Tag: ಗುರು

  • ತನ್ನ ನೆಚ್ಚಿನ ಗುರುವನ್ನು ಪರಿಚಯಿಸಿ ಧನ್ಯವಾದ ಹೇಳಿದ ಧ್ರುವ ಸರ್ಜಾ

    ತನ್ನ ನೆಚ್ಚಿನ ಗುರುವನ್ನು ಪರಿಚಯಿಸಿ ಧನ್ಯವಾದ ಹೇಳಿದ ಧ್ರುವ ಸರ್ಜಾ

    ಬೆಂಗಳೂರು: ಟ್ವಿಟ್ಟರ್ ಚಾಲೆಂಜ್‍ನಲ್ಲಿ ಧ್ರುವ ಸರ್ಜಾ, ಚಿರುನನ್ನು ನೆನೆದು ನನ್ನ ಗುರು ನನ್ನ ಅಣ್ಣ ಎಂದು ಟ್ವೀಟ್ ಮಾಡಿದ್ದಾರೆ.

    ಯುವರತ್ನ ಸಿನಿಮಾ ಬಿಡುಗಡೆಗೆ ಸಿದ್ದವಾಗಿದೆ. ಈಗಾಗಲೇ ಚಿತ್ರದ ಪ್ರೋಮೋಷನ್ ಶುರುವಾಗಿದೆ. ಚಿತ್ರತಂಡ ಟ್ವಿಟ್ಟರ್‍ನಲ್ಲಿ ಒಂದು ಚಾಲೆಂಜ್ ಕಂಟೆಸ್ಟ್ ಆರಂಭಿಸಿದ್ದಾರೆ. ನಿಮ್ಮ ಜೀವನದಲ್ಲಿ ನಿಮ್ಮನ್ನು ಸರಿ ದಾರಿಗೆ ನಡೆಸಿದ ಗುರುವಿನ ಫೋಟೋ ಹಾಕುವ ಮೂಲಕವಾಗಿ ಪರಿಚಯಿಸಬೇಕು ಎಂದು ಹೇಳಿದ್ದರು. ತಮ್ಮ ನೆಚ್ಚಿನ ಗುರುವನ್ನು ಧ್ರುವ ಸರ್ಜಾ ಪರಿಚಯಿಸಿ ಧನ್ಯವಾದ ತಿಳಿಸಿದ್ದಾರೆ.

    ಧ್ರುವ ಸರ್ಜಾ ತಮ್ಮ ಅಣ್ಣ ಚಿರಂಜೀವಿ ಸರ್ಜಾ ಜೊತೆಗಿರುವ ಫೋಟೋವನ್ನು ಹಂಚಿಕೊಂಡು ಬಾಳೆಂಬ ಮೊಳಕೆ ಚಿಗುರೊಡೆಯಲು ಮಳೆಯಾದೆ, ಹೂವಾಗಿ ಅರಳಲು ಸ್ಪೂರ್ತಿಯ ಸೂರ್ಯನಾದೆ, ವೃಕ್ಷವಾಗಿ ಬೆಳೆಯಲು ಆಸರೆಯ ಭೂಮಿಯಾದೆ, ನನ್ನ ಅಣ್ಣ ನನ್ನ ಗುರು ಎಂದು ಬರೆದುಕೊಂಡಿದ್ದಾರೆ.

    ಚಿರುವನ್ನು ಕಳೆದುಕೊಂಡ ಧ್ರುವ ಸರ್ಜಾ ತಮ್ಮ ಅಣ್ಣನನ್ನ ನೆನೆದು ಕಣ್ಣಿರು ಹಾಕುತ್ತಾ ಬೇಸರವನ್ನು ವ್ಯಕ್ತಪಡಿಸುತ್ತಲೇ ಇರುತ್ತಾರೆ. ಕೆಆರ್‍ಜಿ ಸ್ಟೂಡಿಯೋ ಸಂಸ್ಥೆ ಮಾಲೀಕನಾದ ಕಾರ್ತಿಕ್ ಗೌಡ ಅವರು ಹಾಕಿರುವ ಚಾಲೆಂಜ್ ಸ್ವೀಕರಿಸಿದ ಧ್ರುವ ಸರ್ಜಾ ಅಣ್ಣನನ್ನು ತನ್ನ ಗುರು ಎಂದು ಹೇಳಿದ್ದಾರೆ.

    ಯುವರತ್ನ ಸಿನಿಮಾ ತಂಡ ಹಾಕಿರುವ ಚಾಲೆಂಜ್‍ಅನ್ನು ಹಲವು ನಟ ನಟಿಯರು, ನಿರ್ದೇಶಕರು ತಮ್ಮ ನೆಚ್ಚಿನ ಗುರುವನ್ನು ಪರಿಚಯಿಸುವ ಮೂಲಕವಾಗಿ ಜೀವನದಲ್ಲಿ ಹೊಸ ದಾರಿ ತೋರಿಸಿಕೊಟ್ಟ ಗುರುವಿಗೆ ಧನ್ಯವಾದವನ್ನು ಈ ಮೂಲಕವಾಗಿ ಹೇಳುತ್ತಿದ್ದಾರೆ.

  • ಗುರು ಶನಿ ಸಮಾಗಮ – ಸೋಮವಾರ ಸಂಜೆ ಆಗಸದಲ್ಲಿ ಕೌತುಕ

    ಗುರು ಶನಿ ಸಮಾಗಮ – ಸೋಮವಾರ ಸಂಜೆ ಆಗಸದಲ್ಲಿ ಕೌತುಕ

    ಉಡುಪಿ: ಡಿಸೆಂಬರ್ 21 ಇಂದು ಸಂಜೆ 6.15ರಿಂದ 8ರವರೆಗೆ ಗುರು ಮತ್ತು ಶನಿ ಗ್ರಹಗಳ ಸಾಮೀಪ್ಯವನ್ನು ಕಣ್ತುಂಬಿಕೊಳ್ಳಬಹುದು. 20 ವರ್ಷಗಳಿಗೊಮ್ಮೆ ಈ ದೃಶ್ಯ ಕಾಣಸಿಗುತ್ತದೆ.

    ಗುರು ಹಾಗು ಶನಿಯ ಸಾಮೀಪ್ಯವನ್ನು ಒಂದು ವಿಶೇಷವಾದ ಖಗೋಳ ವಿದ್ಯಮಾನ ಎನ್ನಬಹುದಾಗಿದ್ದು, ಇದನ್ನು ಗ್ರೇಟ್ ಕಂಜಂಕ್ಷನ್ ಎನ್ನಲಾಗುತ್ತದೆ. ಭೂಮಿಯಿಂದ ಸೂರ್ಯನಿಗಿರುವ ದೂರದ 5ರಷ್ಟು ದೂರದಲ್ಲಿ ಗುರುಗ್ರಹವಿದ್ದು, ಗುರುವು ಸೂರ್ಯನ ಸುತ್ತ ಪರಿಭ್ರಮಿಸಲು 11.86 ವರ್ಷ ಬೇಕು. ಶನಿಯು ಭೂಮಿ ಹಾಗೂ ಸೂರ್ಯನ ನಡುವಿನ ಅಂತರದ 2ರಷ್ಟು ದೂರದಲ್ಲಿದ್ದು, ಪರಿಭ್ರಮಿಸಲು 29.46 ವರ್ಷಗಳು ಬೇಕು. ಈ ಎರಡು ಗ್ರಹಗಳು ಸಮೀಪಿಸಲು ಕನಿಷ್ಠ 20 ವರ್ಷಗಳು ಬೇಕು ಎಂದು ಉಡುಪಿ ಪೂರ್ಣಪ್ರಜ್ಞ ಕಾಲೇಜು ಭೌತಶಾಸ್ತ್ರ ಉಪನ್ಯಾಸಕ ಅತುಲ್ ಭಟ್ ಹೇಳಿದ್ದಾರೆ.

