Tag: ಗುರುಪತ್ವಂತ್ ಸಿಂಗ್ ಪನ್ನು

  • ಉಗ್ರ ಪನ್ನು ಹತ್ಯೆಗೆ ಸಂಚು – ಭಾರತದ ಮಾಜಿ ʻರಾʼ ಅಧಿಕಾರಿ ಮೋಸ್ಟ್‌ ವಾಂಟೆಡ್‌ ಎಂದು ಘೋಷಿಸಿದ FBI

    ಉಗ್ರ ಪನ್ನು ಹತ್ಯೆಗೆ ಸಂಚು – ಭಾರತದ ಮಾಜಿ ʻರಾʼ ಅಧಿಕಾರಿ ಮೋಸ್ಟ್‌ ವಾಂಟೆಡ್‌ ಎಂದು ಘೋಷಿಸಿದ FBI

    ವಾಷಿಂಗ್ಟನ್‌: ಪ್ರತ್ಯೇಕತಾವಾದಿ ಖಲಿಸ್ತಾನಿ ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನು (Gurpatwant Singh Pannun) ಹತ್ಯೆಗೆ ‌ಸಂಚು ರೂಪಿಸಿದ ಪ್ರಕರಣ ಸಂಬಂಧ ಭಾರತದ ನಿವೃತ್ತ ಗುಪ್ತಚರ ಅಧಿಕಾರಿಯೊಬ್ಬರನ್ನ (RAW Officer) ಮೋಸ್ಟ್‌ ವಾಂಟೆಡ್‌ ಎಂದು ಅಮೆರಿಕದ ಎಫ್‌ಬಿಐ (FBI) ಆಪಾದಿಸಿದೆ.

    ಈ ಪ್ರಕರಣದಲ್ಲಿ ಭಾರತದ ನಿವೃತ್ತ ʻರಾʼ ಅಧಿಕಾರಿ ವಿಕಾಸ್‌ ಯಾದವ್‌ನನ್ನ (39) ಮೋಸ್ಟ್‌ ವಾಂಟೆಡ್‌ (Most Wanted) ಎಂದು ಹೆಸರಿಸಿದೆ. ಅಲ್ಲದೇ ವಿಕಾಸ್‌ ಯಾದವ್‌ನ ಮೂರು ಚಿತ್ರಗಳನ್ನ ಮೋಸ್ಟ್‌ ವಾಂಟೆಡ್‌ ಎನ್ನುವ ಪೋಸ್ಟರ್‌ ಸಹ ಬಿಡುಗಡೆ ಮಾಡಿದ್ದು, ಇದೇ ತಿಂಗಳ ಅಕ್ಟೋಬರ್‌ 10 ರಂದು ಬಂಧನದ ವಾರಂಟ್‌ ಜಾರಿಗೊಳಿಸಿದೆ.

    ಅಮೆರಿಕ (USA) ಹಾಗೂ ಕೆನಡಾದ ದ್ವಿಪೌರತ್ವ ಹೊಂದಿರುವ ಗುರುಪತ್ವಂತ್ ಸಿಂಗ್ ಪನ್ನು ಹತ್ಯೆ ಮಾಡಲು ಈ ನಿವೃತ್ತ ಅಧಿಕಾರಿ ಹಣ ನೀಡಿ ಹಂತಕರನ್ನು ನಿಯೋಜಿಸಿದ್ದರು ಎಂದು ಎಫ್‌ಬಿಐ ಆಪಾದಿಸಿದೆ. ಜೊತೆಗೆ ವಿಕಾಸ್‌ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನೂ ದಾಖಲು ಮಾಡಿದೆ. ಈ ಕುರಿತು ಯುಎಸ್ ಡಿಪಾರ್ಟ್ಮೆಂಟ್ ಆಫ್ ಜಸ್ಟೀಸ್ (DOJ) ಸಲ್ಲಿಸಿದ ದೋಷಾರೋಪ ಪಟ್ಟಿಯಲ್ಲಿ ಕ್ರಿಮಿನಲ್ ಆರೋಪಗಳನ್ನು ಪ್ರಕಟಿಸಿದೆ.

