Tag: ಗುರುವಾ ರೆಡ್ಡಿ

  • ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಆಸ್ಪತ್ರೆ ದಾಖಲು: ಅಭಿಮಾನಿಗಳಿಗೆ ಹೆಚ್ಚಿದೆ ಆತಂಕ

    ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಆಸ್ಪತ್ರೆ ದಾಖಲು: ಅಭಿಮಾನಿಗಳಿಗೆ ಹೆಚ್ಚಿದೆ ಆತಂಕ

    ಕ್ಷಿಣದ ಹೆಸರಾಂತ ನಟಿ, ಕನ್ನಡತಿ ರಶ್ಮಿಕಾ ಮಂದಣ್ಣ (Rashmika Mandanna) ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಕುರಿತು ಸ್ವತಃ ಅವರನ್ನು ಚಿಕಿತ್ಸೆ ಮಾಡುತ್ತಿರುವ ವೈದ್ಯರೇ ವಿಷಯವನ್ನು ಬಹಿರಂಗ ಪಡಿಸಿದ್ದು, ಅಭಿಮಾನಿಗಳು ಆತಂಕ ವ್ಯಕ್ತ ಪಡಿಸಿದ್ದಾರೆ. ತಮ್ಮ ನೆಚ್ಚಿನ ನಟಿಗೆ ಏನಾಗಿದೆ ಎಂದು ಆತಂಕದಲ್ಲಿರುವ ಅಭಿಮಾನಿಗಳಿಗೆ ರಶ್ಮಿಕಾ ಪಡೆಯುತ್ತಿರುವ ಚಿಕಿತ್ಸೆ ಕುರಿತಾಗಿಯೂ ಅವರು ಮಾಹಿತಿ ನೀಡಿದ್ದಾರೆ. ರಶ್ಮಿಕಾ ಆರೋಗ್ಯ ಸ್ಥಿರವಾಗಿರುವ ಕುರಿತೂ ಮಾಹಿತಿ ಸಿಕ್ಕಿದೆ.

    ಸತತವಾಗಿ ಚಿತ್ರೀಕರಣದಲ್ಲಿ ತೊಡಗಿರುವ ಕಾರಣದಿಂದಾಗಿ ರಶ್ಮಿಕಾ ಅವರು ಮೊಣಕಾಲಿನ (Knee) ನೋವಿನ ಸಮಸ್ಯೆಯಿಂದ (Problem) ಬಳಲುತ್ತಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ಅವರು ಹೈದರಾಬಾದ್ ನ ಪ್ರತಿಷ್ಠಿತ ಆಸ್ಪತ್ರೆಗೆ (Hospital) ದಾಖಲಾಗಿದ್ದಾರೆ. ಆರ್ಥೋ ಸ್ಪೆಷಲಿಸ್ಟ್ ಗುರುವಾ ರೆಡ್ಡಿ (Guruva Reddy) ಅವರು ರಶ್ಮಿಕಾಗೆ ಚಿಕಿತ್ಸೆ ನೀಡಿದ್ದು, ತಮಾಷೆಯಾಗಿ ‘ಸಾಮಿ ಸಾಮಿ ಅಂತ ಮೊಣಕಾಲಿಗೆ ಭಾರ ಹಾಕಿ ಡಾನ್ಸ್ ಮಾಡಿದ್ದೀರಿ. ಅದಕ್ಕಾಗಿ ಈ ನೋವು ಬಂದಿದೆ’ ಎಂದು ಬರೆದುಕೊಂಡಿದ್ದಾರೆ.

    ಮೊಣಕಾಲಿನ ನೋವು ಅತಿಯಾದ ಕಾರಣದಿಂದಾಗಿ ಚಿಕಿತ್ಸೆ ಪಡೆಯಲು ರಶ್ಮಿಕಾ ಬಂದಿದ್ದರು. ಅವರಿಗೆ ಸೂಕ್ತ ಚಿಕಿತ್ಸೆ ನೀಡಿದ್ದೇವೆ. ಸದ್ಯ ಅವರು ಸುಧಾರಿಸಿಕೊಳ್ಳುತ್ತಿದ್ದಾರೆ. ಕೆಲವೇ ದಿನಗಳಲ್ಲಿ ಅವರು ಸರಿ ಹೋಗುತ್ತಾರೆ. ಎಂದಿನಂತೆ ಮತ್ತೆ ಸಿನಿಮಾಗಳ ಶೂಟಿಂಗ್ ನಲ್ಲೂ ಅವರು ಭಾಗಿಯಾಗಲಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಹೆಚ್ಚು ಮೊಣಕಾಲಿಗೆ ಕೆಲಸ ಕೊಟ್ಟಿರುವ ಕಾರಣದಿಂದಾಗಿಯೇ ಈ ನೋವು ಕಾಣಿಸಿಕೊಂಡಿದೆ ಎಂದು ವೈದ್ಯರು ತಿಳಿಸಿದ್ದಾರೆ.  ಇದನ್ನೂ ಓದಿ : ಈ ಬಾರಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿರುವ ಎಕ್ಸ್‌ಕ್ಲೂಸಿವ್ ಸೆಲೆಬ್ರಿಟಿಗಳು

    ಗುಡ್ ಬೈ ಸೇರಿದಂತೆ ಹಲವು ಸಿನಿಮಾಗಳ ಸತತ ಚಿತ್ರೀಕರಣವೇ ಈ ಅನಾರೋಗ್ಯಕ್ಕೆ ಕಾರಣ ಎಂದು ಹೇಳಲಾಗುತ್ತಿದ್ದು ಕೆಲ ಕಾಲ ಜಿಮ್ ಬಿಡುವಂತೆಯೂ ಮತ್ತು ಮೊಣಕಾಲಿಗೆ ಭಾರ ಆಗುವಂತಹ ಕೆಲಸವನ್ನು ಮಾಡದಂತೆಯೇ ವೈದ್ಯರು ಸೂಚಿಸಿದ್ದಾರಂತೆ. ಹಾಗಾಗಿ ಕೆಲ ದಿನಗಳ ಕಾಲ ಜಿಮ್ ನಿಂದ ರಶ್ಮಿಕಾ ದೂರ ಇರಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]