    ಗುರು ಹಾಗೂ ಶನಿ ಗ್ರಹಗಳು ಒಂದೇ ಸಮತಲದಲ್ಲಿ ಪರಿಭ್ರಮಿಸುವುದಿಲ್ಲ. ಪ್ರತಿ ಸಮಾಗಮದಲ್ಲಿ ಅಂತರವು ಬದಲಾಗುತ್ತಿರುತ್ತದೆ. ಖಗೋಳಶಾಸ್ತ್ರದಲ್ಲಿ ಈ ಅಂತರಗಳನ್ನು ಕೋನಾಂತರದಲ್ಲಿ ಅಳೆಯಲಾಗುತ್ತದೆ. ಮದುವೆ ಸಮಾರಂಭಗಳಲ್ಲಿ ವರನು ವಧುವಿಗೆ ಅರುಂಧತಿ ಹಾಗು ವಸಿಷ್ಠ ನಕ್ಷತ್ರಗಳನ್ನು ತೋರಿಸುವ ಶಾಸ್ತ್ರವಿದೆ. ಅಲ್ಲಿ ಎರಡು ನಕ್ಷತ್ರಗಳು ತುಂಬ ಹತ್ತಿರದಲ್ಲಿ ಜೋಡಿ ನಕ್ಷತ್ರಗಳಂತೆ ಕಾಣುತ್ತದೆ. ಇವುಗಳ ನಡುವಿನ ಅಂತರ 0.2 ಡಿಗ್ರಿಗಳಿರುತ್ತದೆ. ಆದರೆ, ಈಗ ಕಾಣುವ ಗುರು ಶನಿ ಗ್ರಹದ ನಡುವಿನ ಅಂತರ ಅರುಂಧತಿ ಹಾಗೂ ವಸಿಷ್ಠ ನಕ್ಷತ್ರಗಳ ಅಂತರದ ಅರ್ಧದಷ್ಟಿರುತ್ತದೆ (0.1) ಎಂದರು.

    2040ರಲ್ಲಿ ಈ ಸಮಾಗಮವನ್ನು ಮತ್ತೊಮ್ಮೆ ವೀಕ್ಷಿಸಬಹುದಾಗಿದ್ದರೂ ಅಂತರ ಎರಡರಷ್ಟಿರುತ್ತದೆ. ಹಾಗಾಗಿ, ಈಗ ನೋಡದಿದ್ದರೆ ಮತ್ತೊಮ್ಮೆ, 0.1 ಡಿಗ್ರಿ ಅಂತರವಿರುವ ಸಮಾಗಮವನ್ನು ವೀಕ್ಷಿಸಲು ಮಾರ್ಚ್ 2080ರವರೆಗೆ ಕಾಯಬೇಕು. ಹಿಂದೆ, 1623ರಲ್ಲಿ ಇದೇ ರೀತಿಯ ವಿದ್ಯಮಾನ ನಡೆದಿತ್ತು. ಅದಕ್ಕಿಂತ ಹಿಂದೆ 1,226 ರಲ್ಲಿ ಕಂಡಿತ್ತು.

    ಈ ಜೋಡಿ ಗ್ರಹಗಳು ಕೇವಲ 1 ಗಂಟೆ 45 ನಿಮಿಷ ಮಾತ್ರ ಕಾಣ ಸಿಗುತ್ತದೆ. ಎರಡು ಗ್ರಹಗಳು ಸೂರ್ಯಾಸ್ತದ ನಂತರ 6.15 ರಿಂದ ರಾತ್ರಿ 8ಗಂಟೆಯವರೆಗೆ ಕಾಣಲಿದ್ದು, ನಂತರ ನೈರುತ್ಯದಲ್ಲಿ ಅಸ್ತವಾಗುತ್ತದೆ. ಪೂರ್ಣಪ್ರಜ್ಞ ಕಾಲೇಜಿನಲ್ಲಿ 21ರಂದು ಸಂಜೆ 6ಗಂಟೆಗೆ ಈ ಗ್ರಹಗಳ ವೀಕ್ಷಣೆ ಆಯೋಜಿಸಲಾಗಿದೆ. ಪೂರ್ಣಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರ ಸಂಘದಿಂದ ಯುಟ್ಯೂಬ್ ಚಾನೆಲ್‌ನಲ್ಲಿ ನೇರಪ್ರಸಾರ ಕೂಡ ಇದೆ ಎಂದು ಅವರು ತಿಳಿಸಿದ್ದಾರೆ.

  • ದೇಶ ಕಾಯುವ ಜೊತೆ ಗುರು ನಮ್ಮ ಮನೆಯನ್ನು ಕಾಯುತ್ತಿದ್ದ – ತಾಯಿ ಚಿಕ್ಕತಾಯಮ್ಮ

    ದೇಶ ಕಾಯುವ ಜೊತೆ ಗುರು ನಮ್ಮ ಮನೆಯನ್ನು ಕಾಯುತ್ತಿದ್ದ – ತಾಯಿ ಚಿಕ್ಕತಾಯಮ್ಮ

    – ಗುರು ಸಮಾಧಿಗೆ ಕುಟುಂಬಸ್ಥರಿಂದ ಪೂಜೆ
    – ಸೊಸೆ ಬೆಂಗಳೂರಿನಲ್ಲಿದ್ದಾಳೆ, ಮನೆಯಲ್ಲಿ ಇಲ್ಲ

    ಮಂಡ್ಯ: ಇಂದು ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಭಯೋತ್ಪಾದಕ ದಾಳಿ ನಡೆದು 40 ಮಂದಿ ವೀರಯೋಧರು ಹುತಾತ್ಮರಾಗಿದ್ದರು. ಇವರಲ್ಲಿ ಮಂಡ್ಯ ಜಿಲ್ಲೆಯ ಕೆ.ಎಂ ದೊಡ್ಡಿಯಲ್ಲಿರುವ ಸಿಆರ್​ಪಿಎಫ್ ಯೋಧ ಗುರು ಕೂಡ ಒಬ್ಬರು. ಈ ಹಿನ್ನೆಲೆಯಲ್ಲಿ ಕುಟುಂಬಸ್ಥರು ಗುರು ಅವರ ಸಮಾಧಿಗೆ ಪೂಜೆ ಸಲ್ಲಿಸಿದರು.

    ಪೂಜೆ ವೇಳೆ ಗುರು ಅವರ ತಾಯಿ ಚಿಕ್ಕತಾಯಮ್ಮ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಈ ಘಟನೆಯಿಂದ ನನಗೆ ತುಂಬಾ ಸಂಕಟವಾಗುತ್ತೆ. ನನ್ನ ಮಗ ಈಗ ಹಿಂತಿರುಗಿ ಬರುವುದಿಲ್ಲ. ಇಂದು ಇಲ್ಲಿ ಪೂಜೆ ಇಟ್ಟುಕೊಂಡಿದ್ದೇವೆ. ನನ್ನ ಸೊಸೆ ಕಲಾವತಿ ಆಕೆ ತನ್ನ ಅಪ್ಪನ ಮನೆಯಲ್ಲಿದ್ದು, ನಮ್ಮ ಮನೆಗೆ ಬರುತ್ತಿಲ್ಲ. ಹಣದ ವಿಚಾರದಲ್ಲಿ ನಾವೇನು ಜಗಳವಾಡಿಲ್ಲ. ಇಬ್ಬರು ಮನೆಯಲ್ಲಿ ಕುಳಿತುಕೊಂಡು ಹಣವನ್ನು ಹಂಚಿಕೊಂಡಿದ್ದೇವೆ ಹೊರತು ಯಾವುದೇ ಜಗಳವಾಡಿಲ್ಲ. ಬೇಡದಿರುವ ವಿಚಾರದ ಬಗ್ಗೆ ಮಾತನಾಡುವುದರಲ್ಲಿ ಯಾವುದೇ ಪ್ರಯೋಜನ ಇಲ್ಲ. ಎಷ್ಟೇ ಹಣ ಇದ್ದರೂ ಮಗ ಇದ್ದ ಹಾಗೇ ಇರುವುದಿಲ್ಲ. ನನ್ನ ಮಗ ಬದುಕಿದ್ದರೆ ಅದರ ಹತ್ತರಷ್ಟು ಹಣ ಸಂಪಾದಿಸುತ್ತಿದ್ದನು ಎಂದು ಹೇಳಿದರು. ಇದನ್ನೂ ಓದಿ: ಭಾರತಕ್ಕಿಂದು ಕರಾಳ ದಿನ – ಪುಲ್ವಾಮಾ ದಾಳಿಗೆ 1 ವರ್ಷ

    15 ದಿನಗಳ ಹಿಂದೆ ನನ್ನ ಸೊಸೆ ಕರೆ ಮಾಡಿ ಏನೂ ಕಾರ್ಯಕ್ರಮ ಮಾಡಬೇಕು ಎಂದು ಕೇಳಿದ್ದಳು. ಆಗ ನಾನು, ನಮ್ಮ ಹುಡುಗರು ಏನು ಮಾಡಬೇಕು ಎಂದುಕೊಂಡಿದ್ದಾರೆ ನನಗೆ ಗೊತ್ತಿಲ್ಲ ಎಂದು ಹೇಳಿದ್ದೆ. ನನ್ನ ಸೊಸೆ ಕಲಾವತಿ ಪೂಜೆ ಸಲ್ಲಿಸಲು ಬರುತ್ತಾಳೋ ಇಲ್ಲವೋ ಗೊತ್ತಿಲ್ಲ. ನಮ್ಮ ಸೊಸೆ ಈಗ ಜೊತೆಯಲ್ಲಿಲ್ಲ. ನನ್ನ ಮಗನ ಸಾವಿನ ಬಳಿಕ ಕಲಾವತಿ ಬೆಂಗಳೂರಿಗೆ ಹೋದಳು. ಮಂಡ್ಯಕ್ಕೆ ಬರುತ್ತಾಳೆ ಎಂದು ಎಲ್ಲರೂ ಹೇಳುತ್ತಾರೆ, ಆದರೆ ಅವರು ನಮ್ಮ ಮನೆಗೆ ಬರುವುದಿಲ್ಲ. ಆಕೆ ಜೊತೆ ನಮ್ಮ ಸಂಪರ್ಕದಲ್ಲಿ ಇಲ್ಲ. ಆದರೆ ನಾವೇನು ಜಗಳವಾಡಿಲ್ಲ ಎಂದರು. ಇದನ್ನೂ ಓದಿ: ಪುಲ್ವಾಮಾ ಕೇಸ್ – ಎನ್‍ಐಎ ತನಿಖೆ ಎಲ್ಲಿಯವರೆಗೆ ಬಂದಿದೆ? ‘ಕೀ’ ಯಿಂದ ಕೇಸ್ ಓಪನ್ ಆದ ರೋಚಕ ಕಥೆ ಓದಿ

    ನಾವು ನಮ್ಮ ಸೊಸೆ ಈಗ ಜೊತೆಯಲ್ಲಿ ಇಲ್ಲ. ನನ್ನ ಮಗ ಇದ್ದಾಗ ಸೊಸೆಯನ್ನು ಮಗಳಂತೆ ನೋಡಿಕೊಂಡಿದ್ದೆ. ನನ್ನ ಮಗ ಗುರು ನಮ್ಮಲ್ಲಿ ಏನೇ ಜಗಳವಾದರೂ ಅದನ್ನು ಸರಿಪಡಿಸುತ್ತಿದ್ದನು. ದೇಶ ಕಾಯುವ ಜೊತೆ ನಮ್ಮ ಮನೆಯನ್ನೂ ಗುರು ಕಾಯುತ್ತಿದ್ದನು. ಈಗ ಅವನು ದೇಶದ ಮಗನಾಗಿದ್ದಾನೆ. ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಎಂಬ ಹೆಮ್ಮೆ ನಮಗಿದೆ. ಗುರು ಹುತಾತ್ಮನಾದಾಗ ಸಾವಿರಾರು ಜನ ನಮಗೆ ಸಾಂತ್ವಾನ ಹೇಳಿದ್ದರು. ಅವರೆಲ್ಲರಿಗೂ ನನ್ನ ಧನ್ಯವಾದ ಎಂದು ಚಿಕ್ಕತಾಯಮ್ಮ ಮಗನನ್ನು ನೆನಪಿಸಿಕೊಂಡು ಕಣ್ಣೀರು ಹಾಕಿದರು.

  • ಅಣ್ಣಾವ್ರ ಹುಟ್ಟುಹಬ್ಬದ ದಿನವೇ ಮಗನ ಮದ್ವೆ – ಕಾರಣ ಬಿಚ್ಚಿಟ್ಟ ಜಗ್ಗೇಶ್

    ಅಣ್ಣಾವ್ರ ಹುಟ್ಟುಹಬ್ಬದ ದಿನವೇ ಮಗನ ಮದ್ವೆ – ಕಾರಣ ಬಿಚ್ಚಿಟ್ಟ ಜಗ್ಗೇಶ್

    ಬೆಂಗಳೂರು: ನವರಸ ನಾಯಕ ಜಗ್ಗೇಶ್ ವರನಟ ನಟ ಡಾ.ರಾಜ್‍ಕುಮಾರ್ ಅವರ ಹುಟ್ಟುಹಬ್ಬದ ದಿನವೇ ತಮ್ಮ ಗುರು ಜಗ್ಗೇಶ್ ಅವರ ಮದುವೆ ಮಾಡಿಸಿ ತಮ್ಮ ಅಭಿಮಾನವನ್ನು ಮೆರೆದಿದ್ದರು. ಹೀಗಾಗಿ ಆ ದಿನವೇ ಮಗನ ಮದುವೆ ಮಾಡಿಸಿದ್ದು, ಯಾಕೆ ಎನ್ನುವುದನ್ನು ಹಂಚಿಕೊಂಡಿದ್ದಾರೆ.

    ಕಳೆದ ದಿನ ರಾ.ರಾಜ್‍ಕುಮಾರ್ ಅವರ 90ನೇ ಹುಟ್ಟುಹಬ್ಬವನ್ನು ಅಭಿಮಾನಿಗಳು ಆಚರಿಸಿದ್ದಾರೆ. ನಟ ಜಗ್ಗೇಶ್ ಅವರಿಗೆ ಅಣ್ಣಾವ್ರು ಎಂದರೆ ತುಂಬಾ ಅಭಿಮಾನ. ಹೀಗಾಗಿ ಅವರ ಹುಟ್ಟಹಬ್ಬದ ಪ್ರಯುಕ್ತ ಕುಟುಂಬರೆಲ್ಲರೂ ಒಟ್ಟಾಗಿ ಸೇರಿ ಆಚರಿಸಿದ್ದಾರೆ. ಇದೇ ವೇಳೆ ತಮ್ಮ ಮಗ ಗುರು ಅವರ ಮದುವೆಯನ್ನು ರಾಜ್‍ಕುಮಾರ್ ಅವರ ಜನ್ಮದಿನವೇ ಮಾಡಿರುವ ಬಗ್ಗೆ ಹೇಳಿಕೊಂಡಿದ್ದಾರೆ.

    “ರಾಜಣ್ಣನ ನೆನಪು ಸದಾ ನನ್ನ ಮಾನಸದಲ್ಲಿ ಉಳಿಸಿಕೊಳ್ಳಲು, ನನ್ನ ಹಿರಿಯ ಮಗ ಗುರು ಜಗ್ಗೇಶ್‍ಗೆ 2014ರ ಏಪ್ರಿಲ್ 24 ರಂದು ರಾಜಣ್ಣನ ಹುಟ್ಟುಹಬ್ಬದ ದಿನ ಮದುವೆ ಮಾಡಿಸಿದ್ದೆ. ಹಾಗಾಗಿ ರಾಜಣ್ಣನ ಹುಟ್ಟುಹಬ್ಬ ನಮ್ಮ ಮನೆಯಲ್ಲಿಯು ಭಾವನಾತ್ಮಕವಾಗಿ ಬೆಸೆದಿದೆ” ಎಂದು ಬರೆದು ಇನ್‍ಸ್ಟಾಗ್ರಾಂನಲ್ಲಿ ಹೇಳಿಕೊಂಡಿದ್ದಾರೆ. ಜೊತೆ ತಮ್ಮ ಮಗನ ಮದುವೆ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ.

    https://www.instagram.com/p/Bwn7ctqjeVO/

  • ಪಾಕಿಸ್ತಾನವನ್ನು ಯಾಕೆ ಸುಮ್ನೆ ಬಿಡ್ತಿದ್ದಾರೆ ಗೊತ್ತಿಲ್ಲ: ಗುರು ಪತ್ನಿ ಗರಂ

    ಪಾಕಿಸ್ತಾನವನ್ನು ಯಾಕೆ ಸುಮ್ನೆ ಬಿಡ್ತಿದ್ದಾರೆ ಗೊತ್ತಿಲ್ಲ: ಗುರು ಪತ್ನಿ ಗರಂ

    ಧಾರವಾಡ: ಮಂಡ್ಯದ ಹುತಾತ್ಮ ಯೋಧ ಗುರು ಕುಟುಂಬ ಧಾರವಾಡಕ್ಕೆ ಭೇಟಿ ನೀಡಿತು. ಈ ವೇಳೆ ಗುರು ಕುಟುಂಬದಿಂದ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಬಳಿ ಇರುವ ಕಾರ್ಗಿಲ್ ಸ್ಥೂಪಕ್ಕೆ ಪುಷ್ಪನಮನ ಸಲ್ಲಿಸಲಾಯಿತು.

    ಬಳಿಕ ಮಾತನಾಡಿದ ಗುರು ಪತ್ನಿ ಕಲಾವತಿ, ಸೈನಿಕರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು. ಸೈನಿಕರಿಗೂ ಭದ್ರತೆ ಕೊಡಬೇಕು. ಭಾರತೀಯ ಸೈನಿಕರನ್ನು ಇಷ್ಟೆಲ್ಲ ಸಾಯಿಸಿದ್ರೂ ಪಾಕಿಸ್ತಾನವನ್ನು ಯಾಕೆ ಸುಮ್ಮನೆ ಬಿಡ್ತಾ ಇದ್ದಾರೆ ಗೊತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.

    ಅಲ್ಲದೆ ಇಷ್ಟು ಜನ ಸೈನಿಕರನ್ನು ನಾವು ಕಳೆದುಕೊಳ್ಳುತ್ತಲೇ ಇದ್ದೇವೆ ಎಂದು ದುಃಖ ತೊಡಿಕೊಂಡರು. ಪಾಕ್‍ನಲ್ಲಿ ಸೈನಿಕರನ್ನು ಕಳೆದುಕೊಳ್ಳುವ ಸ್ಥಿತಿ ಇಲ್ಲ, ಪಾಕ್ ಮೇಲೆ ಭಾರತೀಯ ಸೈನಿಕರು ದಾಳಿ ಮಾಡಬೇಕು ಎಂದು ಕಲಾವತಿ ಆಗ್ರಹಿಸಿದ್ದಾರೆ.

    ನಮ್ಮ ಎಷ್ಟು ಜನ ಸೈನಿಕರನ್ನು ಅವರು ಸಾಯಿಸಿದ್ದಾರೆಯೋ ಅದರ ಎರಡು ಪಟ್ಟು ಪಾಕ್ ಸೈನಿಕರನ್ನು ಸಾಯಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರ ಈ ಕಾರ್ಯ ಮಾಡಬೇಕು ಎಂದು ಅವರು ಒತ್ತಾಯಿಸಿದರು. ಇದೇ ವೇಳೇ ಗುರು ತಂದೆ ಮಾತನಾಡಿ, ನನ್ನ ಮಗ ಇಡೀ ಭಾರತಕ್ಕೆ ಮಗನಾಗಿ ಹೋದ ಎಂದು ಹೇಳಿ ಕಣ್ಣೀರು ಹಾಕಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಂಡ್ಯದಿಂದ ಸ್ಪರ್ಧೆ ಖಚಿತ: ಸುಮಲತಾ ಅಂಬರೀಶ್

    ಮಂಡ್ಯದಿಂದ ಸ್ಪರ್ಧೆ ಖಚಿತ: ಸುಮಲತಾ ಅಂಬರೀಶ್

    ಮಂಡ್ಯ: ನನ್ನ ಬಳಿ ಕೋಟೆಯೂ ಇಲ್ಲ ಕೋಟಿಯೂ ಇಲ್ಲ. ಆದರೆ ಮಂಡ್ಯ ಲೋಕಸಭಾ ಕ್ಷೇತ್ರದಿಂದ ನನ್ನ ಸ್ಪರ್ಧೆ ಖಚಿತ ಎಂದು ಸುಮಲತಾ ಅಂಬರೀಶ್ ತಿಳಿಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಮಂಡ್ಯದಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಅಂಬಿ ಅಭಿಮಾನಿಗಳ ಜೊತೆ ಮಾತನಾಡಿದ್ದೇನೆ. ಎಲ್ಲ ಕಡೆ ಒಳ್ಳೆ ರೆಸ್ಪಾನ್ಸ್ ಇದೆ ಯಾವುದೇ ಕಾರಣಕ್ಕೂ ಸ್ಪರ್ಧೆಯಿಂದ ಹಿಂದೆ ಸರಿಯದಂತೆ ಹೇಳಿದ್ದಾರೆ. ಜನರ ಪ್ರೀತಿ ನೋಡಿ ತುಂಬಾ ಖುಷಿಯಾಗಿದೆ. ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಬಯಸಿದ್ದೇನೆ. ಆದರೆ ಟಿಕೆಟ್ ಕೊಡದಿದ್ರೆ ಪಕ್ಷೇತರ ಅಥವಾ ಬಿಜೆಪಿಯಿಂದ ಸ್ಪರ್ಧೆ ಮಾಡಬೇಕಾ ಎಂಬುದನ್ನು ನಿರ್ಧರಿಸಿಲ್ಲ ಅಂದ್ರು.

    ಚುನಾವಣಾ ಪ್ರಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ನಮ್ಮ ಟೀಂ ರೆಡಿಯಿದೆ. ನಾವು ಎಲ್ಲರನ್ನೂ ಸೇರಿಸಿ ಒಂದು ಗ್ರೂಪ್ ಮಾಡಿಕೊಂಡು ಎಲ್ಲರ ಸಲಹೆ ಪಡೆದು ಕೆಲಸ ಮಾಡುತ್ತೇವೆ. ಮಂಡ್ಯದ ಮಂಜುನಾಥ ನಗರದಲ್ಲಿ ನಮ್ಮ ಸ್ವಂತ ಮನೆಯಿದ್ದು, ಅಲ್ಲಿಯೇ ಮನೆ ಕಟ್ಟಲು ನಿರ್ಧರಿಸಿದ್ದೇನೆ ಎಂದು ಸುಮಲತಾ ತಿಳಿಸಿದ್ರು.

    ಇದೇ ವೇಳೆ ತಮ್ಮ ವಿರುದ್ಧ ನಿಖಿಲ್ ಸ್ಪರ್ಧಿಸುತ್ತಾರೆ ಎಂಬುದಕ್ಕೆ ಪ್ರತಿಕ್ರಿಯಿಸಿ, ನಿಖಿಲ್ ನನ್ನ ವಿರುದ್ಧ ಸ್ಪರ್ಧೆ ಮಾಡಿದ್ರೆ ಸ್ವಾಗತ. ನಿಖಿಲ್ ನಮಗೆ ಶತ್ರು ಅಲ್ಲ. ಅಭಿಷೇಕ್‍ಗೆ ನಿಖಿಲ್ ತುಂಬ ಒಳ್ಳೆ ಸ್ನೇಹಿತ. ನನಗೆ ನಿಖಿಲ್ ಬೇರೆಯವನಲ್ಲ ಅಂದ್ರು. ಇದನ್ನೂ ಓದಿ: ಮಂಡ್ಯದಿಂದ ಸ್ಪರ್ಧೆ ಖಚಿತ – ಸುಮಕ್ಕನ ಬಗ್ಗೆ ಮಾತನಾಡಲ್ಲ ಅಂದ್ರು ನಿಖಿಲ್

    ಸಾಮಾಜಿಕ ಜಾಲತಾಣದ ಚರ್ಚೆ ಬಗ್ಗೆ ಪ್ರತಿಕ್ರಿಯಿಸಿ, ಕೆಲವೊಂದು ಚರ್ಚೆ ಅವೈಡ್ ಮಾಡಲು ಆಗಲ್ಲ. ಅದರ ಬಗ್ಗೆ ತಲೆಕೆಡಿಸಿಕೊಳ್ಳಲ್ಲ. ಮಂಡ್ಯ ಜೆಡಿಎಸ್ ಭದ್ರಕೋಟೆ ಆಗಿದ್ರು ನನ್ನ ಬಳಿ ಜನರ ಪ್ರೀತಿ ಇದೆ. ಅದನ್ನು ಇಟ್ಟುಕೊಂಡು ಜನರ ಬಳಿ ಹೋಗುತ್ತೇನೆ. ನನ್ನ ಹಿಂದೆ ಈಗ ಯಾರಿದ್ದಾರೆ. ಅಂಬರೀಶ್ ಇದ್ದಾಗ ಒಂದು ಫೋನಿನಲ್ಲಿ ಎಲ್ಲ ಕೆಲಸ ಆಗುತ್ತಿತ್ತು. ಈಗ ನನ್ನ ಜೊತೆ ಯಾರಿದ್ದಾರೆ ಹೇಳಿ. ಸೋಲು ಗೆಲುವಿನ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ. ಜನರ ಜೊತೆ ಇರುತ್ತೇನೆ. ಅಂಬರೀಶ್ ಅವರು ದೇವೇಗೌಡರನ್ನು ತಂದೆ ಸ್ಥಾನದಲ್ಲಿ ನೋಡುತ್ತಿದ್ದರು. ಅದೇ ಪ್ರೀತಿ ದೇವೇಗೌಡರಿಗೆ ಇತ್ತು ಎಂದು ಸುಮಲತಾ ಹೇಳಿದ ಚುನಾವಣೆ ಯುದ್ಧವಲ್ಲ ಅದೊಂದು ಸ್ಪರ್ಧೆ ಎಂದು ತಿಳಿಸಿದ್ರು.

    ಗುರು ಕುಟುಂಬಕ್ಕೆ ಜಮೀನು ಪತ್ರ:
    ಪುಲ್ವಾಮಾ ದಾಳಿಯಲ್ಲಿ ವೀರಮರಣವನ್ನಪ್ಪಿದ್ದ ಮಂಡ್ಯದ ಗುಡಿಗೆರೆ ಗ್ರಾಮದ ವೀರ ಯೋಧ ಗುರು ಕುಟುಂಬಕ್ಕೆ ನಟಿ ಸುಮಲತಾ ಅಂಬರೀಷ್ 20 ಗುಂಟೆ ಜಮೀನು ನೀಡೋದಾಗಿ ಘೋಷಿಸಿದ್ದಂತೆ ಇಂದು ಆ ಕುಟುಂಬಕ್ಕೆ ಜಮೀನು ಪತ್ರ ಹಸ್ತಾಂತರಿಸಿದ್ರು. ಮಂಡ್ಯದ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಈ ಹಿಂದೆ ನಾನು ಗುರು ಕುಟುಂಬಕ್ಕೆ ಜಮೀನು ನೀಡೋದಾಗಿ ಹೇಳಿದ್ದೆ. ಆ ಪ್ರಕಾರವಾಗಿ ಅಭಿಷೇಕ್ ಅಂಬರೀಶ್ ಹೆಸರಲ್ಲಿದ್ದ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ದೊಡ್ಡರಸಿನಕೆರೆ ಗ್ರಾಮದ ಜಮೀನಿನ ಪೈಕಿ 20 ಗುಂಟೆಯ ಜಾಗವನ್ನು ಗುರು ಪತ್ನಿ ಕಲಾವತಿಗೆ ಹಸ್ತಾಂತರಿಸೋದಾಗಿ ಹೇಳಿ ದಾನ ಪತ್ರವನ್ನು ಆ ಕುಟುಂಬಕ್ಕೆ ನೀಡಿದ್ರು.

    ಇನ್ನು ಜಮೀನು ಪಡೆದ ಕಲಾವತಿ, ಕೂಡ ಈ ಜಮೀನನ್ನು ಯಾವುದೇ ಕಾರಣಕ್ಕೂ ಮಾರಲ್ಲ. ಸುಮಲತಾ ಅವರ ನೆನಪಾರ್ಥವಾಗಿ ಸ್ವೀಕರಿಸುವೆ ಎಂದ್ರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮತ್ತೊಬ್ಬ ಮಗ ವಾಪಸ್ ಬರ್ತಿದ್ದಾರೆ – ಗುರು ಪೋಷಕರ ಸಂತಸ

    ಮತ್ತೊಬ್ಬ ಮಗ ವಾಪಸ್ ಬರ್ತಿದ್ದಾರೆ – ಗುರು ಪೋಷಕರ ಸಂತಸ

    – ಬಿಬಿಎಂಪಿ ವತಿಯಿಂದ 25 ಲಕ್ಷ ರೂ. ಪರಿಹಾರ

    ಬೆಂಗಳೂರು: ವಿಂಗ್ ಕಮಾಂಡರ್ ಅಭಿನಂದನ್ ಭಾರತಕ್ಕೆ ವಾಪಸ್ ಕರೆತರುತ್ತಿರುವುದು ಸಂತಸ ವಿಷಯ. ನಮ್ಮ ಸಹೋದರರ ನೋವಿನಲ್ಲೂ ಅವರು ವಾಪಸ್ ಬರುತ್ತಿರುವುದು ಸಂತಸ ತಂದಿದೆ ಎಂದು ಯೋಧರ ಗುರು ಅವರ ಪೋಷಕರು ಹೇಳಿದ್ದಾರೆ.

    ಬಿಬಿಎಂಪಿ ಕಚೇರಿಗೆ ಆಗಮಿಸಿದ್ದ ವೇಳೆ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ಅಭಿನಂದನ್ ವಾಪಸ್ ಬರುತ್ತಿರುವುದು ನಮ್ಮ ಮತ್ತೊಬ್ಬ ಮಗ ವಾಪಸ್ ಬರುತ್ತಿದಂತೆ ಎನಿಸುತ್ತಿದೆ ಎಂದರು. ಇದೇ ವೇಳೆ ಮಾತನಾಡಿದ ಗುರು ಸಹೋದರ, ನನ್ನ ದೊಡ್ಡಣ್ಣ ವಾಪಸ್ ಬರುತ್ತಿದ್ದಾರೆ. ಆದರೆ ನಮ್ಮನ್ನು ಮೋಸ ಮಾಡಿದವರು ಈ ದೇಶದಲ್ಲಿ ಮತ್ತೆ ಉಳಿದಂತೆ ಮಾಡಬೇಕು ಎಂದರು.

    ಈ ವೇಳೆ ಮಾತನಾಡಿದ ಬಿಬಿಎಂಪಿ ಮೇಯರ್ ಅವರು, ಪಾಲಿಕೆ ವತಿಯಿಂದ 25 ಲಕ್ಷ ರೂ. ಪರಿಹಾರ ನೀಡಲಾಗಿದೆ. ಬಿಬಿಎಂಪಿ ಸದಸ್ಯರ ಗೌರವಧನ ಹಾಗು ನೌಕರರ ಹಣ ಒಟ್ಟು ಸೇರಿ ಹಣ ನೀಡಲಾಗಿದೆ. ಅಲ್ಲದೇ ಪಾಲಿಕೆ ನೌಕರರು ಸ್ವಾತಂತ್ರ್ಯ ಉದ್ಯಾನವನದಲ್ಲಿ ಯೋಧ ಗುರು ಅವರ ಪ್ರತಿಮೆಯನ್ನು ನಿರ್ಮಿಸಲು ಮನವಿ ಮಾಡಿದ್ದಾರೆ. ಈ ಕುರಿತು ಕೌನ್ಸಿಲ್ ಸಭೆಯಲ್ಲಿ ಪ್ರಸ್ತಾಪ ಮಾಡಿ ನಿರ್ಣಯ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

    ಇದೇ ವೇಳೆ ತಮ್ಮ ಕುಟುಂಬದಲ್ಲಿ ಯಾವುದೇ ರೀತಿಯ ಅಸಮಾಧಾನ ಇಲ್ಲ ಎಂದು ಸ್ಪಷ್ಟಪಡಿಸಿದ ಗುರು ಅವರ ತಾಯಿ ಚಿಕ್ತಾಯಮ್ಮ ಅವರು, ನಿಮ್ಮೆಲರ ಸಹಾಯದಿಂದ ನಾವು ಮತ್ತೆ ನಗು ಕಾಣಲು ಸಾಧ್ಯವಾಗುತ್ತಿದೆ. ಅತ್ತೆ, ಸೊಸೆ ಮಧ್ಯೆ ಜಗಳ ಹಾಗೂ ಪೊಲೀಸ್ ಠಾಣೆಯ ಮೆಟ್ಟಿಲೆರಿದ್ದಾರೆ ಎಂದು ವರದಿಯಾಗಿದೆ. ಆದರೆ ಅಂತಹ ಯಾವುದೇ ಘಟನೆ ನಡೆದಿಲ್ಲ. ನಮ್ಮ ಸೊಸೆ ಮಗಳ ರೀತಿ ಇದ್ದೇವೆ. ಜನರ ಮಾತಿನಿಂದ ಮತ್ತೆ ನೋವು ಆಗುತ್ತಿದೆ. ದಯವಿಟ್ಟು ಇದನ್ನೆಲ್ಲ ಯಾರೂ ನಂಬಬೇಡಿ, ಸದ್ಯ ನಮಗೇ ಹಣಕ್ಕಿಂತ ನೆಮ್ಮದಿ ಬೇಕು ಅಷ್ಟೇ ಎಂದು ಸ್ಪಷ್ಟಪಡಿಸಿದರು.

    ಮಗನ ಸುದ್ದಿ ಕೇಳಿ ಮನೆಯಲ್ಲಿ ಯಾರು ಒಂದು ವಾರ ಅನ್ನ ತಿನ್ನಲು ಆಗದ ಸ್ಥಿತಿ ಇತ್ತು. ಸದ್ಯ ಸರ್ಕಾರ ಉದ್ಯೋಗ ನೀಡುವ ಭರವಸೆ ನೀಡಿದೆ. ನನಗೆ ಹಣ ಬೇಡ, ನಮ್ಮ ಗೌರವ ಉಳಿಸಿಕೊಂಡರೆ ಸಾಕು ಎಂದು ಕಣ್ಣೀರಿಟ್ಟರು. ಈ ವೇಳೆ ಗುರು ತಂದೆ ಹೊನ್ನಯ್ಯ ಹಾಗೂ ಸಹೋದರ ಹಾಜರಿದ್ದರು.

    ಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹುತಾತ್ಮ ಯೋಧ ಗುರು ತವರಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಯುವಕ

    ಹುತಾತ್ಮ ಯೋಧ ಗುರು ತವರಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಯುವಕ

    ಮಂಡ್ಯ: ಉಗ್ರರ ದಾಳಿಯಲ್ಲಿ ಹುತಾತ್ಮರಾದ ಯೋಧ ಗುರು ಸಮಾಧಿ ಮಾಡಲಾಗಿರುವ ಕೆ.ಎಂ.ದೊಡ್ಡಿಯಲ್ಲೇ ಯುವಕನೊಬ್ಬ ಪಾಕಿಸ್ತಾನ ಪರ ಘೋಷಣೆ ಕೂಗಿದ್ದಾನೆ.

    ಅಸ್ಸಾಂನಿಂದ ಆಗಮಿಸಿರುವ ಕೆಲವು ಯುವಕರು ಇಲ್ಲಿ ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಇವರಲ್ಲಿ ಒಬ್ಬ ಯುವಕ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದಾನೆ. ಇದನ್ನ ಅರಿತ ಸ್ಥಳೀಯ ಯುವಕರು ನಾವು ಗುರುವನ್ನ ಕಳೆದುಕೊಂಡು ಪಾಕಿಸ್ತಾನದ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದರೆ, ಇವ ಇಲ್ಲೇ ಇದ್ದಾನೆ ಏ ಯಾವ ಊರು ನಿಂದು, ನಿನ್ ಐಡಿ ಕಾರ್ಡ್ ತೋರಿಸು ಯಾಕ್ ಹಾಗೆ ಕೂಗುತ್ತೀಯಾ ಎಂದೆಲ್ಲಾ ವಿಚಾರಿಸಿದ್ದಾರೆ.

    ಕೊನೆಗೆ ಸ್ಥಳೀಯ ಯುವಕರು ಪ್ರಶ್ನೆ ಮಾಡುತ್ತಿದ್ದಂತೆ ಭಾರತ್ ಮಾತಾಕಿ ಜೈ ಎಂದು ಒಮ್ಮೆ ಹೇಳಿ ಮತ್ತೆ ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿದ್ದಾನೆ. ಇದರಿಂದ ಮತ್ತಷ್ಟು ಕೋಪಗೊಂಡ ಯುವಕರು ಆತನಿಗೆ ಒಂದು ಕೊಟ್ಟು ಭಾರತಕ್ಕೆ ಜೈಕಾರ ಕೂಗಿಸಿದ್ದಾರೆ. ನಂತರ ಆತನನ್ನ ಕೂಲಿಗೆ ಕರೆತಂದಿದ್ದ ಮೇಸ್ತ್ರಿಗೆ ಇದೆಲ್ಲಾ ಸರಿ ಹೋಗಲ್ಲ ಎಂದು ಬುದ್ಧಿ ಹೇಳಿ ಕಳುಹಿಸಿದ್ದಾರೆ.

    https://www.youtube.com/watch?v=gPEqbHEdcfg

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಳ್ಕೊಂಡ ನೋವು ಅನುಭವಿಸಿದವರಿಗಷ್ಟೇ ಗೊತ್ತು- ಸುಮಲತಾ ಅಂಬರೀಶ್

    ಕಳ್ಕೊಂಡ ನೋವು ಅನುಭವಿಸಿದವರಿಗಷ್ಟೇ ಗೊತ್ತು- ಸುಮಲತಾ ಅಂಬರೀಶ್

    ಮಂಡ್ಯ: ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರನ ಆತ್ಮಾಹುತಿ ದಾಳಿಗೆ ಬಲಿಯಾದ ಯೋಧ ಗುರು ಮನೆಗೆ ನಟಿ ಸುಮಲತಾ ಅಂಬರೀಶ್ ಅವರು ಇಂದು ತೆರಳಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಕುಟುಂಬ ನೋವು ಏನು ಎಂದು ನನಗೆ ಚೆನ್ನಾಗಿ ಗೊತ್ತಿದೆ. ಒಬ್ಬರನ್ನು ಕಳೆದುಕೊಂಡಿರುವ ನೋವನ್ನು ಮಾತಿನಲ್ಲೇ ತುಂಬಿಸಲು ಸಾಧ್ಯವಿಲ್ಲ. ಆದ್ರೂ ನಿಮ್ಮ ನೋವಿನಲ್ಲಿ ನಾವು ಮಾತ್ರ ಅಲ್ಲ ಇಡೀ ದೇಶವೇ ಜೊತೆ ಇದೆ. ದೇಶದ ಜನ ನಿಂತು ನಿಮಗೆ ಸೆಲ್ಯೂಟ್ ಹೊಡೆಯುತ್ತೇವೆ. ನಿಮ್ಮನ್ನು ಪ್ರೀತಿಸುತ್ತಾ ಇದೆ. ನಿಮ್ಮ ಮಗನಿಂದ ದೊಡ್ಡ ಗೌರವ ನಿಮಗೆಲ್ಲರಿಗೂ ಸಿಕ್ಕಿದೆ. ಧೈರ್ಯವಾಗಿರಿ ಎಂದು ಸಾಂತ್ವನ ಹೇಳಿದ್ದಾರೆ.

    ನಮ್ಮ ನೋವನ್ನು ಇನ್ನೊಬ್ಬರಿಗೆ ಹೇಳಿದ್ರೆ ಅರ್ಥವಾಗಲ್ಲ. ಅದನ್ನು ಅನುಭವಿಸಿದವರಿಗೆ ಆ ನೋವು ಏನೆಂಬುದು ತಿಳಿಯುತ್ತದೆ. ಗುರು ಪತ್ನಿ ತುಂಬಾ ಚಿಕ್ಕ ಹುಡುಗಿ. ಅವಳಿಗೆ ಜೀವನದಲ್ಲಿ ಇನ್ನೂ ತುಂಬಾನೇ ಧೈರ್ಯ ತುಂಬಬೇಕಿದೆ. ಈಗಾಗಲೇ ತುಂಬಾ ಜನ ಅವರ ಪರವಾಗಿ ನಿಂತಿದ್ದಾರೆ. ಜೊತೆಗೆ ನಾವು ಒಂದು ಸಣ್ಣ ಸೇವೆಯನ್ನು ಮಾಡಿದ್ದೇವೆ ಅಂದ್ರು.

    ಜಮೀನು ಹಸ್ತಾಂತರದ ಬಗ್ಗೆ ಅವರಿಗೆ ತಿಳಿಸಿದ್ದೇನೆ. ಇದು ನಮ್ಮ ಕರ್ತವ್ಯ ಅಂತ ಹೇಳಿದ್ದೇನೆ. ನಾವು ಮಾಡಬೇಕಾಗಿರೋ ಕನಿಷ್ಟ ಧರ್ಮ ಇದಾಗಿದೆ. ಒಪ್ಪಿಕೊಂಡರೆ ನಮ್ಮ ಪುಣ್ಯ. ಇದರಿಂದ ಅಂಬರೀಶ್ ಅವರ ಆತ್ಮಕ್ಕೆ ಶಾಂತಿ, ತೃಪ್ತಿ ಸಿಗುತ್ತದೆ ಎಂದು ಹೇಳಿದೆ. ಅವರು ಅದನ್ನು ಒಪ್ಪಿಕೊಂಡಿದ್ದಾರೆ. ಹೀಗಾಗಿ ಮುಂದಿನ ಪ್ರಕ್ರಿಯೆ ಆರಂಭಿಸುವುದಾಗಿ ಅವರು ಹೇಳಿದ್ರು.

    ಇಂದು ಜಿಲ್ಲೆಯ ಚಿಕ್ಕರಸಿನಕೆರೆ ಗ್ರಾಮದ ಕಾಲಭೈರವೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿ ಬಳಿಕ ಬಸವನ ಆಶೀರ್ವಾದ ಪಡೆದು, ಕಾಣಿಕೆ ಸಲ್ಲಿಸಿದ ಬಳಿಕ ಅವರು ಗುರು ಮನೆಗೆ ತೆರಳಿ ಸಾಂತ್ವನ ತಿಳಿಸಿದ್ದಾರೆ.

    ಫೆ.14ರಂದು ಗುರುವಾರ ಮಧ್ಯಾಹ್ನ 3.30ರ ಸುಮಾರಿಗೆ ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆಗೆ ಸೇರಿದ ಅದಿಲ್ ದರ್ ಎಂಬ ಉಗ್ರ ಸ್ಕಾರ್ಪಿಯೋ ಕಾರಿನಲ್ಲಿ ಸ್ಫೋಟಕ ತುಂಬಿ ಆತ್ಮಾಹುತಿ ದಾಳಿ ಮಾಡಿದ್ದನು. ಈ ದಾಳಿಯಲ್ಲಿ 44 ಯೋಧರು ಹುತಾತ್ಮರಾಗಿದ್ದು, ಹಲವರು ಗಾಯಗೊಂಡಿದ್ದಾರೆ.

    https://www.youtube.com/watch?v=u3eOKo1jwdw

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಇಂದು ಹುತಾತ್ಮ ಯೋಧನ ಕುಟುಂಬಕ್ಕೆ ಸುಮಲತಾ  ಸಾಂತ್ವಾನ- 20 ಗುಂಟೆ ಜಮೀನು ಹಸ್ತಾಂತರ

    ಇಂದು ಹುತಾತ್ಮ ಯೋಧನ ಕುಟುಂಬಕ್ಕೆ ಸುಮಲತಾ ಸಾಂತ್ವಾನ- 20 ಗುಂಟೆ ಜಮೀನು ಹಸ್ತಾಂತರ

    ಮಂಡ್ಯ: ನಟಿ ಸುಮಲತಾ ಅವರು ಇಂದು ಹುತಾತ್ಮ ಯೋಧ ಗುರು ಮನೆಗೆ ತೆರಳಿ ಕುಟುಂಬಕ್ಕೆ ಸಾಂತ್ವಾನ ಹೇಳಲಿದ್ದಾರೆ. ಅಲ್ಲದೆ ಇದೇ ವೇಳೆ ತಮ್ಮ ಪುತ್ರ ಅಭಿಷೇಕ್ ಹೆಸರಲ್ಲಿರೋ 20 ಗುಂಟೆ ಜಮೀನನ್ನು ಯೋಧನ ಕುಟುಂಬಸ್ಥರಿಗೆ ಹಸ್ತಾಂತರಿಸಲಿದ್ದಾರೆ.

    ಬುಧವಾರವಷ್ಟೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನ ಭೇಟಿ ಆಗಿದ್ದ ಸುಮಲತಾ ಅಂಬರೀಶ್ ಅವರು ಇಂದು ಮಂಡ್ಯಕ್ಕೆ ಹೋಗ್ತಿದ್ದಾರೆ. ಚಿಕ್ಕರಸಿಕೆರೆಯಲ್ಲಿರೋ ಕಾಲಭೈರವೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಬಳಿಕ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾಗಿರುವ ಗುಡಿಗೆರೆ ಗುರು ಮನೆಗೆ ಭೇಟಿ ನೀಡ್ತಾರೆ. ಇದನ್ನೂ ಓದಿ: ಮಂಡ್ಯ ಜನರ ಅಭಿಪ್ರಾಯವೇ ಅಂತಿಮ: ಸುಮಲತಾ ಅಂಬರೀಶ್

    ಸಾಂತ್ವನ ಹೇಳೋದರ ಜೊತೆಗೆ ಪುತ್ರ ಅಭಿಷೇಕ್ ಹೆಸರಲ್ಲಿರೋ 20 ಗುಂಟೆ ಜಮೀನನ್ನು ಯೋಧನ ಕುಟುಂಬಸ್ಥರಿಗೆ ಹಸ್ತಾಂತರಿಸಲಿದ್ದಾರೆ. ಈ ನೆಲದ ಮಗಳಾಗಿ ಸೊಸೆಯಾಗಿ ನಾನು ಮಾಡುವ ಪುಟ್ಟ ಸೇವೆ ಅಂತ ಯೋಧನ ಅಂತ್ಯಸಂಸ್ಕಾರ ನಡೆದಿದ್ದ ದಿನ ಸುಲಮತಾ ಹೇಳಿದ್ದರು. ಈ ಹಿಂದೆ ಸಿಎಂ ಕುಮಾರಸ್ವಾಮಿ ಮಂಡ್ಯಕ್ಕೆ ಸುಮಲತಾ ಕೊಡುಗೆ ಏನು ಅಂತ ಪ್ರಶ್ನಿಸಿ ವಿವಾದಕ್ಕೊಳಗಾಗಿದ್ದರು. ಇದನ್ನೂ ಓದಿ:  ಅಂಬರೀಶ್ ಹೆಸರಲ್ಲಿರೋ ಅರ್ಧ ಎಕರೆ ಜಮೀನನ್ನು ಗುರು ಕುಟುಂಬಕ್ಕೆ ಕೊಡುತ್ತೇನೆ: ಸುಮಲತಾ

    https://www.youtube.com/watch?v=8VMxyfP3zjM

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv