Tag: ಗುರುರಾಜ್ ಪೂಜಾರಿ

  • ನಾಲ್ಕು ವರ್ಷಗಳ ಹಿಂದೆ ಪದಕ ಗೆದ್ದಾಗ ಕೊಟ್ಟ ಭರವಸೆ ಇನ್ನೂ ಈಡೇರಿಲ್ಲ – ಬೇಸರ ವ್ಯಕ್ತಪಡಿಸಿದ ಗುರುರಾಜ್ ಪೂಜಾರಿ

    ನಾಲ್ಕು ವರ್ಷಗಳ ಹಿಂದೆ ಪದಕ ಗೆದ್ದಾಗ ಕೊಟ್ಟ ಭರವಸೆ ಇನ್ನೂ ಈಡೇರಿಲ್ಲ – ಬೇಸರ ವ್ಯಕ್ತಪಡಿಸಿದ ಗುರುರಾಜ್ ಪೂಜಾರಿ

    ಉಡುಪಿ: ಸರ್ಕಾರದಿಂದ ಇನ್ನಷ್ಟು ಪ್ರೋತ್ಸಾಹದ ಅಗತ್ಯ ಇದೆ. ನಾಲ್ಕು ವರ್ಷದ ಹಿಂದೆ ಪದಕ ಗೆದ್ದಾಗ ಜೆಡಿಎಸ್ ಸರ್ಕಾರ ಇತ್ತು. ಕುಮಾರಸ್ವಾಮಿ 20 ಲಕ್ಷ ರೂ. ಸರ್ಕಾರಿ ಉದ್ಯೋಗ ಭರವಸೆ ನೀಡಿದ್ದರು. ಆ ಭರವಸೆ ಇನ್ನೂ ಈಡೇರಿಲ್ಲ. ಬಿಜೆಪಿ ಸರ್ಕಾರ ಎಂಟು ಲಕ್ಷ ರೂ. ಬಹುಮಾನ ಘೋಷಣೆ ಮಾಡಿದೆ. ಬೇರೆ ರಾಜ್ಯಕ್ಕೆ ಹೋಲಿಕೆ ಮಾಡಿದರೆ ಇದು ಬಹಳ ಕಡಿಮೆ ಎಂದು ಕಾಮನ್‍ವೆಲ್ತ್ ಪದಕ ವಿಜೇತ ವೇಟ್ ಲಿಫ್ಟರ್ ಗುರುರಾಜ್ ಪೂಜಾರಿ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

    ಇಂಗ್ಲೆಂಡ್‍ನಲ್ಲಿ ನಡೆದ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಕರ್ನಾಟಕದ ವೇಟ್ ಲಿಫ್ಟರ್ ಗುರುರಾಜ್ ಪೂಜಾರಿ ಕಂಚಿನ ಪದಕ ಗೆದ್ದು, ತವರಿಗೆ ಆಗಮಿಸಿದರು. ಈ ವೇಳೆ ಉಡುಪಿ ಜಿಲ್ಲಾಡಳಿತ ಅದ್ಧೂರಿಯಾಗಿ ಸ್ವಾಗತಿಸಿ ಸನ್ಮಾನಿಸಿದೆ. ಉಡುಪಿಯಲ್ಲಿ ಯುವ ಕ್ರೀಡಾಪಟುಗಳು ಮತ್ತು ಜಿಲ್ಲಾಡಳಿತ ನಡೆಸಿದ ಸನ್ಮಾನದ ಬಳಿಕ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಗುರುರಾಜ್ ಪೂಜಾರಿ, ಖುಷಿಯ ಜೊತೆ ನೋವನ್ನು ಬಿಚ್ಚಿಟ್ಟಿದ್ದಾರೆ. ಹರಿಯಾಣ, ಪಂಜಾಬ್, ಹಿಮಾಚಲಪ್ರದೇಶ ಸರ್ಕಾರ ಅಲ್ಲಿನ ಪದಕ ಗೆದ್ದ ಕ್ರೀಡಾಪಟುಗಳಿಗೆ 20-50 ಲಕ್ಷ ರೂ. ತನಕ ಬಹುಮಾನ ನೀಡಿದೆ. ರಾಜ್ಯ ಸರ್ಕಾರದ ಬಳಿ ಸರ್ಕಾರಿ ನೌಕರಿ ಕೇಳಲು ಬಯಸುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಕಾಮನ್‌ವೆಲ್ತ್‌ನಲ್ಲಿ ಕರ್ನಾಟಕದ ಗುರುರಾಜ್‌ಗೆ ಕಂಚು – ಭಾರತಕ್ಕೆ 2ನೇ ಪದಕ

