Tag: ಗುರುದೇಶಪಾಂಡೆ

  • ಪಡ್ಡೆಹುಲಿ: ಬಿಡುಗಡೆಯಾಯ್ತು ಮತ್ತೊಂದು ಜಬರ್ದಸ್ತ್ ಹಾಡು!

    ಪಡ್ಡೆಹುಲಿ: ಬಿಡುಗಡೆಯಾಯ್ತು ಮತ್ತೊಂದು ಜಬರ್ದಸ್ತ್ ಹಾಡು!

    ಬೆಂಗಳೂರು: ಸಾಹಸಸಿಂಹ ವಿಷ್ಣುವರ್ಧನ್ ಅವರ ಮೇಲಿನ ಅತೀವ ಪ್ರೀತಿಯಿಂದ ತಯಾರಾಗಿರೋ ಪಡ್ಡೆ ಹುಲಿಯ ಸಾಂಗು ಹೊರ ಬಂದಿದೆ. ಪಿಆರ್‍ಕೆ ಸಂಸ್ಥೆಯ ಯೂಟ್ಯೂಬ್ ಚಾನೆಲ್ ಮೂಲಕ ಈ ಹಾಡು ಅದ್ಧೂರಿಯಾಗಿ ಬಿಡುಗಡೆಗೊಂಡಿದೆ. ಪ್ರೇಕ್ಷಕರು, ವಿಷ್ಣು ಅಭಿಮಾನಿಗಳು ಈ ಹಾಡನ್ನು ಭರ್ಜರಿಯಾಗಿಯೇ ಸ್ವಾಗತಿಸಿದ್ದಾರೆ.

    ನಾ ತುಂಬಾ ಹೊಸಬ ಬಾಸು ಎಂಬ ಈ ಹಾಡನ್ನು ನಿರ್ಮಾಪಕ ಕೆ.ಮಂಜು ವಿಷ್ಣುವರ್ಧನ್ ಅವರಿಗೆ ಅರ್ಪಿಸಿದ್ದಾರೆ. ಮೊನ್ನೆ ತಾನೇ ವಿಷ್ಣು ಅಭಿಮಾನಿಗಳಿಗೆಂದೇ ಈ ಹಾಡಿನ ವಿಶೇಷ ಪ್ರದರ್ಶನವನ್ನೂ ಏರ್ಪಡಿಸಲಾಗಿತ್ತು. ಇದನ್ನು ಕಂಡು ಅಭಿಮಾನಿಗಳೆಲ್ಲ ಕುಣಿದು ಕುಪ್ಪಳಿಸಿದ್ದರು. ಈ ಹಾಡೀಗ ಪ್ರೇಕ್ಷಕರನ್ನೂ ತಲುಪಿಕೊಂಡಿದೆ.

    ಕೆ.ಮಂಜು ಒಂದು ಕಾಲದಲ್ಲಿ ವಿಷ್ಣು ವರ್ಧನ್ ಅವರ ಆಪ್ತ ವಲಯದಲ್ಲಿದ್ದವರು. ಅಷ್ಟಕ್ಕೂ ಪಡ್ಡೆಹುಲಿಯ ಕಥೆ ಕೂಡಾ ಸ್ವತಃ ವಿಷ್ಣು ಅವರೇ ಹೇಳಿದ್ದ ಒಂದೆಳೆಯನ್ನ ಆಧರಿಸಿದೆ. ನಿರ್ದೇಶಕ ಗುರು ದೇಶಪಾಂಡೆ ಅದನ್ನು ಬಲು ಆಸ್ಥೆಯಿಂದಲೇ ಚಿತ್ರೀಕರಿಸಿದ್ದಾರೆ. ಪಡ್ಡೆಹುಲಿಯ ಪ್ರತಿಯೊಂದು ವಿಚಾರದಲ್ಲಿಯೂ ಕೂಡಾ ಮಂಜು ವಿಷ್ಣು ಮೇಲಿನ ತಮ್ಮ ಪ್ರೀತಿ ಮತ್ತು ಅಭಿಮಾನವನ್ನ ತೋರ್ಪಡಿಸಿಕೊಳ್ಳುತ್ತಿದ್ದಾರೆ.

    ಇಂಥಾ ಗಾಢವಾದ ಪ್ರೀತಿಯಿಂದಲೇ ಈಗ ಹೊರ ಬಂದಿರೋ ಹಾಡು ಕೂಡಾ ರೂಪಿಸಲ್ಪಟ್ಟಿದೆ. ಇದು ಪಡ್ಡೆಹುಲಿ ಚಿತ್ರದಲ್ಲಿ ನಾಯಕನನ್ನು ಪರಿಚಯಿಸೋ ಹಾಡು. ನಿಜಕ್ಕೂ ಇದು ಜಬರ್ದಸ್ತಾಗಿ ಮೂಡಿ ಬಂದಿದೆ. ಬಿಡುಗಡೆಯಾದಾಕ್ಷಣವೇ ಅದ್ಧೂರಿ ಸ್ವಾಗತವೂ ಸಿಕ್ಕಿದೆ.

  • ವಿಷ್ಣು ಅಭಿಮಾನಿಗಳಿಗೆ ಪಡ್ಡೆಹುಲಿ ಹಾಡಿನ ಉಡುಗೊರೆ!

    ವಿಷ್ಣು ಅಭಿಮಾನಿಗಳಿಗೆ ಪಡ್ಡೆಹುಲಿ ಹಾಡಿನ ಉಡುಗೊರೆ!

    ಬೆಂಗಳೂರು: ಗುರುದೇಶಪಾಂಡೆ ನಿರ್ದೇಶನದಲ್ಲಿ ರೂಪುಗೊಂಡಿರೋ ಚಿತ್ರ ಪಡ್ಡೆಹುಲಿ. ಈ ಮೂಲಕ ನಿರ್ಮಾಪಕ ಕೆ. ಮಂಜು ಪುತ್ರ ಶ್ರೇಯಸ್ ನಾಯಕನಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಇದೀಗ ಈ ಸಿನಿಮಾದ ಹಾಡೊಂದು ರೆಡಿಯಾಗಿದೆ. ಕೆ.ಮಂಜು ಈ ಹಾಡನ್ನು ತಮ್ಮ ಗುರುಗಳಾದ ವಿಷ್ಣುವರ್ಧನ್ ಅವರಿಗೆ ಅರ್ಪಿಸಿರೋದಲ್ಲದೆ, ವಿಷ್ಣು ಅಭಿಮಾನಿಗಳಿಗೆಂದೇ ವಿಶೇಷ ಪ್ರದರ್ಶನವನ್ನೂ ಏರ್ಪಡಿಸಿದ್ದಾರೆ!

    ಇದು ನಾಯಕನನ್ನು ಪರಿಚಯಿಸೋ ಸಾಂಗು. ನಾ ತುಂಬಾ ಹೊಸಬ ಬಾಸು ಅಂತ ಆರಂಭವಾಗೋ ಈ ಹಾಡನ್ನು ಶ್ರದ್ಧೆಯಿಂದ ಚಿತ್ರತಂಡ ರೂಪಿಸಿದೆ. ಇದನ್ನು ಕೆ.ಮಂಜು ತಮ್ಮ ಗುರುಸ್ವರೂಪಿಯಾದ ವಿಷ್ಣುವರ್ಧನ್ ಅವರಿಗೆ ಅರ್ಪಿಸಿದ್ದಾರೆ. ಫೆಬ್ರವರಿ 2ರಂದು ಮಧ್ಯಾಹ್ನ ಹನ್ನೆರಡು ಘಂಟೆಗೆ ಚಾಮರಾಜಪೇಟೆಯ ಕಲಾವಿದರ ಸಂಘದಲ್ಲಿ ವಿಷ್ಣು ಅಭಿಮಾನಿಗಳಿಗೆಂದೇ ವಿಶೇಷ ಪ್ರದರ್ಶನವನ್ನೂ ಆಯೋಜಿಸಿದ್ದಾರೆ. ಈ ಹಾಡನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಂದು ವೀಕ್ಷಿಸುವಂತೆ ವಿಷ್ಣು ಅಭಿಮಾನಿಗಳಲ್ಲಿ ಮನವಿಯನ್ನೂ ಮಾಡಿಕೊಂಡಿದ್ದಾರೆ.

    ಈ ಹಿಂದೆ ಪಡ್ಡೆಹುಲಿಯ ರ‍್ಯಾಪ್ ಶೈಲಿಯ ಒಂದು ಹಾಡನ್ನ ವಿಷ್ಣುವರ್ಧನ್ ಅವರಿಗೆ ಅರ್ಪಿಸಲಾಗಿತ್ತು. ಅದರಲ್ಲಿ ಶ್ರೇಯಸ್ ನಾಗರಹಾವಿನ ವಿಷ್ಣು ಗೆಟಪ್ಪಿನಲ್ಲಿ ಮಿಂಚಿದ್ದರು. ಅದರಂತೆಯೇ ಈ ಹಾಡೂ ಕೂಡಾ ಚೆಂದಗೆ ಮೂಡಿ ಬಂದಿದೆಯಂತೆ. ವಿಷ್ಣು ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಮಂಜು ಅವರನ್ನೇ ತಮ್ಮ ಗುರುವೆಂದು ಪರಿಭಾವಿಸಿರುವವರು. ತಮ್ಮ ಮಗನ ಮೊದಲ ಚಿತ್ರದ ಮೂಲಕ ಅವರು ವಿಷ್ಣು ಅಭಿಮಾನವನ್ನ ಮತ್ತಷ್ಟು ಗಾಢವಾಗಿ, ಸಾರ್ಥಕವಾಗಿ ಪ್ರಚುರಪಡಿಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಕೃಷ್ಣಾವತಾರಿ ಅಜೇಯ್ ರಾವ್ ಪೊಲೀಸ್‍ಗಿರಿ! – 27ನೇ ಚಿತ್ರದ ಫಸ್ಟ್ ಲುಕ್ ಪೋಸ್ಟರ್!

    ಕೃಷ್ಣಾವತಾರಿ ಅಜೇಯ್ ರಾವ್ ಪೊಲೀಸ್‍ಗಿರಿ! – 27ನೇ ಚಿತ್ರದ ಫಸ್ಟ್ ಲುಕ್ ಪೋಸ್ಟರ್!

    ಬೆಂಗಳೂರು: ಇಂದು ಕೃಷ್ಣ ಅಜೇಯ್ ರಾವ್ ಜನ್ಮ ದಿನ. ತಾಯಿಗೆ ತಕ್ಕ ಮಗ ಚಿತ್ರದ ಯಶಸ್ಸಿನ ಅಲೆಯಲ್ಲಿರುವ ಅವರ ಮುಂದಿನ ಚಿತ್ರದ ಬಗೆಗಿನ ವಿವರಗಳೂ ಈ ಸಂದರ್ಭದಲ್ಲಿಯೇ ಜಾಹೀರಾಗಿವೆ. ಗುರುದೇಶಪಾಂಡೆ ನಿರ್ಮಾಣದಲ್ಲಿ ಮೂಡಿ ಬರಲಿರೋ ಅಜೇಯ್ ರಾವ್ ಇಪ್ಪತ್ತೇಳನೇ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದೆ.

    ಈಗ ಬಿಡುಗಡೆಯಾಗಿರೋ ಫಸ್ಟ್ ಲುಕ್ ಪೋಸ್ಟರ್ ನಿಜಕ್ಕೂ ಆಕರ್ಷಕವಾಗಿದೆ. ಅಜೇಯ್ ರಾವ್ ಅರ್ಧ ಖಾಕಿ ಮತ್ತು ಮತ್ತರ್ಧ ಕೃಷ್ಣಾವತಾರದ ಗೆಟಪ್ಪಿನಲ್ಲಿರೋ ಈ ಪೋಸ್ಟರ್ ಅಭಿಮಾನಿಗಳನ್ನೂ ಖುಷಿಗೊಳಿಸಿದೆ. ಆದರೆ ಇದರ ಟೈಟಲ್ ಇನ್ನೂ ಬಿಡುಗಡೆಯಾಗಿಲ್ಲ.

    ಇದು ಗುರುದೇಶಪಾಂಡೆ ಪ್ರೊಡಕ್ಷನ್ಸ್ ಬ್ಯಾನರಿನ ಎರಡನೇ ಚಿತ್ರ. ಇದನ್ನು ರಾಜ್ ವರ್ಧನ್ ಶಂಕರ್ ನಿರ್ದೇಶನ ಮಾಡಲಿದ್ದಾರೆ. ಜಡೇಶ್ ಕುಮಾರ್ ಜೊತೆ ಸೇರಿ ಗುರುದೇಶಪಾಂಡೆಯವರೇ ಕಥೆ ಚಿತ್ರಕಥೆಯನ್ನೂ ರಚಿಸಿದ್ದಾರೆ. ಆರೂರು ಸುಧಾಕರ್ ಛಾಯಾಗ್ರಾಹಕರಾಗಿಯೂ ಆಯ್ಕೆಯಾಗಿದ್ದಾರೆ. ಉಳಿಕೆ ತಾರಾಗಣ, ತಾಂತ್ರಿಕ ವರ್ಗದ ಮಾಹಿತಿ ಟೈಟಲ್ ಲಾಂಚ್ ವೇಳೆಗೆ ಜಾಹೀರಾಗಲಿದೆ.

    ಆದಷ್ಟು ಬೇಗನೆ ಟೈಟಲ್ ಲಾಂಚ್ ಮಾಡಿ ಅದೇ ಸಂದರ್ಭದಲ್ಲಿ ಚಿತ್ರದ ಬಗೆಗಿನ ಉಳಿಕೆ ಮಾಹಿತಿ ಕೊಡುವ ಆಲೋಚನೆ ಗುರುದೇಶಪಾಂಡೆ ಅವರದ್ದು. ಅಂತೂ ಬೇಗನೆ ಈ ಚಿತ್ರದ ಚಿತ್ರೀಕರಣ ಚಾಲೂ ಆಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪ್ರಜ್ವಲ್ ಚಿತ್ರಕ್ಕೆ ನಿಶ್ವಿಕಾ ನಾಯ್ಡು ನಾಯಕಿ!

    ಪ್ರಜ್ವಲ್ ಚಿತ್ರಕ್ಕೆ ನಿಶ್ವಿಕಾ ನಾಯ್ಡು ನಾಯಕಿ!

    ವಾಸು ನಾನ್ ಪಕ್ಕಾ ಕಮರ್ಶಿಯಲ್ ಚಿತ್ರದ ಮೂಲಕ ನಾಯಕಿಯಾಗಿ ಅವತರಿಸಿರುವವರು ನಿಶ್ವಿಕಾ ನಾಯ್ಡು. ಈ ಚಿತ್ರದ ಯಶಸ್ಸಿನ ನಂತರದಲ್ಲಿ ಮತ್ತೊಂದಷ್ಟು ಹೊಸ ಅವಕಾಶಗಳು ನಿಶ್ವಿತಾರನ್ನು ಅರಸಿ ಬರಲಾರಂಭಿಸಿವೆ. ಅವರೀಗ ಪ್ರಜ್ವಲ್ ದೇವರಾಜ್ ನಟಿಸಲಿರೋ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆಂಬ ಸುದ್ದಿ ಹರಿದಾಡಿಸಲಾರಂಭಿಸಿದೆ.

    ಇದು ಗುರು ದೇಶಪಾಂಡೆ ನಿರ್ದೇಶನ ಮಾಡಲಿರೋ ಚಿತ್ರ. ಈಗಾಗಲೇ ಗುರುದೇಶಪಾಂಡೆ ನಿರ್ದೇಶನದ ಪಡ್ಡೆಹುಲಿ ಚಿತ್ರದಲ್ಲಿ ನಿಶ್ವಿಕಾ ನಾಯ್ಡು ನಾಯಕಿಯಾಗಿದ್ದಾರೆ. ಅವರನ್ನೇ ತಮ್ಮ ಮುಂದಿನ ಚಿತ್ರದಲ್ಲಿಯೂ ನಾಯಕಿಯನ್ನಾಗಿ ಗುರುದೇಶಪಾಂಡೆ ಆಯ್ಕೆ ಮಾಡಿದ್ದಾರಂತೆ.

    ಗುರುದೇಶಪಾಂಡೆ ನಿರ್ದೇಶನದ ಪ್ರಜ್ವಲ್ ನಾಯಕನಾಗಿರೋ ಈ ಚಿತ್ರಕ್ಕಿನ್ನೂ ಹೆಸರಿಟ್ಟಿಲ್ಲ. ಆದರೆ ಎಲ್ಲ ತಯಾರಿಯೂ ನಡೆಯುತ್ತಿದೆ. ಈ ಚಿತ್ರದಲ್ಲಿ ನಿಶ್ವಿಕಾ ನಾಯಕಿಯಾಗಿ ಭಿನ್ನ ಪಾತ್ರವೊಂದರಲ್ಲಿ ನಟಿಸಲಿದ್ದಾರಂತೆ. ಹೀಗೆ ನಿಶ್ವಿತಾರನ್ನು ತಮ್ಮ ಮತ್ತೊಂದು ಚಿತ್ರಕ್ಕೂ ಗುರು ಆರಿಸಿಕೊಳ್ಳಲು ಕಾರಣ ಆಕೆಯ ಪ್ರತಿಭೆ. ಪಡ್ಡೆಹುಲಿ ಚಿತ್ರದಲ್ಲಿ ಚೆಂದಗೆ ನಟಿಸಿರುವ ನಿಶ್ವಿಕಾ ತಾವೇ ಡಬ್ ಮಾಡಿದ್ದಾರಂತೆ. ಉತ್ಸಾಹದ ಚಿಲುಮೆಯಂಥಾ, ಕಲಿಕೆಯ ಆಸಕ್ತಿ ಇರುವ ನಿಶ್ವಿಕಾ ಈ ಮೂಲಕ ಬಂಪರ್ ಅವಕಾಶವೊಂದನ್ನು ತಮ್ಮದಾಗಿಸಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಚಿಕ್ಕಣ್ಣ ಹೇರ್ ಸ್ಟೈಲ್ ಬದಲಾಯಿಸಿಕೊಂಡಿದ್ದಕ್ಕೆ ಕಾರಣ ಏನು?

    ಚಿಕ್ಕಣ್ಣ ಹೇರ್ ಸ್ಟೈಲ್ ಬದಲಾಯಿಸಿಕೊಂಡಿದ್ದಕ್ಕೆ ಕಾರಣ ಏನು?

    ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಸದ್ಯಕ್ಕೆ ಭಾರೀ ಬ್ಯುಸಿಯಾಗಿರೋ ಹಾಸ್ಯ ನಟ ಚಿಕ್ಕಣ್ಣ. ಆರಂಭದಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ನಟಿಸುತ್ತಾ ಬಂದಿದ್ದ ಚಿಕ್ಕಣ್ಣ ಇದೀಗ ಏಕಕಾಲಕ್ಕೇ ಹಲವಾರು ಚಿತ್ರಗಳನ್ನು ಒಪ್ಪಿಕೊಳ್ಳುವ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ. ಹೀಗೆ ಕೈತುಂಬಾ ಚಿತ್ರಗಳನ್ನು ಹೊಂದಿರುವ ಚಿಕ್ಕಣ್ಣ ಇದೀಗ ಸದ್ದು ಮಾಡುತ್ತಿರೋದು ತಮ್ಮ ಹೇರ್ ಸ್ಟೈಲು ಬದಲಾಗಿರುವ ಕಾರಣಕ್ಕೆ!

    ಗಿಡ್ಡ ಕೂದಲನ್ನೇ ಒಂದಷ್ಟು ವಿನ್ಯಾಸಗಳಿಗೆ ಒಗ್ಗಿಸಿಕೊಳ್ಳುತ್ತಾ ಚಿತ್ರದಿಂದ ಚಿತ್ರಕ್ಕೆ ಬದಲಾವಣೆ ಮಾಡಿಕೊಂಡು ಬಂದಿದ್ದವರು ಚಿಕ್ಕಣ್ಣ. ಆದರೀಗ ಅವರ ಹೇರ್ ಸ್ಟೈಲು ಏಕಾಏಕಿ ಸಂಪೂರ್ಣವಾಗಿ ಬದಲಾಗಿದೆ, ಕರ್ಲಿ ಹೇರನ್ನು ಸ್ಟ್ರೈಟ್ ಮಾಡಿ ಅದಕ್ಕೆ ಕಲರಿಂಗ್ ಮಾಡಿಸಿಕೊಂಡಿದ್ದಾರೆ. ಈ ಗೆಟಪ್ಪಿನಲ್ಲಿ ಕಾಣಿಸಿಕೊಂಡೇಟಿಗೆ ಪ್ರೇಕ್ಷಕರೆಲ್ಲರಲ್ಲಿ ಚಿಕ್ಕಣ್ಣ ಹೀರೋ ಆಗಲು ರೆಡಿಯಾಗುತ್ತಿದ್ದಾರಾ ಎಂಬ ಪ್ರಶ್ನೆ ಮೂಡಿಕೊಂಡಿದ್ದು ಸುಳ್ಳಲ್ಲ.

    ಆದರೆ, ಚಿಕ್ಕಣ್ಣ ಏಕಾಏಕಿ ಹೊಸಾ ಅವತಾರದಲ್ಲಿ ಕಾಣಿಸಿಕೊಂಡಿದ್ದರ ಹಿಂದೆ ಬೇರೊಂದು ವಿಚಾರವಿದೆ. ಇದಕ್ಕೆ ಕಾರಣ ಕೆ ಮಂಜು ಪುತ್ರ ಶ್ರೇಯಸ್ ನಟನೆಯ ಪಡ್ಡೆಹುಲಿ ಚಿತ್ರ. ಗುರುದೇಶಪಾಂಡೆ ನಿರ್ದೇಶನದ ಈ ಚಿತ್ರದಲ್ಲಿ ಚಿಕ್ಕಣ್ಣ ಮಜವಾದೊಂದು ಪಾತ್ರ ಮಾಡಿದ್ದಾರೆ. ಅದಕ್ಕೆಂದೇ ಶ್ರಮ ವಹಿಸಿ ಹೊಸಾ ಥರದ ಹೇರ್ ಸ್ಟೈಲಿಗೆ ಕೂದಲನ್ನು ಪಳಗಿಸಿಕೊಂಡಿದ್ದಾರೆ!

    ಇದೆಲ್ಲ ಏನೇ ಇದ್ದರೂ ಈ ಹೊಸಾ ಅವತಾರ ಚಿಕ್ಕಣ್ಣನ ಅಭಿಮಾನಿಗಳಿಗೆಲ್ಲ ಇಷ್ಟವಾಗಿದೆಯಂತೆ!

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv