ಏನು ಸಿಕ್ಕಿತು? ಎಂದು ಆಕ್ರೋಶದಿಂದ ದುಷ್ಟರಿಗೆ ಕಲಾವತಿ ಅವರು ಪ್ರಶ್ನೆ ಮಾಡಿದ್ದಾರೆ.

    ದೇಶದ ಜನರನ್ನು ರಕ್ಷಣೆ ಮಾಡಲು ಹೋಗುತ್ತಿದ್ದವರನ್ನೇ ಕೊಲೆ ಮಾಡಿದ್ದಾರೆ. ಅವರು ಹೇಗೆ ಸತ್ತರೋ, ಹಾಗೇ ದುಷ್ಟರು ಸಾಯಬೇಕು. ಈ ಬಗ್ಗೆ ಎಲ್ಲರಿಗೂ ಗೊತ್ತಾಗಲಿ, ಪ್ಲೀಸ್ ಎಲ್ಲರೂ ಸಹಾಯ ಮಾಡಿ ಪ್ಲೀಸ್, ಅವರ ರೀತಿಯಲ್ಲೇ ಬ್ಲಾಸ್ಟ್ ಮಾಡಿ ದುಷ್ಟರನ್ನು ಸಾಯಿಸಬೇಕು. ನನ್ನ ಗಂಡನನ್ನು ಕೊಂದವರನ್ನು ಸುಮ್ಮನೆ ಬಿಡಬಾರದು. ದಯವಿಟ್ಟು ಅವರನ್ನು ಬಿಡಬೇಡಿ ಎಂದು ಕಣ್ಣೀರು ಹಾಕುತ್ತಾ ಕಲಾವತಿ ಅವರು ಮನವಿ ಮಾಡಿಕೊಂಡಿದ್ದಾರೆ.

    https://www.youtube.com/watch?v=YBY-Btof0_s&feature=youtu.be

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಯೋಧ ಗುರುವಿನ ಕೊನೆ ಕ್ಷಣದ ಪ್ರವಾಸ – ಫೋಟೋ, ವಿಡಿಯೋ ನೋಡಿ

    ಯೋಧ ಗುರುವಿನ ಕೊನೆ ಕ್ಷಣದ ಪ್ರವಾಸ – ಫೋಟೋ, ವಿಡಿಯೋ ನೋಡಿ

    ಮಂಡ್ಯ: ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರನ ಆತ್ಮಾಹುತಿ ದಾಳಿಯಲ್ಲಿ ಮಂಡ್ಯದ ಯೋಧ ಗುರು ಹುತಾತ್ಮರಾಗಿದ್ದು, ಎಲ್ಲೆಡೆ ಉಗ್ರರನ್ನು ಸಂಹಾರ ಮಾಡಬೇಕೆಂದು ಪ್ರತಿಭಟನೆ ಮಾಡುತ್ತಿದ್ದಾರೆ. ಆದರೆ ಇತ್ತ ಯೋಧ ಗುರು ಅವರು ಕೊನೆಯಲ್ಲಿ ಪ್ರವಾಸಕ್ಕೆ ಹೋಗಿದ್ದ ಫೋಟೋ, ವಿಡಿಯೋ ಲಭ್ಯವಾಗಿದೆ.

    ಹುತಾತ್ಮ ಯೋಧ ರಜೆಯ ಹಿನ್ನೆಲೆಯಲ್ಲಿ ಊರಿಗೆ ಬಂದಿದ್ದರು. ಆಗ ಭಾನುವಾರ ಆರ್ಮಿಗೆ ತೆರಳುವ ಮುನ್ನ ಸ್ನೇಹಿತ ನಾಗೇಶ್ ಜೊತೆಗೆ ಮೈಸೂರಿನ ಹಿನ್ನೀರಿಗೆ ಪ್ರವಾಸಕ್ಕೆ ಹೋಗಿದ್ದರು. ಸ್ನೇಹಿತ ಮಾತ್ರವಲ್ಲದೇ ತಮ್ಮ ಪತ್ನಿ ಕಲಾವತಿ ಅವರನ್ನು ಜೊತೆಗೆ ಕರೆದುಕೊಂಡು ಹೋಗಿದ್ದರು. ಅವರ ಸ್ನೇಹಿತ ಕೂಡ ತಮ್ಮ ಪತ್ನಿ ಮತ್ತು ಮಗುವಿನ ಜೊತೆ ಬಂದಿದ್ದರು. ಎಲ್ಲರೂ ಒಟ್ಟಿಗೆ ಇದ್ದಾಗ ತೆಗೆದಿದ್ದ ಫೋಟೋ ಹಾಗೂ ವಿಡಿಯೋ ವೈರಲ್ ಆಗುತ್ತಿದೆ. ಸ್ನೇಹಿತ ಹಾಗೂ ಪತ್ನಿಯ ಜೊತೆ ಸೆಲ್ಫಿ ತೆಗೆದುಕೊಂಡಿದ್ದು, ಬಳಿಕ ಎಲ್ಲರೂ ಒಟ್ಟಿಗೆ ಹಿನ್ನೀರಿನಲ್ಲಿ ಬೋಟಿಂಗ್ ಮಾಡುತ್ತಿದ್ದಾಗ ವಿಡಿಯೋ ಮಾಡಿದ್ದಾರೆ. ಇದನ್ನೂ ಓದಿ: ಗುರು ಕಳುಹಿಸಿದ್ದ ಸೆಲ್ಫಿ ವಿಡಿಯೋ ನೋಡಿ ಭಾವುಕರಾದ ಗೆಳೆಯರು, ಕುಟುಂಬಸ್ಥರು

    ಇತ್ತೀಚೆಗಷ್ಟೆ ಹುತಾತ್ಮ ಯೋಧ ಗುರು ಅವರು ತಮ್ಮ ಸ್ನೇಹಿತರಿಗೆ ಹಾಗೂ ಕುಟುಂಬದವರಿಗೆ ಒಂದು ಸೆಲ್ಫಿ ವಿಡಿಯೋವನ್ನು ವಾಟ್ಸಾಪ್ ಮೂಲಕ ಕಳುಹಿಸಿದ್ದರು. ಆ ವಿಡಿಯೋದಲ್ಲಿ ಅವರು ಇಬ್ಬನಿಯಲ್ಲಿ ಕಾಶ್ಮೀರ್ ಎಂದು ಬರೆದು ಅಲ್ಲಿ ನಿಂತು ಹಾಯ್ ಮಾಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಹುತಾತ್ಮ ಯೋಧನ ಕುಟುಂಬಕ್ಕೆ ಫೋನಿನಲ್ಲಿ ಸಾಂತ್ವಾನ ಹೇಳಿದ ಸಚಿವ ಡಿಸಿ ತಮ್ಮಣ್ಣ