    ಉಡುಪಿಗೆ ಬಂದು ತುಂಬಾ ಸಂತೋಷ ಆಗುತ್ತಿದೆ. ಎಲ್ಲರಿಗೂ ನಾನು ಆಭಾರಿ. ನಾನು ದೇಶಕ್ಕೆ ಎರಡು ಪದಕ ತಂದಿದ್ದು ಹೆಮ್ಮೆ ಆಗುತ್ತಿದೆ. ಕಳೆದ ಬಾರಿಯೂ ಪದಕ ಗೆದ್ದಾಗ ಎಲ್ಲರೂ ನನ್ನನ್ನು ಪ್ರೀತಿಯಿಂದ ನೋಡಿಕೊಂಡಿದ್ದಾರೆ ಗೌರವಿಸಿದ್ದಾರೆ. ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಹಿಂದಿಗಿಂತಲೂ ಈ ಬಾರಿ ಅಧಿಕ ಪದಕಗಳು ಭಾರತಕ್ಕೆ ಬರಲಿದೆ. ದೇಶದ ಸಾಧನೆಗೆ ಪ್ರಧಾನಿ ಮೋದಿ ಕಾರಣ. ಕ್ರೀಡೆಗೆ ಕೇಂದ್ರ ಸರ್ಕಾರ ಬಹಳ ಬೆಂಬಲ ಕೊಡುತ್ತಿದೆ. ಮುಂದಿನ ಕಾಮನ್‍ವೆಲ್ತ್‌ನಲ್ಲಿ ಭಾರತ ದೊಡ್ಡ ಸಾಧನೆ ಮಾಡಲಿದೆ. ಪರಿಶ್ರಮ ಮತ್ತು ಗುರಿ ಇದ್ದರೆ ಸಾಧನೆ ಮಾಡಬಹುದು ಎಂದು ಅಭಿಪ್ರಾಯಹಂಚಿಕೊಂಡಿದ್ದಾರೆ. ಇದನ್ನೂ ಓದಿ: CWG 2022: ಇಂದು ಕೊನೆಯ ದಿನ – ಪದಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರುವ ತವಕದಲ್ಲಿ ಭಾರತ

    Live Tv
    [brid partner=56869869 player=32851 video=960834 autoplay=true]

  • ಕಾಮನ್‌ವೆಲ್ತ್‌ನಲ್ಲಿ ಕರ್ನಾಟಕದ ಗುರುರಾಜ್‌ಗೆ ಕಂಚು – ಭಾರತಕ್ಕೆ 2ನೇ ಪದಕ

    ಕಾಮನ್‌ವೆಲ್ತ್‌ನಲ್ಲಿ ಕರ್ನಾಟಕದ ಗುರುರಾಜ್‌ಗೆ ಕಂಚು – ಭಾರತಕ್ಕೆ 2ನೇ ಪದಕ

    ಬರ್ಮಿಂಗ್‌ಹ್ಯಾಮ್: ಕಾಮನ್‌ವೆಲ್ತ್ ಗೇಮ್ಸ್-2022 ಕ್ರೀಡಾಕೂಟದಲ್ಲಿ ಕರ್ನಾಟಕ ಮೂಲದ ಕ್ರೀಡಾಪಟು ಕಂಚಿನ ಪದಕ ಗೆದ್ದಿದ್ದು, ಭಾರತಕ್ಕೆ 2ನೇ ಪದಕ ಲಭಿಸಿದೆ.