    ಈ ಬಗ್ಗೆ ಮಾಹಿತಿ ನೀಡಿರುವ ಎಫ್‌ಬಿಐ ನಿರ್ದೇಶಕ ಕ್ರಿಸ್ಟೋಫರ್ ವ್ರೇ (Christopher Wray) ಅವರು, ಅಮೆರಿಕ ನೆಲದಲ್ಲಿ ಈ ರೀತಿಯ ಕೃತ್ಯ ಎಸಗುವ ಪ್ರಯತ್ನವನ್ನ ಎಫ್‌ಬಿಐ ಸಹಿಸೋದಿಲ್ಲ ಎಂದಿದ್ದಾರೆ. ನಮ್ಮ ಪ್ರಜೆಗಳಿಗೆ ಸಂವಿಧಾನ ನೀಡಿರುವ ಹಕ್ಕುಗಳನ್ನು ರಕ್ಷಿಸಲು ನಾವು ಸರ್ವ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದ್ದಾರೆ.

    ಅಲ್ಲದೇ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಸಹವರ್ತಿ ನಿಖಿಲ್ ಗುಪ್ತಾ ಎಂಬಾತನನ್ನ ಜೆಕ್ ರಿಪಬ್ಲಿಕ್‌ನಲ್ಲಿ ಬಂಧಿಸಲಾಗಿದೆ ಎಂದು ಸಹ ಕ್ರಿಸ್ಟೋಫರ್‌ ತಿಳಿಸಿದ್ದಾರೆ. ಇದನ್ನೂ ಓದಿ: ಇಸ್ರೇಲ್‌, ಜಗತ್ತಿಗೆ ಇದು ಒಳ್ಳೆಯ ದಿನ: ಹಮಾಸ್‌ ಮುಖ್ಯಸ್ಥನ ಹತ್ಯೆಗೆ ಅಮೆರಿಕ ಸಂತಸ

    ಅಮೆರಿಕ ಎಫ್‌ಬಿಐ ಆಪಾದನೆಗೆ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್‌ ಜೈಸ್ವಾಲ್‌ ಪ್ರತಿಕ್ರಿಯೆ ನೀಡಿದ್ದು, ವಿಕಾಸ್‌ ಯಾದವ್‌ ಎಂಬವರು ಭಾರತ ಸರ್ಕಾರದ ಉದ್ಯೋಗಿಯಲ್ಲ ಎಂದು ಖಚಿತಪಡಿಸಿದ್ದಾರೆ. ಇದನ್ನೂ ಓದಿ: ಹಮಾಸ್ ಮುಖ್ಯಸ್ಥನ ಕೊನೆ ಕ್ಷಣಗಳ ಡ್ರೋನ್ ದೃಶ್ಯ ಬಿಡುಗಡೆ ಮಾಡಿದ ಇಸ್ರೇಲ್

    ಏನಿದು ಪ್ರಕರಣ?
    ಅಮೆರಿಕದ ನ್ಯೂಯಾರ್ಕ್‌ ನಗರದಲ್ಲಿ ನೆಲೆಸಿರುವ ಗುರುಪತ್ವಂತ್ ಸಿಂಗ್ ಪನ್ನು ಹತ್ಯೆಗೆ ಕಳೆದ ವರ್ಷ ಯತ್ನ ನಡೆದಿತ್ತು. ಈ ಪ್ರಕರಣದಲ್ಲಿ ಭಾರತ ಸರ್ಕಾರದ ನಿವೃತ್ತ ರಾ ಉದ್ಯೋಗಿಯನ್ನು ವಿಕಾಸ್‌ನನ್ನ ಸಿಸಿ-1 (ಸಹ ಸಂಚುಕೋರ) ಆರೋಪಿ ಎಂದು ಹೆಸರಿಸಲಾಗಿದೆ.

    18 ಪುಟಗಳ ದೋಷಾರೋಪ ಪಟ್ಟಿಯಲ್ಲಿ ಹಲವು ಸಾಕ್ಷ್ಯಗಳನ್ನು ಉಲ್ಲೇಖಿಸಲಾಗಿದೆ. ನ್ಯೂಯಾರ್ಕ್‌ನಲ್ಲಿ ಕಾರಿನಲ್ಲಿ ಇಬ್ಬರು ವ್ಯಕ್ತಿಗಳು ಡಾಲರ್‌ಗಳನ್ನು ವಿನಿಮಯ ಮಾಡಿಕೊಳ್ಳುತ್ತಿರುವ ಚಿತ್ರವನ್ನೂ ಸಹ ನಮೂದಿಸಲಾಗಿದೆ. ಇದು ಆರೋಪಿ ನಿಖಿಲ್ ಗುಪ್ತಾ ಮತ್ತು ವಿಕಾಸ್ ಯಾದವ್ ಅವರ ಪರವಾಗಿ ಕೊಲೆಗಾರನಿಗೆ ಹತ್ಯೆ ಮಾಡಲು ವ್ಯಕ್ತಿಯೊಬ್ಬರು ಪಾವತಿಸುತ್ತಿದ್ದಾರೆ ಎಂದು ಫೆಡರಲ್ ಪ್ರಾಸಿಕ್ಯೂಟರ್‌ಗಳು ಹೇಳಿದ್ದಾರೆ. ಇದನ್ನೂ ಓದಿ: ಹಮಾಸ್‌ ಈ ಕೆಲಸ ಮಾಡಿದ್ರೆ ನಾಳೆಯೇ ಯುದ್ಧ ಕೊನೆಗೊಳ್ಳುತ್ತದೆ – ಇಸ್ರೇಲ್‌ ಪ್ರಧಾನಿ ಎಚ್ಚರಿಕೆ

  • ಭಾರತವನ್ನ ಹಲವು ದೇಶಗಳಾಗಿ ವಿಭಜಿಸುವ ಹುನ್ನಾರ – ಖಲಿಸ್ತಾನಿ ಉಗ್ರನ ಕುತಂತ್ರ ಬಯಲು

    ಭಾರತವನ್ನ ಹಲವು ದೇಶಗಳಾಗಿ ವಿಭಜಿಸುವ ಹುನ್ನಾರ – ಖಲಿಸ್ತಾನಿ ಉಗ್ರನ ಕುತಂತ್ರ ಬಯಲು

    ನವದೆಹಲಿ: ಖಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್ ಪನ್ನು (Gurpatwant Singh Pannun) ಭಾರತ ದೇಶವನ್ನು ಧಾರ್ಮಿಕ ನೆಲೆಗಟ್ಟಿನಲ್ಲಿ ಹಲವು ದೇಶಗಳನ್ನಾಗಿ ವಿಭಜಿಸುವ ಗುರಿ ಹೊಂದಿದ್ದ. ಅದು ಅವನ ಅಜೆಂಡಾ ಆಗಿತ್ತು ಅನ್ನೋ ಸ್ಫೋಟಕ ಮಾಹಿತಿ ಗುಪ್ತಚರ ಇಲಾಖೆಯ ಉನ್ನತ ಮೂಲಗಳಿಂದ ತಿಳಿದುಬಂದಿದೆ.

    ಕಳೆದ ವಾರವಷ್ಟೇ ಖಲಿಸ್ತಾನಿ ಉಗ್ರ (Khalistani Terrorist) ಗುರುಪತ್ವಂತ್ ಸಿಂಗ್ ಪನ್ನುಗೆ ಸೇರಿದ ಆಸ್ತಿಗಳನ್ನ NIA ತನ್ನ ವಶಕ್ಕೆ ತೆಗೆದುಕೊಂಡಿತ್ತು. ಪಂಜಾಬ್ ರಾಜ್ಯದ ಚಂಡೀಗಢ ಹಾಗೂ ಅಮೃತಸರದಲ್ಲಿ ಇದ್ದ ಗುರುಪತ್ವಂತ್ ಸಿಂಗ್ ಪನ್ನುಗೆ ಸೇರಿದ ಮನೆಗಳನ್ನ ವಶಕ್ಕೆ ಪಡೆಯಲಾಗಿತ್ತು. ಇದನ್ನೂ ಓದಿ: ತಮಿಳುನಾಡಿನಲ್ಲಿ ಬಿಜೆಪಿಗೆ ಬಿಗ್ ಶಾಕ್- NDA ಬಂಧ ಕಡಿದುಕೊಂಡ ಅಣ್ಣಾಡಿಎಂಕೆ  

    ನಿಷೇಧಿತ ಸಿಖ್ಸ್‌ ಫಾರ್ ಜಸ್ಟೀಸ್ ಸಂಘಟನೆಯ ಮುಖ್ಯಸ್ಥನಾಗಿರುವ ಪನ್ನು, ಭಾರತ ದೇಶದ ಏಕತೆ ಹಾಗೂ ಸಮಗ್ರತೆಗೆ ಧಕ್ಕೆ ತರುವ ರೀತಿ ಹಾಗೂ ಸವಾಲೊಡ್ಡುವ ರೀತಿ ಆಡಿಯೋ ಸಂದೇಶಗಳನ್ನ ರವಾನಿಸುತ್ತಿದ್ದ. ಎಲ್ಲಕ್ಕಿಂತ ಹೆಚ್ಚಾಗಿ ಈತ ಪಂಜಾಬ್ ರಾಜ್ಯವನ್ನ ಖಲಿಸ್ತಾನ ದೇಶವನ್ನಾಗಿ ಮಾಡುವ ಉದ್ದೇಶ ಹೊಂದಿದ್ದ. ಅಷ್ಟು ಸಾಲದೇ ಕಾಶ್ಮೀರವನ್ನ ಪ್ರತ್ಯೇಕ ರಾಷ್ಟ್ರ ಆಗಬೇಕು, ಮುಸ್ಲಿಮರ ದೇಶ (Muslims Nation) ಆಗಬೇಕು ಎಂದು ಬಯಸಿದ್ದ ಅನ್ನೋ ಮಾಹಿತಿ ಕೂಡ ಗುಪ್ತಚರ ಇಲಾಖೆ ಮೂಲಗಳಿಂದ ಬೆಳಕಿಗೆ ಬಂದಿದೆ.

    ಪಂಜಾಬ್ ಸೇರಿದಂತೆ ದೇಶದ ವಿವಿಧೆಡೆ ದ್ವೇಷ, ಭೀತಿ ಹರಡುವ ಕೆಲಸ ಮಾಡುತ್ತಿರುವ ಪನ್ನು, ಭಯೋತ್ಪಾದಕ ಕೃತ್ಯಗಳ ಮೂಲಕ ತನಿಖಾ ಸಂಸ್ಥೆಗಳ ಗಮನ ಸೆಳೆದಿದ್ದ. 2019ರಿಂದಲೂ ಗುರುಪತ್ವಂತ್ ಸಿಂಗ್ ಪನ್ನು ಎನ್‌ಐಎ ವಾಂಟೆಡ್ ಲಿಸ್ಟ್‌ನಲ್ಲಿ ಇದ್ದಾನೆ. ಇದನ್ನೂ ಓದಿ: ಕರ್ನಾಟಕಕ್ಕೆ ಅನ್ಯಾಯವಾದ್ರೆ ಸಹಿಸಲ್ಲ – ʻಕರ್ನಾಟಕ ಬಂದ್‌ʼಗೆ ತಮಿಳು ಸಂಘದಿಂದ ಬೆಂಬಲ

    ಹಾದಿ ತಪ್ಪಿದ ಯುವಕರನ್ನೇ ಗುರಿಯಾಗಿ ಕಾರ್ಯಾಚರಣೆ ನಡೆಸುತ್ತಿದ್ದ ಪನ್ನು, ತನ್ನ ಸಿಖ್ಸ್‌ ಫಾರ್ ಜಸ್ಟೀಸ್ ಸಂಘಟನೆ ಹೆಸರಲ್ಲಿ ಇಂಟರ್ನೆಟ್ ಮೂಲಕವೂ ದ್ವೇಷ ಹಾಗೂ ಮತಾಂದತೆ ಹರಡುವ ಕೆಲಸ ಮಾಡುತ್ತಿದ್ದ. ಯುವಕರು ಭಯೋತ್ಪಾದಕ ಕೃತ್ಯ ಎಸಗಲು ಪ್ರಚೋದಿಸುತ್ತಿದ್ದ. ಈ ಮೂಲಕ ಆತ ಪ್ರತ್ಯೇಕ ಖಲಿಸ್ತಾನ ದೇಶಕ್ಕಾಗಿ ಹೋರಾಟ ಮಾಡುವಂತೆ ಹುರಿದುಂಬಿಸುತ್ತಿದ್ದ. ಹೀಗಾಗಿ, 2019ರಲ್ಲೇ ಭಾರತ ಸರ್ಕಾರವು ಸಿಖ್ಸ್‌ ಫಾರ್ ಜಸ್ಟೀಸ್ ಸಂಘಟನೆಯನ್ನ ನಿಷೇಧ ಮಾಡಿತ್ತು.

    ಜುಲೈ 2020ರಲ್ಲೇ ಭಾರತ ಸರ್ಕಾರದ ಗೃಹ ಇಲಾಖೆ ಗುರುಪತ್ವಂತ್ ಸಿಂಗ್ ಪನ್ನುನನ್ನು ಉಗ್ರಗಾಮಿ ಎಂದು ಹೆಸರಿಸಿತ್ತು. ಈತನ ಮಾಹಿತಿಯನ್ನು ಇಂಟರ್‌ಪೋಲ್‌ಗೂ ನೀಡಿತ್ತು. ರೆಡ್ ಕಾರ್ನರ್ ನೋಟಿಸ್ ಹೊರಡಿಸುವಂತೆ ಆಗ್ರಹಿಸಿತ್ತು. ಆದರೆ, ಭಾರತದ ಮನವಿಯನ್ನು ಇಂಟರ್‌ಪೋಲ್ ತಿರಸ್ಕರಿಸಿತ್ತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]