Tag: ಗುರುದತ್

  • ಕೈಲಾಸಂರ ಟೊಳ್ಳುಗಟ್ಟಿ ಈಗ ಮೂಕವಿಸ್ಮಿತ

    ಕೈಲಾಸಂರ ಟೊಳ್ಳುಗಟ್ಟಿ ಈಗ ಮೂಕವಿಸ್ಮಿತ

    ಬೆಂಗಳೂರು: ಟಿ.ಪಿ. ಕೈಲಾಸಂ ಅವರ ಕೃತಿಯೊಂದು ಈಗ ಚಲನಚಿತ್ರವಾಗಿ ಬೆಳ್ಳಿತೆರೆ ಮೇಲೆ ಬರುತ್ತಿದೆ. 1920ರಲ್ಲಿ ಟಿ.ಪಿ. ಕೈಲಾಸಂ ಅವರು ಬರೆದ ಟೊಳ್ಳು ಗಟ್ಟಿ ಎಂಬ ನಾಟಕವನ್ನಾಧರಿಸಿ ಮೂಕವಿಸ್ಮಿತ ಚಿತ್ರವನ್ನು ಗುರುದತ್ ನಿರ್ದೇಶಿಸಿದ್ದಾರೆ. ಗುರುದತ್ ಆಗಿನ ಕಾಲದ ಕಥೆಗೆ ಈಗಿನ ಕಾಲದ ಪರಿಕಲ್ಪನೆಯನ್ನು ಬ್ಲೆಂಡ್ ಮಾಡಿ ತೆರೆ ಮೇಲೆ ಮೂಡಿಸಿದ್ದಾರೆ.

    ಗುರುದತ್, ಶ್ರೀಕಾಂತ್, ಸಂದೀಪ್ ಮಲಾನಿ, ವಾಣಿಶ್ರೀ ಭಟ್, ಶುಭ ರಕ್ಷ, ರಾಜೇಶ್ ಎಸ್.ರಾವ್, ಡಾ.ಕೃಪ ಹಾಗೂ ಇತರರು ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಮೂಕವಿಸ್ಮಿತ ಚಿತ್ರದ ಆಡಿಯೋ ಹಾಗೂ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ರೇಣುಕಾಂಬ ಸ್ಟುಡಿಯೋದಲ್ಲಿ ನಡೆಯಿತು.

    ನಾಟಕ ನಟ ಸಂದೀಪ್ ಮಲಾನಿ ಮಾತನಾಡಿ, ಮಾಧ್ವ ಬ್ರಾಹ್ಮಣ ಕುಟುಂಬದಲ್ಲಿ ನಡೆಯುವಂಥ ಕಥೆಯಿದು. ನಾನು ಕುಟುಂಬದ ಹಿರಿಯ. 53ನೇ ವಯಸ್ಸಿನಲ್ಲಿ ನನಗೆ ಒಂದು ಮಗು ಹುಟ್ಟುತ್ತದೆ. ಆನಂತರ ನಡೆಯುವ ಕಥೆ ಚಿತ್ರದಲ್ಲಿದೆ. ನಾನು 50ಕ್ಕೂ ಹೆಚ್ಚು ಸಿನಿಮಾದಲ್ಲಿ ಆ್ಯಕ್ಟ್ ಮಾಡಿದ್ದರೂ ಪೂರ್ಣ ಪ್ರಮಾಣದ ನಾಯಕನಾಗಿ ಕಾಣಿಸಿರುವುದು ಇದೇ ಚಿತ್ರದಲ್ಲಿ. ನಿಜವಾದ ಶಿಕ್ಷಣ ಎಂದರೇನು, ಮಾನವೀಯ ಮೌಲ್ಯಗಳನ್ನು ಬಿಂಬಿಸುವ ಕಥೆ ಈ ಚಿತ್ರದಲ್ಲಿದೆ ಎಂದು ಹೇಳಿದರು. ಈ ಚಿತ್ರದಲ್ಲಿ 4 ಹಾಡುಗಳನ್ನು ಚಿನ್ಮಯ್ ಎಂ.ರಾವ್ ಸಂಗೀತ ಸಂಯೋಜನೆ ಮಾಡಿದ್ದಾರೆ.

  • ಅಂಬರೀಶ್ ಬಗ್ಗೆ ‘ಅಂಬಿ ನಿಂಗೆ ವಯಸ್ಸಾಯ್ತೋ’ ನಿರ್ದೇಶಕ ಹೇಳಿದ್ದೇನು?

    ಅಂಬರೀಶ್ ಬಗ್ಗೆ ‘ಅಂಬಿ ನಿಂಗೆ ವಯಸ್ಸಾಯ್ತೋ’ ನಿರ್ದೇಶಕ ಹೇಳಿದ್ದೇನು?

    ಬೆಂಗಳೂರು: ರೆಬೆಲ್ ಸ್ಟಾರ್ ಅಂಬರೀಶ್ ಅವರನ್ನು ಸಂಭಾಳಿಸೋದು ಕಷ್ಟ ಎಂಬುದು ಚಿತ್ರರಂಗದಲ್ಲಿ ಜನಜನಿತವಾಗಿರುವ ಅಭಿಪ್ರಾಯ. ಈ ಹಿರಿಯ ನಟನನ್ನು ಸಂಭಾಳಿಸಲು ಚಿಕ್ಕ ವಯಸ್ಸಿನ ಅಂಬಿ ನಿಂಗೆ ವಯಸ್ಸಾಯ್ತೋ ಚಿತ್ರದ ನಿರ್ದೇಶಕ ಗುರುದತ್ ಏನು ಮಾಡಿರಬಹುದು ಎಂಬ ಕ್ಯೂರಿಯಾಸಿಟಿ ಅನೇಕರಲ್ಲಿದ್ದದ್ದು ಸುಳ್ಳಲ್ಲ!

    ಈ ಬಗ್ಗೆ ಇದೀಗ ಸ್ವತಃ ನಿರ್ದೇಶಕ ಗುರುದತ್ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಅಂಬರೀಶ್ ಅವರ ಜೊತೆ ಚಿತ್ರ ಮಾಡೋವಾಗ ಗುರುದತ್ ಆರಂಭದಲ್ಲಿ ಇದು ಕನಸೇನೋ ಅಂದುಕೊಂಡಿದ್ದರಂತೆ. ಅವರ ನಟನೆಯನ್ನು ನಿರ್ದೇಶನ ಮಾಡೋ ಸವಾಲನ್ನು ಎದುರುಗೊಳ್ಳಲು ತಮ್ಮಿಂದ ಸಾಧ್ಯವಾಗುತ್ತಾ ಅಂತಲೂ ಭಯಗೊಂಡಿದ್ದರಂತೆ. ಅವರ ಸಿಟ್ಟು ಸೆಡವುಗಳ ಕಥೆಗಳನ್ನೂ ಕೇಳಿರುವುದರಿಂದ ಆ ಬಗೆಗೂ ಗುರುದತ್ ಭಯ ಹೊಂದಿದ್ದರಂತೆ.

    ಆದರೆ ಅಂಬಿ ನಿಂಗೆ ವಯಸ್ಸಾಯ್ತೋ ಚಿತ್ರದುದ್ದಕ್ಕೂ ಗುರುದತ್‍ಗೆ ಸಿಕ್ಕಿದ್ದು ಅಪ್ಪನಂಥಾ ಅಂಬರೀಶ್ ಯಾಕೆಂದರೆ ಅವರು ಒಂದು ಹಂತದಲ್ಲಿಯೂ ಸಿಟ್ಟು ಮಾಡಿಕೊಂಡಿಲ್ಲವಂತೆ. ಆದಷ್ಟು ಸಮಯವನ್ನೂ ಕೂಡಾ ಮೇಂಟೇನ್ ಮಾಡಿದ್ದಾರಂತೆ. ಇದೆಲ್ಲದರಿಂದ ಥ್ರಿಲ್ ಆಗಿರೋ ಗುರುದತ್ ಅಂಬಿ ಜೊತೆ ಕೆಲಸ ಮಾಡೋದೆಂದರೆ ಅಪ್ಪನ ಜೊತೆ ಕೆಲಸ ಮಾಡಿದಷ್ಟೇ ಕಂಫರ್ಟ್ ಫೀಲ್ ಕೊಟ್ಟಿದೆ ಅಂತ ಹೇಳಿಕೊಂಡಿದ್ದಾರೆ.