    ಕರ್ನಾಟಕದ ಗುರುರಾಜ್ ಪೂಜಾರಿ ವೇಟ್‌ಲಿಫ್ಟಿಂಗ್ 61 ಕೆಜಿ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ಇದನ್ನೂಓದಿ: ಭಾರತದ ಪದಕ ಬೇಟೆ ಆರಂಭ – ಸಂಕೇತ್‌ಗೆ ವೇಟ್‌ಲಿಫ್ಟಿಂಗ್‌ನಲ್ಲಿ ಬೆಳ್ಳಿ

    ಗುರುರಾಜ್ ಒಟ್ಟು 269 ಕೆಜಿ ತೂಕ ಎತ್ತುವ ಮೂಲಕ 3ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಸ್ನ್ಯಾಚ್‌ ಸುತ್ತಿನ ಮುಕ್ತಾಯದ ನಂತರ ಅವರು ನಾಲ್ಕನೇ ಸ್ಥಾನದಲ್ಲಿದ್ದರು. ಇದಕ್ಕೂ ಮುನ್ನ ಮೊದಲ ಎರಡು ಪ್ರಯತ್ನದಲ್ಲಿ ಕ್ರಮವಾಗಿ 118, 115 ಕೆ.ಜಿ ಎತ್ತಿದ್ದರು. ಈ ಮೂಲಕ ಕಾಮನ್‌ವೆಲ್ತ್ ಕ್ರೀಡಾಕೂಟಗಳಲ್ಲಿ ಗುರುರಾಜ್ 2ನೇ ಪದಕ ವಿಜೇತರಾದ ಸಾಧನೆ ಮಾಡಿದ್ದಾರೆ. ಈ ಹಿಂದೆ 2018ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲೂ ಬೆಳ್ಳಿ ಗೆದ್ದಿದ್ದರು.

    Live Tv
    [brid partner=56869869 player=32851 video=960834 autoplay=true]

  • ಕಾಮನ್‍ವೆಲ್ತ್ ನಲ್ಲಿ ಬೆಳ್ಳಿ ಪದಕ ಗೆದ್ದ ಗುರುರಾಜ್ ಪೂಜಾರಿಗೆ ರಾಜ್ಯ ಸರ್ಕಾರದಿಂದ ಮೋಸ!

    ಕಾಮನ್‍ವೆಲ್ತ್ ನಲ್ಲಿ ಬೆಳ್ಳಿ ಪದಕ ಗೆದ್ದ ಗುರುರಾಜ್ ಪೂಜಾರಿಗೆ ರಾಜ್ಯ ಸರ್ಕಾರದಿಂದ ಮೋಸ!

    ಉಡುಪಿ: ಈ ಬಾರಿಯ ಕಾಮನ್ ವೆಲ್ತ್ ನಲ್ಲಿ ದೇಶಕ್ಕೆ ಬೆಳ್ಳಿ ಪದಕ ಗೆದ್ದು ಕೊಟ್ಟ ಕುಂದಾಪುರದ ಗುರುರಾಜ್ ಪೂಜಾರಿಗೆ ರಾಜ್ಯ ಸರ್ಕಾರ ಮೋಸ ಮಾಡಿದೆ.

    25 ಲಕ್ಷ ರೂ. ಪ್ರೋತ್ಸಾಹ ಧನವನ್ನೂ ನೀಡಿಲ್ಲ, ಉದ್ಯೋಗವನ್ನೂ ಕೊಡಿಸಿಲ್ಲ. ದೇಶಕ್ಕಾಗಿ ಪದಕ ಗೆದ್ದು ಕೊಟ್ಟು ಮೂರು ತಿಂಗಳು ಕಳೆದರೂ ಈ ಬಡ ಕ್ರೀಡಾಪಟುವಿಗೆ ಸರ್ಕಾರದ ಆರ್ಥಿಕ ನೆರವು ತಲುಪಿಲ್ಲ. ರಾಷ್ಟ್ರಮಟ್ಟದಲ್ಲಿ ರಾಜ್ಯಕ್ಕೆ ಹೆಸರು ತಂದ ಈ ವೇಟ್ ಲಿಫ್ಟಿಂಗ್, ಫೈಲುಗಳನ್ನು ಹಿಡಿದು ಕಚೇರಿಯಿಂದ ಕಚೇರಿಗೆ ಅಲೆದಾಡಬೇಕಾದ ಸ್ಥಿತಿ ಎದುರಿಸಬೇಕಾಗಿದೆ.

    ಬಡತನದಲ್ಲೇ ಕಷ್ಟಪಟ್ಟು ಸಾಧನೆ ಮಾಡಿರುವ ಗುರುರಾಜ್ ಮೂಲತಃ ಉಡುಪಿ ಜಿಲ್ಲೆಯ ಬೈಂದೂರಿನವರು. ಆಸ್ಟ್ರೇಲಿಯಾದಲ್ಲಿ ನಡೆದ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಪದಕ ಭೇಟೆಯನ್ನು ಗುರುರಾಜ್ ಆರಂಭಿಸಿದ್ದರು. 56 ಕೆ.ಜಿ ವಿಭಾಗದ ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಭಾರತಕ್ಕೆ ಬೆಳ್ಳಿ ಪದಕ ತಂದು ಕೊಟ್ಟಿದ್ದರು. ಈ ಮೂಲಕ ದಿನ ಬೆಳಗಾಗೋದ್ರೊಳಗೆ ಕರ್ನಾಟಕದ ಈ ಕ್ರೀಡಾಪಟು, ಭಾರತದಾದ್ಯಂತ ಮನೆ ಮಾತಾದ್ರು. ಅಷ್ಟೇ ಯಾಕೆ ನಮ್ಮ ಆಗಿನ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಸರ್ಕಾರ ಬಹುಮಾನವಾಗಿ 25 ಲಕ್ಷ ರೂ. ಘೋಷಿಸಿತ್ತು. ಅಲ್ಲದೇ ಗುರುರಾಜ್ ಗೆ ಕೆಲಸ ಕೊಡಿಸುವುದಾಗಿಯೂ ಭರವಸೆ ನೀಡಿತ್ತು. ಈ ಭರವಸೆ ನೀಡಿ ಸುಮಾರು ಮೂರು ತಿಂಗ್ಳಾದ್ರೂ ಇದೂವರೆಗೂ ಬಹುಮಾನವೂ ಇಲ್ಲ, ಉದ್ಯೋಗವೂ ಸಿಕ್ಕಿಲ್ಲ.

    ಗುರುರಾಜ್ ತಂದೆ ಮಹಾಬಲ ಪೂಜಾರಿ ಇಂದಿಗೂ ಆಟೋ ಓಡಿಸುತ್ತಿದ್ದಾರೆ. ಬೇರೆ ರಾಜ್ಯದಲ್ಲಿ ಬೆಳ್ಳಿ ಗೆದ್ದ ಕ್ರೀಡಾಪಟುಗಳಿಗೆ 1 ಕೋಟಿ ರೂ. ವರೆಗೆ ಬಹುಮಾನ ನೀಡಿದ್ದಾರೆ. ಅಲ್ಲಿ ಬಹುಮಾನ ಅವರ ಕೈ ಸೇರಿದ್ದೂ ಆಗಿದೆ. ಆದರೆ ಇಲ್ಲಿ ಸರ್ಕಾರದ ಮುಂದೆ ಇಂದು ಈ ಸಾಧಕ ಕೈಚಾಚಿ ನಿಲ್ಲುವ ಸ್ಥಿತಿ ಬಂದಿದೆ.

    ಒಟ್ಟಿನಲ್ಲಿ ಕಠಿಣ ಅಭ್ಯಾಸ ನಡೆಸಿ 2020ರಲ್ಲಿ ನಡೆಯುವ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸುವ ಕನಸು ಈ ಕ್ರೀಡಾಪಟುವಿನದ್ದು. ಆದರೆ ಸರ್ಕಾರದ ಪ್ರೋತ್ಸಾಹ ನೋಡಿದ್ರೆ ನಮ್ಮ ಸರ್ಕಾರಕ್ಕಿರುವ ಹಂಬಲವೇನೆಂದು ತಿಳಿದು ಬರುತ್ತಿದೆ.