Tag: ಗುರುರಾಜ್

  • ಮತ್ತೊಂದು ಹೊಸ ಚಿತ್ರ ಒಪ್ಪಿಕೊಂಡ ಕ್ರೇಜಿಸ್ಟಾರ್ ರವಿಚಂದ್ರನ್

    ಮತ್ತೊಂದು ಹೊಸ ಚಿತ್ರ ಒಪ್ಪಿಕೊಂಡ ಕ್ರೇಜಿಸ್ಟಾರ್ ರವಿಚಂದ್ರನ್

    ಜಿ9  ಕಮ್ಯೂನಿಕೇಷನ್ ಮೀಡಿಯ ಅಂಡ್  ಎಂಟರ್ ಟೈನ್ಮೆಂಟ್  ಮುಂದಿನ ಚಿತ್ರದ ಕುರಿತು ಮಾಹಿತಿ ನೀಡಿದ್ದು, ಈ ಚಿತ್ರದಲ್ಲಿ ಕ್ರೇಜಿ ಸ್ಟಾರ್ (Crazystar) ರವಿಚಂದ್ರನ್ (Ravichandran) ಅವರು ನಾಯಕರಾಗಿ ನಟಿಸುತ್ತಿದಾರೆ. ಈಗಾಗಲೇ ಆಕ್ಸಿಡೆಂಟ್, ಲಾಸ್ಟ್ ಬಸ್, ಅಮೃತ್ ಅಪಾರ್ಟ್ ಮೆಂಟ್ಸ್ ಅಂತಹ ಅಪಾರ ಮೆಚ್ಚುಗೆ ಪಡೆದ ಚಿತ್ರಗಳನ್ನು ನಿರ್ಮಿಸಿರುವ ಸಂಸ್ಥೆಯು ಲೀಗಲ್-ಥ್ರಿಲ್ಲರ್ ಶೈಲಿಯ ಗುರುರಾಜ ಕುಲಕರ್ಣಿ (Gururaj) (ನಾಡಗೌಡ) ಅವರ ನಿರ್ದೇಶನದ ಈ ಚಿತ್ರವನ್ನು ನಿರ್ಮಿಸಲು ಸಜ್ಜಾಗಿದೆ.

    ತಮ್ಮ ಚೊಚ್ಚಲ ನಿರ್ದೇಶನದ, ಕೌಟುಂಬಿಕ-ಥ್ರಿಲ್ಲರ್ ಶೈಲಿಯ ‘ಅಮೃತ್ ಅಪಾರ್ಟ್ ಮೆಂಟ್ಸ್’ ಚಿತ್ರಕ್ಕೆ ಸ್ವತಃ ತಾವೇ ಕಥೆ-ಚಿತ್ರಕಥೆಯನ್ನು ಬರೆದು ಪ್ರಶಂಸೆ ಗಳಿಸಿದ ಗುರುರಾಜ ಕ್ರೇಜಿಸ್ಟಾರ್ ರವಿಚಂದ್ರನ್ ಜೊತೆ ಚಿತ್ರ ಮಾಡಲು ಉತ್ಸುಕರಾಗಿದ್ದಾರೆ. ಅವರು ನೀಡಿದ ಕಥಾಹಂದರವನ್ನು ರವಿಚಂದ್ರನ್ ಮೆಚ್ಚಿ ಒಪ್ಪಿಗೆ ನೀಡಿದ ಹಿನ್ನಲೆಯಲ್ಲಿಯೇ ಈ ಚಿತ್ರದ ತಯಾರಿಕೆ ನಡೆದಿದೆ. ಇದನ್ನೂ ಓದಿ: ತೆರೆಗೆ ಅಪ್ಪಳಿಸಲು ಸಜ್ಜಾದ ರಕ್ಷಿತ್‌ ನಟನೆಯ `ಸಪ್ತಸಾಗರದಾಚೆ ಎಲ್ಲೋ’ ಚಿತ್ರ

    ತಮಗಿರುವ ಕೌಟುಂಬಿಕ ಪ್ರೇಕ್ಷಕ ವರ್ಗದ ಜೊತೆಗೆ, ಜಾಗತಿಕ ಮಟ್ಟದಲ್ಲಿನ ಹಲವಾರು ಭಾಷೆಗಳ, ವಿವಿಧ ಬಗೆಯ ಕಥೆಗಳನ್ನು ನೋಡಿ ಮೆಚ್ಚುಗೆ ವ್ಯಕ್ತ ಪಡಿಸುತ್ತಿರುವ ಇಂದಿನ ಯುವ ಪೀಳಿಗೆಯೊಂದಿಗೂ, ಈ ಚಿತ್ರದ ಮೂಲಕ ತಾವು ಹತ್ತಿರವಾಗುವ ಅವಕಾಶವಿದೆ ಎಂಬುದು ರವಿಚಂದ್ರನ್ ಅಭಿಪ್ರಾಯ. ರವಿಚಂದ್ರನ್ ಈ ಚಿತ್ರದ ಪ್ರಮುಖ ಪಾತ್ರವನ್ನು ವಿಶಿಷ್ಟವಾಗಿ, ಒಂದು ಹೊಸ ಆಯಾಮದಲ್ಲಿ ನಟಿಸುವ ಸದಾವಕಾಶವನ್ನು ತಾವು  ಗುರುತಿಸಿರುವುದಾಗಿ ಭರವಸೆ ನೀಡಿದ್ದಾರೆ. ಕನ್ನಡ ಚಿತ್ರಗಳ ಬಗ್ಗೆ ಎಲ್ಲೆಡೆ ಬೇಡಿಕೆ ಹಾಗೂ ಆಸಕ್ತಿ ಇರುವ ಈ ಸಮಯದಲ್ಲಿ, ತಮ್ಮ ಈ ಹೊಸ ಚಿತ್ರವು ನಮ್ಮ ಚಿತ್ರರಂಗಕ್ಕೆ ಇನ್ನಷ್ಟು ಮೆರುಗನ್ನು ತರಲಿದೆ ಎಂಬ ವಿಶ್ವಾಸವನ್ನು ಕನ್ನಡದ ಶೋ ಮ್ಯಾನ್ ಎಂದೇ ಖ್ಯಾತಿ ಪಡೆದ ಕ್ರೇಜಿ ಸ್ಟಾರ್ ವ್ಯಕ್ತಪಡಿಸಿದ್ದಾರೆ.

    ಸ್ವತಃ ಗುರುರಾಜ್ ಅವರದೇ ಕಥೆ ಈ ಚಿತ್ರಕ್ಕೂ ಇದ್ದು, ಚಿತ್ರದ ತಾರಾಗಣ ಹಾಗೂ ದೊಡ್ಡ ಕ್ಯಾನ್ವಾಸನ್ನು ನಿಭಾಯಿಸಲು ಒಗ್ಗೂಡಿಸಿದ ಸಶಕ್ತ ತಾಂತ್ರಿಕ ತಂಡದಲ್ಲಿ ಸಂಗೀತ ನಿರ್ದೇಶಕರಾಗಿ ಅನೂಪ್ ಸೀಳಿನ್, ಛಾಯಾಗ್ರಾಹಕರಾಗಿ ಶಿವ ಬಿಕೆ ಕುಮಾರ್, ಸಂಕಲನಕಾರರಾಗಿ ಬಿ.ಎಸ್.ಕೆಂಪರಾಜು, ಭಾಷಣೆಕಾರರಾಗಿ ಎಂ.ಎಸ್.ರಮೇಶ್ ಸೇರ್ಪಡೆಗೊಂಡಿದ್ದಾರೆ. ಏಪ್ರಿಲ್ ತಿಂಗಳಿನಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದ್ದು, ಚಿತ್ರದ ಶೀರ್ಷಿಕೆ  ಮತ್ತಿತರ ವಿವರಗಳು ಶೀಘ್ರದಲ್ಲೇ ಪ್ರಕಟಿಸುವುದಾಗಿ ಚಿತ್ರ ಸಂಸ್ಥೆಯು ತಿಳಿಸಿದೆ.

  • ಜಗ್ಗೇಶ್ ಪುತ್ರನ ಹೊಸ ಸಿನಿಮಾಗೆ ಮುಹೂರ್ತ

    ಜಗ್ಗೇಶ್ ಪುತ್ರನ ಹೊಸ ಸಿನಿಮಾಗೆ ಮುಹೂರ್ತ

    ಹಳ ದಿನಗಳ ನಂತರ ಜಗ್ಗೇಶ್ ಪುತ್ರ ಗುರುರಾಜ್ ಜಗ್ಗೇಶ್ ನಾಯಕನಾಗಿ ತೆರೆಮೇಲೆ ಬರುತ್ತಿದ್ದಾರೆ. ಅರಸೀಕೆರೆಯ ಪುನೀತ್ ಅವರ ನಿರ್ದೇಶನದಲ್ಲಿ ಮುಡಿಬರುತ್ತಿರುವ ಆ ಚಿತ್ರದ ಹೆಸರು ಅಮರಾವತಿ ಪೋಲೀಸ್ ಸ್ಟೇಷನ್. ಕಂಠೀರವ ಸ್ಟುಡಿಯೋದಲ್ಲಿ ಈ ಚಿತ್ರದ ಮುಹೂರ್ತ ಕಾರ್ಯಕ್ರಮ ನೆರವೇರಿತು. ಪ್ರಾರಂಭದ ದೃಶ್ಯಕ್ಕೆ ನಟ ಜಗ್ಗೇಶ್ ಅವರು ಕ್ಲಾಪ್ ಮಾಡಿ ಚಿತ್ರರಂಗಕ್ಕೆ ಶುಭ ಕೋರಿದರು.

    ಮೂಲತಃ ಓರ್ವ ರೈತರಾದ ಅಂಜನರೆಡ್ಡಿ ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಸುರೇಶ್ ಬಾಬು ಅವರ ಕ್ಯಾಮೆರಾ ವರ್ಕ್, ಕಾರ್ತೀಕ್ ಅವರ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ. ಚಿತ್ರದ ನಾಯಕಿಯಾಗಿ ರೇಖಾಶ್ರೀ ನಟಿಸುತ್ತಿದ್ದಾರೆ. ಪ್ರಾರಂಭ ಖ್ಯಾತಿಯ ಮನು ಕಲ್ಯಾಡಿ ಈ ಚಿತ್ರದ ಕ್ರಿಯೇಟಿವ್ ಡೈರೆಕ್ಟರ್ ಆಗಿದ್ದಾರೆ. ಇದೊಂದು ಸಸ್ಪೆನ್ಸ್, ಥ್ರಿಲ್ಲರ್ ಚಿತ್ರವಾಗಿದ್ದು, ಪೋಲೀಸ್ ಸ್ಟೇಷನ್ ಸುತ್ತಮುತ್ತ ನಡೆಯುವ ಘಟನೆಗಳು ಚಿತ್ರದ ಪ್ರಮುಖ ಆಂಶಗಳಾಗಿವೆ. ಇದನ್ನೂ ಓದಿ: ಅನುಷ್ಕಾ ಶೆಟ್ಟಿ ಅಭಿಮಾನಿಗಳಿಗೆ ಸಿಹಿ ಸುದ್ದಿ

    ನಾಯಕ ಗುರುರಾಜ್ ಮಾತನಾಡುತ್ತ, ಪುನೀತ್ ಕಳೆದ ೩ ವರ್ಷಗಳಿಂದ ಈ ಕಥೆ ರೆಡಿ ಮಾಡಿಕೊಂಡಿದ್ದಾರೆ. ಒಂದು ಇಂಟರೆಸ್ಟಿಂಗ್ ಸಬ್ಜೆಕ್ಟ್ ಇಟ್ಟುಕೊಂಡು ಈ ಚಿತ್ರ ಮಾಡುತ್ತಿದ್ದಾರೆ. ಈಗ ಟೆಸ್ಟ್ ಮ್ಯಾಚ್ ಥರ ಸಿನಿಮಾ ಮಾಡಿದರೆ ಯಾರೂ ನೋಡುವುದಿಲ್ಲ. ಈ   ಕಥೆ ಕೇಳಿದ ತಕ್ಷಣ ಮಾಡಬೇಕು ಎನಿಸಿತು ಎಂದು ಹೇಳಿದರು. ನಿರ್ದೇಶಕ ಪುನೀತ್ೇ ಮಾತನಾಡುತ್ತ, ರೈತರು, ಪ್ರೆಸ್ ಇಟ್ಟುಕೊಂಡು ಈಗಿನ ಕಾಲದಲ್ಲಿ ಏನೇನು ನಡೆಯುತ್ತಿದೆಯೋ ಅದನ್ನೇ ಈ ಚಿತ್ರದ ಮೂಲಕ ಹೇಳಹೊರಟದ್ದನೆ.ಮೈಸೂರು, ಬೆಂಗಳೂರು, ಮೈಸೂರು, ಸಕಲೇಶಪುರ, ಮಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸುವ ಪ್ಲಾನಿದೆ ಎಂದು ಜೇಳಿದರು. ನಿರ್ಮಾಪಕ ಅಂಜನ ರೆಡ್ಡಿ ಮಾತನಾಡಿ, ನಾನು ನೂಲತಃ ರೈತ. ಪುನೀತ್ ಈ ಕಥೆ ತಂದಾಗ ನಾವು ರೈತರು, ಇದೆಲ್ಲ ನಮಗೆ ಬೇಡಪ್ಪ, ಅಂದೆ. ರೈತರು, ರಾಜಕೀಯದವರು, ಪೋಲೀಸರ ಬಗ್ಗೆಯೂ ಈ ಚಿತ್ರದಲ್ಲಿದೆ. ನಂತರ ಕಥೆ ಕೇಳಿದಮೇಲೆ ಮಾಡಬೇಕೆನಿಸಿತು. ಜನರಿಗೆ ಒಂದು ನೀತಿಪಾಠ ಹೇಳಬೇಕೆಂದು ಈ ಸಿನಿಮಾ ಮಾಡಿದ್ದೇವೆ ಎಂದು ಹೇಳಿದರು.ನಾಯಕಿ ರೇಖಾಶ್ರೀ ಅವರಿಗಿದು ನಾಲ್ಕನೇ ಚಿತ್ರ. ಹಿರಿಯ  ನಟಿ ಸುಧಾರಾಣಿ, ತಾರಾ, ನೀನಾಸಂ ಅಶ್ವಥ್, ಸಾಧುಕೋಕಿಲ ಮುಂತಾದವರು  ಈ ಚಿತ್ರದ ಉಳಿದ  ತಾರಾಬಳಗದಲ್ಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಅಪ್ಪನ ಬೆಲೆ ಅಪ್ಪನಾದಾಗ ಅರಿವಾಗುತ್ತದೆ: ಜಗ್ಗೇಶ್

    ಅಪ್ಪನ ಬೆಲೆ ಅಪ್ಪನಾದಾಗ ಅರಿವಾಗುತ್ತದೆ: ಜಗ್ಗೇಶ್

    ಬೆಂಗಳೂರು: ಇಂದು ಪುತ್ರ ಗುರುರಾಜ್ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ತಂದೆ ಜಗ್ಗೇಶ್ ಮತ್ತು ತಾಯಿ ಪರಿಮಳ ಅವರು ಶುಭಾಶಯವನ್ನು ತಿಳಿಸಿದ್ದಾರೆ.

    ಪರಿಮಳ ಜಗ್ಗೇಶ್ ಮತ್ತು ಜಗ್ಗೇಶ್ ಇಬ್ಬರು ಟ್ವೀಟ್ ಮಾಡುವ ಮೂಲಕ ತಮ್ಮ ಮಗನಿಗೆ ಬರ್ತ್ ಡೇ ಶುಭಾಶಯವನ್ನು ಕೋರಿದ್ದಾರೆ. ಮೊದಲಿಗೆ ಪರಿಮಳ ಅವರು, “ಇಂದು ನನ್ನ ಮಗ ಗುರು ಹುಟ್ಟಹಬ್ಬವಾಗಿದೆ. ಕಾಲ ಎಷ್ಟು ಬೇಗ ಉರುಳುತ್ತಿದೆ ಎಂಬುದೆ ತಿಳಿಯುವುದಿಲ್ಲ. ಅಂದು ನಾನು ನನ್ನ ಮಗನಿಗೆ ಮಾತನಾಡುವುದು ಮತ್ತು ನಡೆಯುವುದನ್ನು ಹೇಳಿಕೊಟ್ಟಿದ್ದೆ. ಆದರೆ ಇಂದು ಅವನು ನನಗೆ ಜೀವನದ ಮಾರ್ಗದರ್ಶನ ನೀಡುತ್ತಾನೆ. ನಾನು ಇಂತಹ ಮಗನನ್ನು ಪಡೆದಿದ್ದಕ್ಕೆ ಹೆಮ್ಮೆ ಪಡುತ್ತೇನೆ” ಎಂದು ಟ್ವೀಟ್ ಮಾಡಿದ್ದಾರೆ.

    ಪತ್ನಿಯ ಟ್ವೀಟ್‍ ಗೆ ನಟ ಜಗ್ಗೇಶ್, “ಮಗ ಗುರುರಾಜ ಅಮ್ಮನ ಮೇಷ್ಟ್ರು ಮತ್ತು ನೆಚ್ಚಿನ ಪುತ್ರನಾಗಿದ್ದಾನೆ. ಇಂದು ಅವನು ಹುಟ್ಟಿದ ದಿನವಾಗಿದೆ. ಅಂದು 1987ರಲ್ಲಿ ರಸ್ತೆ ಬದಿ ನಿಂತು ಅವನ ಹುಟ್ಟು ಸಂಭ್ರಮಿಸಿದೆ. ಆಗ ಅಮ್ಮ ಮತ್ತು ಮಗನನ್ನ ಸಾಕಿ ನಾನು ಹೇಗೆ ದಡಸೇರೋದು ಎಂದು ಕೊರಗುತಿದ್ದೆ. ಆದರೆ ರಾಯರ ಪ್ರಸಾದ ನನಗೆ ಅವನು, ಆತ ಬೆಳೆದಂತೆ ನಾನು ಬೆಳೆದೆ. ಒಳ್ಳೆಸಂಸ್ಕಾರ ಕಲಿಸಿದ ತಂದೆಯಾಗಿ ಹೆಮ್ಮೆಯಿದೆ. ಹುಟ್ಟುಹಬ್ಬದ ಶುಭಾಶಯಗಳು ದೇವರು ಒಳ್ಳೆಯದು ಮಾಡಲಿ” ಎಂದು ರೀಟ್ವೀಟ್ ಮಾಡಿದ್ದಾರೆ.

    ಪರಿಮಳ ಅವರು ಮೊತ್ತೊಂದು ಟ್ವೀಟ್ ಮಾಡಿದ್ದು, “ಗುರು ಹುಟ್ಟಿದಾಗ ನಮಗೆ ಕುಟುಂಬದ ಯಾರೋಬ್ಬರು ಸಹಾಯ ಮಾಡಲಿಲ್ಲ. ಜಗ್ಗೇಶ್ ಒಬ್ಬರೆ ಮಗು ಮತ್ತು ನನ್ನ ಬಾಣಂತನವನ್ನು ಕಾಳಜಿಯಿಂದ ಮಾಡಿದ್ದರು. ಅಂದಿನ ಕಾಲದಲ್ಲಿ ಯಾವುದೇ ಡೈಪರ್ ಕೂಡ ಇರಲಿಲ್ಲ. ಮಣ್ಣಾದ ಬಟ್ಟೆಯನ್ನು ಅವರೇ ತೊಳೆಯುತ್ತಿದ್ದರು. ಜೊತೆಗೆ ಮೂರು ವರ್ಷದ ಮಗುವಿಗೆ ಸ್ನಾನ ಕೂಡ ಮಾಡಿಸಿದ್ದಾರೆ. ನಿಜಕ್ಕೂ ಹೆಮ್ಮೆಯಾಗುತ್ತದೆ” ಎಂದು ಬರೆದು ಪತಿಗೆ ಟ್ಯಾಗ್ ಮಾಡಿದ್ದಾರೆ.

    ಇದಕ್ಕೆ ಜಗ್ಗೇಶ್, “ಅಪ್ಪನ ಬೆಲೆ ಅಪ್ಪನಾದಾಗ ಅರಿವಾಗುತ್ತದೆ. ಹಾರಾಡಿ ಹುಡುಕಿ ತಡಕಿ ಕಾಳುತಂದು, ಕಾದ ಮರಿಹಕ್ಕಿಗೆ ತುತ್ತುಣ್ಣಿಸುವ ಪಕ್ಷಿಗೆ ಆ ಕಾಯಕ ಕಲಿಸಿದವರು ಯಾರು? ತಂದೆಯ ಕಾರ್ಯ ತಿನ್ನಿಸುವುದು ಒಂದೇ ಅಲ್ಲಾ, ತಾನು ಮುಂದೆ ತನ್ನವರಿಗೆ ತಿನ್ನಿಸಿ, ಕಲಿಸಿ ತನ್ನ ಕುಲದ ಗೌರವ ನಾಲ್ಮಡಿಗೊಳಿಸುವ ಸಾಧಕನ ಮಾಡುವುದೆ ಶ್ರೇಷ್ಟ ತಂದೆ ಪರಂಪರೆಯಾಗಿದೆ” ಎಂದು ರೀಟ್ವೀಟ್ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಾಮನ್‍ವೆಲ್ತ್ ಗೇಮ್ಸ್ ನಲ್ಲಿ ಭಾರತಕ್ಕೆ ಮತ್ತೊಂದು ಚಿನ್ನ- ವೇಟ್ ಲಿಫ್ಟಿಂಗ್‍ನಲ್ಲಿ ಸಂಜಿತಾ ಚಾನುಗೆ ಗೋಲ್ಡ್

    ಕಾಮನ್‍ವೆಲ್ತ್ ಗೇಮ್ಸ್ ನಲ್ಲಿ ಭಾರತಕ್ಕೆ ಮತ್ತೊಂದು ಚಿನ್ನ- ವೇಟ್ ಲಿಫ್ಟಿಂಗ್‍ನಲ್ಲಿ ಸಂಜಿತಾ ಚಾನುಗೆ ಗೋಲ್ಡ್

    ಗೋಲ್ಡ್ ಕೋಸ್ಟ್: ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಕಾಮನ್ ವೇಲ್ತ್ ಗೇಮ್ಸ್ ನಲ್ಲಿ ಭಾರತದ ಚಿನ್ನದ ಬೇಟೆ ಮುಂದುವರಿದಿದೆ. ಭಾರತದ ಸಂಜಿತಾ ಚಾನು ವೇಟ್‍ಲಿಫ್ಟಿಂಗ್‍ನಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ.

    53 ಕೆ.ಜಿ. ವಿಭಾಗದ ವೇಟ್ ಲಿಫ್ಟಿಂಗ್ ನಲ್ಲಿ ಸಂಜಿತಾ ಚಾನು ಮೊದಲ ಸ್ಥಾನ ಪಡೆದಿದ್ದಾರೆ. ಈ ಮೂಲಕ ಭಾರತಕ್ಕೆ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಮೂರನೇ ಪದಕ ಒಲಿದು ಬಂದಾಂತಾಗಿದೆ. ಇದನ್ನೂ ಓದಿ: ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಬೆಳ್ಳಿ ಗೆದ್ದ ಗುರುರಾಜ್‍ಗೆ ಸರ್ಕಾರಿ ಕೆಲಸ, 25 ಲಕ್ಷ ನಗದು ಬಹುಮಾನ- ಪ್ರಮೋದ್ ಮಧ್ವರಾಜ್

    ಸಂಜಿತಾ ಚಾನು ಒಟ್ಟು 192 ಕೆಜಿ ತೂಕ ಎತ್ತುವ ಮೂಲಕ ಅಗ್ರ ಸ್ಥಾನ ಗಳಿಸಿದ್ದಾರೆ. 182 ಕೆಜಿ ತೂಕ ಎತ್ತಿದ ಪಪುವಾ ನ್ಯೂಗಿನಿಯಾದ ಲೋಡಿಕಾ ಅವರು ಎರಡನೇ ಸ್ಥಾನ ಪಡೆದು ಬೆಳ್ಳಿ ಪದಕ ತನ್ನದಾಗಿಸಿಕೊಂಡರೆ, ನ್ಯೂಜಿಲೆಂಡ್ ನ ರಾಚೆಲ್ ಲೆಬ್ಲಾಂಕ್ ಬಾಝಿನೆಟ್ ಅವರು ಒಟ್ಟು 181 ಕೆಜಿ ತೂಕ ಎತ್ತುವ ಮೂಲಕ ಮೂರನೇ ಸ್ಥಾನ ಪಡೆದು ಕಂಚಿನ ಪದಕ ಗಳಿಸಿದ್ದಾರೆ. ಇದನ್ನೂ ಓದಿ: ವೇಟ್‍ಲಿಫ್ಟಿಂಗ್‍ನಲ್ಲಿ ಭಾರತಕ್ಕೆ ಚಿನ್ನ ಗೆದ್ದುಕೊಟ್ಟ ಮೀರಾಬಾಯಿ

    ಇದೀಗ ಚಿನ್ನದ ಪದಕ ಗಳಿಸಿರುವ ಸಂಜಿತಾ ಚಾನು ಅವರು 2014ರಲ್ಲಿ ನಡೆದ ಗ್ಲಾಸ್ಗೋ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲೂ 48 ಕೆಜಿ ವಿಭಾಗದಲ್ಲಿ ಚಿನ್ನದ ಪದಕಕ್ಕೆ ಭಾಜನರಾಗಿದ್ದರು.

    ಗುರುವಾರ 21ನೇ ಕಾಮನ್ ವೆಲ್ತ್ ಕ್ರೀಡಾಕೂಟದ ಶುಭಾರಂಭದಲ್ಲೇ ಕನ್ನಡಿಗ ಪಿ. ಗುರುರಾಜ್ ಅವರು 56 ಕೆ.ಜಿ. ವಿಭಾಗದ ವೇಯ್ಟ್ ಲಿಫ್ಟಿಂಗ್ ನಲ್ಲಿ ಬೆಳ್ಳಿ ಪದಕವನ್ನು ಗೆದ್ದು ಭಾರತದ ಕೀರ್ತಿ ಪತಾಕೆ ಹಾರಿಸಿದ್ದರು. ಬಳಿಕ ಮಹಿಳೆಯರ 48 ಕೆಜಿ ವಿಭಾಗದಲ್ಲಿ ಮಣಿಪುರದ ವೇಟ್ ಲಿಫ್ಟರ್ ಮೀರಾಬಾಯಿ ಚಾನು ದಾಖಲೆಯ 196 ಕೆಜಿ ಎತ್ತಿ ಚಿನ್ನಕ್ಕೆ ಮುತ್ತಿಟ್ಟಿದ್ದರು. ಇದನ್ನೂ ಓದಿ: ಕಾಮನ್‍ವೆಲ್ತ್ ಗೇಮ್ಸ್ ನಲ್ಲಿ ಕನ್ನಡಿಗನ ಕೇಕೆ- ಬೆಳ್ಳಿ ಪದಕ ಗೆದ್ದ ಉಡುಪಿಯ ಗುರುರಾಜ್

  • ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಬೆಳ್ಳಿ ಗೆದ್ದ ಗುರುರಾಜ್‍ಗೆ ಸರ್ಕಾರಿ ಕೆಲಸ, 25 ಲಕ್ಷ ನಗದು ಬಹುಮಾನ- ಪ್ರಮೋದ್ ಮಧ್ವರಾಜ್

    ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಬೆಳ್ಳಿ ಗೆದ್ದ ಗುರುರಾಜ್‍ಗೆ ಸರ್ಕಾರಿ ಕೆಲಸ, 25 ಲಕ್ಷ ನಗದು ಬಹುಮಾನ- ಪ್ರಮೋದ್ ಮಧ್ವರಾಜ್

    ಉಡುಪಿ: ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ನಲ್ಲಿ ನಡೆಯುತ್ತಿರುವ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ವಿಜಯ ಯಾತ್ರೆ ಆರಂಭವಾಗಿದೆ. ಭಾರತದ ಮೊದಲ ಪದಕ ಕರ್ನಾಟಕದ ಉಡುಪಿಗೆ ಬಂದಿದೆ. ವೇಟ್ ಲಿಫ್ಟಿಂಗ್ ನಲ್ಲಿ ಕುಂದಾಪುರದ ಗುರುರಾಜ್ ಪೂಜಾರಿ ಬೆಳ್ಳಿಗೆ ಮುತ್ತಿಕ್ಕಿದ್ದಾರೆ.

    ಈ ಕುರಿತು ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಮಾಧ್ಯಮಕ್ಕೆ ಪ್ರತಿಕ್ರಿಯಿಸಿ ಮೊದಲು ಗುರುರಾಜ್ ಅವರಿಗೆ ಅಭಿನಂದನೆ ಸಲ್ಲಿಸಿದ್ರು. ಬಳಿಕ ಇದಕ್ಕಿಂತ ಸಂತೋಷದ ಕ್ಷಣ ನನಗೆ ಬೇರೆ ಇಲ್ಲ. ತಿಂಗಳ ಹಿಂದಷ್ಟೇ ಏಕಲವ್ಯ ಪ್ರಶಸ್ತಿ ನೀಡಲಾಗಿತ್ತು. ಕಾಮನ್ ವೆಲ್ತ್ ಪ್ರಶಸ್ತಿ ಗೆದ್ದ ಗುರುರಾಜ್ ಗೆ ಸರ್ಕಾರದ ಗ್ರೂಪ್ ಬಿ ಉದ್ಯೋಗ ಸಿಗುತ್ತದೆ. ಜೊತೆಗೆ 25 ಲಕ್ಷ ರೂಪಾಯಿ ಬಹುಮಾನ ಮೊತ್ತ ಸಿಗುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕಾಮನ್‍ವೆಲ್ತ್ ಗೇಮ್ಸ್ ನಲ್ಲಿ ಕನ್ನಡಿಗನ ಕೇಕೆ- ಬೆಳ್ಳಿ ಪದಕ ಗೆದ್ದ ಉಡುಪಿಯ ಗುರುರಾಜ್

    ರಾಜ್ಯದಲ್ಲಿ ಕ್ರೀಡಾನೀತಿ ಈಗಾಗಲೇ ಘೋಷಣೆ ಮಾಡಲಾಗಿದೆ. ಸರ್ಕಾರದ ನೇಮಕಾತಿಯಲ್ಲಿ ಮೀಸಲಾತಿ ಇದೆ. 48 ಕೋಟಿ ರೂಪಾಯಿ ಈಗಾಗಲೇ ಮೀಸಲಿಟ್ಟು ವಿತರಿಸಲಾಗಿದೆ. ಈಗ ಕಾನೂನಿನ ಅನ್ವಯ ಮೊತ್ತ ಮತ್ತು ಸರ್ಕಾರಿ ಕೆಲಸ ಸಿಗುತ್ತದೆ ಅಂದ್ರು. ಇದನ್ನೂ ಓದಿ: ವೇಟ್‍ಲಿಫ್ಟಿಂಗ್‍ನಲ್ಲಿ ಭಾರತಕ್ಕೆ ಚಿನ್ನ ಗೆದ್ದುಕೊಟ್ಟ ಮೀರಾಬಾಯಿ

    ಖೇಲೋ ಇಂಡಿಯಾದಲ್ಲಿ ಕರ್ನಾಟಕ ನಾಲ್ಕನೇ ಸ್ಥಾನದಲ್ಲಿದೆ. ಕ್ರೀಡಾಪಟುಗಳ ಬೆಂಬಲಕ್ಕೆ ಸರ್ಕಾರ ಸಿದ್ಧವಿದೆ. ಒಲಿಂಪಿಕ್ಸ್ ನಲ್ಲಿ ನಮ್ಮ ಕ್ರೀಡಾಪಟುಗಳು ಸಾಧನೆ ಮಾಡಬೇಕಿದೆ, ಇದಕ್ಕೆ ಒಂದು ದಿನದ ಪರಿಶ್ರಮ ಸಾಲದು. ನಿರಂತರ ಶ್ರಮಕ್ಕೆ ಅಡಿಗಲ್ಲು ಹಾಕಲಾಗಿದೆ. ಬಡವರ- ಮಧ್ಯಮ ವರ್ಗದ ಕುಟುಂಬದಿಂದ ಬಂದ ಗುರುರಾಜ್ ಪೂಜಾರಿಯಂತವರಿಂದ ಮಾತ್ರ ಸಾಧನೆ ಮಾಡಲು ಸಾಧ್ಯ ಎಂದು ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ನುಡಿದ್ರು. ಇದನ್ನೂ ಓದಿ: ದಾಖಲೆ ಮುರಿಯಲೇಬೇಕಿತ್ತು, ಮುಂದಿನ ಗುರಿ ಏಷ್ಯನ್ ಗೇಮ್ಸ್: ಮೀರಾ ಬಾಯಿ

  • ಕಾಮನ್‍ವೆಲ್ತ್ ಗೇಮ್ಸ್ ನಲ್ಲಿ ಕನ್ನಡಿಗನ ಕೇಕೆ- ಬೆಳ್ಳಿ ಪದಕ ಗೆದ್ದ ಉಡುಪಿಯ ಗುರುರಾಜ್

    ಕಾಮನ್‍ವೆಲ್ತ್ ಗೇಮ್ಸ್ ನಲ್ಲಿ ಕನ್ನಡಿಗನ ಕೇಕೆ- ಬೆಳ್ಳಿ ಪದಕ ಗೆದ್ದ ಉಡುಪಿಯ ಗುರುರಾಜ್

    ಗೋಲ್ಡ್ ಕೋಸ್ಟ್ : ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ನಲ್ಲಿ ಆರಂಭವಾದ 21 ನೇ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಮೊದಲ ಪದಕ ಲಭಿಸಿದೆ. ಕನ್ನಡಿಗ ಪಿ. ಗುರುರಾಜ್ ಅವರು 56 ಕೆ.ಜಿ. ವಿಭಾಗದ ವೇಟ್ ಲಿಫ್ಟಿಂಗ್ ನಲ್ಲಿ ಬೆಳ್ಳಿ ಪದಕವನ್ನು ಜಯಿಸಿದ್ದಾರೆ.

    ಪುರುಷರ 56 ಕೆಜಿ ವಿಭಾಗದಲ್ಲಿ ಒಟ್ಟು 249 ಕೆಜಿ ಭಾರ ಎತ್ತಿದ ಅವರು, ಸ್ಕ್ಯಾಚ್ ವಿಭಾಗದಲ್ಲಿ 111 ಕೆಜಿ, ಕ್ಲೀನ್ ಎಂಡ್ ಜರ್ಕ್ ವಿಭಾಗದಲ್ಲಿ 138 ಕೆಜಿ ಎತ್ತುವುದರ ಮೂಲಕ ಪದಕ ಗೆದ್ದಿದ್ದಾರೆ. ಗುರುರಾಜ್ ಮೊದಲ ಪದಕವನ್ನು ಜಯಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

    ಭಾರತೀಯ ವಾಯುಪಡೆ ಉದ್ಯೋಗಿಯಾಗಿರುವ ಗುರುರಾಜ್, ಟ್ರಕ್ ಚಾಲಕರ ಪುತ್ರರಾಗಿದ್ದಾರೆ. ಇದೀಗ ಅವರ ಸಾಧನೆಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ಚಂಢೀಗಡ್ ಭಾರತೀಯ ವಾಯುಸೇನೆಗೆ ಆಯ್ಕೆಯಾಗಿ ತರಬೇತಿ ಪಡೆಯುತ್ತಿರುವ ಗುರುರಾಜ್ ಪ್ರತಿದಿನ 4 ಘಂಟೆ ಅಭ್ಯಾಸಕ್ಕೆ ತೆರಳುತ್ತಿದ್ದರು. ಚಿನ್ನ ಗೆದ್ದ ಖುಷಿಯಲ್ಲಿರುವ ಗುರುರಾಜ್ ತನ್ನ ಸಾಧನೆಗೆ ತಂದೆ-ತಾಯಿ, ಕ್ರೀಡೆಯನ್ನು ಗುರುತಿಸಿ ಪ್ರೋತ್ಸಾಹಿಸಿದ ಶಿಕ್ಷಕರು ಹಾಗೂ ಕೋಚ್ ರಾಜೇಂದ್ರ ಪ್ರಸಾದ್ ಅವರ ಮಾರ್ಗದರ್ಶನವೇ ಕಾರಣ ಎಂದು ಹೇಳುತ್ತಿದ್ದಾರೆ.

    ಈ ಹಿಂದೆ 2017ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಚಾಂಪಿಯನ್ ಶಿಪ್‍ನಲ್ಲಿ ಕಂಚು ಪದಕ ಹಾಗೂ 2016 ರಲ್ಲಿ ದಕ್ಷಿಣ ಏಷ್ಯಾ ಗೇಮ್ಸ್ ನಲ್ಲಿ ಗುರುರಾಜ್ ಚಿನ್ನದ ಪದಕ ಗೆದ್ದಿದ್ದರು. 2016ನೇ ಸಾಲಿನ ಏಕಲವ್ಯ ಪ್ರಶಸ್ತಿಯನ್ನು ಉಡುಪಿಯಲ್ಲಿ ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಘೋಷಣೆ ಮಾಡಿದ್ದರು.

    ಪಿವಿ ಸಿಂಧು ಚಾಲನೆ: ಬುಧವಾರ ಭಾರತದ ಪರ ಪಿವಿ ಸಿಂಧು ತ್ರಿವರ್ಣ ಧ್ವಜ ಹಿಡಿದು ಮುನ್ನಡೆಸುವ ಮೂಲಕ ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ನಲ್ಲಿ 21ನೇ ಕಾಮನ್ ವೆಲ್ತ್ ಕ್ರೀಡಾಕೂಟಕ್ಕೆ ಅದ್ಧೂರಿ ಚಾಲನೆ ನೀಡಿದ್ದರು. ಈ ಬಾರಿ ಕ್ರೀಡಾಕೂಟದಲ್ಲಿ 71 ರಾಷ್ಟ್ರಗಳ 4,500 ಅಥ್ಲೀಟ್ಸ್ ಭಾಗಿಯಾಗುತ್ತಿದ್ದು, 275 ಗೋಲ್ಡ್ ಮೆಡೆಲ್ ಪಡೆಯಲು ಸ್ಪರ್ಧೆ ನಡೆಸಿದ್ದಾರೆ. ಭಾರತದಿಂದ ಒಟ್ಟು 221 ಕ್ರೀಡಾಪಟುಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ಇದು 12 ದಿನಗಳ ಕಾಲ ಕ್ರೀಡಾಕೂಟ ನಡೆಯಲಿದೆ.

    ಈ ಹಿಂದೆ ಗ್ಲಾಸ್ಗೊದಲ್ಲಿ ನಡೆದಿದ್ದ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ 15 ಚಿನ್ನ, 30 ಬೆಳ್ಳಿ ಹಾಗೂ 19 ಕಂಚಿನ ಪದಕದೊಂದಿಗೆ ಒಟ್ಟು 64 ಪದಕಗಳನ್ನು ಭಾರತ ತಂಡ ಗೆದ್ದುಕೊಂಡಿತ್ತು. ಈ ಬಾರಿ ಪದಕಗಳ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುವ ಭರವಸೆಯಲ್ಲಿದೆ.

     

  • ನಟ ಜಗ್ಗೇಶ್ ಮಗ ಗುರುರಾಜ್‍ಗೆ ಚಾಕು ಇರಿತ

    ನಟ ಜಗ್ಗೇಶ್ ಮಗ ಗುರುರಾಜ್‍ಗೆ ಚಾಕು ಇರಿತ

    ಬೆಂಗಳೂರು: ನಟ ಜಗ್ಗೇಶ್ ಅವರ ಮಗ ಗುರುರಾಜ್ ಅವರಿಗೆ ದುಷ್ಕರ್ಮಿಗಳು ಚಾಕು ಇರಿದು ಪರಾರಿಯಾಗಿದ್ದಾರೆ.

    ಭಾನುವಾರ ಸಂಜೆ ಗುರುರಾಜ್‍ಗೆ ಚಾಕು ಇರಿದಿದ್ದು, ಸದ್ಯ ಗುರು ಅವರನ್ನು ಆರ್.ಟಿ.ನಗರದ ಪೂರ್ಣಿಮಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಗುರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

    ಭಾನುವಾರ ಸಂಜೆ ತಮ್ಮ ಮಗುವನ್ನು ಶಾಲೆಯಿಂದ ಕರೆದುಕೊಂಡು ಬರುವ ವೇಳೆ ಈ ಘಟನೆ ನಡೆದಿದೆ. ಜಗ್ಗೇಶ್ ಹಾಗೂ ಗುರು ಪತ್ನಿ ಆಸ್ಪತ್ರೆಯಲ್ಲಿದ್ದಾರೆ. ದಾರಿಯಲ್ಲಿ ಹೋಗುವ ಕಿಡಿಗೇಡಿಗಳು ಹಣಕ್ಕಾಗಿ ಗುರು ಮೇಲೆ ದಾಳಿ ನಡೆಸಿ ತೊಡೆಯ ಭಾಗಕ್ಕೆ ಚಾಕುವಿನಿಂದ ಇರಿದಿದ್ದಾರೆ ಎಂದು ಹೇಳಲಾಗುತ್ತಿದೆ.

    ಈ ಸಂಬಂಧ ಈಗಾಗಲೇ ಆರ್.ಟಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ದುಷ್ಕರ್ಮಿಗಳ ಪತ್ತೆಗಾಗಿ ಜಾಲ ಬೀಸಿದ್ದಾರೆ.

    ಶುಕ್ರವಾರ ತೆರೆಕಂಡ ಶಿವರಾಜ್‍ಕುಮಾರ್ ಅಭಿನಯದ ಮಾಸ್ ಲೀಡರ್ ಚಿತ್ರದಲ್ಲಿ ಗುರುರಾಜ್ ಕಾಣಿಸಿಕೊಂಡಿದ್ದಾರೆ .

    https://twitter.com/OnlyShivanna/status/895309003529441283