    ಹುತಾತ್ಮ ಯೋಧನ ಕುಟುಂಬಕ್ಕೆ ಫೋನಿನಲ್ಲಿ ಸಾಂತ್ವಾನ ಹೇಳಿದ ಸಚಿವ ಡಿಸಿ ತಮ್ಮಣ್ಣ

    ಮಂಡ್ಯ: ಉಗ್ರನ ಆತ್ಮಾಹುತಿ ದಾಳಿಗೆ ಮಂಡ್ಯದ ಗಂಡು 33 ವರ್ಷದ ಗುರು ಬಲಿಯಾಗಿದ್ದಾರೆ. ಈ ಹೀನ ಕೃತ್ಯವನ್ನು ರಾಜ್ಯ ಹಾಗೂ ಇಡೀ ದೇಶವೇ ಖಂಡಿಸುತ್ತಿದ್ದು, ಹುತಾತ್ಮರಾದ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತಿದೆ. ಆದ್ರೆ ರಾಜ್ಯದ ಸಾರಿಗೆ ಸಚಿವರು ಮಾತ್ರ ಫೋನಿನಲ್ಲಿ ಮೃತ ಯೋಧ ಗುರು ತಂದೆಯ ಜೊತೆ ಮಾತನಾಡುವ ಮೂಲಕ ಸಾಂತ್ವಾನ ಹೇಳಿದ್ದಾರೆ.

    ಹೌದು. ಮಂಡ್ಯ ಜಿಲ್ಲೆಯ ಉಸ್ತುವಾರಿ ಸಚಿವ ಡಿಸಿ ತಮ್ಮಣ್ಣ ಅವರು ಮಗನ ಕಳೆದುಕೊಂಡು ದುಃಖದಲ್ಲಿರುವ ಹುತಾತ್ಮ ಯೋಧ ಗುರು ತಂದೆಯ ಜೊತೆ ಫೋನಿನಲ್ಲಿ ಮಾತನಾಡಿದ್ದಾರೆ. ಈ ವೇಳೆ ಹೊನ್ನಯ್ಯ ಅವರು,”ನನ್ನ ಮಗ ಹೊರಟು ಹೋದ್ನಲ್ಲ ಸಾರ್” ಎಂದು ಮಗನನ್ನು ನೆನಪು ಮಾಡಿಕೊಂಡು ಕಣ್ಣೀರು ಹಾಕಿದ್ದಾರೆ. ಸಚಿವರ ಈ ನಡೆಗೆ ಸ್ಥಳೀಯರು ಕಿಡಿಕಾರಿದ್ದಾರೆ. ಇದನ್ನೂ ಓದಿ:  ನಮ್ಮವರನ್ನು ಹೇಗೆ ಬ್ಲಾಸ್ಟ್ ಮಾಡಿದ್ರೋ ಹಾಗೆಯೇ ಅವ್ರನ್ನು ಕೊಂದು ಬಿಡಿ ಪ್ಲೀಸ್ – ಗುರು ಪತ್ನಿ ಮನವಿ

    ನಿನ್ನೆಯಿಂದ ಮದ್ದೂರು ತಾಲೂಕಿನ ಗುರು ನಿವಾಸಲ್ಲಿ ನೀರವ ಮೌನ ಆವರಿಸಿದೆ. ಅಲ್ಲದೆ ಪತ್ನಿ, ಹೆತ್ತವರು, ಗೆಳೆಯರು ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಆದ್ರೆ ಸ್ಥಳಕ್ಕೆ ಯಾವ ರಾಜಕೀಯ ನಾಯಕರು ಬಂದಿಲ್ಲ. ಹೀಗಾಗಿ ರಾಜ್ಯ ರಾಜಕೀಯ ನಾಯಕರ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಸಚಿವರು ಇಂದು ದೂರವಾಣಿಯಲ್ಲಿ ಯೋಧ ಕುಟುಂಬಸ್ಥರೂಂದಿಗೆ ಪೋನ್‍ನಲ್ಲಿ ಮಾತನಾಡಿ ಸಾಂತ್ವಾನ ಹೇಳಿದ್ದಾರೆ.

    ಕೃತ್ಯ ನಡೆದಿದ್ದು ಹೇಗೆ?
    ಗುರುವಾರ ಬೆಳಗ್ಗೆ 3.30ಕ್ಕೆ ಜಮ್ಮುವಿನಿಂದ ಶ್ರೀನಗರಕ್ಕೆ 78 ಸಿಆರ್‍ಪಿಎಫ್ ವಾಹನಗಳಲ್ಲಿ 2,547 ಯೋಧರು ಪ್ರಯಾಣಿಸುತ್ತಿದ್ದರು. ಶ್ರೀನಗರಕ್ಕೆ 20 ಕಿ.ಮೀ ದೂರದಲ್ಲಿದ್ದಾಗ 350 ಕೆಜಿ ಸುಧಾರಿತ ಸ್ಫೋಟಕಗಳನ್ನು ತುಂಬಿದ್ದ ಬಿಳಿ ಬಣ್ಣದ ಸ್ಕಾರ್ಪಿಯೋ ಕಾರನ್ನು ಉಗ್ರನೊಬ್ಬ ಹೆದ್ದಾರಿಯಲ್ಲಿ ವಿರುದ್ಧ ದಿಕ್ಕಿನಲ್ಲಿ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿ ಹೊಡೆದ ರಭಸಕ್ಕೆ ಸ್ಫೋಟಕಗಳು ಸ್ಫೋಟಗೊಂಡ ಪರಿಣಾಮ 47 ಮಂದಿ ಸೈನಿಕರು ವೀರಮರಣವನ್ನು ಅಪ್ಪಿದ್ದಾರೆ. ಇದನ್ನೂ ಓದಿ: ಹುತಾತ್ಮ ಯೋಧನ ಕುಟುಂಬಕ್ಕೆ ಮಧ್ಯಪ್ರದೇಶ ಸರ್ಕಾರದಿಂದ 1 ಕೋಟಿ ರೂ. ಪರಿಹಾರ ಘೋಷಣೆ

    ಸ್ಫೋಟದ ತೀವ್ರತೆ ಎಷ್ಟು ಇತ್ತು ಎಂದರೆ ಸೈನಿಕರ ದೇಹದ ಭಾಗಗಳು ಹೈವೇಯ 100 ಮೀಟರ್ ದೂರದಲ್ಲಿ ಪತ್ತೆಯಾಗಿದೆ. ಸ್ಫೋಟಕಗೊಂಡ ಬಳಿಕ ಉಳಿದ ಬಸ್ಸುಗಳು ನಿಂತ ಮೇಲೆ ಅವುಗಳ ಮೇಲೂ ಉಗ್ರರು ದಾಳಿ ನಡೆಸಿದ್ದಾರೆ. ಆತ್ಮಾಹುತಿ ದಾಳಿಕೋರ ಬಸ್ಸಿಗೆ ಕಾರನ್ನು ಡಿಕ್ಕಿ ಹೊಡೆದ ಬಳಿಕ ಉಳಿದ ಬಸ್ಸು ನಿಂತ ಕೂಡಲೇ ಉಗ್ರರು ಗುಂಡಿನ ದಾಳಿ ಮಾಡಿದ್ದಾರೆ. ಹೀಗಾಗಿ ಸಾವು, ನೋವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗಿದೆ. ಉಗ್ರರ ಈ ದಾಳಿಗೆ ಸಾಕ್ಷ್ಯ ಎಂಬಂತೆ ಬಸ್ಸಿನ ಹಿಂಭಾಗದಲ್ಲಿ ಬುಲೆಟ್ ಗುರುತು ಬಿದ್ದಿದೆ. ವಿಪರೀತ ಮಂಜು ಸುರಿಯುತ್ತಿರುವ ಹಿನ್ನೆಲೆಯಲ್ಲಿ ಜಮ್ಮು ಶ್ರೀನಗರ ಹೆದ್ದಾರಿ ಕಳೆದ ಎರಡು ದಿನಗಳಿಂದ ಮುಚ್ಚಲ್ಪಟ್ಟಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ನಮ್ಮವರನ್ನು ಹೇಗೆ ಬ್ಲಾಸ್ಟ್ ಮಾಡಿದ್ರೋ ಹಾಗೆಯೇ ಅವ್ರನ್ನು ಕೊಂದು ಬಿಡಿ ಪ್ಲೀಸ್ – ಗುರು ಪತ್ನಿ ಮನವಿ

    ನಮ್ಮವರನ್ನು ಹೇಗೆ ಬ್ಲಾಸ್ಟ್ ಮಾಡಿದ್ರೋ ಹಾಗೆಯೇ ಅವ್ರನ್ನು ಕೊಂದು ಬಿಡಿ ಪ್ಲೀಸ್ – ಗುರು ಪತ್ನಿ ಮನವಿ

    ಮಂಡ್ಯ: ನಮ್ಮವರನ್ನು ಹೇಗೆ ಬ್ಲಾಸ್ಟ್ ಮಾಡಿ ಕೊಂದರೋ ಹಾಗೇ ಅವರನ್ನು ಬ್ಲಾಸ್ಟ್ ಮಾಡಬೇಕು. ಯಾವುದೇ ಕಾರಣಕ್ಕೆ ಅವರನ್ನು ಬಿಡಬಾರದು. ಪ್ಲೀಸ್ ಇದಕ್ಕೆ ಎಲ್ಲರೂ ಸಹಾಯ ಮಾಡಿ ಎಂದು ಯೋಧ ಗುರುವಿನ ಪತ್ನಿ ಕಲಾವತಿ ಅವರು ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಕಲಾವತಿ ಅವರು, ಹುಷಾರು. ನಾನು ಏಪ್ರಿಲ್‍ಗೆ ಬರುತ್ತೇನೆ ಎಂದು ಹೇಳಿ ಹೋಗಿದ್ದರು. ಆದರೂ ನಾವು ಅವರು ಡ್ಯೂಟಿಗೆ ಹೋದಾಗೆಲ್ಲಾ ಹುಷಾರು, ಹುಷಾರು ಎಂದು ಹೇಳುತ್ತಿದ್ದೆವು. ಅನೇಕ ಬಾರಿ ನಾನು ಈ ಕೆಲಸವನ್ನು ಬಿಟ್ಟುಬಿಡಿ ಎಂದು ಹೇಳಿದ್ದೆ. ಆದರೆ ಅವರು ನನ್ನ ಮಾತು ಕೇಳಲಿಲ್ಲ. ಇಂದು ಈ ಸುದ್ದಿ ತಂದುಕೊಡುವುದಕ್ಕೆ ಬಿಡಲಿಲ್ಲ ಅನ್ನಿಸುತ್ತದೆ ಎಂದು ಕಣ್ಣೀರು ಹಾಕಿಕೊಂಡು ಹೇಳಿದ್ದಾರೆ. ಇದನ್ನೂ ಓದಿ: ನಂಗೆ ಅವರು ಬೇಕು ಅಮ್ಮಾ..- ಮುಗಿಲು ಮುಟ್ಟಿದೆ ಹುತಾತ್ಮ ಗುರು ಪತ್ನಿಯ ಆಕ್ರಂದನ

    ನಾನು ಇನ್ನೂ ಹತ್ತು ವರ್ಷ ಸೇವೆ ಸಲ್ಲಿಸದೇ ಕೆಲಸ ಬಿಡುವುದಿಲ್ಲ ಎಂದಿದ್ದರು. ಮದುವೆಯಾಗಿ ವರ್ಷವಾಗಿಲ್ಲ, ಜೀವನದಲ್ಲಿ ಅವರಿಗೆ ನೆಮ್ಮದಿ ಅನ್ನುವುದು ಸಿಗಲಿಲ್ಲ. ದೇಶ ಕಾಯುವವರನ್ನೇ ಸಾಯಿಸಿದ್ದಾರೆ. ಅವರು ಏನು ಮಾಡಿದ್ದರು? ಇದರಿಂದ ಅವರಿಗೆ ಏನು ಸಿಕ್ಕಿತು? ಎಂದು ಆಕ್ರೋಶದಿಂದ ದುಷ್ಟರಿಗೆ ಕಲಾವತಿ ಅವರು ಪ್ರಶ್ನೆ ಮಾಡಿದ್ದಾರೆ.

    ದೇಶದ ಜನರನ್ನು ರಕ್ಷಣೆ ಮಾಡಲು ಹೋಗುತ್ತಿದ್ದವರನ್ನೇ ಕೊಲೆ ಮಾಡಿದ್ದಾರೆ. ಅವರು ಹೇಗೆ ಸತ್ತರೋ, ಹಾಗೇ ದುಷ್ಟರು ಸಾಯಬೇಕು. ಈ ಬಗ್ಗೆ ಎಲ್ಲರಿಗೂ ಗೊತ್ತಾಗಲಿ, ಪ್ಲೀಸ್ ಎಲ್ಲರೂ ಸಹಾಯ ಮಾಡಿ ಪ್ಲೀಸ್, ಅವರ ರೀತಿಯಲ್ಲೇ ಬ್ಲಾಸ್ಟ್ ಮಾಡಿ ದುಷ್ಟರನ್ನು ಸಾಯಿಸಬೇಕು. ನನ್ನ ಗಂಡನನ್ನು ಕೊಂದವರನ್ನು ಸುಮ್ಮನೆ ಬಿಡಬಾರದು. ದಯವಿಟ್ಟು ಅವರನ್ನು ಬಿಡಬೇಡಿ ಎಂದು ಕಣ್ಣೀರು ಹಾಕುತ್ತಾ ಕಲಾವತಿ ಅವರು ಮನವಿ ಮಾಡಿಕೊಂಡಿದ್ದಾರೆ.

    https://www.youtube.com/watch?v=wv03LJifMzo

    https://www.youtube.com/watch?v=sgF9rfJIWks

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಗುರು ಕಳುಹಿಸಿದ್ದ ಸೆಲ್ಫಿ ವಿಡಿಯೋ ನೋಡಿ ಭಾವುಕರಾದ ಗೆಳೆಯರು, ಕುಟುಂಬಸ್ಥರು

    ಗುರು ಕಳುಹಿಸಿದ್ದ ಸೆಲ್ಫಿ ವಿಡಿಯೋ ನೋಡಿ ಭಾವುಕರಾದ ಗೆಳೆಯರು, ಕುಟುಂಬಸ್ಥರು

    ಮಂಡ್ಯ: ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರನ ಆತ್ಮಾಹುತಿ ದಾಳಿಯಲ್ಲಿ ಮಂಡ್ಯದ ಯೋಧ ಗುರು ಹುತಾತ್ಮರಾಗಿದ್ದು, ಇದೀಗ ಜಿಲ್ಲೆಯಲ್ಲಿ ನೀರವ ಮೌನ ಆವರಿಸಿದೆ. ಗುರುವನ್ನು ನೆನಪು ಮಾಡಿಕೊಂಡು ಪತ್ನಿ, ಹೆತ್ತವರು, ಗೆಳೆಯರು ಹಾಗೂ ಕುಟುಂಬಸ್ಥರು ಭಾವುಕರಾಗುತ್ತಿದ್ದಾರೆ.

    ಕೆಲವು ದಿನಗಳ ಹಿಂದೆ ಹುತಾತ್ಮ ಯೋಧ ಗುರು ಅವರು ತಮ್ಮ ಸ್ನೇಹಿತರಿಗೆ ಹಾಗೂ ಕುಟುಂಬದವರಿಗೆ ಒಂದು ಸೆಲ್ಫಿ ವಿಡಿಯೋವನ್ನು ವಾಟ್ಸಾಪ್ ಮೂಲಕ ಕಳುಹಿಸಿದ್ದರು. ಈ ವಿಡಿಯೋದಲ್ಲಿ ಅವರ ಮೇಲೆ ಇಬ್ಬನಿ ಬೀಳುತ್ತಿದ್ದು, ಕಾಶ್ಮೀರ್ ಎಂದು ಹೇಳಿ ಅಲ್ಲಿ ನಿಂತು ಹಾಯ್ ಮಾಡಿದ್ದಾರೆ.

    ಈ ವಿಡಿಯೋವನ್ನು ಗುರು ಅವರ ತಮ್ಮ, ಗೆಳೆಯರು ಹಾಗೂ ಕುಟುಂಬದವರಿಗೆ ವಾಟ್ಸಾಪ್ ಮೂಲಕ ಕಳುಹಿಸಿದ್ದರು. ಇದೀಗ ಅವರ ಗೆಳೆಯರು ಹಾಗೂ ಕುಟುಂಬದವರು ಈ ವಿಡಿಯೋವನ್ನು ನೋಡುತ್ತಾ ಭಾವುಕರಾಗಿ ಕಣ್ಣೀರು ಹಾಕುತ್ತಿದ್ದಾರೆ. ಇದನ್ನೂ ಓದಿ: 2 ನಿಮಿಷ ಬಿಟ್ಟು ಕರೆ ಮಾಡ್ತೀನಿ ಅಂದೋನು ಮಾಡ್ಲೇ ಇಲ್ಲ- ಗುರು ಗೆಳೆಯ ಯೋಧ ಕಣ್ಣೀರು

    ಗುರುವಿಗೆ ಮದುವೆ ಆಗಿ 8 ತಿಂಗಳು ಆಗಿತ್ತು. ನನ್ನ ಮಗ ಚೆನ್ನಾಗಿ ಇರಲಿ ಎಂದು ಮಗನಿಗೆ ಮದುವೆ ಮಾಡಿದೆ. ಬಳಿಕ ಕೆಲಸಕ್ಕೆ ಹೋಗೋದು ಬೇಡ ಎಂದು ಹೇಳಿದ್ದೆ. ಆದರೆ ನಾನು ದೇಶ ಸೇವೆ ಮಾಡಬೇಕು ಎಂದು ಹಠದಲ್ಲಿ ರಜೆ ಮುಗಿಸಿಕೊಂಡು ಹೋದವನು ಹಿಂದಿರುಗಿ ಬರಲೇ ಇಲ್ಲ ಎಂದು ಹುತಾತ್ಮ ಯೋಧ ಗುರು ತಾಯಿ ಚಿಕ್ಕೋಳಮ್ಮ ಹೇಳುತ್ತಾ ಅವರ ಆಕ್ರಂದನ ಮುಗಿಲುಮುಟ್ಟಿದೆ. ಇದನ್ನೂ ಓದಿ: ನಂಗೆ ಅವರು ಬೇಕು ಅಮ್ಮಾ..- ಮುಗಿಲು ಮುಟ್ಟಿದೆ ಹುತಾತ್ಮ ಗುರು ಪತ್ನಿಯ ಆಕ್ರಂದನ

    ಗುರುವಾರ ಮಧ್ಯಾಹ್ನ 3.30ರ ಸುಮಾರಿಗೆ ಜೈಶ್-ಎ- ಮೊಹಮ್ಮದ್ ಉಗ್ರ ಸಂಘಟನೆಗೆ ಸೇರಿದ ಅದಿಲ್ ದರ್ ಎಂಬ ಉಗ್ರ ಸ್ಕಾರ್ಪಿಯೋ ಕಾರಿನಲ್ಲಿ ಸ್ಫೋಟಕ ತುಂಬಿ ಆತ್ಮಾಹುತಿ ದಾಳಿ ಮಾಡಿದ್ದನು. ಈ ದಾಳಿಯಲ್ಲಿ ಇದೂವರೆಗೆ 44 ಯೋಧರು ಹುತಾತ್ಮರಾಗಿದ್ದು, ಹಲವರು ಗಾಯಗೊಂಡಿದ್ದರು.

    https://www.youtube.com/watch?v=lavakLJVgvg&feature=youtu.be

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮನೆಗೆ ಬಂದು ಹೋಗುವ ದಿನ ಮಾತ್ರ ನಗುನಗುತ್ತಾ ಮಾತಾಡಿಸ್ತಿದ್ದ- ಗುರು ತಂದೆ ಕಣ್ಣೀರು

    ಮನೆಗೆ ಬಂದು ಹೋಗುವ ದಿನ ಮಾತ್ರ ನಗುನಗುತ್ತಾ ಮಾತಾಡಿಸ್ತಿದ್ದ- ಗುರು ತಂದೆ ಕಣ್ಣೀರು

    ಮಂಡ್ಯ: ಸೇನೆಯಿಂದ ಮನೆಗೆ ಬಂದರೆ ಎಲ್ಲರ ಮೇಲೂ ರೇಗಾಡುತ್ತಿದ್ದ. ಆದರೆ ಹೋಗುವ ದಿನ ಮಾತ್ರ ನಗುತ್ತಾ ಮಾತನಾಡಿಸುತ್ತಿದ್ದ. ನನ್ನ ಮಗನನ್ನು ಕೊಂದವರಿಗೆ ಘೋರ ಶಿಕ್ಷೆಯಾಗಬೇಕು ಎಂದು ಹುತಾತ್ಮ ಯೋಧ ಗುರು ತಂದೆ ಹೊನ್ನಯ್ಯ ಅವರು ಆಕ್ರೋಶದಿಂದ ಕಣ್ಣೀರು ಹಾಕುತ್ತಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಗುರು ಊರಿಗೆ ಬಂದರೆ ನಮ್ಮನ್ನು ಬಿಟ್ಟು ಹೋಗಬೇಕು ಎಂಬ ಹತಾಶೆಯಿಂದ ಮನೆಯಲ್ಲಿ ಎಲ್ಲರ ಮೇಲೆ ರೇಗಾಡುತ್ತಿದ್ದ. ಹೋಗುವ ದಿನ ಮಾತ್ರ ಎಲ್ಲರನ್ನು ನಗುನಗುತ್ತಾ ಮಾತನಾಡಿಸಿ ಹೋಗುತ್ತಿದ್ದ. ನಾನು ಮತ್ತೆ ಯಾವಾಗ ಬರುತ್ತೀಯಾ ಎಂದು ಕೇಳಿದಾಗ, ಅಪ್ಪ ಈಗ ಹೋಗುತ್ತಿದ್ದೇನೆ. ಅವರು ಯಾವಾಗ ಕಳುಹಿಸುತ್ತಾರೋ ಗೊತ್ತಿಲ್ಲ ಎಂದು ಹೇಳಿದ್ದ ಎಂದು ಗುರು ತಂದೆ ಹೊನ್ನಯ್ಯ ಅವರು ನೋವಿನಿಂದ ಹೇಳಿದ್ದಾರೆ. ಇದನ್ನೂ ಓದಿ: ನಂಗೆ ಅವರು ಬೇಕು ಅಮ್ಮಾ..- ಮುಗಿಲು ಮುಟ್ಟಿದೆ ಹುತಾತ್ಮ ಗುರು ಪತ್ನಿಯ ಆಕ್ರಂದನ

    ಅವನ ತಾಯಿಗೆ ಯಾವಾಗಲೂ ಕಾಲ್ ಮಾಡಿ ಮಾತನಾಡುತ್ತಿದ್ದ. ಬುಧವಾರ ರಾತ್ರಿ ನನ್ನ ಮಗನ ಜೊತೆ ಫೋನ್‍ನಲ್ಲಿ ಮಾತನಾಡಿದ್ದೆ. ಇತ್ತೀಚೆಗಷ್ಟೆ ಹೊಸ ಮನೆ ಕಟ್ಟಿಸಿ ಈಗಷ್ಟೇ ಮದುವೆ ಮಾಡಿಸಿದ್ದೆ. ಆದರೆ ಈಗ ನನ್ನ ಮಗ ನಮ್ಮ ಜೊತೆಯಿಲ್ಲ ಎಂದು ಕಣ್ಣೀರು ಹಾಕುತ್ತ ಗುರು ತಂದೆ ಅಸ್ವಸ್ಥರಾಗುತ್ತಿದ್ದಾರೆ. ಇದನ್ನೂ ಓದಿ: 2 ನಿಮಿಷ ಬಿಟ್ಟು ಕರೆ ಮಾಡ್ತೀನಿ ಅಂದೋನು ಮಾಡ್ಲೇ ಇಲ್ಲ- ಗುರು ಗೆಳೆಯ ಯೋಧ ಕಣ್ಣೀರು

    ನನ್ನ ಮಗ ಎಲ್ಲರ ಮೇಲೂ ಪ್ರೀತಿ ಇಟ್ಟುಕೊಂಡಿದ್ದನು. ಅವನೇ ಸಾಲ ಮಾಡಿ ನಮಗೆ ಹಾಗೂ ತಮ್ಮಂದಿರಿಗಾಗಿ ಮನೆ ಕಟ್ಟಿಸಿದ್ದ. ನಮ್ಮಲ್ಲೆರನ್ನು ಪ್ರೀತಿ ಮಾಡುತ್ತಿದ್ದ. ನನ್ನ ಮಗನನ್ನು ಕೊಂದ ದುಷ್ಟರನ್ನು ಬಿಡಬಾರದು. ಅವರನ್ನು ಭೂಮಿ ಮೇಲೆ ಬಿಟ್ಟರೆ ಇನ್ನೂ ಎಷ್ಟು ಜನರ ಹೋಗುತ್ತಾರೋ ಎಂದು ಗುರು ತಂದೆ ಕಣ್ಣೀರು ಹಾಕುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಾನು ವೀರಮರಣ ಹೊಂದಿದ್ರೆ ಯಾವುದೇ ಪ್ರಧಾನಿಗೆ ಸಿಗದ ಮುಕ್ತಿ ಸಿಗುತ್ತೆ ಎಂದಿದ್ದರು ಗುರು

    ನಾನು ವೀರಮರಣ ಹೊಂದಿದ್ರೆ ಯಾವುದೇ ಪ್ರಧಾನಿಗೆ ಸಿಗದ ಮುಕ್ತಿ ಸಿಗುತ್ತೆ ಎಂದಿದ್ದರು ಗುರು

    – ಮಗನ ಪ್ರತೀ ಮಾತುಗಳನ್ನು ನೆನಪಿಸಿಕೊಂಡು ತಾಯಿ ಕಣ್ಣೀರು

    ಮಂಡ್ಯ: ನಾನು ದೇಶ ಸೇವೆ ಮಾಡಿ ಬರುತ್ತೇನೆ. ನಾನು ವೀರಮರಣ ಹೊಂದಿದರೆ ಯಾವುದೇ ಪ್ರಧಾನಿಗೆ ಸಿಗದ ಮುಕ್ತಿ ನನಗೆ ಸಿಗುತ್ತದೆ ಎಂದು ಹುತಾತ್ಮ ಗುರು ಅವರು ಈ ಹಿಂದೆ ತಮ್ಮ ತಾಯಿ ಬಳಿ ಹೇಳಿಕೊಂಡಿದ್ದು, ಈ ಮಾತನ್ನು ಇಂದು ತಾಯಿ ನೆನಪಿಸಿಕೊಂಡು ಕಣ್ಣೀರು ಹಾಕುತ್ತಿದ್ದಾರೆ.

    ಇದೀಗ ಮಗನೇ ಇಲ್ಲದ ಮೇಲೆ ಆ ಮುಕ್ತಿ ಇಟ್ಟುಕೊಂಡು ನಾವು ಏನೂ ಮಾಡಬೇಕು. ಗುರುವಿಗೆ ಮದುವೆ ಆಗಿ 8 ತಿಂಗಳು ಆಗಿತ್ತು. ನನ್ನ ಮಗ ಚೆನ್ನಾಗಿ ಇರಲಿ ಎಂದು ಮಗನಿಗೆ ಮದುವೆ ಮಾಡಿದೆ. ಬಳಿಕ ಕೆಲಸಕ್ಕೆ ಹೋಗೋದು ಬೇಡ ಎಂದು ಹೇಳಿದ್ದೆ. ಆದರೆ ನಾನು ದೇಶ ಸೇವೆ ಮಾಡಬೇಕು ಎಂದು ಹಠದಲ್ಲಿ ರಜೆ ಮುಗಿಸಿಕೊಂಡು ಹೋದವನು ಹಿಂದಿರುಗಿ ಬರಲೇ ಇಲ್ಲ ಎಂದು ಹುತಾತ್ಮ ಯೋಧ ಗುರು ತಾಯಿ ಚಿಕ್ಕೋಳಮ್ಮ ಅವರ ಆಕ್ರಂದನ ಮುಗಿಲುಮುಟ್ಟಿದೆ. ಇದನ್ನೂ ಓದಿ: ನಂಗೆ ಅವರು ಬೇಕು ಅಮ್ಮಾ..- ಮುಗಿಲು ಮುಟ್ಟಿದೆ ಹುತಾತ್ಮ ಗುರು ಪತ್ನಿಯ ಆಕ್ರಂದನ

    ನಾನು ಪ್ರಧಾನಿಗೆ ಏನು ಕೇಳಲಿ. ನನಗೆ ಕೇಳಲು ಆ ಶಕ್ತಿ ಇಲ್ಲ. ನನ್ನ ಮನೆಯ ಬದುಕೇ ಹೋದ ಮೇಲೆ ನಾನು ಪ್ರಧಾನಿ ಬಳಿ ಏನೂ ಕೇಳಲಿ ಎಂದು ವೀರಯೋಧ ಗುರು ಅವರ ತಾಯಿ ಕಣ್ಣೀರು ಹಾಕುತ್ತಿದ್ದಾರೆ. ಇದನ್ನೂ ಓದಿ: 2 ನಿಮಿಷ ಬಿಟ್ಟು ಕರೆ ಮಾಡ್ತೀನಿ ಅಂದೋನು ಮಾಡ್ಲೇ ಇಲ್ಲ- ಗುರು ಗೆಳೆಯ ಯೋಧ ಕಣ್ಣೀರು

    ಉಗ್ರರಿಗೆ ಶಿಕ್ಷೆ ನೀಡಿದರೆ, ನನ್ನ ಮಗ ಬದುಕಿ ಬರುತ್ತಾನಾ? ಅವರಿಗೆ ಶಿಕ್ಷೆ ನೀಡಿದರೆ ನನ್ನ ಮಗ ಹಿಂದಿರುಗಿ ಬರಲ್ಲ. ಮಗನೇ ಇಲ್ಲದ ಮೇಲೆ ಅವನ ಕೊಂದವರಿಗೆ ಏನು ಶಾಪ ಹಾಕಲಿ. ಅವರ ಮಕ್ಕಳು ಕೂಡ ಚೆನ್ನಾಗಿ ಇರಲಿ ಎಂದು ಮಾತೃ ಹೃದಯ ಕಣ್ಣೀರು ಹಾಕುತ್ತಿದ್ದು ನೋಡುಗರ ಕಣ್ಣಾಲಿಗಳನ್ನು ಒದ್ದೆ ಮಾಡುತ್ತಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 2 ನಿಮಿಷ ಬಿಟ್ಟು ಕರೆ ಮಾಡ್ತೀನಿ ಅಂದೋನು ಮಾಡ್ಲೇ ಇಲ್ಲ- ಗುರು ಗೆಳೆಯ ಯೋಧ ಕಣ್ಣೀರು

    2 ನಿಮಿಷ ಬಿಟ್ಟು ಕರೆ ಮಾಡ್ತೀನಿ ಅಂದೋನು ಮಾಡ್ಲೇ ಇಲ್ಲ- ಗುರು ಗೆಳೆಯ ಯೋಧ ಕಣ್ಣೀರು

    ಮಂಡ್ಯ: ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರನ ಆತ್ಮಾಹುತಿ ದಾಳಿಯಲ್ಲಿ ಮಂಡ್ಯದ ಯೋಧ ಗುರು ಹುತಾತ್ಮರಾಗಿದ್ದು, ಇದೀಗ ಜಿಲ್ಲೆಯಲ್ಲಿ ನೀರವ ಮೌನ ಆವರಿಸಿದೆ. ಗುರು ಪೋಷಕರು, ಪತ್ನಿ ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದ್ರೆ, ಇತ್ತ ಗೆಳೆಯರು ಕಣ್ಣೀರು ಹಾಕುತ್ತಿದ್ದಾರೆ.

    ಗುರು ಗೆಳೆಯರು ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ಉಗ್ರ ಕೃತ್ಯವನ್ನು ಖಂಡಿಸಿ, ಪ್ರತೀಕಾರ ತೀರಿಸಿಕೊಳ್ಳಲೇ ಬೇಕು ಎಂದು ಆಗ್ರಹಿಸಿದ್ದಾರೆ. ಗೆಳೆಯರಾಗಿದ್ದ ಯೋಧರೊಬ್ಬರು ಮಾತನಾಡಿ, ಗುರು ಭಾಯ್ ಓರ್ವ ಯೋಧ. ಅವನು ತುಂಬಾ ನಿಯತ್ತಿನಿಂದ ಕೆಲಸ ಮಾಡುತ್ತಿದ್ದನು. ಒಳ್ಳೆಯ ವ್ಯಕ್ತಿತ್ವ ಹೊಂದಿದ್ದನು. ಆದ್ರೆ ಉಗ್ರರು ಈ ರೀತಿ ಮಾಡಿರುವುದು ತುಂಬಾನೇ ನೋವಾಗಿದೆ. ನಾನು ಕೂಡ ಓರ್ವ ಯೋಧನಾಗಿದ್ದೇನೆ. ಉಗ್ರರು ಈ ರೀತಿ ಮಾಡಿದ್ದಕ್ಕೆ ತಕ್ಕ ಉತ್ತರ ಕೊಡುತ್ತೇವೆ. ಬುಧವಾರವಷ್ಟೇ ಗುರು ನನ್ನ ಜೊತೆ ಫೋನಿನಲ್ಲಿ ಮಾತನಾಡಿ, ಡ್ಯೂಟಿಗೆ ಹೋಗ್ತಾ ಇದ್ದೀನಿ. 2 ನಿಮಿಷದ ಬಳಿಕ ಕರೆ ಮಾಡ್ತೀನಿ ಎಂದು ಹೇಳಿದ್ದನು. ಆದ್ರೆ ಮತ್ತೆ ಆತನ ಕರೆ ಬಂದೇ ಇಲ್ಲ ಎಂದು ಗುರವಿನ ಗೆಳೆಯ ಯೋದರೊಬ್ಬರು ಬೇಸರ ವ್ಯಕ್ತಪಡಿಸಿದ್ರು. ಇದನ್ನೂ ಓದಿ: ನಂಗೆ ಅವರು ಬೇಕು ಅಮ್ಮಾ..- ಮುಗಿಲು ಮುಟ್ಟಿದೆ ಹುತಾತ್ಮ ಗುರು ಪತ್ನಿಯ ಆಕ್ರಂದನ

    ಒಂದು ವಾರದ ಹಿಂದೆಯಷ್ಟೇ ಗುರು ಊರಿಗೆ ಬಂದು ಮೂರು ದಿನಗಳ ಹಿಂದೆಯಷ್ಟೇ ತೆರಳಿ ಮತ್ತೆ ಕೆಲಸಕ್ಕೆ ಸೇರಿಕೊಂಡಿದ್ದರು. ಆದ್ರೆ ಇದೀಗ ಅವರು ಉಗ್ರನ ಕೃತ್ಯದಿಂದ ಹುತಾತ್ಮರಾಗಿದ್ದಾರೆ. ಈ ವಿಚಾರ ಸ್ನೇಹಿತರ ಬಳಗಕ್ಕೆ ತುಂಬಾ ಬೇಸರವಾಗುತ್ತದೆ. ಇದಕ್ಕೆ ಪ್ರತಿಫಲವಾಗಿ ನಮ್ಮ ಸರ್ಕಾರ ಸೇಡು ತೀರಿಸಿಕೊಳ್ಳಲೇ ಬೇಕು ಎಂದು ಗೆಳೆಯರೊಬ್ಬರು ಒತ್ತಾಯಿಸಿದ್ರು. ಇದನ್ನೂ ಓದಿ: 44 ಯೋಧರನ್ನು ಬಲಿ ಪಡೆದುಕೊಂಡ ಉಗ್ರನೂ ಭಾರತೀಯ..!

    ನನ್ನ ಗೆಳೆಯ ನಂದೀಶ್ ಎಂಬವರು ಜಾರ್ಖಂಡ್ ನಲ್ಲಿ ಸಿಆರ್‍ಪಿಎಫ್ ಯೋಧರಾಗಿ ಕೆಲಸ ಮಾಡುತ್ತಿದ್ದಾರೆ. ಅವರು ನನಗೆ ಕರೆ ಮಾಡಿ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಪಟ್ಟಿಯಲ್ಲಿ ಗುರು ಹೆಸರಿದೆ ಎಂಬ ಮಾಹಿತಿ ನೀಡಿದ್ರು. ಆದ್ರೆ ಈ ಬಗ್ಗೆ ಇನ್ನೂ ನಿಖರ ಮಾಹಿತಿಯಿಲ್ಲ. ಹೀಗಾಗಿ ªಅವರ ಮನೆಯವರಿಗೆ ವಿಷಯ ತಿಳಿಸಬೇಡ ಎಂದಿದ್ದರು. ಇನ್ನೊಬ್ಬರು ಚೆಲುರಾಜು ಎಂಬವರು ಕೂಡ ಅಲ್ಲೇ ಕೆಲಸ ನಿರ್ವಹಿಸುತ್ತಿಒದ್ದರು. ಅವರು ಕೂಡ 12 ಗಂಟೆ ಸುಮಾರಿಗೆ ಅದೇ ರಸ್ತೆಯಲ್ಲಿ ಪಾಸ್ ಆಗಿದ್ದರು. ಅವರು ಕೂಡ ಗುರು ಹುತಾತ್ಮರಾಗಿದ್ದಾರೆ ಎಂದು ಹೇಳಿದ್ರು ಎಂದು ಮತ್ತೋರ್ವ ಗೆಳೆಯ ಕಣ್ಣೀರು ಹಾಕಿದ್ರು. ಇದನ್ನೂ ಓದಿ: ಪುಲ್ವಾಮಾದಲ್ಲಿ ಮಂಡ್ಯದ ಯೋಧ ಹುತಾತ್ಮ – ಫೆ.10ಕ್ಕೆ ರಜೆ ಮುಗಿಸಿ ಊರಿಂದ ಹೊರಟಿದ್ದರು

    https://www.youtube.com/watch?v=5JqTWRx0JWA

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಂಗೆ ಅವರು ಬೇಕು ಅಮ್ಮಾ..- ಮುಗಿಲು ಮುಟ್ಟಿದೆ ಹುತಾತ್ಮ ಗುರು ಪತ್ನಿಯ ಆಕ್ರಂದನ

    ನಂಗೆ ಅವರು ಬೇಕು ಅಮ್ಮಾ..- ಮುಗಿಲು ಮುಟ್ಟಿದೆ ಹುತಾತ್ಮ ಗುರು ಪತ್ನಿಯ ಆಕ್ರಂದನ

    ಮಂಡ್ಯ: ಜಮ್ಮು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಆವಂತಿಪುರದಲ್ಲಿ ನಡೆದ ಉಗ್ರರ ಆತ್ಮಾಹುತಿ ದಾಳಿಯಲ್ಲಿ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕೆ.ಎಂ.ದೊಡ್ಡಿ ಸಮೀಪದ ಗುಡಿಗೆರೆ ಕಾಲೋನಿಯ ಗುರು.ಎಚ್. (33) ವೀರಮರಣವನ್ನಪ್ಪಿದ್ದಾರೆ. ಅವರ ಅಗಲಿಕೆಯನ್ನು ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಪತ್ನಿ ಕಲಾವತಿ ಅವರ ಅಳಲು ಮುಗಿಲುಮುಟ್ಟಿದ್ದು, ಮನಕಲಕುವಂತಿದೆ.

    ನಾನು ಪ್ರತಿದಿನ ಅವರ ಜೊತೆ ಫೋನಿನಲ್ಲಿ ಮಾತನಾಡುತ್ತಿದ್ದೆ. ಅವರು ಬೆಳಗ್ಗೆ 11 ಗಂಟೆಗೆ ಫೋನ್ ಮಾಡಿದ್ದರು. ನಾನು ಕೆಲಸ ಮಾಡುತ್ತಿದ್ದರಿಂದ ಅವರ ಜೊತೆ ಮಾತನಾಡಲು ಸಾಧ್ಯವಾಗಿಲ್ಲ. ಅವರು ಊರಿಂದ ಹೋಗಿ ನಾಲ್ಕು ದಿನಗಳು ಆಗಿರಲಿಲ್ಲ. ತುಂಬಾ ನೋವಾಗುತ್ತಿದೆ ಎಂದು ಕಲಾವತಿ ಅವರು ಕಣ್ಣೀರು ಹಾಕಿದ್ದಾರೆ. ಇದನ್ನೂ ಓದಿ: ಪುಲ್ವಾಮಾದಲ್ಲಿ ಮಂಡ್ಯದ ಯೋಧ ಹುತಾತ್ಮ – ಫೆ.10ಕ್ಕೆ ರಜೆ ಮುಗಿಸಿ ಊರಿಂದ ಹೊರಟಿದ್ದರು

    ನನ್ನಿಂದ ಇದನ್ನು ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಗುರುವಾರ ಒಂದು ದಿನ ಅವರ ಜೊತೆ ಮಾತನಾಡಿದ್ರೆ ಆಗುತ್ತಿತ್ತು. ನಾನು 6 ಗಂಟೆಯಿಂದ ಫೋನ್ ಮಾಡಿ ಮಾಡಿ ಸಾಕಾಯ್ತು. ನನಗೆ ಅವರು ಬೇಕು ಅಮ್ಮಾ ಎಂದು ತಾಯಿ ಮಡಿಲಲ್ಲಿ ಮಲಗಿಕೊಂಡು ಅಳುತ್ತಿದ್ದಾರೆ.

    ಗುರುವಾರ ಮಧ್ಯಾಹ್ನ 3.30ರ ಸುಮಾರಿಗೆ ಜೈಶ್-ಎ- ಮೊಹಮ್ಮದ್ ಉಗ್ರ ಸಂಘಟನೆಗೆ ಸೇರಿದ ಅದಿಲ್ ದರ್ ಎಂಬ ಉಗ್ರ ಸ್ಕಾರ್ಪಿಯೋ ಕಾರಿನಲ್ಲಿ ಸ್ಫೋಟಕ ತುಂಬಿ ಆತ್ಮಾಹುತಿ ದಾಳಿ ಮಾಡಿದ್ದನು. ಈ ದಾಳಿಯಲ್ಲಿ ಇದೂವರೆಗೆ 44 ಯೋಧರು ಹುತಾತ್ಮರಾಗಿದ್ದು, ಹಲವರು ಗಾಯಗೊಂಡಿದ್ದರು.

    ಒಂದು ವರ್ಷ ಹಿಂದೆ ಗೃಹ ಪ್ರವೇಶ ಮಾಡಿಕೊಂಡಿದ್ದ ಗುರು ಅವರಿಗೆ 10 ತಿಂಗಳ ಹಿಂದೆ ಮದುವೆಯಾಗಿತ್ತು. ಸ್ವಂತ ಮಾವನ ಮಗಳಾದ, ಹಲಗೂರು ಬಳಿಯ ಸಾಸಲಾಪುರ ಗ್ರಾಮದವರಾದ ಕಲಾವತಿಯನ್ನು ವಿವಾಹವಾಗಿದ್ದರು. 15 ದಿನದ ಹಿಂದೆ ರಜೆಗೆಂದು ಬಂದಿದ್ದ ಗುರು ಅವರು ಫೆಬ್ರವರಿ 10ರಂದು ಗುಡಿಗೆರೆ ಕಾಲೋನಿಯಿಂದ ರಜೆ ಮುಗಿಸಿಕೊಂಡು ಹೊರಟಿದ್ದರು. ಹೀಗೆ ಹೊರಟಿದ್ದ ಗುರು ಗುರುವಾರವಷ್ಟೇ ಕರ್ತವ್ಯಕ್ಕೆ ಹಾಜರಾಗಿದ್ದರು. ಆದರೆ, ಕರ್ತವ್ಯಕ್ಕೆ ವಾಪಸ್ ಬರುತ್ತಿದ್ದಂತೆಯೇ ಮಾರಣಹೋಮದಲ್ಲಿ ಸಾವನ್ನಪ್ಪಿದ್ದು ವಿಧಿ ವಿಪರ್ಯಾಸ. ಗುರು ಸಾವಿನ ಸುದ್ದಿ ಕೇಳಿ ಗುಡಿಗೆರೆ ಕಾಲೋನಿಯ ನಿವಾಸದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

    https://www.youtube.com/watch?v=5JqTWRx0JWA

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv